ಈ ಪುಟವನ್ನು ಪ್ರಕಟಿಸಲಾಗಿದೆ
೧೫೨
ಕನ್ನಡಿಗರ ಕರ್ಮಕಥೆ

ಇದಕ್ಕೆ ವಿಜಯನಗರವು ತಕ್ಕ ಸ್ಥಳವಾಗಿ ಅವರಿಗೆ ತೋರಿತು. ಆಗ ಮಾಸಾಹೇಬರು “ತನ್ನ ಮಗನನ್ನು ವಿಜಯನಗರದ ವಕೀಲನನ್ನಾಗಿ ನಿಯಮಿಸಬೇಕೆಂದು ಬಾದಶಹನನ್ನು ಪ್ರಾರ್ಥಿಸಲು, “ಬಹಳ ತರುಣ” ನೆಂದು ಬಾದಶಹರು ಮೊದಲು ಮಾಸಾಹೇಬರ ಮಾತನ್ನು ಅಲ್ಲಗಳೆದರು. ಆದರೆ ಕಡೆಗೆ ಮಾಸಾಹೇಬರ ಮನಸ್ಸನ್ನು ಮುರಿಯಲಾರದೆ, ಬಾದಶಹರು ರಣಮಸ್ತಖಾನನ್ನು ವಿಜಯನಗರದ ವಕೀಲನನ್ನಾಗಿ ನಿಯಮಿಸಿ ಕಳಿಸಿದರು. ಅದೇ ರಣಮಸ್ತಖಾನನು ಈಗ ಬಾದಶಹರ ದರ್ಶನಕ್ಕಾಗಿ ನೂರಜಹಾಳನ್ನು ಕಳಿಸುವ ನೆವದಿಂದ ವಿಜಾಪುರಕ್ಕೆ ಬಂದಿದ್ದನು. ಆಗ ವಿಜಾಪುರದ ದರ್ಬಾರದಲ್ಲಿ ಏನು ನಡಯಿತೆಂಬುದನ್ನು ಮುಂದಿನ ಪ್ರಕರಣದಲ್ಲಿ ಹೇಳುವೆವು.

****