<ಗದುಗಿನ ಭಾರತ ಪದಕೋಶ

ಲ, ಸಂಪಾದಿಸಿ

  • 1. ಲಂಘಿಸಿತು, ಹಾರಿತು, ಭೀಷ್ಮ ಪರ್ವ,5,26
  • 2. ಲಂಪಟ, ಆಸಕ್ತಿಯುಳ್ಳವನು, ವಿರಾಟ ಪರ್ವ,10,0
  • 3. ಲಂಪಟರು, ಗೀಳಿನವರು, ಭೀಷ್ಮ ಪರ್ವ,1,4
  • 4. ಲಂಬಳ, ಬಾಗಿಲಿನ ಚೌಕಟ್ಟು, ವಿರಾಟ ಪರ್ವ,10,47
  • 5. ಲಂಬಿಸು, ವಿಸ್ತಾರವಾಗು, ಗದಾ ಪರ್ವ,4,19, ,
  • 6. ಲಕುಟ, ಲಕುಡ, ಕರ್ಣ ಪರ್ವ,20,6
  • 7. ಲಕ್ಕ, ಲಕ್ಷ, ಕರ್ಣ ಪರ್ವ,15,3
  • 8. ಲಕ್ಕ, ಒಂದು ಲಕ್ಷ, ವಿರಾಟ ಪರ್ವ,4,58
  • 9. ಲಕ್ಷಣ, ವಿಶಿಷ್ಟ ಗುಣ, ಆದಿ ಪರ್ವ,12,18
  • 10. ಲಕ್ಷಣ, ಲಕ್ಷಣಕುಮಾರ, ದ್ರೋಣ ಪರ್ವ,5,73
  • 11. ಲಕ್ಷ್ಮಿಯ ನಾಡು, ಸಂಪದ್ಭರಿತ ಪ್ರದೇಶ, ವಿರಾಟ ಪರ್ವ,4,13
  • 12. ಲಕ್ಷ್ಯ, ಪಣ, ಗದಾ ಪರ್ವ,7,34
  • 13. ಲಕ್ಷ್ಯ, ಗುರಿ, ಭೀಷ್ಮ ಪರ್ವ,6,38
  • 14. ಲಕ್ಷ್ಯ, ಗುರಿ , ಭೀಷ್ಮ ಪರ್ವ,3,84
  • 15. ಲಗ್ಗೆ, ಬಹುವಾದ್ಯ, ಅರಣ್ಯ ಪರ್ವ,21,68
  • 16. ಲಗ್ಗೆ, ಮುತ್ತಿಗೆ , ಶಲ್ಯ ಪರ್ವ,3,73
  • 17. ಲಗ್ಗೆ, ವಾದ್ಯಧ್ವನಿಗಳ ಮೇಳ , ಗದಾ ಪರ್ವ,4,55
  • 18. ಲಗ್ಗೆ, ಧಾಳಿ, ಶಲ್ಯ ಪರ್ವ,2,58
  • 19. ಲಗ್ಗೆ ಮಸಗಿತು, ದಾಳಿ ಹೆಚ್ಚಿತು, ಭೀಷ್ಮ ಪರ್ವ,4,10
  • 20. ಲಗ್ಗೆಪರೆ, ರಣತಮ್ಮಟೆ, ಭೀಷ್ಮ ಪರ್ವ,8,33
  • 21. ಲಗ್ಗೆಯಲಿ, ಮೇಲಿಂದ ಮೇಲೆ ಬಿದ್ದು, ದ್ರೋಣ ಪರ್ವ,4,52
  • 22. ಲಗ್ಗೆವರೆ, ಲಗ್ಗೆ+ಹರೆ ವಾದ್ಯ (ಘೋಷ), ವಿರಾಟ ಪರ್ವ,4,33
  • 23. ಲಗ್ಗೆವರೆ, ವಾದ್ಯಘೋಷ, ವಿರಾಟ ಪರ್ವ,8,69
  • 24. ಲಗ್ಗೆವರೆ, ಯುದ್ಧಭೇರಿ, ವಿರಾಟ ಪರ್ವ,8,2
  • 25. ಲಗ್ನದೊಳಿರೆ, ಲಗ್ನದಲ್ಲಿರಲು, ಸಭಾ ಪರ್ವ,3,14
  • 26. ಲಘು, ಶೀಘ್ರ, ಆದಿ ಪರ್ವ,7,1
  • 27. ಲಘು, ಹಗುರ, ಉದ್ಯೋಗ ಪರ್ವ,4,9
  • 28. ಲಜ್ಜಿಸು, ನಾಚಿಕೆಗೊಳಿಸು ಆಣಿಗಳೆ, ಭೀಷ್ಮ ಪರ್ವ,4,18
