<ಗದುಗಿನ ಭಾರತ ಪದಕೋಶ

ಗ - ಘ, ಸಂಪಾದಿಸಿ

1. ಗಂಗಾದೇಶ, ಗಂಗಾತೀರ, ಗದಾ ಪರ್ವ,11,25
2. ಗಂಟಲಗಾಳ, ಮೀನು ಹಿಡಿಯಲು ಬಳಸುವ ಕೊಕ್ಕೆ., ಕರ್ಣ ಪರ್ವ,16,21
3. ಗಂಟಲಬಳೆ, ಗಂಟಲ ಬಳೆಯಾಕಾರದ ಮೂಳೆ (ಎಂ.ವಿ.ಸೀ.) ಅಲಘು ಸಾಹಸಿ, ವಿರಾಟ ಪರ್ವ,6,49
4. ಗಂಟಲು, ಕಗ್ಗಂಟು, ಆದಿ ಪರ್ವ,16,39
5. ಗಂಟಿಕ್ಕಿದನು, ಬಿಗಿಮಾಡಿದನು, ಭೀಷ್ಮ ಪರ್ವ,6,26
6. ಗಂಟಿಕ್ಕು, ಸಂಬಂಧವನ್ನುಂಟುಮಾಡು., ಆದಿ ಪರ್ವ,9,23
7. ಗಂಡ, ನಾಶಪಡಿಸುವ, ದ್ರೋಣ ಪರ್ವ,3,12
8. ಗಂಡ ಶೈಲ, ಪರ್ವತದ ಮೇಲಿಂದ ಉರುಳಿಬಿದ್ದ ಬಂಡೆ, ಅರಣ್ಯ ಪರ್ವ,10,8
9. ಗಂಡಗರ್ವ, ಪೌರುಷದ ಜಂಬದ ಮಾತು, ವಿರಾಟ ಪರ್ವ,3,52
10. ಗಂಡನಾಗು, ವೀರತನದಿಂದ ಎದುರು ನಿಲ್ಲು, ವಿರಾಟ ಪರ್ವ,5,7
11. ಗಂಡಿಗ, ಕಲಿ , ಗದಾ ಪರ್ವ,8,1
12. ಗಂಡುಗಲಿ, ಅತ್ಯಂತ ಪರಾಕ್ರಮಿ, ಆದಿ ಪರ್ವ,15,40
13. ಗಂಡುಗುಂದು, ಪರಾಕ್ರಮ ನಾಶವಾಗು, ಕರ್ಣ ಪರ್ವ,13,46
14. ಗಂಡುಗೆಡದಿರಿ, ಹೇಡಿಯಾಗುವುದು ಬೇಡಿ., ವಿರಾಟ ಪರ್ವ,8,8
15. ಗಂಡÀುಗೆದರು, ತೀವ್ರವಾಗಿ ಹರಡು , ಗದಾ ಪರ್ವ,8,22
16. ಗಂಡುತನ, ಶೂರರ ಪರಾಕ್ರಮ, ಭೀಷ್ಮ ಪರ್ವ,7,26
17. ಗಂಡೂಷ, ಬಾಯಿ ಮುಕ್ಕಳಿಸು, ಅರಣ್ಯ ಪರ್ವ,18,13
18. ಗಂಧಮಾದನ ಸಾನುವನು, ಗಂಧಮಾದನ ಪರ್ವತದ, ಸಭಾ ಪರ್ವ,3,46
19. ಗಗನೇಚರರು, ಆಕಾಶದಲ್ಲಿ ಸಂಚರಿಸುವವರು, ಆದಿ ಪರ್ವ,12,3
20. ಗಗನೋದರ, ಬನಡುವಿನ ?, ಸಭಾ ಪರ್ವ,12,100
21. ಗಜ ಅಬ್ಬರಣೆ, ಆನೆಯ ಘೀಂಕಾರ, ಭೀಷ್ಮ ಪರ್ವ,8,5
22. ಗಜಗಲಿಸು, ಶೋಭಿಸು/ಹೊಳೆ, ಉದ್ಯೋಗ ಪರ್ವ,8,30
23. ಗಜಘಟೆ, ಆನೆಗಳ ಹಿಂಡು, ಶಲ್ಯ ಪರ್ವ,2,8
24. ಗಜನಿವಹ, ಆನೆಯ ಗುಂಪು, ದ್ರೋಣ ಪರ್ವ,2,35
25. ಗಜಪುರ, ಹಸ್ತಿನಾವತಿ, ಗದಾ ಪರ್ವ,11,1
26. ಗಜಬಜ, ಗಲಿಬಿಲಿ, ಗದಾ ಪರ್ವ,4,11
27. ಗಜಬಜ, ಗದ್ದಲ, ಭೀಷ್ಮ ಪರ್ವ,5,22
28. ಗಜಬಜಿಸಿತು, ಗಲಿಬಿಲಿಗೊಂಡಿತು., ದ್ರೋಣ ಪರ್ವ,2,78
29. ಗಜಬಜಿಸಿತ್ತು, ಗೊಂದಲವುಂಟು ಮಾಡಿತು, ಭೀಷ್ಮ ಪರ್ವ,3,
30. ಗಜಬಜಿಸು, ಕೋಲಾಹಲ ಮಾಡು, ಶಲ್ಯ ಪರ್ವ,3,47
31. ಗಜಬಜಿಸು, ತಳಮಳಿಸು, ಉದ್ಯೋಗ ಪರ್ವ,4,10
32. ಗಜಬಜಿಸು, ಘೋಷಿಸು, ವಿರಾಟ ಪರ್ವ,4,40
33. ಗಜಬಜಿಸು, ಚಡಪಡಿಸು , ವಿರಾಟ ಪರ್ವ,2,10
34. ಗಜರಿದವು, ಘೀಂಕರಿಸಿದವು ಮತ್ತು ಕೆನೆದವು, ಭೀಷ್ಮ ಪರ್ವ,8,1
35. ಗಜರು, ಗರ್ಜಿಸು , ಭೀಷ್ಮ ಪರ್ವ,4,98
36. ಗಜರುವ, ಜೋರಾಗಿ ಧ್ವನಿ ಮಾಡುವ, ದ್ರೋಣ ಪರ್ವ,9,3
37. ಗಜರುವ, ಗರ್ಜಿಸುವ, ಭೀಷ್ಮ ಪರ್ವ,2,3
38. ಗಜಸ್ಕಂಧಾವಲಂಬ, ಆನೆಯ ಕುತ್ತಿಗೆಗೆ ಆಸರೆಯಾಗಿರುವುದು (ಎದೆಯಭಾಗ), ಶಲ್ಯ ಪರ್ವ,2,15
39. ಗಡ, ಅಕ್ಕಟಾ, ಭೀಷ್ಮ ಪರ್ವ,3,71
40. ಗಡಣಕೆ, ಗುಂಪಿಗೆ, ಉದ್ಯೋಗ ಪರ್ವ,8,38
41. ಗಡಣಿಸಿದನು, ಒಟ್ಟುಗೂಡಿಸಿದನು, ದ್ರೋಣ ಪರ್ವ,3,11
42. ಗಡಣಿಸು, ಜೊತೆಗೆ ಬಾ, ವಿರಾಟ ಪರ್ವ,5,24
43. ಗಡಣೆ, ಚಿಂತೆ, ಸಭಾ ಪರ್ವ,1,43
44. ಗಡಬಡಿಸಿ, ಸಂಭ್ರಮದಿಂದ, ಭೀಷ್ಮ ಪರ್ವ,6,11
45. ಗಡಬಡಿಸು, ತಡೆಯಿಲ್ಲದೆ ಮಾತನಾಡು, ಗದಾ ಪರ್ವ,2,16
46. ಗಡಾವಣೆ, ಭೋರ್ಗರೆತ, ಸಭಾ ಪರ್ವ,1,7
47. ಗಡಾವಣೆ, ಸಡಗರ, ಆದಿ ಪರ್ವ,12,19
48. ಗಡಾವಣೆ, ಮಹಾಧ್ವನಿ, ಗದಾ ಪರ್ವ,13,15
