<ಗದುಗಿನ ಭಾರತ ಪದಕೋಶ

ಪ, ಫ, ಸಂಪಾದಿಸಿ

  • 1. ಪಂಕ, ಕೆಸರು, ಅರಣ್ಯ ಪರ್ವ,6,52
  • 2. ಪಂಕಿಲ, ಕೆಸರು, ಸಭಾ ಪರ್ವ,15,48
  • 3. ಪಂಗುಳ, ಹೆಳವ, ಉದ್ಯೋಗ ಪರ್ವ,3,107
  • 4. ಪಂಚಕ, ಐದುಬಾಣಗಳ ಸಮೂಹ, ಆದಿ ಪರ್ವ,14,2
  • 5. ಪಂಚಕ, ಐದರ ಗುಂಪು, ಆದಿ ಪರ್ವ,18,32
  • 6. ಪಂಚತೆ, ಸಾವು (ಕೊನೆ), ಆದಿ ಪರ್ವ,19,20
  • 7. ಪಂಚದ್ರೌಪದೇಯರು, ದ್ರೌಪದಿಯ ಐದುಜನ ಮಕ್ಕಳು, ಗದಾ ಪರ್ವ,10,17
  • 8. ಪಂಚದ್ರೌಪದೇಯರು, ದ್ರೌಪದಿಗೆ ಪಾಂಡವರೈವರಿಂದ ಹುಟ್ಟಿದ ಐದು ಜನ ಮಕ್ಕಳು, ಗದಾ ಪರ್ವ,8,44
  • 9. ಪಂಚಧಾರಾ ಪ್ರೌಢ ವಾಜಿಗಳು, ಐದು ಬಗೆಯ ನಡಿಗೆಯ ಕುದುರೆಗಳು, ವಿರಾಟ ಪರ್ವ,5,48
  • 10. ಪಂಚಪುತ್ರಿಕೆ, ಐವರು ಮಕ್ಕಳ ತಾಯಿ ಎಂದು ಬೇಡತಿಯ ಹೆಸರು. ಸಂಕೇತವಿರಬೇಕು ?, ಆದಿ ಪರ್ವ,8,87
  • 11. ಪಂಜು, ದೀವಟಿಗೆ, ದ್ರೋಣ ಪರ್ವ,15,33
  • 12. ಪಂಟಿಸು, ಅಟಾಟೋಪದಿಂದ ಮುನ್ನುಗ್ಗು, ಶಲ್ಯ ಪರ್ವ,2,41
  • 13. ಪಂತಿ, ಪಂಕ್ತಿ, ಭೀಷ್ಮ ಪರ್ವ,1,16
  • 14. ಪಂಥ, ಪ್ರತಿಜ್ಞೆ, ಆದಿ ಪರ್ವ,18,2
  • 15. ಪಂಥ, ಛಲ, ವಿರಾಟ ಪರ್ವ,10,40
  • 16. ಪಂಥ, ಹೊಣೆ, ಕರ್ಣ ಪರ್ವ,24,34
  • 17. ಪಂಥ, ದಾರಿ/ಮಾರ್ಗ, ಉದ್ಯೋಗ ಪರ್ವ,1,31
  • 18. ಪಂಥದ ಜಾಣ, ನುಡಿದಂತೆ ನಡೆಯುವವನು, ದ್ರೋಣ ಪರ್ವ,1,32
  • 19. ಪಕ್ಕ, ಪಕ್ಕೆ , ವಿರಾಟ ಪರ್ವ,8,74
  • 20. ಪಕ್ಕಲೆ, ಚೀಲ್ರ, ಗದಾ ಪರ್ವ,3,11
  • 21. ಪಕ್ಕಲೆ, ತಪ್ಪಲೆ, ಭೀಷ್ಮ ಪರ್ವ,5,30
  • 22. ಪಕ್ಷ, ಪಕ್ಷಪಾತ ವಹಿಸಿಕೊಂಡು ಮಾತಾಡುವಿಕೆ, ವಿರಾಟ ಪರ್ವ,9,15
  • 23. ಪಕ್ಷಪಾತ, ಒಂದು ಕಡೆಗೆ ವಿಶೇಷ ಒಲವು ತೋರುವುದು., ಗದಾ ಪರ್ವ,6,5
  • 24. ಪಕ್ಷಭ್ರಮೆ, ಪಕ್ಷಪಾತ , ಕರ್ಣ ಪರ್ವ,9,29
  • 25. ಪಕ್ಷಾಂತರ, ಇನ್ನೊಂದು ಮಗ್ಗುಲು, ಆದಿ ಪರ್ವ,19,6
  • 26. ಪಕ್ಷಾವೇಶಿ, ಪಕ್ಷಪಾತಿ, ಕರ್ಣ ಪರ್ವ,9,13
  • 27. ಪಚಾರಿಸು, ಲೇವಡಿ ಮಾಡು, ಅರಣ್ಯ ಪರ್ವ,14,27
  • 28. ಪಟಹ, ನಗಾರಿಯಂತಹ ಒಂದುವಾದ್ಯ, ಶಲ್ಯ ಪರ್ವ,3,25
  • 29. ಪಟಹ, ಒಂದು ಚರ್ಮವಾದ್ಯ ನಗಾರಿ, ವಿರಾಟ ಪರ್ವ,8,3
  • 30. ಪಟುಗತಿ, ತೀವ್ರಗತಿ, ಭೀಷ್ಮ ಪರ್ವ,3,3
  • 31. ಪಟುತನ, ಜಾಣ್ಮೆ, ಉದ್ಯೋಗ ಪರ್ವ,4,70
  • 32. ಪಟುಪವನ, ಬಿರುಗಾಳಿ, ಭೀಷ್ಮ ಪರ್ವ,4,20
  • 33. ಪಟುಭಟರು, ಸಮರ್ಥರಾದ ಯೋಧರು, ಆದಿ ಪರ್ವ,17,3
  • 34. ಪಟ್ಟ, ಪಟ್ಟಾಭಿಷೇಕ, ಕರ್ಣ ಪರ್ವ,6,33
  • 35. ಪಟ್ಟ, ಅರಸುತನ, ಗದಾ ಪರ್ವ,13,7
  • 36. ಪಟ್ಟಕರ್ಮದ, ಬಣ್ಣಬಣ್ಣದ ಚಿತ್ರದ ಕೆಲಸಗಳನ್ನು ಮಾಡಿರುವ, ಗದಾ ಪರ್ವ,4,13
  • 37. ಪಟ್ಟಕೆ, ಪಟ್ಟಾಭಿಷೇಕಕ್ಕೆ, ಭೀಷ್ಮ ಪರ್ವ,1,29
  • 38. ಪಟ್ಟೆ, ರೇಷ್ಮೆ ಬಟ್ಟೆ, ಆದಿ ಪರ್ವ,12,11
  • 39. ಪಟ್ಟೆಯ, ನೀಳವಾದ ಕತ್ತಿ, ಗದಾ ಪರ್ವ,1,52
  • 40. ಪಟ್ಟೆಯ, ಇಬ್ಬಾಯಿ ಕತ್ತಿ, ಭೀಷ್ಮ ಪರ್ವ,4,78
  • 41. ಪಟ್ಟೆಯ, ಖಡ್ಗದಂಥ ಆಯುಧ, ಭೀಷ್ಮ ಪರ್ವ,4,80
  • 42. ಪಡ, ನೆಲೆ, ಗದಾ ಪರ್ವ,7,45
  • 43. ಪಡಪು, ಲಾಭ, ಗದಾ ಪರ್ವ,6,30
  • 44. ಪಡಪು, ಹೆಗ್ಗಳಿಕೆ, ಭೀಷ್ಮ ಪರ್ವ,8,20
  • 45. ಪಡಿ, ಪ್ರತಿ, ಉದ್ಯೋಗ ಪರ್ವ,5,16
  • 46. ಪಡಿ, ಆಹಾರ ಅಳೆಯುವ ಪ್ರಮಾಣ, ಉದ್ಯೋಗ ಪರ್ವ,9,37
  • 47. ಪಡಿ, ಇನ್ನೊಂದು, ಆದಿ ಪರ್ವ,14,34
  • 48. ಪಡಿಗ, ಸಂಭಾವನೆ, ಅರಣ್ಯ ಪರ್ವ,8,9
  • 49. ಪಡಿಗ, ಹರಿವಾಣ, ಸಭಾ ಪರ್ವ,8,7
  • 50. ಪಡಿಗ, ತಟ್ಟಿ, ಉದ್ಯೋಗ ಪರ್ವ,8,61
  • 51. ಪಡಿಘಟ್ಟಣೆ, ಪ್ರತಿ ಹೊಡೆತ, ಕರ್ಣ ಪರ್ವ,19,45
  • 52. ಪಡಿತಳ, ಎದುರಿಗೆ, ಗದಾ ಪರ್ವ,7,18
  • 53. ಪಡಿತಳ, ಕೆಳಮಟ್ಟ (ಸೇರಿಕೆ, ಗದಾ ಪರ್ವ,8,30
  • 54. ಪಡಿತಳಿಸಿ, ಆಕ್ರಮಿಸಿ, ದ್ರೋಣ ಪರ್ವ,8,28
  • 55. ಪಡಿತಳಿಸು, ಮುನ್ನುಗ್ಗು, ದ್ರೋಣ ಪರ್ವ,1,63
  • 56. ಪಡಿತಳಿಸು, ಒಟ್ಟಾಗು , ಶಲ್ಯ ಪರ್ವ,2,41
  • 57. ಪಡಿತಾಳ, ತಡ, ಗದಾ ಪರ್ವ,11,71
  • 58. ಪಡಿತೊಡೆ, ?, ಭೀಷ್ಮ ಪರ್ವ,4,38
  • 59. ಪಡಿಧರಣಿ, ಪ್ರತಿಭೂಮಂಡಲ, ಭೀಷ್ಮ ಪರ್ವ,1,49
  • 60. ಪಡಿನೆಲ, ಇನ್ನೊಂದು ನೆಲ, ವಿರಾಟ ಪರ್ವ,5,11
  • 61. ಪಡಿಪುಚ್ಚ, ಸಂಶಯ, ಆದಿ ಪರ್ವ,20,32
  • 62. ಪಡಿಬಲ, ಎದುರು ಸೈನ್ಯ, ಶಲ್ಯ ಪರ್ವ,2,21
  • 63. ಪಡಿಬಲ, ಹೆಚ್ಚಿನ ಸೇನೆ, ದ್ರೋಣ ಪರ್ವ,5,62
  • 64. ಪಡಿಬಲ, ಹೆಚ್ಚಿನ ಬಲ, ದ್ರೋಣ ಪರ್ವ,5,66
  • 65. ಪಡಿಬಲ, ಕೌರವ ಸೇನೆ, ಭೀಷ್ಮ ಪರ್ವ,9,50
  • 66. ಪಡಿಮುಖ, ಶತ್ರುಪಕ್ಷ, ಭೀಷ್ಮ ಪರ್ವ,3,35
  • 67. ಪಡಿಮುಖ, ಪ್ರತಿಮುಖ, ಗದಾ ಪರ್ವ,5,52
  • 68. ಪಡಿಮುಖ, ಎದುರಾಳಿ, ಭೀಷ್ಮ ಪರ್ವ,8,42
  • 69. ಪಡಿಮುಖ, ಎದುರುಭಾಗ., ಗದಾ ಪರ್ವ,1,52
  • 70. ಪಡಿಸಣ, ಪ್ರತೀಕ್ಷಣ, ಸಭಾ ಪರ್ವ,12,92
  • 71. ಪಡಿಸಣ, ಪರೀಕ್ಷಿಸಿ ನೋಡುವುದು, ಭೀಷ್ಮ ಪರ್ವ,4,47
  • 72. ಪಡಿಸೂರ್ಯಮಂಡಲ, ಬೇರೊಂದು ಸೂರ್ಯಮಂಡಲ, ವಿರಾಟ ಪರ್ವ,7,2
  • 73. ಪಡಿಸೂಳು, ಪ್ರತಿಹಾರಿ, ಸಭಾ ಪರ್ವ,2,1
  • 74. ಪಡಿಹಾರ, ದ್ವಾರಪಾಲಕ (ಪಡಿ=ಬಾಗಿಲು) ಕಾವಲುಗಾರ, ವಿರಾಟ ಪರ್ವ,10,30
  • 75. ಪಡಿಹಾರ (ಪ್ರತೀಹಾರಿ), ದ್ವಾgಪಾಲಕ, ಭೀಷ್ಮ ಪರ್ವ,7,14
  • 76. ಪಡಿಹಾರಿಕೆ, ಬಾಗಿಲು ಕಾಯುವಿಕೆ., ಉದ್ಯೋಗ ಪರ್ವ,1,45
  • 77. ಪಡುವಣವರು, ಪಶ್ಚಿಮಭಾಗದವರು, ವಿರಾಟ ಪರ್ವ,1,3
  • 78. ಪಡುವಲು, ಪಶ್ಚಿಮದಲ್ಲಿ, ಸಭಾ ಪರ್ವ,5,33
  • 79. ಪಡೆಗಡಲು, ಸೇನಾ ಸಮುದ್ರ, ದ್ರೋಣ ಪರ್ವ,9,33
  • 80. ಪಡೆವಳರು, ದ್ವಾರಪಾಲಕರು, ಭೀಷ್ಮ ಪರ್ವ,1,17
