ಈ ಪುಟವನ್ನು ಪ್ರಕಟಿಸಲಾಗಿದೆ
೭೦
ಸತೀಹಿತೈಷಿಣಿ

ತಂತ್ರನಾಥನ ಮನದಲ್ಲಿ ನೆಟ್ಟುಹೋಗಿದ್ದುದು, ಇನ್ನು ಮಾಡುವುದೇನೆಂಬುದೇ ತಿಳಿಯದೆ ಎಲ್ಲವನ್ನೂ ಸಂಗ್ರಹವಾಗಿ ಹೇಳಿ ಸುಮ್ಮನಾದನು.

ಕಡೆಗೆ ವಿನೋದನು ಕರೆಯಿಸಲ್ಪಟ್ಟು, ಅಪರಾಧಿ ಸ್ಥಾನದಲ್ಲಿ ತಲೆ ಬಾಗಿನಿಂತನು, ಮೊದಲು ಅವನಲ್ಲಿ ವಿದ್ಯಾವೈಭವ ಪ್ರದರ್ಶನವಾಗಿದ್ದ ಕಾಂತಿಯಾಗಲೀ, ಉತ್ಸಾಹವಾಗಲೀ, ಶಕ್ತಿಯಾಗಲೀ ಯಾವುದೂ ಕಾಣುತ್ತಿಲ್ಲ, ಮುಖವು ಬಾಡಿಹೋಗಿದೆ. ಕಾಂತಿಹೀನವಾದ ಕಣ್ಗಳಿಂದ ನೀರು ಸೋರುತ್ತಿದೆ. ಕ್ಷಣಕ್ಷಣಕ್ಕೂ ನಿಟ್ಟುಸಿರು ಹೊರಹೊರಡುತ್ತಿದೆ. ಇಂತಿರುವ ವಿನೋದನನ್ನು ನೋಡಿ ಸಹಿಸಬಲ್ಲವರಾರು? ಆದರೆ ಮಾಡತಕ್ಕುದೇನು ? ಅಟ್ಟುದನ್ನು ಉಣದಿದ್ದರಾದಿತೆ ? ಪಾಪ , ವಿನೋದನು ಧರ್ಮಾವತಾರರನ್ನು ನೋಡುತ್ತೆ ಕ್ಷೀಣಸ್ವರದಿಂದ ಹೇಳಿತೊಡಗಿದನು.-'"ಧರ್ಮಾವತಾರ, ನಾನು ಮಹಾಪರಾಧಿ. ನನ್ನ ಪೂರ್ವಸ್ಥಿತಿಗಳನ್ನು ನೆನೆನೆನೆದು ಈಗ ನಾನು ಸಂತಪಿಸುತ್ತಿರುವೆನು. ಮಾಯಾವಿನಿಯಾದ ಚಪಲೆಯ ಕುಟಿಲೋಕ್ತಿಗಳಿಗೆ ಮರಳಾದ ನಾನು, ಗಿರಿಯಮ್ಮ-ತಂತ್ರನಾಥನ ಹೇಳಿಕೆಯೆಲ್ಲವೂ ನಿಜವಾದುವುದೆಂದೇ ನಂಬಿ, ದುಡುಕಿ ಕೆಟ್ಟೆನು. ಕಾಮಮೋಹಿತನಾದ ನನಗೆ, ಆ ನನ್ನ ಧರ್ಮಪತ್ನಿಯ ವಿಚಾರವಾಗಿ ಇವರಾಡಿದ ಅಪರಾಧಗಳೆಲ್ಲವೂ ಸತ್ಯವೆಂದು ತಿಳಿದು ಅವಳನ್ನು ದ್ವೇಷಿಸಿದೆನು. ಈಗ ಅದನ್ನು ಹೇಳಿ ಫಲವಿಲ್ಲ ನಾನು ಚಪಲೆಯನ್ನು ಕೊಲ್ಲಬೇಕೆಂದಿದ್ದುದು ನಿಜ, ಆದರೆ ಕೊಂದವನು ನಾನಲ್ಲ. ನನ್ನ ಸರ್ವಸ್ವವನ್ನೂ ಅಪಹರಿಸಿ, ನನ್ನನ್ನು ಕೊಲ್ಲಬೇಕೆಂದಿದ್ದ ಚಪಲೆ-ಮತ್ತು ತಂತ್ರನಾಥರನ್ನು ಕೊಲ್ಲಬೇಕೆಂದು ಯೋಚಿಸಿದೆನು. ಅಷ್ಟರಲ್ಲಿ ಚಪಲೆಯೇ ತಂತ್ರನಾಥನ ಸಹಾಯದಿಂದ ನನ್ನನ್ನು ಕೊಲ್ಲಲು ಪ್ರಯತ್ನ ಪಟ್ಟು, ತಾನೇ ಮೃತಳಾದಳು, ಅ೦ದು ನಾನು ತಂತ್ರನಾ