ವಿಕಿಸೋರ್ಸ್:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು

ವಿಕಿಸೋರ್ಸ್‍ನಲ್ಲಿ ಅಳಿಸುವಿಕೆಗಾಗಿ ಗುರುತು ಮಾಡಲಾಗಿರುವ ಲೇಖನಗಳ ಪಟ್ಟಿಗಾಗಿ Category:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟವನ್ನು ನೋಡಿ. ಅಳಿಸುವಿಕೆಗೆ ಗುರುತು ಮಾಡಲಾಗಿರುವ ಯಾವುದಾದರೂ ಲೇಖನ ಅಥವಾ ಪುಟದ ಬಗ್ಗೆ ನಿಮ್ಮ ವಿರೋಧವಿದ್ದಲ್ಲಿ ವಿರೋಧದ ಕಾರಣ ಸಮೇತ ನಿಮ್ಮ ಸಂದೇಶ ಈ ಪುಟದಲ್ಲಿ ಸೇರಿಸಿ.

ಗಮನಿಸಿ:

  • ಈ ಚರ್ಚೆ ಪುಟದಲ್ಲಿ ಅನಾಮಿಕ ಕಾಮೆಂಟುಗಳನ್ನು, ಸಹಿ ಹಾಕದೆ ಸೇರಿಸಲಾಗಿರುವ ಚರ್ಚೆಗಳನ್ನು ಪರಿಗಣಿಸಲಾಗುವುದಿಲ್ಲ.
  • ಯಾವ ಲೇಖನದ ಅಳಿಸುವಿಕೆಯ ಬಗ್ಗೆ ನಿಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಸದಸ್ಯ:Vikashegdeಯವರಿಗೆ- ಕಗ್ಗ ರಸಧಾರೆ: ಮಂಕುತಿಮ್ಮನ ಕಗ್ಗ ರಸಧಾರೆ-[೧] ಈ ಜಾಲತಾಣದಲ್ಲಿ ಎಲ್ಲಿಯೂ ಕಾಪಿರೈಟ್ ಕಾದಿರಿಸಿರುವುದಾಗಿ ಹಾಕಿಲ್ಲ. ಡಿವಿಜಿಯವರು ತಮ್ಮ ಕೃತಿಯನ್ನು ಸಾರ್ವಜನಿಕರಿಗೆ ಕೊಟ್ಟಿರುವುದಾಗಿ ತಮ್ಮ ಪುಸ್ತಕದಲ್ಲಿ ಹಾಕಿದ್ದಾರೆ. ಈ ವ್ಯಾಖ್ಯಾನಸಹಿತ ಕಗ್ಗ ಪದ್ಯಗಳೂ ಸಾರ್ಜನಿಕರಿಗೆ ಮುಕ್ತವಾಗಿ ಅಂತರ್ ಜಾಲ ತಾಣದಲ್ಲಿ ಹಾಕಿದೆ ಎಂದು ಭಾವಿಸಿದ್ದೇನೆ. (ವ್ಯಾಖ್ಯಾನ : ರವಿತಿರುಮಲೈ ಅವರದು)

  • "ಮಂಕುತಿಮ್ಮನ ಕಗ್ಗ ರಸಧಾರೆ" - ಇದಕ್ಕೆ ನಿಜವಾಗಿಯೂ ಕಾಪಿ ರೈಟ್ ಇದ್ದರೆ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಮಾತ್ರಾ ಉಳಿಸಿಕೊಂಡು ವ್ಯಾಖ್ಯಾನವನ್ನು ರದ್ದು ಮಾಡಬಹುದು. ಆದರೆ ನಾನು ರಸದಾರೆ ಅಂತರ್ ಜಾಲ ಪುಟದಲ್ಲಿ ವಿಕಿಸೋರ್ಸಿಗೆ ಇದನ್ನು ಹಾಕುವುದಾಗಿ ತಿಳಿಸಿದಾಗ ಮತ್ತು ಅದಕ್ಕೆ ತಕರಾರು ಇದೆಯೇ ಎಂದು ಕೇಳಿದಾಗ ಅದಕ್ಕೆ ಯಾವ ಉತ್ತರವೂ ಬಂದಿಲ್ಲ.
  • ಕಾಪಿರೈಟ್ ಇದೆ ಎನ್ನವುದು ನಿಜವಾದರೆ ನಾನೇ ವ್ಯಾಖ್ಯಾನಗಳನ್ನು ಅಳಿಸಿಹಾಕುತ್ತೇನೆ; ಕಗ್ಗದ ಪದ್ಯಗಲನ್ನು ಅಳಿಸುವುದು ಬೇಡ -ಕಗ್ಗದ ಪದ್ಯಗಳಿಗೆ ಕಾಪಿರೈಟ್ ಇಲ್ಲ. ನಾನು ಕಗ್ಗ ರಸಧಾರೆ ಗ್ರಂಥವನ್ನು ನೋಡಿಲ್ಲ. ಅಂತರ್ ಜಾಲ ಪುಟದಲ್ಲಿ ಮಾತ್ರಾ ನೋಡಿದ್ದೇನೆ. ಅದರಲ್ಲಿ ಎಲ್ಲಿಯೂ ಕಾಪಿರೈಟ್ -ಅಥವಾ ಹಕ್ಕುಕಾದಿರಿಸಿರುವ ಸೂಚನೆ ನನ್ನಕಣ್ಣಿಗೆ ಬಿದ್ದಿಲ್ಲ.ಮತ್ತೊಮ್ಮೆ ಪರಿಶೀಲಿಸುತ್ತೇನೆ. ಹಕ್ಕು ಕಾದಿರಿಸಿದ್ದರೆ ವ್ಯಾಖ್ಯನಗಳನ್ನು ಖಂಡಿತ ತೆಗೆದುಹಾಕಬೇಕಾಗುವುದು- ನಾನೇ ತೆಗೆಯುತ್ತೇನೆ. ಪದ್ಯಗಳನ್ನು ತೆಗೆಯವುದುಬೇಡ. Bschandrasgr (ಚರ್ಚೆ) ೦೪:೫೯, ೨ ಮಾರ್ಚ್ ೨೦೧೮ (UTC)

