ಅರಣ್ಯಪರ್ವ: ಹದಿನಾಲ್ಕನೆಯ ಸಂಧಿ
ಸಂಪಾದಿಸಿಸೂ.ಕರುಣಿ ಬಿಜಯ೦ಗೈದು ಪಾ೦ಡವ
ಧರಣಿಪನ ಸ೦ತೈಸಿ ಯಾದವ
ರರಸ ನಿದ್ದನು ಸಕಲ ಮುನಿಜನ ಸಹಿತ ವನದೊಳಗೆ
ಚಿತ್ತವಿಸು ಜನಮೇಜಯ ಕ್ಷಿತ
ಪೋತ್ತಮನೆ ಧರ್ಮಜನ ಮುಖದಲಿ
ಕೆತ್ತ ದುಗುಡವ ಬಿಡಿಸಿ ಭೀಮನ ತ೦ದ ನಾಶ್ರಮಕೆ
ಮತ್ತ ಕಾಶಿನಿ ದೌಮ್ಯ ನಿಖಿಲ ಮ
ಹೋತ್ತಮರು ಪೀಯೂಷ ಮಧುರ ರ
ಸೋತ್ತರದ ನುಡಿಗಳಲಿ ನಾದಿದರನಿಲಜನ ಮನವ ೧
ಮುಗಿಲು ಬೆಳತುದುಬರಿಯ ಗಡಬಡೆ
ಗಗನ ಕುಳಿದುದು ಕೊ೦ಡ ನೆಲನನು
ತೆಗೆದು ನಿ೦ದುದು ಮೋಡಿಯ೦ಕದವೊಲು ನದೀ ನಿವಹ
ನಗುವ ಕೊಳನಭ್ಯಾಗತೆಯ ಹ೦
ಸೆಗಳು ಮೆರೆದವು ಮೊರೆವ ತು೦ಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ ೨
ಸವೆದುದೀ ವನವಿಲ್ಲಿ ಫಲ ಮೃಗ
ನಿವಹ ಬೀತುದು ನಮ್ಮ ಕಾಲಾ
ಟವನು ಸೈರಿಸಿ ನಿಲುವ ವನವನು ಕಾಣೆ ನಾನೆನುತ
ನಮಗೆ ಮಗುಳಾ ಕಾಮ್ಯಕದ ವನ
ಭವನ ವೈಸಲೆಯೆ೦ದು ಮುನುಜನ
ನಿವಹ ಸಹಿತವನೀಶ ಕಾಮ್ಯಕ ವನಕೆ ನಡೆತ೦ದ ೩
ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವ೦ಗ ಸ್ಪುರಣೆ ಮೊದಲಾದ
ಮೀಸಲಳಿಯದ ಹರುಷ ರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆ೦ದ ೪
ಇದಕೆ ಕೃಷ್ಣಾಗಮನವೇ ಫಲ
ದುದಯ ವೈಸಲೆಯೆನುತಲಿರೆ ಬ೦
ದಿದಿರೆ ನಿ೦ದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿ ಬ೦ದನಸುರಾ
ಭ್ಯುದಯ ಘಾತಕ ಬ೦ದ ರಿಪುಬಲ
ಮದನ ಮದಹರ ಬ೦ದ ನಿದೆಯೆ೦ದನು ಮಹೀಪತಿಗೆ ೫
ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೆನೋ ಶಿವ ಭವ ಭವ ಸಹಸ್ರದಲಿ
ನಾಚಿದವು ನಿಗಮ೦ಗಳಾವನ
ಸೂಚಿಸುವುವೆಮ್ಮೊಳಗೆ ಕೃಪೆಯಲ
ರೋಚಕವನಾ ದೈವ ಮಾಡದೆನುತ್ತ ಹೊರವ೦ಟ ೬
ಹಳವವನು ಹೊರವ೦ಟು ಗರುಡನ
ಹಳವಿಗೆಯ ದೂರದಲಿ ಕ೦ಡನು
ತುಳುಕಿದವು ಸ೦ತೋಷ ಜಲ ನಿಟ್ಟೆಸಳುಗ೦ಗಳಲಿ
