ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಕನ್ನಡಿಗರ ಕರ್ಮಕಥೆ
ಕರೆಯ ಹೇಳಿದ್ದಾರೆ” ಅನ್ನಲು, ರಣಮಸ್ತಖಾನನು-ಏನು ! ನಮ್ಮ ಮಾಸಾಹೇಬರು ನನ್ನನ್ನು ಕರೆದಿದ್ದಾರೆಯೇ ? ಹೋಗು ಬೇಗನೆ ಬಿಸಿನೀರು ತಕ್ಕೊಂಡು ಬಾ. ಮೋರೆ ತೊಳಕೊಂಡು ನಮಾಜು ಮಾಡಿ ಬರುವೆನು. ಎಂದು ಹೇಳಿದನು. ಆಗ ಸಿಪಾಯಿಯು ಓಡುತ್ತ ಹೋಗಿ ಅಪ್ಪಣೆಯಂತೆ ಬಿಸಿ ನೀರು ತಂದು ರಣಮಸ್ತಖಾನನ ಕೈಗೂ ಕಾಲಿಗೂ ಹಾಕಿ ಆತನ ಕೈಕಾಲುಗಳನ್ನು ಒರಸಿದನು. ರಣಮಸ್ತಖಾನನು ಮೋರೆಯನ್ನು ಒರಸಿ ಕೊಂಡು, ನಮಾಜುಮಾಡಿ ತಾಯಿಯ ಬಳಿಗೆ ಹೋದನು.
****