ಹಕ್ಕುಸ್ವಾಮ್ಯದ ಬಗ್ಗೆ

  • ನಾನು ಮತ್ತೊಮ್ಮೆ ಈಗ ಎಲ್ಲಿಯಾದರೂ ಕಾಪಿರಯಟ್ ಹಾಕಿದ್ದಾರೆಯೇ ಎಂದು ಹುಡುಕಿದೆ; ಆದರೆ ಎಲ್ಲಿಯೂ ಕಾಣಲಿಲ್ಲ.
  • ಕಗ್ಗ ರಸಧಾರೆ: ಫೇಸ್ ಬುಕ್ಕಿನಲ್ಲೂ ಸಾರ್ವಜನಿಕರಿಗಾಗಿ ಹಾಕಿದ್ದಾರೆ. ಅಲ್ಲಿಯೂ ಕಾಪಿರೈಟ್ ಇದೆ ಎಂದು ಹಾಕಿಲ್ಲ. ಮಂಕುತಿಮ್ಮನ ಕಗ್ಗ ರಸಧಾರೆ ಜಾಲತಾಣದಲ್ಲೂ ಕಾಪಿರೈಟ್ ಇದೆ ಎಂದು ಹಾಕಿಲ್ಲ.
  • ಇದಕ್ಕೆ ಕಾಪಿರೈಟ್ ಇದೆ ಎಂದು ಶ್ರೀ ವಿಕಾಸ ಹೆಗಡೆಯವರೇ ನಿಮಗೆ ಹೇಗೆ ತಿಳಿಯಿತು? ನಾನು ತಿಳಿಯಬಯಸುತ್ತೇನೆ. ಏನಾದರಾಗಲಿ ನಾನು ಫೇಸ್ ಬುಕ್ಕಿನಲ್ಲಿ ರಸಧಾರೆ ತಾಣದಲ್ಲಿ ಕಾಪಿರಯಟ್ ಇದೆಯೇ ಎಂದು ಈ ಕೆಳಗಿನಂತೆ ಕೇಳಿದ್ದೇನೆ. ಅದರ ಉತ್ತರ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಬಹುದು.
  • ರವಿತಿರುಮಲೈ ಶಣೈ ಅವರಿಗೆ:
  • I have posted these commentaries in Vikisource . Are these commentaries come under ಯೊಉರ copy right; If so I will delete them. Plese enlighten me soon.Bschandrasgr (ಚರ್ಚೆ) ೦೫:೪೧, ೨ ಮಾರ್ಚ್ ೨೦೧೮ (UTC)

ಉತ್ತರ

ಆ ಸೈಟಿನಲ್ಲಿ ಹಕ್ಕುಸ್ವಾಮ್ಯದ ಬಗ್ಗೆ ಉಲ್ಲೇಖಿಸಿಲ್ಲ ಎಂದು ಮಾತ್ರಕ್ಕೆ ನೀವಾಗೇ ಅದನ್ನು ಹಕ್ಕುಸ್ವಾಮ್ಯಮುಕ್ತ ಎಂದು ಹೇಗೆ ತೀರ್ಮಾನಿಸಿದಿರಿ? ಲೇಖಕರಿಂದ ಉತ್ತರ ಬಂದಿಲ್ಲ ಎಂದ ಮಾತ್ರಕ್ಕೆ ಅವರ ಅನುಮತಿ ಇಲ್ಲದೇ ಎತ್ತಿ ಇಲ್ಲಿ ಹಾಕಬಹುದು ಎನ್ನುವುದು ಸರ್ವಥಾ ಸರಿಯಲ್ಲ. ಸಾರ್ವಜನಿಕರಿಗೆ ಕೊಡುವುದು ಅಂದರೆ ಹಕ್ಕು ಸ್ವಾಮ್ಯ ಮುಕ್ತ ಮಾಡುವುದು ಎಂದು ಆಗಬೇಕಿಲ್ಲ. ವಿಕಿಸೋರ್ಸಿನಂತಹ ಅಧಿಕೃತ ತಾಣಗಳಲ್ಲಿ ಹಾಕುವಾಗ ಹಕ್ಕುಸ್ವಾಮ್ಯದ ಬಗ್ಗೆ ಖಚಿತಪಡಿಸಿಕೊಂಡು ಹಾಕಬೇಕು. --Vikashegde (ಚರ್ಚೆ) ೦೫:೪೬, ೨ ಮಾರ್ಚ್ ೨೦೧೮ (UTC)

ಸರಿ

ಕಗ್ಗರಸಧಾರೆ ನಾಲ್ಕು ಭಾಗಗಳಲ್ಲಿ ಪ್ರಕಟವಾಗಿದೆ. ಆದರೆ ನಾನು ಪುಸ್ತಕ ನೋಡಿಲ್ಲ. ಈಗ ಪುನಃ ಕಾಪಿರೈಟ್ ಬಗ್ಗೆ ಕೇಳಿದ್ದೇನೆ. ಈ ಹಿಂದೆ ವಿಕಿ ತಾಣದಲ್ಲಿ ಕೆಲವರು ಸುಮಾರು ೩೦ - ೪೧ ಕಗ್ಗ ಪದ್ಯಗಳನ್ನು ಹಾಕಿ ಸ್ವಂತ ವ್ಯಾಖ್ಯಾನ ಬರೆದಿದ್ದರು. (ಚರ್ಚೆಯಲ್ಲಿ- ಸದಸ್ಯ-ಮನ) ಅದರ ಮೇಲೆ ನಾನು ಇತರೆ ಪದ್ಯಗಳನ್ನು ಹಾಕಬೇಕೆಂದು ಯೋಚಿಸಿದೆ. ಹಿಂದೆ ಡಿವಿಜಿಯವರು ತಮ್ಮ ಕೆಲವು ಪುಸ್ತಕಗಳ ಹಕ್ಕನ್ನು ಸಾರ್ವಜನಿಕರಿಗೆ ಬಿಟ್ಟಿರುವುದಾಗಿ ಬರೆದಿದ್ದರು. ಇದೂ ಹಾಗೇ ಇರಬಹುದೆಂದು ಭಾವಿಸಿದೆ. ನಿಮ್ಮ ರದ್ದು ಸೂಚನೆ ನೋಡಿದ ನಂತರ; ನನಗೂ ಅನುಮಾನ ಉಂಟಾಗಿದೆ. ವಿಕಿಸೋರ್ಸಿಗಾಗಿ ಕಗ್ಗ ಪದ್ಯಗಳನ್ನು ಹಾಕಲು, ಇತ್ತೀಚೆಗೆ ಅದರ ಹಕ್ಕು ಹೊಂದಿದ ಬೆಂಗಳೂರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಅನುಮತಿ ಪಡೆಯಲು ಸಾಧ್ಯವೇ ಎಂದು ಶ್ರೀ ಪವನಜರನ್ನು ವಿಚಾರಿಸಿ. ಕಗ್ಗರಸಧಾರೆ ತಾಣದಲ್ಲಿ ವಿಕಿಸೋರ್ಸಿಗೆ ಹಾಕಲು ಪುನಃ ಅನುಮತಿ ಕೇಳಿದ್ದೇನೆ. ಅಲ್ಲಿ ಯಾವುದಕ್ಕೂ ಉತ್ತರಿಸುವವರೇ ಇಲ್ಲ. "ಈ ಕಗ್ಗರಸಧಾರೆ ತಾಣ ಯಾರ ಸುಪರ್ದಿನಲ್ಲಿದೆ ಎಂದು ಎಲ್ಲಿಯೂ ನಮೂದಿಸಿಲ್ಲ". ಯಾವುದೇ ಅನುಮತಿ ಬರದಿದ್ದರೆ ಪುಟಗಳನ್ನು ರದ್ದು ಮಾಡುವುದೇ ಹೇಗೆ?. ಹಕ್ಕುಸ್ವಾಮ್ಯವನ್ನು ಎಲ್ಲಿಯೂ ನಮೂದಿಸದಿದ್ದರೆ ಅದಕ್ಕೆ ಹಕ್ಕು ಸ್ವಾಮ್ಯವಿದೆ ಎಂದು ಭಾವಿಸಬೇಕೇ? ಈಗಾಗಲೇ ಹಿಂದೆ ಅನೇಕರು ಕೆಲವು ಪದ್ಯ ಹಾಕಿದ್ದಾರೆ, ಅದರ ಗತಿ ಏನು? ಏಕೆಂದರೆ ಕಗ್ಗದ ಅಭಮಾನಿಗಳು ಓದುಗರು ಬಹಳಜನ ಇದ್ದಾರೆ. ಈ ಪುಟಗಳು ನಿಜವಾಗಿ ನಿಯಮಕ್ಕೆ ವಿರುದ್ಧವಾಗಿದ್ದರೆ ರದ್ದು ಮಾಡಬಹುದು. (ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಹಕ್ಕು ಸ್ವಾಮ್ಯ ಹಾಕದ ಅನೇಕ ಅಂತರ್ ಜಾಲ ತಾಣದಿಂದ ವಿಷಯಗಳನ್ನು ಹಾಗೆಯೆ ತೆಗೆದುಕೊಳ್ಲುವುದನ್ನು ನೋಡಿದ್ದೇನೆ.)ನಿಮ್ಮವ Bschandrasgr (ಚರ್ಚೆ) ೦೮:೪೯, ೨ ಮಾರ್ಚ್ ೨೦೧೮ (UTC)