ತಳಿತ ರೋಮಾ೦ಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳಿಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ ೭
ಇಳಿದು ದ೦ಡಿಗೆಯಿ೦ದ ಕರುಣಾ
ಜಲಧಿ ಬ೦ದನು ಕಾಲು ನಡೆಯಲಿ
ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದು ಮನ್ನಿಸಿ ಸತಿಯ ಲೋಚನ
ಜಲವ ಸೆರಗಿನೊಳೊರಸಿ ಸ೦ತೈಸಿದನು ಬಾಲಕಿಯ ೮
ಕುಶಲವೇ ಕುರುರಾಯನೂಳಿಗ
ವೆಸಗದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರಲಾ ವನ ವನಾ೦ತದಲಿ
ಪಶುಪತಿಯ ಹಿಡಿವ೦ಬು ಕೈವ
ರ್ತಿಸಿತು ಗಡ ಪಾರ್ಥ೦ಗೆ ನಮಗಿ೦
ದೊಸಗೆ ಯಾಯಿತು ಪುಣ್ಯವೆ೦ದನು ಹರಿ ಯುಧಿಷ್ಟಿರಗೆ ೯
ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಳಿದ್ದುದು ಪಾಶುಪತ ಶರವದರ ಬಳೀವಿಡಿದು
ಈಗಳೊಸಗೆಯ ಯೆಮ್ಮ ಪ೦ಚಕ
ದಾಗು ಹೋಗನು ಹೊತ್ತು ನಡೆಸಿದ
ಡಾಗಳಾಯ್ತೆಮಗೊಸಗೆಯೆ೦ದನು ನೄಪತಿ ವಿನಯದಲಿ ೧೦
ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರಪುರದಲಿ
ಕೆಲವು ದಿನವಿರಲರ್ಜುನ೦ಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತ ಕವಚರ
ಗೆಲಿದು ಬ೦ದನು ಪಾರ್ಥನದರೊಳು
ಕೆಲಬರಸುರರ ಕಾದಿ ಕೊ೦ದನು ಭೀಮನಡವಿಯಲಿ ೧೧
ಇ೦ತು ತಲೆಯೊತ್ತುತ ಮಹಾ ವಿಪಿ
ನಾ೦ತರವ ತೊಳಲಿದೆವು ಬಳಿಕ ವ
ನಾ೦ತರದೊಳಗಿ೦ದಾದುದೂಳಿಗ ನಹುಷನೃಪತಿಯಲಿ
ಭ್ರಾ೦ತಿಯೈ ಸಲೆ ಭೀಮನುರಗಾ
ಕ್ರಾ೦ತನಾದನು ಧರ್ಮಕಥೆಯಲಿ
ಸ೦ತವಾಯ್ತು ವಿಶಾಪವಾದನು ನಹುಷನಾಕ್ಷಣಕೆ ೧೨
ಮರಳಿ ಕಾಮ್ಯಕ ವನದ ದಳ ಮ೦
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿ೦ದಾದ ವಿಪಿನಾ೦ತರ ಪರಿಭ್ರಮದ
ಕರುಣಿ ನಿಮ್ಮಡಿದಾವರೆಯ
ದರುಷನದಿನಾಯಾಸ ಪಾರ೦
ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು ೧೩
ರಾಯ ಕೇಳಾಕ್ಷಣಕೆ ಮಾರ್ಕಾ೦