49. ಗಣನೆ, ಲೆಕ್ಕ, ವಿರಾಟ ಪರ್ವ,5,5
50. ಗಣನೆ, ಸಂಖ್ಯೆ (ಎಣಿಕೆ), ವಿರಾಟ ಪರ್ವ,8,10
51. ಗಣನೆಗೆ, ಲೆಕ್ಕಕ್ಕೆ, ಸಭಾ ಪರ್ವ,3,32
52. ಗಣನೆಯಿಲ್ಲದ, ಅಸಂಖ್ಯಾತ, ಭೀಷ್ಮ ಪರ್ವ,8,6
53. ಗಣಿಕೆ, ವಿಲಾಸಿನಿ, ವಿರಾಟ ಪರ್ವ,5,5
54. ಗಣಿಕೆ, ವೇಶ್ಯೆ, ಉದ್ಯೋಗ ಪರ್ವ,3,74
55. ಗಣಿಕೆಯರು, ವೇಶ್ಯಾಸ್ತ್ರೀಯರು, ಗದಾ ಪರ್ವ,11,16
56. ಗಣಿಕೆಯರು, ವೇಶ್ಯೆಯರು, ಗದಾ ಪರ್ವ,11,22
57. ಗಣಿಸು, ಲೆಕ್ಕಕ್ಕೆ ತೆಗೆದುಕೊ, ದ್ರೋಣ ಪರ್ವ,5,78
58. ಗಣಿಸು, ಲಕ್ಷಿಸು, ಆದಿ ಪರ್ವ,3,25
59. ಗಣೆ, ಕಣೆ , ಶಲ್ಯ ಪರ್ವ,2,29
60. ಗತ ಪರಿತೋಷನು, ದುಃಖಿತನಾದವನು, ಭೀಷ್ಮ ಪರ್ವ,1,55
61. ಗತಾಂಬಕ, ಕಣ್ಣುಹೋದವ, ಆದಿ ಪರ್ವ,3,9
62. ಗತಾಕ್ಷ, ಕುರುಡ, ಕರ್ಣ ಪರ್ವ,5,1
63. ಗತಾಕ್ಷ, ಕಣ್ಣಿಲ್ಲದವನು , ಗದಾ ಪರ್ವ,12,25
64. ಗತಾಕ್ಷಮಹೀಶÀ, ಕಣ್ಣುಗಳಿಲ್ಲದ ದೊರೆ, ಗದಾ ಪರ್ವ,11,2
65. ಗತಾಗತ, ಹೋಗಿ ಬರುವವರು, ಆದಿ ಪರ್ವ,18,13
66. ಗತಾಸುಗಳು, ಪ್ರಾಣಹೋದವರು, ಆದಿ ಪರ್ವ,14,31
67. ಗತಿ, ಸಂಚಾರ, ಆದಿ ಪರ್ವ,11,31
68. ಗತಿ, ಅವಸ್ಥೆ, ಉದ್ಯೋಗ ಪರ್ವ,4,42
69. ಗತಿ, ಗಮನ, ಆದಿ ಪರ್ವ,15,24
70. ಗತಿಗೆ, ರೀತಿಗೆ, ಗದಾ ಪರ್ವ,13,12
71. ಗದಗದಿಸು, ಆತಂಕಗೊಳ್ಳು, ದ್ರೋಣ ಪರ್ವ,10,30
72. ಗದಾಘಟ್ಟನ, ಗದೆಯ ಹೊಡೆತ, ಗದಾ ಪರ್ವ,12,15
73. ಗದಾಸಂಭೇದ, ಗದಾಯುದ್ಧದ ವಿವಿಧ ಪ್ರಭೇದಗಳು, ಗದಾ ಪರ್ವ,7,27
74. ಗದ್ಗದ, ನಡುಗುವ, ಆದಿ ಪರ್ವ,9,18
75. ಗದ್ದುಗೆ, ಆಸನ, ಭೀಷ್ಮ ಪರ್ವ,3,8
76. ಗನ್ನ, ಜಾಣ್ಮೆ, ದ್ರೋಣ ಪರ್ವ,6,22
77. ಗನ್ನಕತಕ, ಮೋಸ/ವಂಚನೆ, ಉದ್ಯೋಗ ಪರ್ವ,3,5
78. ಗನ್ನಕಾರ, ಮೋಸಗಾರ, ದ್ರೋಣ ಪರ್ವ,1,28
79. ಗಬ್ಬ, ಗರ್ವ, ಭೀಷ್ಮ ಪರ್ವ,3,67
80. ಗಬ್ಬಮುರಿದುದು, (ಗರ್ವನಾಶವಾಯಿತು), ಭೀಷ್ಮ ಪರ್ವ,3,67
81. ಗಬ್ಬರಿಸಿದುದು, ವ್ಯಾಪಿಸಿತು, ಭೀಷ್ಮ ಪರ್ವ,1,42
82. ಗಬ್ಬರಿಸಿದುದು, ಒಡೆಯಿತು, ದ್ರೋಣ ಪರ್ವ,4,29
83. ಗಬ್ಬರಿಸು, ಸೀಳು, ಆದಿ ಪರ್ವ,20,22
84. ಗಬ್ಬರಿಸು, ಅಗೆ, ಸಭಾ ಪರ್ವ,13,43
85. ಗಬ್ಬರಿಸು, ಆವರಿಸು, ಕರ್ಣ ಪರ್ವ,14,3
86. ಗಬ್ಬವಿಕ್ಕಿತು, ಧೈರ್ಯಗುಂದಿತು., ಭೀಷ್ಮ ಪರ್ವ,8,5
87. ಗಭೀರ, ಗಂಭೀರ, ಆದಿ ಪರ್ವ,16,27
88. ಗಮನ, ಹೋಗುವಿಕೆ, ಆದಿ ಪರ್ವ,11,3
89. ಗಯಾಳ, ಹೇಡಿ, ಸಭಾ ಪರ್ವ,2,66
90. ಗರವೊಟ್ಟಗೆ, ಗಸ್ತು, ಆದಿ ಪರ್ವ,20,56
91. ಗರಿಗಟ್ಟಿದಿರಿ, ಉತ್ಸಾಹದಿಂದ ಬಂದಿದ್ದೀರಿ, ದ್ರೋಣ ಪರ್ವ,2,52
92. ಗರಿನಾಲಗೆ, ಹರಟುವ ನಾಲಗೆ, ಕರ್ಣ ಪರ್ವ,4,3
93. ಗರುಡತುಂಡ, ಗರುಡನ ಕೊಕ್ಕು, ಶಲ್ಯ ಪರ್ವ,3,45
94. ಗರುಡಮತ, ಗರುಡತತ್ವ, ಕರ್ಣ ಪರ್ವ,9,23
95. ಗರುಡಶರ, ಗರುಡಾಸ್ತ್ರ, ಭೀಷ್ಮ ಪರ್ವ,9,44
96. ಗರುಡಿ, ಅಭ್ಯಾಸದ ಮನೆ, ವಿರಾಟ ಪರ್ವ,3,77
97. ಗರುಡಿ, ಅಸ್ತ್ರವಿದ್ಯಾಶಾಲೆ, ಭೀಷ್ಮ ಪರ್ವ,6,15
98. ಗರುಡಿ, ಕಲಿಸುವ ಮನೆ, ವಿರಾಟ ಪರ್ವ,10,79
99. ಗರುಡಿ, ಗರುಡಿ ಎಂದರೆ ಮಲ್ಲಯುದ್ಧ ಅಥವಾ ಸಾಮುಕಲಿಯುವ ಜಾಗ, ವಿರಾಟ ಪರ್ವ,8,16
100. ಗರುಡಿಯ ಗುರು, ಶಿಕ್ಷಾಚಾರ್ಯ (ದ್ರೋಣ), ಭೀಷ್ಮ ಪರ್ವ,2,31
