________________
110 ಕೆಳದಿನೃಪವಿಜಯಂ ಬಳಿಕರುನೀಲೇಶ್ವರದ ಳಿಪಿಳಯಂ ಕೊಂಡು ನಾಯಿಮಾರರ ನೆಲದೊಳೆ | ತೊಲಗದ ಕಂಬವನನುವಿಂ ನಿಲಿಸಿ ಮಹಾದ್ಯುತಪರಾಕ್ರಮವನುರೆ ಮೆರೆದಂ || ಇಂತು ನೀಲೇಶ್ವರದ ಗಡಿಮುಖದೊಳೆ ತೊಲಗದ ಕಂಬವಂ ನಿಲಿಸಿ ನಾಯಿಮಾರರಂ ವಶಗೈದು ಪಣಮಣಿಹಂಗಳಂ ಕೊಂಡನಂತರಂ ಕೊಲ್ಲಂತಮಾಪಳಮುಂತಾದ ಕೇರಳಮಂಡಲದ ಮನ್ನೆ ಯರ್ಕಳನೆರ್ದೆ ಗೆಡಿಸಿ ಮರಳನಂತುವಲ್ಲದೆಯುಂ || ೧೧ ರಂಜಿಸುವಲತ್ತನಾಡಂ ಮಂಜುಳಮೆನಿಸಿರ್ಸ ಪಡುವನಾಡನಿಳಾ೭ || ತ್ಯುಂಜರನುನ್ಸೂಲಿತರಿಪು ಪುಂಜಂ ಶಿವನೃಪತಿ ಕೌದಿಂ ಸಾಧಿಸಿದಂ | ಮತ್ತಮಾ ಶಿವಪ್ಪನಾಯಕಂ ದುರ್ಮುಖಸಂವತ್ಸರದಲ್ಲಿ ವಿಜಾಪು ರದ ಪಾತುಶಾಹಂ ಮೃತನಾದನೆಂಬ ವರ್ತಮಾನಂಕೇಳ್ತಾ ತಾವುವು ಖರ್ಕಟ್ಟಿಕೊಂಡ ಇಕ್ಕೇರಿ ಸೊರಬ ವುಡುಗಣಿ ಮಹಾದೇವಪುರ ಅಂಬ ಲಿಗೊಳ ಮುಂತಾದ ಕೊಂಬೆಗಳ೦ ಸಾಧಿಸಿ ಬಳಕ್ಕಂ ಸೋದೆಯವ ರ್ಮಾರ್ಮತಿದಿರ್ಚಿ ನಿಲವರಾಳ್ ನಾಡೊಳಗಣ ಸಿರಸಿ ಹೇರೂರ ಬೋಳರ ಪುಲಿಯಕಣ ಕರುವೂರ ಬನವಸೆ ಬದನಗೋಡು ಮುಂತಾ ದಸೀಮೆಗಳ ಸ್ವಾಧೀನಂಗೈದನಂತುಷ್ಟಲ್ಲದೆಯುಂ | ನಿರಸೆಯ ಕೊಂಟಿಯುಮಂ ಸಂ ಗರದೊಳೊಂಡುರುಸುಧಾಪುರಾಧಿಪನೆನಿಸು | ಗರುವಮಧುಲಿಂಗನಾಯಕ ನುರೆಪುಗೆ ಕೊಂಡಖಿಳರಾಜವಂ ಮಗುಳಿತಂ | ಇಂತಾ ಶಿವಪ್ಪನಾಯಕಂ ಸೋದೆಯುರಾರಾಜರಾತ್ಮ ಪರಿ ಸರಣಂಗಳಂ ಸ್ವಾಧೀನಂಗೈದನಂತರಂ, ಸಂಧಿಮುಖದೊಳಾ ಸೋದೆಯ ಮಧುಲಿಂಗನಾಯಕಂ ಬೇಡಿಕೊಳಲೆ ತಟ್ಟೆನೋಕ್ತಿಗಳ ಲಾಲಿಸಿ ಮ ೧೩ ೧೪