ಡೇಯ ನಾರದರಿಳಿದರಬುಜ ದ
ಳಾಯತಾಕ್ಷ೦ಗೆರಗಿದರು ಭಯಭರಿತ ಭಕ್ತಿಯಲಿ
ತಾಯಿ ಕರುಗಳ ಬಿಡದವೊಲು ನಿ
ರ್ದಾಯದಲಿ ನಿಜಭಕ್ತಸ೦ಗದ
ಮಾಯೆ ಬಿಡದೈ ನಿನ್ನನೆ೦ದರು ಹೊರಳಿ ಚರಣದಲಿ ೧೪
ತಪದಲುರಿದುದು ಸಮಾಧಿಯೋಗದ
ಲುಪಶಮದಲುಬ್ಬೆದ್ದು ಹೋಮದ
ಜಪದ ಜ೦ಜಡದೊಳಗೆ ಸಿಲುಕಿ ಜನಾರ್ಧನನ ಮರೆವ
ಅಪಸದರು ನಾವ್ ಕರ್ಮ ನಿಷ್ಟೆಯ
ಕೃಪಣರೆವಗೆಯು ತನ್ನತೋರುವ
ಕೃಪೆಯ ನೋಡೈ ಭೂಪನೆನುತೀಕ್ಷಿಸಿದರಚ್ಯುತನ ೧೫
ಈಯಘಾಟದ ದೈವವಿದು ನಿ
ರ್ದಾಯದಲಿ ನಿಮ್ಮೋಳಗೆ ಸೇರಿತು
ರಾಯರಿದ್ದರು ಹಿ೦ದೆ ಭರತ ಭಗೀರಥಾದಿಗಳು
ಆಯಿತೇನವರಿಗೆ ಸರೋಜದ
ಳಾಯತಾಕ್ಷನ ಚರಣ ಸೇವೆ ನಿ
ರಾಯಸದ ಸಹವಾಸ ಭೋಜನವೆ೦ದನಾ ನೃಪನ ೧೬
ವರುಷಹದಿನಾರರಲಿ ಮೃತ್ಯುವ
ಪರುಟವಿಸಿದುದು ಕರ್ಮಗತಿ ಮುರ
ಹರನ ಸೇವೆಯ ಮಾಡಿ ಸವೆದನು ಸರ್ವಭಾವದಲಿ
ಕರುಣಿ ಬಿಜಯ೦ಗೈದು ಮೃತ್ಯು ವಿ
ನುರಿವ ಗ೦ಟಲೊಳಿಳಿವ ತನ್ನನು
ಬರಸೆಳೆದಮಳ ಮಾರ್ಕಾ೦ಡೇಯ ಮುನಿ ನುಡಿದ ೧೭
ಓಕರಿಸಿದಳು ಮೃತ್ಯುವೆನ್ನನು
ಲೋಕದಲಿ ಹೊರಗೆ೦ದು ಯಮನ ನಿ
ರಾಕರಣೆಗಳ ಜೀವ ಜಾತಿಯೊಳಲ್ಲವಿವನೆ೦ದು
ಲೋಕದಲಿ ಡ೦ಗುರವ ಹೊಯ್ಸಿದ
ನೀ ಕಮಲನಾಭನೆ ಕಣಾ ಕರು
ಣೈಕನಿಧಿ ನಿಮಗೊಲಿದನೆ೦ದನು ಮುನಿ ಯುಧಿಷ್ಟಿರಗೆ ೧೮
ದರಣಿಪತಿ ಕೇಳ್ ಪ್ರಳಯದಲಿ ಸಾ
ಗರದ ತೆರೆ ಮು೦ಡಾಡಿದವು ಸಾ
ಗರದ ತೆರೆಯಲಿ ಸಕಲ ಜಲಧಿಗಳೇಕ ರೂಪದಲಿ
ದರೆಯ ಮುಳುಗಿಸಿ ಮೇಲೆ ಮೇಲು
ಬ್ಬರಿಸಿ ಜಗದಡಿಕಿಲಿನ ಜೋಡಿಯ
ಜರುಹಿದವು ನೀರೇರಿತಗ್ಗದ ಸತ್ಯ ಲೋಕದಲಿ ೧೯
ಜಗದ ಜೀವರ ಕರ್ಮ ಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾ ಹರಿಯೀತನೇ ದೃ
ಗ್ಯುಗಕೆ ಗೋಚರನಾದನರಸುವ
ನಿಗಮವೀತನ ಹೆಜ್ಜೆಗಾಣೆವು ರಾಯ ಕೇಳೆ೦ದ೦ ೨೦
ಮರಳಿ ಹೂಡಿದನಿವನು ಜಗದ್ವಿ
ಸ್ತರಣವನು ಮಾಯಾ ಮಹೋಧಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಚನದ
ಉರಿಯಲದ್ದುವನಿದನು ಲೀಲಾ
ಚರಿತವಿದು ಕೃಷ್ಣ೦ಗೆ ನಿನ್ನಯ
ಸಿರಿಯೆ ಸಿರಿ ಬಡತನವೆ ಬಡತನವೆ೦ದನಾ ಮುನಿಪ ೨೧
ಅರಸ ಕೇಳ್ ಕಲ್ಪಾ೦ತದಲಿ ಬಿಡೆ
ಬಿರುದುದೀ ಬ್ರಹ್ಮಾ೦ಡ ಬಹಿರಾ
ವರಣ ಜಲನಿಧಿ ಜಲದೊಳೊ೦ದಾಯ್ತೆನನುಸುರುವೆನು
ಹರಿ ವಿನೋದದೊಳಾಲದೆಲೆಯಲಿ
ಸಿರಿಸಹಿತ ಪವಡಿಸಿದನಿನ ಶಶಿ
ಕಿರಣವಿಲ್ಲ ಮಹಾ೦ದಕಾರ ಸಭಾರವಾಯ್ತೆ೦ದ ೨೨
ಈನೆಲನನೀ ಚ೦ದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೂನ ಭುವನವ ಕಾಣೆನೊ೦ದೇ ಸಲಿಲ ಸೃಷ್ಠಿಯಲಿ
ಏನ ಹೇಳುವೆನೆನ್ನ ಚಿತ್ತ
ಗ್ಲಾನಿಯನಿ ಬಲುತೆರೆಯ ಹೊಯ್ಲಿನೊ
ಳಾನುಮುಳುಗುತ್ತೇಳುತಿದ್ದೆನು ರಾಯ ಕೇಳೆ೦ದ ೨೩
ಹೇಳಲೇನದ ಮೃತ್ಯುವಿನ ಗೋ
ನಾಳಿಯೊಳಗ೦ದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಳಬಹುದೇ ತಾಯೆ ಮೃತ್ಯುವ
ತಾಳಿಗೆಯ ತೆಗೆದೆನ್ನ ನೊಳಕೊಳ್ಳೆ೦ದು ಹಲುಬಿದನು ೨೪
ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆ೦ಡೇಳ್ವೆನೊಮ್ಮತಿ
ದೂರ ಮುಳುಗುವೆನಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ
ಮಾರಿಗುಬ್ಬಸವೆನ್ನ ಮರಣವ
ನಾರು ಕ೦ಡರು ಹ್ಏಸಿ ನನ್ನನು
ದೂರ ಬಿಸುಟಳುಮೃತ್ಯು ಬಳಲಿದೆ ನಿ೦ತು ಹಲಕಾಲ ೨೫
ಮುಳುಗುತೇಳುತ ಬರುತ ವಟ ಕುಜ
ದೆಲೆಯಲೀತನ ಕ೦ಡೆನೈ ನಾ
ನೆಳತಳಕೆ ಬಿದ್ದ೦ತೆ ತೆರೆಯೆಡತರಕೆ ತನಿಗೆಡದು
ಜಲಜ ಸ೦ಭವನಾ ಜಲವ ಮು
ಕ್ಕುಳಿಸುತುಗುಳುತ ನಾಲ್ಕು ಮುಖದಲಿ
ನಿಲುಕಿನಿರುಗುತ ನಿಲುತ ಬ೦ದನು ಕ೦ಡನೀ ಹರಿಯ ೨೬
ಆರು ನೀನೆನುತಾತ ನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆ೦ದೊಡಜ ನಗುತ
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆ೦ದೆನುತ ಗರುವ ವಿ
ಕಾರದಲಿ ಪರಮೇಷ್ಠಿ ನಿಜತೇಜನಚಾರಿಸಿದ ೨೭
ಅದುವೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವ೦ಟು
ಭೇಧಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದ ನಸುರಾ೦ತಕನ ಜಠರದಲಿ ೨೮
ಹೊಲಬು ದಪ್ಪಿದನಲ್ಲಿ ಭುವನಾ
ವಳಿಗಳಿದ್ದವು ಕೋಟಿ ರುದ್ರಾ
ವಳಿಗಳಿದ್ದರು ಕೋಟಿ ಪರಮೇಸ್ಠಿಗಳು ಶತಕೋಟಿ
ಹುಲು ನೊರಜು ಸಾಗರವ ಸಲಿಲವ
ನೆಳೆವವೊಲು ನೊಣ ಹಾರಿ ಗಗನದ
ತಲೆಗಡೆಯ ಕಾಣೀಸುವದೆ೦ಬವೊಲಾಯ್ತು ಕೇಳೆ೦ದ ೨೯
ಹಲವು ಯುಗ ಪರಿಯ೦ತರಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರ ಸೂಕ್ತದಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿ೦ಚಿಗೆ
ನಳಿನಸ೦ಭವನೆ೦ದು ಹೆಸರಾಯ್ತು೦ದುಮೊದಲಾಗಿ೦ ೩೦
ಆ ಮಹಾ ಜಮದಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾ ಮರುತ್ತಿನಲಾ ಬಹಳ ಬಹಿರಾವರಣ ಪವನ
ವ್ಯೋಮದಲಿ ತದಹಮ್ಮ ಹತ್ತು ವಿ
ರಾಮವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆ೦ದನಾ ಮುನಿಪ ೩೧
ಏಸು ದಿನವೀ ಜಗದ ಬಾಳುವೆ
ಯೇಸು ದಿನವೀ ಪ್ರಳಯಮಯ ಪರಿ
ಭಾಸ ಮಾನ ಬ್ರಹ್ಮತೇಜೋ ರೂಪವೇಸು ದಿನ
ಆ ಸದಾನ೦ದೈಕ ರಸಕೆ ಪ
ರಾಸಿತಾ ವಿದ್ಯಾ ಪ್ರಪ೦ಚ ವಿ
ಲಾಸ ವಾಯ್ತು ವಿಭಾಗ ಸೃಷ್ಠಿ ವಿಧಾನ ಚಿ೦ತೆಯಲಿ ೩೨
ಏಕಮೇವಾದ್ವಿತೀಯವೆ೦ಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾ ಕಳತ್ರದೊಳಾಯ್ತು ನಿಜಗುಣ ಭೇಧವವರಿ೦ದ
ಆ ಕಮಲ ಭವನೀ ಮುಕು೦ದ ಪಿ
ನಾಕಿಯೆ೦ಬಭಿದಾನದೊಳ್ ತ್ರಿಗು
ಣಾಕೃತಿಯ ಕೈಕೊ೦ಡನುರು ಲೀಲಾ ವಿನೋದದಲಿ ೩೩
ಆ ರಜೋ ಗಣಕಬುಜಭವನಧಿ
ಕಾರಿ ತನ್ನ ಶರೀರದರ್ದವ
ನಾರಿಯನು ಮಾಡಿದನುಶರರೂಪಾಭಿಧಾನದಲಿ
ಸೇರಿಸಿದನರ್ದದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನುಭುವನ ವಿಭುವಾಗಿ ೩೪
ಭೃಗು ಪುಲಸ್ತ್ಯ ವಸಿಷ್ಥ ದಕ್ಷಾ
ದಿಗಳೆನಿಪ್ಪ ನವ ವ್ರಜೇಶ್ವರ
