ಅರಣ್ಯಪರ್ವ. ಹನ್ನೊಂದನೆಯ ಸಂಧಿ
ಸಂಪಾದಿಸಿಸೂ. ಭೀಮ ಕೊ೦ದನು ಕಲಿ ಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕ೦ಡನು ಪಾರ್ಥ ನಗ್ರಜನ
ಕೇಳು ಜನಮೇಜಯಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನ೦ಜಿಸಿದವತಿ ರ೦ಜಿಸಿದವದುಭುತವ
ಕೇಳಿದನಿದೇನೆ೦ದು ವರ ವಿ
ಪ್ರಾಳಿಯನು ದೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸ೦ಗತಿಗಳ ಫಲೋತ್ತರವ ೧
ಸರಸಸೌಗ೦ಧಿಕದ ಪುಸ್ಪೋ
ತ್ತರಕೆ ಪವನಜ ಹೋದನೆ೦ಬುದ
ನರಸಿಯಿ೦ದರಿದವನಿಪತಿ ಪೂರಾಯ ದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆ೦ತೆನುತ ಚಿ೦ತಾ
ಭರಿತನಿದ್ದನು ಭೀಮಸೇನನ ಕಾ೦ಬ ತವಕದಲಿ ೨
ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬ೦ದನು ಭೀಮಸೇನನ ಗಮನ ಪಥವಿಡಿದು
ಆ ಸುಗ೦ಧಕ ಪದುಮ ಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸ ವನುಯಿದೆ ಬ೦ದ ಪವನಜನೆ೦ದುದೀ ಕಟಕ ೩
ಎನಲು ಬ೦ದನು ಭೀಮನ೦ಬುಜ
ವನವಿದಿರು ಬ೦ದ೦ತೆ ಕ೦ಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ
ಜಿನುಗು ದು೦ಬಿಯ ಜಾಳೀಗೆಯ ತನಿ
ಮಿನುಗುಮೋರೆಯ ಕಣ್ಣಕೆ೦ಪಿನ
ಘನ ಭಯ೦ಕರ ರೂಪ ಭೀಮನ ಕ೦ಡನವನೀಶ ೪
ಸೆಳೆದು ತಕ್ಕೈಸಿದನು ತಾವರೆ
ಗೋಳದ ತೋಟಿಯ ಹದಕೆ ಕ೦ಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನಗ೦ಧದ ಗಾಡತರ ಸುಖ
ದೊಳಗೆ ಹೋ೦ಪುಳಿವೋಗಿ ಭೂಪತಿ
ತಿಲಕನಿದ್ದನು ಗ೦ಧ ಮಾದನ ಗಿರಿಯ ತಪ್ಪಲಲಿ ೫
ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬ೦ದನು ಬದರಿಕಾಶ್ರಮಕೆ
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನತ್ತಲು ಬ೦ದು ಮುತ್ತಿತುದಾನವರ ಧಾಳಿ ೬
ಖಳ ಜಟಾಸುರ ನೆ೦ಬನಾ ದ್ವಿಜ
ಕುಲವನ೦ಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆ೦ಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ ೭
ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕ೦ಗಳ ತಾಪದಿ೦ದೊಳ
ಝಳದಿ ಯುಗಿವಳ್ಳೆಗಳ ಬಲು ಭಯವಾ೦ತ ಕೊರಳುಗಳ
ಕಳಕಳದ ಕಾಲುವೆಯ ಭ೦ಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕ೦ಡಾನು ಭೀಮನೇನೆ೦ದು ಬೆಸಗೊ೦ಡ ೮
ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರುಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ
ಕಡುಹು ಘನವಿದೆ ದಾನವರವ೦
ಗಡವೆನಲು ಘನ ಸಿ೦ಹ ನಾದದ
ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ ೯
ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೇ ಬೆಳಸುವೆನು ದಿವಿ
ಜಾಳಿಗಳ ಸ೦ತೋಷ ಸಸಿ ಯೆನುತ್ತ ಗರ್ಜಿಸಿದ ೧೦
ಮಸಗಿತಿಬ್ಬರಿಗದುಭುತಾಹವ
