70 ಹನುಮದ್ರಾಮಾಯಣ. ಕಾಂತನ ಪದಕೆರಗುತೆ ಹನು | ಮಂತಾರ್ಯಮಪುತ್ರ ಮುಖ್ಯರಂ ಕಾಣಿಸಿದಂ {{ ೫೨ || ನೆಲಗಣ್ಣಣುಗಂ ಕಾಣಿಕೆ | ಗಳನಿತ್ತುಂ ರಾಮಚಂದ್ರನಡಿದಾವರೆಗಂ | ನಲವಿಂದೆ ತುಳಿಲ್ಗೆಯ್ಯುಂ। ಬಲಮಂ ಬಿತ್ತರಿಸಿ ತೋರ್ದನಾ ಭೂಪತಿಗಂ 11 ೫೩ || ವಿಧಿಸುತನೀತಂ ಕರಡಿಗ | ಳಧಿನಾಥಂ ಚಾಂಬವಂತನೆಂಬಂ ಜಾಣಂ || ದಧಿಮುಖನೀತಂ ಪನಸಾಂ | ಗದಕುಮುದಗವಾಕ್ಷಗವಯರಿವರವನೀಶಾ | ೫೪ || ಈತಂ ಕೇಸರಿ ಗಜನಿವ || ನೀತಂ ಶರಭಂ ಸುಷೇಣಕಂ ನೀಲಂ ತಾ | ಸೀತಂ ನಳನೀತಂ ರುಮ | ನೀತಂ ವರಗಂಧಮಾದನಂ ನೋಡರಸಾ || ೫೫ || ತಾರನಿವಂ ಧೂಮ್ರನಿವಂ | ವೀರಾಗ್ರಣಿ ರಂಭಸುಮುಖಮೈಂದದ್ವಿವಿದ || ರ್ಧೀರರುಮಣಕವಿನತ | ರ್ಶೂರರ್ಶತಬದರೀಮುಖರ್ಪ್ತವಗೇಶರ್ | ೫೬ || ಈತಂ ಭೂತೇಶಾಂಶೀ ! ಭೂತಂ ಕೇಸರಿಯ ಸೂನು ಮಂತ್ರಿವರಂ | ಈತನ ಬಲಮಂ ಗಣಿವೊಡೆ | ವಾತಾಶನಪತಿಗೆ ಸಾಧ್ಯ ಮಲ್ಲಯ್ ನೋಡಲ್ | ೫೭ || ಅವಧರಿಪುದರಸ ವಾನರ | ರಿವರುಂ ದೇವಾಂಶಸಂಭವರ್ಸಾಹಸಿಗ || ರ್ಪಮಾನರ್ವೇಗಲ್ ಭೈ ! ರವವಿಕ್ರಮರೈದೆ ಕಾಮರೂಪರ್ಬಲಿಗಳ || ೫ಲೆ || ದೇವರ ಕಾರ್ಯವನೆಸಗಲ್ | ಭೂವಳಯದೊಳೊರ್ವರುಳಿಯಮೋಲ್ನಡೆತಂದಿ | ರ್ಪೀ ವೀರಭಟರ ಸಮರದೊ | ೪ಾವಂ ನಿಲಲಾರ್ಪನಿವರ ಸಾಹಸಮೆನಿತೊ. | ೫೯ |
ಪುಟ:ಹನುಮದ್ದ್ರಾಮಾಯಣಂ.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.