  • 29. ಲಟಕಟಿಸು, ಹೀಗಳೆ, ಕರ್ಣ ಪರ್ವ,13,39
  • 30. ಲಟಕಟಿಸು, ಬಳಲು, ಕರ್ಣ ಪರ್ವ,25,6
  • 31. ಲಟಕಟಿಸು, ಬಳಲು, ಕರ್ಣ ಪರ್ವ,7,24, ,
  • 32. ಲಟಕಟಿಸು, ಅಬ್ಬರಿಸು, ಅರಣ್ಯ ಪರ್ವ,12,40
  • 33. ಲಟಕಟಿಸು, ಆಯಾಸಗೊಳ್ಳು, ದ್ರೋಣ ಪರ್ವ,2,77
  • 34. ಲಟಕಟಿಸು, ಆತುರಪಡು., ಕರ್ಣ ಪರ್ವ,22,17
  • 35. ಲಟಕಟಿಸು, ಚಡಪಡಿಸು, ಆದಿ ಪರ್ವ,13,58
  • 36. ಲಟಕಟಿಸು, ಚಕಿತರಾಗು, ಆದಿ ಪರ್ವ,18,18
  • 37. ಲತಾಂಗಿ, ಬಳ್ಳಿಯಂತೆ ಕೋಮಲವಾದ ಶರೀರವುಳ್ಳವಳು, ಆದಿ ಪರ್ವ,11,21
  • 38. ಲತಾಳಿ, ಬಳ್ಳಿಗಳ ಸಮೂಹ, ಗದಾ ಪರ್ವ,9,1
  • 39. ಲಯ, ವಿನಾಶ, ವಿರಾಟ ಪರ್ವ,7,1
  • 40. ಲಯಕೃತಾಂತ, ಪ್ರಳಯ ಕಾಲದ ಯಮ, ಗದಾ ಪರ್ವ,9,40
  • 41. ಲಯಕೃತಾಂತ, ಪ್ರಳಯಕಾಲದ ಯಮ, ಭೀಷ್ಮ ಪರ್ವ,2,13
  • 42. ಲಯಕೃತಾಂತ, ಪ್ರಳಯಕಾಲದ ಯಮ., ಗದಾ ಪರ್ವ,1,9
  • 43. ಲಲನೆ, ಹೆಂಗಸು (ಇಲ್ಲಿ, ಗದಾ ಪರ್ವ,11,62
  • 44. ಲಲಾಮ, ತಿಲಕ, ಉದ್ಯೋಗ ಪರ್ವ,10,4
  • 45. ಲಲಿತ, ಸುಂದರ, ಗದಾ ಪರ್ವ,5,8,
  • 46. ಲಲಿತಕಂಠ, ಚೆಲುವಿನ ಕೊರಳು, ಭೀಷ್ಮ ಪರ್ವ,3,76
  • 47. ಲಲಿತಸ್ತರಣ, ಮೆದುವಾದ ಹಾಸಿಗೆ, ಗದಾ ಪರ್ವ,9,28
  • 48. ಲವ, ತುಸು/ಸ್ವಲ್ಪ, ಉದ್ಯೋಗ ಪರ್ವ,4,24
  • 49. ಲವಣಿ, ಯುದ್ಧದ ಒಂದು ವರಸೆ, ಗದಾ ಪರ್ವ,7,35
  • 50. ಲವಣಿಸು, ಹೊಮ್ಮು, ಕರ್ಣ ಪರ್ವ,23,31
  • 51. ಲವಣೆ, ನುಸುಳುವಿಕೆ, ಸಭಾ ಪರ್ವ,2,95
  • 52. ಲವಲವಿಕೆ, ಹುರುಪು/ಉತ್ಸಾಹ, ಉದ್ಯೋಗ ಪರ್ವ,8,6
  • 53. ಲವುಡಿ, ಆಯುಧ ವಿಶೇಷ, ಅರಣ್ಯ ಪರ್ವ,19,53
  • 54. ಲಸದಾಚಾರ, ಸದಾಚಾರ, ಭೀಷ್ಮ ಪರ್ವ,3,87
  • 55. ಲಹರಿ, ಕಾಂತಿಯುಳ್ಳ ಮಿಂಚು, ಆದಿ ಪರ್ವ,11,29
  • 56. ಲಳಿ, ಆವೇಗ , ಶಲ್ಯ ಪರ್ವ,3,73