  • 81. ಪಣ, ಶಪಥ, ಗದಾ ಪರ್ವ,5,33
  • 82. ಪಣ, ಜೂಜಿನಲ್ಲಿ ಸೋತರೆ ಕೊಡಬೇಕಾದ ಪೂರ್ವನಿಶ್ಚಿತ ಮೊತ್ತ ವಸ್ತು ಇತ್ಯಾದಿ, ವಿರಾಟ ಪರ್ವ,9,12
  • 83. ಪಣ, ಜಾಣಪಣ ಇಂಥ ಶಬ್ದಗಳು ಹಲವಾರಿವೆ. ಪಣ ಎಂಬದು ತನ ಎಂಬರ್ಥದ ಮರಾಠೀ ಪ್ರತ್ಯಯ, ವಿರಾಟ ಪರ್ವ,7,45
  • 84. ಪಣದ, ಪ್ರತಿಜ್ಞೆಯ, ಗದಾ ಪರ್ವ,9,1
  • 85. ಪಣಹ, ಒಂದುವಾದ್ಯ, ಶಲ್ಯ ಪರ್ವ,3,25
  • 86. ಪಣ್ಯಾಂಗನೆ, ವೇಶ್ಯಾಸ್ತ್ರೀ , ಗದಾ ಪರ್ವ,4,60
  • 87. ಪಣ್ಯಾಜೀವಿ, ವ್ಯಾಪಾರಿ, ಆದಿ ಪರ್ವ,12,21
  • 88. ಪತತ್ರಾವಳಿ, ಬಾಣಗಳ ಗುಂಪು, ಭೀಷ್ಮ ಪರ್ವ,8,42
  • 89. ಪತಾಕಾದಂಡ, ಬಾವುಟದ ಕೋಲು, ಭೀಷ್ಮ ಪರ್ವ,9,12
  • 90. ಪತಾಕಾಭಂಗ, ಧ್ವಜ ಮುರಿದು ಬೀಳುವಿಕೆ, ವಿರಾಟ ಪರ್ವ,7,3
  • 91. ಪತಾಕಾವಳಿ, ಧ್ವಜಸಮೂಹ, ವಿರಾಟ ಪರ್ವ,10,50
  • 92. ಪತಿಕರಣೆ, ಮೆಚ್ಚಿಕೆ, ಆದಿ ಪರ್ವ,13,25
  • 93. ಪತಿಕರಣೆ, ಮೆಚ್ಚಿಗೆ, ಕರ್ಣ ಪರ್ವ,18,10
  • 94. ಪತಿಕರಿಸಿ, ಮೆಚ್ಚಿ, ಆದಿ ಪರ್ವ,4,66
  • 95. ಪತಿಕರಿಸಿ, ಹೊಗಳಿ, ಭೀಷ್ಮ ಪರ್ವ,10,28
  • 96. ಪತಿಕರಿಸಿ, ದಯೆತೋರಿ, ಭೀಷ್ಮ ಪರ್ವ,2,32
  • 97. ಪತಿಕರಿಸು, ನೇಮಿಸು, ಸಭಾ ಪರ್ವ,1,65
  • 98. ಪತಿಕರಿಸು, ಉಪಚರಿಸು , ಗದಾ ಪರ್ವ,4,37
  • 99. ಪತಿಕರಿಸು, ರಕ್ಷಿಸು, ಸಭಾ ಪರ್ವ,9,44
  • 100. ಪತಿಕರಿಸು, ಒಪ್ಪು , ಗದಾ ಪರ್ವ,5,48, ,
  • 101. ಪತಿಕರಿಸು, ಗೌರವಿಸು, ಶಲ್ಯ ಪರ್ವ,1,27
  • 102. ಪತಿಕರಿಸು, ಗೌರವಿಸು, ವಿರಾಟ ಪರ್ವ,7,18
  • 103. ಪತಿತ, ಪಾಪಿ, ಉದ್ಯೋಗ ಪರ್ವ,4,91
  • 104. ಪತಿಯಂಕದವರು, ಯುದ್ಧವೀರರು, ಭೀಷ್ಮ ಪರ್ವ,2,10
  • 105. ಪತ್ತಿ, ಪದಾತಿ, ಸಭಾ ಪರ್ವ,10,5
  • 106. ಪತ್ತಿ, ಯೋಧ, ವಿರಾಟ ಪರ್ವ,4,25
  • 107. ಪತ್ತಿ, ಅಕ್ಷೋಹಿಣಿ ಸೈನ್ಯದ ಒಂದು ಭಾಗ, ಗದಾ ಪರ್ವ,9,15
  • 108. ಪತ್ತಿ, ಕಾಲಾಳು (ಒಂದು ರಥ, ಶಲ್ಯ ಪರ್ವ,2,7
  • 109. ಪತ್ರ, ಸೊಪ್ಪು, ವಿರಾಟ ಪರ್ವ,3,36
  • 110. ಪತ್ರ, ಎಲೆ, ವಿರಾಟ ಪರ್ವ,10,48
  • 111. ಪಥ್ಯ, ಹಿತ, ಉದ್ಯೋಗ ಪರ್ವ,9,18
  • 112. ಪದ ಘಟ್ಟಣೆಗೆ, ಕಾಲಿನ ರಭಸ, ಸಭಾ ಪರ್ವ,2,108
  • 113. ಪದಕ, ಎದೆಯ ಮೇಲೆ ಜೋಲುವ ಆಭರಣ, ಆದಿ ಪರ್ವ,16,28
  • 114. ಪದಘಟ್ಟನೆ, ಕಾಲ ತುಳಿತ, ವಿರಾಟ ಪರ್ವ,10,53
  • 115. ಪದಥಟ್ಟಣೆ, ಪಾದಗಳಿಂದ ನೆಲವನ್ನು ಅಪ್ಪಳಿಸುವುದು, ಗದಾ ಪರ್ವ,7,4
  • 116. ಪದದ, ನಡವಳಿಕೆಗಳ, ಗದಾ ಪರ್ವ,8,41
  • 117. ಪದಪವನಜ, ಪಾದಕಮಲ, ಸಭಾ ಪರ್ವ,2,11
  • 118. ಪದಯುಗ, ಪಾದದ್ವಂದ್ವ, ಗದಾ ಪರ್ವ,11,32
  • 119. ಪದವಿ, ಅಧಿಕಾರ/ಸ್ಥಾನ, ಉದ್ಯೋಗ ಪರ್ವ,4,72
  • 120. ಪದಸ್ತತನ, ಇಟ್ಟ ಕಾಲನ್ನು ತೆಗೆಯದ ಹಾಗೆ., ದ್ರೋಣ ಪರ್ವ,15,62
  • 121. ಪದಸ್ಥ, ಪದವಿಗಳನ್ನು, ಗದಾ ಪರ್ವ,1,13
  • 122. ಪದಹತ, ಕಾಲ್ದುಳಿತ, ಆದಿ ಪರ್ವ,12,2
  • 123. ಪದಹತ ಧೂಳಿ, ಆನೆಗಳ ಕಾಲುಗಳ ನಡಿಗೆ ಪೆಟ್ಟಿನಿಂದ ಮೇಲೆದ್ದ ಧೂಳು, ಭೀಷ್ಮ ಪರ್ವ,4,76
  • 124. ಪದಹತಧೂಳಿ, ಕಾಲ್ದುಳಿತದಿಂದ ಎದ್ದ ಧೂಳಿನ ರಾಶಿ, ಭೀಷ್ಮ ಪರ್ವ,4,42
  • 125. ಪದಹತಿ, ಪಾದಗಳ ತುಳಿತ, ಭೀಷ್ಮ ಪರ್ವ,3,24
  • 126. ಪದಾತಿ, ಯೋಧ, ವಿರಾಟ ಪರ್ವ,4,58
  • 127. ಪದಾತಿ, ಕಾಲುದಳ, ಶಲ್ಯ ಪರ್ವ,2,27
  • 128. ಪದಾಯುಧ, ಹುಂಜ (ಪಾದವನ್ನೇ ಆಯುಧವಾಗಿ ಉಳ್ಳದ್ದು), ಆದಿ ಪರ್ವ,20,52
  • 129. ಪದುಳಿಸು, ಸಂತೈಸು, ಸಭಾ ಪರ್ವ,1,94
  • 130. ಪದ್ಮಜ, ಬ್ರಹ್ಮ (ಕಮಲದಲ್ಲಿ ಹುಟ್ಟಿದವನು), ಆದಿ ಪರ್ವ,10,40
  • 131. ಪದ್ಮರಾಗ, ಮಾಣಿಕ್ಯ, ಆದಿ ಪರ್ವ,12,26
  • 132. ಪದ್ಮಾಕರ, ಕೊಳ, ಅರಣ್ಯ ಪರ್ವ,18,24
  • 133. ಪದ್ಮಾಯತ, ಕಮಲದ ಆಕಾರ., ದ್ರೋಣ ಪರ್ವ,4,0
  • 134. ಪನಸ, ಹಲಸು, ಸಭಾ ಪರ್ವ,2,56
  • 135. ಪಯಗತಿ, ಕಾಲುಗಳ ಚಲನೆ, ಗದಾ ಪರ್ವ,6,15
  • 136. ಪಯಪಾಡು, ನಡಿಗೆಯ ಕ್ರಮ, ಗದಾ ಪರ್ವ,7,18
  • 137. ಪಯಪಾಡು, ಹೆಜ್ಜೆ ಹಾಕುವ ರೀತಿ, ಆದಿ ಪರ್ವ,7,28
  • 138. ಪಯಪಾಡು, ಕಾಲಿನ ನಡಿಗೆಯ ಒಂದು ರೀತಿ, ಕರ್ಣ ಪರ್ವ,19,36
  • 139. ಪಯಸನ್ನೆ, ಪಾದಸನ್ನೆ, ಭೀಷ್ಮ ಪರ್ವ,4,55
  • 140. ಪಯೋಧರ, ಸ್ತನ, ಸಭಾ ಪರ್ವ,14,70
  • 141. ಪಯೋಧಿ, ಹಾಲಿನ ಸಮುದ್ರ, ದ್ರೋಣ ಪರ್ವ,3,18
  • 142. ಪಯೋಬಿಂದು, ಹಾಲಿನಹನಿ, ಉದ್ಯೋಗ ಪರ್ವ,8,15
  • 143. ಪರ, ಅನ್ಯ, ಉದ್ಯೋಗ ಪರ್ವ,4,70
  • 144. ಪರಂಜ್ಯೋತಿ, ಪರಮಾತ್ಮ, ದ್ರೋಣ ಪರ್ವ,7,25
  • 145. ಪರಕೆಬಾಹಿರ, ಮೋಕ್ಷಕ್ಕೆ ದೂರ, ಭೀಷ್ಮ ಪರ್ವ,3,29
  • 146. ಪರಗತಿ, ಅವಸ್ಥೆ, ಅರಣ್ಯ ಪರ್ವ,17,7
  • 147. ಪರಘಾಯವನು, ಎದುರಾಳಿ ಏಟನ್ನು, ಭೀಷ್ಮ ಪರ್ವ,4,46
  • 148. ಪರತತ್ತ್ವ, ಬ್ರಹ್ಮವಿದ್ಯೆ, ಉದ್ಯೋಗ ಪರ್ವ,4,2
  • 149. ಪರತತ್ವ, ಪರಬ್ರಹ್ಮಸ್ವರೂಪ, ಭೀಷ್ಮ ಪರ್ವ,3,57
  • 150. ಪರತತ್ವಜ್ಞ, ಅಧ್ಯಾತ್ಮ ವಿದ್ಯೆಯನ್ನು ಬಲ್ಲವನು, ಅರಣ್ಯ ಪರ್ವ,13,59
  • 151. ಪರಬಲ, ಎದುರು ಸೈನ್ಯ, ದ್ರೋಣ ಪರ್ವ,1,50
  • 152. ಪರಬಲಾಂತಕ, ಶತ್ರು ಸೈನ್ಯದ ಯಮ, ಆದಿ ಪರ್ವ,10,34
  • 153. ಪರಮ, ಅತ್ಯುತ್ತಮ, ಆದಿ ಪರ್ವ,17,20
  • 154. ಪರಮ ಪದ, ಮೋಕ್ಷ, ಉದ್ಯೋಗ ಪರ್ವ,4,59
  • 155. ಪರಮಂಡಲ, ಶತ್ರುಪಕ್ಷ, ಉದ್ಯೋಗ ಪರ್ವ,2,29
  • 156. ಪರಮಂಡಲ, ಹೊರದೇಶ, ಉದ್ಯೋಗ ಪರ್ವ,3,28
  • 157. ಪರಮಂಡಳಿಕ, ಬೇರೆ ರಾಜರು , ಗದಾ ಪರ್ವ,8,20
  • 158. ಪರಮಂಡಳಿಕರು, ಶತ್ರುರಾಜರು, ಭೀಷ್ಮ ಪರ್ವ,3,40