ಸೂಚನೆ

  • ಕಾಪಿರೈಟ್‍ ಇರುವ ಬಗ್ಗೆ ಅವರ ರಸಧಾರೆ ಫೇಸ್ ಬುಕ್‍ನಲ್ಲಿ ಯಾವ ಉಲ್ಲೇಖವೂ ಇಲ್ಲ. ಆ ಬಗ್ಗೆ ಕೇಳಿದ್ದೇನೆ ಮತ್ತು ವಿಕಿಸೋರ್ಸ್‍ಗೆ ತುಂಬುವುದಾಗಿ ತಿಳಿಸಿದ್ದೇನೆ- ಅವರಿಂದ ಈವರೆಗೆ ಯಾವ ವಿರೋಧವೂ ಬಂದಿಲ್ಲ. -- ಈ ಪುಟಗಳನ್ನು ರದ್ದಿಗೆ ಹಾಕಿರುವುದರಿಂದ ಮುಂದಿನ ತುಂಬುವಿಕೆಯನ್ನು ನಿಲ್ಲಿಸಿದೆ. ಮೂಲ ಜಾಲ ತಾಣದಲ್ಲಿ ಯಾವುದೇ ಹಕ್ಕುಸ್ವಾಮ್ಯ ನಮೂದಿಸಿಲ್ಲ. ಆದ್ದರಿಂದ ಈ ಪುಟಗಳನ್ನು ರದ್ದು ಮಾಡವಾಗ ನಿಜವಾಗಿ ಕಾಪಿರೈಟ್ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಕಾಪಿರೈಟ್ ಇದ್ದರೆ ಅದನ್ನು ಜಾಲತಾಣದಲ್ಲಿ, "ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿದೆ" ಎಂದು ಹಾಕಿಯೇ ಹಾಕುತ್ತಾರೆ.- ಆದರೆ ಈ ರಸಧಾರೆಗೆ ಹಾಕಿಲ್ಲ ಆದ್ದರಿಂದ ಹಕ್ಕುಸ್ವ್ಯಾಮ್ಯ ಖಚಿತ ಪಡಿಸಿಕೊಂಡು ರದ್ದು ಮಾಡಬಹುದು. ಯಾರೂ 'ಇದಕ್ಕೆ ಹಕ್ಕುಸ್ವಾಮ್ಯು ಇಲ್ಲ. ಎಂದು ತಮ್ಮ ಕೃತಿಗೆ ನಮೂದಿಸುವುದಿಲ್ಲ. ಹಕ್ಕುಸ್ವಾಮ್ಯದ ಬಗ್ಗೆ ಏನೂ ಬರೆಯುವುದಿಲ್ಲ, ಹಾಗಿದ್ದರೆ ಅದು ಹಕ್ಕುಸ್ವಾಮ್ಯವಿಲ್ಲ ಎಂದು ಅರ್ಥ. Bschandrasgr (ಚರ್ಚೆ) ೦೪:೩೦, ೩ ಮಾರ್ಚ್ ೨೦೧೮ (UTC)
ನಿಮಗೆ ಬೇಕಾದಂತೆ ನೀವೇ ಅರ್ಥಗಳನ್ನು ಕಲ್ಪಿಸಿಕೊಳ್ಳಬೇಡಿ. ಅವರಿಂದ ಉತ್ತರ ಬಂದಿಲ್ಲ ಎಂದ ಮಾತ್ರ ಅವರ ವಿರೋಧ ಇಲ್ಲ ಎಂಬ ಸಮರ್ಥನೆ ಹಾಸ್ಯಾಸ್ಪದ. ಹಕ್ಕುಸ್ವಾಮ್ಯ ಖಚಿತಪಡಿಸಿಕೊಳ್ಳುವುದು ಇತರರ ಕೆಲಸವಲ್ಲ. ಖಚಿತವಾಗಿ ಕಗ್ಗವು ಸಾರ್ವಜನಿಕ ಡೊಮೈನಿಗೆ ಹಕ್ಕುಸ್ವಾಮ್ಯಮುಕ್ತ ಮಾಡಿಲ್ಲ ಅಂತ ಗೊತ್ತಿರುವುದರಿಂದಲೇ ಅದನ್ನು ಅಳಿಸಲು ಹಾಕಲಾಗಿದೆ. ವಿರೋಧ ಇದ್ದರೆ ಹಕ್ಕುಸ್ವಾಮ್ಯಮುಕ್ತ ಎಂದು ಘೋಷಿಸಿರುವ ದಾಖಲೆ ತೋರಿಸಬೇಕಾದ್ದು ನಿಮ್ಮ ಕೆಲಸ. ಬೇರೊಂದು ತಾಣದಲ್ಲಿ ಕಗ್ಗ ಹಾಕಿದಾರೆ, ಅಲ್ಲಿಹಕ್ಕುಸ್ವಾಮ್ಯದ ಬಗ್ಗೆ ಬರೆದಿಲ್ಲ ಎಂದಮಾತ್ರಕ್ಕೆ ಅಲ್ಲಿಂದ ನಕಲು ಮಾಡಿ ವಿಕಿಸೋರ್ಸಿಗೆ ಹಾಕುವುದು ತಪ್ಪಾಗುತ್ತದೆ. --Vikashegde (ಚರ್ಚೆ) ೦೭:೩೫, ೫ ಮಾರ್ಚ್ ೨೦೧೮ (UTC)
  • ಮಾನ್ಯರೇ ಯಾರೂ ತಮ್ಮ ಪುಸ್ತಕದಲ್ಲಿ (ಅಥವಾ ವೆಬ್‍ನಲ್ಲಿ) "ಹಕ್ಕುಸ್ವಾಮ್ಯಮುಕ್ತ" ಎಂದು ಹಾಕಿರುವುದಿಲ್ಲ. ಬದಲಿಗೆ ಇದು ಹಕ್ಕು ಸ್ವಾಮ್ಯಕ್ಕೆ ಒಳಪಟ್ಟಿದೆ ಎಂದು ಮುದ್ರಿಸಿರುವುದಿಲ್ಲ. ನೀವು ಆ ಬಗೆಯ ಪುಸ್ತಕವನ್ನು ನೋಡಿಲ್ಲವೆಂದು ತೋರುತ್ತದೆ. ಈಗ ಐದು ಆರು ವರ್ಷದಿಂದ ಸುಮಾರು ೪೦ ಕಗ್ಗದ ಪದ್ಯಗಳನ್ನು ಹಾಕಿತ್ತು. ಅದನ್ನು ನಾನೇ ವ್ಯವಸ್ಥೆಗೊಳಿಸಿದ್ದೇನೆ. ಆದರೆ ಆಗ ಯಾರೂ ಅಳಿಸುವಿಕೆಗೆ ಹಾಕಿಲ್ಲ. ಣಾನು ರಸಧಾರೆ ಪುಸ್ತಕ ನೋಡಿಲ್ಲ. ಅದರಲ್ಲಿ "ಹಕ್ಕು ಸ್ವಾಮ್ಯ" ಹಾಕಿದ್ದರೆ ಎಲ್ಲವನ್ನೂ ರದ್ದುಮಾಡಲೇಬೆಕಾಗುವುದು. ರದ್ದು ಮಾಡುವವರು ಅದಕ್ಕೆ ಹಕ್ಕು ಸ್ವಾಮ್ಯ ಇದೆ ಎಂದು ದೃಡಪಡಿಸಿಕೊಳ್ಳಬೇಕು. ನಾನು ಹಕ್ಕುಸ್ವಾಮ್ಯವನ್ನು