ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಹನುಮದ್ರಾಮಾಯಣ, ಜಡಮತಿ ಮೇಣಾಂ ಪ್ಲವಗಂ } ನುಡಿವೆನದೆಂತೆನ್ನ ಪುಣ್ಯದಳತೆಯನೆಂದಂ 1 ೧೨d & ನಿನ್ನಯ ಮಾಯೆಯ ವಶದಿಂ | ನಿನ್ನಡಿಯಂ ಕಾಣದ್ದೆದೆ ತೊಳಲುತೆ ಲೋಕಂ ! ಬನ್ನಂಬಡುತಿರ್ಪುದು ದೇ || ವೋನ್ನತ ಕೃಪೆಗೆಯ್ದುದೆನಗೆ ಚಿತ್ರವಿದೆಂದಂ | ೧೨೧ | ಭರದಿಂದಂ ಮೃತ್ತಿಕೆಯಂ | ತರಲೊಂದೆಡೆಯಲ್ಲಿ ನೆಲನನಗೆಯಲ್ಲಾಗಳ್ | ದೊರೆದಾ ದ್ರವ್ಯದೊಲಾದುದು | ಕರುಣಾಕರ ನಿನ್ನ ಪಾದದರ್ಶನವೆಂದಂ \ ೧೧೨ | ಸತಿಸುತಸೋದರಮಿತ್ರ | ಕ್ಷಿತಿಧನಪಶ್ವಾದಿ ವಸ್ತು ವೆಲ್ಲಂ ಮಾಯಾ || ಕೃತವೆಂದಾಂ ತಿಳಿದೇ ಭೂ | ಸುತೆಯರಸನೆ ನಿನ್ನ ಕೃಪೆಯೊಳೆಂದು ರವಿಜಂ 1 ೧೨೩ | ಜಡಮತಿಯಿಂದ ನಿನ್ನೊಳ್ | ಪಡಿಸಣಮಂ ಗೆಯ್ದಿನೈದೆ ತದ್ರೋಹಮನಿ ! ನೊಡಲೊಳಗಿಡದೆನ್ನಂ ಕ | ದ್ವಿಡಿದುದ್ಧರಿಸಬ್ಬಲೋಚನನೆ ನೀನೆಂದು | ೧೨೪ 8 ನಿನ್ನದ್ಭುತಮಂ ನೆರೆ ಕಂ || ಡೆನ್ನಸು ನಡುಗುತ್ತಲಿರ್ಪುದತಿಭಯದಿಂ ಸಂ | ಪನ್ನನೆ ನತಪರಿಪೋಷನೆ | ಮುನ್ನಿನ ಸಿರಿರೂಪನಾಂತು ರಕ್ಷಿಪುದೆಂದಂ || ೧೨೫ | ಜಯಜಯ ಜಗದಾಧಾರಾ | ಜಯಜಯಜಯ ನಿರುಪಮಾಂಗ ದೇವೋತ್ತುಂಗಾ !! ಜಯಜಯ ಕರುಣಾಸಾಗರ | ಜಯಜಯ ಪರವಿಷ್ಣು ಎಂದು ಮಣಿದಂ ರವಿಜ೦ | ೧೨೬ | ಬಿಸುಗದಿರನ ಮಗನುಂ ನುತಿ || ಯಿಸಿ ಚರಣಾಂಭೋಜದಲ್ಲಿ ಕೆಡೆದಿರೆ ರಾಮಂ | ಪಸರಿಪ ವಿಶ್ವಾಕೃತಿಯಂ | ಬಸಿರೊಳ್ಳವಿಟ್ಟು ಮುನ್ನಿನಂತೆಸೆದೆಂದಂ | ೧೨೭ #