38 ಹೆಂಡತಿ ಮಾತಿಗೆ ಆರಂಭಿಸಿದರು. ಸ್ನೇಹಿತ ಊರಲ್ಲೇ ಇರುವನೆಂಬುದು ಖಚಿತವಾದ ಬಳಿಕ ಕೃಷ್ಣಪ್ಪನವರು ಜಗಲಿಯ ಮೇಲಿದ್ದ ಮಂಚದ ಮೇಲೆ ಕುಳಿತು, ಪ್ರಶ್ನೆಗಳಿಗೆ ಉತ್ತರ ಕೊಟ್ಟರು. “ಸ್ಟೇಷನ್ನಿಂದ ಇಲ್ಲಿಗೆ ಬಂದೆ ಅಂದಿರಾ? ಹಾಗಾದರೆ ಸುನಂದೆಯನ್ನು ನೀವು ನೋಡೇ ಇಲ್ಲ ಅಲ್ಲವೆ?” ಸುನಂದಾ ಇಲ್ಲೇ ಗಂಡನ ಮನೆಯಲ್ಲೇ "ಸುನಂದಾ ಈಗ ತವರನೇಲೇ ಇದಾಳೆ.” ಇರಬೇಕೆಂದು ಆಕೆ ಭಾವಿಸಿದ್ದಳು. “ಹಾಗೇನು? ಓ! ನನಗೆ ಗೊತ್ತೇ ಇದ್ದಿಲ್ಲ. ಎಷ್ಟು ತಿಂಗಳು?" ಕೃಷ್ಣಪ್ಪನವರ ಮುಖದ ಮೇಲೆ ಕರೀಮೋಡ ಕವಿಯಿತು. ಅವರು ನುಂಗಿದರು. ಅಂಥದೇನೂ ಇಲ್ಲ. ತಂಗಿಯ ಮದುವೆಗಂತ ಬಂದೋಳು ಅಲ್ಲಿಯೇ ನಿ೦ತಿದ್ದಾಳೆ." ಕೇಳುತ್ತಿದ್ದಾಕೆಯ ಹುಬ್ಬುಗಳು ಮೇಲಕ್ಕೆ ಚಲಿಸಿ ಮುಖ ಪ್ರಶ್ನಾರ್ಥಕ ಚಿಹ್ನೆ ಮಾಯಿತು. ವಿಷಯವನ್ನು ಬಚ್ಚಿಡುವುದರಲ್ಲಿ ಅರ್ಥವಿಲ್ಲವೆನ್ನುತ್ತ ಕೃಷ್ಣಪ್ಪನವರು ಹೇಳಿದರು: “ಏನೋ ವಿರಸ ಇದ್ದೇ ಇರುತ್ತಲ್ಲ. ಅಳಿಯನನ್ನ ನೋಡ್ಕೊಂಡು ಮಾತಾಡಿ ಸೊಂಡು ಹೋಗೋಣಾಂತೇ ಬಂದೆ. ಇದು ತನ್ನೊಬ್ಬಳದೇ ವಿವೇಚನೆಗೆ ಮೀರಿದ ವಿಷಯವೆಂದು ಮನೆಯೊಡತಿ ಮರುಮಾತಾಡಲಿಲ್ಲ. ಬೇಸರವನ್ನು ತನ್ನೊಳಗೆ ಇರಿಸಿಕೊಂಡು ಅವರು ಒಳ ಹೋದರು. ಕೃಷ್ಣಪ್ಪನವರ ಆಗಮನದಿಂದ ಮನೆ ಹುಡುಗರ ಆಟಕ್ಕೆ ಭಂಗ ಬಂದಿತ್ತು. ಆದರೆ, ಮತ್ತೆರಡು ನಿಮಿಷಗಳಲ್ಲಿ, ಮನೆಗೆ ಬಂದ ಮುದಕನನ್ನು ಮರೆತು ಹುಡುಗರು ತಮ್ಮ ಆಟಗಳಲ್ಲಿ ತಲ್ಲೀನರಾದರು. ಮನೆಯಾಕೆ ಪುನಃ ಹೊರಬಂದು ಕೇಳಿದರು;
- ಈಗ ಊಟ ಮಾಡ್ತೀರಾ? ತಿಂಡಿ ತಗೋತೀರಾ?”
“ನನಗೇನೂ ಹಸಿವಿಲ್ಲ.”
- ಹಾಗಾದರೆ ಒಂದಿಷ್ಟು ಕಾಫಿ ಮಾಡ್ತೀನಿ. ಕತ್ತಲಾಗೋದರೊಳಗೆ ಅವರು
ಬಂದ್ದಿದ್ದಾರೆ. ಊಟಕ್ಕೆ ಬೇರೆಲ್ಲಿಗೂ ಹೋಗ್ವಾರದು, ಸಂಕಟಕ್ಕೊಳಗಾಗಿದ್ದ ಸುನಂದೆಯ ತಂದೆಯ ನೋವನ್ನು ಉಪಚಾರದ ಮಾತು ಗಳಿಂದ ಸ್ವಲ್ಪಮಟ್ಟಿಗಾದರೂ ಶಮನ ಮಾಡಲು ಹಲವು ಮಕ್ಕಳ ಆ ತಾಯಿ ಯತ್ನಿಸಿ ದಂತಿತ್ತು. ಕೃಷ್ಣಪ್ಪನವರು ಆಕ್ಷೇಪಿಸಲಿಲ್ಲ. ಮಂಚದ ಮೇಲೆ ಮೈ ನೀಡಿಕೊಂಡು ವಿಶ್ರಾಂತಿ ಪಡೆದರು. ಕಾಫಿ ತಿಂಡಿಯ ಅನಂತರ ಸ್ವಲ್ಪ ಜೊಂಪು ಹತ್ತಿತ್ತು. ಸಮ