ಅಂತರ್‍ಜಾಲತಾಣದಲ್ಲಿ ಹಾಕಿಲ್ಲ ಎಂದು ದೃಢಪಡಿಸಿಕೊಂಡೇ ಅದನ್ನು ಹಾಕಿದ್ದೇನೆ- ಆದರೆ ಒಂದು ಲೋಪ ಅವರ ಪುಸ್ತಕ ನೋಡಿಲ್ಲ ಅದು ಸಿಕ್ಕಿಲ್ಲ; ಅದರಲ್ಲಿಹಕ್ಕುಸ್ವಾಮ್ಯ ಹಾಕಿದ್ದರೆ ರದ್ದು ಮಾಡಲೇಬೇಕಾಗುವುದು. ನೀವು ಯಾವುದಾದರೂ ಪುಸ್ತಕದಲ್ಲಿ " ಈ ಪಸ್ತಕಕ್ಕೆ ಹಕ್ಕು ಸ್ವಾಮ್ಯ ಇಲ್ಲ" ಎಂದು ಪ್ರಿಂಟ್ ಮಾಡಿದ್ದು ನೋಡಿರುವಿರಾ!! ನಾನು ನೋಡಿಲ್ಲ - ಆದರೆ ಡಿವಿಜಿಯವರ ಕೆಲವು ಪುಸ್ತಕಕ್ಕೆ " ಸಾರ್ವಜನಿಕರಿಗೆ ಹಕ್ಕು ಬಿಟ್ಟಿದೆ" ಎಂದು ಹಾಕಿರುವುದನ್ನು ನೊಡಿದ್ದೇನೆ. ವ್ಯಾಖ್ಯಾನವಿರುವ ಈ ಪುಸ್ತಕದ ಬಗ್ಗೆ ಗೊತ್ತಿಲ್ಲ, ಇಲ್ಲಿ ಲಭ್ಯವಿಲ್ಲ. ನೀವು ಅದಕ್ಕೆ "ಹಕ್ಕುಸ್ವಾಮ್ಯ" ಹಾಕಿದ್ದನನ್ನು ನೋಡಿದ್ದರೆ ಎಲ್ಲಾ ರದ್ದು ಮಾಡಬಹುದು. ಉಳಿದ ಹಿಂದೆ ತುಂಬಿದ ಪದ್ಯಗಳನ್ನು ಏನು ಮಾಡುವಿರಿ? ನಿಮ್ಮವ-Bschandrasgr (ಚರ್ಚೆ) ೧೬:೪೧, ೫ ಮಾರ್ಚ್ ೨೦೧೮ (UTC)
  • ಎಲ್ಲಾ ಕಗ್ಗದ ಕಂತುಗಳನ್ನು ೧-೧೩ ರದ್ದುಮಾಡಬಹುದು.Bschandrasgr (ಚರ್ಚೆ) ೦೯:೧೯, ೬ ಮಾರ್ಚ್ ೨೦೧೮ (UTC)
ಪ್ರತಿಪುಸ್ತಕದಲ್ಲೂ ಎರಡನೇ ಪುಟದಲ್ಲಿ ಕಾಪಿರೈಟ್ ಯಾರಲ್ಲಿದೆ ಎಂಬ ಮಾಹಿತಿ ಇರುತ್ತದೆ. ಇಷ್ಟು ಮೂಲಭೂತ ತಿಳುವಳಿಕೆ ಇರಬೇಕು. ಮತ್ತು ಪ್ರತಿಯೊಂದು ಸೃಜನಶೀಲ ಕೃತಿಗಳೂ ಸಹ ಅವರ ಹಕ್ಕು ಮತ್ತು ಅವರ ಕಾಲಾನಂತರ ಮತ್ತೊಬ್ಬ ಹಕ್ಕುದಾರರಲ್ಲಿರುತ್ತದೆ. ಕಾಪಿರೈಟ್ ಮುಕ್ತಆಗಬೇಕೆಂದರೆ ಆ ಹಕ್ಕುದಾರರು ಆ ಕೃತಿಗಳನ್ನು ಪಬ್ಲಿಕ್ ಡೊಮೈನಿನಲ್ಲಿ ಬಿಡುಗಡೆಗೊಳಿಸಬೇಕು. (ಉದಾಹರಣೆಗೆ 'ನಿರಂಜನ' ಅವರ ಮಗಳು ಅವರ ಎಲ್ಲಾ ಪುಸ್ತಕಗಳನ್ನು ಹಕ್ಕುಸ್ವಾಮ್ಯ ಮುಕ್ತ ಮಾಡಿದ್ದಾರೆ, ಮೈಸೂರು ವಿ.ವಿ. ವಿಶ್ವಕೋಶ ಮುಕ್ತವಾಗಿದೆ) ಅಥ್ವಾ ಲೇಖಕರು ತೀರಿಹೋದಮೇಲೆ, ಹಕ್ಕುದಾರರಿಲ್ಲದೇ ಇಂತಿಷ್ಟು ವರ್ಷಗಳಾಗಬೇಕು ಅಂತೆಲ್ಲಾ ನಿಯಮಗಳಿವೆ. (ಉದಾ: ವಚನಗಳು, ದಾಸರಪದಗಳು, ಶಿಶುನಾಳರ ತತ್ವಪದಗಳು ಇತ್ಯಾದಿ) ಅದನ್ನ ತಿಳಿದುಕೊಳ್ಳುವುದು ತಮ್ಮ ಕೆಲಸ. ಯಾವುದೋ ವೆಬ್ ತಾಣದಲ್ಲಿ ಹಾಕಿದ ಮಾತ್ರಕ್ಕೆ ಅದರ ಬಗ್ಗೆ ಚರ್ಚೆ ಅನಗತ್ಯ. ಅದು ನಾನು ರಚಿಸಿದ ತಾಣ ಅಲ್ಲ. ಬೇಕಿದ್ದರೆ ಆ ತಾಣದ ನಿರ್ವಾಹಕರೊಡನೆ ಚರ್ಚಿಸಿ. ವೆಬ್ ತಾಣಗಳ ಮಾಹಿತಿಯೂ ಕಾಪಿರೈಟೆಡ್ ಆಗಿರುತ್ತದೆ. ಅದು ಮೂಲಭೂತ ತಿಳುವಳಿಕೆ. ಅದನ್ನು ಯಾರೂ ಪ್ರತ್ಯೇಕವಾಗಿ ಹೇಳುವುದಿಲ್ಲ. ಆದಾಗ್ಯೂ ಕೆಲವು ತಾಣಗಳಲ್ಲಿ ಇಲ್ಲಿನ ಮಾಹಿತಿ ನಕಲು ಮಾಡುವಂತಿಲ್ಲ ಅಂತ ನಿಮ್ಮಂತವರಿಗೆ ಅರ್ಥಾಗಲೆಂದೇ ಹಾಕಿರುತ್ತಾರೆ. ಇನ್ನು ಈ ವಿಷಯದ ಚರ್ಚೆ ಮುಂದುವರೆಸಲು ಇಷ್ಟವಿಲ್ಲ. ದಯವಿಟ್ಟು ವಿಕಿಯೋಜನೆಗಳ ಗುಣಮಟ್ಟ ಹಾಳುಮಾಡುವ ಕೆಲಸ ಮಾಡಬೇಡಿ. ಕಂಟೆಂಟ್ ಸೇರಿಸದಿದ್ದರೂ ಪರವಾಗಿಲ್ಲ. ಮೊದಲು ಸರಿಯಾದ ವಿಕಿ ಫಾರ್ಮ್ಯಾಟಿಂಗ್ ಕಲಿಯಿರಿ. ಶುಭವಾಗಲಿ.--Vikashegde (ಚರ್ಚೆ) ೦೬:೧೭, ೭ ಮಾರ್ಚ್ ೨೦೧೮ (UTC)

