<ಗದುಗಿನ ಭಾರತ ಪದಕೋಶ

ಸಂಪಾದಿಸಿ

1. ನಂಜು, ವಿಷ., ಉದ್ಯೋಗ ಪರ್ವ,8,51
2. ನಂದನ, ವನ, ಅರಣ್ಯ ಪರ್ವ,3,12
3. ನಂದನ, ತೋಟ, ವಿರಾಟ ಪರ್ವ,1,12
4. ನಂದನ, ದೇವೇಂದ್ರನ ತೋಟ, ಆದಿ ಪರ್ವ,20,65
5. ನಂದಿಸು, ಶಾಂತಪಡಿಸು, ಆದಿ ಪರ್ವ,11,36
6. ನಂಬಿಸುವುದು, ನಂಬಿಕೆ ಹುಟ್ಟಿಸುವುದು, ಗದಾ ಪರ್ವ,11,50
7. ನಕುಲ, ಸಹದೇವರು, ಗದಾ ಪರ್ವ,7,40
8. ನಖದೀಧಿತಿ, ಉಗುರಿನ ಕಾಂತಿ, ಭೀಷ್ಮ ಪರ್ವ,3,65
9. ನಖನಿಕರ, ಉಗುರುಗಳ ಸಮೂಹ, ಗದಾ ಪರ್ವ,11,67
10. ನಖಾಳಿ, ಉಗುರುಗಳ ಗುಂಪು, ಆದಿ ಪರ್ವ,4,6
11. ನಗೆಯ ಸುರಿದೈ, ನಗೆ ಉಂಟು ಮಾಡಿದೆ, ಭೀಷ್ಮ ಪರ್ವ,1,35
12. ನಚ್ಚಿ, ನಂಬಿ, ಭೀಷ್ಮ ಪರ್ವ,3,31
13. ನಚ್ಚಿದ, ಗಾಢಭಕ್ತಿಯುಳ್ಳ, ಭೀಷ್ಮ ಪರ್ವ,6,46
14. ನಟ್ಟಡವಿ, ಕಾಡಿನ ಮಧ್ಯಭಾಗ, ಆದಿ ಪರ್ವ,16,47
15. ನಟ್ಟವಿಗ, ನೃತ್ಯಪಟು, ಅರಣ್ಯ ಪರ್ವ,19,33
16. ನಟ್ಟವಿಗ, ನರ್ತಕ, ಆದಿ ಪರ್ವ,12,19
17. ನಟ್ಟುವಿಗ, ನಾಟ್ಯಾಚಾರ್ಯ, ಆದಿ ಪರ್ವ,15,15
18. ನಡಪಾಡು, ನಡೆದಾಡು, ಗದಾ ಪರ್ವ,10,22
19. ನಡವಳಿ, ವರ್ತನೆ., ಉದ್ಯೋಗ ಪರ್ವ,4,99
20. ನಡು, ಅಲಗು, ಆದಿ ಪರ್ವ,8,28
21. ನಡು ದಾರಿಯಲಿ, ಮಾರ್ಗಮಧ್ಯದಲ್ಲಿ, ಸಭಾ ಪರ್ವ,3,61
22. ನಡುನೆಲೆ, ? ಎಡಕಡೆಯಲಿ, ಸಭಾ ಪರ್ವ,3,48
23. ನಡುವಾಯಿ, ನಡುವೆ ಪ್ರವೇಶಿಸುವವನು, ಗದಾ ಪರ್ವ,8,39
24. ನಡೆ, ಜರುಗು, ಆದಿ ಪರ್ವ,19,37
25. ನಡೆಗೋಟೆ, ಸೈನಿಕರ ಕೋಟೆ, ಭೀಷ್ಮ ಪರ್ವ,4,26
26. ನಡೆತಂದನೊಲವಿನಲಿ, ಸಂತೋಷದಿಂದ, ಸಭಾ ಪರ್ವ,5,26
27. ನಡೆದ ಪರಿಯನು, ಏನೇನು ಹೇಗೆ ನಡೆಯಿತು ಎಂಬುದನ್ನು, ಸಭಾ ಪರ್ವ,3,3
28. ನಡೆದು, ದಿಗ್ವಿಜಯಕ್ಕೆ ಹೊರಟು, ಸಭಾ ಪರ್ವ,4,0
29. ನಡೆವಳಿ, ಯುದ್ಧ ವ್ಯಾಪಾರ, ಭೀಷ್ಮ ಪರ್ವ,1,41
30. ನದ, ಗಂಡುನದಿ, ಅರಣ್ಯ ಪರ್ವ,7,3
31. ನದಿಯನಂದನ, ಗಂಗೆಯಮಗ, ಗದಾ ಪರ್ವ,13,13
32. ನನೆ, ನೆನೆದ, ಕರ್ಣ ಪರ್ವ,3,26
33. ನನೆಕೊನೆ, ಹಿಗ್ಗು , ಅರಣ್ಯ ಪರ್ವ,4,42
34. ನನೆಕೊನೆವೋಗು, ಚಿಗುರು(ನನೆ, ಶಲ್ಯ ಪರ್ವ,1,25
35. ನನೆದ, ಮೆತ್ತಿದ, ಗದಾ ಪರ್ವ,12,15
36. ನನೆದು, ಒದ್ದೆಯಾಗಿ, ಉದ್ಯೋಗ ಪರ್ವ,8,8
37. ನನೆದುದು, ಕರಗಿತು, ಭೀಷ್ಮ ಪರ್ವ,7,24
38. ನನೆಯಂಬು, ಹೂವಿನ ಬಾಣ , ಅರಣ್ಯ ಪರ್ವ,8,35
39. ನಪುಂಸಕ, ಪೌರುಷ ಹೀನ, ಭೀಷ್ಮ ಪರ್ವ,8,67
40. ನಮಿತ, ನಮಸ್ಕರಿಸಿದ, ಗದಾ ಪರ್ವ,13,14
41. ನಮ್ಮಲಿ ನಿರ್ಮಿಸಲು, À, ಭೀಷ್ಮ ಪರ್ವ,3,53
42. ನಮ್ಮೊಳುವೆರಸಿ, (ನಮ್ಮೊಳು+ಬೆರಸಿ) ನಮ್ಮೊಳಗೆ ಸೇರಿ, ಗದಾ ಪರ್ವ,11,73
43. ನಯ, ನೀತಿ, ಉದ್ಯೋಗ ಪರ್ವ,1,32
44. ನಯ, ನೀತಿ., ಉದ್ಯೋಗ ಪರ್ವ,9,2
45. ನಯ, ಮೃದುತ್ವ , ಗದಾ ಪರ್ವ,11,70
46. ನಯ, ಯೋಗ್ಯ ಸಲಹೆ, ಭೀಷ್ಮ ಪರ್ವ,1,25
47. ನಯನಾಂಬು, ಕಣ್ಣೀರು (ಅಂಬು, ಗದಾ ಪರ್ವ,11,15
48. ನಯನಾಗ್ನಿ, ಅಗ್ನಿ ನಯನ, ಭೀಷ್ಮ ಪರ್ವ,7,32
49. ನಯನುಡಿ, ಯೋಗ್ಯ ಮಾತು, ಆದಿ ಪರ್ವ,8,44
50. ನಯನೋದಕ, (ನಯನ+ಉದಕ), ಗದಾ ಪರ್ವ,11,46
51. ನಯನೋದ್ಭವ, ಕಣ್ಣಿನಿಂದ ಹುಟ್ಟಿದ, ಗದಾ ಪರ್ವ,11,29
52. ನಯವಿದ, ನೀತಿಯನ್ನು ಬಲ್ಲವನು, ಅರಣ್ಯ ಪರ್ವ,14,44
53. ನಯವಿದ, ನೀತಿಜ್ಞ, ದ್ರೋಣ ಪರ್ವ,2,12
54. ನಯಸರ, ಮಧುರ, ಆದಿ ಪರ್ವ,13,26
55. ನಯಸರ, ಇಂಪಾದ ದನಿ, ಆದಿ ಪರ್ವ,5,7
56. ನಯಾವಿಳ, ಕುತಂತ್ರಿ, ಉದ್ಯೋಗ ಪರ್ವ,8,48
57. ನರ, ಮಾನವ , ಅರಣ್ಯ ಪರ್ವ,8,21
58. ನರಕಕರ್ಮ, ಪಾಪಕರ್ಮ, ಭೀಷ್ಮ ಪರ್ವ,3,29
59. ನರಕೇಸರಿ, ನರಸಿಂಹ, ಗದಾ ಪರ್ವ,5,7
60. ನರನ, ಅರ್ಜುನನ, ದ್ರೋಣ ಪರ್ವ,3,47
61. ನರನಮಗ, ಅಭಿಮನ್ಯು, ದ್ರೋಣ ಪರ್ವ,3,21
62. ನರನಿಕಾಯ, (ಸೈನಿಕ) ಜನರ ಗುಂಪು, ವಿರಾಟ ಪರ್ವ,6,2
63. ನರಮೃಗ, ಹೀನಮಾನವ, ಭೀಷ್ಮ ಪರ್ವ,3,70
64. ನರವಿನ ತೊಡಕು, ನರಗಳ ಸಿಕ್ಕು., ಗದಾ ಪರ್ವ,12,7
65. ನರಹುಳುಗಳು, ಹುಳದಂತೆ ಶಕ್ತಿ ಹೀನರಾದ ಮನುಷ್ಯರು, ದ್ರೋಣ ಪರ್ವ,2,43
66. ನರುಕಿದ, ಜಗ್ಗಿದ, ಭೀಷ್ಮ ಪರ್ವ,1,35
67. ನರೆ, ಬಿಳಿಕೂದಲು, ಸಭಾ ಪರ್ವ,1,73
68. ನರೆತ, ಬಿಳುಪಾದ, ಭೀಷ್ಮ ಪರ್ವ,1,35
69. ನವಖಂಡಾಯಮಾನ, ಛಿದ್ರಛಿದ್ರ, ಗದಾ ಪರ್ವ,9,39
70. ನವಮಧೇಭ, ಮದ್ದಾನೆಗಳು, ಭೀಷ್ಮ ಪರ್ವ,4,79
71. ನವರುಧಿರ, ಬಿಸಿರಕ್ತ, ಭೀಷ್ಮ ಪರ್ವ,4,67
72. ನವಶಾಂತಕುಂಭ, ಹೊಸ ಹೊನ್ನಿನ, ಭೀಷ್ಮ ಪರ್ವ,4,96
73. ನವಶಾತಕುಂಭ, ನವೀನ ಚಿನ್ನದ, ಭೀಷ್ಮ ಪರ್ವ,2,18
74. ನವಾಯಿ, ನಾವೀನ್ಯತೆ, ಆದಿ ಪರ್ವ,12,18
75. ನವಾಯಿ, ಹೊಸತನ, ಕರ್ಣ ಪರ್ವ,4,39
76. ನವಾಯಿಕಾರರು, ವಿಲಾಸಿಗಳು, ಆದಿ ಪರ್ವ,13,45
77. ನವಾಯಿಯಲಿ, ಹೊಸರೀತಿಯಿಂದ, ಸಭಾ ಪರ್ವ,8,8
78. ನವಿರು, ಕೂದಲು, ವಿರಾಟ ಪರ್ವ,6,49
79. ನವೀನ, ಹೊಸದು, ಉದ್ಯೋಗ ಪರ್ವ,4,68
80. ನವೆ, ಕೃಶವಾಗು, ಆದಿ ಪರ್ವ,16,54
81. ನವೆದರು, ಸಂಕಟಪಟ್ಟರು. ಅಧ್ರುವ, ಉದ್ಯೋಗ ಪರ್ವ,9,1
82. ನಶ್ಯ, ಮೂಗಿಗೇರಿಸುವ ಔಷಧ ದ್ರವ್ಯ, ಭೀಷ್ಮ ಪರ್ವ,5,39
83. ನಸಿ, ಸೊರಗು, ಉದ್ಯೋಗ ಪರ್ವ,3,12
84. ನಸಿ, ಕೆಡು, ಉದ್ಯೋಗ ಪರ್ವ,3,90
85. ನಸಿದ, ಕೊರಗಿದ, ದ್ರೋಣ ಪರ್ವ,16,21
