<ಗದುಗಿನ ಭಾರತ ಪದಕೋಶ

1. ಮಂಗಳ ಪಾಠಕರ, ಉದಯರಾಗ ಪಾಡುವವರ, ಭೀಷ್ಮ ಪರ್ವ,8,3
2. ಮಂಜಿಡಿಕೆ, ಮಂಕು ಕವಿಯುವುದು. ಬದಗ, ಅರಣ್ಯ ಪರ್ವ,19,25
3. ಮಂಡಲಿಸಿ, ಸುತ್ತುವರಿದು, ದ್ರೋಣ ಪರ್ವ,6,38
4. ಮಂಡವಿಗೆ, ಸಣ್ಣಮಂಟಪ, ಗದಾ ಪರ್ವ,4,17
5. ಮಂಡವಿಗೆ, ಗುಡಾರ, ಉದ್ಯೋಗ ಪರ್ವ,11,12
6. ಮಂಡವಿಗೆ, ಗುಡಿಸಲು, ಅರಣ್ಯ ಪರ್ವ,17,34
7. ಮಂಡಳಿಕ, ಸಾಮಂತ, ಭೀಷ್ಮ ಪರ್ವ,8,33
8. ಮಂಡಳಿಕ, ಮಾಂಡಲಿಕ, ವಿರಾಟ ಪರ್ವ,1,4
9. ಮಂಡಳಿಕ, ಅಧೀನರಾಜರು, ಶಲ್ಯ ಪರ್ವ,3,72
10. ಮಂಡಳಿಕ, ಚಕ್ರವರ್ತಿಯ ಅಧೀನದ ರಾಜ, ಗದಾ ಪರ್ವ,13,3
11. ಮಂಡಳಿಕ ಮನ್ನೆಯರು, ಮಂಡಲಾಧಿಪತಿಗಳು, ಸಭಾ ಪರ್ವ,5,3
12. ಮಂಡಳಿಸಿ, ಸುತ್ತಿಸಿ, ಭೀಷ್ಮ ಪರ್ವ,3,
13. ಮಂಡಳಿಸಿ, ಬಳಸಿ, ಆದಿ ಪರ್ವ,14,24
14. ಮಂಡಳಿಸಿ, ವೃತ್ತಾಕಾರವಾಗಿ, ಆದಿ ಪರ್ವ,10,25
15. ಮಂಡಳಿಸಿದ, ಗುಂಪಾಗಿದ್ದ, ಗದಾ ಪರ್ವ,1,58
16. ಮಂಡಳಿಸಿದುದು, ವ್ಯಾಪಿಸಿ ಸುತ್ತುಗಟ್ಟಿದವು, ಭೀಷ್ಮ ಪರ್ವ,6,33
17. ಮಂಡಳಿಸು, ಸುತ್ತುವರಿ, ಗದಾ ಪರ್ವ,2,32
18. ಮಂಡಿಸು, ಕುಳಿತುಕೊ, ವಿರಾಟ ಪರ್ವ,10,71
19. ಮಂಡಿಸು, ಕುಳಿತುಕೋ, ವಿರಾಟ ಪರ್ವ,6,50
20. ಮಂತ್ರ, ಅಲೋಚನೆ, ಆದಿ ಪರ್ವ,8,16
21. ಮಂತ್ರ, ರಹಸ್ಯವಾದ ಆಲೋಚನೆ, ಆದಿ ಪರ್ವ,8,65
22. ಮಂತ್ರದ ಸತ್ಯವೇ, ಮಂತ್ರಾಲೋಚನೆಯಿಂದ ಏರ್ಪಟ್ಟ ಸತ್ಯವೇ, ಸಭಾ ಪರ್ವ,1,50
23. ಮಂತ್ರವ, ಮಂತ್ರಾಲೋಚನೆಯನ್ನು, ಸಭಾ ಪರ್ವ,1,40
24. ಮಂತ್ರವಿಲ್ಲದ, ಮಂತ್ರಾಲೋಚನೆಯಿಲ್ಲದ, ಸಭಾ ಪರ್ವ,1,49
25. ಮಂತ್ರವುಳ್ಳವನು, ಮಂತ್ರಾಲೋಚನೆಯಿಂದ ನಡೆವವನು, ಸಭಾ ಪರ್ವ,1,49
26. ಮಂತ್ರಶಕ್ತಿ, ಮಂತ್ರಾಲೋಚನಾಶಕ್ತಿ, ಭೀಷ್ಮ ಪರ್ವ,1,12
27. ಮಂತ್ರಾಸ್ತ್ರ, ದಿವ್ಯಾಸ್ತ್ರಗಳು. ಇವುಗಳನ್ನು ಮಂತ್ರ ಪೂರ್ವಕವಾಗಿ ಬಿಡಬೇಕಾಗಿತ್ತು., ವಿರಾಟ ಪರ್ವ,7,40
28. ಮಂತ್ರಾಸ್ತ್ರ, ಆಯಾ ಅಧಿದೇವತೆಯನ್ನು ಸ್ಮರಿಸಿ, ಗದಾ ಪರ್ವ,9,19
29. ಮಂತ್ರಿ, ರಾಜನಿಗೆ ಸಲಹೆ ನೀಡುವ ಉನ್ನತ ಹುದ್ದೆಯನ್ನಲಂಕರಿಸಿದವರು, ಗದಾ ಪರ್ವ,13,10
30. ಮಂದ, ಸ್ನಿಗ್ಧವಾದ, ಗದಾ ಪರ್ವ,3,11
31. ಮಂದಭಾಗ್ಯ, ದುರದೃಷ್ಟವಂತ, ದ್ರೋಣ ಪರ್ವ,1,65
32. ಮಂದಿವಾಳ, ಜನಸಾಮಾನ್ಯರು, ವಿರಾಟ ಪರ್ವ,2,26
33. ಮಂದಿವಾಳವೆ, ಸಾಮಾನ್ಯರೆ? ನಿಡುಗೆಡೆದ, ಭೀಷ್ಮ ಪರ್ವ,7,16
34. ಮಂದೆಗೆಳಸಿದ, ಜನರ ನಡುವೆ ಎಳೆಸಿದÀ., ವಿರಾಟ ಪರ್ವ,3,59
35. ಮಕರ, ಮೊಸಳೆ, ಆದಿ ಪರ್ವ,19,15
36. ಮಕರಂದ, ಹೂವಿನಲ್ಲಿರುವ ಜೇನು, ಸಭಾ ಪರ್ವ,1,83
37. ಮಕರಂದ, ಹೂವಿನರಸ, ಆದಿ ಪರ್ವ,12,15
38. ಮಕರಂಧ, ಮಧು, ಆದಿ ಪರ್ವ,5,9
39. ಮಕರಕುಂಡಲ, ಕಿವಿಯಾಭರಣ, ಭೀಷ್ಮ ಪರ್ವ,3,76
40. ಮಕರತೋರಣ, ? ಓರಣ, ಸಭಾ ಪರ್ವ,1,4
41. ಮಕರಧ್ವಜ, ಮೀನಿನ ಗುರುತುಳ್ಳ ಬಾವುಟ ಉಳ್ಳವನು, ಆದಿ ಪರ್ವ,11,21
42. ಮಕರವ್ಯೂಹ, ಮೊಸಳೆಯ ಆಕಾರದ ಸೇನಾ ವ್ಯೂಹ, ಕರ್ಣ ಪರ್ವ,2,3
43. ಮಕರವ್ಯೂಹ, ಮೊಸಳೆಯಾಕಾರದಲ್ಲಿ ಸೈನ್ಯವನ್ನು ನಿಲ್ಲಿಸುವುದು, ದ್ರೋಣ ಪರ್ವ,4,22
44. ಮಕರಾಕರ, ಮೊಸಳೆಗಳ ಆವಾಸಸ್ಥಾನ, ಭೀಷ್ಮ ಪರ್ವ,4,97
45. ಮಕುಟ, ಕಿರೀಟ , ಗದಾ ಪರ್ವ,8,13
46. ಮಕುಟ, ಕಿರೀಟ., ವಿರಾಟ ಪರ್ವ,8,90
47. ಮಕುಟ, ತಲೆ , ಗದಾ ಪರ್ವ,13,14
48. ಮಕುಟವರ್ಧನರು, ರಾಜರು, ಭೀಷ್ಮ ಪರ್ವ,5,23
49. ಮಕುಟಾಗ್ರ, ತಲೆಯತುದಿ, ಗದಾ ಪರ್ವ,11,32
50. ಮಕ್ಕಳಾಟಿಕೆ, ಹುಡುಗಾಟ, ಆದಿ ಪರ್ವ,17,20
51. ಮಖಧ್ವಂಸಿ, ದಕ್ಷಯಾಗವನ್ನು ಧ್ವಂಸ ಮಾಡಿದವನು, ಆದಿ ಪರ್ವ,16,50
52. ಮಖಸಮುದ್ಬವೆ, ಯಜ್ಞದಿಂದ ಉದ್ಭವಿಸಿದವಳು, ಉದ್ಯೋಗ ಪರ್ವ,2,35
53. ಮಗಧನ ತೊಡಕಿ, ಜರಾಸಂಧನನ್ನು ಕೆಣಕಿ, ಸಭಾ ಪರ್ವ,3,3
54. ಮಗುವುತನ, ಬಾಲ್ಯ, ಆದಿ ಪರ್ವ,6,29
55. ಮಗುಳದಿರು, ಹಿಂದಿರುಗಬೇಡ, ದ್ರೋಣ ಪರ್ವ,5,73
56. ಮಗುಳಿಚು, ಕಳುಹಿಸು, ಉದ್ಯೋಗ ಪರ್ವ,2,13
57. ಮಗುಳೆರಗಿದನು, ಪುನಃ ನಮಸ್ಕರಿಸಿದನು, ಗದಾ ಪರ್ವ,11,55
58. ಮಗ್ಗಿತು, ನವೆಯಿತು, ಭೀಷ್ಮ ಪರ್ವ,4,11
59. ಮಗ್ಗಿದರು, ಬಗ್ಗು ಬಡಿದರು, ಭೀಷ್ಮ ಪರ್ವ,4,10
60. ಮಗ್ಗಿದರು, ಮರಣಿಸಿದರು, ಭೀಷ್ಮ ಪರ್ವ,4,39
61. ಮಗ್ಗಿದರು, ದಣಿದರು, ಭೀಷ್ಮ ಪರ್ವ,4,32
62. ಮಗ್ಗು, ನಾಶವಾಗು, ಗದಾ ಪರ್ವ,1,38
63. ಮಗ್ಗುಲು, ದೇಹದ ಪಾಶ್ರ್ವÀ, ಗದಾ ಪರ್ವ,12,15
64. ಮಗ್ಗುಲು ಮಹಿಗೆ ಬಿದ್ದುದು, ಮಗುಚಿ ಬಿದ್ದ. ಧುರಂಧರ, ಶಲ್ಯ ಪರ್ವ,3,69
65. ಮಚ್ಚ, ಒರೆಗಲ್ಲು, ಉದ್ಯೋಗ ಪರ್ವ,2,22
66. ಮಜಡ, ಜಡ, ಗದಾ ಪರ್ವ,9,33
67. ಮಜಡ, ದಡ್ಡ, ಅರಣ್ಯ ಪರ್ವ,14,43
68. ಮಝ, ಹೊಗಳಿಕೆಯ ಉದ್ಗಾರ, ಗದಾ ಪರ್ವ,5,38
69. ಮಡ, ಕಾಲು, ಗದಾ ಪರ್ವ,8,56
70. ಮಡಂಬ, ಐನೂರು ಹಳ್ಳಿಗಳಿಗೆ ಮುಖ್ಯವಾದ ನಗರ, ಆದಿ ಪರ್ವ,18,4
71. ಮಡಮುರಿ, ಹಿಂಭಾಗ, ಗದಾ ಪರ್ವ,2,12
72. ಮಡಮುರಿ, ಹಿಂದಕ್ಕೆ ಹೊರಳು, ವಿರಾಟ ಪರ್ವ,3,89
73. ಮಡಮುರಿದು, ಚೌಕಟ್ಟು ಮುರಿದು, ಭೀಷ್ಮ ಪರ್ವ,9,12
74. ಮಡಮುರಿವ, ಹಿಮ್ಮೆಟ್ಟುವ, ದ್ರೋಣ ಪರ್ವ,15,38
75. ಮಡಲು, ಉಡಿ, ಗದಾ ಪರ್ವ,8,38
76. ಮಡಹಿ, ಕೊಂದು, ದ್ರೋಣ ಪರ್ವ,10,0
77. ಮಡಿ, ಮೀಸಲು, ಗದಾ ಪರ್ವ,2,13
78. ಮಡಿಗಾಲು, ಕಾಲುಮಡಿಸುವಿಕೆ, ವಿರಾಟ ಪರ್ವ,8,83
79. ಮಡಿವರ್ಗ, ಶುಭ್ರವಸ್ತ್ರಗಳು, ಆದಿ ಪರ್ವ,13,46
80. ಮಡಿವೆರಳು, ಮಡಿಸಿದ ಬೆರಳು, ಶಲ್ಯ ಪರ್ವ,2,18
81. ಮಡÀುವು, ಆಳವಾದ ನೀರು, ಗದಾ ಪರ್ವ,5,24
82. ಮಡುಹಿದಾತನ, ಕೊಂದವನ, ದ್ರೋಣ ಪರ್ವ,2,8
83. ಮಡÀುಹು, ನೀರುನಿಂತ ಸ್ಥಳ, ಗದಾ ಪರ್ವ,3,12
84. ಮಡ್ಡು, ಒಂದು ಬಗೆಯ ಆಯುಧ, ದ್ರೋಣ ಪರ್ವ,16,47
85. ಮಡ್ಡು, ಒಂದು ಬಗೆಯ ಕಠಾರಿ, ಭೀಷ್ಮ ಪರ್ವ,3,20
86. ಮಣಿ, ರತ್ನ, ಆದಿ ಪರ್ವ,13,18
87. ಮಣಿ, ತಲೆಬಾಗು, ಸಭಾ ಪರ್ವ,1,5
88. ಮಣಿ ಮೌಳಿಮಂಡಿತ, ರತ್ನಕಿರೀಟ ಧರಿಸಿದ, ಸಭಾ ಪರ್ವ,2,1
89. ಮಣಿಕೇವಣದ, ಮಣಿಯನ್ನು ಜೋಡಿಸಿದ, ಸಭಾ ಪರ್ವ,12,99
90. ಮಣಿಖಚಿತ ರಚನೆಗಳ, ರತ್ನಗಳಿಂದ ಖಚಿತವಾದ ಹವಳದ ಮಂಚವನು ತರಿಸಿದ, ಸಭಾ ಪರ್ವ,5,45
91. ಮಣಿಗಣ, ಬೆಲೆಬಾಳುವ ಮಣಿಗಳ ಮೊತ್ತ, ಗದಾ ಪರ್ವ,13,18
92. ಮಣಿದು, ಬಾಗಿ, ಆದಿ ಪರ್ವ,8,40
93. ಮಣಿಮುಕುಟ, ವಿವಿಧಮಣಿ (ರತ್ನ , ಗದಾ ಪರ್ವ,8,17
94. ಮಣಿಯದ, ಬಾಗದ, ಉದ್ಯೋಗ ಪರ್ವ,9,36
95. ಮಣಿರುಚಿ, ರತ್ನಗಳ ಕಾಂತಿ, ಗದಾ ಪರ್ವ,9,28
96. ಮಣಿವೆಳಗು, ರತ್ನದ ಕಾಂತಿ, ದ್ರೋಣ ಪರ್ವ,3,56
97. ಮಣಿಸು, ತಪ್ಪಿಸು, ಸಭಾ ಪರ್ವ,15,23
98. ಮತ, ಸರಿ , ವಿರಾಟ ಪರ್ವ,5,26
99. ಮತ, ನೀತಿ, ದ್ರೋಣ ಪರ್ವ,1,6
100. ಮತ, ಅಭಿಪ್ರಾಯ , ವಿರಾಟ ಪರ್ವ,4,22
101. ಮತಗುಡ, ಅಭಿಪ್ರಾಯಕ್ಕೆ ಒಪ್ಪದ, ಉದ್ಯೋಗ ಪರ್ವ,9,36
102. ಮತಿ, ಬುದ್ಧಿ, ಭೀಷ್ಮ ಪರ್ವ,9,4
103. ಮತಿಮುರಿದರೆ, ಮನಸ್ಸು ಮಾಡಿದರೆ, ಭೀಷ್ಮ ಪರ್ವ,6,42
104. ಮತಿಯ ಭ್ರಮ, ಬುದ್ಧಿಭ್ರಮಣೆ, ಗದಾ ಪರ್ವ,11,11
105. ಮತಿಯ ಹಬ್ಬುಗೆಯಿಂದ, ಬುದ್ಧಿಯನ್ನು ನಾನಾ ದಿಕ್ಕಿನಲ್ಲಿ ಓಡಿಸಿ, ವಿರಾಟ ಪರ್ವ,4,2
106. ಮತಿವಿಕಳ, ಬುದ್ಧಿಗೆಟ್ಟ, ಉದ್ಯೋಗ ಪರ್ವ,4,15
107. ಮತಿವಿಕಳತನ, ಬುದ್ಧಿ ಭ್ರಮಣೆಯಾದವನ ಸ್ವಭಾವ, ಗದಾ ಪರ್ವ,8,60
108. ಮತಿವಿಕಳರು, ಅರಿವುಗೇಡಿಗಳು, ಆದಿ ಪರ್ವ,8,89
109. ಮತ್ತಕಾಶಿನಿ, ಸುಂದರಿ, ಸಭಾ ಪರ್ವ,14,49
110. ಮತ್ತಕಾಶಿನಿ, ಮೋಹವನ್ನುಂಟು ಮಾಡುವವರು., ಗದಾ ಪರ್ವ,12,16
111. ಮತ್ತಗಜಘಟೆ, ಮದಿಸಿದ ಆನೆಗಳ ಗುಂಪು, ಶಲ್ಯ ಪರ್ವ,2,24
112. ಮತ್ತದಂತಿ, ಮದಿಸಿದ ಆನೆ, ಗದಾ ಪರ್ವ,12,16
113. ಮತ್ತವಾರಣ, ಮದಗಜ, ಭೀಷ್ಮ ಪರ್ವ,2,16
114. ಮತ್ತವಾರಣ, ಮದ್ದಾನೆ, ದ್ರೋಣ ಪರ್ವ,1,15
115. ಮತ್ತವಾರಣ, ಕೈಸಾಲೆ, ಸಭಾ ಪರ್ವ,1,14,
