ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ಉಪಾಯ
೨೦೧

ಪೂರ್ಣವಾದದ್ದನ್ನು ನಾನು ಕಣ್ಣಮುಟ್ಟ ನೋಡದಿದ್ದರೂ, ಪರಲೋಕದಲ್ಲಾದರೂ ಅದು ನನಗೆ ಗೊತ್ತಾದರೆ ನನ್ನ ಸಮಾಧಾನವಾದೀತು. ಏನು ಮಾಡದಿದ್ದರೂ ನಿಜವಾದ ಸಂಗತಿಯನ್ನು ರಣಮಸ್ತಖಾನನಿಗೆ ತಿಳಿಸಿಯಾದರೂಬಿಡಬೇಕು. ಅದು ಒಂದು ಬಗೆಯಿಂದ ನನ್ನ ಕರ್ತವ್ಯವೇ ಆಗಿರುವದು.

ಹೀಗೆ ಬಹಳ ಹೊತ್ತು ಆಲೋಚಿಸಿದ ಬಳಿಕ ಮಾಸಾಹೇಬರ ವಿಚಾರವು ಸ್ಥಿರವಾಯಿತು. ಅವರು ನಿಜವಾದ ವೃತ್ತಾಂತವನ್ನು ರಣಮಸ್ತಖಾನನಿಗೆ ತಿಳಿಸಲೇಬೇಕೆಂದು ನಿಶ್ಚಯಿಸಿದರು. ಆದರೆ ಆ ನಿಶ್ಚಯವನ್ನು ಹ್ಯಾಗೆ ಪಾರುಗಣಿಸಬೇಕು ? ಯಾರ ಕೈಯಿಂದ ಪಾರುಗಾಣಿಸಬೇಕು ? ಎಂಬ ವಿಚಾರವು ಅವರಲ್ಲಿ ಉತ್ಪನ್ನವಾಯಿತು. ಈ ಕೆಲಸವನ್ನು ಮಾಡಲಿಕ್ಕೆ ಅವರಿಗೆ ಇಬ್ಬರು ಯೋಗ್ಯರಾಗಿ ತೋರಿದರು. ಒಬ್ಬರು ಸ್ವತಃ ತಾವು, ಎರಡನೆಯವರು ಲೈಲಿಯು, ತಮ್ಮಿಬ್ಬರ ಹೊರತು ಎರಡನೆಯವರಿಗೆ ಯಾವ ಸಂಗತಿಯೂ ಗೊತ್ತಿಲ್ಲದ್ದರಿಂದ ಬೇರೆ ಯಾರಿಂದಲೂ ಆ ಕಾರ್ಯವಾಗುವಂತೆ ಅವರಿಗೆ ತೋರಲಿಲ್ಲ. ಅದರಲ್ಲಿ ತಾವು ಸ್ವತಃ ಎಲ್ಲಿಯೂ ಹೋಗುವಂತೆ ಇದ್ದಿಲ್ಲ. ಅದರಲ್ಲಿ ರಾಮರಾಜನ ರಾಜ್ಯದಲ್ಲಿ ಹೋಗಿ ತಮ್ಮ ಮಗನನ್ನು ಕಾಣುವದಂತು ಅವರಿಗೆ ಶಕ್ಯವೇ ಇಲ್ಲ. ಆದ್ದರಿಂದ ಅವರು ಹೇತುವನ್ನು ಪೂರ್ಣ ಮಾಡಲಿಕ್ಕೆ ಲೈಲಿಯೊಬ್ಬಳು ಮಾತ್ರ ಅವರಿಗೆ ಸಮರ್ಥಳಾಗಿ ತೋರಿದಳು, ಆಗ ಅವರು ಲೈಲಿಯನ್ನು ಕೂಗಿ ಕರೆದು, ತಮ್ಮ ಎದುರಿಗೆ ಕುಳ್ಳಿರಿಸಿಕೊಂಡು- “ಮಾರ್ಜೀನೇ, ಈಗ ನಿನಗೆ ಕಟ್ಟಕಡೆಯದೊಂದು ಮಹತ್ವದ ಕೆಲಸವನ್ನು ಹೇಳುತ್ತೇನೆ” ಎಂದು ಹೇಳಿದರು. “ಮಾರ್ಜೀನೆ” ಎಂದು ಕರೆದದ್ದನ್ನು ಕೇಳಿದ ಕೂಡಲೆ ಲೈಲಿಯು ಗಾಬರಿಯಾಗಿ ಸುತ್ತಮುತ್ತು ನೋಡಹತ್ತಿದಳು. ಆಕೆಯು ಹೀಗೆ ನೋಡುವದರ ಭಾವವನ್ನರಿತು ಮಾಸಾಹೇಬರು- “ಮಾರ್ಜೀನೆ, ಬಹು ದಿನಸಗಳ ಮೇಲೆ ನಿನ್ನ ನಿಜವಾದ ಹೆಸರಿನಿಂದ ನಾನು ನಿನ್ನನ್ನು ಕರೆದದ್ದನ್ನು ಕೇಳಿ, ನೀನು ಗಾಬರಿಯಾದದ್ದು ಆಶ್ಚರ್ಯವಲ್ಲ; ಆದರೆ ನಿನ್ನ ನಿಜವಾದ ಹೆಸರಿನಿಂದ ಕರೆದ ನನ್ನನ್ನು ಇನ್ನು ಮೇಲೆ ಜನರು ಮೆಹರಜಾನಳೆಂದು ಕೆರದರೂ ನಾನು ಹೆದರುವ ಹಾಗಿಲ್ಲ. ಇನ್ನು ಹ್ಯಾಗೂ ಯಾವತ್ತು ನಿಜವಾದ ವೃತ್ತಾಂತವನ್ನು ರಣಮಸ್ತಖಾನನಿಗೆ ನಾವು ಹೇಳಲೇಬೇಕಾಗಿದೆ. ಆ ಕಾರ್ಯವನ್ನು ನೀನೇ ಮಾಡತಕ್ಕದ್ದು. ಇಷ್ಟುಹೊತ್ತಿಗೆ ರಣಮಸ್ತಖಾನನಿಗೆ ನಿಜವಾದ ವೃತ್ತಾಂತವನ್ನೆಲ್ಲ ನಾವು ಹೇಳಿಬಿಟ್ಟಿದ್ದರೆ ನೆಟ್ಟಗಾಗುತ್ತಿತ್ತೆಂದು ನನಗೆ ತೋರುತ್ತದೆ. ಹಾಗೆ ಮಾಡಿದ್ದರೆ ಈಗಿನ ಅನರ್ಥದ ಪ್ರಸಂಗವೇ ಒದಗುತ್ತಿದ್ದಿಲ್ಲ. ಬಹಳವಾದರೆ ನನ್ನ ಮಗನು ನನ್ನ ನಿರಾಕರಣವನ್ನು