<ಗದುಗಿನ ಭಾರತ ಪದಕೋಶ

ರ, ಸಂಪಾದಿಸಿ

  • 1. ಯೋಷಿಜ್ಜನ, ಸ್ತ್ರೀಯರು ?, ಸಭಾ ಪರ್ವ,7,20
  • 2. ರಂಚೆ, ಆನೆಯ ಮೇಲೆ ಹಾಕುವ ಹಾಸಿಗೆ, ಗದಾ ಪರ್ವ,9,38
  • 3. ರಂಜಕರು, ಮನವೊಲಿಸುವಂತೆ ಮಾತನಾಡುವವರು, ಆದಿ ಪರ್ವ,8,52
  • 4. ರಂಜಣಿಗೆ, ಪನ್ನೀರು, ಆದಿ ಪರ್ವ,12,16
  • 5. ರಂಜಿಸಿತು, ರಂಜನೆಯನ್ನು ಕೊಟ್ಟಿತು. ಉರೆ, ಭೀಷ್ಮ ಪರ್ವ,5,0
  • 6. ರಂಜಿಸು, ಪ್ರಕಾಶಿಸು, ಆದಿ ಪರ್ವ,15,8
  • 7. ರಂಜಿಸು, ಮೆರೆ, ಆದಿ ಪರ್ವ,16,38
  • 8. ರಕ್ಕಸ, ರಾಕ್ಷಸ(ಸಂ), ಗದಾ ಪರ್ವ,3,10
  • 9. ರಚನೆ, ಮಾಡುವಿಕೆ, ಆದಿ ಪರ್ವ,12,0
  • 10. ರಚಿತ, ಸಿದ್ಧಮಾಡುವುದು, ಆದಿ ಪರ್ವ,7,11
  • 11. ರಚಿಸಿದನು, ಉಂಟು ಮಾಡಿದನು., ಭೀಷ್ಮ ಪರ್ವ,3,2
  • 12. ರಚಿಸು, ನಿರ್ಮಿಸು, ಆದಿ ಪರ್ವ,12,0
  • 13. ರಚಿಸು, ಸಿದ್ಧಮಾಡು, ಆದಿ ಪರ್ವ,12,26
  • 14. ರಚಿಸು, ಏರ್ಪಡಿಸು., ಉದ್ಯೋಗ ಪರ್ವ,6,10
  • 15. ರಜ, ಧೂಲು, ಆದಿ ಪರ್ವ,8,39
  • 16. ರಜತಾಚಲ, ಕೈಲಾಸ, ಆದಿ ಪರ್ವ,16,55
  • 17. ರಜನಿ, ರಾತ್ರಿ., ಗದಾ ಪರ್ವ,9,0
  • 18. ರಣಕೇಳಿ, ಯುದ್ಧ ಕ್ರೀಡೆ, ವಿರಾಟ ಪರ್ವ,8,44
  • 19. ರಣಖೇಡರು, ಯುದ್ಧಕ್ಕೆ ಹೆದರುವವರು, ಕರ್ಣ ಪರ್ವ,8,30
  • 20. ರಣಖೇಡಿ, ರಣಹೇಡಿ, ಕರ್ಣ ಪರ್ವ,14,40
  • 21. ರಣಚಮತ್ಕøತಿ, ರಣಸಾಹಸ, ಭೀಷ್ಮ ಪರ್ವ,4,2
  • 22. ರಣಜೇಯ, ಯುದ್ಧದಲ್ಲಿ ಗೆಲ್ಲಲ್ಪಡುವವನು, ಶಲ್ಯ ಪರ್ವ,3,30
  • 23. ರಣದಜೇಯ, ಅಪ್ರತಿಮಶೂರ, ಭೀಷ್ಮ ಪರ್ವ,5,11
  • 24. ರಣದವಕಿ, ಯುದ್ಧದ ಉತ್ಸಾಹದಲ್ಲಿರುವವನು, ಗದಾ ಪರ್ವ,7,6
  • 25. ರಣದಾಯತನ, ಸಾಮಥ್ರ್ಯ, ದ್ರೋಣ ಪರ್ವ,15,43, ,
  • 26. ರಣದೂಳಿಗ, ಯುದ್ಧದ ಕೆಲಸ, ಗದಾ ಪರ್ವ,3,32
  • 27. ರಣಧೀರ, ರಣಶೂರ, ಭೀಷ್ಮ ಪರ್ವ,3,21