101. ಗರುಡಿಯ ಜಾಣ, ಮಲ್ಲ ವಿದ್ಯಾ ಪರಿಣತ, ಭೀಷ್ಮ ಪರ್ವ,3,8
102. ಗರುಡಿಯ ಸದನ ಸರ್ವಜ್ಞನನ್ನು.... (ದ್ರೋಣನನ್ನು) ಗರುಡಿ, ವಿದ್ಯಾಭ್ಯಾಸ ಮಾಡಿಸುವ ಪ್ರದೇಶ, ವಿರಾಟ ಪರ್ವ,6,54
103. ಗರುಡಿಯಾಚಾರ್ಯ, ಶಸ್ತ್ರ ವಿದ್ಯಾಗುರು, ದ್ರೋಣ ಪರ್ವ,12,11
104. ಗರುವ, ಶ್ರೇಷ್ಠರಾದ , ಗದಾ ಪರ್ವ,1,64
105. ಗರುವ, ಹಿರಿಯ, ದ್ರೋಣ ಪರ್ವ,1,36
106. ಗರುವ, ಅಭಿಮಾನಿ , ಗದಾ ಪರ್ವ,4,33,
107. ಗರುವ, ಹೆಮ್ಮೆಯ , ಗದಾ ಪರ್ವ,8,1
108. ಗರುವ, ಹೆಮ್ಮೆಯ, ಗದಾ ಪರ್ವ,8,43
109. ಗರುವ, ಗಂಭೀರ, ಆದಿ ಪರ್ವ,13,17
110. ಗರುವ, ಗೌರವ, ಆದಿ ಪರ್ವ,8,72
111. ಗರುವ, ದೊಡ್ಡಸ್ತಿಕೆಯವನು, ಸಭಾ ಪರ್ವ,10,45
112. ಗರುವತನ, ದೊಡ್ಡಸ್ತಿಕೆ, ಉದ್ಯೋಗ ಪರ್ವ,8,17
113. ಗರುವನೈ, ದೊಡ್ಡ ಮನುಷ್ಯ, ಭೀಷ್ಮ ಪರ್ವ,8,45
114. ಗರುವರು, ಹಿರಿಯರು, ಉದ್ಯೋಗ ಪರ್ವ,4,110
115. ಗರುವರು, ಮಾನ್ಯರು, ವಿರಾಟ ಪರ್ವ,8,8
116. ಗರುವಾಯ, ಉತ್ತಮರನ್ನಾಗಿ, ವಿರಾಟ ಪರ್ವ,4,18
117. ಗರುವಾಯಿ, ಮರ್ಯಾದೆವಂತನೂ, ಭೀಷ್ಮ ಪರ್ವ,9,36
118. ಗರುವಾಯಿ, ಹೆಮ್ಮೆ, ಭೀಷ್ಮ ಪರ್ವ,6,17
119. ಗರುವಾಯಿ, ಠೀವಿ/ದೊಡ್ಡತನ., ಉದ್ಯೋಗ ಪರ್ವ,7,20
120. ಗರುವಾಯಿ, ಗರ್ವ, ಭೀಷ್ಮ ಪರ್ವ,8,5
121. ಗರುವಾಯಿ, ಘನತೆ, ಆದಿ ಪರ್ವ,15,39
122. ಗರುವಾಯಿಗೆಡಿಸು, ದರ್ಪವನ್ನು ಹಾಳು ಮಾಡು, ವಿರಾಟ ಪರ್ವ,4,9
123. ಗರುವಾಯಿಯೇ, ಗೌರವವೇ ?, ಸಭಾ ಪರ್ವ,14,84
124. ಗರುವಿಕೆ, ಹಿರಿತನ, ಗದಾ ಪರ್ವ,11,61
125. ಗರುವೆ, ಹಿರಿಯಳು, ಆದಿ ಪರ್ವ,10,18
126. ಗರುವೆಯ, ಮಾನÀಳನ್ನು, ಸಭಾ ಪರ್ವ,15,4
127. ಗರ್ಜಿಸಿತು, ಗಟ್ಟಿಯಾಗಿ ಕೂಗಿತು., ಆದಿ ಪರ್ವ,7,22
128. ಗರ್ಭವಿಕ್ಕು, ತಗ್ಗಿಹೋಗು, ಕರ್ಣ ಪರ್ವ,12,32
129. ಗರ್ಭಿತ, ಒಳಗೊಂಡಂತೆ, ಭೀಷ್ಮ ಪರ್ವ,8,12
130. ಗರ್ಭಿತ, ಒಳಗೊಂಡಿರುವ, ಆದಿ ಪರ್ವ,16,37
131. ಗರ್ಭೋದಕ, ?, ಅರಣ್ಯ ಪರ್ವ,7,56
132. ಗರ್ವ, ಸೊಕ್ಕು, ಉದ್ಯೋಗ ಪರ್ವ,5,15
133. ಗರ್ವ, ಮಾನ, ಭೀಷ್ಮ ಪರ್ವ,6,41
134. ಗವಲು, ಘಮಲು , ಅರಣ್ಯ ಪರ್ವ,11,12
135. ಗವಸಣಿಕೆ, ಮುಸುಕು, ಅರಣ್ಯ ಪರ್ವ,13,3
136. ಗವಸಣಿಗೆ, ಮುಸುಕು, ಆದಿ ಪರ್ವ,14,3
137. ಗವಸಣಿಗೆ, ಕೋಶ, ದ್ರೋಣ ಪರ್ವ,3,55
138. ಗವಸಣಿಸು, ಹೊದಿಸು, ದ್ರೋಣ ಪರ್ವ,8,33
139. ಗಸಣಿ, ಘರ್ಷಣೆ, ಸಭಾ ಪರ್ವ,1,32
140. ಗಸಣಿಸೊಳ್, ತೊಂದರೆಯನ್ನು ಅನುಭವಿಸು, ವಿರಾಟ ಪರ್ವ,3,43
141. ಗಹನ, ಮಹಾ, ವಿರಾಟ ಪರ್ವ,6,44
142. ಗಹನ, ಮಹತ್ತ್ವ, ವಿರಾಟ ಪರ್ವ,8,22
143. ಗಹನ, ಕಷ್ಟಸಾಧ್ಯ, ಆದಿ ಪರ್ವ,20,15
144. ಗಹನ, ಕಷ್ಟವಾದ, ಆದಿ ಪರ್ವ,18,3
145. ಗಹನಗತಿ, ರಹಸ್ಯಮಾರ್ಗ, ಆದಿ ಪರ್ವ,8,65
146. ಗಹನವೆ, ದೊಡ್ಡದೆ ?, ವಿರಾಟ ಪರ್ವ,5,14
147. ಗಹ್ವರ, ಅರಣ್ಯ, ಅರಣ್ಯ ಪರ್ವ,1,5
148. ಗಳ, ಗಳು, ದ್ರೋಣ ಪರ್ವ,15,32
149. ಗಳಗರ್ಜನ, ಗಂಟಲು ಹರಿವಂತೆ ಗರ್ಜಿಸುತ್ತ, ಭೀಷ್ಮ ಪರ್ವ,6,8
150. ಗಳಗರ್ಜನೆ, ಅಬ್ಬರದ ಆರ್ಭಟ, ಆದಿ ಪರ್ವ,7,20
151. ಗಳಗಾಳ, ಗಂಟಲಗಾಣ, ಆದಿ ಪರ್ವ,5,6
152. ಗಳದಗgಳÀನ, ಈಶ್ವರನ, ಭೀಷ್ಮ ಪರ್ವ,1,34
