ಪಂಪಭಾರತ -ಕವಿ ಮತ್ತು ಹಿನ್ನೆಲೆ

ಸಂಪಾದಿಸಿ
  • ಕನ್ನಡನಾಡಿನ ಚರಿತ್ರೆಯಲ್ಲಿ ಬಾದಾಮಿಯ ಚಾಳುಕ್ಯರು, ಕಲ್ಯಾಣದ ಚಾಳುಕ್ಯರು, ವೆಂಗಿಯ ಚಾಳುಕ್ಯರು ಮತ್ತು ಗುಜರಾತಿನ ಚಾಳುಕ್ಯರು ಎಂಬುದಾಗಿ ನಾಲ್ಕು ಮುಖ್ಯ ಚಾಳುಕ್ಯ ಮನೆತನಗಳು ಪ್ರಸಿದ್ಧವಾಗಿವೆ. ಇದಲ್ಲದೆ ಇನ್ನೂ ಕೆಲವು ಚಾಳುಕ್ಯ ಶಾಖೆಗಳಿವೆ. ಅವುಗಳಲ್ಲಿ ೨ನೇ ಅರಿಕೇಸರಿ ಪಂಪಕವಿಯ ನಾಯಕನದು, ಅದು ವೇಮುಲವಾಡದ ಚಾಳುಕ್ಯ ಶಾಖೆ. ಈ ಶಾಖೆಯ ಅರಸರು 8ನೆಯ ಶತಮಾನದಿಂದ ಹಿಡಿದು 10ನೆಯ ಶತಮಾನದವರೆಗೆ ಇಂದಿನ ಆಂಧ್ರ ಪ್ರದೇಶದ ನಿಜಾಮಾಬಾದ್ `ಕರೀಂನಗರ್’ ನಲ್ಗೊಂಡ ಮತ್ತು ಕರ್ನಾಟಕ ರಾಯಚೂರು ಜಿಲ್ಲೆಗಳನ್ನು ಬಹುಮಟ್ಟಿಗೆ ಒಳಗೂಂಡ ಪ್ರದೇಶದಲ್ಲಿ ರಾಷ್ಟಕೂಟರ ಸಾಮಂತರಾಗಿ ರಾಜ್ಯವಾಳುತ್ತಿದ್ದರು.
  • ಇಂದಿನ ಅಂಧ್ರಪ್ರದೇಶದ ಕರೀಂನಗರ್ ಜಿಲೆಯ ವೇಮುಲವಾಡವೆ. (ಲೇಮುಲವಾಡ) ಅಂದು ಲೆಂಬುಳಪಾಟಕವೆಂಬ (ವೆಂಬುಳವಾಟಕಪತ್ತನ/ವೆಂಬುಳವಾಟ) ಹೆಸರಿಂದ ಅವರ ರಾಜಧಾನಿಯಾಗಿತ್ತು. ಇವರನ್ನು ವೇಮುಲವಾಡದ ಚಾಳುಕ್ಯರು ಎಂಬುದಾಗಿ ಕರೆಯುವುದು ರೂಢಿಯಾಗಿದೆ. ಈ ಮನೆತನದ ಮೂಲಪುರುಷ 1ನೆಯ ಯುದ್ಧಮಲ್ಲ ವಿನಯಾದಿತ್ಯ. ಪಂಪ ಮಹಾಕವಿ ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದುದು ಪ್ರಸಿದ್ಧ ವಿಷಯ. ಅರಿಕೇಸರಿ ಪಂಪನನ್ನು ಸ್ನೇಹಪೂರ್ವಕವಾಗಿ ಆತ್ಮೀಯತೆಯಿಂದ ನೋಡಿಕೊಳ್ಳುತಿದ್ದನೆಂಬುದು, ಪಂಪ ಯುದ್ಧವೀರನಾಗಿ ಅರಿಕೇಸರಿ ಕೈಕೊಂಡ ಯುದ್ಧಪ್ರಸಂಗಗಳಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದನೆಂಬುದು ಇಲ್ಲಿ ನೆನೆಯತಕ್ಕದ್ದಾಗಿದೆ. ಆದಿಪುರಾಣವನ್ನು ಶ್ರೇಷ್ಠ ರೀತಿಯಿಂದ ರಚಿಸಿ ಪ್ರಖ್ಯಾತನಾಗಿದ್ದ ಪಂಪನನ್ನು ಅರಿಕೇಸರಿ ಪ್ರೀತಿಯಿಂದ ತನ್ನಲ್ಲಿಗೆ ಬರಮಾಡಿಕೊಂಡು ವಿಶೇಷವಾಗಿ ಸನ್ಮಾನಿಸಿ ತನ್ನ ವಿಖ್ಯಾತಿ ಲೋಕದಲ್ಲಿ ಸ್ಥಿರಗೊಳ್ಳುವ ಹಾಗೆ ಭಾರತವನ್ನು ಬರೆಯುವಂತೆ ಕೋರಿದ. *ಅರಿಕೇಸರಿ ಸಾಮಂತರಾಜನಾಗಿಯೂ ಅತಿ ಸಾಹಸಿಯೂ ಪ್ರಭಾವಶಾಲಿಯೂ ಆಗಿದ್ದ; ಗುಣವಂತನೂ ಸ್ನೇಹಪ್ರಿಯನೂ ಆಗಿದ್ದ. ತನ್ನ ಕಾಲದ ರಾಜಕೀಯ ಜೀವನದ ನೇತಾರನಾಗಿದ್ದ. ಆದ್ದರಿಂದ ಪಂಪಕವಿ ಅರಿಕೇಸರಿಯ ಆಶಯವನ್ನು ಈಡೇರಿಸಲು ಒಪ್ಪಿಕೊಂಡಿದ್ದಲ್ಲದೆ ಅತನನ್ನೇ
  • ತನ್ನ ಮಹಾಕಾವ್ಯದ ಕಥಾ ನಾಯಕನನ್ನಾಗಿಟ್ಟುಕೊಂಡ. ಅರಿಕೇಸರಿ ಅರ್ಜುನರನ್ನು ಅಭೇದವಾಗಿ ಗಣಿಸಿದ. ಅರ್ಜುನನ ಹೆಸರು ವ್ಯಕ್ತಿತ್ವ ಶೌರ್ಯ ಪ್ರತಾಪಗಳು ಕಥೆಯಲ್ಲಿ ಬರುವ ಕಡೆಗಳಲ್ಲಿ ಅರಿಕೇಸರಿಯ ಹೆಸರು ಬಿರುದುಗಳು ವ್ಯಕ್ತಿತ್ವ ಶೌರ್ಯ ಪ್ರತಾಪಗಳನ್ನು ಯೋಜಿಸಿದ.
  • ತತ್ಕಾಲೀನ ರಾಜಕೀಯವನ್ನು ಭಾರತ ಕಥೆಯೊಡನೆ ಸಾಧ್ಯ ವಿದ್ದಮಟ್ಟಿಗೆ ಹೊಂದಿಸಿ ಅಪೂರ್ವ ರೀತಿಯಲ್ಲಿ ವಿಕ್ರಮಾರ್ಜುನ ವಿಜಯವೆಂಬ ಸಮಸ್ತ ಭಾರತವನ್ನು ರಚಿಸಿದ. ಹೀಗೆ ರಚಿಸಿದ ಮೇಲೆ ಅರಿಕೇಸರಿ ಇನ್ನೂ ಅತಿಶಯವಾಗಿ ವಸ್ತ್ರವಿಭೂಷಣಾದಿಗಳಿಂದ ಪಂಪಕವಿಯನ್ನು ಸನ್ಮಾನಿಸಿ ಕೀರ್ತಿಸಿ ಸಬ್ಬಿಸಾಸಿರದಲ್ಲಿ ಧರ್ಮವುರವೆಂಬ ಅಗ್ರಹಾರವನ್ನು ಉಂಬಳಿಯಾಗಿ ಕೊಟ್ಟು, ಆತನಿಗೆ ಶಾಸನ ಹಾಕಿಸಿಕೊಟ್ಟ.