  • 28. ರಣಬಾಹಿರ, ಯುದ್ಧವಿಮುಖರು, ಗದಾ ಪರ್ವ,4,39
  • 29. ರಣಬಿನ್ನಾಣ, ಯುದ್ಧಕೌಶಲ, ಗದಾ ಪರ್ವ,7,48
  • 30. ರಣಭಯಂಕರ, ಯುದ್ಧದಲ್ಲಿ ಭಯ ಹುಟ್ಟಿಸುವವನು, ಆದಿ ಪರ್ವ,4,63
  • 31. ರಣಮಹಿ, ರಣಭೂಮಿ , ಗದಾ ಪರ್ವ,11,22
  • 32. ರಣಮಹೀಸಂತಮಸ ಶಾಂತೇಕ್ಷಣರು, ರಣಭೂಮಿಯ ಕತ್ತಲಿನಲ್ಲೊಂದು ಕ್ಷಣ ಸ್ತಬ್ಧರಾದ ಯೋಧರು, ದ್ರೋಣ ಪರ್ವ,15,30
  • 33. ರಣಮೈಲಾರರಾದರು, ಮೈಲಾರ ಒಂದು ಕ್ಷುದ್ರ ದೇವತೆ ಶಿವನು ಗೊರವನ ವೇಷ ತಾಳಿ ಬಂದನೆಂದು ಪ್ರತೀತಿಯಿದೆ. ಇಲ್ಲಿ ಕರ್ಣ ಭೀಷ್ಮ ಮೊದಲಾದವರು ಯುದ್ಧದಲ್ಲಿ ಸೋತರು ಅನಂತರ ಹೆದರಿ ಓಡಿದರು ಎಂದರ್ಥ, ವಿರಾಟ ಪರ್ವ,8,70
  • 34. ರಣರಸ, ಯುದ್ಧದ ಸ್ವಾರಸ್ಯಗಳು, ಗದಾ ಪರ್ವ,3,5
  • 35. ರಣವಾಜಿ, ಯುದ್ಧದ ಕುದುರೆ, ವಿರಾಟ ಪರ್ವ,5,10
  • 36. ರಣವಾದ ಸಿದ್ಧಿ, ಯುದ್ಧದಲ್ಲಿ ಗೆಲುವಾಗುವ ಬಗೆ, ಭೀಷ್ಮ ಪರ್ವ,2,34
  • 37. ರಣವಿಜಯನಿಧಿ, ಯುದ್ಧದಲ್ಲಿ ಜಯವೆಂಬ ಐಶ್ವರ್ಯ., ಗದಾ ಪರ್ವ,6,3
  • 38. ರಣವಿಧಾನ, ಯುದ್ಧದ ರೀತಿ, ಗದಾ ಪರ್ವ,11,73
  • 39. ರಣಹೇಡಿ, ಅಂಜುಬುರುಕ, ಭೀಷ್ಮ ಪರ್ವ,7,8
  • 40. ರಣಾಧ್ಯಕ್ಷದಲಿ, ಯುದ್ಧದ ನಾಯಕತ್ವದಲ್ಲಿ, ಗದಾ ಪರ್ವ,8,61
  • 41. ರಣಿತ, ಶಬ್ಧ, ಗದಾ ಪರ್ವ,1,7
  • 42. ರತುನರಾಜಿ, ರತ್ನ ಸಮೂಹ, ಭೀಷ್ಮ ಪರ್ವ,3,23
  • 43. ರತ್ನಾಕರಪರೀತ, ಸಮುದ್ರದಿಂದ ಆವರಿಸಲ್ಪಟ್ಟ ಭೂಮಿ (ರತ್ನಕ್ಕೆ ಆಕರವಾದುದು ರತ್ನಾಕರ, ಗದಾ ಪರ್ವ,13,8
  • 44. ರತ್ನಾವಳಿ, ಮುತ್ತಿನಹಾರ, ಆದಿ ಪರ್ವ,13,63
  • 45. ರಥ ಪದಾತಿ, ಕಾಲಾ, ಸಭಾ ಪರ್ವ,3,30
  • 46. ರಥಚಯ, ರಥಸಮೂಹ, ಭೀಷ್ಮ ಪರ್ವ,8,14
  • 47. ರಥಪದ ಧೂಳಿ, ರಥ ಚಕ್ರಗಳಿಂದ ಎದ್ದ ಧೂಳು, ಭೀಷ್ಮ ಪರ್ವ,4,97
  • 48. ರಥವಾಹ, ರಥದ ಕುದುರೆ, ಕರ್ಣ ಪರ್ವ,4,23