  • 57. ಲಳಿ, ರಭಸ, ಗದಾ ಪರ್ವ,7,51, ,
  • 58. ಲಳಿ, ಕೌಶಲ್ಯ, ಅರಣ್ಯ ಪರ್ವ,6,28
  • 59. ಲಳಿ, ತಡೆಯಿಲ್ಲದ, ಗದಾ ಪರ್ವ,7,20
  • 60. ಲಳಿಮಸಗಿ, ಉತ್ಸಾಹದಲ್ಲಿ ವಿಜೃಂಭಿಸುತ್ತ, ಭೀಷ್ಮ ಪರ್ವ,8,2
  • 61. ಲಳಿಯ ಲಹರಿ, ಕಾಂತಿಯ ಅಲೆ, ಸಭಾ ಪರ್ವ,12,35
  • 62. ಲಾಕ್ಷಾ ಭüವನ, ಅರಗಿನ ಮನೆ, ಆದಿ ಪರ್ವ,17,7
  • 63. ಲಾಗನು, ಕೌಶಲ, ಭೀಷ್ಮ ಪರ್ವ,3,
  • 64. ಲಾಗಿಸು, ಸಿದ್ಧನಾಗು, ಕರ್ಣ ಪರ್ವ,17,2
  • 65. ಲಾಗಿಸು, ಹಾರು, ಕರ್ಣ ಪರ್ವ,13,25
  • 66. ಲಾಗಿಸು, ಹಾರು , ಗದಾ ಪರ್ವ,7,20,
  • 67. ಲಾಗಿಸು, ತಾಗಿಸು, ಗದಾ ಪರ್ವ,7,18
  • 68. ಲಾಗಿಸುತ, ಚಾಚುತ್ತಾ, ದ್ರೋಣ ಪರ್ವ,3,37
  • 69. ಲಾಗು, ಕಡು, ಭೀಷ್ಮ ಪರ್ವ,3,41
  • 70. ಲಾಗು, ಕೌಶಲ , ಆದಿ ಪರ್ವ,5,12
  • 71. ಲಾಗು, ಚಲನೆ, ಗದಾ ಪರ್ವ,1,18
  • 72. ಲಾಗು, ಚಾತುರ್ಯ, ಭೀಷ್ಮ ಪರ್ವ,2,23
  • 73. ಲಾಗುಮಿಗು, ಅತಿಶಯವಾಗು, ವಿರಾಟ ಪರ್ವ,10,54
  • 74. ಲಾಗುವೇಗ, ಅತಿಶಯವಾದ ಕೈಚಳಕ, ಆದಿ ಪರ್ವ,15,29
  • 75. ಲಾಗುವೇಗ, ಕೈಚಳಕ, ಉದ್ಯೋಗ ಪರ್ವ,3,103
  • 76. ಲಾಗುವೇಗ, ಕ್ಷಿಪ್ರ ಚಲನೆಯ ಚಳಕ, ವಿರಾಟ ಪರ್ವ,7,29
  • 77. ಲಾಗುವೇಗದ, ವೇಗದ ಕೈಚಳಕದ ಕಾಲಾನಲ, ಸಭಾ ಪರ್ವ,1,79
  • 78. ಲಾಘವ, ಜಾಣ್ಮೆ, ದ್ರೋಣ ಪರ್ವ,6,34
  • 79. ಲಾಘವ, ಕೈಚಳಕ, ವಿರಾಟ ಪರ್ವ,7,44
  • 80. ಲಾಜ, ಅರಳು, ಸಭಾ ಪರ್ವ,2,53
  • 81. ಲಾಜಾವರುಷ, ಅರಳಿನ ಮಳೆ, ಭೀಷ್ಮ ಪರ್ವ,4,92
  • 82. ಲಾಜೆ, ಅರಳು, ಸಭಾ ಪರ್ವ,13,7
  • 83. ಲಾಭ, ಪ್ರಾಪ್ತಿ, ಆದಿ ಪರ್ವ,15,2
  • 84. ಲಾಮಚ, (ಲಾಮಂಚ)ಒಂದು ಬಗೆಯ ಸುವಾಸನೆಯ ಬೇರುಳ್ಳ ಹುಲ್ಲು, ಆದಿ ಪರ್ವ,12,11
  • 85. ಲಾಯ, ಕುದುರೆ ಆನೆಗಳನ್ನು ಕಟ್ಟುವ ಜಾಗ, ಗದಾ ಪರ್ವ,9,39