  • 159. ಪರಮಜೀವವಿದು, ಅತಿಶ್ರೇಷ್ಠ ಸಾಧನೆ, ಗದಾ ಪರ್ವ,7,5
  • 160. ಪರಮತತ್ವ, ಅಧ್ಯಾತ್ಮ ತತ್ವ, ಭೀಷ್ಮ ಪರ್ವ,3,62
  • 161. ಪರಮಧರ್ಮ, ಶ್ರೇಷ್ಠ ಧರ್ಮ, ಭೀಷ್ಮ ಪರ್ವ,3,50
  • 162. ಪರಮನಿದ್ರಾಗುಪ್ತ, ನಿದ್ದೆಯ ಗುಪ್ತ ಶಕ್ತಿಗೆ ಒಳಗಾಗು, ವಿರಾಟ ಪರ್ವ,8,86
  • 163. ಪರಮಪಾತಕ, ಪರಮ ಪಾಪಿ, ಭೀಷ್ಮ ಪರ್ವ,3,37
  • 164. ಪರಮರ್ಮ, ಬೇರೆಯವರ ಮನಸ್ಸು, ಗದಾ ಪರ್ವ,11,57
  • 165. ಪರಮಹಂಸ, (ಬ್ರಹ್ಮಸಿದ್ಧಿಯನ್ನು ಪಡೆದ) ಸಂನ್ಯಾಸಿ, ಆದಿ ಪರ್ವ,19,28
  • 166. ಪರಮಾಣುಪುಂಜ, ಸೂಕ್ಷ್ಮ ಕಣಗಳ ಗುಂಪು, ವಿರಾಟ ಪರ್ವ,7,45
  • 167. ಪರಮಾರ್ಥ, ಮೋಕ್ಷ, ಉದ್ಯೋಗ ಪರ್ವ,4,19
  • 168. ಪರಮೇಷ್ಠಿ, ಶ್ರೇಷ್ಠ ದೈವ, ಆದಿ ಪರ್ವ,20,47
  • 169. ಪರವಿತ್ತ, ಅನ್ಯರಧನ, ವಿರಾಟ ಪರ್ವ,2,44
  • 170. ಪರಶು, ಕೊಡಲಿಯೆಂಬ ಆಯುಧ, ಗದಾ ಪರ್ವ,1,29
  • 171. ಪರಶು, ಗಂಡುಗೊಡಲಿ, ಕರ್ಣ ಪರ್ವ,11,9
  • 172. ಪರಶ್ವಧ, ಚಪಗೊಡಲಿ, ವಿರಾಟ ಪರ್ವ,1,11
  • 173. ಪರಸೇನೆ, ಹಗೆಗಳದಂಡು, ಭೀಷ್ಮ ಪರ್ವ,1,28
  • 174. ಪರಸೇವಾ ಲಘುಸ್ಥಿತರು, ಅನ್ಯರ ಸೇವೆಯಲ್ಲಿ ಅಲ್ಪರಾಗಿರುವವರು, ಭೀಷ್ಮ ಪರ್ವ,2,26
  • 175. ಪರಸ್ವರೂಪ, ಅವ್ಯಕ್ತ ಚೇತನನು, ಭೀಷ್ಮ ಪರ್ವ,7,16
  • 176. ಪರಹಸ್ತದಲಿ, ಬೇರೆಯವರ ಕೈಯಿಂದ, ಗದಾ ಪರ್ವ,13,13
  • 177. ಪರಾ, ಮೋರೆ ತಿರುವುವುದು, ಉದ್ಯೋಗ ಪರ್ವ,3,64
  • 178. ಪರಾಕ್ರಮ ತಳಿತುದು, ಪ್ರಸಾರವಾಯಿತು, ಶಲ್ಯ ಪರ್ವ,1,13
  • 179. ಪರಾಗ, ನಸುಕೆಂಪು, ಆದಿ ಪರ್ವ,12,2
  • 180. ಪರಾಜಯ ರೋಷ ಪಾವಕ ವಿಸ್ಫುಲಿಂಗಿತ, À ಇಬ್ಬರೂ ಸೋಲು ತಂದ ರೋಷ ಎಂಬ ಬೆಂಕಿಯಿಂದ ಕಿಡಿಕಾರುತ್ತಿದ್ದರು, ವಿರಾಟ ಪರ್ವ,8,60
  • 181. ಪರಾನಂದ, ಪರಮಾನಂದ, ವಿರಾಟ ಪರ್ವ,10,79
  • 182. ಪರಾರ್ಥ, ಬೇರೆಯವರಿಗಾಗಿ, ಉದ್ಯೋಗ ಪರ್ವ,4,54
  • 183. ಪರಾರ್ಥ, ಪರಹಿತ, ಆದಿ ಪರ್ವ,10,20
  • 184. ಪರಾರ್ಥ, ಪರಮಾರ್ಥ, ಅರಣ್ಯ ಪರ್ವ,13,58
  • 185. ಪರಾರ್ಥಸಾಧಕತನ, ಇನ್ನೊಬ್ಬರಿಗೆ ಪ್ರಯೋಜನ ದೊರಕಿಸಿಕೊಡುವುದು, ಆದಿ ಪರ್ವ,20,15
  • 186. ಪರಿ, ರೀತಿ., ಉದ್ಯೋಗ ಪರ್ವ,3,131
  • 187. ಪರಿಕರ, ಬೇಕಾದ ಸಲಕರಣೆಗಳು, ಸಭಾ ಪರ್ವ,1,48
  • 188. ಪರಿಕರ, ಸಲಕರಣೆ, ಆದಿ ಪರ್ವ,19,23
  • 189. ಪರಿಕರ, ಪರಿವಾರದವರು, ವಿರಾಟ ಪರ್ವ,10,17
  • 190. ಪರಿಕರ, ಅನುಯಾಯಿ, ಆದಿ ಪರ್ವ,20,8
  • 191. ಪರಿಕರಣೆ, ವ್ಯವಸ್ಥೆ, ಸಭಾ ಪರ್ವ,1,69
  • 192. ಪರಿಕಲಿತ, ಒಳಗೊಂಡ, ಭೀಷ್ಮ ಪರ್ವ,8,3
  • 193. ಪರಿಕ್ರಮ, ಬಳಸುವಿಕೆ, ಆದಿ ಪರ್ವ,2,11
  • 194. ಪರಿಖಿನ್ನರು, ವಿಶೇಷವಾಗಿ ದುಃಖಿತರಾದವರು, ಗದಾ ಪರ್ವ,11,3
  • 195. ಪರಿಗಣಿಸು, ಲೆಕ್ಕಹಾಕು , ವಿರಾಟ ಪರ್ವ,4,23
  • 196. ಪರಿಗತ, ಮರೆತುಹೋದ, ಗದಾ ಪರ್ವ,2,21
  • 197. ಪರಿಗತ, ಉಂಟಾದ, ಆದಿ ಪರ್ವ,19,45
  • 198. ಪರಿಗತಿ, ಸ್ಥಿತಿಗತಿ, ಗದಾ ಪರ್ವ,8,53
  • 199. ಪರಿಗಳಿತ, ಎದುರಾಳಿಯನ್ನು ಚಚ್ಚುವ, ಕರ್ಣ ಪರ್ವ,18,21
  • 200. ಪರಿಗ್ರಹ, ಕೊಳ್ಳಬೇಕಾದ ಕಾಣಿಕೆ, ದ್ರೋಣ ಪರ್ವ,10,10
  • 201. ಪರಿಘ, ಕಬ್ಬಿಣದ ಆಯುಧ (ಗದೆ) ಉರವಣಿಸು, ವಿರಾಟ ಪರ್ವ,4,52
  • 202. ಪರಿಚರಿಯ, ಪರಿಚರ್ಯೆ/ಪೂಜೆ, ಉದ್ಯೋಗ ಪರ್ವ,3,37
  • 203. ಪರಿಚರಿಯತನ, ಸೇವಾನುಭವ ಎಂಬರ್ಥದಲ್ಲಿ. (ಪರಿಚರ್ಯತನ) ಇದು ಕುಮಾರವ್ಯಾಸನ ಪ್ರಯೋಗ, ವಿರಾಟ ಪರ್ವ,5,41
  • 204. ಪರಿಚಲನಸಂಚ, ಚಲನೆಯಲ್ಲಿ ಭಾರವಾದ , ಗದಾ ಪರ್ವ,10,2
  • 205. ಪರಿಚ್ಛೇದಿಗಳು, ತುಂಡುಮಾಡುವವರು, ಗದಾ ಪರ್ವ,1,7
  • 206. ಪರಿಚ್ಛೇದಿಸು, ವಿಭಾಗಮಾಡು, ಗದಾ ಪರ್ವ,1,30
  • 207. ಪರಿಚ್ಛೇದಿಸು, ತುಂಡುಮಾಡು, ಸಭಾ ಪರ್ವ,9,20
  • 208. ಪರಿಜನ, ಸುತ್ತಲೂ ಇರುವ ಜನ , ಗದಾ ಪರ್ವ,13,8
  • 209. ಪರಿಜನ, ಪರಿವಾರದವರು, ಗದಾ ಪರ್ವ,4,19
  • 210. ಪರಿಣತ, ನುರಿತ/ತಿಳಿದ, ಉದ್ಯೋಗ ಪರ್ವ,9,45
  • 211. ಪರಿಣತ, ಪ್ರೌಢ , ಆದಿ ಪರ್ವ,1,19
  • 212. ಪರಿಣತರು, ನಿಪುಣರು, ಆದಿ ಪರ್ವ,6,40
  • 213. ಪರಿಣತೆ, ವಿಶೇಷ ಪರಿಶ್ರಮ, ವಿರಾಟ ಪರ್ವ,1,22
  • 214. ಪರಿಣತೆ, ಪಕ್ವತೆ, ವಿರಾಟ ಪರ್ವ,5,15
  • 215. ಪರಿಣಮಿಸು, ಸಂತೋಷಗೊಳ್ಳು, ಅರಣ್ಯ ಪರ್ವ,3,29
  • 216. ಪರಿಣಾಮ, ಸಂತೋಷ., ಉದ್ಯೋಗ ಪರ್ವ,6,22
  • 217. ಪರಿತೋಷ, ಅತಿತೃಪ್ತಿ, ಆದಿ ಪರ್ವ,7,62
  • 218. ಪರಿತೋಷದಲಿ, ಸಂತೋಷದಿಂದ, ಭೀಷ್ಮ ಪರ್ವ,2,35
  • 219. ಪರಿತ್ರಾಯಸ್ವ, ರಕ್ಷಿಸು, ಭೀಷ್ಮ ಪರ್ವ,3,73
  • 220. ಪರಿದಳಿತ, ತುಳಿದ, ಕರ್ಣ ಪರ್ವ,18,7
  • 221. ಪರಿದಳಿತ, ತುಂಡಾದ, ದ್ರೋಣ ಪರ್ವ,15,26
  • 222. ಪರಿಧಾನ, ಸೀರೆ , ಗದಾ ಪರ್ವ,4,8
  • 223. ಪರಿಧಾವನ, ಓಡುವುದು, ಕರ್ಣ ಪರ್ವ,3,3
  • 224. ಪರಿಧಾವನೆ, ರಭಸವಾಗಿ ಓಡುವುದು, ಕರ್ಣ ಪರ್ವ,19,21
  • 225. ಪರಿಧೌತ, ಶುಭ್ರವಾದ, ಆದಿ ಪರ್ವ,4,5
  • 226. ಪರಿಪಕ್ವ, ಪೂರ್ಣವಾದ ಹಣ್ಣು, ಉದ್ಯೋಗ ಪರ್ವ,7,24
  • 227. ಪರಿಪರಿ, ವಿಧವಿಧ, ಆದಿ ಪರ್ವ,10,23
  • 228. ಪರಿಪಾಠಿ, ನಡೆದುಬಂದ ಕ್ರಮ, ಗದಾ ಪರ್ವ,7,12
  • 229. ಪರಿಪೂತ, ಪವಿತ್ರವಾದ, ಸಭಾ ಪರ್ವ,11,3
  • 230. ಪರಿಬದ್ಧ, ಚೆನ್ನಾಗಿ ಕಟ್ಟಲ್ಪಟ್ಟ, ಆದಿ ಪರ್ವ,2,23
  • 231. ಪರಿಭವ, ಅಪಮಾನ, ಗದಾ ಪರ್ವ,3,44
  • 232. ಪರಿಭವಣೆ, ಅಲೆದಾಟ, ಆರಣ್ಯ ಪರ್ವ,1,3
  • 233. ಪರಿಭವಮಯ, ಸೋಲಿನಿಂದ ತುಂಬಿದ, ಶಲ್ಯ ಪರ್ವ,2,58
  • 234. ಪರಿಭಾವಿಸು, ಮನಸ್ಸಿಗೆ ತಂದುಕೊಳ್ಳುವುದು, ಗದಾ ಪರ್ವ,3,7