153. ಗಳನಾಳೀ ವಿನಿಸ್ಸøತ, ಕಂಠನಾಳಗಳಿಂದ ಚಿಮ್ಮುವ, ಭೀಷ್ಮ ಪರ್ವ,6,32
154. ಗಳವತ್ತಿಗೆ, ಕೊರಳ ಕವಚÀ, ದ್ರೋಣ ಪರ್ವ,3,3
155. ಗಳಹ, ಹರಟುವವನು, ವಿರಾಟ ಪರ್ವ,2,30
156. ಗಳಹತನ, ಹರಟೆಕೋರತನ, ವಿರಾಟ ಪರ್ವ,7,18
157. ಗಳಹತ್ತವನು, ಕುತ್ತಿಗೆಯ ಹಿಡಿತವನ್ನು ಬಿಡಿಸಿ, ಸಭಾ ಪರ್ವ,2,97
158. ಗಳಹದಿರು, ಬೊಗಳದಿರು, ಉದ್ಯೋಗ ಪರ್ವ,5,13
159. ಗಳಹುವನು, ಹರಟುತ್ತಾನೆ, ಭೀಷ್ಮ ಪರ್ವ,1,10
160. ಗಳಹೆ, ಮಾತನಾಡುವವಳು, ಅರಣ್ಯ ಪರ್ವ,8,34
161. ಗಳಿತ, ರಹಿತ, ಭೀಷ್ಮ ಪರ್ವ,3,87
162. ಗಾಂಗೇಯ, ಗಂಗಾಪುತ್ರ, ವಿರಾಟ ಪರ್ವ,5,23
163. ಗಾಂಡಿವ, ಅರ್ಜುನನ ಧನುಸ್ಸು, ವಿರಾಟ ಪರ್ವ,6,37
164. ಗಾಡಿಕೆ, ಸೊಗಸು/ಸಂಭ್ರಮ, ಉದ್ಯೋಗ ಪರ್ವ,8,11
165. ಗಾಡಿಕೆ, ಚೆಲುವು, ವಿರಾಟ ಪರ್ವ,7,44
166. ಗಾಡಿಸು, ಚೆನ್ನಾಗಿಕಾಣಿಸು, ಶಲ್ಯ ಪರ್ವ,3,52
167. ಗಾಢ, ಹಿರಿದಾದ , ಗದಾ ಪರ್ವ,11,61
168. ಗಾಢ, ದೃಢತೆ, ಕರ್ಣ ಪರ್ವ,22,35
169. ಗಾಢದ, ಗುಪ್ತವಿಚಾರದ, ಶಲ್ಯ ಪರ್ವ,1,28
170. ಗಾಢದಲಿ, ಬಲವಾಗಿ, ಆದಿ ಪರ್ವ,14,11
171. ಗಾಢಪ್ರತಾಪ, ಪರಮಪರಾಕ್ರಮ, ಉದ್ಯೋಗ ಪರ್ವ,8,29
172. ಗಾಢಾಭಿಲಾಷರು, ತೀವ್ರ ಕುತೂಹಲಿಗಳು, ಭೀಷ್ಮ ಪರ್ವ,6,1
173. ಗಾಢಿಸು, ಪ್ರಭಾವಿಸು, ಗದಾ ಪರ್ವ,4,16
174. ಗಾಢಿಸು, ವೇಗಗೊಳಿಸು, ಗದಾ ಪರ್ವ,6,28
175. ಗಾಢಿಸು, ಗಾಢವಾಗು, ಅರಣ್ಯ ಪರ್ವ,13,35
176. ಗಾಣ, ಗಾಳ, ಕರ್ಣ ಪರ್ವ,22,28
177. ಗಾಬರಿ ಭಾರಣೆ, ಘನತೆ , ಶಲ್ಯ ಪರ್ವ,3,8
178. ಗಾಯಗೊಂಡ ಬಾದಣಗೊರೆದ, ತೂತು ಮಾಡಿದ, ಶಲ್ಯ ಪರ್ವ,2,6
179. ಗಾರಾಗಾರು, ಘಾರಾಘಾರಿ, ವಿರಾಟ ಪರ್ವ,8,61,
180. ಗಾರಾಗು, ಒಣಗಿಹೋಗು<ಗಾ¾ು, ವಿರಾಟ ಪರ್ವ,1,26
181. ಗಾರು, ಕ್ಷುದ್ರವ್ಯಕ್ತಿ, ಕರ್ಣ ಪರ್ವ,6,28
182. ಗಾರು ಹಸ್ತ್ರ, ಗೃಹಸ್ಥ, ಉದ್ಯೋಗ ಪರ್ವ,3,34
183. ಗಾರುಗೆಡೆ, ಧಿಕ್ಕರಿಸು, ದ್ರೋಣ ಪರ್ವ,5,28
184. ಗಾರುಗೆಡೆ, ಧಿಕ್ಕರಿಸಿ ಮಾತನಾಡು, ದ್ರೋಣ ಪರ್ವ,1,24
185. ಗಾರುಗೆಡೆ, ನಿಂದಿಸು , ವಿರಾಟ ಪರ್ವ,8,72
186. ಗಾರುಡ, ಗರುಡ ಮಣಿ (ವಿಷಾಪಹಾರಿ), ಭೀಷ್ಮ ಪರ್ವ,8,9
187. ಗಾರುಡ, ಗರುಡಮಂತ್ರ, ಆದಿ ಪರ್ವ,17,15
188. ಗಾರುಡಿಸು, ಗುಟ್ಟಿನಲ್ಲಿ ಬುದ್ಧಿ ಹೇಳು, ಆದಿ ಪರ್ವ,6,5
189. ಗಾರುತನ, ಹೇಡಿತನ, ಭೀಷ್ಮ ಪರ್ವ,8,29
190. ಗಾರ್ದಭ, ಕತ್ತೆ, ಸಭಾ ಪರ್ವ,2,79
191. ಗಾಲಿ, ಚಕ್ರ, ಗದಾ ಪರ್ವ,9,38
192. ಗಾವಳಿ, ಬೊಬ್ಬೆ, ಅರಣ್ಯ ಪರ್ವ,5,40
193. ಗಾವಳಿ, ಜನರ ಗುಂಪು, ಆದಿ ಪರ್ವ,15,43
194. ಗಾವಳಿ, ಗುಂಪು , ವಿರಾಟ ಪರ್ವ,8,51
195. ಗಾವಳಿ, ಗದ್ದಲ , ವಿರಾಟ ಪರ್ವ,2,16,
196. ಗಾವಳಿ, ದೊಂಬಿ, ವಿರಾಟ ಪರ್ವ,1,26
197. ಗಾವಿಲ, ಮೂರ್ಖ, ಸಭಾ ಪರ್ವ,3,24
198. ಗಾವಿಲ, ಹೆಡ್ಡ/ಪೆದ್ದ, ಉದ್ಯೋಗ ಪರ್ವ,3,56
199. ಗಾವಿಲರು, ಮೂರ್ಖರು, ಉದ್ಯೋಗ ಪರ್ವ,3,26
200. ಗಾಸಿ, ತೊಂದರೆ/ಬವಣೆ, ಉದ್ಯೋಗ ಪರ್ವ,4,38
201. ಗಾಸಿಯಾಗು, ತೊಂದರೆಗೊಳಗಾಗು, ವಿರಾಟ ಪರ್ವ,3,70
202. ಗಾಹ, ನೀರಿನಲ್ಲಿ ಮುಳುಗುವುದು, ಗದಾ ಪರ್ವ,5,38
203. ಗಾಹ, ಪ್ರಭಾವ , ಗದಾ ಪರ್ವ,1,35,
204. ಗಾಹಿನಲಿ, ಪ್ರಭಾವದಿಂದ, ಭೀಷ್ಮ ಪರ್ವ,3,93