  • 86. ಲಾವಕರು, ದುಷ್ಟರು, ಉದ್ಯೋಗ ಪರ್ವ,6,6
  • 87. ಲಾವಕರು, ಚಾಡಿಹೇಳುವವರು, ಆದಿ ಪರ್ವ,8,51
  • 88. ಲಾವಣಿಗೆ, ಸಮಾವೇಶ, ಕರ್ಣ ಪರ್ವ,8,28
  • 89. ಲಾವಣಿಗೆ, ಸಂಗ್ರಹ, ಅರಣ್ಯ ಪರ್ವ,10,57
  • 90. ಲಾವಣಿಗೆ, ಆಡಂಬರ ವೈಭವ, ಭೀಷ್ಮ ಪರ್ವ,9,31
  • 91. ಲಾವಣಿಗೆ, ಜೋರಿನ, ಶಲ್ಯ ಪರ್ವ,2,21
  • 92. ಲಾವಣಿಗೆ, ಧಾರೆ, ಭೀಷ್ಮ ಪರ್ವ,2,17
  • 93. ಲಾವಣಿಗೆಗೊಳ್ಳು, ವಶಕ್ಕೆ ತೆಗೆದುಕೊ, ಕರ್ಣ ಪರ್ವ,14,28
  • 94. ಲಾವಣ್ಯಾಂಬು, ಬೆವರ ಹನಿ, ಗದಾ ಪರ್ವ,11,17
  • 95. ಲಾವುಗೆ, ಪುರಲೆ, ಆದಿ ಪರ್ವ,20,53
  • 96. ಲಾಳರಾವುತ, ಲಾಳದೇಶದ ರಾವುತರು, ಭೀಷ್ಮ ಪರ್ವ,4,71
  • 97. ಲಾಳವಿಂಡಿಗೆ, ಅಗುಳಿಯ ರೀತಿಯ ಆಯುಧ, ಭೀಷ್ಮ ಪರ್ವ,4,83
  • 98. ಲಿಪಿಜ್ಞ, ಬರಹ ಬಲ್ಲವನ್ನು (ಅಕ್ಷರಜ್ಞ), ಉದ್ಯೋಗ ಪರ್ವ,3,89
  • 99. ಲೀಲೆ, ಕ್ರೀಡೆ, ಆದಿ ಪರ್ವ,13,26
  • 100. ಲುಳಿ, ಬಲು ಚುರುಕಿನಿಂದ, ಭೀಷ್ಮ ಪರ್ವ,3,17
  • 101. ಲುಳಿ, ಶೀಘ್ರಗಮನ, ಅರಣ್ಯ ಪರ್ವ,5,13
  • 102. ಲುಳಿ, ಕೈಚಳಕ, ಕರ್ಣ ಪರ್ವ,19,35
  • 103. ಲುಳಿ, ತೀಕ್ಷ್ಣತೆ, ಭೀಷ್ಮ ಪರ್ವ,4,45
  • 104. ಲುಳಿ, ಥಳಥಳಿಸುವ, ಭೀಷ್ಮ ಪರ್ವ,3,20
  • 105. ಲುಳಿ, ಚುರುಕು, ಕರ್ಣ ಪರ್ವ,21,12
  • 106. ಲುಳಿ, ಚಾಕಚಕ್ಯತೆ, ಆದಿ ಪರ್ವ,7,41
  • 107. ಲುಳಿತ, ಶೋಭಿಸುವ, ಭೀಷ್ಮ ಪರ್ವ,8,3
  • 108. ಲುಳಿತ, ವ್ಯಾಪಿಸಿದ, ಆದಿ ಪರ್ವ,15,34
  • 109. ಲುಳಿತ, ತೊಟ್ಟಿಕ್ಕಿದ, ಉದ್ಯೋಗ ಪರ್ವ,7,27
  • 110. ಲುಳಿಯ, ಹರಡಿದ, ದ್ರೋಣ ಪರ್ವ,5,13
  • 111. ಲುಳಿಯಂಬು, ವೇಗದ ಬಾಣ, ಕರ್ಣ ಪರ್ವ,18,21
  • 112. ಲುಳಿವಡೆದ, ವೇಗ ಪಡೆದುಕೊಂಡ, ಭೀಷ್ಮ ಪರ್ವ,3,2
  • 113. ಲುಳಿಸಾರತರ ಲಂಬಿಸಿತು, ಗತಿ ಮಂದವಾಯಿತು., ದ್ರೋಣ ಪರ್ವ,10,23
