ಅನುರಾಗದ ಅಲೆಗಳು - ಜೀವಕೋಗಿಲೆ ಇಂಚರ

ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಗಾಯನ : ಡಾ.ರಾಜ್ ಕುಮಾರ್

ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ

ಆ.....ಆ......ಓ....ಓ....
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
ಇಂಚರ ಕೇಳಲು ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ......{ಪಲ್ಲವಿ}

ಬರುವಾಗ ತಾಯ ಗರ್ಭ ದಣಿಸೋ ಜೀವಾ
ಬೆಳೆವಾಗ ಮಾತುಬರದೇ ಅಳುವಾ ಜೀವಾ...ಅರಳೋ ಜೀವಾ

ಕಲಿತಾಗ ನಾನೇ ಎಂದು ಬೀಗೋ ಜೀವಾ
ಬಲಿತಾಗ ಪ್ರೀತಿಗಾಗಿ ಅಲೆಯೋ ಜೀವಾ..ಅಲೆಸೋ ಜೀವಾ
ಗೂಡಲ್ಲಿ ಸೇರೋ ಸುದ್ದಿ ಮೊದಲೇ ಕೊಡುವಾ
ಗೂಡಿಂದ ಹಾರೋ ಸುದ್ದಿ ಗುಟ್ಟಾಗಿಡುವಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ.......{ಪಲ್ಲವಿ}

ಓ.....ಓ.....
ವೇದಾಂತ ಸಾರದಲ್ಲಿ ಅಮರಾತ್ಮವಿದೂ
ವಿಜ್ಞಾನ ಲೋಕದಲ್ಲಿ ಗೂಢಾತ್ಮವಿದೂ...ವಿವಾದಾತ್ಮವಿದೂ
ಕೆನ್ನೀರ ರಾಡಿಯಲ್ಲಿ ರಾಜೀವವಿದೂ
ಪರಿಶುದ್ದ ಪ್ರೇಮದಲ್ಲಿ ತಲ್ಲೀನವಿದೂ....ಪರಮಾತ್ಮವಿದೂ
ಅರಿತೋರು ಯಾರು ಇಲ್ಲಾ ಇದರಾ ಜಾಲಾ

ಸಾಯೋನು ತಾನೆ ಬಲ್ಲಾ ಇದರಾ ಮೂಲಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೆ ಇಂಚರ ಅಗೋಚರ.........{ಪಲ್ಲವಿ}


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