116. ಮತ್ತು ಐದು ಕಾಲಾಳುಗಳಿಂದ ಕೂಡಿದ ಒಂದು ಸೈನ್ಯದ ತುಕಡಿ, ಎಂಬ ಅರ್ಥವಿದೆ) ಕೈವರ್ತಿಸು, ಶಲ್ಯ ಪರ್ವ,2,7
117. ಮತ್ಸರ, ಮಾತ್ಸರ್ಯ , ವಿರಾಟ ಪರ್ವ,9,15
118. ಮತ್ಸರ, ದ್ವೇಷ, ವಿರಾಟ ಪರ್ವ,10,11
119. ಮತ್ಸರ, ದ್ವೇಷ/ಅಸೂಯೆ, ಉದ್ಯೋಗ ಪರ್ವ,6,5
120. ಮತ್ಸೂನುಗಳ, ನನ್ನ ಮಕ್ಕಳನ್ನು, ಗದಾ ಪರ್ವ,12,12
121. ಮತ್ಸ್ಯ, ಮತ್ಸ್ಯದೇಶದ ದೊರೆ, ಭೀಷ್ಮ ಪರ್ವ,8,23
122. ಮತ್ಸ್ಯನ ಸೂನು (ಮತ್ಸ್ಯನ, ವಿರಾಟನ ಸೂನು, ವಿರಾಟ ಪರ್ವ,8,80
123. ಮತ್ಸ್ಯಾಧಿಪ, ವಿರಾಟರಾಯ , ವಿರಾಟ ಪರ್ವ,1,5
124. ಮತ್ಸ್ಯಾಧಿಪತಿ, ಮತ್ಸ್ಯ ದೇಶದ ರಾಜ, ಸಭಾ ಪರ್ವ,2,2
125. ಮತ್ಸ್ಯೇಶ, ಮತ್ಸರಾಜ್ಯದ ಪ್ರಭು , ವಿರಾಟ ಪರ್ವ,1,21
126. ಮದ, ಹಿಗ್ಗು, ಆದಿ ಪರ್ವ,19,17
127. ಮದ, ಅಮಲು, ಆದಿ ಪರ್ವ,18,29
128. ಮದಂತಃಕರಣ, ನನ್ನ ಮನಸ್ಸು, ಭೀಷ್ಮ ಪರ್ವ,10,4
129. ಮದಕರಿ, ಮದ್ದಾನೆ, ಭೀಷ್ಮ ಪರ್ವ,4,66
130. ಮದಗಜ, ಮದ್ದಾನೆ, ಭೀಷ್ಮ ಪರ್ವ,7,7
131. ಮದಗಿಚ್ಚಿನುರಿಯಲಿ, ಗರ್ವವೆಂಬ ಬೆಂಕಿಯ ಉರಿಯಲ್ಲಿ, ಸಭಾ ಪರ್ವ,1,55
132. ಮದದ ನಿಗುರಿನ, ಅಹಂಕಾರದಿಂದ ಬೀಗುತ್ತಿದ್ದ, ಭೀಷ್ಮ ಪರ್ವ,3,67
133. ಮದದಾನೆ, ಸೊಕ್ಕಿದ ಆನೆ, ಆದಿ ಪರ್ವ,13,21
134. ಮದಧಾರೆ, ಆನೆಯ ಮಸ್ತಕದಿಂದ ಸುರಿವ ಮದ ಜಲ, ಭೀಷ್ಮ ಪರ್ವ,4,76
135. ಮದನನಂಬು, ಕಾಮನ ಬಾಣ, ಅರಣ್ಯ ಪರ್ವ,14,47
136. ಮದನಹರ, ಕಾಮನನ್ನು ಕೊಂದವ, ಗದಾ ಪರ್ವ,9,0
137. ಮದನಾರಿ, ಕಾಮನ ಶತ್ರು, ಗದಾ ಪರ್ವ,9,23
138. ಮದನಾರ್ತ, ಮನ್ಮಥ ಬಾಧೆಯಿಂದ ಕಂಗಾಲಾದವನು, ವಿರಾಟ ಪರ್ವ,2,43
139. ಮದನಾಲಸೆ, ಮನ್ಮಥಕಾಂಕ್ಷಿ, ಅರಣ್ಯ ಪರ್ವ,8,17
140. ಮದಮುಖ, ಮದದಿಂದ ಗರ್ವಿತನಾದವನು ವಿಕಾರ, ಗದಾ ಪರ್ವ,8,31
141. ಮದಮುಖ, ಗರ್ವಿತರಾದವರು, ಶಲ್ಯ ಪರ್ವ,3,2
142. ಮದಮುಖರು, ಗರ್ವಿಷ್ಠರು, ಆದಿ ಪರ್ವ,15,46
143. ಮದವಳಿಗೆ, ವಧು., ಆದಿ ಪರ್ವ,19,39
144. ಮದವಾರಣ, ಮದಿಸಿದ ಆನೆ (ದೊಡ್ಡವರು ಚಿಕ್ಕವರನ್ನು ಮಾತಾಡಿಸುವಾಗ ಮುದ್ದಿಗೆ ನನ್ನ `ಮದಿಸಿದ ಆನೆಯೇ' ಎಂದು ಹೇಳುವ ರೂಢಿಯಿದೆ), ವಿರಾಟ ಪರ್ವ,2,40
145. ಮದವೊಗುವ, ಮದಧಾರೆ ಸುರಿಯುವ, ವಿರಾಟ ಪರ್ವ,6,59
146. ಮದವ್ಯಾಕುಲ, ಗರ್ವದಿಂದ ಪೀಡಿತರು, ಸಭಾ ಪರ್ವ,1,30
147. ಮದಿರಾ, ಮದ್ಯ, ಆದಿ ಪರ್ವ,18,29
148. ಮದ್ದು, ವಶಪಡಿಸಿಕೊಳ್ಳಲು ಬಳಸುವ ಔಷಧ (ವಶೀಕರಣದ ಔಷಧ) ದೂರದಿಂದ ದ್ರೌಪದಿಯನ್ನು ಕಂಡಾಗ ಕೀಚಕನ ಕಲ್ಪನೆ ಗರಿಗೆದರಿದೆಯೆಂದು ಭಾವಿಸಬಹುದು., ವಿರಾಟ ಪರ್ವ,3,8
149. ಮದ್ಯಪ, ಹೆಂಡಕುಡುಕ, ಸಭಾ ಪರ್ವ,1,59
150. ಮಧು, ಜೇನು, ಗದಾ ಪರ್ವ,3,20
151. ಮಧು, ಜೇನುತುಪ್ಪ, ಅರಣ್ಯ ಪರ್ವ,4,11
152. ಮಧು ಸೂದನು, ಮಧು ಎಂಬ ರಾಕ್ಷಸನನ್ನು ಕೊಂದವನು, ಸಭಾ ಪರ್ವ,5,35
153. ಮಧುಕರನೆ ಬಲ್ಲುದು, ದುಂಬಿಗೆ ಮಾತ್ರ ಸಾಧ್ಯ, ವಿರಾಟ ಪರ್ವ,4,8
154. ಮಧುಪ, ಭೃಂಗ , ಅರಣ್ಯ ಪರ್ವ,3,4
155. ಮಧುಪರ್ಕ, ಮೊಸರು , ಸಭಾ ಪರ್ವ,1,25, , , ಜೇನು, ಸಕ್ಕರೆ ಇವುಗಳ ಮಿಶ್ರಣ ಅತಿಥಿಗಳಿಗೆ ಅರ್ಪಿಸುವುದು.,
156. ಮಧುಪರ್ಕ, ಮೊಸರು , ಅರಣ್ಯ ಪರ್ವ,16,5, , , ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ,
157. ಮಧುಪರ್ಕ, ಅತಿಥಿಗಳನ್ನು ಬರಮಾಡಿಕೊಳ್ಳುವ ಸಮಾರಂಭ, ಆದಿ ಪರ್ವ,18,23
158. ಮಧುಮಾಸ, ವಸಂತಕಾಲ , ಆದಿ ಪರ್ವ,5,9
159. ಮಧುರ, ಪ್ರಿಯ, ಆದಿ ಪರ್ವ,6,44
160. ಮಧುರ, ಇನಿದು, ಆದಿ ಪರ್ವ,6,26
161. ಮಧುರ ವಚನ, ಸವಿಮಾತು, ಉದ್ಯೋಗ ಪರ್ವ,10,22
162. ಮಧುರೋಕ್ತಿ, ಪ್ರಿಯವಾದ ಮಾತು, ಸಭಾ ಪರ್ವ,1,37
163. ಮಧೂಕ, ಹಿಪ್ಪೆ, ಅರಣ್ಯ ಪರ್ವ,4,38
164. ಮಧ್ಯಸ್ಥಿತರು, ಮಧ್ಯದಲ್ಲಿರುವವರು, ಗದಾ ಪರ್ವ,8,24
165. ಮನಃಕ್ಷೋಭೆ, ಮನಸ್ಸಿನ ತೊಳಲಾಟ, ಗದಾ ಪರ್ವ,9,21
166. ಮನಕತ, ಮನಸ್ಸಿನ ದುಃಖ, ಉದ್ಯೋಗ ಪರ್ವ,11,6
167. ಮನಕತ, ಕಳವಳ, ಉದ್ಯೋಗ ಪರ್ವ,9,35
168. ಮನಕಲಿತನ, ಮನಸ್ಥೈರ್ಯ, ಭೀಷ್ಮ ಪರ್ವ,9,30
169. ಮನಕಾಹು, ಮನಸ್ಸನ್ನು ಹಿಡಿದಿಟ್ಟು ಕೊಳ್ಳುವುದು, ಭೀಷ್ಮ ಪರ್ವ,8,31
170. ಮನಕೆ ಮುಂಚುವ, ಮನೋವೇಗವನ್ನು ಮೀರುವ, ದ್ರೋಣ ಪರ್ವ,10,9
171. ಮನಗೆಲವ, ಮ£ಸ್ಸಿನ ಉತ್ಸಾಹ, ದ್ರೋಣ ಪರ್ವ,5,34
172. ಮನಬರಡ, ಶುಷ್ಕವಾದ ಮನಸ್ಸುಳ್ಳವ, ವಿರಾಟ ಪರ್ವ,5,41
173. ಮನಬರಡರು, ಶುಷ್ಕಮನಸ್ಸುಳ್ಳವನು, ಸಭಾ ಪರ್ವ,1,40
174. ಮನಮುರಿ, ಮನಸ್ಸನ್ನು ಕಡಿದುಕೋ, ಗದಾ ಪರ್ವ,11,59
175. ಮನಮುರಿದ, ಭಗ್ನ ಮನನಾದ, ಭೀಷ್ಮ ಪರ್ವ,3,27
176. ಮನಮೆಚ್ಚು, ಅಂತರಂಗಕ್ಕೆ ಒಪ್ಪುವ., ಆದಿ ಪರ್ವ,18,19
177. ಮನವಾರೆ, ಮನಸ್ಸು ತೃಪ್ತಿಯಾಗುವಷ್ಟು, ದ್ರೋಣ ಪರ್ವ,1,54
178. ಮನವೇಗಾಯ್ಲ, ಮನೋವೇಗದ, ಭೀಷ್ಮ ಪರ್ವ,4,55
179. ಮನಸಂದು, ಮನದೊಳೊಪ್ಪಿ, ಉದ್ಯೋಗ ಪರ್ವ,4,16
180. ಮನಿವಚನಶರ, ಮುನಿಯ ಮಾತಿನ ಬಾಣ, ಗದಾ ಪರ್ವ,11,8
181. ಮನುಜೆ, ಮನುಷ್ಯಳು., ಆದಿ ಪರ್ವ,10,18
182. ಮನುಮಥನ, ಮನ್ಮಥನ, ವಿರಾಟ ಪರ್ವ,3,8
183. ಮನೆ) ಜಂಗಳ, ಮಾಂಸಖಂಡ, ಗದಾ ಪರ್ವ,3,28
184. ಮನೆವಾರತೆ, ಭಾಗ್ಯ ವಿಶೇಷ, ಅರಣ್ಯ ಪರ್ವ,7,9
185. ಮನೋಜವಿಗ್ರಹ, ಮನ್ಮಥಾಕಾರ, ಭೀಷ್ಮ ಪರ್ವ,3,80
186. ಮನೋರಥ, ಮನಸ್ಸಿನ ಆಶೆ, ಗದಾ ಪರ್ವ,9,6
187. ಮನೋಹರ, ಸೊಗಸಾದ, ಆದಿ ಪರ್ವ,18,5
188. ಮನ್ನಣೆ, ವೈಭವ, ಗದಾ ಪರ್ವ,13,10
189. ಮನ್ನಿಸಿಕೊಂಡು, ಗೌರವಿಸಲ್ಪಟ್ಟು, ಆದಿ ಪರ್ವ,7,9
190. ಮನ್ನಿಸಿದ, ಸಮಾಧಾನ ಮಾಡಿದ, ಗದಾ ಪರ್ವ,12,20
191. ಮನ್ನಿಸು, ಗೌರವಿಸು., ಉದ್ಯೋಗ ಪರ್ವ,7,18
192. ಮನ್ನೆಯ, ಸಾಮಂತರಾಜರು, ಭೀಷ್ಮ ಪರ್ವ,5,1
193. ಮನ್ನೆಯ, ಮುಖಂಡ, ಆದಿ ಪರ್ವ,20,30
194. ಮನ್ನೆಯ, ಗೌರವದ, ದ್ರೋಣ ಪರ್ವ,6,23
195. ಮನ್ನೆಯ ಕುಲದ, ರಾಜವಂಶದವರ, ಸಭಾ ಪರ್ವ,1,68
196. ಮನ್ನೆಯ ಗಂಡ, ಮುಖಂಡರನ್ನು ಮೀರಿಸುವ ಶೂರ, ಆದಿ ಪರ್ವ,15,47
197. ಮನ್ನೆಯ ಗಿನ್ನೆಯ, ಸಾಮಂತ ಗೀಮಂತ, ಭೀಷ್ಮ ಪರ್ವ,1,5
198. ಮನ್ನೆಯರು, ನಾಯಕರು, ಶಲ್ಯ ಪರ್ವ,3,72
199. ಮನ್ನೆಯರು, ಮಾನ್ಯರು, ಸಭಾ ಪರ್ವ,1,78
200. ಮಮತೆ, ಪ್ರೀತಿ., ಉದ್ಯೋಗ ಪರ್ವ,9,66
201. ಮಮ್ಮಲ ಮರುಗು, ಅತಿಯಾಗಿ ಕೊರಗು, ಉದ್ಯೋಗ ಪರ್ವ,8,68
202. ಮಯ, ರಾಕ್ಷಸರ ಶಿಲ್ಪಿ, ಸಭಾ ಪರ್ವ,1,13
203. ಮಯಣಾಮ, ಕುದುರೆಯ ಒಂದು ನಡೆ ದಾಪುಗಾಲು, ಆದಿ ಪರ್ವ,7,2
204. ಮಯೂಖಾಳಿ, ಕಿರಣರಾಶಿ, ದ್ರೋಣ ಪರ್ವ,1,43
205. ಮರಗತ್ತಲೆ, ದಟ್ಟವಾದ ಕತ್ತಲು, ಆದಿ ಪರ್ವ,9,14
206. ಮರಗೋಡು, ಮರಗೊಂಬು ಕುದುರೆಯ ಜೀನಿನ ಮುಂಭಾಗದಲ್ಲಿ ಮರದಿಂದ ಮಾಡಿದ ಕೊಂಬಿನ ಆಕಾರದ, ವಿರಾಟ ಪರ್ವ,8,84
207. ಮರವೆ, ಮರವು , ಗದಾ ಪರ್ವ,11,10
208. ಮರವೆ, ಅಜ್ಞಾನ, ಆದಿ ಪರ್ವ,16,55
209. ಮರವೆ ಗರಿಗಟ್ಟಿತು, ಮರೆವಿನ ಸಂಭ್ರಮ ಅತಿಯಾಯಿತು, ವಿರಾಟ ಪರ್ವ,2,12
210. ಮರಹು, ಪ್ರಜ್ಞೆ ಇಲ್ಲದ್ದು, ಗದಾ ಪರ್ವ,9,11
211. ಮರಹು, ಮರೆÀವು, ಗದಾ ಪರ್ವ,6,27,
212. ಮರಳಿಚು, ಹಿಂದಿರುಗಿಸು., ಗದಾ ಪರ್ವ,10,9
213. ಮರಳಿಚು, ಮರಳಿಸು, ವಿರಾಟ ಪರ್ವ,4,43
214. ಮರಳಿದು, ಹಿಂತಿರುಗಿ, ಸಭಾ ಪರ್ವ,4,12
215. ಮರಳಿದು, ಪುನಃ, ಗದಾ ಪರ್ವ,11,52
216. ಮರಳಿದು ಬಿಡುವಡೆ, ಶಿಬಿರ ತ್ಯಜಿಸಲು, ಭೀಷ್ಮ ಪರ್ವ,1,53
217. ಮರಳು, ಮರಲು , ಆದಿ ಪರ್ವ,4,19
218. ಮರಳುದಲೆ, ಹಿಂದಿರುಗು., ದ್ರೋಣ ಪರ್ವ,4,46
219. ಮರಳುದಲೆ, ಹಿಂದಿರುಗುವಿಕೆ, ಗದಾ ಪರ್ವ,1,41
220. ಮರಾಠಿಯಿಂದ ಬಂದದ್ದು. ಕೃಪಣಮತಿ, ತುಚ್ಛವಾದ, ವಿರಾಟ ಪರ್ವ,3,88
221. ಮರಾಳ, ಹಂಸ., ಉದ್ಯೋಗ ಪರ್ವ,7,27
222. ಮರಿಚ, ಮೆಣಸು, ಅರಣ್ಯ ಪರ್ವ,4,44
223. ಮರಿಜಿಂಕೆ, ಮರಿಹುಲ್ಲೆ, ಭೀಷ್ಮ ಪರ್ವ,9,20