205. ಗಾಹಿಸಿತು, ವ್ಯಾಪಿಸಿತು, ಸಭಾ ಪರ್ವ,15,2
206. ಗಾಹಿಸಿತು, ಮುಳುಗಿಸಿತು, ಸಭಾ ಪರ್ವ,15,4
207. ಗಾಹಿಸು, ವಂಚಿಸು, ಗದಾ ಪರ್ವ,6,20
208. ಗಾಹು, ಮುಚ್ಚು ಮರೆ, ಸಭಾ ಪರ್ವ,10,75
209. ಗಾಹು, ಗುರಿ, ಗದಾ ಪರ್ವ,6,28, ,
210. ಗಾಹುಕೊಳ್ಳದ, ಎದುರಿಸಲಾರದಂತಹ, ದ್ರೋಣ ಪರ್ವ,1,12
211. ಗಾಹುಗತಕ, ಭ್ರಮೆ, ಸಭಾ ಪರ್ವ,12,38
212. ಗಾಹೇರು, ಕೋಪಗೊಳ್ಳು, ಭೀಷ್ಮ ಪರ್ವ,6,19
213. ಗಾಳು, ಕೀಳು, ಕರ್ಣ ಪರ್ವ,26,12
214. ಗಾಳುಗಜರಿನ, ಭಯಂಕರಶಬ್ದದ, ಭೀಷ್ಮ ಪರ್ವ,6,9
215. ಗಿಂಡಿ, ಕೊಂಬು ಅಥವಾ ಸೊಂಡಿಲಿರುವ ನೀರಿನ ಪಾತ್ರೆ, ವಿರಾಟ ಪರ್ವ,3,67
216. ಗಿರಿವ್ರಜ, ಪರ್ವತ ಸಮೂಹ, ವಿರಾಟ ಪರ್ವ,6,63
217. ಗಿರಿಸಾನು, ಬೆಟ್ಟಸಾಲು , ಗದಾ ಪರ್ವ,13,3
218. ಗೀಜಗ, ಒಂದು ಪಕ್ಷಿ, ಗದಾ ಪರ್ವ,9,20
219. ಗೀರ್ವಾಣಿ, ದೇವತಾಸ್ತ್ರೀ, ಗದಾ ಪರ್ವ,10,1
220. ಗುಂಡಿಗೆ, ಎದೆ , ವಿರಾಟ ಪರ್ವ,4,49, ,
221. ಗುಜರು, ಹೆಣೆದುಕೊಂಡಿರುವ, ಶಲ್ಯ ಪರ್ವ,3,11
222. ಗುಜುಗುಜಿಸು, ಪಿಸುಮಾತಾಡು, ವಿರಾಟ ಪರ್ವ,9,24
223. ಗುಜುಗುಜು, ಪಿಸುಮಾತು, ಆದಿ ಪರ್ವ,14,33
224. ಗುಡಿ, ಬಾವುಟ., ಉದ್ಯೋಗ ಪರ್ವ,7,17
225. ಗುಡಿ, ಗೋಪುರ, ಗದಾ ಪರ್ವ,4,17
226. ಗುಡಿ, ಧ್ವಜಪಟ, ಆದಿ ಪರ್ವ,16,26
227. ಗುಡಿಗಟ್ಟು, ಸಂತೋಷಗೊಳ್ಳು, ಆದಿ ಪರ್ವ,17,10
228. ಗುಡಿಗಟ್ಟು, ಉತ್ಸಾಹಿಸು, ವಿರಾಟ ಪರ್ವ,10,54
229. ಗುಡಿಗಟ್ಟು, ಒಟ್ಟಾಗು, ಗದಾ ಪರ್ವ,5,36
230. ಗುಡಿಗೂಡಾರ, ಗುಡಿ ಗುಂಡಾರ, ಆದಿ ಪರ್ವ,12,6
231. ಗುಡಿಯ ಬೀಡು, ಪರಮಾತ್ಮನ ಪವಿತ್ರ ಸ್ಥಾನ, ದ್ರೋಣ ಪರ್ವ,18,69
232. ಗುಡಿಯಿರಿ, ನೆಟ್ಟಗೆ ನಿಲ್ಲು, ಅರಣ್ಯ ಪರ್ವ,9,21
233. ಗುಡುಗು, ಗುಡುಗುಡು ಎಂದು ಒಂದೇ ಉಸುರಿಗೆ ಗುಡುಗುತ್ತ ಓಡಾಡುವ ಆಟ, ಆದಿ ಪರ್ವ,6,2
234. ಗುಣ, ಹಗ್ಗ, ಭೀಷ್ಮ ಪರ್ವ,2,28
235. ಗುಣನಿಧಿ, ಗುಣಕ್ಕೆ ಆರಕನಾದವನು, ಗದಾ ಪರ್ವ,8,17
236. ಗುಣಮಯ, ಗುಣದಿಂದ ಕೂಡಿದ, ಗದಾ ಪರ್ವ,11,52
237. ಗುಣಿ, ಒಳ್ಳೆಯ ಗುಣಗಳನ್ನುಳ್ಳವನು, ಗದಾ ಪರ್ವ,11,6
238. ಗುಪಿತ, ಅಜ್ಞಾತತೆ , ವಿರಾಟ ಪರ್ವ,1,5
239. ಗುಪುತ, ಗುಪ್ತ, ವಿರಾಟ ಪರ್ವ,2,1
240. ಗುಪ್ತ, >ಗುಪಿತ. ಇದು ನಡುಗನ್ನಡದ ವೈಶಿಷ್ಟ್ಯ., ವಿರಾಟ ಪರ್ವ,2,1
241. ಗುಪ್ತದನುಮಾನ, ರಹಸ್ಯ ಸಂಗತಿ, ಭೀಷ್ಮ ಪರ್ವ,1,2
242. ಗುರು ಭಾರ್ಗವರು, ಗುರು ಶುಕ್ರರು, ಸಭಾ ಪರ್ವ,3,14
243. ಗುರುಕಿಡು, ಗೊರಕೆ ಹೊಡೆ, ವಿರಾಟ ಪರ್ವ,8,82
244. ಗುರುಜ, ಅಶ್ವತ್ಥಾಮ., ಗದಾ ಪರ್ವ,11,25
245. ಗುರುತನುಜ, ಅಶ್ವತ್ಥಾಮ (ದ್ರೋಣಪುತ್ರ), ವಿರಾಟ ಪರ್ವ,8,43
246. ಗುರುವಾಯ್ತು, ಮಿಗಿಲಾಯ್ತು, ಗದಾ ಪರ್ವ,13,12
247. ಗುರುಸೂನು, ದ್ರೋಣ ಪುತ್ರ , ವಿರಾಟ ಪರ್ವ,8,42
248. ಗುರ್ಜರ, ಗುಜರಾತ್, ಭೀಷ್ಮ ಪರ್ವ,4,63
249. ಗುಲ್ಫದ್ಪಯಸ, ಪಾದದ ಹಿಮ್ಮಡಿಯ ಮಣಿಗಂಟು, ಭೀಷ್ಮ ಪರ್ವ,6,30
250. ಗುಲ್ಮ, ಸೇನೆಯ ಒಂದು ತುಕಡಿ , ಶಲ್ಯ ಪರ್ವ,3,11
251. ಗುಹ, ಷಣ್ಮುಖ, ಆದಿ ಪರ್ವ,15,26
252. ಗುಹ, ಕಾರ್ತಿಕೇಯ, ಉದ್ಯೋಗ ಪರ್ವ,3,133