&

ಮಾನ್ಯರೇ, ಹಕ್ಕು ಸ್ವಾಮ್ಯವಿದ್ದರೆ ಹಕ್ಕು ಸ್ವಾಮ್ಯ ಹಾಕಿಯೆ ಇರುತ್ತಾರೆ. ನೀವು ಹೇಳಿದಂತೆ ಆದರೆ ವಿಕಿಗೆ ಯಾವುದೂ ಅಂತರಜಾಲದಲ್ಲಿ ಇರುವುದನ್ನು ಹಾಕುವಂತೆಯೇ ಇಲ್ಲ. ಕೇವಲ ಐದಾರು ಲೇಖನ ಹಳೆಯ ವಿಷಯದ ಲೇಖನ ಹಾಕಿ, ಅನುಭವ ಇಲ್ಲದೆ ವಿಕಿ ಫಾರ್ಮ್ಯಾಟಿಂಗ್ ಬಗೆಗೆ ಉಪದೇಶ ಮಾಡುತ್ತೀರಿ. ಆದರೆ ಅದಕ್ಕೆ ವಿರುದ್ಧವಾಗಿ ಗೋವಿನ ತಳಿಗಳ ಬಗೆಗೆ ಅಂತರ್ ಜಾಲ ತಾಣದಲ್ಲಿ ಹಾಕಿದ್ದೀರಿ. ಅದು ಹೇಗೆ ಸಾದ್ಯವಾಯಿತು? ಉದಾಹರಣೆಗೆ ಇಸ್ರೊ (ಮತ್ತು ನಾಸಾ) ತನ್ನ ಎಲ್ಲಾ ಮಾಹಿತಿಗೂ ಕಾಪಿರೈಟ್ ಕಾದಿರಿಸಿದೆ ಎಂದುಅವರ ತಾಣದಲ್ಲಿ ಹಾಕಿದೆ. ಹಾಗಿದ್ದರೆ ಆ ಮಾಹಿತಿಗಳನ್ನು ಎಲ್ಲಾ ವಿಕಿಗಳಲ್ಲಿ ಹೇಗೆ ಹಾಕಿದರು. ನೀವು ಆ ಮಾಹಿತಿಗಳು ಪತ್ರಿಕೆಯಲ್ಲಿ ಬಂದರೆ ಅದಕ್ಕೆ ಪತ್ರಿಕೆಯ ಕಾಪಿ ರೈಟ್ ಬರುವುದು ಎಂದು ವಾದಿಸುವಿರಿ. ಒಂದೇ ವಿಷಯಕ್ಕೆ ಎಷ್ಟು ಜನರಿಗೆ - ಪತ್ರಿಕೆಗಳಿಗೆ ಕಾಪಿರೈಟ್ ಬರುವುದು. ಸಂಪಾದಹರಿಗೆ ತಪ್ಪು ಮಾರ್ಗದರ್ಶನ ನೀಡುವುದರಿಂದ ಕನ್ನಡ ವಿಕಿಗೆ ಸಂಪಾದಕರೇ ಇಲ್ದಂತಾಗಿದೆ. ನೀವು ಇಷ್ಟು ವರ್ಷ ಕೆಲಸ ಮಾಡಿ ವಿಕಿಗೆ ವಿಕಿಗೆ ಒಬ್ಬ ಉತ್ತಮ ಸಂಪಾದಕರನ್ನು ತಯಾರಿಸಲು ಆಗಿಲ್ಲ. ನೀವೂಕೂಡಾ ಯಾವುದನ್ನೂ ಅಪ್‍ಡೇಟ್ ಮಾಡುವುದಿಲ್ಲ. ನಿರಂಜನ ಅವರ ಪುಸ್ತಕದಲ್ಲಿ ಕಾಪಿರೈಟ್ ಸೂಚನೆ'ಹಕ್ಕು ಕಾದಿರಿಸಿದೆ' ಎಂದು ಹಾಕಿದ್ದರು ಅದ್ದರಿಂದ ಅದನ್ನು ಹಕ್ಕುಸ್ವಾಮ್ಯ ಮುಕ್ತ ಮಾಡಬೇಕಾಯಿತು, ಒಂದು ಪುಸ್ತಕದಲ್ಲಿ ಹಕ್ಕು ಸ್ವಾಮ್ಯ ಹಾಕದಿದ್ದರೆ ಅದು ಹಕ್ಕು ಸ್ವಾಮ್ಯದಿಂದ ಮುಕ್ತವಾಗಿದೆ ಎಂದೇ ಅರ್ಥ. ನಿಮಗೆ ಅದನ್ನು ತಿಳಿಸಿಹೇಳುವುದು ಹೇಗೆ? ನೀವೂ ಸಂಪಾದನೆ ಮಾಡುವುದಿಲ್ಲ. ಮಾಡುವವರಿಗೂ ಸರಿಯಾದ ಮಾರ್ಗದರ್ಶನ ಮಾಡುವುದಿಲ್ಲ. ಕಾಪಿರೈಟ್ ಇದ್ದರೂ ಕಾನೂನಿನಲ್ಲಿ ಅದಕ್ಕೆ ಕೆಲವು ಇತಿಮಿತಿಗಳಿವೆ. ಅದನ್ನು ದಯವಿಟ್ಟು ತಿಳಿಯಿರಿ.