  • 114. ಲೂನ, ಕತ್ತರಿಸಿದ, ಭೀಷ್ಮ ಪರ್ವ,6,3
  • 115. ಲೆಕ್ಕಿಸು, ಲೆಕ್ಕಹಾಕು, ಗದಾ ಪರ್ವ,8,14
  • 116. ಲೆಪ್ಪದ ಬಲ, ಎರಕವಿಟ್ಟ ಗೊಂಬೆಗಳಂತಿರುವ ಸೈನ್ಯ, ದ್ರೋಣ ಪರ್ವ,17,12
  • 117. ಲೆಪ್ಪದುರಗ, ಹಾವಿನ ಬೊಂಬೆ, ದ್ರೋಣ ಪರ್ವ,4,38
  • 118. ಲೇಖ, ಬರೆಹ, ಆದಿ ಪರ್ವ,11,14
  • 119. ಲೇಸಾಯ್ತು, ಒಳ್ಳೆಯದಾಯ್ತು, ಆದಿ ಪರ್ವ,9,21
  • 120. ಲೇಸು, ಒಳ್ಳೆಯದು, ಗದಾ ಪರ್ವ,11,33
  • 121. ಲೇಸು ಹೊಲ್ಲೆಹ, ಒಳ್ಳೆಯದು ಕೆಟ್ಟದ್ದು, ವಿರಾಟ ಪರ್ವ,3,2
  • 122. ಲೊಟ್ಟಾಲೊಟ್ಟಿ, ರಾಶಿರಾಶಿಯಾಗಿ, ಭೀಷ್ಮ ಪರ್ವ,4,81
  • 123. ಲೋಕತ್ರಯ, ಸ್ವರ್ಗ, ಗದಾ ಪರ್ವ,10,21, ,
  • 124. ಲೋಕತ್ರಿತಯ, ಮೂರು ಲೋಕಗಳು , ಆದಿ ಪರ್ವ,4,60, , , ಪಾತಾಳ,
  • 125. ಲೋಕವಾರ್ತೆ, ಜನಸೂಕ್ತಿ, ವಿರಾಟ ಪರ್ವ,4,16
  • 126. ಲೋಕಾಂತರ, ಪರಲೋಕ, ಉದ್ಯೋಗ ಪರ್ವ,4,90
  • 127. ಲೋಕಾಯತ, ನಾಸ್ತಿಕ, ಆದಿ ಪರ್ವ,8,51
  • 128. ಲೋಕಾಲೋಕ ಪರ್ವತ, ಚಕ್ರವಾಳ ಪರ್ವತ , ಅರಣ್ಯ ಪರ್ವ,7,53
  • 129. ಲೋಕೋತ್ತರ, ಅತಿಶಯವಾಗಿ, ಅರಣ್ಯ ಪರ್ವ,11,29
  • 130. ಲೋಗನೆ, ಬೇರೆಯವನೆ, ಉದ್ಯೋಗ ಪರ್ವ,2,12
  • 131. ಲೋಗರ, ಜನರ , ವಿರಾಟ ಪರ್ವ,3,64, ,
  • 132. ಲೋಗರನಿಂದೆ, ಜನಾಪವಾದ, ಭೀಷ್ಮ ಪರ್ವ,3,39
  • 133. ಲೋಗರು, ಲೋಕದ ಜನರು, ಆದಿ ಪರ್ವ,10,19
  • 134. ಲೋಗರು, ಪರರು, ಉದ್ಯೋಗ ಪರ್ವ,3,110
  • 135. ಲೋಚನ, ದೃಶ್ಯ ಲಕ್ಷ್ಯ, ಆದಿ ಪರ್ವ,7,5
  • 136. ಲೋಚನವಾರಿಧಾರೆ, ಕಣ್ಣೀರಿನ ಪ್ರವಾಹ, ಗದಾ ಪರ್ವ,12,5
  • 137. ಲೋಚು, ಮೈ ಮೇಲಿನ ಕೂದಲನ್ನು ಬುಡಸಮೇತ ಕೀಳು, ಅರಣ್ಯ ಪರ್ವ,10,57
  • 138. ಲೋಭ, ದುರಾಸೆ, ಉದ್ಯೋಗ ಪರ್ವ,9,9
  • 139. ಲೋಲ, ಕೂಡಿದ, ಉದ್ಯೋಗ ಪರ್ವ,6,1