224. ಮರಿಯಾನೆ, ಮಕ್ಕಳನ್ನು ಮುದ್ದಿನಿಂದ ಕರೆಯುವಾಗ ಬಳಸುವ ಮಾತು. ಸೆಳೆದು, ಆದಿ ಪರ್ವ,8,61
225. ಮರೀಚಿ, ಬಿಸಿಲುಗುದುರೆ, ದ್ರೋಣ ಪರ್ವ,4,38
226. ಮರುಗು, ಸಂಕಟಪಡು, ಗದಾ ಪರ್ವ,7,40
227. ಮರುಗು, ಶೋಕಿಸು, ಗದಾ ಪರ್ವ,12,8
228. ಮರುಗು, ಹಾಲು, ಗದಾ ಪರ್ವ,5,32
229. ಮರುಗು, ದುಃಖಿಸು., ಗದಾ ಪರ್ವ,12,0
230. ಮರುಚು, ಮಡಿಸು, ಗದಾ ಪರ್ವ,8,31
231. ಮರುದಲೆ, ಪ್ರತಿಬಿಂಬ, ಅರಣ್ಯ ಪರ್ವ,7,12
232. ಮರುಮೊನೆ, ನಾಟಿಕೊಂಡು ಹೊರಗೆ ಕಾಣುವ ತುದಿ, ಆದಿ ಪರ್ವ,15,16
233. ಮರುಮೊನೆ, ಪುನಃ ಹರಿತವಾಗು, ಗದಾ ಪರ್ವ,11,8
234. ಮರುವಲಗೆ, ಪುನರ್ಯುದ್ಧ (ಆಲಂಕಾರಿಕ ಅರ್ಥ ಎರಡನೆಯ ಸುತ್ತಿನ ಯುದ್ಧ) ಹದ, ವಿರಾಟ ಪರ್ವ,8,80
235. ಮರುಳ, ಭೂತಗಳ, ದ್ರೋಣ ಪರ್ವ,5,77
236. ಮರುಳಾಗದಿರಿ, ಹುಚ್ಚುತನ ಮಾಡಬೇಡಿ, ಭೀಷ್ಮ ಪರ್ವ,5,10
237. ಮರುಳಾಡು, ಏನೂ ತಿಳಿಯದಂತೆ ವರ್ತಿಸು, ಆದಿ ಪರ್ವ,19,33
238. ಮರುಳಾದ, ಸಂಪೂರ್ಣವಾಗಿ ಅವರಿಂದ ಆಕರ್ಷಿತನಾದ, ಗದಾ ಪರ್ವ,11,5
239. ಮರುಳಾದೌ, ಭ್ರಮಿತಳಾದೆಯಲ್ಲಾ, ಗದಾ ಪರ್ವ,11,47
240. ಮರುಳು, ಭ್ರಮೆ, ಆದಿ ಪರ್ವ,11,5
241. ಮರುಳು, ಭೂತಬೇತಾಳಗಳು, ಗದಾ ಪರ್ವ,5,29
242. ಮರುಳು, ಬುದ್ಧಿಭ್ರಮಣೆ, ಗದಾ ಪರ್ವ,5,13
243. ಮರುಳು, ಮೋಹ, ಆದಿ ಪರ್ವ,11,42
244. ಮರುಳು, ಹುಚ್ಚು, ಆದಿ ಪರ್ವ,4,45
245. ಮರುಳುತನ, ಹುಚ್ಚುತನ, ಭೀಷ್ಮ ಪರ್ವ,6,40
246. ಮರುಳುತನ, ದಡ್ಡತನ, ಭೀಷ್ಮ ಪರ್ವ,1,19
247. ಮರೆ, ಎಚ್ಚರ ತಪ್ಪು / ಯೋಗ್ಯ, ಉದ್ಯೋಗ ಪರ್ವ,3,54
248. ಮರೆ, ಒಂದು ಬಗೆಯ ಜಿಂಕೆ., ಅರಣ್ಯ ಪರ್ವ,3,8
249. ಮರೆಗೊಂಡ, ಮುಳುಗಿದನು., ಭೀಷ್ಮ ಪರ್ವ,6,48
250. ಮರೆಗೊಂಡು, ಮರೆಮಾಡಿಕೊಂಡು, ಗದಾ ಪರ್ವ,10,7
251. ಮರೆಗೊರಳುಗೊಯ್ಕನು, ಇತರರಿಗೆ ತಿಳಿಯದ ಹಾಗೆ ಕೊರಳನ್ನು ಕತ್ತರಿಸುವವನು., ದ್ರೋಣ ಪರ್ವ,7,17
252. ಮರೆದು, ಅಪ್ಪಿತಪ್ಪಿ, ಭೀಷ್ಮ ಪರ್ವ,3,83
253. ಮರೆಯಿರಿಗಾರ, ಮರೆಯಲ್ಲಿ ನಿಂತು ಅಂದರೆ, ವಿರಾಟ ಪರ್ವ,4,7
254. ಮರೆಯಿಸಿ, ಮರೆಮಾಚಿ, ಗದಾ ಪರ್ವ,12,18
255. ಮರೆಹೊಗು, ಆಶ್ರಯ ಬೇಡಿ, ಆದಿ ಪರ್ವ,9,17
256. ಮತ್ರ್ಯರು, ಮನುಷ್ಯರು, ಆದಿ ಪರ್ವ,9,15
257. ಮರ್ದಿನಿ, ಕೊಲ್ಲುವವಳು, ವಿರಾಟ ಪರ್ವ,1,11
258. ಮರ್ಮಿ, ಮೋಸಗಾರ, ಉದ್ಯೋಗ ಪರ್ವ,4,87
259. ಮರ್ಯಾದೆ, ಸಭ್ಯತನ, ಆದಿ ಪರ್ವ,8,16
260. ಮಲಕ, ಗಂಟು, ಕರ್ಣ ಪರ್ವ,24,24
261. ಮಲಗಿಸು, ದಿಂಬಿಗೆ ಒರಗಿಸು, ಶಲ್ಯ ಪರ್ವ,1,5
262. ಮಲಗಿಸು, ಒರಗಿ ಕೂರಿಸು (ಇದೇ ಸಂಧಿಯ 5ನೆಯ ಪದ್ಯದ ಟಿಪ್ಪಣಿಯನ್ನು ನೋಡಿ) ಘಳಿಲನೆ, ಶಲ್ಯ ಪರ್ವ,1,10
263. ಮಲಗು, ಒರಗು, ಶಲ್ಯ ಪರ್ವ,3,45
264. ಮಲಯಜ, ಶ್ರೀಗಂಧ, ಆದಿ ಪರ್ವ,12,11
265. ಮಲೆ, ದಿಟ್ಟತನ, ಗದಾ ಪರ್ವ,1,53
266. ಮಲೆತ, ಸೊಕ್ಕಿದ , ಗದಾ ಪರ್ವ,5,52, , , ಅಹಂಕಾರದ,
267. ಮಲೆತ, ಪ್ರತಿಭಟಿಸಿದ, ಭೀಷ್ಮ ಪರ್ವ,5,14
268. ಮಲೆತ, ಗರ್ವಿಸಿದ, ಶಲ್ಯ ಪರ್ವ,3,57
269. ಮಲೆತ, ಗರ್ವವನ್ನು ಹೊಂದಿದ, ದ್ರೋಣ ಪರ್ವ,5,27
270. ಮಲೆತಡೆ, (ನಾನು) ಕೆರಳಿ ನಿಂತರೆ, ವಿರಾಟ ಪರ್ವ,2,29
271. ಮಲೆತವನು, ಎದುರು ಬಿದ್ದವನು, ಗದಾ ಪರ್ವ,5,49
272. ಮಲೆತವರ, ಎದುರಿಸಿ ನಿಂದವರ, ಗದಾ ಪರ್ವ,9,33
273. ಮಲೆತು, ಸೆಟೆದು , ವಿರಾಟ ಪರ್ವ,8,61
274. ಮಲೆತು, ಶಕ್ತನಾಗಿ, ಗದಾ ಪರ್ವ,2,36
275. ಮಲೆತು ಕಾದಿದ, ಕೊಬ್ಬಿ ಪ್ರತಿಭಟಿಸಿ ಹೋರಾಡಿದ, ಸಭಾ ಪರ್ವ,4,7
276. ಮಲೆತುದೊ, ಗರ್ವಿಸಿತೊ, ದ್ರೋಣ ಪರ್ವ,2,40
277. ಮಲೆವ, ಕೊಬ್ಬಿದ, ಭೀಷ್ಮ ಪರ್ವ,3,22
278. ಮಲೆವವರ ಗಂಡನು, ದರ್ಪದಿಂದ ಹೋರಾಡುವವರ ಪಾಲಿಗೆ ಗಂಡಾಂತರವೆನಿಸಿದವನು, ಭೀಷ್ಮ ಪರ್ವ,2,14
279. ಮಲ್ಲ, ಜಟ್ಟಿ, ಆದಿ ಪರ್ವ,12,21
280. ಮಸಕ, ವಿಜೃಂಭಣೆ , ಗದಾ ಪರ್ವ,7,7, , ,
281. ಮಸಕ, ರೋಷ, ಆದಿ ಪರ್ವ,14,27
282. ಮಸಕ, ಹವಣಿಕೆ, ಗದಾ ಪರ್ವ,8,28
283. ಮಸಕಕ್ಕೆ, ರೋಷಕ್ಕೆ, ಭೀಷ್ಮ ಪರ್ವ,3,84
284. ಮಸಕದಲಿ, ಉರವಣೆಯಲಿ, ಭೀಷ್ಮ ಪರ್ವ,9,39
285. ಮಸಗದ, ಹೊತ್ತಿಕೊಳ್ಳದ, ವಿರಾಟ ಪರ್ವ,3,10
286. ಮಸಗಿ, ರೇಗಿ, ದ್ರೋಣ ಪರ್ವ,14,33
287. ಮಸಗಿ, ಹುಚ್ಚೆದ್ದು, ಉದ್ಯೋಗ ಪರ್ವ,8,12
288. ಮಸಗಿತು, ಶೋಭಿಸಿತು, ದ್ರೋಣ ಪರ್ವ,1,36
289. ಮಸಗಿತು, ಚೆಲ್ಲಾಡಿತು, ಭೀಷ್ಮ ಪರ್ವ,9,13
290. ಮಸಗು, ವಿಜೃಂಭಿಸು, ಗದಾ ಪರ್ವ,5,36, ,
291. ಮಸಗು, ಪ್ರಕಟವಾಗು, ಆದಿ ಪರ್ವ,15,33
292. ಮಸಗು, ಹುರುಡಿಸು, ಗದಾ ಪರ್ವ,2,11, ,
293. ಮಸಗು, ಹರಡು/ತುಂಬು, ಉದ್ಯೋಗ ಪರ್ವ,9,61
294. ಮಸಗು, ಕವಿದುಕೊಳ್ಳುವಿಕೆ, ವಿರಾಟ ಪರ್ವ,4,46
295. ಮಸಗು, ಗರ್ಜಿಸು ಕಡಹ, ದ್ರೋಣ ಪರ್ವ,10,29
296. ಮಸಗೆ, ಹೊತ್ತಿಕೊಳ್ಳಲು, ವಿರಾಟ ಪರ್ವ,5,34
297. ಮಸಗೆ, ಕಾಡಿಗೆ ರೋಗ (ಗೋಧಿ, ಆದಿ ಪರ್ವ,8,48
298. ಮಸಳಿಸು, ಕಾಣದಾಗು, ಗದಾ ಪರ್ವ,2,13
299. ಮಸಳು, ಪುನಃಪ್ರಾಪ್ತಿಯಾಗು, ಶಲ್ಯ ಪರ್ವ,3,49
300. ಮಸುಳ, ಕಾಂತಿಹೀನ, ಆದಿ ಪರ್ವ,13,13
301. ಮಸುಳಿಸು, ಮಾಸು, ಉದ್ಯೋಗ ಪರ್ವ,3,57
302. ಮಸುಳಿಸು, ಅಳಿಸು, ಗದಾ ಪರ್ವ,9,14
303. ಮಸುಳು, ಮಂಕಾಗು, ಆದಿ ಪರ್ವ,13,38
304. ಮಸುಳ್ದ, ಬಾಡಿದ., ಉದ್ಯೋಗ ಪರ್ವ,6,16
305. ಮಸೆ, ಉದ್ರೇಕಗೊಳ್ಳು, ಗದಾ ಪರ್ವ,5,33
306. ಮಸೆ, ಹರಿತ, ಆದಿ ಪರ್ವ,13,7
307. ಮಸೆ, ಘರ್ಷಣೆ, ಉದ್ಯೋಗ ಪರ್ವ,9,41
308. ಮಸೆ, ಘರ್ಷಿಸು, ಉದ್ಯೋಗ ಪರ್ವ,11,12
309. ಮಸೆ, ತೀವ್ರಗೊಳ್ಳು, ಕರ್ಣ ಪರ್ವ,13,32
310. ಮಸೆ, ತಿಕ್ಕು, ಆದಿ ಪರ್ವ,8,50
311. ಮಸೆಗಂಡನು, ಗಾಯಗೊಂಡನು, ಭೀಷ್ಮ ಪರ್ವ,9,38
312. ಮಸೆಗಾಣ್, ಗಾಯಗೊಳ್ಳು, ಆದಿ ಪರ್ವ,7,4
313. ಮಸೆಗಾಣಿಸು, ಗಾಯಗೊಳಿಸು., ದ್ರೋಣ ಪರ್ವ,1,60
314. ಮಸೆದರು, ಹೋರಾಟಕ್ಕೆ ಸಿದ್ಧರಾದರು, ಭೀಷ್ಮ ಪರ್ವ,1,19
315. ಮಸೆದಿಹ, ಸಾಣೆಹಿಡಿದ, ಭೀಷ್ಮ ಪರ್ವ,10,9
316. ಮಸೆದುದು, ಹರಿತವಾಗು ಹೆಚ್ಚಾಗು, ಗದಾ ಪರ್ವ,6,12
317. ಮಸೆದೋರು, ಉರಿಕಾಣಿಸು, ವಿರಾಟ ಪರ್ವ,2,6
318. ಮಸ್ತಕ, ನೆತ್ತಿ , ಗದಾ ಪರ್ವ,8,14, ,
319. ಮಹದಪವಾದ, ಲೋಕನಿಂದೆ, ಭೀಷ್ಮ ಪರ್ವ,6,47
320. ಮಹನವಮಿ, ಅಂತ್ಯ, ದ್ರೋಣ ಪರ್ವ,7,8
321. ಮಹಳ, ಭಾದ್ರಪದ ಕೃಷ್ಣ ಅಮಾವಾಸ್ಯೆಯಂದು ಸರ್ವಪಿತೃಗಳಿಗೆ ಮಾಡುವ ಶ್ರಾದ್ಧ, ವಿರಾಟ ಪರ್ವ,7,12
322. ಮಹಾ ಆಹವ, ಘೋರ ಯುದ್ಧ, ಭೀಷ್ಮ ಪರ್ವ,2,35
323. ಮಹಾಂಬುಧಿ, (ಮಹಾ) ಸಮುದ್ರ, ವಿರಾಟ ಪರ್ವ,10,50
324. ಮಹಾಂಬುಧಿ, ಹೆಗ್ಗಡಲು, ಉದ್ಯೋಗ ಪರ್ವ,11,49
325. ಮಹಾಕ್ರತು, ಮಹಾಯಾಗ (ಸತ್ಯಪಾಲನೆ ಎಂಬುದೇ ಅವರು 13 ವರ್ಷಗಳ ಕಾಲ ಮಾಡಿದ ಮಹಾಯಾಗ.), ವಿರಾಟ ಪರ್ವ,10,6
326. ಮಹಾತ್ಮ, ಘನವಂತ/ಶ್ರೇಷ್ಠ, ಉದ್ಯೋಗ ಪರ್ವ,4,55
327. ಮಹಾಮಹೀಶ್ವರರು, ಮಹಾರಾಜರುಗಳು, ವಿರಾಟ ಪರ್ವ,10,46
328. ಮಹಾಯತದ, ವಿಸ್ತಾರದ, ದ್ರೋಣ ಪರ್ವ,1,20
329. ಮಹಾಘ್ರ್ಯ, ಹೆಚ್ಚುಬೆಲೆಬಾಳುವ, ಗದಾ ಪರ್ವ,4,16
330. ಮಹಾರ್ಣವ, ಮಹಾಸಮುದ್ರ, ದ್ರೋಣ ಪರ್ವ,1,17
331. ಮಹಾವಾತ, ಬಿರುಗಾಳಿ, ಆದಿ ಪರ್ವ,6,9
332. ಮಹಾಸತಿ, ಸಾಧ್ವಿ, ಆದಿ ಪರ್ವ,16,35
333. ಮಹಿ, ಭೂಮಿ, ಗದಾ ಪರ್ವ,8,2
334. ಮಹಿ, ರಾಜ್ಯ, ವಿರಾಟ ಪರ್ವ,5,16
335. ಮಹಿಮಾ, ದೊಡ್ಡರೂಪ, ಉದ್ಯೋಗ ಪರ್ವ,4,9
336. ಮಹಿಷದ್ವಯ, ಎರಡು ಕೋಣಗಳು, ಆದಿ ಪರ್ವ,10,11
337. ಮಹೀಜನ, ಭೂಮಿಯಮೇಲಿನ ಜನ, ಗದಾ ಪರ್ವ,13,8
338. ಮಹೀತಳ, ನೆಲ, ಆದಿ ಪರ್ವ,15,20
339. ಮಹೀತಳಾಧಿಪ, ರಾಜ (ಧರ್ಮರಾಯ), ವಿರಾಟ ಪರ್ವ,3,23
340. ಮಹೀಪಾಲ, ದೊರೆ, ಭೀಷ್ಮ ಪರ್ವ,3,15
341. ಮಹೀಪಾಲಕ, ದೊರೆ (ಧರ್ಮರಾಜ), ಭೀಷ್ಮ ಪರ್ವ,2,31
342. ಮಹೀಶರ, ದೊರೆಗಳ, ಉದ್ಯೋಗ ಪರ್ವ,8,19