  • 49. ರಥವಾಹತತಿ, ಕುದುರೆಗಳಸಮೂಹ, ಗದಾ ಪರ್ವ,1,35
  • 50. ರಥಾಂಗ, ಚಕ್ರವಾಕ, ಕರ್ಣ ಪರ್ವ,2,1
  • 51. ರಥಿ, ರಥದÀಲ್ಲಿ ಕುಳಿತು ಯುದ್ಧ ಮಾಡುವವರು, ದ್ರೋಣ ಪರ್ವ,14,26
  • 52. ರಥಿಕ, ರಥಕಾರ, ಭೀಷ್ಮ ಪರ್ವ,3,19
  • 53. ರಥಿಕತ್ರಯ, ಮೂರು ಜನ ರಥಿಕರು, ಗದಾ ಪರ್ವ,8,63
  • 54. ರದನ, ದಂತ, ಆದಿ ಪರ್ವ,13,18
  • 55. ರದನಿ, ರದನ(ದಾಡೆ) ಉಳ್ಳದ್ದು, ಗದಾ ಪರ್ವ,1,61
  • 56. ರನ್ನ, ರತ್ನ, ಉದ್ಯೋಗ ಪರ್ವ,8,3
  • 57. ರಪಣ, ಪಣ, ಸಭಾ ಪರ್ವ,13,60
  • 58. ರಪಣ, ಆಸ್ತಿ, ಗದಾ ಪರ್ವ,11,34
  • 59. ರಭಸ, ಭರ, ಆದಿ ಪರ್ವ,10,22
  • 60. ರಮಿಸು, ಸುಖಿಸು, ಆದಿ ಪರ್ವ,2,38
  • 61. ರವಕುಳ, ಆಕ್ರಂದನ, ಕರ್ಣ ಪರ್ವ,1,6
  • 62. ರವಣ, ಪರಿಹಾಸ, ಸಭಾ ಪರ್ವ,2,68
  • 63. ರವಣ, ರಪಣ, ಕರ್ಣ ಪರ್ವ,24,46
  • 64. ರವಣಿಸಲು, ಮುನ್ನುಗ್ಗಲು, ಭೀಷ್ಮ ಪರ್ವ,5,2
  • 65. ರವದ, ಧ್ವನಿಯಿಂದ, ದ್ರೋಣ ಪರ್ವ,1,14
  • 66. ರವಿಕಿರಣಾಳಿ, ಸೂರ್ಯನ ಕಿರಣಗಳ ಸಮೂಹ, ಗದಾ ಪರ್ವ,11,20
  • 67. ರವಿತೇಜ, ಸೂರ್ಯನ ತೇಜಸ್ಸು, ಗದಾ ಪರ್ವ,13,19
  • 68. ರವಿಯ ಮಗ, ಕರ್ಣ, ವಿರಾಟ ಪರ್ವ,8,11
  • 69. ರವಿಸೂನು, ಕರ್ಣ, ದ್ರೋಣ ಪರ್ವ,3,79
  • 70. ರಸ, ಪಾದರಸ, ಆದಿ ಪರ್ವ,15,8
  • 71. ರಸ, ಗಂಧ, ಆದಿ ಪರ್ವ,13,64
  • 72. ರಸಭಾಜನ, ಮದ್ಯಪಾತ್ರೆ, ವಿರಾಟ ಪರ್ವ,2,49
  • 73. ರಸಾತಳ, ಭೂಮಿಯ ಕೆಳಗಿರುವ ಏಳು ಲೋಕಗಳಲ್ಲಿ ನಾಲ್ಕನೆಯದು (ಅತಲ, ಭೀಷ್ಮ ಪರ್ವ,2,22, , , ರಸಾತಲ , ತಲಾತಲ , ಮಹಾತಲ , ಪಾತಾಲ),
  • 74. ರಸುಮೆ, ರಶ್ಮಿ , ದ್ರೋಣ ಪರ್ವ,10,3
  • 75. ರಸುಮೆ, ಕಿರಣ, ಭೀಷ್ಮ ಪರ್ವ,2,8
  • 76. ರಹ, ಅಚ್ಚರಿಪಡು, ವಿರಾಟ ಪರ್ವ,8,22
  • 77. ರಹಣಿ, ಸಂಬಂಧ, ಸಭಾ ಪರ್ವ,15,21
  • 78. ರಹಿ, ಸಡಗರ, ಗದಾ ಪರ್ವ,9,4
