- ಚಿತ್ರ: ಕಿಲಾಡಿ ಜೋಡಿ
- ಸಾಹಿತ್ಯ: ಚಿ. ಉದಯಶಂಕರ್
- ಸಂಗೀತ : ರಾಜನ್-ನಾಗೇಂದ್ರ
- ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ
ಲಾ...ಲ ಲ ಲ ಲ ಲಾ ಲಾ.........
ಕನಸಿನಲಿ ನೋಡಿದೆನು ಒಲವಿನಲಿ ಸೇರಿದೆನು(೨)
ಮನಸನು ಕದ್ದೋನು ಎದೆಯಲಿ ನಿಂತೋನು
ಕಾಣದೆ ಎಲ್ಲಿಹನು...........
ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು (೨)
ಕಾಣಲು ನಿನ್ನನ್ನು ಬೇಡಲು ಒಲವನ್ನು ಹುಡುಕುತ ಬಂದಿಹೆನು....... {ಕನಸಿನಲಿ}
ನಿನ್ನೆಯಿಂದ ನಿದ್ದೆ ಇಲ್ಲ ನಿನ್ನನ್ನು ಊರೆಲ್ಲಾ ಹುಡುಕಿ ನಾನು ನೊಂದೆ
ಹೇಗೋ ಏನೋ ಅಂತು ಇಂತು ನಿನ್ನನ್ನು ನಾನಿಲ್ಲಿ ಇಂದು ಕಂಡೆ
ತುಂಬಿ ಬಂದ ಆಸೆಯಿಂದ ಓಡೋಡಿ ನಾಬಂದೆ ನಿನ್ನ ನೋಡಲೆಂದು
ನನ್ನಾ ನಿನ್ನ ಬೇರೆಮಾಡೋರಾರೂಇಲ್ಲ ಇನ್ನು ಎಂದು ಬಾ ಬೇಗ ನೀ ನನ್ನ ಸೇರು ಬಂದು....
ಹೆ ಹೇ...................ಲ ಲ ಲ್ಲ ಲ ಲ ಲ್ಲ......
ತಾಳು ಚಿನ್ನ ಕೇಳು ರನ್ನ ಇಂತ ಕಳ್ಳ ಇಂತ ಸುಳ್ಳ ಬೇರೆ ಎಲ್ಲೂ ಹುಟ್ಟೋದಿಲ್ಲ
ನಂಬು ನನ್ನ....ನೀ ನಂಬು ನನ್ನ...ಸುಳ್ಳು ಚಿನ್ನ...ಸುಳ್ಳು ರನ್ನ.....
ಇಂತ ಬಂಡ ಇಂತ ಪುಂಡ ಊರಲ್ಲೆಲ್ಲೂ ಕಾಣೋದಿಲ್ಲ
ನಂಬು ನನ್ನ....ನಂಬು ನನ್ನ.....
ಕಳ್ಳನ ದಾರಿ ಕಳ್ಳನೆ ಬಲ್ಲಾ ಕೈಯ್ಯ ಕೊಟ್ಟ ನಿನ್ನ ನಾನು ಉಳಿಸೋಲ್ಲ
ಬಲ್ಲೆನು ಎಲ್ಲಾ ಅಳ್ಳದೆ ಇಲ್ಲಾ ಗಟ್ಟಿಯಾಗಿ ಮಾತನಾಡೆ ಹೆದರೋಲ್ಲ
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ (೨)
ಹಾಡುವೆಯ .....ಹಾಡುವೆನು
ಆಡುವೆಯಾ .....ಆಡುವೆನು
ಓಡುವೆಯಾ.... ಓಡುವೆನು
ಬಿಡುವೆನೆ ನಾ ನಿನ್ನ
ನಗಿಸುವೆಯಾ ....ನಗಿಸುವೆನು
ಅಳಿಸುವೆಯಾ.....ಅಳಿಸುವೆನು
ನಮಿಸುವೆಯಾ.....ನಮಿಸುವೆನು...ಹಾ.....ವೈರಿಗೆ ನಮಿಸೋಲ್ಲ......
ಹಾ ಹಾ......
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