343. ಮಹೇಂದ್ರವರ ದಿಗ್ ಬಾಲಕಿ, ಇಂದ್ರ ದಿಕ್ಕು ಅಂದರೆ ಪೂರ್ವದಿಕ್ಕು ಎಂಬ ಬಾಲಕಿ, ವಿರಾಟ ಪರ್ವ,10,2
344. ಮಹೋದಧಿ, ಮಹಾ ಸಮುದ್ರ, ಅರಣ್ಯ ಪರ್ವ,14,21
345. ಮಹೋರಗ, ದೊಡ್ಡ ಸರ್ಪ, ಗದಾ ಪರ್ವ,7,38
346. ಮಳವೆ, ಪಂಜಿಗಾಗಿ ಬಟ್ಟೆ ಸುತ್ತಿದ ಕೋಲು, ದ್ರೋಣ ಪರ್ವ,15,32
347. ಮಾಂಗಲಿಕ, ಮಂಗಳಕರವಾದ, ಅರಣ್ಯ ಪರ್ವ,15,15
348. ಮಾಂಗಲ್ಯ ಮಜ್ಜನ, ಮಂಗಳ ಸ್ನಾನ, ವಿರಾಟ ಪರ್ವ,10,4
349. ಮಾಂತ್ರಿಕ, ಮಾಟಗಾರ, ಆದಿ ಪರ್ವ,12,22
350. ಮಾಕಂದ, ಮಾವಿನಮರ, ಗದಾ ಪರ್ವ,3,17
351. ಮಾಕಂದ, ಮಾವು , ವಿರಾಟ ಪರ್ವ,2,30
352. ಮಾಗಧ, ಮಗಧ ದೇಶದ ರಾಜ, ಆದಿ ಪರ್ವ,14,17
353. ಮಾಗಧನೆ, ಜರಾಸಂಧನೆ, ಸಭಾ ಪರ್ವ,2,23
354. ಮಾಟ, ದುಷ್ಕಾರ್ಯ, ಆದಿ ಪರ್ವ,8,94
355. ಮಾಣ್, ನಿಲ್ಲಿಸು, ವಿರಾಟ ಪರ್ವ,9,35
356. ಮಾಣದು, ಬಿಡುವುದಿಲ್ಲ., ವಿರಾಟ ಪರ್ವ,3,31
357. ಮಾಣಲದು, ಅದು ಹೋಗಲಿ, ಸಭಾ ಪರ್ವ,3,65
358. ಮಾಣಲಿ, ನಿಲ್ಲಿಸಲಿ, ಆದಿ ಪರ್ವ,7,39
359. ಮಾಣಿ, ವಟು, ಸಭಾ ಪರ್ವ,1,90
360. ಮಾಣಿಕ, ಮಾಣಿಕ್ಯ(ಸಂ), ಗದಾ ಪರ್ವ,10,27
361. ಮಾಣಿಸು, ನಿಲ್ಲಿಸು, ವಿರಾಟ ಪರ್ವ,7,20
362. ಮಾಣಿಸು, ಕಡಿಮೆ ಮಾಡು, ಉದ್ಯೋಗ ಪರ್ವ,4,121
363. ಮಾಣು, ನಿಲ್ಲಿಸು, ವಿರಾಟ ಪರ್ವ,9,37
364. ಮಾತಿನಲಗ್ಗಿದನು, ಮಾತಿನಲ್ಲಿ ಮುಂದಾದವನು, ಆದಿ ಪರ್ವ,14,19
365. ಹೊಳ್ಳು ವಾತು, ಪೊಳ್ಳು ನುಡಿ, ವಿರಾಟ ಪರ್ವ,8,76
366. ಮಾತೃಕಾಕ್ಷರ, ಬೀಜಾಕ್ಷರ, ಅರಣ್ಯ ಪರ್ವ,6,59
367. ಮಾತೃಕೆ, ಮೂಲಸ್ಥಾನ, ವಿರಾಟ ಪರ್ವ,6,4
368. ಮಾದು, ನೀಗಿ, ದ್ರೋಣ ಪರ್ವ,13,18
369. ಮಾದು, ಬಿಟ್ಟು, ದ್ರೋಣ ಪರ್ವ,18,57
370. ಮಾದು, ಕಳೆ/ಬಿಡು, ಉದ್ಯೋಗ ಪರ್ವ,10,35
371. ಮಾದುದು, ನಿಂತಿತು, ಸಭಾ ಪರ್ವ,12,4
372. ಮಾದುದು, ನಿಂತಿತ್ತು, ದ್ರೋಣ ಪರ್ವ,1,18
373. ಮಾದ್ರೀಸುತರು, ನಕುಲ ಸಹದೇವರು, ಭೀಷ್ಮ ಪರ್ವ,5,2
374. ಮಾನ, ಘನತೆ, ಆದಿ ಪರ್ವ,17,2
375. ಮಾನನಿಧಿ, ಮಾನವನ್ನೆ ಐಶ್ವರ್ಯವಾಗುಳ್ಳವನು , ಗದಾ ಪರ್ವ,8,2
376. ಮಾನನಿಧಿ, ಮಾನಧನ, ಗದಾ ಪರ್ವ,10,9
377. ಮಾನಾರ್ಥ, ಮರ್ಯಾದೆ ಉಳಿಸುವ ಪ್ರಶ್ನೆ ಬಂದಾಗ, ವಿರಾಟ ಪರ್ವ,3,44
378. ಮಾನಿನಿ, ಮಹಿಳೆ, ಗದಾ ಪರ್ವ,12,17
379. ಮಾನಿನಿ, ಹೆಂಡತಿ, ಗದಾ ಪರ್ವ,10,15
380. ಮಾನಿನಿ, ಹೆಂಗಸು, ಗದಾ ಪರ್ವ,4,12, ,
381. ಮಾನಿನಿಯರು, ಮಹಿಳೆಯರು, ಗದಾ ಪರ್ವ,12,12
382. ಮಾನಿಸರು, ಮನುಷ್ಯರು, ಆದಿ ಪರ್ವ,10,12
383. ಮಾನುಷೆ, ಹೆಂಗಸು, ಅರಣ್ಯ ಪರ್ವ,18,16
384. ಮಾನ್ಯ, ಪೂಜ್ಯ, ಆದಿ ಪರ್ವ,7,40
385. ಮಾನ್ಯ, ಗೌರವಸ್ಥ, ಆದಿ ಪರ್ವ,14,22
386. ಮಾನ್ಯವೃತ್ತಿ, ಗೌರವಭಾವ, ವಿರಾಟ ಪರ್ವ,2,14
387. ಮಾಮಾ, ಭಾರಿ ಭಾರಿ (ಮಹಾಮಹಾ), ಭೀಷ್ಮ ಪರ್ವ,9,37
388. ಮಾಯಗಾತಿ, ಮೋಸಗಾತಿ, ಆದಿ ಪರ್ವ,9,11
389. ಮಾಯದ ಮನುಜರು, ಮರುಳುಮಾಡುವ ಮನುಷ್ಯರು, ಗದಾ ಪರ್ವ,4,58
390. ಮಾಯರು, ಮಾಯೆಯ ಪ್ರಭಾವಕ್ಕೆ ಒಳಗಾದವರು, ಗದಾ ಪರ್ವ,5,8
391. ಮಾಯಾತಿಮಿರ, ಮಾಯೆಯೆಂಬ ಕತ್ತಲೆ., ಗದಾ ಪರ್ವ,5,10
392. ಮಾಯಾಪಾಶಬದ್ಧರು, ಮಾಯೆಯೆಂಬ ಪಾಶದಲ್ಲಿ ಬಂಧಿತರಾದವರು. ಪ್ರಪಂಚವನ್ನು ನಿಜವೆಂದೇ ತಿಳಿದು ನಡೆದುಕೊಳ್ಳವವರು., ಗದಾ ಪರ್ವ,8,52
393. ಮಾಯಾರಚನೆ, ಮಾಯೆಯಿಂದ ಸೃಷ್ಟಿಯಾದುದು, ಗದಾ ಪರ್ವ,12,2
394. ಮಾಯಾವಿ, ಬೇರೆಬೇರೆ ರೂಪಗಳನ್ನು ತಾಳುವವನು, ಗದಾ ಪರ್ವ,8,52
395. ಮಾಯಾವಿ, ಇಂದ್ರಜಾಲ ಮಾಡುವವನು, ಸಭಾ ಪರ್ವ,1,30
396. ಮಾಯಾಸಿದ್ಧ, ಇಂದ್ರಜಾಲದಲ್ಲಿ ನಿಪುಣ, ಆದಿ ಪರ್ವ,15,23
397. ಮಾಯೆ, ಭ್ರಮೆ, ಆದಿ ಪರ್ವ,13,2
398. ಮಾರಂಕ, ಪ್ರತಿಸ್ಪರ್ಧೆ, ಆದಿ ಪರ್ವ,7,19
399. ಮಾರಂಕ, ಪ್ರತಿಯುದ್ಧ, ಆದಿ ಪರ್ವ,13,22
400. ಮಾರಣಾಧ್ವರ, ಶತ್ರುನಾಶಕ್ಕೆ ಮಾಡುವ ಘೋರ ಯಾಗ, ಭೀಷ್ಮ ಪರ್ವ,4,19
401. ಮಾರಣಾಧ್ವರ, ಮರಣವನ್ನು ತರುವ ಯಾಗ, ಗದಾ ಪರ್ವ,9,24
402. ಮಾರಾಂಕ, ರಣಾಂಗಣ, ಸಭಾ ಪರ್ವ,3,9
403. ಮಾರಾಂತ, ಪ್ರತಿಭಟಿಸಿ ನಿಂತ (ಮಾರಾನು, ವಿರಾಟ ಪರ್ವ,8,39
404. ಮಾರಾಂತ, ಮೇಲೆ ಬಿದ್ದನು, ಭೀಷ್ಮ ಪರ್ವ,8,30
405. ಮಾರಾಂತು, ಪ್ರತಿಭಟಿಸಿ, ಆದಿ ಪರ್ವ,8,13
406. ಮಾರಾತ, ಪ್ರತಿಭಟಿಸಿದ, ಆದಿ ಪರ್ವ,16,2
407. ಮಾರಾನು, ಎದುರು ನಿಲ್ಲು, ವಿರಾಟ ಪರ್ವ,8,66
408. ಮಾರಿ, ಮೃತ್ಯುದೇವತೆ, ಉದ್ಯೋಗ ಪರ್ವ,11,10
409. ಮಾರಿಯ, ರಣಮಾರಿಯ, ಭೀಷ್ಮ ಪರ್ವ,6,12
410. ಮಾರುತ, ಪ್ರಾಣವಾಯು, ದ್ರೋಣ ಪರ್ವ,18,68
411. ಮಾರುತಿ, ಭೀಮ (ಮರುತ, ವಿರಾಟ ಪರ್ವ,3,100
412. ಮಾರುತಿ, ಭೀಮ (ವಾಯು ಪುತ್ರರಾದ ಹನುಮಂತನಿಗೂ, ಆದಿ ಪರ್ವ,10,29
413. ಮಾರುತಿ, ಭೀಮಸೇನ, ಭೀಷ್ಮ ಪರ್ವ,3,1
414. ಮಾರುದ್ದಿ, ಬಲವಾಗಿ ತಿಕ್ಕಿ / ಹೊಡೆದು, ಕರ್ಣ ಪರ್ವ,19,41
415. ಮಾರುದ್ದು, ಉಜ್ಜುವುದು, ಗದಾ ಪರ್ವ,7,11
416. ಮಾರೊಡ್ಡು, ಪ್ರತಿವ್ಯೂಹ, ಕರ್ಣ ಪರ್ವ,2,14
417. ಮಾರೊಲೆದುದು, ಹೊಯ್ದಾಡಿದವು, ಭೀಷ್ಮ ಪರ್ವ,6,30
418. ಮಾರ್ಕೋ¯, ಪ್ರತಿಯಾಗಿ ಬಿಡುವ ಬಾಣ, ಆದಿ ಪರ್ವ,7,34
419. ಮಾರ್ಗಣ, ಬಾಣ., ಉದ್ಯೋಗ ಪರ್ವ,6,23
420. ಮಾರ್ಗಣ, ಯಾಚಕ, ಸಭಾ ಪರ್ವ,1,18
421. ಮಾರ್ಗಣೆ, ಎದುರು ಬಾಣ, ಶಲ್ಯ ಪರ್ವ,3,37
422. ಮಾರ್ತಿರುಪು, ಬಿಲ್ಲಿನ ಹಗ್ಗದ ಇನ್ನೊಂದು ಭಾಗ, ಕರ್ಣ ಪರ್ವ,21,11
423. ಮಾರ್ಬಲ, ಶತ್ರು ಸೈನ್ಯ., ಅರಣ್ಯ ಪರ್ವ,2,24
424. ಮಾವುತ, ಆನೆಸವಾರ, ಶಲ್ಯ ಪರ್ವ,2,15
425. ಮಾಸಾಳು, ಸಾಹಸಿ, ವಿರಾಟ ಪರ್ವ,2,8
426. ಮಾಹಿಷಿಕ, ಹೆಂಡತಿಯ ವ್ಯಭಿಚಾರದಿಂದ ಹಣಗಳಿಸುವವನು, ಉದ್ಯೋಗ ಪರ್ವ,4,48
427. ಮಾಳವದ, ಮಾಳವ ದೇಶದ, ಭೀಷ್ಮ ಪರ್ವ,4,64
428. ಮಾಳಿಗೆಗೆ, ಉಪ್ಪರಿಗೆಗೆ, ಭೀಷ್ಮ ಪರ್ವ,3,84
429. ಮಿಂಚು, ಪ್ರಕಾಶಿಸು, ಆದಿ ಪರ್ವ,19,20
430. ಮಿಂಚು ಬುಳು, ಮಿಂಚುಹುಳು, ದ್ರೋಣ ಪರ್ವ,1,29
431. ಮಿಂಚುಬುಳು, ಮಿಂಚುಹುಳ, ದ್ರೋಣ ಪರ್ವ,5,56
432. ಮಿಂಚುಬುಳು, ಮಿಣಕುಹುಳು, ಭೀಷ್ಮ ಪರ್ವ,3,70
433. ಮಿಂಟೆ, ಗುಂಡುÉ, ವಿರಾಟ ಪರ್ವ,8,35
434. ಮಿಗೆ, ಅಧಿಕವಾಗಲು , ಆದಿ ಪರ್ವ,4,0
435. ಮಿಡಿ, ಮೀಟು, ಗದಾ ಪರ್ವ,7,40
436. ಮಿಡಿದು, ಎಳೆದು, ದ್ರೋಣ ಪರ್ವ,1,66
437. ಮಿಡಿವ, ಚಿಮ್ಮುವ, ಭೀಷ್ಮ ಪರ್ವ,5,21
438. ಮಿಡುಕಲು, ನಡುಗಲು, ದ್ರೋಣ ಪರ್ವ,6,16
439. ಮಿಡುಕಲು, ಮುಂದುವರಿಯಲು, ದ್ರೋಣ ಪರ್ವ,6,17
440. ಮಿಡುಕಲು, ಚಲಿಸಲು, ಸಭಾ ಪರ್ವ,12,35
441. ಮಿಡುಕು, ಪ್ರತಿಕ್ರಿಯಿಸು, ಗದಾ ಪರ್ವ,7,37
442. ಮಿಡುಕು, ಎದುರು ಬೀಳು, ವಿರಾಟ ಪರ್ವ,4,47
443. ಮಿಡುಕು, ಧೈರ್ಯ, ಗದಾ ಪರ್ವ,5,43
444. ಮಿಣ್ಣನೆ, ಶಬ್ದವಿಲ್ಲದೆ, ಗದಾ ಪರ್ವ,9,27
445. ಮಿಣ್ಣನೆ, ತೆಪ್ಪಗೆ , ವಿರಾಟ ಪರ್ವ,3,102
446. ಮಿತ್ತು, ಮೃತ್ಯುದೇವತೆ, ಭೀಷ್ಮ ಪರ್ವ,9,47
447. ಮಿತ್ತುವಹರೇ, ಮಿತ್ತು+ಅಹರೇ, ವಿರಾಟ ಪರ್ವ,6,25
448. ಮಿಥ್ಯ, ಸುಳ್ಳು, ದ್ರೋಣ ಪರ್ವ,3,67
449. ಮಿಥ್ಯೋತ್ತರ, ಸುಳ್ಳು ಉತ್ತರ, ಉದ್ಯೋಗ ಪರ್ವ,4,91
450. ಮಿರುಗು, ಹೊಳೆ, ಗದಾ ಪರ್ವ,7,3
451. ಮಿರುಮಿರುಪ, ಹೊಳೆ ಹೊಳೆಯುವ, ಆದಿ ಪರ್ವ,16,61
452. ಮಿಸುಕು, ಪ್ರತಿಭಟಿಸು, ವಿರಾಟ ಪರ್ವ,3,68
453. ಮಿಸುನಿ, ಬಂಗಾರ, ಆದಿ ಪರ್ವ,15,8
454. ಮಿಸುಪ, ಹೊಳೆವ, ಭೀಷ್ಮ ಪರ್ವ,3,76
455. ಮಿಸುಪಮೊಳೆ, ಹೊಳೆವಹಲ್ಲು, ಭೀಷ್ಮ ಪರ್ವ,6,32
456. ಮಿಸುವ, ಪ್ರಕಾಶಿಸುವ, ಆದಿ ಪರ್ವ,13,16
457. ಮಿಹಿರಬಿಂಬ, ಸೂರ್ಯಬಿಂಬ, ಸಭಾ ಪರ್ವ,14,72
458. ಮಿಹಿರಸುತ, ಸೂರ್ಯನಮಗ ಕರ್ಣ, ಶಲ್ಯ ಪರ್ವ,1,6
459. ಮಿಹಿರಸುತ, ಕರ್ಣ, ದ್ರೋಣ ಪರ್ವ,5,51
460. ಮಿಳಿ, ಮಿಣಿ ಹಗ್ಗ., ಕರ್ಣ ಪರ್ವ,7,6