253. ಗುಳ, ಬೆಂಗಟ್ಟಿನ ರಂಚೆ, ಕರ್ಣ ಪರ್ವ,5,3
254. ಗುಳ, ಪಕ್ಕರಕ್ಷೆ, ದ್ರೋಣ ಪರ್ವ,3,3
255. ಗುಳ, ಆನೆ ಕುದುರೆಗಳ ಬೆನ್ನ ಮೇಲೆ ಹಾಕುವ ಪಾವುಡ (ಬಟ್ಟೆ), ಶಲ್ಯ ಪರ್ವ,2,4
256. ಗುಳ, ಆನೆ ಕುದುರೆಗಳ ಮೇಲೆ ಹಾಕುವ ಪಾವುಡ, ಭೀಷ್ಮ ಪರ್ವ,5,37
257. ಗುಳ, ಆನೆಗೆ ಹೊದಿಸುವ ಪಕ್ಷರೆಕ್ಕೆ, ವಿರಾಟ ಪರ್ವ,4,27
258. ಗುಳ, ರೆಂಚೆ, ಉದ್ಯೋಗ ಪರ್ವ,11,12
259. ಗುಳ, ಹಕ್ಕರಿಕೆ, ಭೀಷ್ಮ ಪರ್ವ,8,4
260. ಗುಳ, ಕುದುರೆಗಳ ಮೇಲೆ ಹೊದ್ದಿಸುವ ಬಟ್ಟೆ, ದ್ರೋಣ ಪರ್ವ,8,45
261. ಗುಳಿ, ತೆಗ್ಗು, ಉದ್ಯೋಗ ಪರ್ವ,3,99
262. ಗುಳಿ ತೆವರನೀಕ್ಷಿಸುತ, ಹಳ್ಳ ತಿಟ್ಟುಗಳನ್ನು ಗಮನಿಸುತ್ತ, ಸಭಾ ಪರ್ವ,1,74
263. ಗುಳಿ ತೆವರು, ಹಳ್ಳತಿಟ್ಟು, ಸಭಾ ಪರ್ವ,1,74
264. ಗೂಡಾರ, ಡೇರೆ/ಬಟ್ಟಿಯಮನೆ, ಉದ್ಯೋಗ ಪರ್ವ,2,8
265. ಗೂಡು, ದೇಹ, ದ್ರೋಣ ಪರ್ವ,19,8
266. ಗೂಡುಗೊಂಡುದು, ಮೂಲೆಗುಂಪಾದವು., ಭೀಷ್ಮ ಪರ್ವ,9,41
267. ಗೂಡುಗೊಳ್, ಮನೆಯನ್ನು ಸೇರು, ಕರ್ಣ ಪರ್ವ,24,16
268. ಗೂಢತರ, ಗುಪ್ತ ರೀತಿ, ಆದಿ ಪರ್ವ,8,65
269. ಗೂಢದ, ಗುಪ್ತವಾದ, ಗದಾ ಪರ್ವ,9,27
270. ಗೂಳೆತೆಗೆ, ಎಲ್ಲ ವಸ್ತುವಿನೊಡನೆ ಹೊರಡು, ದ್ರೋಣ ಪರ್ವ,4,57
271. ಗೂಳೆಯ, ವಲಸೆ, ದ್ರೋಣ ಪರ್ವ,3,15
272. ಗೂಳೆಯ, ವಲಸೆಹೋಗು, ಭೀಷ್ಮ ಪರ್ವ,6,7
273. ಗೆಲಿದನು, ಹೋಗಲಾಡಿಸಿಕೊಂಡನು, ಭೀಷ್ಮ ಪರ್ವ,10,27
274. ಗೆಲ್ಲಕೆಡೆ, ಗೆಲುವನ್ನು ಕಳೆದುಕೋ, ವಿರಾಟ ಪರ್ವ,7,47
275. ಗೆಲ್ಲೆಗಡೆ, ತುಂಡುತುಂಡಾಗು , ಗದಾ ಪರ್ವ,1,50
276. ಗೇಕು, ಜೊಂಡುಹುಲ್ಲು, ಭೀಷ್ಮ ಪರ್ವ,7,13
277. ಗೇಣಿ, ಭೂಮಿಯನ್ನು ಸಾಗುವಳಿಗೆ ಗುತ್ತಿಗೆ ಪಡೆಯುವುದು, ಕರ್ಣ ಪರ್ವ,24,42
278. ಗೊಟ್ಟಿಯಾಟ, ಒಡನಾಟ, ಸಭಾ ಪರ್ವ,2,85
279. ಗೊಣೆ, ಚಕ್ರದ ಧಾರೆ, ಸಭಾ ಪರ್ವ,9,54
280. ಗೊರೆ, ಕೆಸರು, ಆದಿ ಪರ್ವ,8,76
281. ಗೊಲಗೆ, ಹೆದೆಗೆ (ಬಿಲ್ಲಿನ ತುದಿಗೆ), ದ್ರೋಣ ಪರ್ವ,3,20
282. ಗೊಲೆ, ಕೊಪ್ಪಿಗೆ, ಭೀಷ್ಮ ಪರ್ವ,3,8
283. ಗೊಳಸು, ಕೊಠಡಿ, ಸಭಾ ಪರ್ವ,1,23
284. ಗೋಕುಲ, ಪಶುಸಮೂಹ, ವಿರಾಟ ಪರ್ವ,6,43
285. ಗೋಕುಲ, ದನಗಳ ಹಿಂಡು, ವಿರಾಟ ಪರ್ವ,7,28
286. ಗೋಚರ, ಕಾಣಿಸುವುದು., ಗದಾ ಪರ್ವ,8,64
287. ಗೋಚರ, ಕಣ್ಣಿಗೆ ಕಾಣತಕ್ಕ, ಉದ್ಯೋಗ ಪರ್ವ,4,52
288. ಗೋಚರಿಸು, ವೇದ್ಯವಾಗು, ಆದಿ ಪರ್ವ,9,10
289. ಗೋಚರಿಸು, ಕಾಣಿಸು, ಆದಿ ಪರ್ವ,11,13
290. ಗೋಚರಿಸು, ಕಾಣಿಸಿಕೊ, ಆದಿ ಪರ್ವ,16,63
291. ಗೋಚರಿಸು, ಕೈಗೂಡಿಸು, ಆದಿ ಪರ್ವ,20,14
292. ಗೋಟು, ಮೂಲೆ , ಗದಾ ಪರ್ವ,6,16
293. ಗೋಣಡವಿ, ಕುತ್ತಿಗೆಗಳೆಂಬ ಕಾಡು, ಭೀಷ್ಮ ಪರ್ವ,5,15
294. ಗೋಣು, ಕತ್ತು , ಗದಾ ಪರ್ವ,7,48
295. ಗೋಣು, ಕೊರಲು, ಗದಾ ಪರ್ವ,9,32
296. ಗೋಣುಮಾರಿ, ಹಣಕ್ಕಾಗಿ ತಮ್ಮನ್ನು ಮಾರಿಕೊಂಡ ವೀರರು, ಭೀಷ್ಮ ಪರ್ವ,8,15
297. ಗೋತ್ರ, ವಂಶ, ಗದಾ ಪರ್ವ,8,40
298. ಗೋತ್ರಜ, ಒಂದೇ ಕುಲ / ಗೋತ್ರದವರು, ಉದ್ಯೋಗ ಪರ್ವ,4,58
299. ಗೋತ್ರಜ, ಕುಲದಲ್ಲಿ ಹುಟ್ಟಿದವರು, ಆದಿ ಪರ್ವ,8,49
300. ಗೋತ್ರಬಾಂಧವರು, ಒಂದೇ ಗೋತ್ರದಲ್ಲಿ ಹುಟ್ಟಿದ ಬಂಧುಗಳು, ಗದಾ ಪರ್ವ,2,22
