ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೭೭

ಏಕಾದಶ ಪರಿಚ್ಛೇದ


(ಆನಂದಸಾಮ್ರಾಜ್ಯ)

ಇಂದು ವಿನೋದನ ಸೌಭಾಗ್ಯಲಕ್ಷ್ಮಿ, ಪುನರುಜ್ಜೀವಿಸಿರುವಳು. ಸುಜ್ಞಾನಶರ್ಮನ ಮನೆಯೊಳಗಡೆಯ ಕಿರುಮನೆಯಲ್ಲಿ ಮಂಚದಮೇಲೆ, ಸತೀಮಣಿ ಸುಶೀಲೆ ಕುಳಿತಿರುವಳು. ಪತ್ನಿಯ ಪಕ್ಕದಲ್ಲಿಯೇ, ಅವಳ ಸಾಕಾರಬ್ರಹ್ಮಸ್ವರೂಪನಾದ ವಿನೋದನು ಕುಳಿತು ಪತ್ನಿಯ ಕೊರಳ ಮೇಲೆ ತನ್ನ ಎಡದತೋಳನ್ನಿರಿಸಿ, ಬಲಗೈಯಿಂದ ಸುಶೀಲೆಯ ಗಲ್ಲವನ್ನು ಮೇಲಕ್ಕೆತ್ತಿ, "ಪ್ರಿಯೆ ! ಕ್ಷಮಿಸಲಾರೆಯ? ನನ್ನ ಅಪರಾಧಗಳೆಲ್ಲವನ್ನೂ ಕ್ಷಮಿಸಿ, ಕಟಾಕ್ಷಿಸಿಲೊಲ್ಲೆಯಾ?" ಎಂದು ಪ್ರಾರ್ಥಿಸುತ್ತಿರುವನು.

ಪ್ರಿಯ ಸೋದರೀ ಸೋದರರೇ !

ಕಾಲಪುರುಷನ ವಿಚಿತ್ರಗತಿಯೇ ಹೀಗಲ್ಲವೆ ? "ದೈವೀ ವಿಚಿತ್ರಾಗತಿಃ" ಎಂಬುದಕ್ಕೆ ಇಷ್ಟೇ ಸಾಲದೆ ? ಲೀಲಾನಂದ ವಿಭೂತಿಯನ್ನೊಳಗೊಂಡಿರುವ ಭಗವನ್ಮಾಯೆಯೂ ಇದೇ ಅಲ್ಲವೆ ? ಈ ಮಾಯೆಯಲ್ಲಿಯೇ ನಾವೆಲ್ಲರೂ ನಲಿನಲಿದಾಡುತ್ತಿರುವೆವೆಂದರೆ ಸಾಕಲ್ಲವೇ ? ಹಾಗಲ್ಲವೆಂದರೆ, ಅವಮೂರ್ತಿಯ ದರ್ಶನ, ಸ್ಪರ್ಶನ, ಸಂಭಾಷಣಾ ಕ್ರಿಯೆಗಳು ವಿನೋದನಿಗೆ ಯಾತನಾರೂಪಗಳಾಗಿ ಪರಿಣಮಿಸಿದ್ದುವೋ ಅದೇ ಮೂರ್ತಿಯೇ ಆ ರಮಣೀಮೂರ್ತಿಯೇ ಈಗ ಆತನ ಹೃದಯದಲ್ಲಿ ಸರ್ವಾಧಿಕಾರವನ್ನೂ ವಹಿಸಿ, ವರಪ್ರದಾನಕ್ಕೆ ಸಂಪ್ರಾರ್ಥಿಲ್ಪಡುತ್ತಿರುವುದೆಂದರೆ ನೀವೇನು ಹೇಳುವಿರಿ ? ಆಗಲಿ, ವಿನೋದ !