|
|
ಎಂದು ಕಾಂಬೆನೊ ನಂದಗೋಪನ
ಕಂದ ಶ್ರೀ ಗೋವಿಂದನ
ಮಂದರಾಚಲಧರ ಯದುಕುಲ
ಚಂದ್ರ ಗುಣ ಗಣ ಸಾಂಧ್ರನ
ವಿಜಯ ಸೂತನ ವಿಶ್ವ ಪಾಲನ
ಭುಜಗ ವರ ಪಯ್ಯಂಕನ
ರಜನೀಚರರಳಿದ ಜನಕನ
ತ್ರಿಜಗಪತಿ ದ್ವಿಜ ಗಮನನ
ನಿರಂಜನ (೧೯೨೪-೧೯೯೨) ಎಂಬ ಕಾವ್ಯನಾಮದಿಂದ ಹೆಸರಾದ ಕುಳಕುಂದ ಶಿವರಾಯ, ಸ್ವಾತಂತ್ರ್ಯ ಹೋರಾಟಗಾರ, ಖ್ಯಾತ ಬರಹಗಾರ ಮತ್ತು ಕಥೆಗಾರ್ತಿ ಡಾ. ಅನುಪಮಾ ನಿರಂಜನರ ಪತಿ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ಈ ತಿಂಗಳ ಪುರಾವೆ ಮಾಡಿದ ಲೇಖನ ಖಿನ್ನತೆ ಬನ್ನಿ ನಿವಾರಿಸೋಣ
(೨೦೧೭) ಕಳೆದ ತಿಂಗಳು ಮುಗಿಸಿದ್ದು: ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ |
ವಿಕಿಮೀಡಿಯ ಕಾಮನ್ಸ್ | ವಿಕಿ ಬುಕ್ಸ್ | ವಿಕಿಡಾಟ | ವಿಕಿ ನ್ಯೂಸ್ | ವಿಕಿಪೀಡಿಯ | ವಿಕಿ ಕೋಟ್ | ವಿಕಿ ಸ್ಪೀಷೀಸ್ | ವಿಕಿವರ್ಸಿಟಿ | ವಿಕಿವಯಾಜ್ | ವಿಕ್ಷನರಿ | ಮೆಟಾ-ವಿಕಿ |
---|