86. ನಸಿದವರು, ಸೊರಗಿದವರು, ಗದಾ ಪರ್ವ,1,66
87. ನಸಿದು, ಹಾಳಾಗಿ ಹೋಗು, ಆದಿ ಪರ್ವ,8,48
88. ನಸುಸೊಪ್ಪಾದುದು, ಬಲಗುಂದುವುದು, ಭೀಷ್ಮ ಪರ್ವ,7,22
89. ನಳಿತೋಳ್ಗಳು, ಕೋಮಲವಾದ ತೋಳ್ಗಳು, ಆದಿ ಪರ್ವ,13,12
90. ನಳಿದನು, ಕೆಳಕ್ಕೆ ಕುಸಿದನು, ಭೀಷ್ಮ ಪರ್ವ,4,0
91. ನಳಿನ ವೈರಿ, ತಾವರೆಯ ವೈರಿಯಾದ ಚಂದ್ರ, ವಿರಾಟ ಪರ್ವ,2,52
92. ನಳಿನಭವರು, ಬ್ರಹ್ಮರು, ಭೀಷ್ಮ ಪರ್ವ,6,39
93. ನಳಿನಮುಖಿ, ಕಮಲಮುಖಿ(ದ್ರೌಪದಿ), ವಿರಾಟ ಪರ್ವ,9,33
94. ನಳಿನಮುಖಿ, ತಾವರೆ ಮುಖದ ಸೈರಂಧ್ರಿ, ವಿರಾಟ ಪರ್ವ,3,103
95. ನಳಿನಮುಖಿ, ತಾವರೆಯ ಮುಖದªಳು, ವಿರಾಟ ಪರ್ವ,1,29
96. ನಳಿನಮುಖಿ, ತಾವರೆಯಂಥ ಮುಖವುಳ್ಳವಳು., ವಿರಾಟ ಪರ್ವ,2,8
97. ನಳಿನಾಭ, ಪದ್ಮನಾಭ , ಅರಣ್ಯ ಪರ್ವ,3,14
98. ನಾ ಸಾವಿರ, ನಾಲ್ಕು ಸಾವಿರ., ದ್ರೋಣ ಪರ್ವ,1,66
99. ನಾಂದೀಮುಖ, ನಾಂದೀಶ್ರಾದ್ಧ (ಶುಭಕಾರ್ಯಕ್ಕೆ ಮೊದಲು ಮಾಡುವ ನಾಂದೀಕರ್ಮದಲ್ಲಿ ಆವಾಹಿಸಲ್ಪಡುವ ಪಿತೃವರ್ಗ), ಆದಿ ಪರ್ವ,13,1
100. ನಾಕನಿಲಯ, ಸ್ವರ್ಗ ನಿವಾಸಿ, ಆದಿ ಪರ್ವ,4,65
101. ನಾಕನಿಳಯ, (ಸ್ವರ್ಗವೇ ಮನೆಯಾಗುಳ್ಳ) ದೇವತೆ, ವಿರಾಟ ಪರ್ವ,6,10
102. ನಾಕನಿಳಯರು, ಸ್ವರ್ಗವಾಸಿಗಳು, ಆದಿ ಪರ್ವ,20,45
103. ನಾಕಪತಿ, ಸ್ವರ್ಗದ ಒಡೆಯ , ಆದಿ ಪರ್ವ,13,48
104. ನಾಗನಗರಿ, ಹಸ್ತಿನಾಪುರಿ, ಆದಿ ಪರ್ವ,9,6
105. ನಾಗವಲ್ಲಿ, ವೀಳೆಯದೆಲೆ, ಉದ್ಯೋಗ ಪರ್ವ,3,59
106. ನಾಗಾಯತ, ಆನೆಯ ಬಲ, ಅರಣ್ಯ ಪರ್ವ,13,39
107. ನಾಗಾಯುತ, ಆನೆಗೆ ಸಮನಾದ, ಗದಾ ಪರ್ವ,5,47
108. ನಾಗಾಯುತದ ಬಲ, 10 ಸಾವಿರ ಆನೆಗಳ ಶಕ್ತಿ, ಸಭಾ ಪರ್ವ,2,93
109. ನಾಗಾರಿ, ನಗಾರಿ (ಮರಾಠಿ ಶಬ್ದ), ವಿರಾಟ ಪರ್ವ,4,28
110. ನಾಟ್ಯ ವ್ಯಾಕರಣ ಪಂಡಿತ, ಅಂದರೆ ನಾಟ್ಯದ ನಿಯಮಾವಳಿಯನ್ನು ಬಲ್ಲ ವಿದ್ವಾಂಸ. ಕಾಲು, ವಿರಾಟ ಪರ್ವ,9,23
111. ನಾಡಗಾವಳಿ, ನಾಡಿನ ಸಮಾನ್ಯ ಜನಸಮೂಹ, ಭೀಷ್ಮ ಪರ್ವ,1,3
112. ನಾಡಗಾವಳಿ, ಕೋಲಾಹಲದ ಮಂದಿ, ಭೀಷ್ಮ ಪರ್ವ,1,4
113. ನಾಡನಾಯಿ, ಊರನಾಯಿ/ಬೀದಿನಾಯಿ, ಉದ್ಯೋಗ ಪರ್ವ,3,8
114. ನಾಡಾಡಿ, ಸಾಮಾನ್ಯ ಮನುಷ್ಯ, ಕರ್ಣ ಪರ್ವ,24,3
115. ನಾಡಿ, ಪ್ರಾಣವಾಯುಸಂಚರಿಸುವ ನಾಳ, ಗದಾ ಪರ್ವ,7,47
116. ನಾದು, ನನÉಸು, ಗದಾ ಪರ್ವ,9,23
117. ನಾದು, ನೆನೆಯುವಂತೆ ಮಾಡು, ದ್ರೋಣ ಪರ್ವ,14,30
118. ನಾದುವೆನು, ತೀಡುತ್ತೇನೆ, ದ್ರೋಣ ಪರ್ವ,1,18
119. ನಾನಾವಿಧ, ಬಗೆ ಬಗೆಯ, ಸಭಾ ಪರ್ವ,5,18
120. ನಾಪಿತ, ಕ್ಷೌರಿಕ, ಉದ್ಯೋಗ ಪರ್ವ,3,46
121. ನಾಭಿದಘ್ನದಲಿ, ಹೊಕ್ಕಳವರೆಗೆ, ಸಭಾ ಪರ್ವ,12,38
122. ನಾಮದ ನಿರುಗೆ, ನಿನ್ನ ಹೆಸರಿನ ಅಸ್ತಿತ್ವ, ಭೀಷ್ಮ ಪರ್ವ,3,83
123. ನಾಯ ಹೆಸರಿಟ್ಟು, ಕುನ್ನಿ ಎಂದು ಹೀಗಳೆವ, ಭೀಷ್ಮ ಪರ್ವ,5,21
124. ನಾಯಕ ಮಿಹಿರಸುತ, ಸೂರ್ಯನ ಮಗ, ಶಲ್ಯ ಪರ್ವ,3,69
125. ನಾಯಕವನು, ಶ್ರೇಷ್ಠವಾದದ್ದನ್ನು, ಆದಿ ಪರ್ವ,16,6
126. ನಾಯಕಿತ್ತಿ, ನಾಯಕಿ , ದ್ರೋಣ ಪರ್ವ,1,63
127. ನಾಯಿ, ಸದಾ ಎಚ್ಚರಿಕೆ, ಉದ್ಯೋಗ ಪರ್ವ,3,109
128. ನಾರಕ, ನರಕ, ಉದ್ಯೋಗ ಪರ್ವ,1,28
129. ನಾರಾಚಿಸು, ಬಾಣಪ್ರಯೋಗಿಸು., ಶಲ್ಯ ಪರ್ವ,3,62
130. ನಾರಿ, ಬಿಲ್ಲಿನ ಹಗ್ಗ, ದ್ರೋಣ ಪರ್ವ,3,73
131. ನಾರಿ, ಹೆಂಗಸು (ಇಲ್ಲಿ ದ್ರೌಪದಿ) ಅಂತಸ್ತಾಪವಹ್ನಿ, ಗದಾ ಪರ್ವ,10,25
132. ನಾಲಗೆಯುಡುಗೆ, ನಾಲಗೆ ಸೇದಿಹೋಗಲು, ಭೀಷ್ಮ ಪರ್ವ,3,67
133. ನಾವೆಗಳಲಿ, ಹಡಗುಗಳಲ್ಲಿ, ಸಭಾ ಪರ್ವ,4,12
134. ನಾಸಾಚ್ಛೇದ, ಮೂಗುಕೊಯ್ಯುವುದು, ಶಲ್ಯ ಪರ್ವ,1,16
135. ನಾಸಾಪುಟ, ಮೂಗಿನ ಹೊಳ್ಳೆ, ಗದಾ ಪರ್ವ,9,17
136. ನಾಳ, ನರ, ಭೀಷ್ಮ ಪರ್ವ,8,18
137. ನಾಳಿಕೆ, ರಕ್ತನಾಳ, ಶಲ್ಯ ಪರ್ವ,3,16
138. ನಾಳಿಯಂಬು, ನಾಳಗಳಂತೆ ತೆಳುವಾದ ಬಾಣಗಳು., ಗದಾ ಪರ್ವ,1,54
139. ನಾಳಿವಿಲ್ಲು, ಬಿದಿರಿನ ಕೊಳವೆಯಾಕಾರದ ಬಿಲ್ಲು, ದ್ರೋಣ ಪರ್ವ,2,78
140. ನಿಂದಿರಿಕೆಯಲಿ, ನಿಂತಿರುವ ಸ್ಥಿತಿಯಲಿ, ಆದಿ ಪರ್ವ,9,2
141. ನಿಂದಿಸರಲೇ, ದೂಷಿಸುವುದಿಲ್ಲವಷ್ಟೆ ?, ಸಭಾ ಪರ್ವ,1,27
142. ನಿಕರ, ಗುಂಪು., ಉದ್ಯೋಗ ಪರ್ವ,8,17
143. ನಿಕಾಯ, ಸಮೂಹ , ಶಲ್ಯ ಪರ್ವ,2,11
144. ನಿಕಾಯ, ಸಮೂಹ, ಅರಣ್ಯ ಪರ್ವ,2,19
145. ನಿಕಾರ, ಒಂದು ಬಗೆಯ ವಸ್ತ್ರ, ಸಭಾ ಪರ್ವ,8,5
146. ನಿಕಾರಿ < ನಿಖಾರಿ, ಸ್ವಚ್ಛ ವಸ್ತ್ರ (<ಮರಾಠಿ ನಿಖಾರ್), ವಿರಾಟ ಪರ್ವ,8,75
147. ನಿಕ್ಷೇಪ, ಹಣ, ದ್ರೋಣ ಪರ್ವ,8,38
148. ನಿಖಿಳ, ಎಲ್ಲ, ಗದಾ ಪರ್ವ,5,57
149. ನಿಖಿಳ, ಎಲ್ಲ, ವಿರಾಟ ಪರ್ವ,5,44
150. ನಿಗಮ, ವೇದ., ಗದಾ ಪರ್ವ,9,22
151. ನಿಗಮೌಘ, ನಿಗಮ, ವಿರಾಟ ಪರ್ವ,10,52
152. ನಿಗಳ, ಮುಂಗೈ ಆಭರಣ, ದ್ರೋಣ ಪರ್ವ,4,34
153. ನಿಗುಚಿ, ಎಳೆದು, ಉದ್ಯೋಗ ಪರ್ವ,2,22
154. ನಿಗುಚು, ನೆಟ್ಟಗೆ ಮಾಡು, ವಿರಾಟ ಪರ್ವ,8,69
155. ನಿಗುಚು, ನಿಮಿರ್, ವಿರಾಟ ಪರ್ವ,6,61
156. ನಿಗುರು, ಮುಂದೆ ಸಾಗು (ಉದ್ದವಾಗು) ಜನಪ, ವಿರಾಟ ಪರ್ವ,7,30
157. ನಿಗುರು, ಮೇಲೇರು, ವಿರಾಟ ಪರ್ವ,6,62
158. ನಿಗುರು, ಚಾಚಿಕೊ, ವಿರಾಟ ಪರ್ವ,6,59