  • 79. ರಹಿ, ಪ್ರಕಾರ, ಸಭಾ ಪರ್ವ,2,78
  • 80. ರಹಿ, ಮಾರ್ಗ, ದ್ರೋಣ ಪರ್ವ,19,55,
  • 81. ರಹಿ, ಉತ್ಸಾಹ, ಸಭಾ ಪರ್ವ,14,47
  • 82. ರಹಿ, ತೀವ್ರತೆ, ಸಭಾ ಪರ್ವ,2,120
  • 83. ರಾಗ, ಪ್ರೀತಿ/ಕೋಪ, ಉದ್ಯೋಗ ಪರ್ವ,4,38
  • 84. ರಾಗ, ಬಣ್ಣ, ಆದಿ ಪರ್ವ,13,16
  • 85. ರಾಗ, ಮೃಗವನ್ನು ಆಕರ್ಷಿಸುವ ಹಾಡು, ಆದಿ ಪರ್ವ,8,76
  • 86. ರಾಗ, ಕೆಂಪುತನ , ವಿರಾಟ ಪರ್ವ,5,35
  • 87. ರಾಗಸಮುದಯ, ಪ್ರೀತಿಪಾತ್ರನು, ಉದ್ಯೋಗ ಪರ್ವ,8,25
  • 88. ರಾಗಹರ, ರಾಗ, ಗದಾ ಪರ್ವ,6,10
  • 89. ರಾಘೆ, ಅಂಕವಣಿ (ಕುದುರೆ ಹತ್ತಲು ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ), ಭೀಷ್ಮ ಪರ್ವ,4,53
  • 90. ರಾಜ, (ಇಲ್ಲಿ ಧೃತರಾಷ್ಟ್ರ), ಗದಾ ಪರ್ವ,11,51
  • 91. ರಾಜಋಷಿ, ರಾಜನಾಗಿದ್ದೂ, ದ್ರೋಣ ಪರ್ವ,14,23
  • 92. ರಾಜಕ, ದೊರೆ., ಉದ್ಯೋಗ ಪರ್ವ,6,13
  • 93. ರಾಜಬ್ರುವ, ಅರಸನೆಂದು ಹೇಳಿಕೊಳ್ಳುವವನು, ಆದಿ ಪರ್ವ,4,20
  • 94. ರಾಜಮಂತ್ರ, ರಾಜನೀತಿ., ಭೀಷ್ಮ ಪರ್ವ,7,18
  • 95. ರಾಜರವಿ, ರಾಜರಲ್ಲಿ ಸೂರ್ಯನಂತಿರುವವನು (ಇಲ್ಲಿ ದುರ್ಯೋ, ಗದಾ ಪರ್ವ,8,2
  • 96. ರಾಜಸ ತಾಮಸ, ತ್ರಿಗುಣಗಳಾದ ಸತ್ವ , ಗದಾ ಪರ್ವ,11,38
  • 97. ರಾಜಸವಿಕಾರ, ರಾಜಸಗುಣದ ವಿಕಾರಗಳು (ಗುಣಗಳು 3 ಬಗೆ. ಸತ್ವ, ಗದಾ ಪರ್ವ,11,13
  • 98. ರಾಜಾನ್ವಯ, ರಾಜವಂಶ, ವಿರಾಟ ಪರ್ವ,1,19
  • 99. ರಾಜಾವಳಿ, ರಾಜರ ಸಮೂಹ, ಆದಿ ಪರ್ವ,18,19
  • 100. ರಾಜೀವ ಮುಖಿ, ತಾವರೆಯ ಮುಖದವಳು, ವಿರಾಟ ಪರ್ವ,2,27
  • 101. ರಾಜ್ಯಪಾಲನ, ರಾಜ್ಯವನ್ನು ಪಾಲಿಸುವ ಕ್ರಮ, ಗದಾ ಪರ್ವ,13,12
  • 102. ರಾಜ್ಯವಿಭ್ರಂಶ, ರಾಜ್ಯನಾಶ, ಗದಾ ಪರ್ವ,11,44
  • 103. ರಾಜ್ಯಶ್ರೀ, ರಾಜಲಕ್ಷ್ಮಿ, ಉದ್ಯೋಗ ಪರ್ವ,3,129
