ಆತ್ಮಧ್ಯಾನಿಸೊ ಮನುಜ ಹರಿಪುಣ್ಯನಾಮ

ಚಿತ್ರ / ಧ್ವನಿಸುರುಳಿ: ಕಂಡೇನು ಶ್ರೀರಂಗನಾಥನ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಕೈವಾರ ತಾತಯ್ಯ
ಬಿಡುಗಡೆ ವರ್ಷ: ೨೦೧೯ ಪಿ.ಎಂ.ಆಡಿಯೋಸ್
ರಾಗ:ಜೋಗ್/ನಾಟೈ
ಶ್ರುತಿ:ಸಿ
ತಾಳ: ೪/೪
ಲಯ:~ ೨೫೦ ಬಿಪಿಎಂ


ಪಲ್ಲವಿ :

ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಬಲವಂತವಾದ ಭವಹರ ಮಾಡೊ ನಾಮ
ಬಲವಂತವಾದ ಭವಹರ ಮಾಡೊ ನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ


ಚರಣ - ೧

ಘೋರಪಾತಕ ಅಜಾಮಿಳನ ಸಲುಹಿದ ನಾಮ
ಘೋರಪಾತಕ ಅಜಾಮಿಳನ ಸಲುಹಿದ ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೊರಿದ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೊರಿದ ನಾಮ
ದ್ರೌಪದಿ ಮಾನ ಭಂಗವ ಕಾಯ್ದ ನಾಮ
ದ್ರೌಪದಿ ಮಾನ ಭಂಗವ ಕಾಯ್ದ ನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಹರಿ ಪುಣ್ಯನಾಮ


ಚರಣ - ೨

ಅಂತಕನ ಧೂತರ ಹೊಡೆದು ಓಡಿಸೊ ನಾಮ
ಅಂತಕನ ಧೂತರ ಹೊಡೆದು ಓಡಿಸೊ ನಾಮ
ಆಂಜನೆಯನಿಗೆ ಆಧಾರ ನಾಮ
ಆಂಜನೆಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೊರುವ ನಾಮ
ಅವಸಾನ ಕಾಲಕ್ಕೆ ಹಾದಿ ತೊರುವ ನಾಮ
ನಂಬಿರೊ ಅಮರ ನಾರೇಯಣ ಸ್ವಾಮಿ ನಾಮ
ನಂಬಿರೊ ಅಮರ ನಾರೇಯಣ ಸ್ವಾಮಿ ನಾಮ
ಆತ್ಮಧ್ಯಾನಿಸೋ ಮನುಜ
ಆತ್ಮಧ್ಯಾನಿಸೋ ಮನುಜ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಬಲವಂತವಾದ ಭವಹರ ಮಾಡೊ ನಾಮ
ಆತ್ಮಧ್ಯಾನಿಸೋ ಮನುಜ ಹರಿ ಪುಣ್ಯನಾಮ
ಹರಿ ಪುಣ್ಯನಾಮ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