ವಿಕ್ರಮಾರ್ಜುನವಿಜಯ ಅಥವಾ ಪಂಪಭಾರತ

ಸಂಪಾದಿಸಿ

ವಿಭಾಗಗಳು:ಪಂಪಭಾರತವು ಪೀಠಿಕೆ, ಹದಿನಾಲ್ಕು ಗ್ರಂಥಭಾಗ, ಅಧ್ಯಾಯಗಳು ಅಥವಾ ಆಶ್ವಾಸಗಳು ಮತ್ತು ಅನುಬಂಧವನ್ನು ಹೊಂದಿದೆ.

  1. ಪಂಪ:ಕವಿ-ಕೃತಿ ಪರಿಚಯ
  2. ಪಂಪಭಾರತ ಪ್ರಥಮಾಶ್ವಾಸಂ
  3. ಪಂಪಭಾರತ ದ್ವಿತೀಯಾಶ್ವಾಸಂ
  4. ಪಂಪಭಾರತ ತೃತೀಯಾಶ್ವಾಸಂ
  5. ಪಂಪಭಾರತ ಚತುರ್ಥಾಶ್ವಾಸಂ
  6. ಪಂಪಭಾರತ ಪಂಚಮಾಶ್ವಾಸಂ
  7. ಪಂಪಭಾರತ ಷಷ್ಠಮಾಶ್ವಾಸಂ
  8. ಪಂಪಭಾರತ ಸಪ್ತಮಾಶ್ವಾಸಂ
  9. ಪಂಪಭಾರತ ಅಷ್ಠಮಾಶ್ವಾಸಂ
  10. ಪಂಪಭಾರತ ನವಮಾಶ್ವಾಸಂ
  11. ಪಂಪಭಾರತ ದಶಮಾಶ್ವಾಸಂ
  12. ಪಂಪಭಾರತ ಏಕಾದಶಾಶ್ವಾಸಂ
  13. ಪಂಪಭಾರತ ದ್ವಾದಶಾಶ್ವಾಸಂ
  14. ಪಂಪಭಾರತ ತ್ರಯೋದಶಾಶ್ವಾಸಂ
  15. ಪಂಪಭಾರತ ಚತುರ್ದಶಾಶ್ವಾಸಂ
  16. ಅನುಬಂಧ
  17. ಪಂಪ - ಒಂದು ಚಿಂತನೆ
  18. ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ
  19. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ

[] []

ಪಂಪಭಾರತ

ಸಂಪಾದಿಸಿ
ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಪಂಪ ಭಾರತ - ಗದ್ಯಾನುವಾದ (ಲೇಖಕರು- ಎನ್ .ಅನಂತರಂಗಾಚಾರ್) ಕೃಪೆ:- ಕಣಜ
  2. ಪಂಪ ಭಾರತ ಡಿ.ಎಲ್.ನರಸಿಂಹಾಚಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರ
"https://kn.wikisource.org/w/index.php?title=ಪಂಪಭಾರತ&oldid=262468" ಇಂದ ಪಡೆಯಲ್ಪಟ್ಟಿದೆ