159. ನಿಗುರುವ, ನೆಗೆದು ಓಡುವ, ಭೀಷ್ಮ ಪರ್ವ,4,57
160. ನಿಗ್ಗಮ, ಆನೆಯ ಕೋರೆ, ದ್ರೋಣ ಪರ್ವ,10,25
161. ನಿಗ್ಗವದೊಳು, ದಂತದಲ್ಲಿ, ದ್ರೋಣ ಪರ್ವ,3,16
162. ನಿಗ್ಗು, ನಿಗ್ಗುವೆನು ನಿರ್ವಹಿಸುತ್ತೇನೆ, ವಿರಾಟ ಪರ್ವ,8,69
163. ನಿಚಯ, ರಾಶಿ/ಗುಂಪು, ಉದ್ಯೋಗ ಪರ್ವ,4,98
164. ನಿಚಿತ, ಸಂಗ್ರಹವಾದ , ಗದಾ ಪರ್ವ,12,2
165. ನಿಚ್ಚ, ನಿತ್ಯ, ಉದ್ಯೋಗ ಪರ್ವ,10,18
166. ನಿಚ್ಚಟ, ಪರಾಕ್ರಮ , ಗದಾ ಪರ್ವ,5,45, ,
167. ನಿಚ್ಚಟ, ಸ್ಥಿರಚಿತ್ತ, ಕರ್ಣ ಪರ್ವ,4,33
168. ನಿಚ್ಚಟದ, ದೃಢವಾದ, ಭೀಷ್ಮ ಪರ್ವ,6,46
169. ನಿಚ್ಚಟರು, ನಿಶ್ಚಲ ಪರಾಕ್ರಮಿಗಳು < ನಿಶ್ಚಟ, ವಿರಾಟ ಪರ್ವ,8,77
170. ನಿಚ್ಛಣಿಕೆ, ಏಣಿ, ಉದ್ಯೋಗ ಪರ್ವ,7,28
171. ನಿಜಮಾರ್ಗ, ನಿಮ್ಮದಾರಿ., ಗದಾ ಪರ್ವ,8,58
172. ನಿಜರಥ, ತನ್ನ ರÀಥ., ಗದಾ ಪರ್ವ,8,53
173. ನಿಜವ ಬೆರಸುವ ವಿಗಡ, ಸತ್ಯ ತಿಳಿದು ಸೇರುವ ಧೀರ, ಭೀಷ್ಮ ಪರ್ವ,3,57
174. ನಿಜವನು, ತನ್ನ ನಿಜಸ್ವರೂಪವನ್ನು, ಭೀಷ್ಮ ಪರ್ವ,3,0
175. ನಿಜಾಗ್ರಜೆ, ನಿಜ, ವಿರಾಟ ಪರ್ವ,2,39
176. ನಿಜಾಪಘನ, ಸ್ವಂತ ದೇಹ , ಗದಾ ಪರ್ವ,1,26
177. ನಿಜ್ಜೋಡು, ಸರಿಯಾಗಿ ಹೊಂದಿಕೊಳ್ಳುವಿಕೆ, ವಿರಾಟ ಪರ್ವ,6,48
178. ನಿಟಿಲನಯನ, ಹಣೆಗಣ್ಣ ಈಶ್ವರ, ಅರಣ್ಯ ಪರ್ವ,6,82
179. ನಿಟಿಲನೇತ್ರ, ಹಣೆಗಣ್ಣಿನ ಶಿವ, ಭೀಷ್ಮ ಪರ್ವ,9,32
180. ನಿಟ್ಟಾಸು, ಸಾಲವೃಕ್ಷದಂತೆ ಉದ್ದವಾದ (?), ಶಲ್ಯ ಪರ್ವ,3,10
181. ನಿಟ್ಟುವರಿ, ಗುರಿ ಮುಟ್ಟಲು, ದ್ರೋಣ ಪರ್ವ,1,51
182. ನಿಟ್ಟೆಲು, ಬೆನ್ನುಮೂಳೆ, ಸಭಾ ಪರ್ವ,14,91
183. ನಿಟ್ಟೆಸಳು, ವಿಶಾಲ ಹೂವಿನದಳ, ಆದಿ ಪರ್ವ,15,36
184. ನಿಟ್ಟೆಸುಳು, ಉದ್ದನೆ ಎಸಳಿನಂಥ, ಭೀಷ್ಮ ಪರ್ವ,3,76
185. ನಿಟ್ಟೊರಸು, ಒರಸಿಹಾಕು, ವಿರಾಟ ಪರ್ವ,3,102
186. ನಿಟ್ಟೋಟ, ನಿಡಿದು+ಓಟ, ವಿರಾಟ ಪರ್ವ,6,12
187. ನಿಡುಕೇಶ, ಉದ್ದನೆಯ ತಲೆಗೂದಲು, ವಿರಾಟ ಪರ್ವ,1,33
188. ನಿಡುತೋಳು, ಉದ್ದನೆತೋಳು, ಭೀಷ್ಮ ಪರ್ವ,3,72
189. ನಿಡುನಿದ್ರೆ, ಮಹಾನಿದ್ರೆ, ದ್ರೋಣ ಪರ್ವ,3,9
190. ನಿಡುನಿದ್ರೆಗೈಸಿ, ಕೊಂದುಹಾಕಿ, ಗದಾ ಪರ್ವ,9,27
191. ನಿಡುಪಚ್ಚಳ, ದೊಡ್ಡದಾದ ಪಿರ್ರೆ, ದ್ರೋಣ ಪರ್ವ,3,74
192. ನಿಡುವಕ್ಕರಿಕೆ, ಉದ್ದವಾದ ಪಕ್ಕರೆಕ್ಕೆ, ಭೀಷ್ಮ ಪರ್ವ,4,54
193. ನಿಡುವರಿಯ, ವ್ಯಾಪಕವಾಗಿ, ದ್ರೋಣ ಪರ್ವ,2,68
194. ನಿಡುಸರ, ಗಟ್ಟಿಸ್ವರ, ಗದಾ ಪರ್ವ,8,56
195. ನಿದಾಘ, ಬೇಸಗೆ, ವಿರಾಟ ಪರ್ವ,8,4
196. ನಿದಾಘ, ಬೇಗೆ, ಆದಿ ಪರ್ವ,17,3
197. ನಿದಾಘ, ಕಾವು, ಅರಣ್ಯ ಪರ್ವ,5,12
198. ನಿದಾನ, ಸೂಕ್ತ ಸಲಹೆ, ಭೀಷ್ಮ ಪರ್ವ,2,29
199. ನಿದಾನಿಸು, ಆಲೋಚಿಸು, ಶಲ್ಯ ಪರ್ವ,1,29
200. ನಿದ್ರಾ ವ್ಯಸನ, ನಿದ್ರಾಭಾರದಿಂದ, ವಿರಾಟ ಪರ್ವ,8,82
201. ನಿದ್ರಾಕುಳರು, ನಿದ್ರೆಯಲ್ಲಿದ್ದವರು, ಗದಾ ಪರ್ವ,9,37
202. ನಿದ್ರಾಮದ, ನಿದ್ರೆ¬, ಗದಾ ಪರ್ವ,9,6
203. ನಿದ್ರಾಮಾನ, ನಿದ್ರೆ ಎಂಬ ಅಳತೆ (ಮೌಲ್ಯ), ವಿರಾಟ ಪರ್ವ,8,87
204. ನಿದ್ರಾಮುದ್ರಿತೇಕ್ಷಣರು, ನಿದ್ರೆಯಿಂದ ಬಿಗಿಯಾಗಿ ಕಣ್ಣು ಮುಚ್ಚಿದ್ದವರು, ಗದಾ ಪರ್ವ,9,6
205. ವಾರಿಜಭವಾಂಡ, ಬ್ರಹ್ಮಾಂಡ (ವಾರಿಜ, ಶಲ್ಯ ಪರ್ವ,2,60
206. ನಿಧಾನ, ಸಾವಕಾಶ, ಆದಿ ಪರ್ವ,10,35
207. ನಿಧಾನ, ವಿಚಾರ, ಗದಾ ಪರ್ವ,11,11
208. ನಿಧಾನ, ನಿಶ್ಚಿತ, ದ್ರೋಣ ಪರ್ವ,11,2
209. ನಿಧಾನ, ನಿಜ, ಉದ್ಯೋಗ ಪರ್ವ,10,7
210. ನಿಧಾನ, ಅಭಿಪ್ರಾಯ ಅಲೋಚನೆ., ಉದ್ಯೋಗ ಪರ್ವ,7,3
211. ನಿಧಾನ, ಐಶ್ವರ್ಯ , ಶಲ್ಯ ಪರ್ವ,1,12
212. ನಿಧಾನಿಸು, ಆಲೋಚಿಸು, ಗದಾ ಪರ್ವ,9,3
213. ನಿಧಾನಿಸೆ, ವಿಚಾರಿಸಲು, ಉದ್ಯೋಗ ಪರ್ವ,8,70
214. ನಿಧಿಧ್ಯಾಸನ, ಏಕಾಗ್ರತೆ, ಅರಣ್ಯ ಪರ್ವ,15,16
215. ನಿನಗೆ ಅಹಳ್ ಅಲ್ಲ, ವಶವಾಗುವಂಥವಳಲ್ಲ, ವಿರಾಟ ಪರ್ವ,2,14
216. ನಿನಗೆ ಬಾಂಧವರು, ನಿನಗೂ ನೆಂಟರು, ಸಭಾ ಪರ್ವ,3,64
217. ನಿನ್ನ ಬೇರನು ಕಿತ್ತು, ಕೊಂದು (ಸಮೂಲವಾಗಿ ಉತ್ಪಾಟಿಸುವುದು) ವಂಶವನ್ನು ಕಿತ್ತು., ವಿರಾಟ ಪರ್ವ,8,17
218. ನಿನ್ನವಂದಿಗರು, ನಿನ್ನಂತಹವರು, ದ್ರೋಣ ಪರ್ವ,1,28
219. ನಿನ್ನವಂದಿಗರು, ನಿನ್ನಂಥ (ವೀರರು), ವಿರಾಟ ಪರ್ವ,3,42
220. ನಿಪ್ಪಸರ, ನಿಷ್ಠುರ, ಕರ್ಣ ಪರ್ವ,23,44
221. ನಿಪ್ಪಸರ, ನಿಷ್ಠುರ (ನಿರ್ದಯೆ), ಭೀಷ್ಮ ಪರ್ವ,4,70
222. ನಿಪ್ಪಸರ, ನಿಷ್ಠುರತೆ, ಗದಾ ಪರ್ವ,7,36, ,
223. ನಿಪ್ಪಸರ, ಕ್ರೂರ, ಕರ್ಣ ಪರ್ವ,19,20
224. ನಿಪ್ಪಸರದಲಿ, ಕ್ರೌರ್ಯದಿಂದ, ದ್ರೋಣ ಪರ್ವ,6,40
225. ನಿಬದ್ಧ ಪ್ರಲಾಪ, ಆವರಿಸಿದ ದುಃಖ, ಭೀಷ್ಮ ಪರ್ವ,2,22
226. ನಿಬರ್ಹಣ, ಸಂಹಾರ, ಗದಾ ಪರ್ವ,7,43
227. ನಿಬ್ಬರ, ಅತಿಶಯÉ, ವಿರಾಟ ಪರ್ವ,8,50
228. ನಿಬ್ಬರ, ಅತಿವೇಗ, ಶಲ್ಯ ಪರ್ವ,2,21
229. ನಿಬ್ಬರ, ಕಳವಳ, ಗದಾ ಪರ್ವ,4,6
230. ನಿಬ್ಬರದ, ಅತಿಶಯವಾದ, ಸಭಾ ಪರ್ವ,2,3
231. ನಿಬ್ಬರವಾಗಿ, ಬೆರಗಾಗುವಂತೆ, ದ್ರೋಣ ಪರ್ವ,2,68
232. ನಿಭ, ಸಮಾನನಾದವನು, ಉದ್ಯೋಗ ಪರ್ವ,3,79
233. ನಿಭಾರಿ, ಸೊಂಟದ ಪಟ್ಟಿ, ಕರ್ಣ ಪರ್ವ,8,17
234. ನಿಭೃತ, ತುಂಬಿದ ಆವರಸಿದ, ಗದಾ ಪರ್ವ,3,31
