ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಸತೀಹಿತೈಷಿಣಿ

ಕ್ಷಮಾಪ್ರಾರ್ಥನೆಯಾಗಲಿ!! ಬೇಡು; ಪಾಪನಿವಾರಣೆಗಾಗಿ, ಮನಸ್ಸಮಾಧಾನಕ್ಕಾಗಿ ವರವನ್ನು ಬೇಡು ಬೇಡು! | ದಯಾಭರಿತೆಯೂ ಆದ ಸಾದ್ವೀಮಣೀ ಸುಶೀಲೆಯನ್ನು ಪತ್ನಿಯಾಗಿ ಪಡೆದ ನೀನೇ ಧನ್ಯನೆಂದು ತಿಳಿದು, ನಲಿನಲಿದಾಡು.

ವಿನೋದನು ಮತ್ತೆ ; “ಪ್ರಿಯೆ | ಕ್ಷಮಿಸಲಾರೆಯ ಹೇಳು; ಕ್ಷಮಿಸಿದೆನೆಂದು ಒಮ್ಮೆ ಹೇಳು?”

ಸುಶೀಲೆ - (ಪತಿಯಪಾದದ ಮೇಲೆ ಮಸ್ತಕವನ್ನಿರಿಸಿ ಬಾಷ್ಪಾಕುಲಿನಲೋಚನೆಯಾಗಿ ಅನುಕಂಪಿತಸ್ವರದಿಂದ, “ಸ್ವಾರ್ಮಿ | ನಾನು ಕ್ಷಮಿಸಲು ಸತ್ಯವಾಗಿಯೂ ಶಕ್ತಳಲ್ಲ!! ನಾನು, ತಮ್ಮ ಚರಣದಾಸಿ ; ತಮ್ಮ ಕುಂದುಕೊರತೆಗಳನ್ನು ಕ್ಷಮಿಸಬಲ್ಲವನು ಆ ದಯಾಮಯನಾದ ಪರಮಾತ್ಮನಲ್ಲದೆ ಮತ್ತೊಬ್ಬನಿಲ್ಲ!! ಪ್ರಭೋ : ನಾನು ಕೈಕೊಂಡಿದ್ದ ವ್ರತವು, ಇಂದು ಸಿದ್ಧಿಹೊಂದಿತು. ಇ೦ದು ನನ್ನ ಸ್ವಾಮಿ, ಸನ್ಮಾರ್ಗಯಾಮಿಯಾದುದನ್ನು ಕಂಡು ಧನ್ಯಳಾದೆನು. ಹತಶಳಾಗಿ ಶೋಕದಿಂದ ಸಂತಪಿಸುತ್ತಿದ್ದೀವಳನ್ನು ಕರುಣಾಕಟಾಕ್ಷದಿಂದ ನೋಡಿ ದ ಆ ಭಗವ೦ಳ್ಳಗೆ, ನನ್ನ ಅನಂತಪ್ರಣಾಮಗಳನ್ನು ತಮ್ಮ ಸಮ್ಮುಖದಲ್ಲಿಯೇ ಸಮರ್ಪಿಸುವೆನು. ಕ್ಲೇಶಾಧಿಕ್ಯದಿಂದ ನಾನು ಎಂದಾದರೂ, ಮಯ್ಮರೆತು ಅಪರಾಧವೇನನ್ನಾದರೂ ಮಾಡಿದ್ದರೆಯೂ ದಯೆಯಿಂದ ಕ್ಷಮಿಸಬೇಕೆಂದು ಬೇಡುವೆನು.”

ವಿನೋದನು, ಸುಶೀಲೆಯ ಮೃದುಮಧುರ ವಚನದಿಂದ ಆನಂದೋದ್ರೇಕವನ್ನು ತಡೆಯಲಾರದೆ, ತನ್ನೆರಡು ತೋಳ್ಗಳೆಂದಿಯೂ ಪತ್ನಿಯನು ಬಲವಾಗಿ ಬಿಗಿದಪ್ಪಿಕೊಂಡುಬಿಟ್ಟನು. ಸುಶೀ