301. ಗೋತ್ರವಧ, ದಾಯಾದಿಗಳ ಸಂಹಾರ, ಗದಾ ಪರ್ವ,3,19
302. ಗೋಧನ, ಗೋಸಂಪತ್ತು, ವಿರಾಟ ಪರ್ವ,5,21
303. ಗೋನಾಳಿ, ಕಂಠನಾಳ, ಅರಣ್ಯ ಪರ್ವ,14,24
304. ಗೋನಾಳಿ, ಕಂಠದ ಮಣಿ, ವಿರಾಟ ಪರ್ವ,3,54
305. ಗೋನಾಳಿ, ಕೊರಳಿನ ನಾಳ, ದ್ರೋಣ ಪರ್ವ,5,68
306. ಗೋಪಾಲನೆಂಬನ, ಗೋಪಾಲನೆಂಬ ರಾಜನನ್ನು, ಸಭಾ ಪರ್ವ,4,5
307. ಗೋಪಿತಾತ್ಮಕ, ಮಾಯೆಯಿಂದ ಕವಿದ ಆತ್ಮ., ಅರಣ್ಯ ಪರ್ವ,6,40
308. ಗೋಮುಖ, ಒಂದು ಬಗೆಯ ವಾದ್ಯ, ವಿರಾಟ ಪರ್ವ,8,3
309. ಗೋಮೂತ್ರಕದ ಚಿತ್ರ, ಎತ್ತುಗಳು ನಡೆಯುತ್ತಿರುವಾಗಲೇ ಮೂತ್ರಮಾಡುವಾಗ ಉಂಟಾಗುವ ಅಂಕುಡೊಂಕಾದ ಚಿತ್ರ, ಗದಾ ಪರ್ವ,6,24
310. ಗೋರಿ, (ಜಿಂಕೆಯನ್ನು ಮರುಳಗೊಳಿಸಿ ಬಲೆಗೆ ಬೀಳುವಂತೆ ಆಕರ್ಷಿಸಲು ಏರ್ಪಡಿಸುವ) ಮೃದು ಮಧುರವಾದ ಧ್ವನಿ, ಸಭಾ ಪರ್ವ,12,68
311. ಗೋವ, ಗೊಲ್ಲ, ವಿರಾಟ ಪರ್ವ,7,35
312. ಗೋವಳರು ನಿರ್ಲಜ್ಜರು, ದನಕಾಯುವವರು ನಾಚಿಕೆಯಿಲ್ಲದವರು, ಸಭಾ ಪರ್ವ,2,83
313. ಗೋವಳಿಗಟ್ಟಿಗೆ, ಸೀಗುರಿ, ದ್ರೋಣ ಪರ್ವ,12,27
314. ಗೋವ್ರಜ, ಪಶು ಸಮೂಹ, ವಿರಾಟ ಪರ್ವ,1,23
315. ಗೋವ್ರಜ, ದನಗಳ ಸಮೂಹ, ವಿರಾಟ ಪರ್ವ,10,84
316. ಗೋಹಯ ಸ್ಥಳನಿವಾಸಿತರು, ಕುದುರೆ , ವಿರಾಟ ಪರ್ವ,1,7
317. ಗೌಜು, ಗೌಜಲಹಕ್ಕಿ, ಗದಾ ಪರ್ವ,9,20
318. ಗೌತಮ, ಕೃಪಾಚಾರ್ಯ, ಗದಾ ಪರ್ವ,10,1
319. ಗೌರಗಿವ, ಅಬ್ಬರದ, ಭೀಷ್ಮ ಪರ್ವ,2,4
320. ಗೌರು, ಕರ್ಕಶ ಧ್ವನಿ ಮಾಡುವ ಒಂದು ಕಹಳೆ, ಕರ್ಣ ಪರ್ವ,21,7
321. ಗೌರುಗಹಳೆ, ರಣಕಹಳೆ, ವಿರಾಟ ಪರ್ವ,8,2
322. ಗೌರುಗಹಳೆ, ದೊಡ್ಡ ಶಬ್ದಮಾಡುವ ಕಹಳೆ, ಕರ್ಣ ಪರ್ವ,2,2
323. ಗೌಳ, À (ಬಂಗಾಲ), ಭೀಷ್ಮ ಪರ್ವ,4,72
324. ಗೌಳವ, ಗೌಡ ಸಾರಸ್ವತರು, ಸಭಾ ಪರ್ವ,5,20
325. ಗ್ರಾಮಣಿಗೆ, ?, ಅರಣ್ಯ ಪರ್ವ,4,26
326. ಗ್ರಾವ, ದೃಢತೆ., ಕರ್ಣ ಪರ್ವ,7,20
327. ಘಂಟಾರವ, ಗಂಟೆಗಳ ಶಬ್ದ, ಶಲ್ಯ ಪರ್ವ,3,66
328. ಘಟಯಂತ್ರ, ನೀರೆತ್ತುವ ರಾಟೆ, ಆದಿ ಪರ್ವ,8,40
329. ಘಟವಾಸಕ, ಸುಗಂಧ ದ್ರವ್ಯಗಳ ಪಾತ್ರೆ, ವಿರಾಟ ಪರ್ವ,10,81
330. ಘಟಸಂಭವ, ಅಗಸ್ಯ್ತ, ಗದಾ ಪರ್ವ,13,2
331. ಘಟಿಸು, ಸಂಭವಿಸು, ಆದಿ ಪರ್ವ,20,15
332. ಘಟೆ, ಪಡೆ, ಆದಿ ಪರ್ವ,13,35
333. ಘಟ್ಟಾವಳಿ, ಘಟ್ಟಪ್ರದೇಶ, ಗದಾ ಪರ್ವ,13,3
334. ಘಟ್ಟಿವಾಳ್ತಿ, ಗಂಧತೇಯುವವಳು, ಸಭಾ ಪರ್ವ,10,17
335. ಘಟ್ಟಿಸು, ತಾಗು , ಗದಾ ಪರ್ವ,12,17
336. ಘನ, ಅತ್ಯಧಿಕ, ಆದಿ ಪರ್ವ,18,25
337. ಘನ, ದೊಡ್ಡ, ಆದಿ ಪರ್ವ,9,7
338. ಘನ ಕಪರ್ದಿ, ಮಹಾಶಿವನ, ವಿರಾಟ ಪರ್ವ,1,11
339. ಘನತೃಷ್ಣಾಕುಲತೆ, ಅಧಿಕ ಬಾಯಾರಿಕೆಯ ಚಿಂತೆ, ಭೀಷ್ಮ ಪರ್ವ,10,28
340. ಘನನಿಸ್ಸಾಳ, ರಣಭೇರಿ, ಭೀಷ್ಮ ಪರ್ವ,7,1
341. ಘನಪರಿತಾಪ, ಮಹಾಸಂತಾಪ, ಭೀಷ್ಮ ಪರ್ವ,3,26
342. ಘನಮೇಘಾಳಿ, ದೊಡ್ಡ ದೊಡ್ಡ ಮೋಡಗಳ ಗುಂಪು, ಭೀಷ್ಮ ಪರ್ವ,4,87
343. ಘನಸಂಕುಲಸುವಿಗ್ರಹ ಸಾಧನರು, ಘೋರ ಸಂಕುಲ ಯುದ್ಧ ನಿಪುಣರು, ಭೀಷ್ಮ ಪರ್ವ,6,4
344. ಘರಟ್ಟ, ನಾಶಪಡಿಸುವವನು, ಆದಿ ಪರ್ವ,16,47
345. ಘರಟ್ಟ, ಬೀಸುವ ಕಲ್ಲು, ಭೀಷ್ಮ ಪರ್ವ,3,0
346. ಘರಟ್ಟ, ಬೀಸುವ ಕಲ್ಲು (ಅಂದರೆ ಶತ್ರು ರಾಕ್ಷಸರ ಪಾಲಿಗೆ ಬೀಸುವ ಕಲ್ಲಿನಂತಿದ್ದ ಶ್ರೀಕೃಷ್ಣ) ಅರೆಯುವವನು., ವಿರಾಟ ಪರ್ವ,10,49