  • 235. ಪರಿಮಂಡಲಿತ, ಬಾಗಿದ, ಕರ್ಣ ಪರ್ವ,22,34
  • 236. ಪರಿಮಳ, ಕಂಪು, ಉದ್ಯೋಗ ಪರ್ವ,7,25
  • 237. ಪರಿಮಳವ ಕದ್ದು ಓಡುವ, ಸುವಾಸನೆಯನ್ನು ಪತ್ತೆ ಹಚ್ಚಿ ಹಿಡಿದು ಓಡುವ, ವಿರಾಟ ಪರ್ವ,4,8
  • 238. ಪರಿಮಳವ ಕೊಂಬಂದದಲೆ, ಸುಗಂಧಯುಕ್ತವಾದ ಮಕರಂದವನ್ನು, ಸಭಾ ಪರ್ವ,1,53
  • 239. ಪರಿಮಿತ, ಮಿತಿಯುಳ್ಳ, ಆದಿ ಪರ್ವ,18,23
  • 240. ಪರಿಮಿತ, ಆಪ್ತ ವಲಯ, ಉದ್ಯೋಗ ಪರ್ವ,11,30
  • 241. ಪರಿಮಿತಕೆ, ಬೇರೆಯವರು ಬರದಂತೆ ಇರುವ ಪ್ರತ್ಯೇಕ ಸ್ಥಳ , ಗದಾ ಪರ್ವ,4,51, ,
  • 242. ಪರಿಮಿತದ ಜನ, ಆಪ್ತರಾದ ಜನ, ಗದಾ ಪರ್ವ,13,11
  • 243. ಪರಿಯಂಕ, ಮಂಚ, ವಿರಾಟ ಪರ್ವ,1,29
  • 244. ಪರಿಯಂಕ, ಹಾಸಿಗೆ, ಉದ್ಯೋಗ ಪರ್ವ,3,80
  • 245. ಪರಿಯಂತ, ಅಲ್ಲಿಯವರೆಗೆ, ಗದಾ ಪರ್ವ,3,18
  • 246. ಪರಿಯಂತವೆ, ಅಲ್ಲಿಯವರೆಗೆ, ಉದ್ಯೋಗ ಪರ್ವ,5,15
  • 247. ಪರಿಯಟಣ, ಸಂಚಾರ, ಅರಣ್ಯ ಪರ್ವ,22,1
  • 248. ಪರಿಯಟಣ, ತಿರುಗಾಡು, ಆದಿ ಪರ್ವ,11,2
  • 249. ಪರಿಯಸ್ತ, ಆವರಿಸು, ವಿರಾಟ ಪರ್ವ,10,34
  • 250. ಪರಿರಂಭ, ಅಪ್ಪುಗೆ, ಸಭಾ ಪರ್ವ,1,5
  • 251. ಪರಿರಚಿತ, ರಚಿಸಿದ, ಸಭಾ ಪರ್ವ,1,5
  • 252. ಪರಿಲುಳಿತ, ಲೇಪಿತವಾದ, ಗದಾ ಪರ್ವ,11,15
  • 253. ಪರಿಲುಳಿತ, ತೊಟ್ಟಿಕ್ಕಿದ, ಆದಿ ಪರ್ವ,17,30
  • 254. ಪರಿಲೂನ, ಕತ್ತರಿಸಿದ, ಭೀಷ್ಮ ಪರ್ವ,6,32
  • 255. ಪರಿವರ್ತನೆ, ಮಾರ್ಪಾಟು, ಉದ್ಯೋಗ ಪರ್ವ,4,88
  • 256. ಪರಿವಾದ, ವಿರೋಧವಾದ (ಧರ್ಮಜನಿಗೆ ವಿರೋಧವಾದ ಮಾತುಗಳು) ಮುನಿನಿಕರ, ಗದಾ ಪರ್ವ,13,6
  • 257. ಪರಿವಾದ, ತರ್ಕ, ಕರ್ಣ ಪರ್ವ,9,36
  • 258. ಪರಿವಾರ, ಸೆವಕ ವರ್ಗದವರು, ಸಭಾ ಪರ್ವ,1,62
  • 259. ಪರಿವಿಡಿ, ಪರಿಪಾಟ, ಆದಿ ಪರ್ವ,16,22
  • 260. ಪರಿವಿಡಿಯ, ಸರದಿಯ, ಆದಿ ಪರ್ವ,10,28
  • 261. ಪರಿವೃತ, ಸುತ್ತುವರೆದ, ಉದ್ಯೋಗ ಪರ್ವ,8,55
  • 262. ಪರಿವೃತ, ಸುತ್ತಿಕೋ, ವಿರಾಟ ಪರ್ವ,10,4
  • 263. ಪರಿವೃತರು, ಸುತ್ತುವರಿದವರು, ಉದ್ಯೋಗ ಪರ್ವ,8,20
  • 264. ಪರಿವೇಷ, ಮಂಡಲ, ವಿರಾಟ ಪರ್ವ,4,29
  • 265. ಪರಿವೇಷ, ಉತ್ಸಾಹ , ಗದಾ ಪರ್ವ,8,4
  • 266. ಪರಿವೇಷ್ಟಿಸು, ಸುತ್ತುವರಿ, ಗದಾ ಪರ್ವ,1,69
  • 267. ಪರಿಶಿಷ್ಟರು, ಉಳಿದವರು, ಗದಾ ಪರ್ವ,2,10
  • 268. ಪರಿಶೇಷ, ಉಳಿದುದು, ಗದಾ ಪರ್ವ,5,4
  • 269. ಪರಿಶ್ರಮ, ಶಸ್ತ್ರಾಭ್ಯಾಸ, ಆದಿ ಪರ್ವ,7,23
  • 270. ಪರಿಸಂಸ್ಕಾರ, ಉತ್ತಮ ಅಭಿರುಚಿಗಳಿಂದ ಕೂಡಿದ., ಗದಾ ಪರ್ವ,3,40
  • 271. ಪರಿಸರ, ಸಾಮೀಪ್ಯ, ಆದಿ ಪರ್ವ,19,15
  • 272. ಪರಿಹರಿಸು, ನಿವಾರಿಸು, ಆದಿ ಪರ್ವ,18,27
  • 273. ಪರಿಹರಿಸು, ತಿರಸ್ಕರಿಸು, ಗದಾ ಪರ್ವ,5,39
  • 274. ಪರಿಹಾಸ, ಅಣಕ, ಆದಿ ಪರ್ವ,15,24
  • 275. ಪರಿಹೃತಶ್ರಮ, ಆಯಾಸ ಪರಿಹರಿಸಿಕೊಳ್ಳಲು., ಆದಿ ಪರ್ವ,20,12
  • 276. ಪರೀಕ್ಲೇಶಾನು ಸಂತಾಪ, (ವನವಾಸದ) ಕಠಿಣ ಕಾರ್ಯದ ಫಲವಾಗಿ ಬಂದ ಸಂಕಟ, ವಿರಾಟ ಪರ್ವ,10,37
  • 277. ಪರೀಕ್ಷಿತ ತನಯ, ಅಭಿಮನ್ಯುವಿನ ಮಗ ಪರೀಕ್ಷಿತ ರಾಜ, ವಿರಾಟ ಪರ್ವ,6,1
  • 278. ಪರುಟವಿಸು, ಪುರಸ್ಕರಿಸು , ವಿರಾಟ ಪರ್ವ,10,6
  • 279. ಪರುಠವ, ವಿಸ್ತೀರ್ಣ, ಅರಣ್ಯ ಪರ್ವ,11,6
  • 280. ಪರುಠವ, ವಿವರ , ಗದಾ ಪರ್ವ,12,6, ,
  • 281. ಪರುಠವ, ಪದ್ಧತಿÉ, ಆದಿ ಪರ್ವ,16,31
  • 282. ಪರುಠವಣೆ, ಪ್ರಾಪ್ತಿ , ಅರಣ್ಯ ಪರ್ವ,9,31
  • 283. ಪರುಠವಣೆ, ವ್ಯವಸ್ಥೆ, ಸಭಾ ಪರ್ವ,11,4
  • 284. ಪರುಠವಿಸಿ, ಸಜ್ಜು ಮಾಡಿ ಸೌಭದ್ರ, ದ್ರೋಣ ಪರ್ವ,5,62
  • 285. ಪರುಠವಿಸಿದರು, ಹೊರಡಲು ಅಣಿಯಾದರು, ಸಭಾ ಪರ್ವ,3,13
  • 286. ಪರುಠವಿಸು, ಸಂಚರಿಸು, ಅರಣ್ಯ ಪರ್ವ,4,1
  • 287. ಪರುಠವಿಸು, ಸಿದ್ಧತೆಮಾಡು, ಆದಿ ಪರ್ವ,12,7
  • 288. ಪರುಠವಿಸು, ಜೋಡಿಸು , ವಿರಾಟ ಪರ್ವ,7,27
  • 289. ಪರುಠವಿಸು, ಏರ್ಪಡಿಸು, ಗದಾ ಪರ್ವ,13,7
  • 290. ಪರುಠವಿಸು, ಗೊತ್ತು ಮಾಡು, ಆದಿ ಪರ್ವ,19,33
  • 291. ಪರುಠವಿಸು, ತೊಡಗು., ಗದಾ ಪರ್ವ,9,14
  • 292. ಪರುಷ, ಲೋಹ ಮುಟ್ಟಿಸಿದರೆ ಚಿನ್ನ ಮಾಡುವ ಕಲ್ಲು, ಭೀಷ್ಮ ಪರ್ವ,3,69
  • 293. ಪರುಷ, ಸ್ಪರ್ಶಮಣಿ, ದ್ರೋಣ ಪರ್ವ,14,46
  • 294. ಪರುಷಮಣೀ, ಸ್ಪರ್ಶಮಣಿ (ಮಟ್ಟಿದ್ದನ್ನು ಚಿನ್ನ ಮಾಡುವ ಶಿಲೆ), ಉದ್ಯೋಗ ಪರ್ವ,8,53
  • 295. ಪರೇತ, ಪ್ರೇತ, ಗದಾ ಪರ್ವ,3,15
  • 296. ಪರೇತ ಕೃತ್ಯ, ಉತ್ತರಕ್ರಿಯೆ, ಆದಿ ಪರ್ವ,5,25
  • 297. ಪರೋಕ್ಷ, ಇಲ್ಲದಿರುವಿಕೆ, ಶಲ್ಯ ಪರ್ವ,1,22
  • 298. ಪರೋಕ್ಷ, ಇಲ್ಲದಿರುವಾಗ, ಆದಿ ಪರ್ವ,17,7
  • 299. ಪರ್ಣ, ಎಲೆ, ಉದ್ಯೋಗ ಪರ್ವ,3,59
  • 300. ಪರ್ಣದ ಚೌಕಿಗೆ, ಪರ್ಣಕುಟೀರಕ್ಕೆ, ಅರಣ್ಯ ಪರ್ವ,12,66
  • 301. ಪಲಾಯನ, ಓಡುವಿಕೆ, ಆದಿ ಪರ್ವ,7,16
  • 302. ಪಲಾಯನಪಂಡಿತ, ಯುದ್ಧದಿಂದ ಓಡಿಹೋಗುವ ಶಾಸ್ತ್ರದಲ್ಲಿ ಪಂಡಿತ, ಗದಾ ಪರ್ವ,5,18
  • 303. ಪಲ್ಲಟ, ಬದಲಾವಣೆ, ಗದಾ ಪರ್ವ,3,37
  • 304. ಪಲ್ಲಟಿಸಿದನು, ಚೆಲ್ಲಾಪಿಲ್ಲಿ ಮಾಡಿದನು, ಭೀಷ್ಮ ಪರ್ವ,5,19
  • 305. ಪಲ್ಲಟಿಸು, ಬದಲಾಯಿಸು, ಗದಾ ಪರ್ವ,3,28
  • 306. ಪಲ್ಲಟಿಸು, ಬದಲಾಯಿಸು , ಗದಾ ಪರ್ವ,7,18
  • 307. ಪಲ್ಲಟಿಸು, ಬದಲಾಗು, ಗದಾ ಪರ್ವ,8,26
  • 308. ಪಲ್ಲವ, ಬಾವುಟದ ಬಟ್ಟೆ, ಕರ್ಣ ಪರ್ವ,3,13
  • 309. ಪಲ್ಲವ, ವಿಸ್ತಾರಿತ, ದ್ರೋಣ ಪರ್ವ,6,2
  • 310. ಪಲ್ಲವ, ಅರಳಿದ, ದ್ರೋಣ ಪರ್ವ,3,6
  • 311. ಪಲ್ಲವ, ಹರಡಿದ, ಆದಿ ಪರ್ವ,12,3