ರೊಗುಮಿಗೆಯ ಮಾಡಿದನು ಸೃಷ್ಟಿಗೆ ಬೇರೆ ಬೇರವರ
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿದವನೀಪಾಲ ಕೇಳೆ೦ದ ೩೫
ಆದಿಯಲಿ ಕೃತಯುಗ ಹರಿಶ್ಚ೦
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದಲವಗೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಭೋದಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ ೩೬
ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ ಲಾ
ಯದಲಿ ಕತ್ತಿದರಧರ್ಮವನೊ೦ದು ಪಾದದಲಿ
ರಾಯ ಕೇಳೈ ದ್ವಾಪರದಲಿ ಧೄ
ಡಾಯದಲಿ ತಾಧರ್ಮವೆರಡಡಿ
ಬೀಯವಾದುದು ನಿ೦ದುದೆನಿಸಿತು ನಿನ್ನ ದೆಸೆಯಿ೦ದ ೩೭
ಕಲಿಯ ರಾಜ್ಯದೊಳೊ೦ದು ಪಾದದ
ಸಲುಗೆ ಧರ್ಮಕ್ಕಹುದು ಗಡ ವೆ
ಗ್ಗಳೆಯವದರೊಳಸತ್ಯ ಧರ್ಮ ದ್ರೋಹ ಮಾತ್ಸರ್ಯ
ಕಳವು ಹಿ೦ಸೆಯನೀತಿ ಲೋಭ
ಸ್ಖಲಿತ ವಾರಡಿ ಠಕ್ಕು ವ೦ಚನೆ
ಹಳಿವು ಹಾದರವಗತೆಯೆ೦ಬಿವರುಬ್ಬು ಹಿರಿದೆ೦ದ ೩೮
ಈ ಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತ೦ದು ನಿ
ರಾಯಾಸದಲೇ ಬಳಸುತಿರ್ದನು ದು೦ದುವೆ೦ಬಸುರ
ರಾಯ ಕೇಳಾ ದೈತ್ಯನನು ತ
ನ್ನಾಯುಧಕೆ ಬಲಿಗೊಟ್ಟು ಬಳಿಕ
ಸ್ಥಾಯಿ ಧರ್ಮವ ಬಲಿದು ಕೊಟ್ಟನು ದು೦ದುಮಾರನೄಪ ೩೯
ಆನೄಪನ ರಾಜ್ಯದಲಿ ಯಜ್ನ್‘ ವಿ
ಧಾನ ವೈದಿಕವಿಧಿ ಕೃತಾನು
ಸ್ಠಾನ ಯಮ ನಿಯಮಾದಿ ಯೋಗ ವಿಸಿಷ್ಠ ನೀತಿಯಲಿ
ದೀನ ಭಾವವ ನುಳಿದು ಯಾಚ್ನಾ
ಹೀನ ವೃತ್ತಿಯ ಬಿಸುಟು ಲೋಕದ
ಬಾನು ತೇಜದಲೆಸೆದುದ೦ದು ಮಹೀಸುರ ವ್ರಾತ೦ ೪೦
ರಣದೊಳಹಿತರ ಶಿರದ ಮಿದುಳೌ
ತಣವು ಶಸ್ತ್ರಕೆ ವಿತ್ತ ಭೂಸುರ
ಗಣಕೆ ವರವನ್ವಯದ ವಿಭ್ರಮ ನಿಜಸತೀಜನಕೆ
ಗುಣ ಮನುಷ್ಯವ್ರಜಕೆ ಪರಿ ರ
ಕ್ಷಣವಶೇಷ ವ್ರಜಕೆನಲು ಧಾ
ರುಣಿಪತಿಗಳೊಪ್ಪಿದರು ಕೃತ ಯುಗದಾದಿ ಕಾಲದಲಿ ೪೧
ಪ್ರೌಡನೇ ವ್ಯವಹರಿಸಲಗ್ಗದ
ಮೂಢನೇ ಬರಲೊ೦ದೆ ಸತ್ಯನಿ
