- ಚಿತ್ರ: ಓಂ
- ಸಾಹಿತ್ಯ: ಹಂಸಲೇಖ
- ಸಂಗೀತ: ಹಂಸಲೇಖ
- ಗಾಯನ: ಡಾ.ರಾಜ್ಕುಮಾರ್ ಗಾಯನ
ಓ ಗುಲಾಬಿಯೇ! ಓಹೋ ಗುಲಾಬಿಯೇ
ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓಹೋ!
ಮುಳ್ಳಿಂದ, ಬಾಳಂದ, ಕೆಡಿಸೋದು ನ್ಯಾಯವೇ?
ಓ ಗುಲಾಬಿಯೇ! ಓಹೋ ಗುಲಾಬಿಯೇ ||ಪಲ್ಲವಿ||
ದ್ವೇಷವಾ ಸಾಧಿಸಿ, ಪ್ರೇಮದಾ ಅಸ್ತ್ರದಿ
ಮೀನಿನ ಹಾಡಿಗೆ, ಹಾಡಿನ ಧಾಟಿಗೆ
ವಿನಯದ ತಾಳವೇ ಭಾವಕೆ ವಿಷದಾ ಲೇಪವೇ?
ಹೆಣ್ಣು ಒಂದು ಮಾಯೆಯ, ರೂಪ ಎಂಬ ಮಾತಿದೆ
ಹೆಣ್ಣು ಕ್ಷಮಿಸೊ ಭೂಮಿಯ, ರೂಪ ಎಂದು ಹೇಳಿದೆ
ಯಾವುದು, ಯಾವುದು ನಿನಗೆ ಹೋಲುವುದಾವುದು?
ಯಾವುದು, ಯಾವುದು ನಿನಗೆ ಹೋಲುವುದಾವುದು?
||ಪಲ್ಲವಿ||
ಮನ್ನಿಸು ಮನ್ನಿಸು ಎಲ್ಲವಾ ಮನ್ನಿಸು
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ಚಿಮುಕಿಸು, ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ, ಒಲ್ಲೆ ಎಂದು ಹೇಳುವೆ
ಪ್ರೀತಿ ಮರೆತು ಹೋಗಲೂ, ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ, ನಿನ್ನಯ ಮನದೊಳಗೇನಿದೆ?
ಏನಿದೆ ಏನಿದೆ, ನಿನ್ನಯ ಮನದೊಳಗೇನಿದೆ?
||ಪಲ್ಲವಿ||
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