ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರತಿಜ್ಞೆ
೧೩೭

ನೂರಜಹಾನಳನ್ನು ನೋಡುತ್ತಲಿದ್ದನು, ಆಗ ಆಕೆಯು ರಣಮಸ್ತಖಾನನ ಕಡೆಗೆ ನೋಡದೆ. ಮೊದಲಿನಂತೆ ನೆಲವನ್ನು ನೋಡುತ್ತ ಉಂಗುಷ್ಠದಿಂದ ನೆಲವನ್ನು ಗೀರತೊಡಗಿದಳು. ಹೀಗೆ ಬಹಳ ಹೊತ್ತಾದ ಮೇಲೆ ರಣಮಸ್ತಖಾನನು ನೂರಜಹಾನಳನ್ನು ಕುರಿತು-ನೂರಜಹಾನ, ಅರಗಿಳಿಯೇ ನನ್ನ ಮನಸ್ಸಿನಲ್ಲೇನಿರುತ್ತದೆಂಬದನ್ನು ನಾನು ಆಡಿಯೇ ತೋರಿಸಬೇಕೇನು ? ನನ್ನ ಮನಸ್ಸಿನ ಸ್ಥಿತಿಯೇನಾಗಿರುವದೆಂಬದು ನಿನಗೆ ಕಾಣುವದಿಲ್ಲವೆ ? ಆಡಿಯೇ ತೋರಿಸಬೇಕೆಂದು ನೀನು ಅಗ್ರಹಪಡುತ್ತಿದ್ದರೆ, ನಾನು ಅದಕ್ಕೆ ಈಗ ಹಿಂದುಮುಂದು ನೋಡುವದಿಲ್ಲ. ಆದರೆ ಆದರೆ ನನ್ನ ಮನೋದಯವು ಪೂರ್ಣವಾಗುವ ಆಶೆಯು ಸ್ವಲ್ಪವಾದರೂ ಇದ್ದರೆ, ನಾನು ಅದನ್ನು ಬಾಯಿಂದಲೂ ಆಡಿಬಿಡುವೆನು.

ಈ ಕಾಲದ ರಣಮಸ್ತಖಾನನ ಧ್ವನಿಯನ್ನು ಕೇಳಿದ ಕೂಡಲೇ ನೂರಜಹಾನಳುಚಕಿತಳಾಗಿ, ಕೂಡಲೆ ಆತನ ಮುಖದ ಕಡೆಗೆನೋಡಿದಳು. ಆಗ ಆತನ ಮುಖಲಕ್ಷಣವು ವಿಲಕ್ಷಣವಾಗಿತ್ತು. ಆತನ ಮನಸ್ಸಿನಲ್ಲಿರುವದನ್ನು ಒಡನುಡಿಯುವ ಅವಶ್ಯಕತೆಯು ನೂರಜಹಾನಳಿಗೆ ತೋರಲಿಲ್ಲ. ಖಾನನ ಭಾವವು ಆಕೆಗೆ ತಿಳಿದಿದ್ದರೂ, ಅದನ್ನು ಆಕೆಯು ಆಡಿ ತೋರಿಸದಾದಳು. ಆತನ ಮುಖದಿಂದಲೇ ಹೊರಟರೆ ನೆಟ್ಟಗೆಂದು ಆಕೆಯ ಮನಸ್ಸಿಗೆ ತೋರುತ್ತಿತ್ತು. ನೀವೇ ಹೇಳಿರೆಂದು ನುಡಿಯಲಿಕ್ಕೂ ಈಗ ಆಕೆಗೆ ಬಾಯಿ ಬರಲೊಲ್ಲದು. ಹೀಗಾಗಿ ಆಕೆಯು, ಖಾನನ ಮುಖಚರ್ಯದ ಕಡೆಗೆ ನೋಡುತ್ತ ನಿಂತುಕೊಂಡಳು. ಅದನ್ನು ನೋಡಿ ರಣಮಸ್ತಖಾನನು ಮತ್ತಷ್ಟು ಉತ್ಕಂಠಿತನಾದನು. ಆಕೆಯು ತನ್ನ ಮಾತಿಗೆ ಏನು ಉತ್ತರ ಕೊಡುವಳೆಂಬದನ್ನೂ, ತನ್ನ ಮಾತಿನ ಅರ್ಥವು ಈಕೆಗೆ ತಿಳಿಯಿತೋ ಇಲ್ಲವೋ ಎಂಬುದನ್ನೂ ನೋಡುವವನಂತೆ ಆತನೂ ನೂರಜಹಾನಳ ಕಡೆಗೆ ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ತನ್ನ ಮನಸ್ಸಿನ ಭಾವವು ಈಕೆಗೆ ಗೊತ್ತಾಯಿತೆಂಬುದು ಕೂಡಲೇ ಆತನಿಗೆ ತಿಳಿಯಿತು; ಆದ್ದರಿಂದ ಆತನು ಮಾತಾಡಲಿಕ್ಕೆ ಧೈರ್ಯಗೊಂಡು-ಸುಂದರಿ, ಸ್ಪಷ್ಟವಾಗಿ ಮಾತಾಡಬೇಕಾದದ್ದರಿಂದ ನಿರ್ವಾಹವಿಲ್ಲದೆ ಮಾತಾಡುತ್ತೇನೆ, ಅದಕ್ಕಾಗಿ ನನ್ನನ್ನು ಕ್ಷಮಿಸು. ನನ್ನ ಜೀವದ ಸರ್ವಸ್ವವನ್ನು ನಿನ್ನ ಚರಣಕ್ಕೆ ಅರ್ಪಿಸಿದ್ದೇನೆ; ನೀನು ನನ್ನನ್ನು ಅಗಲಿ ಹೋದರೆ ನಾನು ಮೃತಪ್ರಾಯವಾಗುವೆನು. ನನ್ನ ಕೈಯಿಂದ ಏನಾದರೂ ಮಹತ್ಕಾರ್ಯಗಳಾಗ ಬೇಕಿದ್ದರೆ, ನೀನು ನನ್ನ ಕೈ ಹಿಡಿಯುವದರಿಂದಲೇ ಅವು ಆದಾವು, ಎಂದು ನುಡಿದು, ಈಕೆಯು ಏನು ಉತ್ತರ ಕೊಡುವಳೋ ನೋಡಿ ಮತ್ತೆ ಮಾತಾಡಬೇಕೆಂದು ಆತನು ಆತುರದಿಂದ ನೂರಜಹಾನಳ