235. ನಿಮಿತ್ತ, ಉದ್ದೇಶ, ಉದ್ಯೋಗ ಪರ್ವ,4,87
236. ನಿಮಿತ್ತ, ಕಾರಣದಿಂದ, ವಿರಾಟ ಪರ್ವ,1,18
237. ನಿಮಿರು, ನೆಟ್ಟಗಾಗು, ಆದಿ ಪರ್ವ,15,35
238. ನಿಮ್ಮ ಸೊಮ್ಮಿನವರು, ಹಿಂದೆ ಶ್ರೀಮಂತರು ಹಣವನ್ನು ಕೊಟ್ಟು ಜೀತಕ್ಕೆ ಇಟ್ಟುಕೊಳ್ಳುತ್ತಿದ್ದರು. ಅವರನ್ನು ಸೊಮ್ಮಿನವರು ಎನ್ನಲಾಗುತ್ತಿತ್ತು ?, ವಿರಾಟ ಪರ್ವ,8,53
239. ನಿಮ್ಮಡಿ, ನೀವು (ಗೌರವದಿಂದ ಹೇಳುವ ಮಾತು), ಗದಾ ಪರ್ವ,4,54
240. ನಿಮ್ಮಡಿ, ನಿಮ್ಮ ಪಾದಗಳು 'ನೀವು' ಎಂಬುದನ್ನು ಗೌರವವಾಗಿ ಹೇಳುವ ಕ್ರಮ, ಗದಾ ಪರ್ವ,10,10
241. ನಿಮ್ಮಡಿ, ತಾವು, ವಿರಾಟ ಪರ್ವ,10,28
242. ನಿಮ್ಮುವನು, ನಿಮ್ಮನ್ನು (ನಿಮ್ಮ ಎಂಬುದರ ನಡುಗನ್ನಡ ರೂಪ), ವಿರಾಟ ಪರ್ವ,1,8
243. ನಿಯತ, ಗೊತ್ತುಪಡಿಸಿದ, ಉದ್ಯೋಗ ಪರ್ವ,2,6
244. ನಿಯಾಮಿಸು, ನೇಮಿಸು, ವಿರಾಟ ಪರ್ವ,9,4
245. ನಿಯುದ್ಧ, ಬಾಹುಯುದ್ಧ, ಕರ್ಣ ಪರ್ವ,19,49
246. ನಿಯುದ್ಧ, ಮಲ್ಲಯುದ್ಧ, ಕರ್ಣ ಪರ್ವ,19,39
247. ನಿಯೋಗ, ವ್ಯವಸ್ಥೆ, ವಿರಾಟ ಪರ್ವ,7,28
248. ನಿಯೋಗಿ, ಅಧಿಕಾರಿ, ಅರಣ್ಯ ಪರ್ವ,9,32
249. ನಿರಂಜನತತ್ವ, ಪರಮಾತ್ಮ ತತ್ವ, ಭೀಷ್ಮ ಪರ್ವ,3,68
250. ನಿರಂತರ, ಸದಾ, ವಿರಾಟ ಪರ್ವ,10,40
251. ನಿರಂತರಾಯ, ನಿರ್ವಿಘ್ನ, ವಿರಾಟ ಪರ್ವ,10,28
252. ನಿರಂತರಾಯದಲಿ, ಸತತವಾಗಿ, ಅರಣ್ಯ ಪರ್ವ,8,43
253. ನಿರಂತರಾಯದಲಿ, ಅಡ್ಡಿಯಿಲ್ಲದೆ, ಸಭಾ ಪರ್ವ,2,20
254. ನಿರತಿಶಯ, ಅತಿ ಉತ್ತಮ, ಆದಿ ಪರ್ವ,7,22
255. ನಿರತಿಶಯ, ಹೆಚ್ಚಿನದು, ಉದ್ಯೋಗ ಪರ್ವ,4,43
256. ನಿರರ್ಥಕ, ಪ್ರಯೋಜನವಿಲ್ಲದ, ಗದಾ ಪರ್ವ,3,29
257. ನಿರರ್ಥಕರು, ಕೆಲಸಕ್ಕೆ ಬಾರದವರು, ಗದಾ ಪರ್ವ,2,27
258. ನಿರಾಕುಲ, ಕ್ಲೇಶವಿಲ್ಲದ, ಆದಿ ಪರ್ವ,9,8
259. ನಿರಿ, ಸುಕ್ಕು, ಕರ್ಣ ಪರ್ವ,22,45
260. ನಿರಿ, ರಾಸಿ, ದ್ರೋಣ ಪರ್ವ,12,31
261. ನಿರಿ ಕರುಳು, ಸುರುಳಿ ಕರುಳು, ಭೀಷ್ಮ ಪರ್ವ,5,39
262. ನಿರಿಗರುಳು, ನಿರಿಗೆ ನಿರಿಗೆಯಾಗಿದ್ದ ಕರುಳು, ಗದಾ ಪರ್ವ,3,8
263. ನಿರಿಗುರುಳು, ಚೆಲುವಾದ ಗುಂಗುರು ಕೂದಲು, ಆದಿ ಪರ್ವ,13,18
264. ನಿರಿಗೆ, ಭಂಗಿ, ದ್ರೋಣ ಪರ್ವ,8,14
265. ನಿರಿಗೆ, ಪ್ರದರ್ಶನ , ವಿರಾಟ ಪರ್ವ,2,12, ,
266. ನಿರಿದಲೆ, ಗುಂಗುರು ಕೂದಲಿನ ತಲೆ, ಆದಿ ಪರ್ವ,13,30
267. ನಿರಿನಿಟಿಲು, ಇದು ಅನುಕರಣ ಶಬ್ದ, ವಿರಾಟ ಪರ್ವ,7,37
268. ನಿರಿಯಣ, ಅಂತ್ಯ., ಉದ್ಯೋಗ ಪರ್ವ,4,86
269. ನಿರುತ, ಸತ್ಯಸ್ಥಿತಿ, ಭೀಷ್ಮ ಪರ್ವ,3,56
270. ನಿರುತ, ಸದಾ, ಉದ್ಯೋಗ ಪರ್ವ,4,79
271. ನಿರುತ, ದಿಟ , ವಿರಾಟ ಪರ್ವ,6,56
272. ನಿರುತ, ದಿಟ/ಸತ್ಯ, ಉದ್ಯೋಗ ಪರ್ವ,11,18
273. ನಿರುತ, ನಿಜ, ಆದಿ ಪರ್ವ,19,46
274. ನಿರುತಿ, ನೈರುತ್ಯಾಸ್ತ್ರ, ವಿರಾಟ ಪರ್ವ,8,60
275. ನಿರುಪಮ, ಸಾಟಿಯಿಲ್ಲದ, ಆದಿ ಪರ್ವ,4,25
276. ನಿರುಪಮ, ಹೋಲಿಸಲಾರದ, ಅರಣ್ಯ ಪರ್ವ,6,68
277. ನಿರುಹರಣ, ವಿಮೋಚನೆ, ಅರಣ್ಯ ಪರ್ವ,16,35
278. ನಿರೂಢಿ, ಪ್ರಸಿದ್ಧಿ, ಅರಣ್ಯ ಪರ್ವ,14,42
279. ನಿರೂಢಿ, ಪ್ರಸಿದ್ಧಿ. ಖ್ಯಾತಿ, ದ್ರೋಣ ಪರ್ವ,2,2
280. ನಿರೂಢಿ, ಕಾರ್ಯ , ಅರಣ್ಯ ಪರ್ವ,1,10
281. ನಿರೂಢಿಯ, ಅಭ್ಯಾಸಗೈದ, ದ್ರೋಣ ಪರ್ವ,1,45
282. ನಿರ್ಗತ, ಹೊರಬಿದ್ದ, ಭೀಷ್ಮ ಪರ್ವ,3,3
283. ನಿರ್ಗತ, ಹೊರಟ, ಆದಿ ಪರ್ವ,12,2
284. ನಿರ್ಗುಣ, ತಿರುವು ಇಲ್ಲದ್ದು, ಸಭಾ ಪರ್ವ,3,10
285. ನಿರ್ಘಾತ, ಪೆಟ್ಟು, ಗದಾ ಪರ್ವ,8,3
286. ನಿರ್ಘೋಷ, ಭಾರಿಧ್ವನಿ, ದ್ರೋಣ ಪರ್ವ,2,68
287. ನಿರ್ಘೋಷ, ದೊಡ್ಡಶಬ್ದ, ಆದಿ ಪರ್ವ,13,1
288. ನಿರ್ಘೋಷ, ಜೋರಾದ ಶಬ್ದ., ಗದಾ ಪರ್ವ,4,59
289. ನಿರ್ಜರ, ಮುಪ್ಪಿಲ್ಲದ , ಗದಾ ಪರ್ವ,11,49
290. ನಿರ್ಜರ, ದೇವತೆಗಳ, ಗದಾ ಪರ್ವ,8,15
291. ನಿರ್ಜರ < ನಿರ್ಝರ, ಜಲಪಾತ , ವಿರಾಟ ಪರ್ವ,9,19
292. ನಿರ್ಜರ ರಾಯ, ದೇವೇಂದ್ರ, ವಿರಾಟ ಪರ್ವ,9,0
293. ನಿರ್ಜರರ, ದೇವತೆಗಳ, ದ್ರೋಣ ಪರ್ವ,1,3
294. ನಿರ್ಜರರಾಯ, ಆ ದೇವತೆಗಳ ಒಡೆಯ, ವಿರಾಟ ಪರ್ವ,10,8
295. ನಿರ್ಜರರಾಯ, ದೇವತೆಗಳ ಒಡೆಯ (ಇಂದ್ರ), ಆದಿ ಪರ್ವ,15,0
296. ನಿರ್ಜಿತ, ಗೆದ್ದ, ಭೀಷ್ಮ ಪರ್ವ,3,87
297. ನಿರ್ಜಿತಮಾಯ, ಮಾಯೆಯನ್ನು ಗೆಲಿದವನು, ಭೀಷ್ಮ ಪರ್ವ,3,0
298. ನಿರ್ಣಯ, ನಿರ್ಧಾರ, ಆದಿ ಪರ್ವ,16,37
299. ನಿರ್ಣಿಕ್ತ, ನಿರ್ಣಯವಾಗಿರುವಂತೆ , ಗದಾ ಪರ್ವ,3,42
300. ನಿರ್ದಹಿಸು, ದಹಿಸು , ಗದಾ ಪರ್ವ,11,12
301. ನಿರ್ದಾಟಿಸು, ನಿರ್ಧಾಟಿಸು, ಗದಾ ಪರ್ವ,5,10
302. ನಿರ್ದಾಯ, ಸುಲಭ, ಆದಿ ಪರ್ವ,15,30
303. ನಿರ್ದಾಯ, ನಿರಾಯಾಸ, ಶಲ್ಯ ಪರ್ವ,1,11
304. ನಿರ್ದಾಯ, ನಿರ್ಧಾರ, ಸಭಾ ಪರ್ವ,1,52
305. ನಿರ್ದಾಯ, ಯಾವುದೇ ತೊಂದರೆಯಿಲ್ಲದೆ, ಗದಾ ಪರ್ವ,10,20
306. ನಿರ್ದಾಯ, ಖಚಿತವಾಗಿ, ವಿರಾಟ ಪರ್ವ,10,8
307. ನಿರ್ದಾಯದಲ್ಲಿ, ನಿಶ್ಚಿತವಾಗಿ, ದ್ರೋಣ ಪರ್ವ,3,59
308. ನಿರ್ದೋಷ ನಿರ್ಣಯ, ಸಮರ್ಪಕವಾದ , ವಿರಾಟ ಪರ್ವ,4,20
309. ನಿದ್ರ್ವಂದ್ವ, ದ್ವಂದ್ವಾತೀತ, ಭೀಷ್ಮ ಪರ್ವ,3,80
310. ನಿದ್ರ್ವಂದ್ವಕ, ದ್ವಂದ್ವಾತೀತ, ಭೀಷ್ಮ ಪರ್ವ,3,49