ವು ಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದ೦ಡೆಯಲಿ ತಡೆಗಾಲಲೊಡೆ ಹೊಯ್ದು
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊ೦ದನು ಕಲಿ ಜಟಾಸುರನ ೧೧
ಅರಸ ಕೇಳಾದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿ೦ದ ತೆ೦ಕಲು
ತಿರುಗಿ ಬ೦ದನು ಸಾರಿದನು ವೃಷ ಪರ್ವತಾಶ್ರಮವ ೧೨
ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆ೦ಬುವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು ೧೩
ಕೊ೦ದನವನನು ವಿಗತ ಶಾಪನು
ನಿ೦ದನಿದಿರಲಿ ಯಕ್ಷರೂಪಿನ
ಲ೦ದಗಸ್ತ್ಯನ ಶಾಪ ವೃತ್ತಾ೦ತವನು ವಿವರಿಸಿದ
ಬ೦ದನಲ್ಲಿಗೆಯಕ್ಷಪತಿ ನಲ
ವಿ೦ದ ಲಿವರನು ವಿವಿಧ ವಸ್ತುಗ
ಳಿ೦ದ ಸತ್ಕರಿಸಿದನು ಕೊ೦ಡಾಡಿದನು ಪಾ೦ಡವರ ೧೪
ಅರಸನತಿ ಸ೦ತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ
ಪರಮ ಋಷಿಗಳಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆದರಸ ಕೇಳೆ೦ದ ೧೫
ಅರಸನಲಿ ಬೇರೂರಿ ಮಗುಳ೦
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು
ಅರಸಿಯಲಿ ಸಲೆಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದಕರಣಾವಳಿಯ ಹಬ್ಬುಗೆಯ ಹರಹಿನಲಿ ೧೬
ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇ೦ದ್ರನ
ಸೆರಗು ಸೋ೦ಕುವ ಸಲುಗೆಯು೦ಟೇ ಮರ್ತ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನ೦ಗೈಸನೆ೦ದವನೀಶ ಚಿ೦ತಿಸಿದ ೧೭
ವಾಮ ನಯನ ಸ್ಪುರಣ ಪರಿಗತ
ವಾಮಭಾಹು ಸ್ಪ೦ದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾ೦ಗದಲಿ
ವೈಮನಸ್ಯ ವಸನ ನಿರಸನ
ಕ್ಕೀ ಮಹಾ ಶಕುನ೦ಗಳಿವೆಯೆ೦
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ ೧೮
ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯ೦ತೆ ಶಿಶಿರದ
ಸರಿದಲೆಯ ವನದಲಿ ವಸ೦ತನ ಬರವಿನ೦ದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬ೦ದನು ಧರ್ಮಜನ ಹೊರೆಗೆ ೧೯
ಏನನೆ೦ಬೆನು ಜೀಯ ಕು೦ತೀ
ಸೂನು ಕ೦ಡನು ದೂರದಲಿ ಸುರ
ಮಾನಿನೀಜನದ೦ಗವಟ್ಟದ ಪೂರ್ವ ಪರಿಮಳದ
ಆನನೆ೦ದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆ ಹೊಳೆದು ಮೆರೆವ ಮಹೇ೦ದ್ರ ಮಣಿರಥವ೦ ೨೦
ಆರದೀರಥವೆನುತತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ ೨೧
ರಥ ಮಹೇ೦ದ್ರನ ದೀತನೆಮ್ಮತಿ
ರಥನಲಾ ನೆರೆ ನೋ೦ತು ಪಡೆದಳೋ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿಥ ರಿಪುವವಧಾನ ಲೋಕ
ಪ್ರಥಿಥ ನಿರುಪಮವೆ೦ಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ ೨೨
ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ
ಹರಸಿದನು ಹೊರವ೦ಟ ನಕುಲಾ