  • 104. ರಾಣಿಕ, ಹೊಂದಾಣಿಕೆ, ಅರಣ್ಯ ಪರ್ವ,21,12
  • 105. ರಾಣಿಕ, ಹೊಂದಾಣಿಕೆ, ಸಭಾ ಪರ್ವ,2,51
  • 106. ರಾಣೀವಾಸ, ರಾಜನಪತ್ನಿ, ಗದಾ ಪರ್ವ,10,22
  • 107. ರಾಣೀವಾಸ, ರಾಜರ ಪತ್ನಿಯರು, ಗದಾ ಪರ್ವ,11,2
  • 108. ರಾಧಾತನಯ, ಕರ್ಣನು ರಾಧೆ ಅಧಿರಥ ಎಂಬ ಬೆಸ್ತ ದಂಪತಿಗಳ ಸಾಕು ಮಗ, ವಿರಾಟ ಪರ್ವ,7,8
  • 109. ರಾಧಾತನುಜ, ರಾಧೆಯಮಗ, ಗದಾ ಪರ್ವ,10,9
  • 110. ರಾಧಾನಂದನ, ಕರ್ಣ, ಆದಿ ಪರ್ವ,20,65
  • 111. ರಾಧೆಯಾತ್ಮಜ, ರಾಧೆಯ ಮಗ , ಗದಾ ಪರ್ವ,12,11
  • 112. ರಾಮ ಕಟಕ, ರಾಮಸೇನೆ, ಭೀಷ್ಮ ಪರ್ವ,1,37
  • 113. ರಾಮಣೀಯಕ, ಸುಂದರವಾದ, ಗದಾ ಪರ್ವ,6,10
  • 114. ರಾಮಭೃತ್ಯ, ಆಂಜನೇಯ, ಸಭಾ ಪರ್ವ,2,29
  • 115. ರಾಯ, ಕೌರವ, ವಿರಾಟ ಪರ್ವ,5,9
  • 116. ರಾಯಕಟಕ, ಇಲ್ಲಿ ದುರ್ಯೋಧನನ ಸೇನಾ ಪಾಳೆಯ, ಭೀಷ್ಮ ಪರ್ವ,7,0
  • 117. ರಾಯಕಟಕ, ರಾಜನ ಸೈನ್ಯ, ಗದಾ ಪರ್ವ,11,23
  • 118. ರಾಯಗರುಡಿಯ, ರಾಜನಗರುಡಿಯ (ರಾಜಕಾರ್ಯದ?) ಜಸ, ಗದಾ ಪರ್ವ,9,4
  • 119. ರಾಯಗಿಡಿಗ, ರಾಯಭೇರಿ, ಭೀಷ್ಮ ಪರ್ವ,2,3
  • 120. ರಾಯಗಿಡಿಗ, ಒಂದು ಬಗೆಯ ದೊಡ್ಡ ವಾದ್ಯ ಚಂಬಕ, ಕರ್ಣ ಪರ್ವ,14,33
  • 121. ರಾಯಗಿಡಿಮಿಡಿ, ಇದು ರಾಯಗಿಡಿಗ ಇರಬಹುದು , ವಿರಾಟ ಪರ್ವ,8,3
  • 122. ರಾಯಚೂಣಿ, ಕೌರವ ಸೇನೆ, ವಿರಾಟ ಪರ್ವ,5,2
  • 123. ರಾಯತನ, ದೊರೆತನ, ಆದಿ ಪರ್ವ,9,6
  • 124. ರಾಯದನುಜಘರಟ್ಟ, ರಾಜರೆಂಬ ರಾಕ್ಷಸರನ್ನು ಪುಡಿ ಮಾಡುವಂತಹವನು., ಭೀಷ್ಮ ಪರ್ವ,6,0
  • 125. ರಾಯದಳ, ರಾಜಸೇನೆ, ವಿರಾಟ ಪರ್ವ,8,49
  • 126. ರಾಯನ, ಧರ್ಮರಾಯನ, ದ್ರೋಣ ಪರ್ವ,2,33
  • 127. ರಾಯನ ಅನುಜರು, ಕೌರವನ ತಮ್ಮಂದಿರು, ಭೀಷ್ಮ ಪರ್ವ,7,18
  • 128. ರಾಯನಯ್ಯ, ದುರ್ಯೋಧನನ ತಂದೆ, ಗದಾ ಪರ್ವ,11,0
