ಚಿತ್ರ: ಅಭಿ

ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಗುರುಕಿರಣ್
ಗಾಯನ: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್


ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ!

ಹೇ! ಹುಡುಗಾ ನೀ ನನ್ನ ಪ್ರಾಣ ಕಣೊ!

ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ!

ನಂಗು ನಿಂಗು ಇನ್ನು ಹೊಸದು ಇಂಥ ಅನುಭವ
ಕಂಡು ಕಂಡು ಎದೆಯಾ ಒಳಗೆ ಏನೋ ಕಲರವಾ

ಸದ.. ಸದ.. ವಯ್ಯಾರದ
ಪದ.. ಪದ.. ಬೆಸೆದಿದೆ

ಹೊಸ.. ಹೊಸ ಶೃಂಗಾರದ ರಸ ರಾಗ ಲಹರಿಯ ಹರಿಸುತಿದೆ!

ಓ! ಒಲವೇ.. ಒಲವೆಂಬ ಬಲವೆಂದಿದೆ!

ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ ಏ ಏ ಏ!

ಪ್ರೀತೀ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ!
ಪ್ರೀತೀ ಹರಿಯೊ ನೀರಿನ ಹಾಗೆ ನಿಂತ ನೀರಲ್ಲ

ಅದು.. ಒಂದು ಚುಕ್ಕಿಯ ಹಾಗೇ
ಸುಡೊ.. ಸುಡೊ.. ಬೆಂಕಿ ಅಲ್ಲ

ಅದು ಒಂದು ಭುವಿಯ ಹಾಗೇ...
ನಿರಂತರಾ ಈ ಪ್ರೇಮ ಸ್ವರ!

ಈ ಪ್ರೀತೀ... ಆಕಾಶಕು ಎತ್ತರ!

ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ

ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ

ಹೇ! ಹುಡುಗೀ ನೀ ನನ್ನ ಪ್ರಾಣ ಕಣೆ!

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