ಇಸ್ರೋ ತನ್ನ ಮಾಹಿತಿಗೂ ಕಾಪಿರೈಟ್ ಕಾದಿರಿಸಿದೆ ಅಂದರೆ ಇಸ್ರೋ ಬಗ್ಗೆ ಬರೆಯಬಾರದಂತ ಅಲ್ಲ. ತನ್ನ ಸಂಶೋಧನಾ ಮಾಹಿತಿಗಳಿಗೆ ಕಾಪಿರೈಟ್ ಹೊಂದಿರುತ್ತದೆ. ಇಸ್ರೋ ಬಗ್ಗೆ ಅದರ ಕೆಲಸಗಳ ಬಗ್ಗೆ ಬರೆಯದಂತೆ ಕಾಪಿರೈಟ್ ಹೊಂದಿರುತ್ತದೆ ಅಂತ ಅಲ್ಲ. ಇಷ್ಟು ತಿಳುವಳಿಕೆ ಇಲ್ಲದ ನೀವು ಉಪದೇಶಮಾಡುತ್ತೀರಿ. ಪತ್ರಿಕೆಗಳಿಂದ ಮಾಹಿತಿ ತೆಗೆದುಕೊಳ್ಳಬಾರದು ಅಂತ ಯಾರೂ ಹೇಳಿಲ್ಲ. ಅಲ್ಲಿನ ವಾಕ್ಯಗಳನ್ನು ಯಥಾವತ್ ಕಾಪಿಮಾಡಬಾರದು ಮತ್ತು ವರದಿ ರೂಪದಲ್ಲಿರುವ ಮಾಹಿತಿಯನ್ನು ಅದೇ ರೂಪದಲ್ಲೇ ಹಾಕಬಾರದು ಅನ್ನುವುದು ಸಾಮಾನ್ಯ ತಿಳುವಳಿಕೆ. ನೀವು ಎಷ್ಟು ಜನ ಸಂಪಾದಕರನ್ನು ತಯಾರುಮಾಡಿದ್ದೀರಿ ಹೇಳಿ. ನಮಗೇನು ಸಂಬಳ ಕೊಟ್ಟು ನೀವು ಇಟ್ಟಿಲ್ಲ. ಹಾಗಾಗಿ ನಾನು ಯಾರಿಗೆ ಕಲಿಸಿದೆ, ಎಷ್ಟು ಕಲಿಸಿದೆ ಇವೆಲ್ಲಾ ಮಾತನಾಡುವ ಅಗತ್ಯವಿಲ್ಲ. ಪುಸ್ತಕದ ಕಾಪಿರೈಟಿನ ಬಗ್ಗೆ ಉಪದೇಶ ಕೊಡುವ ತಾವು ಮೊದಲು ವಿಕಿಯಲ್ಲಿನ ಎಲ್ಲಾ ಮಾಹಿತಿಗಳು ಹಕ್ಕುಸ್ವಾಮ್ಯ ಮುಕ್ತ ಮತ್ತು ಅದನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದು ಎಂಬುದನ್ನು ತಿಳಿದುಕೊಂಡು ತಮ್ಮನ್ನು ಯಾರೂ ಪ್ರಶ್ನಿಸಬಾರದೆಂಬ ಧೋರಣೆಯಿಂದ ಹೊರಬನ್ನಿ.--Vikashegde (ಚರ್ಚೆ) ೧೮:೪೮, ೮ ಮಾರ್ಚ್ ೨೦೧೮ (UTC)
  • ನೀವು ಹಾಕಿದ ಗೋತಳಿಗಳ ಎಲ್ಲಾ ಪುಟಕ್ಕೂ "© 2018 Vishwagou - Theme: Patus by FameThemes. 2016 Vishwagou.org| All Rights Reserved", ಹೀಗೆ ಸ್ಪಷ್ಟವಾಗಿ ಕಾಪಿರೈಟ್ ಹಾಕಿದೆ. ಆದರೂ ಅದರಿಂದ ವಿಷಯಗಳನ್ನು (ಫೋಟೋ- ಪವನಜರದ್ದು) ಎತ್ತಿ ವಿಕಿಗೆ ಹಾಕಿದ್ದೀರ. ನಿಮಗೆ ಆ ನಿಯಮ ಅನ್ವಯಿಸುವುದಿಲ್ಲವೇ? ಕನ್ನಡದಲ್ಲಿ ಒಂದು ಗಾದೆ ಇದೆ "ಹೇಳುವುದು ಕಾಶಿಕಾಂಡ ತಿನ್ನುವುದು ಮಸಿಕೆಂಡ" ಎಂದು. ನೀವು ಅಷ್ಟೊಂದು ಸ್ಪಷ್ಟವಾಗಿ ಕಾಪಿರೈಟ್ ಇದ್ದರೂ ಅದರಿಂದ ಎತ್ತಬಹುದೇ. ಅಲ್ಲದೇ ನೀವು ಹಾಕಿರುವ ಕೆಲವು ವೆಬ್ ಸೈಟ್ ತೆರೆಯವುದೇ ಇಲ್ಲ. ಪ್ರತಿ ಗೋವು ತಳಿಗೂ ಹಾಕಿದ ಆಧಾರ/ಉಲ್ಲೇಖ ಪುಟದಲ್ಲಿ ಆ ಪುಟಕ್ಕೆ ಸಂಬಂಧ ಪಟ್ಟ ವಿವರಗಳಿಲ್ಲ. ಪರಿಶೀಲನಾಯೋಗ್ಯವಾಗಿಲ್ಲ. ಇದು ಮೋಸವಲ್ಲವೇ. ನಿಮಗೆ ಬೇರೆಯವರಿಗೆ ಉಪದೇಶಮಾಡುವ ಹಕ್ಕೂ ಇಲ್ಲ - ಯೋಗ್ಯತೆಯೂ ಇಲ್ಲ! ಸಂಬಂಧಪಡದೆ ಇರುವ, ವಿವರಗಳಿಲ್ಲದ ಆಧಾರ/ಉಲ್ಲೇಖ ಹಾಕುವುದು ಮೋಸ ಮತ್ತು ಅಪ್ರಾಮಾಣಿಕತೆ ಅಲ್ಲವೇ? ಅದು ಉದ್ದೇಶ ಪೂರ್ವಕವೇ? ದಯವಿಟ್ಟು ಬೇರೆಯವರಿಗೆ ಉಪದೇಶ ಮಾಡವುದು ಬಿಡಿ. ಆ ಪುಟಗಳನ್ನು ರದ್ದು ಮಾಡುತ್ತೀರೊ ಉಳಸಿಕೊಳ್ಲುತ್ತೀರೊ ನೋಡಿ. ನಾನು ಅದಕ್ಕೆ ರದ್ದು ನೋಟೀಸು ಹಾಕುವುದಿಲ್ಲ. ತಿಳಿಯಿರಿ ನಾನು ಯಾವಾಗಲೂ ಕಾಪಿರೈಟ್ ಇರುವುದನ್ನು ಹಾಗೇ ಹಾಕಿಲ್ಲ. ನಿಮಗೆ ಒಂದು ಪುಟವನ್ನೂ ಸರಿಯಾಗಿ ಸೃಷ್ಟಿಸಲು ಬರದಿದ್ದರೆ ಏಕೆ ಈ ಉಪದೇಶ ಮಾಡುವ, ತರಗತಿ ನೆಡೆಸುವ ಉಪದ್ವ್ಯಾಪ. "Really Shoking" ನಿಮ್ಮದು ತಪ್ಪಲ್ಲವೇ! ನಾನು ನೋಡಿದ್ದರಲ್ಲಿ ತಪ್ಪಿಲ್ಲವೆಂದು ಭಾವಿಸುತ್ತೇನೆ. ನೀವು ಎಲ್ಲಿ ತಕರಾರು ಹಾಕುತ್ತೀರೋ ಅಲ್ಲಿ ಎಲ್ಲಾ ಕಡೆ ಈ ಟಿಪ್ಪಣಿ ಹಾಕಬೇಕಾಗುತ್ತದೆ. ನಿಮಗೆ ವಿಕಿಯ ನಿರ್ವಾಹಕರಾಗುವ ಯೋಗ್ಯತೆ ಇಲ್ಲವೆಂದು ವಿಷಾದದಿಂದ ಹೇಳಬೇಕಾಗುವುದು. ಕಲವು ತಂತ್ರಾಂಶ ಗೊತ್ತಿದ್ದಮಾತ್ರಕ್ಕೆ ಸರ್ವಜ್ಞರಲ್ಲ! ನನ್ನನ್ನು ನಿಮ್ಮ ಸ್ನೇಹಿತರ ಜೊತೆ ಸೇರಿ "ಬ್ಲಾಕ್" ಮಾಡಬಹುದು. ಅದು ನಿಮ್ಮ ಹೊಟ್ಟೆಕಿಚ್ಚಿನ ಪ್ರತಿಕ್ರಿಯೆ ಆಗುವುದು.