  • 129. ರಾಯರ, ನಾನಾ ದ್ವೀಪಗಳ ಒಡೆಯರಾಗಿದ್ದ ರಾಜರುಗಳ, ಸಭಾ ಪರ್ವ,2,123
  • 130. ರಾಯವನದಾವಾನಳ, ರಾಜರವಂಶವೆಂಬ ವನಕ್ಕೆ ಪ್ರಳಯಾಗ್ನಿಯಂತಿರುವವನು, ಗದಾ ಪರ್ವ,7,0
  • 131. ರಾಯಸ, ಸಂದೇಶ, ಉದ್ಯೋಗ ಪರ್ವ,11,14
  • 132. ರಾಯಸ, ರಾಜಪತ್ರ ರಾಜಸಂದೇಶದ ಪತ್ರ (ತೆಲುಗಿನಲ್ಲಿ ರಾಯಸ ವ್ರಾಯಸಮು=ರಾಜಲೇಖ), ವಿರಾಟ ಪರ್ವ,10,43
  • 133. ರಾವಣಾಂತಕ, ಶ್ರೀರಾಮ, ಭೀಷ್ಮ ಪರ್ವ,3,81
  • 134. ರಾವು, ಭಲೇ, ದ್ರೋಣ ಪರ್ವ,9,37
  • 135. ರಾವುಠಿ, ಭರ್ಜಿ, ಶಲ್ಯ ಪರ್ವ,2,54
  • 136. ರಾವುತ, ಕುದುರೆಸವಾರ, ಉದ್ಯೋಗ ಪರ್ವ,3,104
  • 137. ರಾವುತು, ಭಲೇ, ಗದಾ ಪರ್ವ,1,31
  • 138. ರಾವುತೋ, ಕೊಂಡಾಟದ ನುಡಿ, ಭೀಷ್ಮ ಪರ್ವ,4,71
  • 139. ರಾವ್ತರು, ರಾವುತರು, ಶಲ್ಯ ಪರ್ವ,2,27
  • 140. ರಾವ್ತರು, ಕುದುರೆಸವಾರರು, ಗದಾ ಪರ್ವ,1,16
  • 141. ರಿಂಗಣ, ನರ್ತನ, ಆದಿ ಪರ್ವ,12,15
  • 142. ರಿಂಗಣ ಕುಣಿದು, ನೃತ್ಯ ಮಾಡಿ, ದ್ರೋಣ ಪರ್ವ,6,31
  • 143. ರಿಂಗಣಗುಣಿ, ಜಾರಿಜಾರಿ ಸುತ್ತು ಹೊಡೆದು ಕುಣಿ, ಕರ್ಣ ಪರ್ವ,19,73
  • 144. ರಿಪು, ಶತ್ರು (ಪಾಂಡವರು), ವಿರಾಟ ಪರ್ವ,4,20
  • 145. ರಿಪು ಪುರವನು, ಶತ್ರುವಾದ ಜರಾಸಂಧನ ಪಟ್ಟಣವನ್ನು, ಸಭಾ ಪರ್ವ,3,3
  • 146. ರಿಪು ಬಲವಿಲಯ, ಶತ್ರುಬಲ ನಾಶ ಮಾಡುವವನು, ಭೀಷ್ಮ ಪರ್ವ,3,25
  • 147. ರಿಪುಕುಲದವಾನಳ, ಶತ್ರುವಂಶದ ಪಾಲಿಗೆ ಕಾಡುಕಿಚ್ಚು (ಭೀಮ) ಆನು, ವಿರಾಟ ಪರ್ವ,4,54
  • 148. ರಿಪುಜನಪ, ಶತ್ರುರಾಜ, ಗದಾ ಪರ್ವ,11,48
  • 149. ರಿಪುಜಾಲ, ಶತ್ರುಗಳ ಗುಂಪು, ಗದಾ ಪರ್ವ,10,1
  • 150. ರಿಪುನಿವಹ, ಶತ್ರುಸಮೂಹ, ಶಲ್ಯ ಪರ್ವ,2,21
  • 151. ರಿಪುಬಲ ದಿಶಾಪಟ, ಶತ್ರು ಸೇನೆಯ ಧೂಳೀಪಟ ಮಾಡುವವನು, ಭೀಷ್ಮ ಪರ್ವ,5,24