461. ಮಿಳಿ, ಚರ್ಮದ ಹಗ್ಗ, ದ್ರೋಣ ಪರ್ವ,3,2
462. ಮೀಟಾದ, ಶ್ರೇಷ್ಠ, ಸಭಾ ಪರ್ವ,3,32
463. ಮೀಟಾದರಿಗೆ ಕಟ್ಟಿದ ತೊಡರು, ಸವಾಲಾಗಿ ಸಾಹಸ ತೋರಿದವರೆಗೆ ಬುದ್ಧಿ ಕಲಿಸಲು ಧರಿಸಿದ ಬಿರುದಿನ ಬಳೆ, ಭೀಷ್ಮ ಪರ್ವ,1,41
464. ಮೀಟು, ಉನ್ನತಿ , ವಿರಾಟ ಪರ್ವ,2,13
465. ಮೀನ್ಬುಗ, ಮೀನನ್ನು ಹಿಡಿದು ತಿನ್ನುವ ಕೊಕ್ಕರೆ ಮೊದಲಾದ ಹಕ್ಕಿಗಳು, ಆದಿ ಪರ್ವ,20,53
466. ಮೀರಿ, ದಾಟಿ, ಗದಾ ಪರ್ವ,11,8
467. ಮುಂಕುಡಿ, ಮುಂಭಾಗ, ಗದಾ ಪರ್ವ,1,37, ,
468. ಮುಂಕುಡಿ, ಮುಂಭಾಗದ ಸೇನೆ, ಭೀಷ್ಮ ಪರ್ವ,2,10
469. ಮುಂಕುಡಿಯ, ಮುಂಭಾಗದ, ಸಭಾ ಪರ್ವ,10,64
470. ಮುಂಕೊಂಡು, ಶೀಘ್ರವಾಗಿ, ಭೀಷ್ಮ ಪರ್ವ,9,49
471. ಮುಂಕೊಂಡು, ಮುನ್ನುಗ್ಗಿ, ಭೀಷ್ಮ ಪರ್ವ,4,10
472. ಮುಂಕೊಂಡು, ಮುಂದಾಗಿ, ಆದಿ ಪರ್ವ,7,67
473. ಮುಂಕೊಂಡು, ಮೊದಲಿಗೆ, ವಿರಾಟ ಪರ್ವ,7,25
474. ಮುಂಕೊಂಡು, ಉತ್ಸಾಹಿಸಿ., ಶಲ್ಯ ಪರ್ವ,2,0
475. ಮುಂಕೊಂಡು, ಎದುರಿಸಿ, ವಿರಾಟ ಪರ್ವ,4,0
476. ಮುಂಕೊಳಿಸಿ, ಸಿದ್ಧಗೊಳಿಸಿ, ದ್ರೋಣ ಪರ್ವ,4,22
477. ಮುಂಕೊಳಿಸಿಕೊಳ್ಳದೆ, ಮುಂದಕ್ಕೆ ಬರಮಾಡಿಕೊಂಡು ಯುದ್ಧ ಮಾಡದೆ, ಭೀಷ್ಮ ಪರ್ವ,5,6
478. ಮುಂಕೊಳಿಸು, ಮುಂದುವರಿ, ಶಲ್ಯ ಪರ್ವ,2,41
479. ಮುಂಕೊಳಿಸು, ಎದುರಾಗು, ಕರ್ಣ ಪರ್ವ,11,27
480. ಮುಂಗಲಿತನ, ಮುಂ+ಕಲಿತನ, ಗದಾ ಪರ್ವ,1,27
481. ಮುಂಗಾಳೆಗ, ಯುದ್ಧದ ಆರಂಭದಲ್ಲಿ ತಾ ಮುಂದು ನಾ ಮುಂದು ಎನ್ನುತ್ತ ನುಗ್ಗುವುದು, ಭೀಷ್ಮ ಪರ್ವ,6,1
482. ಮುಂಗುಡಿ, ಸೈನ್ಯದ ಮುಂಭಾಗ, ಆದಿ ಪರ್ವ,20,38
483. ಮುಂಗುಡಿ, ಮುಂಬರಿ, ಉದ್ಯೋಗ ಪರ್ವ,11,49
484. ಮುಂಗುಡಿ, ಮುಂಚೂಣಿ ಸೇನೆ, ಭೀಷ್ಮ ಪರ್ವ,4,76
485. ಮುಂಗುಡಿಯ, ಮುಂದೆ ಇದ್ದ, ಅರಣ್ಯ ಪರ್ವ,1,24
486. ಮುಂಗೆಡೆ, ಮುಮ್ಮುಖವಾಗಿ ಬೀಳು , ಗದಾ ಪರ್ವ,2,20
487. ಮುಂಚಿತು, ಮಿಗಿಲೆನಿಸಿತು., ಭೀಷ್ಮ ಪರ್ವ,8,6
488. ಮುಂಚು, ಮೀರಿ ಹೋಗು, ಕರ್ಣ ಪರ್ವ,3,19
489. ಮುಂಚು, ಮುಂದು, ಅರಣ್ಯ ಪರ್ವ,20,12
490. ಮುಂಚು, ಮುಂದಾಗು, ಸಭಾ ಪರ್ವ,1,3
491. ಮುಂಜೆರಗು, ಸೆರಗಿನ ಮುಂಭಾಗ, ಗದಾ ಪರ್ವ,5,41
492. ಮುಂಜೆರಗು, ಬಟ್ಟೆಯ ಮುಂದಿನ ತುದಿ, ಅರಣ್ಯ ಪರ್ವ,23,17
493. ಮುಂಜೆರಗು, ಮುಂ+ಸೆರಗು, ವಿರಾಟ ಪರ್ವ,6,12
494. ಮುಂಜೆರಗು, ಧೋತ್ರದ ಮುಂಭಾಗದ ತುದಿ, ಗದಾ ಪರ್ವ,3,41
495. ಮುಂಡ, ತಲೆಯಿಲ್ಲದ ದೇಹ, ಗದಾ ಪರ್ವ,3,9
496. ಮುಂಡಾಡಿದರು, ಮುದ್ದಾಡಿದರು, ಗದಾ ಪರ್ವ,12,6
497. ಮುಂಡಾಡು, ಮುದ್ದುಮಾಡು, ವಿರಾಟ ಪರ್ವ,3,67
498. ಮುಂಡಾಡು, ಮುದ್ದಾಡು, ಸಭಾ ಪರ್ವ,5,22
499. ಮುಂಡಾಸನ, ಕಪ್ಪೆಯಂತೆ ಕುಳಿತು ಕೊಳ್ಳುವ ಭಂಗಿ, ದ್ರೋಣ ಪರ್ವ,3,52
500. ಮುಂಡಾಸನ, ತಲೆಬಗ್ಗಿಸಿ, ಗದಾ ಪರ್ವ,1,15
501. ಮುಂದರಿಯದೆ, ಮುಂದಾಗುವುದನ್ನು ತಿಳಿಯದೆ ವರ, ಆದಿ ಪರ್ವ,16,42
502. ಮುಂದರೆನೆಲೆ, ?, ಸಭಾ ಪರ್ವ,3,50
503. ಮುಂದುಗಾಣದೆ, ಮುಂದಿನ ಪರಿಣಾಮವನ್ನು ಗಮನಿಸದೆ., ಗದಾ ಪರ್ವ,7,27
504. ಮುಂದುಗೆಡು, ಏನು ತೋಚದಂತಾಗುವಿಕೆ, ವಿರಾಟ ಪರ್ವ,8,58
505. ಮುಂಬನಿ, ನೆಲದ ಮೇಲೆ ಬೀಳುವ ಮೊದಲ ಮಳೆಯ ಹನಿ, ಆದಿ ಪರ್ವ,19,21
506. ಮುಂಬಾರೆಕಾರ, ಮುಂದಿನ ಸರದಿಯವರು, ಭೀಷ್ಮ ಪರ್ವ,4,80
507. ಮುಂಬಿಗ, ಮುಂದಿರುವವನು, ಅರಣ್ಯ ಪರ್ವ,1,6
508. ಮುಂಬಿಗರು, ಮುಂದಾಳುಗಳು, ಕರ್ಣ ಪರ್ವ,2,8
509. ಮುಂಮಾರಿ, ಮುನ್ನುಗ್ಗುವ ಧೀರರು, ಭೀಷ್ಮ ಪರ್ವ,8,29
510. ಮುಕುಟ, ಶಿರಸ್ಸು , ಗದಾ ಪರ್ವ,10,27
511. ಮುಕುಟ, ಕಿರೀಟ., ಶಲ್ಯ ಪರ್ವ,1,24
512. ಮುಕುತಿ, ಮೋಕ್ಷ, ಭೀಷ್ಮ ಪರ್ವ,6,44
513. ಮುಕುಳಕರನಾಗಿ, (ಮೊಗ್ಗಿನಾಕಾರದಲ್ಲಿ) ಕೈ ಮುಗಿದುಕೊಂಡು, ಭೀಷ್ಮ ಪರ್ವ,2,7
514. ಮುಕ್ಕರಿಸು, ಆವರಿಸು , ಗದಾ ಪರ್ವ,1,30
515. ಮುಕ್ಕರುಕು, ಮುತ್ತಿಕೊಳ್ಳು, ಗದಾ ಪರ್ವ,12,17
516. ಮುಕ್ಕಳಿಸು, ಕುಡಿದು ಉಗಿ, ಕರ್ಣ ಪರ್ವ,22,15
517. ಮುಕ್ಕುರಿಕಿ, ಆವರಿಸಿ, ಅರಣ್ಯ ಪರ್ವ,18,34
518. ಮುಕ್ಕುರಿಕಿದ, ಮುತ್ತಿಕೊಂಡ, ದ್ರೋಣ ಪರ್ವ,2,44
519. ಮುಕ್ಕುರಿಕು, ಮುತ್ತಿಗೆ ಹಾಕು, ಕರ್ಣ ಪರ್ವ,26,8
520. ಮುಕ್ಕುರಿಕು, ತಿಣುಕು, ಕರ್ಣ ಪರ್ವ,11,4
521. ಮುಕ್ಕುರಿಕೆ, ಬಲವಾಗಿ ನಾಟಿಕೊಳ್ಳಲು, ಭೀಷ್ಮ ಪರ್ವ,9,38
522. ಮುಕ್ಕುರಿಕೆ, ಮುತ್ತುವುದು, ಕರ್ಣ ಪರ್ವ,15,25
523. ಮುಕ್ಕುರಿಕೆ, ಮೇಲೆ ಬಿದ್ದು ಆರ್ಭಟ, ಭೀಷ್ಮ ಪರ್ವ,4,70
524. ಮುಕ್ಕುರುಕಿ, ಮುತ್ತಿಕೊಂಡು, ದ್ರೋಣ ಫರ್ವ,3,31
525. ಮುಕ್ಕುರುಕು, ಶಕ್ತಿಯನ್ನೆಲ್ಲಾ ಬಳಸು , ಗದಾ ಪರ್ವ,7,3
526. ಮುಕ್ಕುಳಿ, ಬಾಯಿ, ಕರ್ಣ ಪರ್ವ,18,1
527. ಮುಕ್ಕುಳಿಸಿ, ನುಂಗಿ ಹೊರಹಾಕು, ಭೀಷ್ಮ ಪರ್ವ,4,78
528. ಮುಕ್ಕುಳಿಸು, ತುಂಬಿಕೊಳ್ಳು, ಆದಿ ಪರ್ವ,19,37
529. ಮುಕ್ತ ಕೇಶಿ, ಕೆದರಿದ ತಲೆ ಕೂದಲಿನವರು, ಭೀಷ್ಮ ಪರ್ವ,5,32
530. ಮುಕ್ತಾ ಪ್ರಭೆ, ಮುತ್ತಿನ ಕಾಂತಿ, ವಿರಾಟ ಪರ್ವ,10,9
531. ಮುಕ್ತಾಫಲ, ಮುತ್ತುಗಳು, ಆದಿ ಪರ್ವ,13,17
532. ಮುಕ್ತಾವಳಿ, ಮುತ್ತುಗಳು, ವಿರಾಟ ಪರ್ವ,6,56
533. ಮುಖ, ಮೂಲಕ, ಆದಿ ಪರ್ವ,7,0
534. ಮುಖ, ಯುಕ್ತಿ, ಆದಿ ಪರ್ವ,13,64
535. ಮುಖ ಪಂಕರುಹವನ, ವೀರರ ಮುಖ ಕಮಲಗಳವನ, ಭೀಷ್ಮ ಪರ್ವ,5,22
536. ಮುಖಗೊಡು, ಗೋಚರಿಸು., ಕರ್ಣ ಪರ್ವ,6,17
537. ಮುಖರ, ಅತಿಯಾಗಿ ಮಾತನಾಡುವವ, ಆದಿ ಪರ್ವ,20,17
538. ಮುಗುದ, ಮುಗ್ಧ, ವಿರಾಟ ಪರ್ವ,2,9
539. ಮುಗುಳಂಬು, ಒಂದು ಬಗೆಯ ಚಿಕ್ಕ ಬಾಣ, ಕರ್ಣ ಪರ್ವ,18,22
540. ಮುಗುಳುನಗೆ, ಮಂದಹಾಸ, ಆದಿ ಪರ್ವ,15,24
541. ಹೊಡೆಗೆಡೆ, ಹೊಡೆದು ಕೆಳಕ್ಕೆ ಬೀಳಿಸು, ಶಲ್ಯ ಪರ್ವ,2,10
542. ಮುಗ್ಗಿದವು, ಮೈಯನ್ನು ಬಗ್ಗಿಸಿದವು, ಭೀಷ್ಮ ಪರ್ವ,9,38
543. ಮುಗ್ಗು, ಮುಂದಕ್ಕೆ ಬೀಳು, ಶಲ್ಯ ಪರ್ವ,2,10
544. ಮುಗ್ಗು, ಮುಗ್ಗರಿಸು, ಸಭಾ ಪರ್ವ,13,2
545. ಮುಗ್ಗು, ಮುಗ್ಗರಿಸು, ಕರ್ಣ ಪರ್ವ,2,4
546. ಮುಗ್ಗು, ಮುಗಿ ಬೀಳು., ಆದಿ ಪರ್ವ,20,61
547. ಮುಗ್ಗು, ಮುದುಡು, ಗದಾ ಪರ್ವ,6,28
548. ಮುಗ್ಗು, ಕುಸಿ, ವಿರಾಟ ಪರ್ವ,5,1
549. ಮುಗ್ಗು, ಕೆಡು , ಅರಣ್ಯ ಪರ್ವ,4,22
550. ಮುಚ್ಚಿದನು, ಮರೆಮಾಡಿದನು, ಭೀಷ್ಮ ಪರ್ವ,6,46
551. ಮುಟ್ಟದೇ, ತಟ್ಟದಿರಬಹುದೇ, ಭೀಷ್ಮ ಪರ್ವ,3,26
552. ಮುಟ್ಟಿಗೆ, ಸಣ್ಣ ಉಳಿ, ಕರ್ಣ ಪರ್ವ,24,46
553. ಮುಟ್ಟು, ಹೊಡೆ., ಗದಾ ಪರ್ವ,7,15
554. ಮುಡಿ, ಹೆಳಲು, ಉದ್ಯೋಗ ಪರ್ವ,4,81
555. ಮುಡಿಗೆ, ದಿಮ್ಮಿ, ದ್ರೋಣ ಪರ್ವ,3,3
556. ಮುಡಿಯರಳು, ಬಿಚ್ಚಿದ ಕೂದಲು ಹಾಹಾರವ, ದ್ರೋಣ ಪರ್ವ,7,12
557. ಮುಡುಹು, ಕಾಲಹಿಮ್ಮಡಿ, ಅರಣ್ಯ ಪರ್ವ,10,9
558. ಮುತ್ತಯ, ಮುತ್ತಜ್ಜ, ಭೀಷ್ಮ ಪರ್ವ,9,47
559. ಮುತ್ತಯ, ತಾತ, ದ್ರೋಣ ಪರ್ವ,1,11
560. ಮುತ್ತಿತು, ಆವರಿಸಿತು., ಆದಿ ಪರ್ವ,11,33
561. ಮುತ್ತಿದರು, ಸುತ್ತುವರಿದರು., ಗದಾ ಪರ್ವ,4,0
562. ಮುದಮಿಗು, ಸಂತೋಷ ಹೆಚ್ಚಾಗು, ವಿರಾಟ ಪರ್ವ,9,32
563. ಮುದ್ಗರ, ಒನಕೆಯ ರೀತಿಯ ಮರದ ಆಯುಧ, ದ್ರೋಣ ಪರ್ವ,12,31
564. ಮುದ್ರಿಸು, ಮುಚ್ಚಿಹಾಕು, ದ್ರೋಣ ಪರ್ವ,5,31
565. ಮುನಿ, ಆ ಚಂಡ ಕೌಶಿಕ ಮುನಿಯು, ಸಭಾ ಪರ್ವ,2,41
566. ಮುನಿದು, ಕೋಪಿಸಿಕೊಂಡು, ದ್ರೋಣ ಪರ್ವ,1,29
567. ಮುನಿಭಾಷಿತ, ಮುನಿಯ ಮಾತು, ಗದಾ ಪರ್ವ,11,13
568. ಮುನಿಯೆನು, ಕೋಪಗೊಳ್ಳೆನು, ಭೀಷ್ಮ ಪರ್ವ,7,25
569. ಮುನ್ನ, ಮೊದಲು, ದ್ರೋಣ ಪರ್ವ,5,65
570. ಮುನ್ನ, ಈ ಹಿಂದೆ, ವಿರಾಟ ಪರ್ವ,3,84
571. ಮುನ್ನೋಟವಿಕ್ಕಿತು, ಮೊದಲೇ ಓಟಕಿತ್ತರು, ಭೀಷ್ಮ ಪರ್ವ,9,27
572. ಮುಪ್ಪಿನ ಮುಗುದ, ಅರುಳು ಮರಳಾದವನು, ಭೀಷ್ಮ ಪರ್ವ,1,35
573. ಮುಮ್ಮಳಿಯೋದುದು, ರೂಪಳಿದ ಸಾವಿಗೀಡಾಯಿತು, ಗದಾ ಪರ್ವ,9,42