  • 312. ಪಲ್ಲವ, ತಳಿರು, ವಿರಾಟ ಪರ್ವ,4,30
  • 313. ಪಲ್ಲವಿಕೆ, ಮುಂದರಿ, ಕರ್ಣ ಪರ್ವ,7,35
  • 314. ಪಲ್ಲೈಸು, ವಿಸ್ತರಿಸು , ಶಲ್ಯ ಪರ್ವ,3,55
  • 315. ಪವಡಿಸಿದ, ಮಲಗಿದ, ಭೀಷ್ಮ ಪರ್ವ,10,11
  • 316. ಪವಣ, ಪ್ರಮಾಣ, ಅರಣ್ಯ ಪರ್ವ,7,23
  • 317. ಪವನ, ಗಾಳಿ/ವಾಯು, ಉದ್ಯೋಗ ಪರ್ವ,8,43
  • 318. ಪವನಸುತ, ಭೀಮ (ವಾಯುಪುತ್ರ), ವಿರಾಟ ಪರ್ವ,1,34
  • 319. ಪವನಸುತ, ವಾಯುವಿನಮಗ, ಗದಾ ಪರ್ವ,11,42
  • 320. ಪವಮಾನಸುತ, ವಾಯುಪುತ್ರ ಭೀಮ, ಆದಿ ಪರ್ವ,15,50
  • 321. ಪವಾಡ, ಅತಿಮಾನುಷ ಕೆಲಸ, ಕರ್ಣ ಪರ್ವ,18,13
  • 322. ಪವಾಡಿಗ, ಲಾವಣಿ ಹೇಳುವವ, ದ್ರೋಣ ಪರ್ವ,17,30
  • 323. ಪವಿತ್ರ, ದರ್ಭೆ/ದರ್ಭೆಯ ಉಂಗುರ., ಉದ್ಯೋಗ ಪರ್ವ,4,108
  • 324. ಪಶುಗೆಡಹಿ, ಅಶ್ವಮೇಧ ಯಾಗವನ್ನು ಮಾಡಿದವನು., ಅರಣ್ಯ ಪರ್ವ,7,84
  • 325. ಪಶುಜಾಲ, ದನಗಳ ಗುಂಪು, ವಿರಾಟ ಪರ್ವ,7,26
  • 326. ಪಶುಪಾಲಕ ಪುಳಿಂದರು, ಪಶುಪಾಲನೆ ಮಾಡುವ ಬೇಡರು, ಸಭಾ ಪರ್ವ,3,51
  • 327. ಪಶುಬಂಧುರ, ಸುಂದರವಾದ ಯಾಗಪಶು., ಗದಾ ಪರ್ವ,1,20
  • 328. ಪಶುವ್ರಜ, ದನಗಳ ಸಮೂಹ, ವಿರಾಟ ಪರ್ವ,7,49
  • 329. ಪಶ್ಚಿಮಜಲಧಿ, ಪಶ್ಚಿಮ ಸಮುದ್ರ, ಭೀಷ್ಮ ಪರ್ವ,5,27
  • 330. ಪಶ್ಚಿಮಾಂಗ, ಹಿಂಭಾಗ, ಗದಾ ಪರ್ವ,11,67
  • 331. ಪಸರ, ಅಂಗಳ, ಉದ್ಯೋಗ ಪರ್ವ,7,24
  • 332. ಪಸರ, ಹೊದಿಕೆ, ಉದ್ಯೋಗ ಪರ್ವ,11,17
  • 333. ಪಸರಿಸು, ಪ್ರಸರಿಸು, ಆದಿ ಪರ್ವ,13,38
  • 334. ಪಸರಿಸು, ಹರಡು , ಗದಾ ಪರ್ವ,7,47
  • 335. ಪಸರಿಸು, ಹೆಚ್ಚುವಂತೆ ಮಾಡು , ಗದಾ ಪರ್ವ,5,24
  • 336. ಪಸಾಯ, ಸಂಭಾವನೆ, ಆದಿ ಪರ್ವ,7,13
  • 337. ಪಸಾಯ, ಬಹುಮಾನ, ಗದಾ ಪರ್ವ,4,54
  • 338. ಪಸಾಯ, ಬಹುಮಾನ, ಶಲ್ಯ ಪರ್ವ,3,61
  • 339. ಪಸಾಯತ, ಸಾಮಂತ ರಾಜ, ಆದಿ ಪರ್ವ,7,17
  • 340. ಪಸಾಯತ, ಮಂತ್ರಿ, ಅರಣ್ಯ ಪರ್ವ,21,65
  • 341. ಪಸಾಯತ, ಅಧಿಕಾರಿ, ಕರ್ಣ ಪರ್ವ,18,9
  • 342. ಪಸಾಯತರು, ಅಧಿಕಾರಿಗಳು, ಅರಣ್ಯ ಪರ್ವ,18,25
  • 343. ಪಸಾಯಿತ, ಪಸಯಿತ, ವಿರಾಟ ಪರ್ವ,4,31, ,
  • 344. ಪಸಾಯಿತ, ಬಟ್ಟೆಗಳ ಹೊಣೆ ಹೊತ್ತ ಅಧಿಕಾರಿ, ಗದಾ ಪರ್ವ,4,17
  • 345. ಪಸಾಯ್ತ, ಸಾಮಂತ, ಸಭಾ ಪರ್ವ,1,9
  • 346. ಪಸಾಯ್ತ, ಸಾಮಂತರಾಜ, ಶಲ್ಯ ಪರ್ವ,3,22
  • 347. ಪಳಹರ, ಒಂದು ಬಗೆ ವಾದ್ಯ, ಭೀಷ್ಮ ಪರ್ವ,1,64
  • 348. ಪಳಿ, ನಿಂದಿಸು, ಆದಿ ಪರ್ವ,7,54
  • 349. ಪಳಿಯ, ಶ್ರೇಷ್ಠರೀತಿಯ ವಸ್ತ್ರ., ಭೀಷ್ಮ ಪರ್ವ,4,41
  • 350. ಪಳಿಯ ಪಟ್ಟಿ, ವಸ್ತ್ರದ ಪಟ್ಟೆ, ವಿರಾಟ ಪರ್ವ,4,30
  • 351. ಪಳ್ಳಿ, ಹಳ್ಳಿ, ಆದಿ ಪರ್ವ,19,9
  • 352. ಪಾಂಚಾಲಸುತೆ, ಪಾಂಚಾಲರಾಜನ ಮಗಳು , ಗದಾ ಪರ್ವ,11,71
  • 353. ಪಾಂಚಾಲಿ, ಪಾಂಚಾಲ ರಾಜನ ಮಗಳು, ಆದಿ ಪರ್ವ,19,48
  • 354. ಪಾಂಚಾಲೆ, ದ್ರೌಪದಿ, ಆದಿ ಪರ್ವ,13,49
  • 355. ಪಾಂಡವ ಜೀವ, 1. ಪಾಂಡವರ ಪಾಲಿಗೆ ಜೀವ ಎನಿಸಿದವನು. 2. ಪಾಂಡವರೇ ತನ್ನ ಜೀವ ಎಂದು ಭಾವಿಸಿದವನು. ಭಕ್ತ ನಿಕಾಯ ಲಂಪಟ, ವಿರಾಟ ಪರ್ವ,10,0
  • 356. ಪಾಂಡವಮಮಪ್ರಾಣಾಹಿ, ಪಾಂಡವರು ನನ್ನ ಪ್ರಾಣಕ್ಕೆ ಸಮಾನ, ಭೀಷ್ಮ ಪರ್ವ,3,93
  • 357. ಪಾಂಡವಾತ್ಮಜರು, ಪಾಂಡುವಿನ ಮಕ್ಕಳು, ಸಭಾ ಪರ್ವ,2,2
  • 358. ಪಾಂಡು, ಬಿಳಿಯ ಬಣ್ಣ, ಆದಿ ಪರ್ವ,3,8
  • 359. ಪಾಕ, ಅಡುಗೆ, ಆದಿ ಪರ್ವ,10,23
  • 360. ಪಾಕಶಾಸನ, ದೇವೇಂದ್ರ, ಉದ್ಯೋಗ ಪರ್ವ,4,106
  • 361. ಪಾಕಶೇಷ, ಉಳಿದ ಅನ್ನ, ಅರಣ್ಯ ಪರ್ವ,16,40
  • 362. ಪಾಗಾರ, ಪ್ರಾಕಾರÀ, ಸಭಾ ಪರ್ವ,13,25
  • 363. ಪಾಟಚ್ಚರ, ಕಳ್ಳ, ಆದಿ ಪರ್ವ,19,3
  • 364. ಪಾಠಕ, ಮಂಗಳವಾಚನದಿಂದ ರಾಜನನ್ನು ಎಚ್ಚರಿಸುವವರು, ಗದಾ ಪರ್ವ,3,38
  • 365. ಪಾಡಗ, ಕಾಲುಬಳೆ, ಆದಿ ಪರ್ವ,13,15
  • 366. ಪಾಡರಿದ, ಕ್ರಮವನ್ನು ಬಲ್ಲ, ಗದಾ ಪರ್ವ,8,41
  • 367. ಪಾಡಳಿದು, ಅಂದಗೆಟ್ಟು, ಗದಾ ಪರ್ವ,12,11
  • 368. ಪಾಡಿ, ಶಕ್ತಿ(?), ಗದಾ ಪರ್ವ,10,22
  • 369. ಪಾಡು, ಸಾಧ್ಯ, ಗದಾ ಪರ್ವ,4,38
  • 370. ಪಾಡÀು, ಸ್ಥಿತಿ, ಗದಾ ಪರ್ವ,1,41, ,
  • 371. ಪಾಡೆ, ನಾವೆ, ದ್ರೋಣ ಪರ್ವ,3,23
  • 372. ಪಾಣಿ, ಕೈ, ಉದ್ಯೋಗ ಪರ್ವ,4,7
  • 373. ಪಾಣಿಗ್ರಹಣ, ಕೈ ಹಿಡಿಯುವುದು, ಆದಿ ಪರ್ವ,14,22
  • 374. ಪಾತಕರು, ಪಾಪಿಗಳು, ಭೀಷ್ಮ ಪರ್ವ,7,29
  • 375. ಪಾತಾಳಿ, ಆದಿಶೇಷ, ಕರ್ಣ ಪರ್ವ,12,25
  • 376. ಪಾತಿವ್ರತ್ಯ, ಪತಿಗೆ ವಿಧೇಯಳಾಗಿ ವರ್ತಿಸುವುದು, ಆದಿ ಪರ್ವ,16,50
  • 377. ಪಾದಪ, ಬೇರಿನಿಂದ ನೀರು ಕುಡಿಯವು, ಭೀಷ್ಮ ಪರ್ವ,5,9
  • 378. ಪಾದಾಂಬುಜ, ಪಾದಕಮಲ, ಉದ್ಯೋಗ ಪರ್ವ,4,114
  • 379. ಪಾದಾತಿ, ಸೈನಿಕ, ವಿರಾಟ ಪರ್ವ,10,84
  • 380. ಪಾದ್ಯ, ಕಾಲು ತೊಳೆಯುವುದು, ಆದಿ ಪರ್ವ,18,23
  • 381. ಪಾಪಕರ್ಮವಿಕಾರ, ಪಾಪದ ಕೆಲಸಗಳಿಂದ ಬಂದ ದುಃಸ್ಥಿತಿ, ಗದಾ ಪರ್ವ,8,21
  • 382. ಪಾಪವಿಲೇಪ, ಪಾಪಸ್ಪರ್ಶ., ಭೀಷ್ಮ ಪರ್ವ,3,49
  • 383. ಪಾಯದಳ, ಕಾಲಾಳು ಸೈನ್ಯ, ದ್ರೋಣ ಪರ್ವ,2,35
  • 384. ಪಾಯವಟ್ಟ, ಕಾಲಿನ ಆಭರಣ, ಆದಿ ಪರ್ವ,13,33
  • 385. ಪಾಯವಧಾರು, ಅವಧಾರು (ಎಚ್ಚರಿಕೆ) ಎಂಬ ಕಳಕಳ, ವಿರಾಟ ಪರ್ವ,10,53
  • 386. ಪಾಯವಧಾರು, ಹೆಜ್ಜೆ ಇಡುವಾಗ ಎಚ್ಚರಿಕೆ ಎಂಬ ಸ್ತುತಿ ಪಾಠಕರ ಮಾತು, ಸಭಾ ಪರ್ವ,12,2
  • 387. ಪಾಯಿಕು, ಭೇಷ್, ದ್ರೋಣ ಪರ್ವ,4,11
  • 388. ಪಾಯ್ದಳ, ಕಾಲಾಳು, ದ್ರೋಣ ಪರ್ವ,4,15
  • 389. ಪಾರ, ಸೀಮಾ, ಭೀಷ್ಮ ಪರ್ವ,3,87