  • 152. ರಿಪುಬಲಜಲಧಿ, ಶತ್ರುಸೇನೆಯೆಂಬ ಸಾಗರ, ಭೀಷ್ಮ ಪರ್ವ,5,10
  • 153. ರಿಪುಭಂಜನ, ಶತ್ರುಸಂಹಾರ, ಗದಾ ಪರ್ವ,6,0
  • 154. ರಿಪುರಾಯ, ಶತ್ರುರಾಜ, ವಿರಾಟ ಪರ್ವ,9,8
  • 155. ರಿಪುರಾಯ ಮನ್ಮಥಭೀಮ, ರಿಪುರಾಯನೆಂಬ ಮನ್ಮಥನಿಗೆ ಈಶ್ವರನಂತಿರುವವನು. (ಮನ್ಮಥನನ್ನು ಹಣೆಗಣ್ಣಿನಿಂದ ಸುಟ್ಟ) ಶಿವ, ಸಭಾ ಪರ್ವ,13,9
  • 156. ರಿಪುವ್ರಜ, ಶತ್ರುಸಮೂಹ, ಗದಾ ಪರ್ವ,9,24
  • 157. ರುಚಿ, ಪ್ರಕಾಶ , ಗದಾ ಪರ್ವ,2,17, ,
  • 158. ರುಚಿರ, ಮನೋಹರವಾದ, ಆದಿ ಪರ್ವ,12,26
  • 159. ರುಜಾಂಗ, ರೋಗಿ, ಉದ್ಯೋಗ ಪರ್ವ,3,107
  • 160. ರುಣ, ಸಾಲ, ಆದಿ ಪರ್ವ,8,39
  • 161. ರುದ್ರನ ಅಗ್ಗದ ಕಣ್ಣ ಶಿಖಿ, ಪ್ರಳಯಕಾಲದ ರುದ್ರನ ಭಯಂಕರ ಕಣ್ಣಿನ ಬೆಂಕಿ, ಭೀಷ್ಮ ಪರ್ವ,9,7
  • 162. ರುಧಿರ, ರಕ್ತ., ವಿರಾಟ ಪರ್ವ,9,19
  • 163. ರುಧಿರಬಂಧುಗಳ, ರಕ್ತಧಾರೆಗಳ, ಭೀಷ್ಮ ಪರ್ವ,6,32
  • 164. ರೂಢಿ, ಪ್ರಸಿದ್ಧಿ., ಉದ್ಯೋಗ ಪರ್ವ,6,20
  • 165. ರೂಢಿಯಲ್ಲಿ ಚಪ್ಪೆಗೊಡಲಿ ಎಂಬರ್ಥದಲ್ಲಿದೆ ಆದರೆ ಇಲ್ಲಿ ಕತ್ತಿ ಎಂಬರ್ಥ ಬಳಸಿದೆ. ಕಡುಗಿ, ಉತ್ಸಾಹದಲ್ಲಿ, ಭೀಷ್ಮ ಪರ್ವ,4,34
  • 166. ರೂಢಿಸಿದ, ಹೆಸರಾಂತ, ಉದ್ಯೋಗ ಪರ್ವ,11,36
  • 167. ರೂಪ ಸೆರೆವಿಡಿದ, ಸಾಕಾರ ರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ, ಭೀಷ್ಮ ಪರ್ವ,3,66
  • 168. ರೂಪು, ಆಕೃತಿ., ಉದ್ಯೋಗ ಪರ್ವ,9,5
  • 169. ರೂವಾರಿಗೆ, ಅಲಂಕೃತ ಪಲ್ಲಕ್ಕಿ, ವಿರಾಟ ಪರ್ವ,10,68
  • 170. ರೂಹು, ರೂಪ, ವಿರಾಟ ಪರ್ವ,2,47
  • 171. ರೆಂಚೆ, ಪಕ್ಕ ರಕ್ಷೆ, ಗದಾ ಪರ್ವ,3,13
  • 172. ರೆಂಚೆ, ಪಕ್ಕರೆಕ್ಕೆ (ಮೈಕವಚ), ಭೀಷ್ಮ ಪರ್ವ,3,18
  • 173. ರೆಂಚೆ, ಆನೆಯ ಪಕ್ಕೆಗಳಿಗೆ ಹಾಕುವ ಬಟ್ಟೆಯ ಹೊದಿಕೆ, ದ್ರೋಣ ಪರ್ವ,3,52