574. ಮುಮ್ಮಾರು, ಪರಾಧೀನವಾಗು, ಅರಣ್ಯ ಪರ್ವ,17,2
575. ಮುಮ್ಮಾರು ಹೋಗು<ಮುಮ್ಮಾ¾ುವೊಗು, ಮೊದಲೇ ಮೆಚ್ಚಿಕೋ , ವಿರಾಟ ಪರ್ವ,2,34
576. ಮುಮ್ಮಾರುವೋಗು, ಪರಾಧೀನವಾಗು, ಕರ್ಣ ಪರ್ವ,6,22
577. ಮುಮ್ಮುಳಿಗೊಂಡು, ರೂಪಗೇಡಿಯಾಗಿ ನಾಶವಾಗು, ಕರ್ಣ ಪರ್ವ,10,18
578. ಮುಮ್ಮುಳಿತ, ಹೀನಾಯವಾದ ಸಾವು, ದ್ರೋಣ ಪರ್ವ,4,7
579. ಮುಮ್ಮುಳಿತ, ನಿರ್ಬಲ , ಗದಾ ಪರ್ವ,1,51
580. ಮುಮ್ಮುಳಿತ ವಾಯ್ತು, ರೂಪವಿಕಾರವಾದ ಸಾವುಂಟಾಯಿತು, ದ್ರೋಣ ಪರ್ವ,10,21
581. ಮುಮ್ಮೊನೆ, ಮೂರುತದಿಗಳ ಅಲಗಿನ, ಭೀಷ್ಮ ಪರ್ವ,4,94
582. ಮುಮ್ಮೊನೆಯ, ಚಾಚಿಕೊಂಡ ಚೂಪು ತುದಿಯ, ದ್ರೋಣ ಪರ್ವ,6,11
583. ಮುಯಿಮುಟ್ಟು, ತೆಗೆದುಕೊಂಡದ್ದಕ್ಕೆ, ಆದಿ ಪರ್ವ,10,18
584. ಮುಯ್ಯಾಂತು, ಉಡುಗೊರೆಗಳನ್ನು ನೀಡಿ ಮನ್ನಿಸಿ, ದ್ರೋಣ ಪರ್ವ,4,11
585. ಮುಯ್ಯಾನು, ಸದರದಿಂದಿರು , ವಿರಾಟ ಪರ್ವ,8,46
586. ಮುಯ್ಯಿ, ಓದಿಸುವ ಮೆಚ್ಚು ಕಾಣಿಕೆ, ವಿರಾಟ ಪರ್ವ,10,78
587. ಮುಯ್ವುನು ಆನುವುದು, ನೆರವು ನೀಡುವುದು (ಭುಜಗೊಡುವುದು), ಭೀಷ್ಮ ಪರ್ವ,1,23
588. ಮುರ, ನರಕಾಸುರನ ಪರಿವಾರದ ಒಬ್ಬ ರಾಕ್ಷಸ, ಆದಿ ಪರ್ವ,13,66
589. ಮುರಮಥನನು, ಕೃಷ್ಣನು, ಸಭಾ ಪರ್ವ,2,119
590. ಮುರವು, ಕುಸಿತ, ಆದಿ ಪರ್ವ,19,17
591. ಮುರವೈರಿ, ಕೃಷ್ಣ, ವಿರಾಟ ಪರ್ವ,10,31
592. ಮುರವೈರಿ, ಕೃಷ್ಣ., ಗದಾ ಪರ್ವ,12,3
593. ಮುರಾಂತಕ, ಮುರನನ್ನು ಕೊಂದವನು, ಸಭಾ ಪರ್ವ,5,35
594. ಮುರಾರಿ, ಕೃಷ್ಣ (ಮುರ ಎಂಬ ರಾಕ್ಷಸನ ಶತ್ರು), ಆದಿ ಪರ್ವ,17,5
595. ಮುರಿ, ಭಂಗಿಸು , ವಿರಾಟ ಪರ್ವ,5,22
596. ಮುರಿ, ಸಂಹರಿಸು, ಗದಾ ಪರ್ವ,8,18
597. ಮುರಿ, ಹಿಂದಕ್ಕೆ ತಿರುಗು, ಶಲ್ಯ ಪರ್ವ,2,53
598. ಮುರಿ, ಪಕ್ಕಕ್ಕೆ ಹೊರಳು, ದ್ರೋಣ ಪರ್ವ,2,34
599. ಮುರಿ, ಕೊಂದು, ಉದ್ಯೋಗ ಪರ್ವ,4,101
600. ಮುರಿ, ತುಂಡಾಗು, ಆದಿ ಪರ್ವ,20,41
601. ಮುರಿ, ತಿರಸ್ಕರಿಸು, ಗದಾ ಪರ್ವ,7,15
602. ಮುರಿ, ತಿರುಗು , ಶಲ್ಯ ಪರ್ವ,3,60
603. ಮುರಿ, ತಿರುಚು, ಅರಣ್ಯ ಪರ್ವ,6,30
604. ಮುರಿ ಮುರಿದು, ಮತ್ತೆ ಮತ್ತೆ ಬರುವ, ಆದಿ ಪರ್ವ,9,10
605. ಮುರಿಕೊಳಿಸಿ, ಮುನ್ನುಗ್ಗಿ, ಭೀಷ್ಮ ಪರ್ವ,4,68
606. ಮುರಿದ, ಬಾಗಿದ, ಶಲ್ಯ ಪರ್ವ,2,6
607. ಮುರಿದ, ಹಿಂದಿರುಗಿದ, ಗದಾ ಪರ್ವ,4,3
608. ಮುರಿದಂದದಲಿ, ಚುಚ್ಚಿಕೊಂಡ ಹಾಗೆ, ವಿರಾಟ ಪರ್ವ,9,6
609. ಮುರಿದನು, ಹಿಂದಿರುಗಿದನು, ಭೀಷ್ಮ ಪರ್ವ,6,46
610. ಮುರಿದನು, ನಾಶಗೊಳಿಸಿದನು., ದ್ರೋಣ ಪರ್ವ,14,0
611. ಮುರಿದರು, ಸೋಲಿಸಿದರು, ದ್ರೋಣ ಪರ್ವ,2,70
612. ಮುರಿದಿರಿ, ಕೊಂದಿರಿ , ಗದಾ ಪರ್ವ,12,11
613. ಮುರಿದುದು, ಹಿಂತಿರುಗಿತು., ಭೀಷ್ಮ ಪರ್ವ,9,24
614. ಮುರಿದುಬಹ, ಸೋತು ಹಿಮ್ಮೆಟ್ಟಿಬರುವ, ಭೀಷ್ಮ ಪರ್ವ,6,5
615. ಮುರಿದುವು, ತಿರುಗಿದುವು, ಗದಾ ಪರ್ವ,2,38
616. ಮುರಿದೆವು, ಕೊಂದು ಹಾಕಿದೆ, ಸಭಾ ಪರ್ವ,2,24
617. ಮುರಿದೋಡು, ಹಿಂದಕ್ಕೆ ಹೋಗು, ದ್ರೋಣ ಪರ್ವ,5,27
618. ಮುರಿಯೆ, ಸೋಲಿಸಲು, ಸಭಾ ಪರ್ವ,4,5
619. ಮುರಿಯೆಚ್ಚು, ಸೋಲುವ ಹಾಗೆ ಹೊಡೆದು, ದ್ರೋಣ ಪರ್ವ,1,60
620. ಮುರಿಯೆಸೆತ, ಚೂರು ಚೂರಾಗುವಂತೆ ಬಾಣ ಪ್ರಯೋಗ ಮಾಡುವುದು, ಭೀಷ್ಮ ಪರ್ವ,5,14
621. ಮುರಿವಡಿ, ಮುರಿದುಬೀಳು, ಗದಾ ಪರ್ವ,2,20
622. ಮುರಿವಡೆ, ಸೋಲಿಸಲು , ಶಲ್ಯ ಪರ್ವ,1,31
623. ಮುರಿವಡೆ, ವಿಮುಖನಾಗು, ಗದಾ ಪರ್ವ,1,62
624. ಮುರಿವಡೆ, ನಾಶವಾಗು, ದ್ರೋಣ ಪರ್ವ,10,12
625. ಮುರಿವು, ಬಾಗುಗಳು, ಭೀಷ್ಮ ಪರ್ವ,6,33
626. ಮುರಿವುಗಳ, ತುಣುಕುಗಳ, ಭೀಷ್ಮ ಪರ್ವ,6,32
627. ಮುರಿವುದೆ, ಓಡಿಸಬಹುದೆ, ದ್ರೋಣ ಪರ್ವ,1,29
628. ಮುರುಕ, ವಿಲಾಸ , ಗದಾ ಪರ್ವ,2,9
629. ಮುರುಕ, ಅಬ್ಬರ, ಸಭಾ ಪರ್ವ,8,46
630. ಮುರುಕ, ನಿರ್ದಯತೆ, ಸಭಾ ಪರ್ವ,14,94
631. ಮುರುಕಿಸು, ಮುಖ ವಿಕಾರಿಸು, ಗದಾ ಪರ್ವ,7,31
632. ಮುರುಕಿಸು, ಗರ್ವಿಸು, ಸಭಾ ಪರ್ವ,2,27
633. ಮುರುಚಿಕೊ, ಮುದುರಿಕೊ, ಕರ್ಣ ಪರ್ವ,18,2
634. ಮುರುಚು, ತಿರುಗಿಸು , ವಿರಾಟ ಪರ್ವ,3,14
635. ಮುರುಡಿಸು, ಮುರುಟಿಸು, ಆದಿ ಪರ್ವ,8,18
636. ಮುರುವು, ಹಿಂಜರಿತ, ಆದಿ ಪರ್ವ,8,81
637. ಮುರುಹಿದವು, ಬಾಗಿದುವು, ವಿರಾಟ ಪರ್ವ,10,54
638. ಮುರುಹು, ವಕ್ರತೆ, ಆದಿ ಪರ್ವ,8,70
639. ಮುವ್ವತ್ತಾರು ತತ್ವ, ಭೂತ ಪಂಚಕ, ಸಭಾ ಪರ್ವ,9,12, , , ಪಂಚ ತನ್ಮಾತ್ರ , ವಿಷಯ ಪಂಚಕ , ಅಂತಃಕರಣ ಚತುಷ್ಟಯ , ಪ್ರಕೃತಿ , ಅವ್ಯಕ್ತ.,
640. ಮುಷ್ಟಿಗೆ, ಸಣ್ಣ ಉಳಿಯಂತಹ ಒಂದು ಆಯುಧ, ಕರ್ಣ ಪರ್ವ,24,50
641. ಮುಸಲ, ಬಲರಾಮನ ಆಯುಧ, ಗದಾ ಪರ್ವ,8,25
642. ಮುಸಲ, ಒನಕೆ, ಕರ್ಣ ಪರ್ವ,18,23
643. ಮುಸಲ, ಗದೆÉ, ಗದಾ ಪರ್ವ,5,56
644. ಮುಸಲಧರ, ಗದಾಧರÀ , ಗದಾ ಪರ್ವ,5,57
645. ಮುಸಲಹತಿ, ಒನಕೆಯ ಪೆಟ್ಟು, ಸಭಾ ಪರ್ವ,12,55
646. ಮುಸುಂಡಿ, ಮೂರು ಮೊನೆಯ ಆಯುಧ, ದ್ರೋಣ ಪರ್ವ,12,9
647. ಮುಸುಕಿದ, ಅಪ್ಪಳಿಸಿದ, ವಿರಾಟ ಪರ್ವ,6,59
648. ಮುಸುಕಿದ, ಆವರಿಸಿದನು, ಭೀಷ್ಮ ಪರ್ವ,6,24
649. ಮುಸುಕು, ಕವಿ, ಆದಿ ಪರ್ವ,12,19
650. ಮುಸುಕು, ಕವಿದ ವಸ್ತ್ರ, ವಿರಾಟ ಪರ್ವ,6,7
651. ಮುಸುಡು, ಮೋರೆ, ವಿರಾಟ ಪರ್ವ,7,49
652. ಮುಹುಳಿ, ಮೂಳಿ, ಕರ್ಣ ಪರ್ವ,19,55
653. ಮುಹೂರ್ತ, ಲಗ್ನ, ಆದಿ ಪರ್ವ,17,29
654. ಮುಳಿ, ಸಿಟ್ಟಾಗು, ಉದ್ಯೋಗ ಪರ್ವ,9,48
655. ಮುಳಿ, ಕೋಪಗೊಳ್ಳು, ಆದಿ ಪರ್ವ,10,36
656. ಮುಳಿದು ಹೇಳಿಕೆಯಾದ, ಅಂದರೆ ಕೋಪದಿಂದ ಬಂದು ಎದುರಿಸಿ ಅಪಹಾಸ್ಯಕ್ಕೆ ಗುರಿಯಾದ, ವಿರಾಟ ಪರ್ವ,1,4
657. ಮುಳಿಯಿಸು, ಕಂಗೆಡಿಸು, ಭೀಷ್ಮ ಪರ್ವ,4,61
658. ಮುಳಿಸಿನಲಿ, ಕೋಪದಲ್ಲಿ, ಭೀಷ್ಮ ಪರ್ವ,6,21
659. ಮುಳುಗಿತು, ನಾಶವಾಯಿತು , ಗದಾ ಪರ್ವ,11,68
660. ಮುಳುಮುತ್ತ, ಪಲಾಶ, ಅರಣ್ಯ ಪರ್ವ,19,38
661. ಮುಳುವೇಲಿಗೆ, ಮುಳ್ಳಿನ ಬೇಲಿಗೆ, ದ್ರೋಣ ಪರ್ವ,8,44
662. ಮೂಕದನುಜ, 'ಮೂಕ'ನೆಂಬ ರಾಕ್ಷಸ, ಗದಾ ಪರ್ವ,6,34
663. ಮೂಗುಮಾರಿ, ಮಾನಗೇಡಿ, ಅರಣ್ಯ ಪರ್ವ,6,81
664. ಮೂಗುರ್ಚಿ, ಅಧೀನಕ್ಕೆ ಒಳಗಾದವನು. ಮೂಗುದಾರ ಹಾಕಿಸಿಕೊಂಡ ಪ್ರಾಣಿಯಂತೆ ಇರುವವನು., ವಿರಾಟ ಪರ್ವ,3,61
665. ಮೂಡಣರಸುಗಳು, ಪೂರ್ವದಿಕ್ಕಿನ ರಾಜರುಗಳು, ವಿರಾಟ ಪರ್ವ,1,3
666. ಮೂಡಲು, ಸೂರ್ಯಮೂಡುವ ದಿಕ್ಕು, ಗದಾ ಪರ್ವ,9,15
667. ಮೂಡಲು ಕೆಂಪೇರೆ, ಬೆಳಗಾಗಲು, ಭೀಷ್ಮ ಪರ್ವ,7,3
668. ಮೂಡು, ಕಾಣಿಸಿಕೊಳ್ಳು, ಆದಿ ಪರ್ವ,8,48
669. ಮೂಢ, ಮೂರ್ಖ, ಭೀಷ್ಮ ಪರ್ವ,3,41
670. ಮೂದಲಿಸಿ, ಹಂಗಿಸಿ, ಭೀಷ್ಮ ಪರ್ವ,4,29
671. ಮೂದಲಿಸು, ಹೀಯಾಳಿಸು, ಭೀಷ್ಮ ಪರ್ವ,5,5
672. ಮೂರುಶಕ್ತಿ, ಪ್ರಭುಶಕ್ತಿ, ಸಭಾ ಪರ್ವ,1,36,
673. ಮೂರ್ಛಿತೆ, ಪ್ರಜ್ಞೆಯನ್ನು ಕಳೆದುಕೊಂಡವಳು, ಗದಾ ಪರ್ವ,11,71
674. ಮೂರ್ತಿತ್ರಯ, ಹರಿ, ದ್ರೋಣ ಪರ್ವ,7,35
675. ಮೂರ್ಧಾಭಿಷೇಚನ, ನೆತ್ತಿಯ ಭಾಗದಿಂದ ಮಾಡುವ ಅಭಿಷೇಕ, ದ್ರೋಣ ಪರ್ವ,1,37
676. ಮೂರ್ಧಾಭಿಷೇಚನ, ಮಸ್ತಕಾಭಿಷೇಕ (ಪವಿತ್ರವಾದ ನದಿಗಳ ನೀರಿನಿಂದ ಶಿರಸ್ನಾನ ಮಾಡಿಸುವುದು) ಶೈಲ, ಆದಿ ಪರ್ವ,7,55
677. ಮೂಲ, ಬೇರು, ಆದಿ ಪರ್ವ,17,18
678. ಮೂಲೆಯವದಿರು, ಕೆಲಸಕ್ಕೆ ಬಾರದವರು, ಆದಿ ಪರ್ವ,20,37
679. ಮೂಹೊರಡ, ಮೂರು ಡೊಂಕುಗಳ, ಸಭಾ ಪರ್ವ,10,17
680. ಮೂಹೊರಡು, ಮೂರು ವಕ್ರತೆಗಳು, ಸಭಾ ಪರ್ವ,14,118
681. ಮೃಕಂಡುಸುತ, ಮಾರ್ಕಂಡೇಯ, ಗದಾ ಪರ್ವ,13,2
682. ಮೃಗ, ಪ್ರಾಣಿಗಳು, ಗದಾ ಪರ್ವ,12,4
683. ಮೃಗಗಣ, ಪ್ರಾಣಿಸಮೂಹ, ಗದಾ ಪರ್ವ,8,4
684. ಮೃಗತೃಷ್ಣಾ, ಬಿಸಿಲ್ಗುದುರೆಯನ್ನು ನೀರೆಂದು ಭ್ರಮಿಸಿ ಧಾವಿಸುವ ಜಿಂಕೆಯ ದಾಹ, ಸಭಾ ಪರ್ವ,14,95
