ದ್ವಿತೀಯಾಶ್ವಾಸ. ಭಾನುತನುಜ ಕೇಳ್ತಂಭದೆ | ದಾನತಪೋಯೋಗಯಜ್ಞಮಂ ಮಾಡಿದೊಡಂ | ಆನೊಪ್ಪೆಂ ಸಾತ್ವಿಕಸು | ಜ್ಞಾನದೊಳಿರ್ದೆನ್ನನೈದೆ ನೆನೆವಂಗೊಲಿವೆಂ | ೧೨ಳ | ನಿಜಭಕ್ತನಾದ ಕಾರಣ | ಮಜರುದ್ರೇಂದ್ರಾದಿಗಳೆ ತೋರದ ರೂಪಂ ! ಸುಜನೋತ್ತಂಸನೆ ತೋರ್ದಂ || ಭಜಕರ್ಗಾ೦ ಭಜಕನೆಂಬ ನೇಹದೊಳನಘಾ || ೧ರ್೨ | ಇನ್ನಿಂ ಭಯಗೊಳ್ಳದೆ ನಡೆ | ದೆನ್ನಾಜ್ಞೆಯೊಳಣ್ಣನೊಡನೆ ಯುದ್ಧಂಗೆಯ್ಯುಂ || ಬನ್ನಂ ಬಾರದು ಬಂದೊಡ | ಮುನ್ನತಶರದಿಂದ ತರಿವೆನಾ ಕಪಿವರನಂ | ೧೩೦ || ರಾಘವನಿಂತೆನೆ ಮನದನು | ರಾಗದಿನಿನಜಾತನೆಯ್ಲಿ ತಪ್ಪುರದೆಡೆಗಂ || ಕೂಗಲೈಳಾ ವಾಲಿಯು | ಮಾಗಳೆ ತಾಮ್ರಾಕ್ಷನಾಗಿ ಪೊರಟಂ ರಣಕಂ | 11 ೧೩೧ | ಮೊಲವರಿತಾಂ ಸಿಂಗದೊಳಂ | ಕಲಹಮನುರೆ ಪೂಡಿ ಜೀವಿಪುದೆ ರವಿಜಾತಂ || ತಿಳಿಯದೆ ಮದ್ದಲಮಂ ಬಂ || ದುಲಿವುದು ಕಡುಚೋದ್ಯಮಿಂದುಮೆಂದೆಂದಂ || ೧೩೨ # ಕಂಡೆಂದನೆಲವೊ ರವಿಸುತ | ಪೆಂಡಿತಿಯಂ ನೆನೆದು ಬಂದು ಮನುಷ್ಟಿಗಳಿಂ | ದಂಡಧರನ ಮಂದಿರಮಂ | ಕಂಡಪೆ ನೀನೆಂದು ಸುರಪಜಂ ಗರ್ಜಿಸಿದಂ || ೧೩೩ | ಅನುಜಾತನ ಮಾನಿನಿಯಂ | ತನುಜಾತೆಗೆ ಸಾಟಿಯೆಂದು ತಿಳಿಯದೆ ಮತ್ಯಾ || ಮಿನಿಯಂ ಭೋಗಿಪ ಪಾತಕ | ದನುವಿಂ ಬಲಗುಂದದುಳಿಯೆ ಎಂದಂ ರವಿಜಂ \ ೧೪ | ಎಲವೊ ಮರುಳೆ ತತ್ವಮನಾಂ | ತಿಳಿದಿರ್ಪೆ೦ ಕರೆಯಲೊಲ್ಲೆನೆನುತಿಂದ್ರಸುತಂ |
ಪುಟ:ಹನುಮದ್ದ್ರಾಮಾಯಣಂ.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.