311. ನಿರ್ಧನಪುರುಷರು, ಧನವಿಲ್ಲದವರು, ಆದಿ ಪರ್ವ,10,28
312. ನಿರ್ಧೂಘಾತಧರ್ಮಸ್ಥಿತಿ, ಧರ್ಮವನ್ನು ಕೈಬಿಟ್ಟ, ಗದಾ ಪರ್ವ,11,69
313. ನಿರ್ಧೂತ, ನಾಶಪಡಿಸಿದವ, ಗದಾ ಪರ್ವ,11,38
314. ನಿರ್ಭರ, ಪೂರ್ಣಭಾರ, ಶಲ್ಯ ಪರ್ವ,1,34
315. ನಿರ್ಭಾಗದೇಯ, ಯಾವಭಾಗಕ್ಕೂ ಅರ್ಹರಾಗಿಲ್ಲದ, ಸಭಾ ಪರ್ವ,3,24
316. ನಿರ್ಭಿನ್ನ, ಭಿನ್ನವಾಗದ, ಗದಾ ಪರ್ವ,12,2
317. ನಿರ್ಮಥಿತ, ವಧಿಸಲಾಗದ, ದ್ರೋಣ ಪರ್ವ,17,23
318. ನಿರ್ಮಥಿತ, ಅಜೇಯ, ದ್ರೋಣ ಪರ್ವ,2,31
319. ನಿರ್ಮದ, ಮದ ರಹಿತನಾದ ಧರ್ಮರಾಯ, ವಿರಾಟ ಪರ್ವ,1,17
320. ನಿರ್ಮಮತೆ, ನಿರ್ಮೋಹ, ಭೀಷ್ಮ ಪರ್ವ,3,53
321. ನಿರ್ಮಲಾಂತಃಕರಣ, ಪರಿಶುದ್ಧವಾದ ಮನಸ್ಸಿನ, ಗದಾ ಪರ್ವ,11,57
322. ನಿರ್ಮಳ, ಶುದ್ಧವಾದ, ಗದಾ ಪರ್ವ,13,17
323. ನಿರ್ಮಳರು, ಶುದ್ಧಬುದ್ಧಿಯುಳ್ಳವರು, ಗದಾ ಪರ್ವ,11,56
324. ನಿರ್ಮಾಲ್ಯ, ಪೂಜಿಸಿದ ಹೂಗಳು, ಅರಣ್ಯ ಪರ್ವ,6,48
325. ನಿರ್ಮಿಸು, ಸೃಷ್ಟಿಸು, ಆದಿ ಪರ್ವ,18,28
326. ನಿರ್ಮಿಸು, ವಿವರಿಸು, ಉದ್ಯೋಗ ಪರ್ವ,4,84
327. ನಿರ್ಮುಕ್ತ, ಬಿಡುಗಡೆಯ, ಉದ್ಯೋಗ ಪರ್ವ,4,15
328. ನಿರ್ಮೋಕ, ಪೊರೆ, ಅರಣ್ಯ ಪರ್ವ,6,101
329. ನಿರ್ವಂಶವೆನೆ, ನಿರ್ವಂಶವಾಗುವಂತೆ, ಸಭಾ ಪರ್ವ,2,24
330. ನಿರ್ವಹಿಸು, ರಾಜ್ಯವನ್ನು ಆಳು, ವಿರಾಟ ಪರ್ವ,5,16
331. ನಿರ್ವಾಣ, ಮುಕ್ತಿ, ಆದಿ ಪರ್ವ,10,20
332. ನಿರ್ವಾಪಣೈಕಸಮರ್ಥ, ನಿರ್ನಾಮ ಮಾಡಲು ಸಮರ್ಥನಾದವನು, ಗದಾ ಪರ್ವ,7,29
333. ನಿರ್ವಾಹ, ಪಾಲನೆ, ಭೀಷ್ಮ ಪರ್ವ,3,58
334. ನಿರ್ವಾಹ, ಕೆಲಸ , ವಿರಾಟ ಪರ್ವ,1,21
335. ನಿರ್ವೃತ, ಸಂತೋಷದಿಂದಿರುವ, ಉದ್ಯೋಗ ಪರ್ವ,2,34
336. ನಿರ್ವೇದ, ವೈರಾಗ್ಯ, ಸಭಾ ಪರ್ವ,16,7
337. ನಿವ್ರ್ಯಾಜ, ಕಾರಣವೇ ಇಲ್ಲದೆ, ವಿರಾಟ ಪರ್ವ,4,16
338. ನಿವ್ರ್ಯಾಪಿತ, ವ್ಯಾಪಿಸಿದ್ದು ನಿವಾರಣೆ, ಆದಿ ಪರ್ವ,11,17
339. ನಿಲಾಂಬರ, ನೀಲಿಯ ಬಟ್ಟೆಗಳನ್ನುಟ್ಟವನು, ಗದಾ ಪರ್ವ,8,32
340. ನಿಲು, ನಿಂತುಕೊ, ದ್ರೋಣ ಪರ್ವ,2,40
341. ನಿಲುಕಿ, ನೀಡಿ, ಭೀಷ್ಮ ಪರ್ವ,4,55
342. ನಿಲುಕು, ಸೆಟೆದುನಿಲ್ಲು, ಭೀಷ್ಮ ಪರ್ವ,4,36
343. ನಿಲುಕು, ಯುದ್ಧದಲ್ಲಿ ಪಾಲ್ಗೊಳ್ಳು, ವಿರಾಟ ಪರ್ವ,8,48
344. ನಿಲುಕು, ಕಷ್ಟದಿಂದ ನಿಗುರಿ ಮುಟ್ಟುವುದು, ಗದಾ ಪರ್ವ,7,2
345. ನಿಲುಕು, ಕಾಣಿಸು, ವಿರಾಟ ಪರ್ವ,9,34
346. ನಿಲುವು, ನಿಲ್ಲುವಿಕೆ, ಆದಿ ಪರ್ವ,7,41
347. ನಿವಗೆ, ನಿಮಗೆ, ವಿರಾಟ ಪರ್ವ,4,17
348. ನಿವಗೆ, ನಿಮಗೆ ('ವ'ಕಾರ ಪ್ರಾಸಕ್ಕಾಗಿ 'ಮ' ಬದಲಿಗೆ 'ವ' ಅಕ್ಷರವನ್ನು ಉಪಯೋಗಿಸಿದೆ)., ಗದಾ ಪರ್ವ,6,6
349. ನಿವಡಿಸು, ಗಳಿಸು, ಉದ್ಯೋಗ ಪರ್ವ,3,33
350. ನಿವಹ, ಸಮೂಹ , ವಿರಾಟ ಪರ್ವ,8,56
351. ನಿವಹಕಾರರು, ನಿರ್ವಾಹಕರು., ವಿರಾಟ ಪರ್ವ,1,34
352. ನಿವಾತ, ಬಿರುಗಾಳಿ, ಉದ್ಯೋಗ ಪರ್ವ,7,27
353. ನಿವಾತ, ಗಾಳಿ, ಗದಾ ಪರ್ವ,8,3
354. ನಿವಾರಣ, ಪರಿಹಾರ, ಗದಾ ಪರ್ವ,10,25
355. ನಿವಾಳಿ, ದೃಷ್ಟಿಕಳೆ, ವಿರಾಟ ಪರ್ವ,9,26
356. ನಿವೇದಿಸು, ಸಮರ್ಪಿಸು, ಆದಿ ಪರ್ವ,10,4
357. ನಿಶಾಟ ವ್ಯಾಕರಣ ಪಾಂಡಿತ್ಯ, ಒರಟು ನಡವಳಿÀಕೆ, ಅರಣ್ಯ ಪರ್ವ,4,5
358. ನಿಶಾಟನ, ರಾತ್ರಿಯಲ್ಲಿ ಸಂಚರಿಸುವುದು (ಇಲ್ಲಿ ಗೂಬೆ) ಗಬ್ಬರಿಸಿ, ಗದಾ ಪರ್ವ,9,7
359. ನಿಶಾತ, ಚೂಪಾದ, ದ್ರೋಣ ಪರ್ವ,5,34
360. ನಿಶಿತ, ಹರಿತ, ವಿರಾಟ ಪರ್ವ,8,54
361. ನಿಶಿತ, ಹರಿತವಾದ, ಭೀಷ್ಮ ಪರ್ವ,5,26
362. ನಿಶಿತ, ಚುರುಕು, ಉದ್ಯೋಗ ಪರ್ವ,3,93
363. ನಿಶಿತಧಾರೆ, ತೀಕ್ಷ್ಣ ಅಲಗಿನ ಕಾಂತಿ, ಭೀಷ್ಮ ಪರ್ವ,6,32
364. ನಿಶಿತಾಸ್ತ್ರ, ಚೂಪಾದ ಅಸ್ತ್ರ, ದ್ರೋಣ ಪರ್ವ,6,18
365. ನಿಶ್ಚಯ, ನಿರ್ಣಯ, ಉದ್ಯೋಗ ಪರ್ವ,7,2
366. ನಿಶ್ಚಯ, ತೀರ್ಮಾನ, ಗದಾ ಪರ್ವ,3,18
367. ನಿಶ್ಯಂಕೆ, ಅನುಮಾನವಿಲ್ಲದಿರುವುದು, ಆದಿ ಪರ್ವ,4,33
368. ನಿಶ್ಶಂಕ, ಸಂದೇಹವಿಲ್ಲದ, ಕರ್ಣ ಪರ್ವ,3,28
369. ನಿಶ್ಶೇಷ, ಸಂಪೂರ್ಣನಾಶ, ಗದಾ ಪರ್ವ,10,7
370. ನಿಶ್ಶೇಷ, ಶೇಷ ಉಳಿಯದೆ, ಗದಾ ಪರ್ವ,10,8
371. ನಿಷಧಾಚಲವನಿಳಿದುದು, ನಿಷಧ ಪರ್ವತದಿಂದ ಇಳಿಯಿತು ಅನಂತರ, ಸಭಾ ಪರ್ವ,3,39
372. ನಿಷೇವಿತರು, ಸೇವ್ಯರು, ಅರಣ್ಯ ಪರ್ವ,7,40
373. ನಿಷ್ಕಲಿತ, ಪರಿಪೂರ್ಣವಾದ, ಕರ್ಣ ಪರ್ವ,24,53
374. ನಿಷ್ಕಳ, ಕಳಾಹೀನ, ದ್ರೋಣ ಪರ್ವ,3,66
375. ನಿಷ್ಕಳಿತ, ಕಳೆದ, ಉದ್ಯೋಗ ಪರ್ವ,3,91
376. ನಿಷ್ಕಾಮ, ಕಾಮಹೀನ, ಆದಿ ಪರ್ವ,9,15
377. ನಿಷ್ಕøತಿ, ಪ್ರಾಯಶ್ಚಿತ್ತ, ಆದಿ ಪರ್ವ,18,33
378. ನಿಷ್ಕøತಿ, ಪರಿಹಾರ, ಆದಿ ಪರ್ವ,19,8
379. ನಿಷ್ಟ್ರತ್ಯೂಹ, ತಡೆಯಿಲ್ಲದ (ಪ್ರತ್ಯೂಹ, ಗದಾ ಪರ್ವ,11,35
380. ನಿಷ್ಠೀವನಾವಿರ್ಭೂತ, ಉಗುಳಿದ ನೀರಿನಿಂದ ಕೂಡಿದ, ಗದಾ ಪರ್ವ,5,5
381. ನಿಷ್ಠುರ, ಒರಟು , ವಿರಾಟ ಪರ್ವ,6,63
382. ನಿಷ್ಠುರ, ಕ್ರೂರ, ಉದ್ಯೋಗ ಪರ್ವ,4,91
383. ನಿಷ್ಠುರ, ಕೋಪ , ಗದಾ ಪರ್ವ,11,64, ,
384. ನಿಷ್ಪ್ರಕಂಪನ, ನಡುಗದ, ಆದಿ ಪರ್ವ,8,14
385. ನಿಷ್ಪ್ರತ್ಯೂಹ, ನಿರ್ವಿಘ್ನ, ಅರಣ್ಯ ಪರ್ವ,12,10
386. ನಿಷ್ಪ್ರತ್ಯೂಹ, ಅಡ್ಡಿಯಿಲ್ಲದಿರವಿಕೆ. ನಿರಾತಂಕ, ಸಭಾ ಪರ್ವ,3,5