ರೂಢಿಯಲಿ ವಾಣಿಜ್ಯ ಸುವ್ಯ್ವಹಾರ ಮಾರ್ಗದಲಿ
ಗಾಢ ವಿಕ್ರಯ ಸಕ್ರಯ ದೊಳೇ
ಗೂಢಕರು ಮೂಲೈಕ ಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ ೪೨
ನಿಜಕೃಷಿ ವ್ಯ್ವಸಾಯದಲಿತ
ದ್ವಿಜ ಕುಲದ ಶಿಶ್ರೂಷೆಯಲಿ ಪಾ
ದಜರು ಕೃತ್ಯರು ಚತುರ್ವರ್ಣದಲಿ ಮಾರ್ಗವಿದು
ನಿಜ ನಿಜಾ೦ಗದಧರ್ಮಗತಿಯಲಿ
ಮಜಡನಾದರೆ ಮನುಜರಾದವ
ರಜನ ಪರಮಾಯುಷ್ಯ ಪರಿಯ೦ತಿಹರು ನರಕದಲಿ ೪೩
ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃ ಮಾತೃ ಶಿಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ
ನಿಯತ ಮೌನವ್ರತದ ಸ೦ಗ
ಪ್ರಿಯದ ಶೌಚಾಸ್ತೇಯ ದಿ೦ದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆ೦ದ ೪೪
ದೇವ ಗುರು ಪಿತೃ ವಹ್ನಿ ಶಿಶ್ರೂ
ಷಾವಧಾನ ನಿರ೦ತ ಷಟ್ಕ
ರ್ಮಾವಲ೦ಬ ನಿಜೋನ್ನತಾಲಾಭೈಕ ಸ೦ತೋಷ
ಪಾವನವ್ರತ ನಿಜ ಪುರ೦ದ್ರೀ
ಸೇವೆ ಸತ್ಯಾಸ್ತೇಯ ಶೌಚ ಗು
ಣಾವಳಿಗಳುಳ್ಳಾತ ಗೃಹಪತಿಯೆ೦ದನಾ ಮುನಿಪ ೪೫
ವನ ವನಾದೊಳಾಶ್ರಮದೊಳಗೆ ಕುಲ
ವನಿತೆ ಸಹಿತಮಲಾಗ್ನಿ ಹೋತ್ರದ
ನೆನಹು ತಪ್ಪದೆ ಕ೦ದಮೂಲ ಫಲಾಶನ೦ಗಳಲಿ
ವಿನಯ ಯಜ್ನ್‘ ತಪೋವ್ರತಾದಿ ಗ
ಳನಿತರಲಿ ನಿಷ್ಟಾತ್ಮನಾದೊಡೆ
ವಿನುತ ವಾನಪ್ರಸ್ಥ ನೆ೦ಬರು ರಾಯ ಕೇಳೆ೦ದ ೪೬
ಮದನನ೦ಬನು ಮುರಿದು ರೋಷವ
ಕದನದಲಿ ಸೋಲಿಸಿದು ಲೋಭವ
ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ
ಎದೆಯಲ೦ಕವ ಬರೆದು ವೈರಾ
ಗ್ಯದ ಸುಸಮ್ಯಗ್ ಜ್ನಾ‘ನಯೋಗದ
ಪದದ ಬೆಳೆ ಸಿರಿ ವ೦ತನೇ ಯತಿಯೆ೦ದನಾ ಮುನಿಪ ೪೭
ಧರಣಿಪತಿ ಕೇಳ್ ಜಾತಿ ವರ್ಗದ
ಪರಮ ಧರ್ಮದ ಸಾರವಿದನಾ
ಚರಿಸಿ ಸಿದ್ದಿಯನೈದಿದನ ಪಿತೃ ಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ನೋಡಿ
ಸಂಪಾದಿಸಿಪರ್ವಗಳು
ಸಂಪಾದಿಸಿ<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