ಈ ಪುಟವನ್ನು ಪ್ರಕಟಿಸಲಾಗಿದೆ

೨೮೪

ಕನ್ನಡಿಗರ ಕರ್ಮಕಥೆ

ಮೊದಲೇ ಶಂಕಿಸುತ್ತಿರಲು ಅದರಲ್ಲಿ ರಾಮರಾಜನು “ನನ್ನ ಹೊಟ್ಟೆಯ ಮಗನ ಹಾಗೆ ನಿನ್ನ ಮೇಲೆ ಪ್ರೇಮ ಮಾಡುತ್ತೇನೆಂದು” ಈ ದಿನ ನುಡಿದದ್ದನ್ನು ಕೇಳಿ, ಆ ಖಾನನು ಬಹಳ ಅಸಮಾಧಾನಪಟ್ಟನು ತನ್ನ ತಂದೆಯು ಯಾರು ಎಂಬದು ರಣಮಸ್ತನಿಗೆ ಮೊದಲೇ ಗೊತ್ತಿಲ್ಲದಿರುವಾಗ, ರಾಮರಾಜನು ಹೀಗೆ ನುಡಿಯುವದು ಖಾನನಿಗೆ ಬಹು ಅಪಮಾನಾಸ್ಪದವಾಗಿ ತೋರಿ, ಆತನು ಬಹು ಉಗ್ರನಾದನು; ಆದರೆ ಕ್ರೋಧಕ್ಕೆ ಇದು ಸಮಯವಲ್ಲೆಂದು ತಿಳಿದು, ಆತನು ಅದನ್ನು ಬಹು ಕಷ್ಟದಿಂದ ನುಂಗಿಕೊಂಡು; ಆದರೂ ರಾಮರಾಜನು ಆತನ ಮನಸಿನ ಸ್ಥಿತಿಯನ್ನು ತಿಳಿದು ಆ ವಿಷಯವನ್ನು ಬದಲಿಸುವದಕ್ಕಾಗಿ ರಣಮಸ್ತಖಾನನಿಗೆ- “ಒಳ್ಳೇದು, ಹಾಗಾದರೆ ಈಗ ನೀನು ಮಲಗಿಕೊಳ್ಳಹೋಗು, ಈಗಲೇ ನಾನು ತಿರುಮಲ-ವೆಂಕಟಾದ್ರಿಗಳನ್ನು ಕರೆಸಿ, ನೀನು ಹೇಳಿದು ಸ್ಥಳದಲ್ಲಿ ಸೈನ್ಯದೊಡನೆ ಹೋಗಿ ಕುಳಿತುಕೊಳ್ಳುವಂತೆ ಅವರನ್ನು ಆಜ್ಞಾಪಿಸುವೆನು, ನೀನು ಅವರ ಸಂಗಡ ಹೋಗಿ ಆ ಸ್ಥಳವನ್ನು ಮಾತ್ರ ಅವರಿಗೆ ತೋರಿಸಬೇಕಾಗುವದು. ಹೋಗು, ಅವರು ಬಂದಕೂಡಲೆ ನಿನ್ನನ್ನು ಕರಿಸುವೆನು” ಎಂದು ಹೇಳಿದನು. ಅದನ್ನು ಕೇಳಿದ ಕೂಡಲೆ ರಣಮಸ್ತಖಾನನಿಗೆ ಬಹಳ ಸಮಾಧಾನವಾಯಿತು.

ಇತ್ತ ರಾಮರಾಜನು ತಾನು ಹೇಳಿದಂತೆ ತನ್ನ ಬಂಧುಗಳ ಕಡೆಗೆ ನಿಜವಾಗಿಯೇ ಸೇವಕರನ್ನು ಕಳಿಸಿದನು. ಸೇವಕರು ಹೋದಕೂಡಲೆ, ತಿರುಮಲ ವೆಂಕಟಾದ್ರಿಗಳು ರಾಮರಾಜನ ಬಳಿಗೆ ಬಂದರು. ಅಷ್ಟು ಹೊತ್ತಿಗೆ ರಣಮಸ್ತನ ಮೋಸದ ತಂತ್ರದಿಂದ ಸೈನ್ಯವನ್ನು ವಿಭಾಗಿಸಲಿಕ್ಕೆ ಅನುಕೂಲವಾದ ಸುದ್ದಿಗಳು ರಾಮರಾಜನ ಕಿವಿಗೆ ಮುಟ್ಟಿದವು. ಶತ್ರುಗಳು ಯಾವ ಕಡೆಗೋ ಒತ್ತರದಿಂದ ಹೋಗುತ್ತಿರುವರೆಂದು ಚಾರರು ರಾಯನಿಗೆ ಸುದ್ದಿಯನ್ನು ಹೇಳಿದರು. ರಾಮರಾಜನು ರಣಮಸ್ತಖಾನನ ವಿಚಾರಗಳನ್ನೂ ತನ್ನ ಬಂಧುಗಳಿಗೆ ತಿಳಿಸಿದನು. ಇಷ್ಟರಲ್ಲಿ ರಾಮರಾಜನ ಚಾರರು ಬಂದು- “ಮುಸಲ್ಮಾನ ಸೈನ್ಯವು ಹಿಂದಕ್ಕೆ ಕಾಲುದೆಗೆದು ಎಲ್ಲಿಗೋ ಹೋಗುತ್ತಿರುವದೆ”ಂಬ ಸುದ್ದಿಯನ್ನು ಹೇಳಿದರು. ಮುಸಲ್ಮಾನ ಸೈನಿಕರು ರಣಮಸ್ತನತಂತ್ರದಿಂದಲೇ ಓಡಿ ಹೋಗುವ ಸೋಗುಹಾಕಿದ್ದರು. ಈ ಮೋಸವು ರಾಮರಾಜನಿಗೂ, ಆತನ ಬಂಧುಗಳಿಗೂ ತಿಳಿಯಲಿಲ್ಲ. ಅವರು ರಣಮಸ್ತನ ಮಾತನ್ನು ನಿಜವೆಂದು ಸಂಪೂರ್ಣವಾಗಿ ನಂಬಿ, ತಮಗೆ ಮುಂಗಡ ತಿಳಿದ ಈ ಮಹತ್ವದ ಸುದ್ದಿಯ ಉಪಯೋಗವನ್ನು ಮಾಡಿಕೊಳ್ಳಬೇಕೆಂದು ಆ ಮೂವರು ಬಂಧುಗಳು ನಿಶ್ಚಯಿಸಿದರು ರಾಮರಾಜನು ಕೂಡಲೆ ರಣಮಸ್ತಖಾನನನ್ನು ಕರೆಸಿ, ನೀನು ಇವರಿಬ್ಬರ ಸೈನ್ಯದ ಸಂಗಡ