  • ನಿಮ್ಮವBschandrasgr ೧೨:೩೬, ೭ ಮಾರ್ಚ್ ೨೦೧೮ (UTC)
ಪ್ರತಿಕ್ರಿಯಿಸಬಾರದೆಂದು ಇದ್ದೆ. ಆದರೆ ನಿಮ್ಮ ಅಸಂಬದ್ಧ ಮಾತುಗಳಿಗೆ ಉತ್ತರಿಸಲೇಬೇಕಾಗಿದೆ. ಮೊದಲ ಅಂಶವೆಂದರೆ ನಾನು ಯಾವ ವಿಕಿಗೂ ನಿರ್ವಾಹಕನಲ್ಲ. ಅದೇ ಗೊತ್ತಿಲ್ಲದೇ ಮಾತಾಡುತ್ತಿದ್ದೀರಿ. ಅಂದಮಾತ್ರಕ್ಕೆ ನಿರ್ವಾಹಕರು ಮಾತ್ರ ನಿಮ್ಮ ಅಸಂಬದ್ಧ ವಿಕಿ ಎಡಿಟಿಂಗುಗಳನ್ನು ಪ್ರಶ್ನಿಸಬಹುದು ಅಂತಲೇನೂ ಇಲ್ಲ. ವಿಕಿಪೀಡಿಯಾ ಒಂದು ಸಮುದಾಯ ಯೋಜನೆ, ನಾನು ಹಾಕಿದ ಮಾಹಿತಿ ನನ್ನ ಹಕ್ಕಲ್ಲ. ನೀವು ಹಾಕುವ ಮಾಹಿತಿ ನಿಮ್ಮ ಹಕ್ಕಲ್ಲ. ಅದನ್ನು ಯಾರು ಬೇಕಾದರೂ ಪ್ರಶ್ನಿಸಬಹುದು, ತಿದ್ದಬಹುದು, ಅಳಿಸಬಹುದು, ಸೇರಿಸಬಹುದು ಇತ್ಯಾದಿ. ನಾನು ಹಾಕಿದ ಯಾವುದೇ ಪುಟವಾದರೂ ಸರಿ ಅದಕ್ಕೆ ಏನೇ ವಿಕಿ ಟ್ಯಾಗ್ ಹಾಕಲು ನೀವೂ ಸ್ವತಂತ್ರರು, ನೀವಲ್ಲದೇ ಯಾರೇ ಆದರೂ ಸ್ವತಂತ್ರರು. (ನಿಮಗೆ ಟ್ಯಾಗ್ ಎಂದರೆ ಏನು ಎಂಬ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ). ಇದನ್ನು ನಿಮಗೆ ಹೇಳುತ್ತಿರುವುದು ಹತ್ತನೇ ಬಾರಿ ಇರಬಹುದು. ಒಬ್ಬ ಬುದ್ದಿಮತ್ತೆ ಸರಿ ಇರುವ ವ್ಯಕ್ತಿ ಆಗಿದ್ದರೆ ಇದನ್ನು ಈಗಾಗಲೇ ಅರ್ಥ ಮಾಡಿಕೊಂಡಿರುತ್ತಿದ್ದ. ಇದು ವಿಕಿಸೋರ್ಸಿನ ಚರ್ಚಾಪುಟ. ಇಲ್ಲಿವಿಕಿಪೀಡಿಯಾಗೆ ಸಂಬಂಧಿಸಿದ ವಿಷಯಗಳನ್ನು ಎಳೆದುತರುತ್ತಿರುವುದು ನಿಮ್ಮ ಅಸಂಬದ್ಧತೆಗೆ ಮತ್ತೊಂದು ನಿದರ್ಶನ. ನಿಮ್ಮ ಅಸಂಬದ್ಧ ಎಡಿಟ್ ಗಳನ್ನು ಪ್ರಶ್ನಿಸಿದಾಗಲೆಲ್ಲಾ ನೀವು ಯಾವುದ್ಯಾವುದೋ ವಿಷಯಗಳನ್ನು ಎಳೆದುತಂದು ಅನವಶ್ಯಕವಾಗಿ ಚರ್ಚೆಬೆಳೆಸುವುದು ನಡೆಯುತ್ತದೆ. ನಿಮಗೆ ವಿಕಿಯಂತಹ ಯೋಜನೆಗಳನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆ ಇಲ್ಲ ಎಂದು ತೋರಿಸಿದ್ದೀರಿ. ಸುಮ್ಮನೇ ಟೈಂಪಾಸಿಗೆ ಬಂದು ವಿಕಿಯಂತಹ ಸಮುದಾಯಯೋಜನೆಗಳನ್ನು ಹಾಳುಗೆಡವಬೇಡಿ ಎಂದು ಇಡೀ ಸಮುದಾಯದ ಪರವಾಗಿ ಕೋರುತ್ತೇನೆ. ನನಗೆ ಯಾವರೀತಿ ಎಡಿಟಿಂಗ್ ಮಾಡಲು ಬರುತ್ತದೆ, ನಾನು ಎಷ್ಟು ಪುಟ, ಎಂತಹ ಪುಟ ಸೃಷ್ಟಿ ಮಾಡಿದ್ದೇನೆ ಎಂಬುದೆಲ್ಲಾ ಇಲ್ಲಿ ಅಪ್ರಸ್ತುತ. ಈಗತಾನೇ ನೋಂದಾಯಿಸಿಕೊಂಡು ಒಬ್ಬ ಹೊಸಬ ಕೂಡ ನಿಮ್ಮ ಎಡಿಟಿಂಗುಗಳನ್ನು ತಿದ್ದಬಹುದು, ಟ್ಯಾಗ್ ಹಾಕಬಹುದು. ಅದೇ ರೀತಿ ನಾನು ಸೇರಿಸಿದ ಮಾಹಿತಿಗೂ ಹಾಕಬಹುದು. ನಾನು ತಿದ್ದಿಕೊಳ್ಳುತ್ತೇನೆ ಹೊರತು ಈ ರೀತಿ ವೈಯಕ್ತಿಕವಾಗಿ ಮಾತಾಡುತ್ತಾ ನನ್ನ ಮೊಲಕ್ಕೆ ಮೂರೇ ಕಾಲು ಎನ್ನುವುದಿಲ್ಲ. ಮೊದಲು ವಿಕಿಯಲ್ಲಿ ಸಹಿಹಾಕುವುದನ್ನ ಸರಿಯಾಗಿ ಕಲಿಯಿರಿ. ಅನಂತರ ಇತರರ ಯೋಗ್ಯತೆ ಬಗ್ಗೆ ಮಾತಾಡಿ. --Vikashegde (ಚರ್ಚೆ) ೧೮:೩೭, ೮ ಮಾರ್ಚ್ ೨೦೧೮ (UTC)