  • 174. ರೇಣು, ಪರಾಗ, ಆದಿ ಪರ್ವ,12,15
  • 175. ರೇಣು ಜನನ, ಧೂಳಿನ ಉತ್ಪತ್ತಿ, ಗದಾ ಪರ್ವ,6,30
  • 176. ರೋದನಸರದ, ಅಳುವ ಸ್ವರದ, ಗದಾ ಪರ್ವ,11,28
  • 177. ರೋಧಿನಿ, ಅಳುವವಳು, ಉದ್ಯೋಗ ಪರ್ವ,3,107
  • 178. ರೋಮ, ಕೂದಲು, ಭೀಷ್ಮ ಪರ್ವ,6,40
  • 179. ರೋಮಾಂಚ, ಪುಳಕದಿಂದ ಮೈ ಕೂದಲುಗಳು ನಿಮಿರುವುದು, ಗದಾ ಪರ್ವ,5,31
  • 180. ರೋಮಾಳಿ, ಕೂದಲುಗಳ ಸಮೂಹ, ವಿರಾಟ ಪರ್ವ,3,105
  • 181. ರೋಮಾಳಿ, ಕೂದಲಗುಂಪು, ಉದ್ಯೋಗ ಪರ್ವ,3,111
  • 182. ರೋಷ ಪ್ರಕಟ ಪಾವಕ ವಿಸ್ಫುಲಿಂಗರು, ರೋಷವನ್ನು ಹೊರಸೂಸುವ ಬೆಂಕಿಯ ಕಿಡಿಯಂತೆ ಹೊಳೆಯುತ್ತಿದ್ದವರು, ವಿರಾಟ ಪರ್ವ,8,19
  • 183. ರೋಷಕ, ಸಿಟ್ಟಿನವನು, ಉದ್ಯೋಗ ಪರ್ವ,3,91
  • 184. ರೋಷವಹ್ನಿ, ರೋಷವೆಂಬ ಅಗ್ನಿ, ಗದಾ ಪರ್ವ,7,48
  • 185. ರೋಷಶಿಖಿಸ್ಫುಲಿಂಗ, ಕೋಪಾಗ್ನಿಯು ಕಿಡಿÀ, ಶಲ್ಯ ಪರ್ವ,3,59
  • 186. ರೋಷಶ್ವಾಸ, ಕೋಪದಿಂದ ಹೊರಬರುವ ಬಿಸಿಯುಸಿರು, ಗದಾ ಪರ್ವ,7,1
  • 187. ರೋಷಾಗ್ನಿ, ರೋಷದ ಬೆಂಕಿ, ಗದಾ ಪರ್ವ,11,68
  • 188. ರೋಷೋತ್ಕರ, ಹೆಚ್ಚಿದ ರೋಷ, ಗದಾ ಪರ್ವ,5,37
  • 189. ರೌಕುಳ, ಅಬ್ಬರ, ಗದಾ ಪರ್ವ,9,33
  • 190. ರೌದ್ರ, ಭೀಕರ, ಆದಿ ಪರ್ವ,9,12
  • 191. ರೌದ್ರ, ರೋಷ, ಆದಿ ಪರ್ವ,19,44
  • 192. ರೌದ್ರರಂಜನೆ, ಘೋರಮನರಂಜನೆ., ಭೀಷ್ಮ ಪರ್ವ,4,22
  • 193. ರೌರವ, ಭಯಂಕರವಾದ ನರಕ, ಆದಿ ಪರ್ವ,1,22
  • 194. ರೌರವಸಿಂಧು, ಘೋರ ನರಕವೆಂಬ ಸಾಗರ, ಭೀಷ್ಮ ಪರ್ವ,3,37
  • 195. ರೌಹಿಣೇಯ, ರೋಹಿಣಿಯ ಮಗ, ಗದಾ ಪರ್ವ,7,41
  • 196. ಲಂಘಿಸಿತು, ಹಾರಿತು, ಭೀಷ್ಮ ಪರ್ವ,5,26
  • 197. ಲಂಪಟ, ಆಸಕ್ತಿಯುಳ್ಳವನು, ವಿರಾಟ ಪರ್ವ,10,0
  • [೧][೨][೩]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