  • 390. ಪಾರ, ತುದಿ/ಕೊನೆ, ಉದ್ಯೋಗ ಪರ್ವ,4,109
  • 391. ಪಾರಂಪರೆ, ಕ್ರಮಾನುಗತ, ಆದಿ ಪರ್ವ,3,28
  • 392. ಪಾರಗ, ದಾಟುವವನು, ಕರ್ಣ ಪರ್ವ,19,35
  • 393. ಪಾರಲೌಕಿಕ, ಪರಲೋಕದ ಗತಿ, ಆದಿ ಪರ್ವ,10,13
  • 394. ಪಾರವಶ್ಯ, ಪರವಶನಾಗುವಿಕೆ , ಗದಾ ಪರ್ವ,7,26
  • 395. ಪಾರಾವಾರ, ಕೊನೆಯಿಲ್ಲದ್ದು, ದ್ರೋಣ ಪರ್ವ,4,59
  • 396. ಪಾರಾಶರವ್ರತಿ, ವ್ಯಾಸಮುನಿ, ಆದಿ ಪರ್ವ,11,24
  • 397. ಪಾರಾಶರಾತ್ಮಜ, ವ್ಯಾಸ, ಗದಾ ಪರ್ವ,11,53
  • 398. ಪಾರಾಶರಿವ್ರತಿಪ, ವ್ಯಾಸ ಶ್ರೇಷ್ಠರು, ಆದಿ ಪರ್ವ,5,30
  • 399. ಪಾರಿಕಾಂಕ್ಷಿ, ಬ್ರಹ್ಮಜ್ಞಾನ ಬಯಸುವವನು, ಆದಿ ಪರ್ವ,13,22
  • 400. ಪಾರಿಯ, ಬಣ್ಣದ ಬಟ್ಟೆ ( ಹಸಿರು), ಅರಣ್ಯ ಪರ್ವ,23,8
  • 401. ಪಾರಿವ, ಪಾರಿವಾಳ, ಆದಿ ಪರ್ವ,20,53
  • 402. ಪಾರಿವ, ಪಾರಿವಾಳದ ಬಣ್ಣ , ಅರಣ್ಯ ಪರ್ವ,18,5
  • 403. ಪಾರಿಶೇಷಕ, ಉಳಿದದ್ದು, ಅರಣ್ಯ ಪರ್ವ,2,35
  • 404. ಪಾರುಖಾಣೆÉ, ಅಂತ್ಯ, ಸಭಾ ಪರ್ವ,2,101
  • 405. ಪಾರ್ಥಜ, ಅಭಿಮನ್ಯು, ಭೀಷ್ಮ ಪರ್ವ,5,8
  • 406. ಪಾರ್ಥಿಯ, ಅಭಿಮನ್ಯುವಿನ, ದ್ರೋಣ ಪರ್ವ,5,2
  • 407. ಪಾರ್ಥಿವ, ರಾಜ/ಆಳುವವ, ಉದ್ಯೋಗ ಪರ್ವ,1,31
  • 408. ಪಾರ್ಥಿವರು, ಪೃಥೆಯ ಮಕ್ಕಳು, ದ್ರೋಣ ಪರ್ವ,4,11
  • 409. ಪಾರ್ವರು, ಹಾರುವರು, ಆದಿ ಪರ್ವ,10,31
  • 410. ಪಾಲಕ, ರಕ್ಷಕ, ಆದಿ ಪರ್ವ,8,58
  • 411. ಪಾಲಿಸದಡೆ, ಅನುಸರಿಸದಿದ್ದರೆ, ಉದ್ಯೋಗ ಪರ್ವ,5,12
  • 412. ಪಾಲಿಸು, ರಕ್ಷಿಸು, ಆದಿ ಪರ್ವ,18,2
  • 413. ಪಾವಕಾಸ್ತ್ರ, ಆಜ್ಞೇಯಾಸ್ತ್ರ, ಅರಣ್ಯ ಪರ್ವ,12,41
  • 414. ಪಾವಮಾನಿ, ಪವಮಾನ(ವಾಯು)ನ ಮಗ, ಶಲ್ಯ ಪರ್ವ,1,29
  • 415. ಪಾವುಡ, ಕಾಣಿಕೆ, ವಿರಾಟ ಪರ್ವ,10,33
  • 416. ಪಾವುಡ, ಕಾಣಿಕೆ, ವಿರಾಟ ಪರ್ವ,10,29
  • 417. ಪಾಶ, ಬಂಧನ, ಭೀಷ್ಮ ಪರ್ವ,3,63
  • 418. ಪಾಶ, ಕಟ್ಟು, ಆದಿ ಪರ್ವ,6,11
  • 419. ಪಾಷಾಣ, ಕಲ್ಲು, ದ್ರೋಣ ಪರ್ವ,14,46
  • 420. ಪಾಳಯ, ಪಾಳ್ಯ, ಗದಾ ಪರ್ವ,3,36, ,
  • 421. ಪಾಳಯ, ಬೀಡಾರ, ಉದ್ಯೋಗ ಪರ್ವ,7,4
  • 422. ಪಾಳಯ, ಶಿಬಿರ, ವಿರಾಟ ಪರ್ವ,2,48
  • 423. ಪಾಳಯವು, ಸೈನ್ಯವು, ಸಭಾ ಪರ್ವ,3,30
  • 424. ಪಾಳಿ, ಕ್ರಮಬದ್ಧ, ಆದಿ ಪರ್ವ,7,1
  • 425. ಪಾಳಿಸು, ಸೀಳು, ಕರ್ಣ ಪರ್ವ,24,49
  • 426. ಪಾಳೆಯ, ಸೇನೆ ಬೀಡು ಬಿಟ್ಟಿರುವ ಸ್ಥಳ, ಗದಾ ಪರ್ವ,8,64
  • 427. ಪಿಂಗ, ಕಂದುಬಣ್ಣ, ಆದಿ ಪರ್ವ,3,4
  • 428. ಪಿಂಗಳ, ಹಿಂದಿನ, ಉದ್ಯೋಗ ಪರ್ವ,11,49
  • 429. ಪಿಂಗಳ, ನಸುಗೆಂಪು, ಆದಿ ಪರ್ವ,2,23
  • 430. ಪಿಂಡಿವಾಳ, (ಭಿಂಡಿವಾಳ ), ಕರ್ಣ ಪರ್ವ,18,23
  • 431. ಪಿಂಡಿವಾಳ, ಒಂದು ಬಗೆ ಆಯುಧ, ಭೀಷ್ಮ ಪರ್ವ,4,39
  • 432. ಪಿಕ, ಕೋಗಿಲೆ, ಆದಿ ಪರ್ವ,20,52
  • 433. ಪಿತಾಮಹ, ಅಜ್ಜ, ಗದಾ ಪರ್ವ,8,18
  • 434. ಪಿತಾಮಹ, ತಾತ, ಭೀಷ್ಮ ಪರ್ವ,5,17
  • 435. ಪಿತಾಮಹರು, ಬ್ರಹ್ಮರು, ಭೀಷ್ಮ ಪರ್ವ,6,42
  • 436. ಪಿತೃದಿನ, ತಂದೆಯವರ ಶ್ರಾದ್ಧದ ದಿನ, ವಿರಾಟ ಪರ್ವ,7,13
  • 437. ಪಿನಾಕಧರ, ಪಿನಾಕಪಾಣಿ, ವಿರಾಟ ಪರ್ವ,5,13
  • 438. ಪಿನಾಕಿ, ಪಿನಾಕ ಎಂಬ ತ್ರಿಶೂಲವನ್ನು ಹಿಡಿದವನು, ಆದಿ ಪರ್ವ,13,48
  • 439. ಪಿನಾಕಿ, ಪಿನಾಕವೆಂಬ ಧನಸ್ಸನ್ನುಳ್ಳವನು, ಗದಾ ಪರ್ವ,9,21
  • 440. ಪಿಪೀಲಿಕೆ, ಇರುವೆ, ಆದಿ ಪರ್ವ,8,19
  • 441. ಪಿಪ್ಪಲ, ಅರಳಿ, ಆದಿ ಪರ್ವ,20,50
  • 442. ಪಿಸಣು, ಚಾಡಿಮಾತು, ಸಭಾ ಪರ್ವ,12,47
  • 443. ಪೀಳಿಗೆ, ಗುಂಪು, ಅರಣ್ಯ ಪರ್ವ,20,1
  • 444. ಪುಂಖ, ಗರಿಗಳಿಂದ ಕೂಡಿದ ಬಾಣದ ಹಿಂಭಾಗ, ಶಲ್ಯ ಪರ್ವ,3,43
  • 445. ಪುಂಖಾನುಪುಂಖ, ಗರಿಯನ್ನು ಹಿಂಬಾಲಿಸುವ ಮತ್ತೊಂದು ಗರಿ, ಶಲ್ಯ ಪರ್ವ,3,43
  • 446. ಪುಂಗವ, ನಾಯಕ, ಅರಣ್ಯ ಪರ್ವ,17,38
  • 447. ಪುಂಡರೀಕ, ಬೆಳ್ದಾವರೆ, ಭೀಷ್ಮ ಪರ್ವ,8,4
  • 448. ಪುಟನೆಗೆ, ಚಿಮ್ಮು, ಗದಾ ಪರ್ವ,7,9
  • 449. ಪುಣ್ಯದ ಹಾನಿ, ಅಕಾರ್ಯ, ಭೀಷ್ಮ ಪರ್ವ,10,20
  • 450. ಪುಣ್ಯಪ್ರವರ, ಕೇಳಿದರೆ ಪುಣ್ಯ ದೊರೆಯುವ ಬಿರುದÀು (ಹೆಸರು)ಗಳನ್ನುಳ್ಳವನು., ಗದಾ ಪರ್ವ,4,60
  • 451. ಪುಣ್ಯಾಹ, ಶುದ್ಧಿಗಾಗಿ ಎಲೆಯ ಕೊನೆಯಲ್ಲಿ ನೀರೆರಚುವ ಕ್ರಮ, ವಿರಾಟ ಪರ್ವ,10,77
  • 452. ಪುತ್ರ ಕಾಮ್ಯಾಧ್ವರ, ಪುತ್ರರನ್ನು ಪಡೆಯಲು ಇಷ್ಟಪಟ್ಟು ಮಾಡುವ ಯಾಗ, ಆದಿ ಪರ್ವ,7,69
  • 453. ಪುತ್ರಕಾಮ್ಯ, ಮಗನಾಗಬೇಕೆಂದು ಮಾಡುವ ಯಜ್ಞ, ಆದಿ ಪರ್ವ,4,34
  • 454. ಪುದುಮನೆ, ಅಡಗುವ ಸ್ಥಳ, ಅರಣ್ಯ ಪರ್ವ,20,33
  • 455. ಪುನ್ನಾಗ, ಸುರಹೊನ್ನೆ, ಆದಿ ಪರ್ವ,20,48
  • 456. ಪುರ, ಊರು ಕಡೆ ಪಲಾಯನ ಮಾಡಿದರು, ಭೀಷ್ಮ ಪರ್ವ,4,68
  • 457. ಪುರಂಧ್ರಿ, ಹೆಂಡತಿ, ಉದ್ಯೋಗ ಪರ್ವ,3,31
  • 458. ಪುರಜನ, ಪಟ್ಟಣದ ಜನತೆ, ಗದಾ ಪರ್ವ,13,11
  • 459. ಪುರಜನಾವಳಿ, ಪುರಜನರ ಸಮೂಹ, ಗದಾ ಪರ್ವ,11,30
  • 460. ಪುರಾಂತರ, ಊರು, ವಿರಾಟ ಪರ್ವ,1,32
  • 461. ಪುರಾರಿ, ಮೂರು ಪುರಗಳನ್ನು ನಾಶಮಾಡಿದವನು, ಗದಾ ಪರ್ವ,9,25,
  • 462. ಪುರುಷಾರ್ಥ, ಧರ್ಮ , ಉದ್ಯೋಗ ಪರ್ವ,9,1, , , ಮೋಕ್ಷ,
  • 463. ಪುರುಹೂತ, ದೇವೇಂದ್ರ, ವಿರಾಟ ಪರ್ವ,6,15
  • 464. ಪುರೋಡಾಶ, ಹವಿಸ್ಸು (ಯಜ್ಞದಲ್ಲಿ ಅರ್ಪಿಸುವ ಅಕ್ಕಿ ಹಿಟ್ಟು), ಆದಿ ಪರ್ವ,20,25
  • 465. ಪುರೋಹಿತ, ರಾಜಪುರೋಹಿತ, ವಿರಾಟ ಪರ್ವ,10,9
  • 466. ಪುರ್ವೋತ್ತರದ, ಹಿಂದು ಮುಂದಿನ, ಆದಿ ಪರ್ವ,2,18
  • 467. ಪುಲ್ಲಿಗೆ, ಹೋಳಿಗೆ, ಆದಿ ಪರ್ವ,15,7