387. ನಿಷ್ಪ್ರತ್ಯೂಹ, ಅಡ್ಡಿಯಿಲ್ಲದಿರುವುದು, ಸಭಾ ಪರ್ವ,2,32
388. ನಿಷ್ಪ್ರಪಂಚ, ಅತಿಶಯದ ಸಂಸಾರದ ಹೊರಗಿನ, ಆದಿ ಪರ್ವ,4,25
389. ನಿಷ್ಯೂತ ಚೈತನ್ಯ, ಕೂಡಿಕೊಂಡಿರುವ ಆತ್ಮ, ದ್ರೋಣ ಪರ್ವ,3,68
390. ನಿಸ್ಖಲಿತ, ವ್ಯರ್ಥವಾಗದ, ಆದಿ ಪರ್ವ,20,35
391. ನಿಸ್ಖಲಿತ, ಅಚಲ, ಸಭಾ ಪರ್ವ,1,56
392. ನಿಸ್ಪøಹ, ಆಸೆ ಇಲ್ಲದವನು, ಭೀಷ್ಮ ಪರ್ವ,3,59
393. ನಿಸ್ಪøಹ, ಆಸೆಯಿಲ್ಲದ, ಆದಿ ಪರ್ವ,7,70
394. ನಿಸ್ವನ, ಸದ್ದು, ಭೀಷ್ಮ ಪರ್ವ,4,28
395. ನಿಸ್ಸಾಳ, ಭೇರಿ ವಾದ್ಯ, ದ್ರೋಣ ಪರ್ವ,1,44
396. ನಿಸ್ಸಾಳ, ಭೇರೀವಾದ್ಯ ಒಸಗೆ, ಆದಿ ಪರ್ವ,19,49
397. ನಿಸ್ಸಾಳ, ನಗಾರಿ ಭೇರಿ, ಭೀಷ್ಮ ಪರ್ವ,4,61
398. ನಿಸ್ಸಾಳ, ರಣವಾದ್ಯ, ದ್ರೋಣ ಪರ್ವ,3,80
399. ನಿಸ್ಸಾಳ, ಊದುವ ವಾದ್ಯ. ನಿಬ್ಬರ, ಕರ್ಣ ಪರ್ವ,11,19
400. ನಿಸ್ಸಾಳ, ಒಂದು ಬಗೆಯ ವಾದ್ಯ, ವಿರಾಟ ಪರ್ವ,8,68
401. ನಿಸ್ಸಾಳ, ಒಂದುವಾದ್ಯ, ಶಲ್ಯ ಪರ್ವ,3,25
402. ನಿಸ್ಸಾಳ ಕೋಟಿ, ಸಾವಿರಾರು ಭೇರಿಗಳ ಸಮೂಹ, ಭೀಷ್ಮ ಪರ್ವ,4,77
403. ನಿಸ್ಸಾಳಕೋಟಿ, ಭೇರಿ ಇತ್ಯಾದಿ ವಾದ್ಯಗಳು, ಭೀಷ್ಮ ಪರ್ವ,1,62
404. ನಿಸ್ಸಾಳತತಿ, ಭೇರಿ ಸಮೂಹ, ಭೀಷ್ಮ ಪರ್ವ,8,1
405. ನಿಸ್ಸಾಳದ ಸೂಳಿನ, ರಣಭೇರಿಗಳ ಧ್ವನಿಗಳಿಂದ, ಭೀಷ್ಮ ಪರ್ವ,9,50
406. ನಿಸ್ಸೀಮ, ಮೇರೆಮೀರಿದ, ಆದಿ ಪರ್ವ,20,59
407. ನಿಸ್ಸೀಮ, ಅಸಮಾನ, ಆದಿ ಪರ್ವ,6,28
408. ನಿಸ್ಸೀಮ, ಅತಿಶಯದ, ಆದಿ ಪರ್ವ,2,5
409. ನಿಸ್ಸೀಮ, ಚತುರ, ಉದ್ಯೋಗ ಪರ್ವ,11,5
410. ನಿಸ್ಸೀಮತನ, ಆದ್ಯಂತರಹಿತ, ಭೀಷ್ಮ ಪರ್ವ,6,40
411. ನಿಹಾರ, ಶೂನ್ಯ, ಶಲ್ಯ ಪರ್ವ,2,42
412. ನಿಹಾರ, ಶೂನ್ಯ, ಶಲ್ಯ ಪರ್ವ,3,56
413. ನಿಹಾರ, ಮಂಜು, ಕರ್ಣ ಪರ್ವ,24,13
414. ನಿಹಾರ, ಅಧಿಕಶಬ್ದ, ಕರ್ಣ ಪರ್ವ,23,5
415. ನಿಹಾರ, ಅಬ್ಬರ, ಅರಣ್ಯ ಪರ್ವ,20,23
416. ನಿಹಾರ, ಅಬ್ಬರ , ಅರಣ್ಯ ಪರ್ವ,19,12
417. ನಿಹಾರ, ಜಯಧ್ವನಿ, ಕರ್ಣ ಪರ್ವ,16,28
418. ನಿಳಯವೇದಿ, ಮನೆಯ ಜಗಲಿ, ಕರ್ಣ ಪರ್ವ,5,3
419. ನೀಗಾಡಿ, ಹೋಗಲಾಡಿಸಿ, ಭೀಷ್ಮ ಪರ್ವ,1,24
420. ನೀಗಿ, ಬಿಟ್ಟು, ಆದಿ ಪರ್ವ,14,29
421. ನೀಗಿಕಳೆ, ಕಳೆದು ಬಿಸಾಡು, ಗದಾ ಪರ್ವ,12,20
422. ನೀಗು, ಕಳೆ, ಗದಾ ಪರ್ವ,4,21
423. ನೀಡುಗಾರ, ಕೊಡುವವನು, ಕರ್ಣ ಪರ್ವ,26,9
424. ನೀತಿಜ್ಞ, ರಾಜನೀತಿ ತಿಳಿದವನು, ಭೀಷ್ಮ ಪರ್ವ,8,67
425. ನೀತಿವಿಡಿದ, ನೀತಿವಂತನಾದ, ಸಭಾ ಪರ್ವ,1,48
426. ನೀತಿಸ್ಖಲಿತ, ನೀತಿ ಬಿಟ್ಟು ಜಾರಿದ, ಸಭಾ ಪರ್ವ,1,84
427. ನೀನಾಳ್ವಿ, ನೀನು ರಾಜ್ಯಭಾರ ಮಾಡುವ, ಸಭಾ ಪರ್ವ,1,53
428. ನೀನೆಚ್ಚ, ನೀನು ಬಾಣಬಿಟ್ಟ, ದ್ರೋಣ ಪರ್ವ,2,54
429. ನೀನೊಬ್ಬತಪ್ಪಿಸಿ, ನಿನ್ನೊಬ್ಬನನ್ನು ಉಳಿದು., ಗದಾ ಪರ್ವ,12,11
430. ನೀನೊಲಿದ ವಧುಗೆ, ನೀನು ಮೆಚ್ಚಿದ ಹೆಂಡತಿಗೆ ಕೊಡು ಎನಲು, ಸಭಾ ಪರ್ವ,2,41
431. ನೀರ, ಜಾಣ, ಕರ್ಣ ಪರ್ವ,22,30
432. ನೀರಡಿಸು, ಬಾಯಾರು, ಆದಿ ಪರ್ವ,9,4
433. ನೀರಡಿಸು, ಬಾಯಾರಿಕೆಹೊಂದು, ಆದಿ ಪರ್ವ,20,12
434. ನೀರತನ, ಶೌರ್ಯ, ಕರ್ಣ ಪರ್ವ,14,1
435. ನೀರಾಗಿಗಳು, ರಾಗರಹಿತ, ಸಭಾ ಪರ್ವ,13,36
436. ನೀರುಗಂಟು, ಜೊಲ್ಲು, ವಿರಾಟ ಪರ್ವ,7,33
437. ನೀರೊರೆವ, ನೀರು ಒಸರುವ , ಗದಾ ಪರ್ವ,8,21
438. ನೀರ್ದೆಗೆಯೆ, ಬಾಯಾರಲು, ಭೀಷ್ಮ ಪರ್ವ,10,24
439. ನೀಲ, ಒಬ್ಬ ಅರಸು, ಆದಿ ಪರ್ವ,13,53
440. ನೀಲಕಂಠ, ನವಿಲು , ಅರಣ್ಯ ಪರ್ವ,4,34
441. ನೀಲಗಿರಿ, ನೀಲಗಿರಿ ಪರ್ವತ, ಭೀಷ್ಮ ಪರ್ವ,4,75
442. ನೀಲಗಿರಿ, ಒಂದು ಪರ್ವತ, ಭೀಷ್ಮ ಪರ್ವ,4,87
443. ನೀಲಲೋಹಿತ, ನೀಲಿ ಕಂಠ, ಅರಣ್ಯ ಪರ್ವ,5,18, ,
444. ನೀಲಾಂಬರ, ನೀಲಿಯ ಬಣ್ಣದ ಬಟ್ಟೆ., ಗದಾ ಪರ್ವ,5,56
445. ನೀಲಾಳಕಿ, ಸುಭದ್ರೆ (ಕರಿಯ ಕೂದಲುಳ್ಳವಳು) ಚಾಳಿಸು, ಆದಿ ಪರ್ವ,19,41
446. ನೀಲಾಳಕಿ, ಕಪ್ಪಾದ ಮುಂಗುರುಳುಳ್ಳವಳು , ಆದಿ ಪರ್ವ,4,1
447. ಬೇಹ, ಬೇಕಾದ, ಗದಾ ಪರ್ವ,11,35
448. ನೀಹಾರ, ಇಬ್ಬನಿ, ಕರ್ಣ ಪರ್ವ,16,3
449. ನುಂಗಲಿ, ಕಬಳಿಸಲಿ, ಆದಿ ಪರ್ವ,9,2
450. ನುಗ್ಗಾಗಿ, ನುಜ್ಜುಗುಜ್ಜಾಗಿ, ಗದಾ ಪರ್ವ,11,39
451. ನುಗ್ಗಾಗು, ನಿತ್ರಾಣಗೊಳ್ಳು, ವಿರಾಟ ಪರ್ವ,8,13
452. ನುಗ್ಗಾಯ್ತು, ಸೋತಿತು, ದ್ರೋಣ ಪರ್ವ,5,16
453. ನುಗ್ಗಾಯ್ತು, ಜಜ್ಜಿ ಹೋಯಿತು, ಗದಾ ಪರ್ವ,2,0
454. ನುಗ್ಗು, ನುಸುಳು, ಆದಿ ಪರ್ವ,16,16
455. ನುಗ್ಗು, ಜರ್ಝರಿತವಾಗು, ಶಲ್ಯ ಪರ್ವ,2,39
456. ನುಗ್ಗು, ಕ್ಷುಲ್ಲಕರು, ದ್ರೋಣ ಪರ್ವ,13,23
457. ನುಗ್ಗು ನುಸಿ, ನುಚ್ಚು ನೂರು, ಭೀಷ್ಮ ಪರ್ವ,8,46
458. ನುಗ್ಗುನುಗ್ಗಾಗದೆ ?, ನುಚ್ಚು ನೂರಾಗದೆ ?, ಭೀಷ್ಮ ಪರ್ವ,1,58
459. ನುಗ್ಗುನುಸಿ, ಪುಡಿಪುಡಿಯಾಗು, ಆದಿ ಪರ್ವ,10,38
460. ನುಡಿಗೆ, ಮಾತಿಗೆ, ದ್ರೋಣ ಪರ್ವ,1,41
461. ನುಡಿಗೆ ಎಡೆ ಕುಡದೆ, ಮಾತಿಗೆ ಮೀರಿದ, ಭೀಷ್ಮ ಪರ್ವ,10,14
462. ನುಡಿಗೇಡುಗ, ಭಾಷೆಗೆ ತಪ್ಪುವವನು, ದ್ರೋಣ ಪರ್ವ,2,8
463. ನುಡಿದವಧಿ, ಗೊತ್ತು ಪಡಿಸಿದ ಕಾಲ, ವಿರಾಟ ಪರ್ವ,10,36
464. ನುಡಿಯಲಮ್ಮೆ, ಹೇಳಲಾರೆ, ದ್ರೋಣ ಪರ್ವ,4,38