347. ಘರ್ಮಜಲ, ಬೆವರು ನೀರು, ಕರ್ಣ ಪರ್ವ,19,47
348. ಘಲ್ಲಣಿ, ತೊಂದರೆ, ಕರ್ಣ ಪರ್ವ,23,9
349. ಘಲ್ಲಣೆ, ಭಯಂಕರಶಬ್ದ, ಆದಿ ಪರ್ವ,15,44
350. ಘಲ್ಲಣೆ, ಪ್ರತಾಪ, ಗದಾ ಪರ್ವ,1,54,
351. ಘಲ್ಲಣೆ, ಅಬ್ಬರ, ಅರಣ್ಯ ಪರ್ವ,11,13
352. ಘಲ್ಲಣೆ, ಕಷ್ಟ, ಸಭಾ ಪರ್ವ,14,120
353. ಘಲ್ಲಣೆ, ಕಾಟ, ಸಭಾ ಪರ್ವ,2,15
354. ಘಲ್ಲಣೆ, ಘಲ್ ಎಂಬ ಶಬ್ದ, ಕರ್ಣ ಪರ್ವ,19,15
355. ಘಲ್ಲಣೆ, ಘಲ್‍ಘಲ್ ಶಬ್ದ, ಕರ್ಣ ಪರ್ವ,3,7
356. ಘಲ್ಲಣೆ, ಘಟ್ಟಿಸು, ಶಲ್ಯ ಪರ್ವ,2,34
357. ಘಲ್ಲಣೆ, ಘೋಷಣೆ, ಭೀಷ್ಮ ಪರ್ವ,7,2
358. ಘಸಣಿ, ಕಷ್ಟ., ಕರ್ಣ ಪರ್ವ,6,30
359. ಘಳಿ, (ಇದಕ್ಕೆ ಕನ್ನಡ ಕನ್ನಡ ನಿಘಂಟಿನಲ್ಲಿ ಕೊಟ್ಟಿರುವ ಅರ್ಥ ಸರಿಹೊಂದಿವುದಿಲ್ಲ. ಕೃಷ್ಣ ಜೋಯಿಸರ ವಿರಾಟಪರ್ವದಲ್ಲಿ ಪಳಿಯನುಟ್ಟನು ಎಂಬ ಪಾಠವಿದೆ. ಪಳಿ ಎಂದರೆ ವಸ್ತ್ರ ಈ ಪಾಠವನ್ನು ಸ್ವೀಕರಿಸಬಹುದು), ವಿರಾಟ ಪರ್ವ,3,79)
360. ಘಳಿಗೆ ವಟ್ಟಲು, ಮುಹೂರ್ತ ತಿಳಿಸುವ ನೀರಿನ ಪಾತ್ರೆ, ವಿರಾಟ ಪರ್ವ,10,77
361. ಘಳಿಗೆವಟ್ಟಲ, ಗಳಿಗೆ ಬಟ್ಟಲು (ಗಳಿಗೆಯನ್ನು ಗೊತ್ತು ಮಾಡುವ ಸಾಧನ), ಆದಿ ಪರ್ವ,7,21
362. ಘಳಿಲನೆ, ಅನುಕರಣ ಶಬ್ದ, ಗದಾ ಪರ್ವ,7,19
363. ಘಳಿಲನೆ, ಕೂಡಲೆ, ಉದ್ಯೋಗ ಪರ್ವ,8,37
364. ಘಳಿಲನೆ, ತಕ್ಷಣ, ಗದಾ ಪರ್ವ,9,29
365. ಘಾಟ, ತೀವ್ರತೆ, ಆದಿ ಪರ್ವ,13,45
366. ಘಾಡದ, ತೀವ್ರವಾದ, ದ್ರೋಣ ಪರ್ವ,2,67
367. ಘಾಡಿಕೆ, ಸಾಂದ್ರತೆ, ದ್ರೋಣ ಪರ್ವ,3,34
368. ಘಾಡಿಸಿತು, ಬಲವಂತವಾಗಿ ಪ್ರವೇಶಿಸಿತು, ಗದಾ ಪರ್ವ,4,13
369. ಘಾಡಿಸು, ಮೇಲೆಬೀಳು, ಗದಾ ಪರ್ವ,7,16
370. ಘಾಡಿಸುವ, ವ್ಯಾಪಿಸುವ, ಕರ್ಣ ಪರ್ವ,10,23
371. ಘಾತಕ, ಆಘಾತಕರ, ಗದಾ ಪರ್ವ,11,57
372. ಘಾತಕ, ಕೊಲೆಗಾರ, ಭೀಷ್ಮ ಪರ್ವ,3,28
373. ಘಾತಕ, ದ್ರೋಹಿ, ಉದ್ಯೋಗ ಪರ್ವ,4,41
374. ಘಾತಕತನ, ಸಾಹಸವನ್ನು, ಭೀಷ್ಮ ಪರ್ವ,3,92
375. ಘಾತಕರು, ಕೊಲೆಗಾರರು, ಭೀಷ್ಮ ಪರ್ವ,7,29
376. ಘಾತಾಳಿ, ದುಷ್ಟ ಹೆಂಗಸು, ಅರಣ್ಯ ಪರ್ವ,18,11
377. ಘಾತಾಳೆ, ವಂಚಕಿ, ಆದಿ ಪರ್ವ,13,29
378. ಘಾತಿಸಿತು, ನಾಶಮಾಡಿತು, ಆದಿ ಪರ್ವ,13,1
379. ಘಾಯಘಾತಿ, ಏಟುಬಿದ್ದು ಘಾಯವಾದ ಸ್ಥಳ., ಗದಾ ಪರ್ವ,7,19
380. ಘಾಯಘಾತಿ, ಗಾಯವುಂಟುಮಾಡುವ ಹೊಡೆತ, ಗದಾ ಪರ್ವ,6,29
381. ಘಾರಾಘಾರಿ, ಆವೇಶ, ಕರ್ಣ ಪರ್ವ,17,30
382. ಘಾಸಿಯಾದರು, ಗಾಯಗೊಂಡರು, ಭೀಷ್ಮ ಪರ್ವ,6,16
383. ಘಾಸಿಯಾದೆನು, ಏಟನ್ನು ತಿಂದಿದ್ದೇನೆ, ದ್ರೋಣ ಪರ್ವ,1,8
384. ಘುಸೃಣ, ಕುಂಕುಮಕೇಸರಿ, ಕರ್ಣ ಪರ್ವ,6,15
385. ಘೃತಯೋನಿ, ಅಗ್ನಿ (ತುಪ್ಪವು ಉತ್ಪತ್ತಿ ಸ್ಥಾನವಾಗಿರುವವನು), ಆದಿ ಪರ್ವ,20,19
386. ಘೋಟಕವ್ರಾತ, ಕುದುರೆ ಗುಂಪು, ಭೀಷ್ಮ ಪರ್ವ,4,56
387. ಘೋಷಣೆ, ಸದ್ದು, ಆದಿ ಪರ್ವ,14,8
388. ಘೋಳ ಘೋಷ, ಘನ ಘರ್ಜನೆ, ಭೀಷ್ಮ ಪರ್ವ,6,9
389. ಘೋಳಾ ಘೋಳಿ, ಗೊಂದಲ , ಅರಣ್ಯ ಪರ್ವ,5,17
390. ಘೋಳಿಸು, ಚನ್ನಾಗಿ ಕಲಸು ಆಭೀಳ, ಗದಾ ಪರ್ವ,5,42
@@@@@@@@@@@@@@@@@@@@@
[೧][೨][೩]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