  • 140. ಲೋಲನಾಪರಿಕರ್ಮತರು, ಸಂಸಾರವೆಂಬ ವೃಕ್ಷ, ಕರ್ಣ ಪರ್ವ,6,1
  • 141. ಲೋಲಲೋಚನೆ, ಚಂಚಲಗಣ್ಣಿನ (ಉತ್ತರೆ), ವಿರಾಟ ಪರ್ವ,5,28
  • 142. ಲೋಲುಪ, ಆಸಕ್ತ, ಉದ್ಯೋಗ ಪರ್ವ,8,52
  • 143. ಲೋಲುಪ, ಆಸೆಬುರುಕ, ಉದ್ಯೋಗ ಪರ್ವ,8,40
  • 144. ಲೋಲುಪ, ತೊಡಗಿದ, ಉದ್ಯೋಗ ಪರ್ವ,3,118
  • 145. ಲೋಲುಪತೆ, ಅತ್ಯಾಸಕ್ತಿ, ಉದ್ಯೋಗ ಪರ್ವ,8,16
  • 146. ಲೋಲುಪತೆ, ದುರಾಸೆ, ಉದ್ಯೋಗ ಪರ್ವ,9,19
  • 147. ಲೋವೆ, ಇಳಿಜಾರಾದ ಸೂರು, ಸಭಾ ಪರ್ವ,13,25
  • 148. ಲೋವೆ, ಇಳಿಜಾರಾದ ಮಾಡು, ಆದಿ ಪರ್ವ,12,9
  • 149. ಲೋವೆ, ಚಾವಣಿಯ ಚೌಕಟ್ಟು, ವಿರಾಟ ಪರ್ವ,10,47
  • 150. ಲೋಹ ಗದಾಭಿಹತಿಗೆ, ಲೋಹದ ಗದೆಯ ಹೊಡೆತಕ್ಕೆ, ಗದಾ ಪರ್ವ,8,1
  • 151. ಲೋಹ ಸೀಸಕ, ಲೋಹದ ಶೀರ್ಷಕ (ತಲೆ ಕವಚ), ಭೀಷ್ಮ ಪರ್ವ,4,62
  • 152. ಲೋಹದಬಿಂಬ, ಕೆಂಪಾದ ಆಕೃತಿ, ಭೀಷ್ಮ ಪರ್ವ,5,27
  • 153. ಲೋಳೆ, ಜೊಲ್ಲು, ಕರ್ಣ ಪರ್ವ,25,5
  • 154. ಲೌಡಿ, ಅಂಕುಶ, ಉದ್ಯೋಗ ಪರ್ವ,11,19
  • 155. ಲೌಡಿ, ಕಬ್ಬಿಣದ ಆಯುಧ, ದ್ರೋಣ ಪರ್ವ,3,3
  • 156. ಲೌಡಿ, ಕಬ್ಬಿಣದ ಒಂದು ಆಯುಧ, ಗದಾ ಪರ್ವ,1,52
  • 157. ಲೌಡಿ, ದಪ್ಪವಾದ ಕಬ್ಬಿಣದ ಆಯುಧಗಳು, ಭೀಷ್ಮ ಪರ್ವ,4,74
  • 158. ಲೌಡಿ, ದೊಣ್ಣೆಯುಂಥ ಉಕ್ಕಿನ ಆಯುಧ, ಭೀಷ್ಮ ಪರ್ವ,4,62
  • 159. ಲೌಡಿ, ದೊಣ್ಣೆಯಂಥ ಆಯುಧ, ಭೀಷ್ಮ ಪರ್ವ,4,80
  • 160. ಲೌಡೆ, ಕಬ್ಬಿಣದ ಆಯುಧ, ಗದಾ ಪರ್ವ,1,35
  • 161. ಲೌಲ್ಯತೆ, ಲೋಲುಪತೆ, ವಿರಾಟ ಪರ್ವ,5,13
  • 162. ವಂಕ, ಭಾಗ, ಗದಾ ಪರ್ವ,4,18,
  • 163. ವಂಕಿ, ಮೀನು ಹಿಡಿಯುವ ಗಾಳ, ಆದಿ ಪರ್ವ,8,76
  • 164. ವಂಗಡ, ಬೇರೆÀ, ಶಲ್ಯ ಪರ್ವ,3,51

[೧][೨][೩]

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