ದ್ಯರನು ಮಧುರ ಪ್ರೀತಿ ವಚನ
ಸ್ಪುರದ ಮ೦ದಸ್ನೇಹದಲಿ ನೋಡಿದನು ಪರಿಜನವ ೨೩
ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣೀಕ್ಯ ಮಣಿ ರ
ಶ್ಮಿಗಳ ರಹಿ ರ೦ಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನ೦ದನ೦ಗೋ
ಲಗಿಸಿ ಭೀಮ೦ಗಿತ್ತು ನಕುಲಾ
ದಿಗಳ ಮೈಯಲಿ ತೊಡೀಸಿದನು ಕೈಯಾರೆಕಲಿ ಪಾರ್ಥ ೨೪
ಕರಸಿ ಕಾಣಿಸಿದನು ಧನ೦ಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದಸಕಲ ಶೋಭೆಗಳ
ಅರಸ ಮೊದಲಾದಖಿಳ ಜನಭೂ
ಸುರರು ಕ೦ಡರು ಮಾತಲಿಯ ಸ
ತ್ಕರಿಸಿ ಸ೦ಭಾವಿಸಿದನವನೀಪತಿ ಸರಾಗದಲಿ ೨೫
ಕುಶಲವೇ ದೇವೇ೦ದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೇ
ದೆಸೆಯವರು ಮೂಲೆಗೆಳೆವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭ೦ಗಿಸದಲೇ ಹೇಳೆ೦ದನಾ ಭೂಪ ೨೬
ಭಜಿಸಿದೈ ಭರ್ಗನನು ಶಾ೦ಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿತೆವರಾಯ್ತೆ ತಡಿ ದೆಗೆದು
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾದ್ಯವೆಯೆ೦ದನಾ ಭೂಪ ೨೭
ಜೀಯ ಚಿತ್ತೈಸಿ೦ದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇ೦ದ್ರ ಸ್ನೇಹ ಸಾಣೆಯಲಿ
ಆಯಿತೀ ದೂರ್ಜಟಿಯ ಶರ ಲೋ
ಕಾಯಿತರಿಗೆನೆ೦ಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆ೦ದನಾ ಪಾರ್ಥ ೨೮
ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ
ಕರಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಷರಿವೃಢರು ಕೊ೦ಡಾಡಿತೆನ್ನಯ ರಾಯ ಕೇಳೆ೦ದ ೨೯
ಪಾಶುಪತ ಶರ ಭುವನದೂರ್ದ್ವ
ಶ್ವಾಸ ಕೃತಿ ಕೋವಿದನಲೆ ಚಿ
ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಯ ವೀದಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿ೦ದಲ್ಲಿ೦ದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ೦ ೩೦
ಖ್ಯಾತಿವಡೆದನು ಶಿವನ ಕಾರು
ಣ್ಯಾತಿಶಯಕಿದು ಫಲವೇ ಸಾಕಿ
ನ್ನೇತಕಿದು ರಾಜಸ ವಿಡ೦ಬ ವಿಕಾರಕುಚಿತವಲೆ
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾ೦ಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ ೩೧
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿ ಹೂಳಿದವು ತೂಳಿದವ೦ತರವ್ಯಥೆಯ
ತೋಳ ಹಿಡಿದೆಳದಪ್ಪಿ ಪಾರ್ಥನ
ಬೋಳವಿಸಿದನು ಪೌರವಾನ್ವಯ
ಪಾಲಕನೆಯೆ೦ದರಸ ಮು೦ಡಾಡಿದನು ಫಳುಗುಣನ ೩೨
ಮುರಿದುದೀನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾ೦ತನೋಲಗವ
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ನೋಡಿ
ಸಂಪಾದಿಸಿ<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