ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಹನುಮದ್ರಾಮಾಯಣ, ಶರನಿಧಿಯಂ ದಾಂಟಿ ಮಹಾ || ಪುರಮಂ ಪೊಕ್ಕಸುರಪತಿಯನರೆದುಂ ಸೀತಾ | ತರುಣಿಯನೀಕ್ರಿಪುದತಿದು | ಸ್ವರಮೆಂದುಂ ರಘುಜನೊಡನೆ ಪೇಳ್ತಂ ರವಿಜಂ || ೧೫ | ದೇವರ್ಗೆತಕೆ ಯೋಚನೆ | ಯಾ ವಾರ್ಧಿಯನೈದೆ ಕಳಿದು ಪೋದೊಡೆ ಬಳಿಕಂ ಗಿ ರಾವಣಮುಖ್ಯನಿಶಾಚರ | ರಾವಳಿಯಂ ಕೊಲ್ಲೊಡೇನಸಾಧ್ಯಮದಿರ್ಕ್ಕು೦ | ೧೬ | ಮರುತಜನಿಂತೆನೆ ಮನುಜೇ ! ಶರಗಾದುದು ದಕ್ಷಿಣಾಕ್ಷಿಬಾಹುಸ್ಸು ರಣಂ || ಪರಿತೋಷದೊಳಾ ವಾನರ | ವರನಂ ಕರೆದೆಂದನಾಗಳಾ ರಘುವೀರಂ || ೬ | ಲೇಸಾಗಿದೆ ಶುಭಸೂಚನೆ | ಯಿಾ ಸುಮುಹೂರ್ತದೊಳೆ ಪೋದೊಡರಿಜಯಮಕ್ಕುಂ | ಕೀಶಬಲಂವೆರಸು ನೆರೆ ವಾ | ರಾಶಿಯ ತೀರಕ್ಕೆ ಗಮಿಸಲುಜ್ಜುಗಿಸೆಂದಂ ||ಳ | ಸೇನಾಧಿಪತ್ಯಮಂ ವೈ | ಶ್ವಾನರತನುಜಾತಗಿತ್ತು ರಘುಜನ ಮತದಿಂ || ಭಾನುಕುಮಾರಂ ಬಳಿಕಂ || ವಾನರಬಲದೊಡನೆ ನಿಂದು ಗಮಿಸುಗುಮೆಂದಂ || ೯ | ಸಸಿನೆ ಮಹಾಬಲವೆರಸುಂ || ಮಿಸುವ ತಪೋಮಾಸದಲ್ಲಿ ಸಿತಪಕ್ಷಚತು | ರ್ದಶಿಯೋನ್ಮಧ್ಯಾಹ್ನದೊಳಂ | ವಸುಧೇಶಂ ಪೊರಟನಮಿತಶುಭಶಕುನಗಳಿಂ | ೨೦ | ಹನುಮನ ಸೆಗಲೊಳ್ ರಾಘವ | ನನುವಿಂದಂಗದನನೇರ್ದ್ದು ಲಕ್ಷ್ಮಣದೇವಂ | ಬಿನದದೆ ವಾನರಸೇನಾ | ವನಧಿಯ ಮಧ್ಯದೊಳೆ ಬರುತುಮಿರ್ದ್ದರ್ ಭರದಿಂ | ೫೦ | ಮುಂಗುಡಿಯೊಳೆ ಸೇನಾಪತಿ | ಪಿಂಗಡೆಗೆ ಸುಷೇಣಜಾಂಬವರ್ ಕೆಲಬಲದೊಳ್ ||