ಸಹಾಯ:ಪುಟದ ಸ್ಥಿತಿಗತಿ

(ಸಹಾಯ:Page status ಇಂದ ಪುನರ್ನಿರ್ದೇಶಿತ)
ಪುಟದ ಸ್ಥಿತಿಗತಿ
ವಿಕಿಸೋರ್ಸ್‌ನಲ್ಲಿ ಬಳಸಿರುವ ವಿವಿಧ ಪುಟದ ಸ್ಥಿತಿಗತಿಗಳ ಬಗ್ಗೆ ಒಂದು ವಿವರಣೆ

ಪ್ರಕಟಣೆಯ ಹಾದಿ ಸಂಪಾದಿಸಿ

ಪ್ರೂಫ್‌ರೀಡ್ ಪೇಜ್ ಎಕ್ಸ್‌ಟೆನ್ಷನ್‌ನ ಪ್ರಕಟಣೆಯ ಹಾದಿ ಐದು ಹಂತಗಳನ್ನು ಒಳಗೊಂಡಿದೆ:

ಪಠ್ಯವಿಲ್ಲದ ಪುಟ
ಖಾಲಿ ಪುಟ ಪರಿಶೀಲಿಸಲಾಗಿಲ್ಲದ ಪುಟ ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟ
ಸಮಸ್ಯಾಪೂರ್ಣ ಪುಟ

ವಿವರಗಳು ಸಂಪಾದಿಸಿ

ಮೊದಲ ಮೂರು ಸಾಮಾನ್ಯ ಹಾದಿಗಳಾಗಿರುತ್ತವೆ :

  • ಪರಿಶೀಲಿಸಲಾಗಿಲ್ಲದ ಪುಟ ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. (ಎಲ್ಲಾ ಪುಟಗಳನ್ನು ನೋಡು.)
  • ಪರಿಶೀಲಿಸಲಾಗಿರುವ ಪುಟ ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. (ಎಲ್ಲಾ ಪುಟಗಳನ್ನು ನೋಡು.)
  • ಪ್ರಕಟಿಸಲಾಗಿರುವ ಪುಟ ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. (ಎಲ್ಲಾ ಪುಟಗಳನ್ನು ನೋಡು.)
 
This color coding scheme is also visible in the page index view, where each page is listed with the appropriate background color.

ಇವುಗಳ ಜೊತೆಗೆ,

  • ಪಠ್ಯವಿಲ್ಲದ ಪುಟ ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. (ಎಲ್ಲಾ ಪುಟಗಳನ್ನು ನೋಡು.)
  • ಸಮಸ್ಯಾಪೂರ್ಣ ಪುಟ ಮತ್ತಷ್ಟು ಕೆಲಸ ಬಾಕಿ ಇರುವುದು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. (ಎಲ್ಲಾ ಪುಟಗಳನ್ನು ನೋಡು.)

ಸಂಪಾದನಾ ಕಿಟಕಿಯ ಕೆಳಗೆ ನೀವು ಪುಟ ಸಂಪಾದನೆಯ ಸ್ಥಿತಿಗತಿಗಳನ್ನು ತಿಳಿಸುವ ಗುಂಡಿಗಳನ್ನು ಕಾಣುವಿರಿ. ಈ ಹಿಂದಿನ ಸಂಪಾದಕರು ಪುಟವನ್ನು ಈಗಾಗಲೆ ಪರಿಶೀಲಿಸಿದ್ದರೆ, ಆ ಗುಂಡಿಗಳು ಈ ಕೆಳಕಂಡಂತೆ ಕಾಣುತ್ತವೆ:

 
Five buttons

ಯಾರೂ ಪುಟವನ್ನು ಪರಿಶೀಲನೆಗೆ ಒಳಪಡಿಸಿರದಿದ್ದಲ್ಲಿ, ಆ ಗುಂಡಿಗಳು ಈ ಕೆಳಕಂಡಂತೆ ಕಾಣುತ್ತವೆ:

 
Four buttons

ಈ ಎರಡೂ ಸಂದರ್ಭಗಳಲ್ಲಿ, ನೀವು ಹೊಂದುವ ಗುಂಡಿಯನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಪುಟದ ಸ್ಥಿತಿಗತಿಯನ್ನು ಬದಲಾಯಿಸಬಹುದು. ಹಸಿರು ಬಣ್ಣದ ಪ್ರಕಟಿಸಿ ಗುಂಡಿ ನಿಮಗೆ ಲಭ್ಯವಿಲ್ಲದಿದ್ದಲ್ಲಿ, ನೀವು ಪರಿಶೀಲಿಸಲಾಗಿದೆ ಎಂಬ ಹಳದಿ ಬಣ್ಣದ ಗುಂಡಿಯನ್ನು ಆಯ್ಕೆ ಮಾಡಿ ಮತ್ತು ಪುಟ ಉಳಿಸಿದಲ್ಲಿ, ಇತರೆ ಬಳಕೆದಾರರಿಗೆ ಅದು ಗೋಚರಿಸುತ್ತದೆ.

ಕಡತದಲ್ಲಿನ ಪ್ರತಿ ಪುಟದ ಸ್ಥಿತಿಗತಿಯನ್ನು ಪರಿವಿಡಿ ಪುಟದಲ್ಲಿ ತೋರಿಸಲಾಗುವುದು, ನಿಮ್ಮ ಬಲಭಾಗದಲ್ಲಿರುವ ಪರದೆಚಿತ್ರದಲ್ಲಿ ತೋರಿಸಿರುವಂತೆ.

ಇದನ್ನೂ ನೋಡಿ ಸಂಪಾದಿಸಿ