ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ಕನ್ನಡಿಗರ ಕರ್ಮಕಥೆ

ಮುಖವನ್ನು ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ಆತನ ಮನಸ್ಸಿನಲ್ಲಿ ಉತ್ಪನ್ನವಾಗಿದ್ದ ಪ್ರೇಮವಿಕಾರಾಂಕುರವು ದೊಡ್ಡದಾಯಿತು. ಆತನು ಪ್ರೇಮದ ಭರದಲ್ಲಿ ನೂರಜಹಾನಳನ್ನು ಅಪ್ಪಿಕೊಳ್ಳಬೇಕೆಂದು ಕೈಗಳನ್ನು ಇನ್ನು ಮುಂದಕ್ಕೆ ಚಾಚತಕ್ಕವನಿದ್ದನು ;ಅಷ್ಟರಲ್ಲಿ ಪರಸ್ತ್ರೀಯೆಂಬ ಎಚ್ಚರವು ಹುಟ್ಟಿದ್ದರಿಂದ ಆತನು ತನ್ನ ಕೈಗಳನ್ನು ಬಿಗಿಹಿಡಿದು. ಇನ್ನು ಇವು ಮುಂದಕ್ಕೆ ಹೋಗಬಾರದೆಂದು ಒಂದನ್ನೊಂದು ಹಿಡಿದುಕೊಂಡು ಪ್ರತಿಬಂಧಿಸಲ್ಪಡುವಂತೆ, ಅವನ್ನು ಸ್ವಸ್ತಿಕಾಕಾರವಾಗಿ ಎದೆಯ ಮೇಲೆ ಇಟ್ಟುಕೊಂಡನು; ಆದರೆ ಕಣ್ಣುಗಳ ಮೇಲೆ ಮಾತ್ರ ಅತನ ಆಜ್ಞಾ ಶಕ್ತಿಯು ನಡೆಯಲಿಲ್ಲ. ಅವು ಒಂದೇಸಮನೆ ನೂರಜಹಾನಳನ್ನು ನೋಡುತ್ತಲಿದ್ದವು. ತರುಣನ ಈ ಸಂಕಟವನ್ನು ತಿಳಿದು, ಅದನ್ನು ದೂರ ಮಾಡುವದಕ್ಕಾಗಿಯೋ ಅನ್ನುವಂತೆ ನೂರಜಹಾನಳು ರಣಮಸ್ತಖಾನನನ್ನು ಕುರಿತು- “ಸಾಲ ತೀರಿಸುವ ಉಪಾಯವಿರುವದೆಂದು ಹೇಳಿದಂತೆ, ಆ ಉಪಾಯವನ್ನಿಷ್ಟು ನನಗೆ ಹೇಳಿಬಿಡಬೇಕು; ಅಂದರೆ ಕೈಯೊಳಗಿದ್ದರೆ ನಾನು ಸಾಲ ತೀರಿಸಿಬಿಡುತ್ತೇನೆ.”

ರಣಮಸ್ತಖಾನ-ನಿಮ್ಮ ಕೈಯೊಳಗೇ ಇರುತ್ತದೆ, ಇಲ್ಲವೆನ್ನುವ ಹಾಗಿಲ್ಲ; ಆದರೆ ಮೂಲತಃ ಸಾಲವೇ ಇಲ್ಲ, ಇಲ್ಲದ ಸಾಲವನ್ನು ಕಲ್ಪಿಸಿ ಅದನ್ನು ತೀರಸಬೇಕೆಂದರೆ ನಿಮ್ಮ ಕೈಯೊಳಗಿದ್ದರೂ ಅದನ್ನು ತೀರಿಸಲಿಕ್ಕೆ ನಿಮಗೆ ಬರುವಹಾಗಿಲ್ಲ.

ನೂರಜಹಾನ-ಏನು ? ನನ್ನ ಕೈಯೊಳಗಿದ್ದರೂ ಅದನ್ನು ತೀರಿಸಲಿಕ್ಕೆ ಬರುವಹಾಗಿಲ್ಲವೇ ? ಅಂಥಾ ಉಪಾಯವಾದರೂ ಯಾವುದು ?

ರಣಮಸ್ತಖಾನ-ಅದನ್ನು ನನಗೆ ಹೇಳಲಿಕ್ಕೆ ಬರುವ ಹಾಗೂ ಇಲ್ಲ.

ನೂರಜಹಾನ-(ನಕ್ಕು) ಇದೊಳ್ಳೆಯ ಉಪಾಯವು ! ನೀವು ಹೇಳದಿದ್ದರೆ ನನಗಾದರೂ ಅದು ಹ್ಯಾಗೆ ಗೊತ್ತಾಬೇಕು ? ಗೊತ್ತಾಗದ ಹೊರತು ಅದನ್ನು ತೀರಿಸಲಿಕ್ಕೆ ಬರುವದೋ ಇಲ್ಲವೋ ಎಂಬದಾದರೂ ನನಗೆ ಹ್ಯಾಗೆ ತಿಳಿಯಬೇಕು? ಉಪಾಯವು ತಕ್ಕದಿರುತ್ತದೆಂಬದೇ ನನಗೆ ತಿಳಿಯದೆ ಹೋದಬಳಿಕ, ಸಾಲವನ್ನು ನಾನು ತೀರಿಸುವದಾದರೂ ಹ್ಯಾಗೆ ? ನನಗಂತೂ ಸಾಲ ತೀರಿಸುವ ಇಚ್ಛೆಯು ಬಹಳವಾಗಿರುತ್ತದೆ.

ಇದನ್ನು ಕೇಳಿ ರಣಮಸ್ತಖಾನನು ನಕ್ಕನು, ಆತನು ಬಹಳ ಹೊತ್ತು ಸುಮ್ಮನೆ ನಿಂತುಕೊಂಡನು. ಮಾತಾಡಬೇಕೆಂದರೆ ಆತನ ಮುಖದಿಂದ ಅಕರಗಳೇ ಹೊರಡಲೊಲ್ಲವು. ಇದು ನೂರಜಹಾನಳಿಗೆ ಗೊತ್ತಾಯಿತು. ಆತನು ಒಂದೇಸವನೆ