685. ಮೃಗಪೋತ, ಜಿಂಕೆಯ ಮರಿ, ದ್ರೋಣ ಪರ್ವ,6,14
686. ಮೃಗಯಾವ್ಯಸನ, ಬೇಟೆಯ ಚಟ, ಸಭಾ ಪರ್ವ,12,89
687. ಮೃಗವೇಂಟೆಕಾರ, ಪ್ರಾಣಿಗಳನ್ನು ಬೇಟೆಯಾಡುವವನು , ಗದಾ ಪರ್ವ,4,42
688. ಮೃಗಾವನ, ಕತ್ತೆಕಿರುಬ, ಆದಿ ಪರ್ವ,20,51
689. ಮೃತ ಜಾತ, ಜನನ ಮರಣ ಇರುವವನು, ಭೀಷ್ಮ ಪರ್ವ,3,49
690. ಮೃಷ್ಟ ಭೋಜನ, ರುಚಿಕರವಾದ ಊಟ, ಆದಿ ಪರ್ವ,11,7
691. ಮೃಷ್ಟಾನ್ನ, ರಸಕವಳ, ವಿರಾಟ ಪರ್ವ,7,14
692. ಮೆಕ್ಕೆ, ವಿಷಫಲ ಬಿಡುವ ಒಂದು ಬಳ್ಳಿ, ಆದಿ ಪರ್ವ,8,76
693. ಮೆಚ್ಚಿಸು, ಸಂತೋಷಪಡಿಸು, ಆದಿ ಪರ್ವ,6,16
694. ಮೆಚ್ಚು, ಬಹುಮಾನ , ಗದಾ ಪರ್ವ,4,51
695. ಮೆಟ್ಟಕ್ಕಿ, ವಧೂವರರು ವಿವಾಹಕಾಲದಲ್ಲಿ ಮೆಟ್ಟುವ ಅಕ್ಕಿ, ಆದಿ ಪರ್ವ,16,65
696. ಮೆಟ್ಟು, ತುಳಿ , ಗದಾ ಪರ್ವ,8,14
697. ಮೆಟ್ಟುವ, ತುಳಿಯುವ, ಭೀಷ್ಮ ಪರ್ವ,5,21
698. ಮೆತ್ತಿಗೆ ವಸೆ, ಮೆತ್ತಿಕೊಂಡಿರುವ ಕೊಬ್ಬು, ಕರ್ಣ ಪರ್ವ,19,20
699. ಮೆದಕು, ?, ದ್ರೋಣ ಪರ್ವ,2,57
700. ಮೆಯ್ಮಾರಿ, ಮೈಮರೆತವನು, ಆದಿ ಪರ್ವ,20,37
701. ಮೆಯ್ಯಿಕ್ಕು, ದೀರ್ಘದಂಡ ನಮಸ್ಕಾರ ಮಾಡು, ಗದಾ ಪರ್ವ,11,53
702. ಮೆಯ್ಯಿಕ್ಕು, ನಮಸ್ಕರಿಸು , ಗದಾ ಪರ್ವ,11,37
703. ಮೆರೆ, ಶೋಭಿಸಿ, ಆದಿ ಪರ್ವ,10,7
704. ಮೆರೆ, ಪ್ರದರ್ಶಿಸು, ಆದಿ ಪರ್ವ,14,2
705. ಮೆರೆ, ಕಾಣಿಸಿಕೊಳು, ಆದಿ ಪರ್ವ,8,62
706. ಮೆಲ್ನುಡಿ, ಮೃದುವಾದ ಮಾತು, ಆದಿ ಪರ್ವ,13,10
707. ಮೆಳೆ, ಪೊದರು, ಆದಿ ಪರ್ವ,20,27
708. ಮೆಳೆ, ಬಿದಿರಿನ ಗಿಡಗಳ ಗುಂಪು, ದ್ರೋಣ ಪರ್ವ,2,70
709. ಮೆಳೆ, ಮುಳ್ಳಿನ ಗಿಡಬಳ್ಳಿಗಳ ಪೊದೆ, ಗದಾ ಪರ್ವ,4,59
710. ಮೆಳೆ ಮರಂಗಳ, ಪೊದೆಗಳ ಮತ್ತು ಮರಗಳ, ಸಭಾ ಪರ್ವ,1,74
711. ಮೆಳೆಸಂದಣಿ, ಬಿದಿರುಮೆಳೆಗಳು, ಗದಾ ಪರ್ವ,4,50
712. ಮೇಖಲೆ, ಒಡ್ಯಾಣ, ಸಭಾ ಪರ್ವ,13,59
713. ಮೇಗರೆ, ಮೇಲಿನ, ಉದ್ಯೋಗ ಪರ್ವ,9,74
714. ಮೇಗಾಳಿ, ಮೇಲುಗಡೆಯ ದಿಕ್ಕಿನಿಂದ ಬರುವ ಗಾಳಿ, ಆದಿ ಪರ್ವ,9,10
715. ಮೇಗಿವರ, (ಮೇಗೆ+ಇವರ) ಇನ್ನು ಮೇಲೆ, ಗದಾ ಪರ್ವ,12,20
716. ಮೇಘತರು, ಮೋಡವೆಂಬ ಮರ, ಭೀಷ್ಮ ಪರ್ವ,4,88
717. ಮೇಘಧ್ವಾನ, ಮೋಡಗಳ ಧ್ವನಿ (ಸಿಡಿಲು ಗುಡುಗು), ಭೀಷ್ಮ ಪರ್ವ,4,98
718. ಮೇಘವ್ಯೂಹ, ಮೋಡಗಳ ಸಮೂಹ, ಆದಿ ಪರ್ವ,20,32
719. ಮೇಘಾಳಿ, ಮೋಡಗಳ ಸಮೂಹ, ದ್ರೋಣ ಪರ್ವ,1,29
720. ಮೇದನಿ, ನೆಲ/ಭೂಮಿ, ಉದ್ಯೋಗ ಪರ್ವ,9,43
721. ಮೇದಿನಿ, ರಾಜ್ಯ (ಭೂಮಿ), ವಿರಾಟ ಪರ್ವ,10,85
722. ಮೇದಿನೀ ಜನ, ಭೂಮಿಯ ಜನರು, ವಿರಾಟ ಪರ್ವ,10,80
723. ಮೇದಿನೀತಲ, ಭೂಮಂಡಲ, ಭೀಷ್ಮ ಪರ್ವ,3,61
724. ಮೇಧಸ್ಸು, ಮೆದುಳು, ಉದ್ಯೋಗ ಪರ್ವ,4,92
725. ಮೇರೆದಪ್ಪುವ, ಹದ್ದು ಮೀರುವ, ಭೀಷ್ಮ ಪರ್ವ,1,39
726. ಮೇಲಂಕಣದ ಭಾರಣೆ, ಮತ್ತೊಂದು ಯುದ್ಧದ ದಾಳಿ, ವಿರಾಟ ಪರ್ವ,5,5
727. ಮೇಲಣ, ಮರುದಿನ, ಭೀಷ್ಮ ಪರ್ವ,7,1
728. ಮೇಲಣ ಅಮರರು, ಸ್ವರ್ಗಲೋಕದ ದೇವತೆಗಳು, ಭೀಷ್ಮ ಪರ್ವ,5,14
729. ಮೇಲಣಂಕಣ, ಯುದ್ಧರಂಗದ ಎತ್ತರ ಪ್ರದೇಶ, ಗದಾ ಪರ್ವ,11,63
730. ಮೇಲಪ್ಪುದು, ಮುಂದೆ ಆಗುವುದು, ಗದಾ ಪರ್ವ,9,12
731. ಮೇಲಾಯಿ, ಮಿಗಿಲಾಗಿ, ಆದಿ ಪರ್ವ,10,11
732. ಮೇಲಾಳು, ವೀರಪ್ರಮುಖ, ವಿರಾಟ ಪರ್ವ,5,1
733. ಮೇಲಾಳು, ರಥದ ಮೇಲಿನಿಂದ ಯುದ್ಧ ಮಾಡುವ ಶೂರರು, ದ್ರೋಣ ಪರ್ವ,15,69
734. ಮೇಲು ಶಕುನ, ಮಂಗಳ ಸೂಚಕವಾದ ಶಕುನ ಪಕ್ಷಿ, ವಿರಾಟ ಪರ್ವ,1,225
735. ಮೇಲುಕಟ್ಟು, ಮಂಟಪದ ಮೇಲ್ಭಾಗದಲ್ಲಿ ಆಲಂಕಾರಿಕವಾಗಿ ಕಟ್ಟುವ ಬಟ್ಟೆ, ಆದಿ ಪರ್ವ,12,11
736. ಮೇಲುಗಟ್ಟು, ಚಿತ್ರಪಟಗಳು, ಉದ್ಯೋಗ ಪರ್ವ,8,3
737. ಮೇಲುಗಾಣನು, ಸದ್ಗತಿಯ ಬಗೆಗೆ ಯೋಚಿಸುತ್ತಿಲ್ಲ, ವಿರಾಟ ಪರ್ವ,2,24
738. ಮೇಲುಗಾಳಗದ, ಯುದ್ಧದಲ್ಲಿ ಗೆದ್ದ ಸಂತೋಷದಲ್ಲಿ, ಸಭಾ ಪರ್ವ,1,1
739. ಮೇಲುಗುದುರೆ, ಶ್ರೇಷ್ಠವಾದ ಕುದುರೆಗಳು, ದ್ರೋಣ ಪರ್ವ,8,44
740. ಮೇಲುಗೈದು, ಮೇಲಾದ ಕೈದು, ವಿರಾಟ ಪರ್ವ,6,39
741. ಮೇಲುದಾಗಿನ, ಮುಂಬರುವ , ಗದಾ ಪರ್ವ,6,8
742. ಮೇಲುದಾಯ, ಮುಂದಿನ ಪರಿಣಾಮ, ಶಲ್ಯ ಪರ್ವ,1,1
743. ಮೇಲುದಾಯ, ಮುಂದೊದÀಗುವ, ಗದಾ ಪರ್ವ,5,17
744. ಮೇಲುದಾಯ, ಮೇಲುಭಾಗ, ಗದಾ ಪರ್ವ,1,33
745. ಮೇಲುದು, ಸೆರಗು , ವಿರಾಟ ಪರ್ವ,3,17
746. ಮೇಲುದುಗುಡದ, ಎದ್ದುಕಾಣುವಂತೆ ಚಿಂತಾಕ್ರಾಂತನಾದ, ಗದಾ ಪರ್ವ,6,1
747. ಮೇಲುನೆಲನ, ಉತ್ತಮನೆಲೆಯನ್ನು, ಭೀಷ್ಮ ಪರ್ವ,6,1
748. ಮೇಲುಪೋಗಿನ, ಏಳಿಗೆಯ ನಾಶ , ದ್ರೋಣ ಪರ್ವ,1,1
749. ಮೇಲುಪೋಗು, ಉಬ್ಬು , ವಿರಾಟ ಪರ್ವ,8,71
750. ಮೇಲುಮಚ್ಚು, ಮೇಲು ಮಾಡ, ವಿರಾಟ ಪರ್ವ,2,55
751. ಮೇಲುಮದ, ಮೇಲುನೋಟಕ್ಕೆ ಮದಿಸಿದವರಂತೆ ಕಾಣುವ, ಗದಾ ಪರ್ವ,10,1
752. ಮೇಲುವಾಸಿ, ಉತ್ತಮಸ್ಥಿತಿ, ಕರ್ಣ ಪರ್ವ,22,40
753. ಮೇಲೆ, ದೇವಲೋಕದಲ್ಲಿ, ಗದಾ ಪರ್ವ,7,38
754. ಮೇಲ್ಕಟ್ಟು, ಚಿತ್ರಗಳಿಗೆ ಹಾಕುವ ಮರದ ಚೌಕಟ್ಟು, ಗದಾ ಪರ್ವ,9,28
755. ಖರ್ಪರ, ಕಪ್ಪರ , ಶಲ್ಯ ಪರ್ವ,3,19
756. ಮೇಹುಗಾಡು, ಮೇಯುವ ಜಾಗ , ಅರಣ್ಯ ಪರ್ವ,13,17
757. ಮೇಹುಗಾರರು, ಅಡವಿಜನರು, ಭೀಷ್ಮ ಪರ್ವ,1,11
758. ಮೇಳ, ಸರಸ, ಗದಾ ಪರ್ವ,10,17
759. ಮೇಳ, ಬಳಗ, ವಿರಾಟ ಪರ್ವ,2,4
760. ಮೇಳ, ಜೊತೆ, ವಿರಾಟ ಪರ್ವ,10,72
761. ಮೇಳ, ಗೋಷ್ಠಿ, ಆದಿ ಪರ್ವ,20,42
762. ಮೇಳದ ಐವರು, ಪಾಂಡವರು, ವಿರಾಟ ಪರ್ವ,2,24
763. ಮೇಳದಲಿ ಮಂಡಳಿಸಿದ, ಒಗ್ಗೂಡಿರುವ ಗುಂಪುಗಳ, ಭೀಷ್ಮ ಪರ್ವ,2,7
764. ಮೇಳವ, ಸೇರಿಕೆ, ಶಲ್ಯ ಪರ್ವ,3,73
765. ಮೇಳವಣಿಗೆ, ಗಾನ ವಾದ್ಯಗಳಿಂದ ಕೂಡಿದ ನರ್ತನ, ಆದಿ ಪರ್ವ,12,20
766. ಮೇಳವಣೆ, ವಾದ್ಯಗಳ ನಲಿದಾಟ, ಭೀಷ್ಮ ಪರ್ವ,6,9
767. ಮೇಳವಾತಿನಲಿ, ಜೊತೆಸೇರಿ, ಆದಿ ಪರ್ವ,13,65
768. ಮೇಳವಿಸು, ಒಟ್ಟುಗೂಡಿಸು, ಆದಿ ಪರ್ವ,19,36
769. ಮೇಳವಿಸು, ಹೊಂದಿಸು, ವಿರಾಟ ಪರ್ವ,8,67
770. ಮೇಳವೇ ಫಡ !, ಯಾಕೋ ಹೊಂದಿಕೆಯಾಗುತ್ತಿಲ್ಲವಲ್ಲ ಎಂಬ ಬೆರಗಿನ ಭಾವ, ವಿರಾಟ ಪರ್ವ,10,11
771. ಮೇಳಾಪ, ಜೊತೆ, ವಿರಾಟ ಪರ್ವ,10,71
772. ಮೇಳಾಪ, ಒಂದುಗೂಡು, ಕರ್ಣ ಪರ್ವ,13,40
773. ಮೇಳೈಸು, ಒಂದು ಕಡೆ ಸೇರಿಸು, ವಿರಾಟ ಪರ್ವ,4,26
774. ಮೈಗಂಡಿ, ಮೈ ರಂಧ್ರಗಳಲ್ಲಿ, ಭೀಷ್ಮ ಪರ್ವ,5,41
775. ಮೈಗಾಹು, ಮೈಗಾವಲು, ಸಭಾ ಪರ್ವ,1,58
776. ಮೈಗುರುಹು, ಕುರುಹು, ವಿರಾಟ ಪರ್ವ,9,16
777. ಮೈಗೊಡದಿರೊ, ಬಲಿಯಾಗದಿರೊ, ಭೀಷ್ಮ ಪರ್ವ,9,24
778. ಮೈಗೊಡುವ, ಮೇಲಕ್ಕೆತ್ತಿದ, ಭೀಷ್ಮ ಪರ್ವ,3,82
779. ಮೈದಡವು, ದೇಹವನ್ನು ನೇವರಿಸು, ಆದಿ ಪರ್ವ,17,25
780. ಮೈದುನ, ತಂಗಿ ಸುಭದ್ರೆಯ ಗಂಡ, ಭೀಷ್ಮ ಪರ್ವ,3,69
781. ಮೈದೆಗೆ, ಮೆಯ್ದೆಗೆ, ಕರ್ಣ ಪರ್ವ,7,25
782. ಮೈದೆಗೆದು, ಹಿಮ್ಮೆಟ್ಟಿ, ದ್ರೋಣ ಪರ್ವ,5,12
783. ಮೈದೆಗೆದು, ಪರಾಕ್ರಮದಿಂದ, ದ್ರೋಣ ಪರ್ವ,4,44
784. ಮೈದೆಗೆದು, ದೇಹವನ್ನು ಬಿಟ್ಟು, ದ್ರೋಣ ಪರ್ವ,1,3
785. ಮೈದೆಗೆವಂತೆ, ಉಕ್ಕಿಬರುವಂತೆ, ಭೀಷ್ಮ ಪರ್ವ,8,30
786. ಮೈದೋರಬೇಕು, ಕಾಣಗೊಡಬೇಕು., ಭೀಷ್ಮ ಪರ್ವ,3,63
787. ಮೈದೋರಿತು, ಕಾಣಿಸಿಕೊಂಡಿತು, ಭೀಷ್ಮ ಪರ್ವ,9,22
788. ಮೈದೋರು, ಕಾಣಿಸಿಕೋ, ವಿರಾಟ ಪರ್ವ,6,51
789. ಮೈನೋಟ, ನಮ್ಮನ್ನು ಕಂಡುಹಿಡಿಯುವುದು, ವಿರಾಟ ಪರ್ವ,10,36
790. ಮೈನೋಟ, ದೇಹದ ಕಷ್ಟ, ಆದಿ ಪರ್ವ,8,94
791. ಮೈಬಿದಿರಿದವು, ಮೈಕೊಡಹಿದವು, ಭೀಷ್ಮ ಪರ್ವ,10,17
792. ಮೈಮಣಿದು, ಮೈಬಾಗಿಸಿ, ಭೀಷ್ಮ ಪರ್ವ,8,16
793. ಮೈಮರೆದವು, ಎಚ್ಚರ ತಪ್ಪಿದೆವು, ಭೀಷ್ಮ ಪರ್ವ,3,68
794. ಮೈಮರೆಸಿ, ವೇಷಾಂತರದಿಂದ, ವಿರಾಟ ಪರ್ವ,1,32
795. ಮೈಮಸೆ, ತಿಕ್ಕಾಟ, ದ್ರೋಣ ಪರ್ವ,1,52
796. ಮೈಮಾರಿಗಳು, ಹಣಕ್ಕಾಗಿ ಯುದ್ಧಮಾಡುವವರು, ದ್ರೋಣ ಪರ್ವ,1,69