465. ನುತ, ಸ್ತುತಿಸಲ್ಪಟ್ಟ, ಆದಿ ಪರ್ವ,1,16
466. ನುತ, ಕೊಂಡಾಡು, ಉದ್ಯೋಗ ಪರ್ವ,8,39
467. ನುತಗುಣ, ಹೊಗಳಲ್ಪಟ್ಟಗುಣ, ಗದಾ ಪರ್ವ,13,17
468. ನುಸಿಗಳು, ಕ್ಷುದ್ರರು, ಭೀಷ್ಮ ಪರ್ವ,1,13
469. ನುಸುಳುಗಂಡಿ, ರಹಸ್ಯ ಮಾರ್ಗ, ಉದ್ಯೋಗ ಪರ್ವ,3,47
470. ನೂಕದು, ಸಾಗದು, ಆದಿ ಪರ್ವ,8,57
471. ನೂಕದು, ಸಾಧ್ಯವಾಗದ್ದು, ದ್ರೋಣ ಪರ್ವ,1,28
472. ನೂಕಿದರು, ನುಗ್ಗಿಸಿದರು, ಭೀಷ್ಮ ಪರ್ವ,4,53
473. ನೂಕಿದರು, ಮುನ್ನುಗ್ಗಿಸಿದರು, ಭೀಷ್ಮ ಪರ್ವ,4,25
474. ನೂಕಿದರು, ಮುಂದೆ ಬಿಟ್ಟರು, ಭೀಷ್ಮ ಪರ್ವ,4,11
475. ನೂಕು, ಮುಂದೂಡು., ಆದಿ ಪರ್ವ,19,49
476. ನೂಕು, ಕಳೆ, ಆದಿ ಪರ್ವ,19,22
477. ನೂಕು, ಕಳೆ , ಗದಾ ಪರ್ವ,4,55, ,
478. ನೂಕು, ದೂಡು, ಆದಿ ಪರ್ವ,9,8
479. ನೂನವಕ್ಷ, ಮಲತಮ್ಮನ ಮಗ, ಸಭಾ ಪರ್ವ,2,72
480. ನೂಪುರ, ಕಾಲ್ಗೆಜ್ಜೆ, ವಿರಾಟ ಪರ್ವ,3,7
481. ನೂರೊಂದು ಕುಲ, ನೂರೊಂದು ತಲೆಮಾರು, ಭೀಷ್ಮ ಪರ್ವ,3,50
482. ನೂಲಹರಿಗೆ, ಹಗುರವಾದ ಗುರಾಣಿ ?, ಭೀಷ್ಮ ಪರ್ವ,4,59
483. ನೂಲು, ಡಾಬು, ಕರ್ಣ ಪರ್ವ,24,14
484. ನೃಕೇಸರಿ, ನರಸಿಂಹ, ಭೀಷ್ಮ ಪರ್ವ,6,37
485. ನೃತ್ಯ, ಚಿತ್ರಕಲೆ), ಉದ್ಯೋಗ ಪರ್ವ,3,74
486. ನೃತ್ಯತ್ಕಬಂಧ, ಕುಣಿಯುತ್ತಿರುವ ಮುಂಡಗಳು, ಭೀಷ್ಮ ಪರ್ವ,4,37
487. ನೃಪಜನ, ರಾಜವರ್ಗ, ವಿರಾಟ ಪರ್ವ,1,225
488. ನೃಪಜನವರ್ಯ, ರಾಜಸಮೂಹದಲ್ಲಿ ಶ್ರೇಷ್ಠನಾದ (ಧರ್ಮರಾಯ) ಅವಸರ, ವಿರಾಟ ಪರ್ವ,3,20
489. ನೃಪನಾರಿಯರು, ರಾಜರ ಪತ್ನಿಯರು, ಗದಾ ಪರ್ವ,11,9
490. ನೃಪನಿಳಯ, ರಾಜನ ಮನೆ, ವಿರಾಟ ಪರ್ವ,1,7
491. ನೃಪಪದ ಕಮಲ, ರಾಜ ಧರ್ಮರಾಯನ ಪಾದಕಮಲ, ವಿರಾಟ ಪರ್ವ,10,14
492. ನೃಪಮಂಡಳಿ, ರಾಜಸಮೂಹ, ಭೀಷ್ಮ ಪರ್ವ,3,15
493. ನೃಪಮಾನಿನಿಯರು, ರಾಜನ ಹೆಂಡತಿಯರು , ಗದಾ ಪರ್ವ,11,8
494. ನೃಪವಧೂಜನ, ರಾಜಮಹಿಳೆಯರು, ಗದಾ ಪರ್ವ,12,25
495. ನೃಪವನಿತೆಯರು, ರಾಜರ ಮಡದಿಯರು, ಗದಾ ಪರ್ವ,12,17
496. ನೃಪಹಾರ, ರಾಜರ ಶ್ರೇಣಿ, ಆದಿ ಪರ್ವ,7,51
497. ನೆಗಹಿ, ಮೇಲಕ್ಕೆತ್ತಿ, ಭೀಷ್ಮ ಪರ್ವ,8,13
498. ನೆಗಹಿದನು, ಮೇಲಕ್ಕೆತ್ತಿದನು, ಭೀಷ್ಮ ಪರ್ವ,2,26
499. ನೆಗಹಿದವು, ಮೇಲೆದ್ದು ಶೋಭಿಸಿದುವು, ದ್ರೋಣ ಪರ್ವ,8,55
500. ನೆಗಹು, ಮೇಲಕ್ಕೆ ಎತ್ತು., ಶಲ್ಯ ಪರ್ವ,1,4
501. ನೆಗಳಿದರು, ಪ್ರಸಿದ್ಧರಾದರು., ಶಲ್ಯ ಪರ್ವ,1,6
502. ನೆಗಳಿದರು, ಮಾಡಿದರು, ಭೀಷ್ಮ ಪರ್ವ,2,25
503. ನೆಗಳು, ಮಾಡು, ವಿರಾಟ ಪರ್ವ,7,26
504. ನೆಗಳು, ಮೊಸಳೆ, ಆದಿ ಪರ್ವ,7,7
505. ನೆಗಳು, ಕೈಗೊಳ್ಳು, ಉದ್ಯೋಗ ಪರ್ವ,6,2
506. ನೆಗಳುವ, ಸಂಭವಿಸುವ, ಸಭಾ ಪರ್ವ,13,1
507. ನೆಗಳ್ದುದು, ಆಚರಿಸಿದ್ದು, ವಿರಾಟ ಪರ್ವ,4,21
508. ನೆಗ್ಗಿ, ವ್ಯರ್ಥವಾಗಿ, ಭೀಷ್ಮ ಪರ್ವ,1,58
509. ನೆಗ್ಗಿದ, ನುಗ್ಗಾದ, ಶಲ್ಯ ಪರ್ವ,1,23
510. ನೆಗ್ಗಿದ, ಜಜ್ಜಿದ, ಭೀಷ್ಮ ಪರ್ವ,1,35
511. ನೆಗ್ಗು, ನುಗ್ಗಾಗು ಒಗ್ಗು, ಶಲ್ಯ ಪರ್ವ,2,2
512. ನೆಗ್ಗು, ಜಜ್ಜು, ಕರ್ಣ ಪರ್ವ,20,7
513. ನೆಗ್ಗು, ಕುಂದು, ಭೀಷ್ಮ ಪರ್ವ,8,33
514. ನೆಗ್ಗು, ಕಡಮೆಯಾಗು, ಅರಣ್ಯ ಪರ್ವ,2,2
515. ನೆಗ್ಗೊತ್ತು, ಪುಡಿಪುಡಿಮಾಡು, ವಿರಾಟ ಪರ್ವ,6,49
516. ನೆಗ್ಗೊತ್ತು, ಕೆಳಗೆ ಹೋಗುವಂತೆ ತುಳಿ, ಕರ್ಣ ಪರ್ವ,14,27
517. ನೆಣ, ಮೇದಸ್ಸು, ಅರಣ್ಯ ಪರ್ವ,22,29
518. ನೆಣ, ಕೊಬ್ಬು , ಗದಾ ಪರ್ವ,8,3
519. ನೆಣಗೊಬ್ಬು, ನೆಣಕೊಬ್ಬು, ವಿರಾಟ ಪರ್ವ,5,20
520. ನೆಣನನು, ಕೊಬ್ಬನ್ನು, ದ್ರೋಣ ಪರ್ವ,2,33
521. ನೆಣಪಸೆ, ಮಾಂಸ ಮಜ್ಜೆ, ಭೀಷ್ಮ ಪರ್ವ,6,32
522. ನೆಣವಸೆ, ಕೊಬ್ಬಿನ ತೇವ, ಕರ್ಣ ಪರ್ವ,12,6
523. ನೆಣವಸೆ, ಕೀವು (ನೆಣದ + ಪಸೆ), ಗದಾ ಪರ್ವ,3,13
524. ನೆತ್ತರಗುಡಿಹಿ, ರಕ್ತಕುಡಿಯುವವನು, ಗದಾ ಪರ್ವ,11,63
525. ನೆತ್ತರುಗಾಣದ, ರಕ್ತ ಸುರಿಯದ, ವಿರಾಟ ಪರ್ವ,3,10
526. ನೆತ್ತರುಗೂಳು, ರಕ್ತ ಭೋಜನ, ಭೀಷ್ಮ ಪರ್ವ,3,42
527. ನೆತ್ತಿಯ ಮೇಲೆ ಕಳೆವನು, ತಲೆ ಒಡೆದು ತೀರಿಸಿಕೊಳ್ಳುವೆ, ಭೀಷ್ಮ ಪರ್ವ,1,60
528. ನೆನಹು, ನೆನಪು, ಆದಿ ಪರ್ವ,14,6
529. ನೆನೆ, ಸ್ಮರಿಸು, ಆದಿ ಪರ್ವ,7,52
530. ನೆನೆ, ಹಂಬಲಿಸು, ಆದಿ ಪರ್ವ,8,86
531. ನೆನೆದ, ಯೋಚಿಸಿದ, ಸಭಾ ಪರ್ವ,1,40
532. ನೆಮ್ಮಿತು, ಆಧಾರವಾಯಿತು, ಗದಾ ಪರ್ವ,11,18
533. ನೆಮ್ಮು, ನಂಬು, ಉದ್ಯೋಗ ಪರ್ವ,4,87
534. ನೆಯ್ದ ನೆಯ್ಗೆಗಳು, ನೇದ ಬಟ್ಟೆ , ದ್ರೋಣ ಪರ್ವ,14,46
535. ನೆರವಣಿಗೆ, ಸಂಚು, ದ್ರೋಣ ಪರ್ವ,14,16
536. ನೆರವಣಿಗೆ, ಸೇರ್ಪಡೆ , ಗದಾ ಪರ್ವ,7,31, ,
537. ನೆರವಣಿಗೆ, ಶಕ್ತಿ ಪೂರ್ವಕ, ವಿರಾಟ ಪರ್ವ,8,59
538. ನೆರವಣಿಗೆ, ಪೂರ್ಣ, ಉದ್ಯೋಗ ಪರ್ವ,11,8
539. ನೆರವಣಿಗೆ, ಪೂರ್ತಿ, ಆದಿ ಪರ್ವ,8,22
540. ನೆರವಣಿಗೆ, ಪರಿಪೂರ್ಣ, ಆದಿ ಪರ್ವ,17,17
541. ನೆರವಿ, ಹಿಂಡು, ಉದ್ಯೋಗ ಪರ್ವ,9,50
542. ನೆರವಿ, ಜನಸಾಮಾನ್ಯರು, ಭೀಷ್ಮ ಪರ್ವ,1,11
543. ನೆರವಿ, ಜನಸಂದಣಿ, ಆದಿ ಪರ್ವ,10,18
544. ನೆರವಿದೊಳಸು, ಕ್ಷೋಭೆ, ದ್ರೋಣ ಪರ್ವ,7,7