  • 468. ಪುಷ್ಕಲಾವರ್ತ, ಅತಿಯಾಗಿ ನೀರನ್ನು ಸುರಿಸುವಂತಹ ಮೋಡಗಳ ಸಮೂಹ, ಕರ್ಣ ಪರ್ವ,25,7
  • 469. ಪುಷ್ಪವತಿ, ರಜಸ್ವಲೆ, ಸಭಾ ಪರ್ವ,14,64
  • 470. ಪುಸಿ, ನಿರರ್ಥಕ, ಆದಿ ಪರ್ವ,8,28
  • 471. ಪುಳಕಾಂಬು, ರೋಮಾಂಚನದ ನೀರು, ಆದಿ ಪರ್ವ,13,61
  • 472. ಪುಳಕಾಶ್ರು ಪೂರದಲಿ, ಸಂತೋಷದಿಂದ ಸುರಿಯುವ ಕಣ್ಣೀರಿನ ಪ್ರವಾಹದಲ್ಲಿ, ಗದಾ ಪರ್ವ,13,14
  • 473. ಪುಳಕಿತೆ, ರೋಮಾಂಚಿತೆ, ಭೀಷ್ಮ ಪರ್ವ,4,92
  • 474. ಪುಳಿಂದ, ಬೇಡ , ಗದಾ ಪರ್ವ,4,49
  • 475. ಪುಳಿಂದಿ, ಬೇಡತಿ, ಅರಣ್ಯ ಪರ್ವ,5,30
  • 476. ಪೂಗ, ಅಡಕೆ, ಆದಿ ಪರ್ವ,20,48
  • 477. ಪೂಗ, ಅಡಿಕೆ, ಸಭಾ ಪರ್ವ,2,56
  • 478. ಪೂತನಿ, ರಾಕ್ಷಸಿ, ಗದಾ ಪರ್ವ,3,11
  • 479. ಪೂತನಿನಿಕರ, ಒಂದು ವರ್ಗದ ಹೆಣ್ಣು ರಾಕ್ಷಸಿಯರು, ಭೀಷ್ಮ ಪರ್ವ,5,31
  • 480. ಪೂತನಿವೃಂದ, ದುರ್ಗಂಧದ ರಾಕ್ಷಸಿಯರ ತಂಡ, ಭೀಷ್ಮ ಪರ್ವ,5,30
  • 481. ಪೂತು, ಪಾಯಿಕು, ದ್ರೋಣ ಪರ್ವ,6,11
  • 482. ಪೂತು, ಮಝ, ದ್ರೋಣ ಪರ್ವ,1,58
  • 483. ಪೂತು, ಅಯ್ಯೋ, ದ್ರೋಣ ಪರ್ವ,1,4
  • 484. ಪೂತು, ಹೂತು, ಗದಾ ಪರ್ವ,7,7
  • 485. ಪೂತು, ಹೊಗಳಿಕೆಯ ಉದ್ಗಾರ, ಗದಾ ಪರ್ವ,5,38,
  • 486. ಪೂತು ಪಾಯಕು, ಭಲಾ , ವಿರಾಟ ಪರ್ವ,8,62
  • 487. ಪೂತು ಮಝುರೆ, ಭೇಷ್ ಎಂಬ ಮೆಚ್ಚುಗೆಯ ಮರಾಠಿ ಶಬ್ದಗಳು, ವಿರಾಟ ಪರ್ವ,7,28
  • 488. ಪೂತುರೆ, ಭೇಷ್ ಎಂಬ ಉದ್ಗಾರ, ವಿರಾಟ ಪರ್ವ,6,62
  • 489. ಪೂತುರೇ ಮಝರೆ, ಇವು ಮರಾಠಿ ಭಾಷೆಯಲ್ಲಿ ಮೆಚ್ಚುಗೆಯ ನುಡಿಗಳು, ಭೀಷ್ಮ ಪರ್ವ,4,19
  • 490. ಪೂರ, ಪೂರ್ಣ, ಆದಿ ಪರ್ವ,13,10
  • 491. ಪೂರದ, ತುಂಬಿದ , ಗದಾ ಪರ್ವ,13,15, ,
  • 492. ಪೂರವಿಸು, ಪೂಸಿಕೊಳ್ಳುವುದು, ಗದಾ ಪರ್ವ,5,40
  • 493. ಪೂರಾಯ, ವಿಶೇಷವಾದ, ದ್ರೋಣ ಪರ್ವ,18,49
  • 494. ಪೂರಾಯ, ಪ್ರಬಲ, ಅರಣ್ಯ ಪರ್ವ,19,17,
  • 495. ಪೂರಾಯ, ಪೂರ್ಣ, ಸಭಾ ಪರ್ವ,1,52
  • 496. ಪೂರಾಯ, ಪರಿಪೂರ್ಣವಾದ, ಆದಿ ಪರ್ವ,12,10
  • 497. ಪೂರಾಯ, ದೊಡ್ಡದಾದ, ಗದಾ ಪರ್ವ,1,67
  • 498. ಪೂರ್ಣಕಾಮ, ಆಸೆಯನ್ನು ಪೂರ್ಣವಾಗಿ ಈಡೇರಿಸಿಕೊಳ್ಳುವವನು, ದ್ರೋಣ ಪರ್ವ,1,17
  • 499. ಪೂರ್ವ ಪೃಥ್ವೀಪಾಲರು, ಜನಮೇಜಯನ ತಂದೆಯ ಅಜ್ಜ ಅರ್ಜುನ ಹೀಗೆ ಪಾಂಡವರು ಜನಮೇಜಯನಿಗೆ ಹಿರಿಯ ತಲೆಮಾರಿನ ರಾಜರು., ವಿರಾಟ ಪರ್ವ,2,1
  • 500. ಪೂರ್ವಜನ್ಮೋಪಚಿತ, ಹಿಂದಿನ ಜನ್ಮದಲ್ಲಿ ಸಂಪಾದಿಸಿದ , ಗದಾ ಪರ್ವ,8,15
  • 501. ಪೂರ್ವಪುರುಷ, ಹಿಂದಿನ ರಾಜರು, ವಿರಾಟ ಪರ್ವ,9,29
  • 502. ಪೂರ್ವಯುಗದವರು, ಪೂರ್ವದೇವತೆಗಳು, ಸಭಾ ಪರ್ವ,5,37
  • 503. ಪೂರ್ವರು, ಹಿಂದಿನ ಕಾಲದವರು, ಭೀಷ್ಮ ಪರ್ವ,9,33
  • 504. ಪೂರ್ವವೇದಿ, ಯಜ್ಞ ಕುಂಡದ ಮುಂಭಾಗದಲ್ಲಿರುವ ಜಗಲಿ, ಆದಿ ಪರ್ವ,13,1
  • 505. ಪೂರ್ವಾದತ್ತ, ಹಿಂದೆ ಸೇರಿಸಿಕೊಂಡ, ಗದಾ ಪರ್ವ,4,25
  • 506. ಪೂರ್ವಾಪರ, ಹಿಂದಿನ ಮತ್ತು ಮುಂದಿನ, ಆದಿ ಪರ್ವ,9,22
  • 507. ಪೂರ್ವಾಸನ, ಮೊದಲೇ ಗೊತ್ತಾದ ಪೀಠ, ಭೀಷ್ಮ ಪರ್ವ,4,73
  • 508. ಪೂರ್ವೋತ್ತರ, ನೈಋತ್ಯದಿಕ್ಕು, ಗದಾ ಪರ್ವ,5,56
  • 509. ಪೂಸು, ಬಳಿದುಕೋ, ವಿರಾಟ ಪರ್ವ,3,81
  • 510. ಪೃಥುಳ, ಅಸಂಖ್ಯಾತ., ಗದಾ ಪರ್ವ,1,12
  • 511. ಪೃಥೆ, ಕುಂತಿ, ಶಲ್ಯ ಪರ್ವ,3,61
  • 512. ಪೆಂಡೆಯ, ಬಿರುದಿನ ಕಾಲು ಬಳೆ, ವಿರಾಟ ಪರ್ವ,4,24
  • 513. ಪೆಂಡೆಯ, ಕಾಲ್ಗಡಗ, ಭೀಷ್ಮ ಪರ್ವ,4,40
  • 514. ಪೆರರು, ಬೇರೆಯವರು, ಆದಿ ಪರ್ವ,14,30
  • 515. ಪೇಚಕ, ಬಾಲದ ಬುಡ, ಭೀಷ್ಮ ಪರ್ವ,4,51
  • 516. ಪೇಚಕ, ಬಾಲದ ಬುಡ., ಶಲ್ಯ ಪರ್ವ,3,15
  • 517. ಪೇಚಕ, ಆನೆಯ ಬಾಲದ ಬುಡ, ಭೀಷ್ಮ ಪರ್ವ,4,89
  • 518. ಪೇರುರ, ದೊಡ್ಡ ಹೊಟ್ಟೆ, ಅರಣ್ಯ ಪರ್ವ,6,31
  • 519. ಪೇರುರ, ದೊಡ್ಡದಾದ ಎದೆ, ವಿರಾಟ ಪರ್ವ,3,92
  • 520. ಪೈಕ, ಬಳಗ , ವಿರಾಟ ಪರ್ವ,10,46
  • 521. ಪೈಕದಲಿ, ಪೈಕಿ, ಸಭಾ ಪರ್ವ,12,64
  • 522. ಪೈಸರ, ಹಿನ್ನಡೆ, ಅರಣ್ಯ ಪರ್ವ,21,35
  • 523. ಪೈಸರ, ಹಿಂಜರಿಕೆ, ಕರ್ಣ ಪರ್ವ,26,11
  • 524. ಪೈಸರ, ಜಾರು, ಅರಣ್ಯ ಪರ್ವ,8,36
  • 525. ಪೈಸರ, ಹಾನಿ, ಅರಣ್ಯ ಪರ್ವ,17,17
  • 526. ಪೈಸರ, ಹೆಜ್ಜೆ ಹಿಂದಿಡುವಿಕೆ, ವಿರಾಟ ಪರ್ವ,3,92
  • 527. ಪೈಸರವಾಯ್ತು, ಕಳೆದುಹೋಯಿತು., ಸಭಾ ಪರ್ವ,2,114
  • 528. ಪೈಸರಿಸಿ, ನುಣಿಚಿಕೊಂಡು, ಭೀಷ್ಮ ಪರ್ವ,4,46
  • 529. ಪೈಸರಿಸು, ಹಿಮ್ಮೆಟ್ಟಿಸು, ಶಲ್ಯ ಪರ್ವ,3,37
  • 530. ಪೈಸರಿಸು, ಹಿಂದಕ್ಕೆ ಹೋಗು, ಗದಾ ಪರ್ವ,3,8
  • 531. ಪೈಸರಿಸು, ನಾಶವಾಗು ಓಸರಿಸು, ಅರಣ್ಯ ಪರ್ವ,19,42
  • 532. ಪೈಸರಿಸು, ಹೆದರು, ಕರ್ಣ ಪರ್ವ,15,36
  • 533. ಪೊಡವಿ, ಭೂ ತಾಯಿ, ವಿರಾಟ ಪರ್ವ,6,6
  • 534. ಪೊಡವಿ, ರಾಜ್ಯ , ವಿರಾಟ ಪರ್ವ,10,28
  • 535. ಪೊಡವಿಪತಿ, ರಾಜ, ವಿರಾಟ ಪರ್ವ,6,27
  • 536. ಪೊನ್ನ, ಬಂಗಾರವನ್ನು, ದ್ರೋಣ ಪರ್ವ,7,28
  • 537. ಪೊರವಾರ, ಜಘನ, ಆದಿ ಪರ್ವ,13,31
  • 538. ಪೊರೆಯ, ಹೊರಭಾಗದ, ಅರಣ್ಯ ಪರ್ವ,19,26
  • 539. ಪೋತ, ಸಮುದ್ರದ ವ್ಯಾಪಾರಿ, ಅರಣ್ಯ ಪರ್ವ,10,2
  • 540. ಪೌರಂದರ, ಪುರಂದರ (ಇಂದ್ರ), ಉದ್ಯೋಗ ಪರ್ವ,2,30
  • 541. ಪೌರಜನ, ನಾಗರಿಕರು, ಆದಿ ಪರ್ವ,8,89
  • 542. ಪೌರಾಣಜನ್ಮ, ಹಿಂದಿನ ಜನ್ಮಗಳು, ಗದಾ ಪರ್ವ,12,3
  • 543. ಪೌರೋಹಿತ್ಯ, ಪುರೋಹಿತ ಕೆಲಸ, ಆದಿ ಪರ್ವ,11,45
  • 544. ಪ್ರಕಟ, ಸ್ಪಷ್ಟ, ಆದಿ ಪರ್ವ,8,89