797. ಮೈಯಕೊಟ್ಟು, ಮೈತೆತ್ತು, ಭೀಷ್ಮ ಪರ್ವ,10,4
798. ಮೈಯರಿಹಿಸಿ, ಎಚ್ಚರಿಸಿ, ಗದಾ ಪರ್ವ,9,32
799. ಮೈಯಿಕ್ಕಿದನು, ಅಡ್ಡಬಿದ್ದನು, ಭೀಷ್ಮ ಪರ್ವ,7,17
800. ಮೈಯಿಕ್ಕು, ಧೀರ್ಘದಂಡ ನಮಸ್ಕಾರ ಮಾಡು., ಗದಾ ಪರ್ವ,11,57
801. ಮೈಯುಬ್ಬು, ಹಿಗ್ಗು, ಆದಿ ಪರ್ವ,13,61
802. ಮೈಲವಣಿ, ಮೈಕಾಂತಿ, ಆದಿ ಪರ್ವ,7,28
803. ಮೈಲಾಗಿನಲಿ, ಶರೀರದ ವಿಶೇಷ ಚಲನೆಯಿಂದ, ಗದಾ ಪರ್ವ,7,15
804. ಮೈವಳಿ, ಹಿಂಬಾಲಿಸು, ಭೀಷ್ಮ ಪರ್ವ,4,36
805. ಮೈವಳಿ, ಮೈಗೂಡು, ಸಭಾ ಪರ್ವ,2,3
806. ಮೈಸಿರಿ, ಶೋಭೆ, ಆದಿ ಪರ್ವ,20,1
807. ಮೈಸಿರಿ, ಶೌರ್ಯ, ಭೀಷ್ಮ ಪರ್ವ,1,5
808. ಮೈಸುಳಿವು, ರೂಪು , ವಿರಾಟ ಪರ್ವ,10,12
809. ಮೊಗದಿರುಹದಿಹ, ವಿಮುಖನಾದಿರುವ, ಭೀಷ್ಮ ಪರ್ವ,3,36
810. ಮೊಗದಿರುಹು, ಮುಖತಿರುಗಿಸು, ಗದಾ ಪರ್ವ,2,38
811. ಮೊಗರಂಬ, ಮೊಗವಾಡ, ಶಲ್ಯ ಪರ್ವ,2,43
812. ಮೊಗರಂಬ, ಆನೆ ಕುದುರೆಗಳಿಗೆ ಹಾಕುವ ಮುಖವಾಡ, ಕರ್ಣ ಪರ್ವ,15,31
813. ಮೊಗರಂಬ, ಹಣೆಯ ಮೇಲಿನ ಕವಚ, ಸಭಾ ಪರ್ವ,12,97
814. ಮೊಗವಡೆದು, ಮುಖವನ್ನು ಪಡೆದು, ದ್ರೋಣ ಪರ್ವ,1,50
815. ಮೊಗವರಿಗೆ, ಮುಖಕವಚ, ಭೀಷ್ಮ ಪರ್ವ,4,89
816. ಮೊಗವಲೆ, ದೊಡ್ಡ ಬಲೆ, ಕರ್ಣ ಪರ್ವ,22,28
817. ಮೊಗಸಲು, ಎದುರಿಸಲು, ದ್ರೋಣ ಪರ್ವ,5,36
818. ಮೊಗಸು, ವಿರೋಧಿಸು, ದ್ರೋಣ ಪರ್ವ,18,14
819. ಮೊಗಸು, ಸಿದ್ಧನಾಗು, ಕರ್ಣ ಪರ್ವ,19,75
820. ಮೊಗಸು, ಎದುರಿಸಿ ನಿಲ್ಲು, ವಿರಾಟ ಪರ್ವ,6,29
821. ಮೊಗಸುವಡೆ, ಮುನ್ನುಗ್ಗಲು, ಭೀಷ್ಮ ಪರ್ವ,5,1
822. ಮೊಗೆ, ಬಾಚು, ಶಲ್ಯ ಪರ್ವ,3,5
823. ಮೊಗೆ, ಮೇಲೆ ಹಾಕು, ಗದಾ ಪರ್ವ,5,2
824. ಮೊಗೆ, ಈಚೆಗೆ ಸುರಿ, ವಿರಾಟ ಪರ್ವ,4,33
825. ಮೊಗೆ, ಕುಡಿ, ಆದಿ ಪರ್ವ,11,28
826. ಮೊಗೆ, ಗೋರಿಕೊಳ್ಳು, ದ್ರೋಣ ಪರ್ವ,3,29
827. ಮೊಗೆದವು, ಬಾಡಿದವು., ಭೀಷ್ಮ ಪರ್ವ,9,10
828. ಮೊಗೆದು, ಬಾಚಿ, ಭೀಷ್ಮ ಪರ್ವ,8,0
829. ಮೊಗೆದು, ತುಂಬಿಕೊಂಡು, ಆದಿ ಪರ್ವ,13,64
830. ಮೊಗ್ಗೆಗೈ, ಮುಗಿದ ಕೈ, ಅರಣ್ಯ ಪರ್ವ,9,36
831. ಮೊನೆ, ಅಗ್ರಭಾಗ, ಆದಿ ಪರ್ವ,7,35
832. ಮೊನೆ, ಹೂವಿನ ದಳದ ತುದಿ. ಜಕ್ಕವಕ್ಕಿ, ವಿರಾಟ ಪರ್ವ,10,67
833. ಮೊನೆ, ತೀಕ್ಷ್ಣತೆ, ಆದಿ ಪರ್ವ,7,28
834. ಮೊನೆ, ಚೂಪು, ದ್ರೋಣ ಪರ್ವ,2,40
835. ಮೊನೆ ಮುಂಜೆರಗು, ಮುಂದಿನ ಸೆರಗಿನ ತುದಿ, ಆದಿ ಪರ್ವ,3,4
836. ಮೊನೆಗಣೆ, ಚೂಪಾದಬಾಣ, ದ್ರೋಣ ಪರ್ವ,5,19
837. ಮೊನೆಗಳ ತೆಕ್ಕೆ, ಸಬಳದ ಸೇನೆಗಳ ಸಮೂಹ, ಭೀಷ್ಮ ಪರ್ವ,4,43
838. ಮೊನೆಗುತ್ತು, ಬಾಣಗಳ ತುದಿಯಿಂದುಂಟಾದ ತೆಗ್ಗು, ದ್ರೋಣ ಪರ್ವ,14,9
839. ಮೊನೆಗೊಳ್, ತೀಕ್ಷ್ಣವಾಗು, ಅರಣ್ಯ ಪರ್ವ,23,31
840. ಮೊನೆದೋರಿ, ಅಡ್ಡಿಯನ್ನುಂಟು ಮಾಡು, ಆದಿ ಪರ್ವ,13,36
841. ಮೊನೆದೋರು, ಶೌರ್ಯವನ್ನು ಪ್ರದರ್ಶಿಸು. ಹಳಚಿದರು, ಭೀಷ್ಮ ಪರ್ವ,9,9
842. ಮೊನೆದೋರು, ಶೌರ್ಯದೋರು, ಭೀಷ್ಮ ಪರ್ವ,4,35
843. ಮೊನೆದೋರು, ಅಲಗನ್ನು ಕಾಣಿಸು, ಭೀಷ್ಮ ಪರ್ವ,10,9
844. ಮೊನೆಯಲಗು, ಬಾಣಗಳ ಚೂಪಾದ ತುದಿಗಳು, ಭೀಷ್ಮ ಪರ್ವ,9,38
845. ಮೊಬ್ಬು, ಮಬ್ಬು, ಆದಿ ಪರ್ವ,11,33
846. ಮೊಮ್ಮಂದಿರುಗಳು, ಮೊಮ್ಮಕ್ಕಳು, ಭೀಷ್ಮ ಪರ್ವ,7,23
847. ಮೊಮ್ಮನು, ಮೊಮ್ಮಗನು, ದ್ರೋಣ ಪರ್ವ,5,75
848. ಮೊರಡಿ, ಬೆಟ್ಟ, ಅರಣ್ಯ ಪರ್ವ,19,27
849. ಮೊರಹು, ಝೇಂಕಾರ, ಕರ್ಣ ಪರ್ವ,7,14
850. ಮೊರೆ, ಭಯಂಕರ ಶಬ್ದ ಮಾಡು, ಶಲ್ಯ ಪರ್ವ,1,7
851. ಮೊರೆ, ಶಬ್ದಮಾಡು, ಶಲ್ಯ ಪರ್ವ,3,33
852. ಮೊರೆ, ಅಬ್ಬರ, ಉದ್ಯೋಗ ಪರ್ವ,7,5
853. ಮೊರೆ, ಆರ್ತಧ್ವನಿ, ಆದಿ ಪರ್ವ,19,2
854. ಮೊರೆಗೇಡಿ, ಸಂಬಂಧ ಹಾಳು ಮಾಡಿದವನು, ಆದಿ ಪರ್ವ,13,37
855. ಮೊರೆವ, ಮೊರೆತದ ಶಬ್ದ ಮಾಡುವ, ಗದಾ ಪರ್ವ,3,38
856. ಮೊರೆವ, ಅಬ್ಬರಿಸುವ, ಸಭಾ ಪರ್ವ,1,62
857. ಮೊರೆವ, ಧ್ವನಿ ಮಾಡುವ, ದ್ರೋಣ ಪರ್ವ,4,29
858. ಮೊರೆವುದು, ವಿಜೃಂಭಿಸುವುದು, ಭೀಷ್ಮ ಪರ್ವ,3,57
859. ಮೊರೆವೆಣ, ಒರಲುತ್ತಿರುವ ಹೆಣ, ಭೀಷ್ಮ ಪರ್ವ,5,32
860. ಮೊಳಗಿತು, ಪ್ರತಿಧ್ವನಿ ಮಾಡಿತು, ಸಭಾ ಪರ್ವ,5,7
861. ಮೊಳಗು, ಶಬ್ದ ಮಾಡು, ಶಲ್ಯ ಪರ್ವ,1,7
862. ಮೊಳಗು, ಸಿಡಿಲಿನಂತೆ ಶಬ್ದ ಮಾಡು, ಗದಾ ಪರ್ವ,1,53
863. ಮೊಳಗು, ಅಬ್ಬರಿಸು, ಆದಿ ಪರ್ವ,15,31
864. ಮೊಳಗು, ಧ್ವನಿ /ಸದ್ದು, ಉದ್ಯೋಗ ಪರ್ವ,6,17
865. ಮೊಳಗು, ಧ್ವನಿಮಾಡು, ಆದಿ ಪರ್ವ,20,1
866. ಮೊಳಗು, ಧ್ವನಿಗೆಯ್ದವು, ಭೀಷ್ಮ ಪರ್ವ,5,28
867. ಮೊಳೆ, ಅಂಕುರ, ಆದಿ ಪರ್ವ,7,37
868. ಮೊಳೆ ಹೊಮ್ಮುವರೆ, ಹಾನಿ ಉಂಟುಮಾಡುವರೆ, ದ್ರೋಣ ಪರ್ವ,1,41
869. ಮೊಳೆನಗೆ, ಮಂದಹಾಸ, ಆದಿ ಪರ್ವ,19,48
870. ಮೊಳೆಯೆ, ಸುಳಿಯಲು, ಭೀಷ್ಮ ಪರ್ವ,7,12
871. ಮೋಡಾಮೋಡಿ, ಅಂದವಾದ ವೈಖರಿ, ಆದಿ ಪರ್ವ,13,44
872. ಮೋಡಾಮೋಡಿ, ಕೈಚಳಕ, ಆದಿ ಪರ್ವ,7,41
873. ಮೋದಿತು, ತಿಕ್ಕಿತು., ದ್ರೋಣ ಪರ್ವ,3,29
874. ಮೋದಿದನು, ಗುದ್ದಿದನು, ದ್ರೋಣ ಪರ್ವ,2,80
875. ಮೋದಿಸು, ತಣಿಸು, ಉದ್ಯೋಗ ಪರ್ವ,3,93
876. ಮೋದು, ಅಪ್ಪಳಿಸಿ ಹೊಡೆ, ಕರ್ಣ ಪರ್ವ,15,35
877. ಮೋನ, ಮೌನ(ಸಂ), ಗದಾ ಪರ್ವ,11,46
878. ಮೋರೆಯ ಜೋಡು, ಆನೆಯ ಮುಖದ ರಕ್ಷಾಕವಚ, ಗದಾ ಪರ್ವ,1,38
879. ಮೋರೆಯನು ಒಲೆದು, ಸೊಂಡಲನ್ನು ತೂಗಾಡಿಸುತ್ತಾ, ಭೀಷ್ಮ ಪರ್ವ,4,81
880. ಮೋಹ, ವಿಸ್ಮøತಿ, ಗದಾ ಪರ್ವ,7,30
881. ಮೋಹಬಂಧಸ್ಥಗಿತ ಚಿತ್ತ, ಮಕ್ಕಳ ವೇಲಿನ ವ್ಯಾಮೋಹದಿಂದ ಬಂಧಿತವಾಗಿರುವ ಮನಸ್ಸು, ಗದಾ ಪರ್ವ,11,47
882. ಮೋಹಮಿಗೆ, ಆಸಕ್ತಿ ಹೆಚ್ಚಾಗಲು, ಭೀಷ್ಮ ಪರ್ವ,3,93
883. ಮೋಹರ, ಗುಂಪು , ವಿರಾಟ ಪರ್ವ,4,26
884. ಮೋಹರ, ದಂಡು, ಉದ್ಯೋಗ ಪರ್ವ,11,37
885. ಮೋಹರದ, ಯುದ್ಧದ, ಭೀಷ್ಮ ಪರ್ವ,6,12
886. ಮೋಹರದ, ಗುಂಪಿನಲ್ಲಿರುವ, ಗದಾ ಪರ್ವ,11,26
887. ಮೋಹರಿಸು, ಮುತ್ತಿಗೆ ಹಾಕು, ಆದಿ ಪರ್ವ,13,44
888. ಮೋಹರಿಸು, ಒಗ್ಗೂಡು, ಶಲ್ಯ ಪರ್ವ,3,20
889. ಮೋಹರಿಸು, ಕವಿ, ವಿರಾಟ ಪರ್ವ,1,28
890. ಮೋಹರಿಸು, ಗುಂಪು ಕೂಡು, ವಿರಾಟ ಪರ್ವ,8,79
891. ಮೋಹಳಿಸಿ, ಮೋಹರಿಸಿ, ವಿರಾಟ ಪರ್ವ,6,57
892. ಮೋಹಿತನಲ್ಲ, ಆಸಕ್ತನಲ್ಲ, ಭೀಷ್ಮ ಪರ್ವ,7,32
893. ಮೋಹಿತು, ಒಂದುಗೂಡಿತು., ಗದಾ ಪರ್ವ,1,6
894. ಮೋಹಿದ, ಸವರಿದ, ದ್ರೋಣ ಪರ್ವ,18,32
895. ಮೋಹಿದನು, ರಚಿಸಿದನು, ದ್ರೋಣ ಪರ್ವ,4,0
896. ಮೋಹು, ನೆರೆ, ಉದ್ಯೋಗ ಪರ್ವ,8,44
897. ಮೋಹು, ಎತ್ತಿಹಿಡಿ, ಗದಾ ಪರ್ವ,1,35, ,
898. ಮೋಹು, ಎದುರಾಗು, ಕರ್ಣ ಪರ್ವ,18,14
899. ಮೋಹು, ಗುಂಪಾಗಿ ಸೇರು, ವಿರಾಟ ಪರ್ವ,4,27
900. ಮೋಹು, ತುಂಬಿಕೊಳ್ಳುವ, ಉದ್ಯೋಗ ಪರ್ವ,9,65
901. ಮೌಕ್ತಿಕನಿಕರ, ಮುತ್ತಿನರಾಶಿ, ಭೀಷ್ಮ ಪರ್ವ,4,90
902. ಮೌಕ್ತಿಕಮಣಿ, ಮುತ್ತಿನಮಣಿ ರತ್ನ, ವಿರಾಟ ಪರ್ವ,1,20
903. ಮೌಕ್ತಿಕವ್ರಾತ, ರತ್ನ ರಾಶಿ, ಭೀಷ್ಮ ಪರ್ವ,4,91
904. ಮೌರಜಿಗ, ಮದ್ದಳೆ ಬಾರಿಸುವವನು., ಅರಣ್ಯ ಪರ್ವ,20,25
905. ಮೌಲ್ಯ, ಬೆಲೆ, ಆದಿ ಪರ್ವ,16,6
906. ಮೌಲ್ಯ, ಮೂಲಭೂತವಾದ, ಆದಿ ಪರ್ವ,11,39
907. ಮೌಳಿ, ಪ್ರಮುಖ, ಆದಿ ಪರ್ವ,13,46
908. ಮೌಳಿ, ಮಹುಳಿ, ಅರಣ್ಯ ಪರ್ವ,21,36
909. ಯಂತ್ರರೂಪುಗಳು, ಅಧೀನ ಬೊಂಬೆಗಳು (ಜೀವಿಗಳು), ಭೀಷ್ಮ ಪರ್ವ,7,31
910. ಯಂತ್ರಿ, ಸೂತ್ರಧಾರ (ಬೊಂಬೆಯಾಟದವನು) ಹಾಹೆ, ಭೀಷ್ಮ ಪರ್ವ,7,31
911. ಯಕ್ಷಕರ್ದಮ, ಸುಗಂಧ ಲೇಪನ, ಆದಿ ಪರ್ವ,16,28
912. ಯಕ್ಷಕರ್ದಮ, ಸುಗಂಧಲೇಪನ ದ್ರವ್ಯ, ಸಭಾ ಪರ್ವ,2,90
913. ಯಜಮಾನ, ಯಜ್ಞದೀಕ್ಷಿತನಾಗಿ ಯಜ್ಞವನ್ನು ಮಾಡುವವನು, ಗದಾ ಪರ್ವ,11,60

[][][]

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