ಪ್ರತಿಕ್ರಿಯೆ

  • ಎಲ್ಲರಿಗೂ ಎಡಿಟ್ / ಟೀಕೆ ಮಾಡಲು ಅವಕಾಶವಿದೆಯೆಂದು ಮನಬಂದಂತೆ, ಟೀಕೆ ಮಾಡುವುದು ಸರಿಯಲ್ಲ. ನಿ೯ಮ್ಮ ಟೀಕೆಗೆ ಇಲ್ಲಿ ಅದು ಪ್ರಸ್ತುವಾದುದರಿಂದ ಹೇಳುತ್ತಿದ್ದೇನೆ, ಆದರೆ ನನಗೆ ಉಪದೇಶ ಮಾಡುವ ನೀವು ಪರಿಶೀಲನಾರ್ಹವಲ್ಲದ ಉಲ್ಲೇಖಗಳನ್ನು ಹಾಕಿದ್ದಲ್ಲದೆ, ಗೋತಳಿಗಳ ಬಗ್ಗೆ ನೀವು ಎತ್ತಿಕೊಂಡ ಲೇಖನದ ವಿಷಯ ಯಾವುದರಿಂದ ತೆಗೆದುಕೊಂಡಿದ್ದೀರೆಂದು ತಿಳಿಯದಂತೆ ಮರೆಮಾಚಿದ್ದೀರಿ. ಇದು ಮೋಸವಲ್ಲವೇ? ಒಬ್ಬ ವಿಕಿಪೀಡಿಯಾ ತಜ್ಞರಂತೆ ಮಾತನಾಡುವ ನೀವು ಸರಿಯಾದ ಒಂದು ಉಲ್ಲೇಖ ಹಾಕಿ ಒಂದು ಪುಟ ತಯಾರಿಸಲೂ ಅಸಮರ್ಥರಾದರೆ, ಅವಕಾಶವಿದೆ ಎಂದು ಬೇರೆಯವರಿಗೆ ಮನಬಂದಂತೆ ಟೀಕೆ ಮಾಢವುದೇ. ಇಲ್ಲಿ ಚರ್ಚೆ ನೆಡೆಯುತ್ತಿರುವುದರಿಂದ ಇಲ್ಲಿಯೇ ಹೇಳುತ್ತಿದ್ದೇನೆ. ಆ ಪುಟಗಳಲ್ಲಿ ನೀವು ವಿಕಿಯ ನಿಯಮ ಪಾಲಿಸುತ್ತಿದ್ದೀರಾ? ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೆ, ನೀವು ವಿಕಿನಿಯಮಕ್ಕೆ ಅಪಚಾರ ಮಾಡುತ್ತಿದ್ದರೂ, ಆಧಾರವಿಲ್ಲದೆ ನನ್ನ ಮೇಲೆ ಟೀಕೆ ಟಿಪ್ಪಣಿ ಮಾಡುತ್ತಿದ್ದೀರಿ. ನನ್ನ ಪ್ರಶ್ನೆಗ ಉತ್ತರಿಸುವುದರ ಬದಲು ಇಲ್ಲಿಯ ಚರ್ಚೆಗೆ ಬೇರೆಕಡೆ ಉತ್ತರಿಸಬೇಕೆಂದು ಹೇಳುತ್ತಿದ್ದೀರಿ. ಒಂದು ಉತ್ತಮ ಲೇಖನ ತಯಾರಿಸಲು ಸಮರ್ಥರಲ್ಲದ ನಿಮಗೆ ಬೇರೆಯವರಿಗೆ ಉಪದೇಶ ಮಾಡಲು ನಾಚಿಕೆಯಾಗುವುದಿಲ್ಲವೇ? ನಿಮಗೆ ನಾನು ಹಾಗೆ ಲೇಖನ ತಯಾರಿಸಲು ಎರಡು ಬಾರಿ ಸವಾಲು ಹಾಕಿದ್ದೇನೆ. ಆದರೆ ನಿಮಗೆ ಒಂದು ಲೇಖನ ತಯಾರಿಸಲೂ ಆಗದ ವಿಕಿತಜ್ಞರು ನೀವು. ಸರಿಯಾದ ಉಲ್ಲೇಖ ಹಾಕಲು ಹಿಂಜರಿಯುವ ನೀವು ವಿಕಿ ಮಟ್ಟ ಕಾಯುತ್ತೀರಾ? ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಬದಲು ನನ್ನನ್ನು ದೂರುವುದೇ ಕೆಲಸವಾಗಿದೆ. ನಾನು ವಿಕಿಗೆ ಕೆಲಸ ಮಾಡುವುದು ಹೊಟ್ಟೆ ಉರಿಗೆ ಕಾರಣವಾದೆ ಏನು ಮಾಡಲು ಸಾದ್ಯ; ನೀವು ವಿಕಿಗೆ ಲೇಖನಕ್ಕೆ ಸರಿಯಾದ ಮಾಹಿತಿ-ಉಲ್ಲೇಖ ಹಾಕದಿದ್ದರೂ ನಿಮ್ಮದು ಸರಿ. ನಾನು ಸಹಿ ಮಾಡಿದ್ದು ತಪ್ಪು (ನಾನೇ ಎರಡನೇ ಸಹಿ ಹೆಸರು ಅಳಿಸಿದ್ದೇನೆ- ನಿಮಗೆ ತೊಂದರೆ ಆಯಿತೇ?)- ನಾನು ಕನ್ನಡಿಗರಿಗೆ ಕೆಲವು ವಿಷಯ ತಿಳಿಯಲು ಅವಕಾಶವಾಗಲಿ ಎಂದು ಕೆಲವರ ಅಪೇಕ್ಷೆಯಂತೆ ಇಲ್ಲಿ ಬರೆಯುತ್ತಿದ್ದೇನೆ. ಅದನ್ನೇ ನೀವು ಮಾಡುವ ಹಾಗಿದ್ದರೆ ಅದನ್ನು ನಿಮಗೇ ವಹಿಸುತ್ತೇನೆ. ಸಾಧ್ಯವಾದರೆ ಆ ಜವಾಬ್ದಾರಿ ತೆಗೆದುಕೊಳ್ಳಿ. ಕೆಲವರು ಅರ್ಧಮಾಡಿ ಬಿಟ್ಟ ಕೆಲಸವನ್ನು ಮುಂದುವರಿಸುತ್ತಿದ್ದೇನೆ. ನೀವು ಕೆಲಸ ಮಾಡುವುದೂ ಇಲ್ಲ, ಬೇರೆಯವರು ಮಾಡಿದರೆ ಸಹಿಸುವುದೂ ಇಲ್ಲ! ಮೇಲೆ ನೀವು ಹೇಳಿದ ವಿಷಯಕ್ಕೆ ವಿರುದ್ಧವಾಗಿ ವಿಕಿಯನ್ನು ಸ್ವಂತ ಆಸ್ತಿಯಂತೆ, ಮನಬಂದಮತೆ ಟೀಕಿಸುವಿರಿ. ವಂದನೆಗಳು:Bschandrasgr (ಚರ್ಚೆ) ೦೫:೫೧, ೯ ಮಾರ್ಚ್ ೨೦೧೮ (UTC)