545. ನೆರವು, ಬೆಂಬಲ., ಉದ್ಯೋಗ ಪರ್ವ,8,21
546. ನೆರವು, ಕೂಡಿದ/ಬೆಳೆದ, ಉದ್ಯೋಗ ಪರ್ವ,3,40
547. ನೆರಹಿದ, ಸಂಗ್ರಹಿಸಿದ, ದ್ರೋಣ ಪರ್ವ,4,1
548. ನೆರಹು, ಸೇರಿಸು, ಆದಿ ಪರ್ವ,15,51
549. ನೆರಹು, ಜತೆಗೂಡಿಸು, ಆದಿ ಪರ್ವ,10,15
550. ನೆರಹು, ಕಲೆ ಹಾಕು, ಆದಿ ಪರ್ವ,14,32
551. ನೆರುವಣಿಗೆ, ಹೆಚ್ಚುವಿಕೆ, ಕರ್ಣ ಪರ್ವ,15,25
552. ನೆರೆ, ಭರ್ತಿಯಾಗು, ಗದಾ ಪರ್ವ,7,3
553. ನೆರೆ, ಸಂಭ್ರಮ , ಗದಾ ಪರ್ವ,2,37,
554. ನೆರೆ, ಸೇರು, ವಿರಾಟ ಪರ್ವ,2,35
555. ನೆರೆ, ವಿಶೇಷವಾಗಿ, ಗದಾ ಪರ್ವ,3,16
556. ನೆರೆ ಬಲಿದು, ಗಟ್ಟಿ ಮಾಡಿಕೊಂಡು, ವಿರಾಟ ಪರ್ವ,3,20
557. ನೆರೆದ, ಕೂಡಿದ್ದ, ಸಭಾ ಪರ್ವ,3,33
558. ನೆರೆದ ಇಂಧನದಲಿ, ತುಂಬಿದ ಉರುವಲಿನಿಂದ, ಸಭಾ ಪರ್ವ,1,63
559. ನೆರೆದ ನೆರವಿ, ಸೇರಿದ್ದ ಜನಸಮೂಹ, ವಿರಾಟ ಪರ್ವ,3,106
560. ನೆರೆದರಲ್ಲಿಯ ನೃಪರು, ಅಲ್ಲಿನ ರಾಜರೆಲ್ಲ ಸೇರಿದರು, ಸಭಾ ಪರ್ವ,3,63
561. ನೆರೆದು, ಒಂದಾಗಿ, ಭೀಷ್ಮ ಪರ್ವ,9,7
562. ನೆರೆದು, ಒಟ್ಟುಗೂಡಿ, ವಿರಾಟ ಪರ್ವ,3,11
563. ನೆರೆದು, ಕೂಡಿ, ವಿರಾಟ ಪರ್ವ,2,27
564. ನೆರೆದುದು, ಗುಂಪು ಸೇರಿತು., ಗದಾ ಪರ್ವ,11,30
565. ನೆರೆದುದು, ತುಂಬಿದುದು, ವಿರಾಟ ಪರ್ವ,3,77
566. ನೆರೆಯದು, ಸಾಲದಾಯಿತು, ಭೀಷ್ಮ ಪರ್ವ,6,10
567. ನೆರೆಯದು, ಸಾಲದು, ಭೀಷ್ಮ ಪರ್ವ,4,97
568. ನೆರೆವಣಿಗೆ, ಶಕ್ತಿ ಸಾಮಥ್ರ್ಯ, ಭೀಷ್ಮ ಪರ್ವ,7,7
569. ನೆಲದ ಬೇಟ, ನೆಲದ ಕುರಿತಾದ ಆಸೆÉ, ಭೀಷ್ಮ ಪರ್ವ,5,12
570. ನೆಲದಾವಣಿ, ನೆಲದ ಮೇಲೆ ಹಾಸಿದ ಹಾಸು, ಭೀಷ್ಮ ಪರ್ವ,4,17
571. ನೆಲನ ತಿಣ್ಣನ ತಿದ್ದುವ, ಭೂಮಿಯ ಭಾರವನ್ನು ಇಳಿಸುವ, ದ್ರೋಣ ಪರ್ವ,2,62
572. ನೆಲನಕೊಟ್ಟನು, ರಾಜ್ಯ ಕೊಟ್ಟನು., ಭೀಷ್ಮ ಪರ್ವ,7,28
573. ನೆಲನದಿರೆ, ಭೂಕಂಪವಾದಂತೆ, ಭೀಷ್ಮ ಪರ್ವ,4,50
574. ನೆಲನಲೋಭಿಯ ಬುದ್ಧಿ, ದುರ್ಯೋಧನ ನೆಲದಾಹದ ಬುದ್ಧಿ, ಭೀಷ್ಮ ಪರ್ವ,5,6
575. ನೆಲಮೊಳಗಿದಂತೆ, ನೆಲವದುರುವ ಹಾಗೆ, ಭೀಷ್ಮ ಪರ್ವ,4,77
576. ನೆಲೆ, ನಿಲ್ಲಲು ಜಾಗ , ಗದಾ ಪರ್ವ,3,9
577. ನೆಲೆ, ನಿವಾಸ, ಆದಿ ಪರ್ವ,7,14
578. ನೆಲೆಕಟ್ಟು, ಸಮಮಾಡಿದ ನೆಲ, ಆದಿ ಪರ್ವ,12,10
579. ನೆಲೆಗಾಬಲ್ಲಿ, ನೆಲೆ, ವಿರಾಟ ಪರ್ವ,4,13
580. ನೆಲೆಗೊಳಿಸು, ಶಾಶ್ವತವಾಗಿ ನಿಲ್ಲುವಂತೆ ಮಾಡು, ಗದಾ ಪರ್ವ,3,43
581. ನೆಲೆಗೊಳೆ, ಉಂಟಾದರೆ, ಭೀಷ್ಮ ಪರ್ವ,3,83
582. ನೆಲೆಮನೆ, ವಾಸಸ್ತಾನ, ಆದಿ ಪರ್ವ,8,23
583. ನೆಲೆಯ ಮಾಡಿದೆ, ಅವಕಾಶಮಾಡಿದೆ, ಭೀಷ್ಮ ಪರ್ವ,6,39
584. ನೆಲೆಯುಪ್ಪರಿಗೆ, ಮೇಲು ಮಾಳಿಗೆಯ ಮನೆ, ಆದಿ ಪರ್ವ,8,69
585. ನೇಣ್, ಹಗ್ಗ ಹುರಿ, ವಿರಾಟ ಪರ್ವ,3,10
586. ನೇಣು, ಸರಪಳಿ, ಭೀಷ್ಮ ಪರ್ವ,3,10
587. ನೇತ್ರಾವಳಿ, ಕಣ್ಣುಗಳು, ಆದಿ ಪರ್ವ,8,27
588. ನೇಮ, ಹೇಳಿಕೆ, ಗದಾ ಪರ್ವ,4,29, , , DCBEE2B6, , , , , , , , , ,
589. ನೇಮ, ಕಟ್ಟಪ್ಪಣೆ, ಭೀಷ್ಮ ಪರ್ವ,1,53
590. ನೇಮದಲಿ ನೆಗಳು, ಆಜ್ಞಾನುಸಾರ ವರ್ತಿಸು, ಭೀಷ್ಮ ಪರ್ವ,1,14
591. ನೇಮಿಸಿದ, ಅಪ್ಪಣೆ ಮಾಡಿದನು, ಭೀಷ್ಮ ಪರ್ವ,1,55
592. ನೇಮಿಸು, ನಿಯಮಿಸು, ಉದ್ಯೋಗ ಪರ್ವ,7,7
593. ನೇಮಿಸು, ಅಪ್ಪಣೆ ಮಾಡು (ತಮ್ಮನನ್ನು) ನಿಯಂತ್ರಿಸು, ವಿರಾಟ ಪರ್ವ,3,4
594. ನೇಮಿಸು, ಗೊತ್ತುಮಾಡು, ಆದಿ ಪರ್ವ,8,57
595. ನೇವುರ, ಕಾಲುಬಳೆ, ಕರ್ಣ ಪರ್ವ,4,2
596. ನೇವುರ, ಕಾಲ್ಗಡಗ, ಆದಿ ಪರ್ವ,11,27
597. ನೊಪ್ಪಿತ, ಲಘು , ಅರಣ್ಯ ಪರ್ವ,1,16
598. ನೊಪ್ಪಿತ, ಹಗುರ, ಗದಾ ಪರ್ವ,9,12
599. ನೊಪ್ಪಿತು, ಲಘು, ಆದಿ ಪರ್ವ,14,16
600. ನೊರಜು, ಸಣ್ಣ ಕಲ್ಲಿನ ಚೂರು, ಭೀಷ್ಮ ಪರ್ವ,3,70
601. ನೊರಜು, ಸೊಳ್ಳೆ, ಅರಣ್ಯ ಪರ್ವ,19,24
602. ನೊರಜು, ಸೊಳ್ಳೆ. ಅಲ್ಪಜೀವಿ., ಕರ್ಣ ಪರ್ವ,6,8
603. ನೊರಜು, ಗುಂಗಾಡು (ನುಸಿ) ದೇವಗಿರಿ, ಭೀಷ್ಮ ಪರ್ವ,6,38
604. ನೊರಜು, ಗುಂಗಾಡಿ, ಭೀಷ್ಮ ಪರ್ವ,1,41
605. ನೊಸಲ, ಹಣೆಯ, ಭೀಷ್ಮ ಪರ್ವ,3,11
606. ನೊಸಲನೊಡ್ಡು, ಹಣೆಚಾಚು (ಕಾಲಿಗೆ ಬೀಳು), ಭೀಷ್ಮ ಪರ್ವ,1,5
607. ನೊಸಲಿನಲಿ ಕಣ್ಣುಳ್ಳ ದೇವನು, ಹೆಣೆಗಣ್ಣನಾದ ಪರಮೇಶ್ವರನು, ಸಭಾ ಪರ್ವ,5,38
608. ನೊಸಲಿನೊಳ್, ಹಣೆಯಲ್ಲಿ, ದ್ರೋಣ ಪರ್ವ,1,21
609. ನೊಸಲು, ಹಣೆ., ಗದಾ ಪರ್ವ,6,1
610. ನೋಂತರೊ, ವ್ರತಹಿಡಿದರೋ, ಗದಾ ಪರ್ವ,12,9
611. ನೋಂತಳೊ, ವ್ರತ ಮಾಡಿದಳೊ, ದ್ರೋಣ ಪರ್ವ,5,17
612. ನೋಟ, ದೃಷ್ಟಿ, ಆದಿ ಪರ್ವ,13,10
613. ನೋಟಕರು, ನೋಡುವವರು, ಗದಾ ಪರ್ವ,8,24
614. ನೋಡಿಕೋ, ಪರಿಶೀಲಿಸಿಕೋ, ಆದಿ ಪರ್ವ,8,82
615. ನೋತುದು, ಬದ್ಧನಾಗುವುದು, ಭೀಷ್ಮ ಪರ್ವ,7,29
616. ನೋನು, ಹೊರು, ಉದ್ಯೋಗ ಪರ್ವ,6,24
617. ನೋಳ್ಪಡೆ, ವಿಚಾರ ಮಾಡಿದರೆ, ಭೀಷ್ಮ ಪರ್ವ,8,58
618. ಪಂಕ, ಕೆಸರು, ಅರಣ್ಯ ಪರ್ವ,6,52
619. ಪಂಕಿಲ, ಕೆಸರು, ಸಭಾ ಪರ್ವ,15,48
620. ಪಂಗುಳ, ಹೆಳವ, ಉದ್ಯೋಗ ಪರ್ವ,3,107
621. ಪಂಚಕ, ಐದುಬಾಣಗಳ ಸಮೂಹ, ಆದಿ ಪರ್ವ,14

[೧][೨][೩]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