  • 545. ಪ್ರಕರ, ಸಮೂಹ, ಗದಾ ಪರ್ವ,3,2
  • 546. ಪ್ರಚಂಡ, ಅಸಾಮಾನ್ಯ, ಶಲ್ಯ ಪರ್ವ,2,0
  • 547. ಪ್ರಚಯ, ಸಮೂಹ., ಕರ್ಣ ಪರ್ವ,7,1
  • 548. ಪ್ರಚಯ, ಒಟ್ಟುಗೂಡಿದ, ಶಲ್ಯ ಪರ್ವ,1,21
  • 549. ಪ್ರಜ್ಞಾಯತಾಕ್ಷ, ಪ್ರಜ್ಞೆಯೇ ಕಣ್ಣಾಗಿ ಉಳ್ಳವನು, ಗದಾ ಪರ್ವ,11,51
  • 550. ಪ್ರಜ್ವಲಿಸು, ಕಾಂತಿಗೊಳ್ಳು, ಆದಿ ಪರ್ವ,17,4
  • 551. ಪ್ರಣತ, ವಿನೀತ, ಆದಿ ಪರ್ವ,12,23
  • 552. ಪ್ರಣವ, ಓಂಕಾರ, ಉದ್ಯೋಗ ಪರ್ವ,4,17
  • 553. ಪ್ರಣವ, ಓಂಕಾರಮಂತ್ರ, ಗದಾ ಪರ್ವ,3,42
  • 554. ಪ್ರತಿಕೂಲ, ಅನುಕೂಲವಲ್ಲದ, ಗದಾ ಪರ್ವ,3,28
  • 555. ಪ್ರತಿಗ್ರಹ, ಸ್ವೀಕರಿಸುವುದು., ವಿರಾಟ ಪರ್ವ,7,16
  • 556. ಪ್ರತಿಜ್ಞಾಸ್ಥಾಪನೆ, ಪ್ರತಿಜ್ಞೆಯನ್ನು ಈಡೇರಿಸುವುದ, ಗದಾ ಪರ್ವ,8,34
  • 557. ಪ್ರತಿಜ್ಞೆ ಮಾಡಿಸು ಹೊಳ್ಳಿಸು, ಹೊರಳಿಸು, ವಿರಾಟ ಪರ್ವ,9,35
  • 558. ಪ್ರತಿಪನ್ನ, ಪಡೆದ, ಆದಿ ಪರ್ವ,17,14
  • 559. ಪ್ರತಿಪನ್ನ, ಬಲ್ಲ, ಉದ್ಯೋಗ ಪರ್ವ,3,94
  • 560. ಪ್ರತಿಪನ್ನ, ಜ್ಞಾನಿಯಾದ, ಆದಿ ಪರ್ವ,3,19
  • 561. ಪ್ರತಿಪನ್ನ, ಉಂಟಾಗಿದ್ದ, ಅರಣ್ಯ ಪರ್ವ,13,71
  • 562. ಪ್ರತಿಪನ್ನತೆ, ವಿವೇಕ, ಉದ್ಯೋಗ ಪರ್ವ,2,36
  • 563. ಪ್ರತಿಭಟ, ಶತ್ರು ಯೋಧ, ವಿರಾಟ ಪರ್ವ,6,30
  • 564. ಪ್ರತಿಭಟ, ಎದುರುಬಿದ್ದ ಯೋಧ (ಅರ್ಜುನ) ಭಾರಣೆ, ವಿರಾಟ ಪರ್ವ,8,13
  • 565. ಪ್ರತಿಮಾನ, ಆನೆಯ ದಂತಗಳ ಮಧ್ಯ ಪ್ರದೇಶ, ಶಲ್ಯ ಪರ್ವ,3,15
  • 566. ಪ್ರತಿರೂಪ, ತದ್ರೂಪ, ಗದಾ ಪರ್ವ,11,37
  • 567. ಪ್ರತಿವಿಂದ್ಯಕನನು ಅಪ್ಪಳಿಸಿ, ಪ್ರತಿವಿಂದ್ಯನೆಂಬವನನ್ನು, ಸಭಾ ಪರ್ವ,3,18
  • 568. ಪ್ರತಿಷ್ಠಿತ, ಗಣ್ಯ, ಉದ್ಯೋಗ ಪರ್ವ,4,59
  • 569. ಪ್ರಥಿತ, ಪ್ರಸಿದ್ಧರಾದ, ಆದಿ ಪರ್ವ,7,4
  • 570. ಪ್ರಪಂಚ, ಸಂಸಾರ, ಆದಿ ಪರ್ವ,19,28
  • 571. ಪ್ರಪಂಚಿತ, ವಿಸ್ತಾರವಾಗಿ, ಗದಾ ಪರ್ವ,12,24
  • 572. ಪ್ರಭವ, ಉತ್ಪತ್ತಿ, ಆದಿ ಪರ್ವ,19,11
  • 573. ಪ್ರಭಾವ, ಘನತೆ, ಆದಿ ಪರ್ವ,18,21
  • 574. ಪ್ರಭೇದಕ, ಅರಿಯುವವ, ಉದ್ಯೋಗ ಪರ್ವ,3,94
  • 575. ಪ್ರಯೋಜನ ಭವನ, ಭೋಜನಶಾಲೆÉ, ಆದಿ ಪರ್ವ,11,20
  • 576. ಪ್ರವರ, ಸಮೂಹ , ಗದಾ ಪರ್ವ,11,44, ,
  • 577. ಪ್ರವರ, ಮಂತ್ರ, ಆದಿ ಪರ್ವ,19,32
  • 578. ಪ್ರವಾಳ, ಎಳೆಯ ಚಿಗುರು, ಆದಿ ಪರ್ವ,20,50
  • 579. ಪ್ರವೃತ್ತಿ, ಗುಣ/ಸ್ವಭಾವ, ಉದ್ಯೋಗ ಪರ್ವ,3,60
  • 580. ಪ್ರಸರ, ಬಳಗ, ವಿರಾಟ ಪರ್ವ,10,76
  • 581. ಪ್ರಸರಣ, ಹರವು, ಉದ್ಯೋಗ ಪರ್ವ,4,111
  • 582. ಪ್ರಸರವನೈ, ಎಷ್ಟರವನಯ್ಯಾ, ಭೀಷ್ಮ ಪರ್ವ,7,30
  • 583. ಪ್ರಸ್ತಾವ, ಕ್ರಮ , ಗದಾ ಪರ್ವ,7,43
  • 584. ಪ್ರಳಯ ಪಟು, ಪ್ರಳಯವನ್ನು ಉಂಟು ಮಾಡುವುದರಲ್ಲಿ ನಿಷ್ಣಾತವಾದ, ವಿರಾಟ ಪರ್ವ,4,34
  • 585. ಪ್ರಳಾಪ, ಪ್ರಲಾಪ, ಗದಾ ಪರ್ವ,11,9
  • 586. ಪ್ರಳಾಪ, ಅಳುವುದು, ಗದಾ ಪರ್ವ,12,6
  • 587. ಪ್ರಾಂತ್ಯ, ಒಂದು ಭಾಗ, ಆದಿ ಪರ್ವ,11,17
  • 588. ಪ್ರಾಕೃತ, ಸಾಮಾನ್ಯ, ಆದಿ ಪರ್ವ,16,34
  • 589. ಪ್ರಾಜ್ಞರು, ತಿಳಿದವರು/ಬುದ್ಧಿವಂತರು., ಉದ್ಯೋಗ ಪರ್ವ,9,9
  • 590. ಪ್ರಾಯೋಪವೇಶ, ಉಪವಾಸದಿಂದ ಮರಣ ಹೊಂದುವ ವ್ರತ, ಅರಣ್ಯ ಪರ್ವ,21,0
  • 591. ಪ್ರಾರಬ್ಧ ಕರ್ಮಫಲ, ಅದೃಷ್ಟದಂತೆ ನಡೆಯುವ ಕರ್ಮಫಲ, ಆದಿ ಪರ್ವ,19,30
  • 592. ಪ್ರಾವರಣ, ಮೇಲುಹೊದಿಕೆ, ಕರ್ಣ ಪರ್ವ,14,16
  • 593. ಪ್ರಿಯ, ಪ್ರಿಯೆಯರಿಂದ ದೂರ ಉಳಿದ., ವಿರಾಟ ಪರ್ವ,2,51
  • 594. ಪ್ರೀತಿ ಮಸುಳಿತು, ಮಾಸಿತು, ಭೀಷ್ಮ ಪರ್ವ,6,26
  • 595. ಪ್ರೇತಾಂಗಳ, ಶ್ಮಶಾನ, ಉದ್ಯೋಗ ಪರ್ವ,3,56
  • 596. ಪ್ರೊದ್ದಾಮ, ಅತಿಹೆಚ್ಚಿನ, ಗದಾ ಪರ್ವ,11,39
  • 597. ಪ್ರೌಢ, ಪ್ರಬುದ್ಧ, ಉದ್ಯೋಗ ಪರ್ವ,8,41
  • 598. ಪ್ರೌಢ, ಚತುರ , ಆದಿ ಪರ್ವ,1,14
  • 599. ಪ್ರೌಢಿ, ಪ್ರೌಢವಾದ ವಿಷಯ, ವಿರಾಟ ಪರ್ವ,4,9
  • 600. ಪ್ರೌಢಿ, ಬುದ್ಧಿವಂತ, ಉದ್ಯೋಗ ಪರ್ವ,9,45
  • 601. ಫಡ, ಮೂದಲಿಕೆಯ ಒಂದು ಶಬ್ದ, ಉದ್ಯೋಗ ಪರ್ವ,1,8
  • 602. ಫಡ, ಛೇ ತೆಗೆ, ಭೀಷ್ಮ ಪರ್ವ,6,12
  • 603. ಫಡ, ಆಹಾ ಎಂಬ ತಿರಸ್ಕಾರದ ಮಾತು, ವಿರಾಟ ಪರ್ವ,4,47
  • 604. ಫಣಾ, ಹೆಡೆ, ದ್ರೋಣ ಪರ್ವ,4,37
  • 605. ಫಣಿ, ಸರ್ಪ(ಇಲ್ಲಿ ಆದಿಶೇಷ), ಉದ್ಯೋಗ ಪರ್ವ,11,38
  • 606. ಫಣಿ ಬಂಧನ, ಹಾವಿನ ಬಂಧನ, ಅರಣ್ಯ ಪರ್ವ,13,40
  • 607. ಫಣಿವದನ, ಸರ್ಪನ ಬಾಯಿ, ಗದಾ ಪರ್ವ,4,25
  • 608. ಫಲ, ಪ್ರಯೋಜನ, ಆದಿ ಪರ್ವ,10,15
  • 609. ಫಲಭೋಗ, ಪ್ರತಿಫಲವನ್ನು ಅನುಭವಿಸುವುದು, ಗದಾ ಪರ್ವ,8,13
  • 610. ಫಲಿತ, ಫಲಬಿಟ್ಟ, ಶಲ್ಯ ಪರ್ವ,1,4
  • 611. ಫಲಿಸಲಿ ಬಂಧುವಧೆ, ಬಂದುಗಳ ಸಂಹಾರಕ್ಕೆ ತಕ್ಕ ಪ್ರತಿಫಲ ದೊರೆಯಲಿ, ಗದಾ ಪರ್ವ,11,65
  • 612. ಫೂತುರೆ, ಭಲೆ, ದ್ರೋಣ ಪರ್ವ,3,49
  • 613. ಫೂತ್ಕøತಿ, ಸರ್ಪವು ರೋಷದಿಂದ ಉಸಿರು ಬಿಡುವ ಶಬ್ದ, ಗದಾ ಪರ್ವ,9,17
  • 614. ಫೇನೋನ್ನತಿ, ಅಧಿಕವಾದ ನೊರೆ, ಭೀಷ್ಮ ಪರ್ವ,3,4
  • 615. ಬಂಜೆ, ಗೊಡ್ಡು/ವ್ಯರ್ಥ, ಉದ್ಯೋಗ ಪರ್ವ,3,51
  • 616. ಬಂಜೆನುಡಿ, ಸತ್ವವಿಲ್ಲದ ಮಾತು, ಗದಾ ಪರ್ವ,7,34
  • 617. ಬಂಜೆವಾತು, ವ್ಯರ್ಥಾಲಾಪ, ವಿರಾಟ ಪರ್ವ,6,27
  • 618. ಬಂಡಿನ ರಹಣಿ, ಬಂಡತನದ ಹೊಂದಾಣಿಕೆ, ಸಭಾ ಪರ್ವ,12,50
  • 619. ಬಂಡಿಸಿ, ಬೈದು, ಶಲ್ಯ ಪರ್ವ,2,20
  • 620. ಬಂದಿ, ಲೂಟಿ, ಆದಿ ಪರ್ವ,18,17

[೧][೨][೩]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