ಹ - ಹ
ಸಂಪಾದಿಸಿ- 1. ಸ್ವೇದಜಲ, ಬೆವರು, ಭೀಷ್ಮ ಪರ್ವ,3,4
- 2. ಹಂಗ, ಶಕುನ ಪಕ್ಷಿ, ಉದ್ಯೋಗ ಪರ್ವ,1,18
- 3. ಹಂಗ, ಕಳಿಂಗ ಪಕ್ಷಿ, ಸಭಾ ಪರ್ವ,13,2
- 4. ಹಂಗನ ಗರಿ, ಶಕುನದ ಪಕ್ಷಿಯ ಗರಿ, ದ್ರೋಣ ಪರ್ವ,5,13
- 5. ಹಂಗಿಗ, ದಾಕ್ಷಿಣ್ಯಕ್ಕೆ ಒಳಗಾದವನು, ವಿರಾಟ ಪರ್ವ,9,29
- 6. ಹಂಗಿಗರು, ಋಣಿಗಳು, ವಿರಾಟ ಪರ್ವ,8,8
- 7. ಹಂಗಿನ, ಋಣದ, ಭೀಷ್ಮ ಪರ್ವ,9,42
- 8. ಹಂಗು, ದಾಕ್ಷಿಣ್ಯ., ಉದ್ಯೋಗ ಪರ್ವ,5,7
- 9. ಹಂಜರಕೂಳಿ, ಮೀನು ಹಿಡಿಯುವ ಬುಟ್ಟಿ, ಕರ್ಣ ಪರ್ವ,22,28
- 10. ಹಂತಿ, ಪಂಕ್ತಿ, ಕರ್ಣ ಪರ್ವ,4,22
- 11. ಹಂತಿಕಾರ, ಸಾಲಿನಲ್ಲಿ ನಿಲ್ಲುವವನು, ಕರ್ಣ ಪರ್ವ,22,26
- 12. ಹಂತಿಯ ಕೂಳು, ಸಾಲಿನಲ್ಲಿ ಕುಳಿತು ಮಾಡುವ ಊಟ, ಗದಾ ಪರ್ವ,11,54
- 13. ಹಂಬಲಿಸು, ಉತ್ಕಟವಾಗಿ ಆಶಿಸು, ಆದಿ ಪರ್ವ,8,42
- 14. ಹಂಸ ಡಿಬಿಕರ ಪೌಂಡ್ರಕರ, ಹಂಸ , ಸಭಾ ಪರ್ವ,2,24,
- 15. ಹಂಸಗಳ ತೂಳ, ತುಪ್ಪಳದಿಂದ ಮಾಡಿದ ಮೃದು ಹಾಸಿಗೆ, ಗದಾ ಪರ್ವ,3,21
- 16. ಹಂಸತೂಳ, ಹಂಸತೂಲಿಕಾತಲ್ಪ, ಗದಾ ಪರ್ವ,3,21
- 17. ಹಂಸತ್ವ, ಮೋಕ್ಷ, ಸಭಾ ಪರ್ವ,9,24
- 18. ಹಕ್ಕರಿಕೆ, ಪಕ್ಕ ರಕ್ಷೆ, ಗದಾ ಪರ್ವ,3,13
- 19. ಹಕ್ಕರಿಕೆ, ಆನೆ ಕುದುರೆಗಳನ್ನು ರಕ್ಷಿಸುವ ಸಾಧನ, ದ್ರೋಣ ಪರ್ವ,8,45
- 20. ಹಕ್ಕರಿಕೆ, ಕುದುರೆಯ ಜೇನು, ದ್ರೋಣ ಪರ್ವ,15,18
- 21. ಹಕ್ಕರಿಕೆ, ಕುದುರೆಯ ಹಲ್ಲಣ (ಪಕ್ಷರಕ್ಷ, ಶಲ್ಯ ಪರ್ವ,2,33
- 22. ಹಕ್ಕರಿಕೆ, ಕುದುರೆಗಳನ್ನು ರಕ್ಷಿಸುವ ಸಾಧನÉ, ಗದಾ ಪರ್ವ,1,16
- 23. ಹಕ್ಕರಿಕೆ, ಗುಳ, ಭೀಷ್ಮ ಪರ್ವ,5,37
- 24. ಹಕ್ಕಲಾಗು, ನಿರ್ಜನವಾಗು, ಭೀಷ್ಮ ಪರ್ವ,4,43
- 25. ಹಕ್ಕಲಾದವರು, ಚದುರಿದವರು, ದ್ರೋಣ ಪರ್ವ,13,45
- 26. ಹಕ್ಕಲು, ಬೆಳೆಕೊಯ್ದಿರುವ ಜಮೀನು, ಶಲ್ಯ ಪರ್ವ,1,26
- 27. ಹಕ್ಕಲು, ಬೆಳೆಕೊಯ್ದ, ಗದಾ ಪರ್ವ,1,67
- 28. ಹಕ್ಕೆ, ಹಾಸಿಗೆ, ಉದ್ಯೋಗ ಪರ್ವ,9,35
- 29. ಹಗರಣ, ನಿಂದೆ, ಗದಾ ಪರ್ವ,11,40
- 30. ಹಗರು, ಹುರುಪು, ದ್ರೋಣ ಪರ್ವ,1,42
- 31. ಹಗಲ ಹೂಳಿದರು, ಬಾಣದ ಮಳೆಯಿಂದ ಕತ್ತಲೆ ಉಂಟು ಮಾಡಿದರು, ಭೀಷ್ಮ ಪರ್ವ,4,99
- 32. ಹಗಲುಳುಕು, ಹಗಲಿನಲ್ಲಿ ನಡುಕ, ಗದಾ ಪರ್ವ,8,4
- 33. ಹಗಿನ, ಮರದಲ್ಲಿ ಜಿನುಗುವ ಅಂಟು, ಸಭಾ ಪರ್ವ,10,47
- 34. ಹಗೆ, ಶತ್ರುತ್ವ, ಗದಾ ಪರ್ವ,11,40
- 35. ಹಗೆ, ಶತ್ರುತ್ವ, ಗದಾ ಪರ್ವ,5,29
- 36. ಹಗೆಬೆಳೆದ, ವೈರತ್ವ ಬೆ, ಗದಾ ಪರ್ವ,12,2
- 37. ಹಗೆಯಾದವರು, ಶತ್ರುಗಳಾಗಿದ್ದವರು, ಸಭಾ ಪರ್ವ,2,67
- 38. ಬಾಹೆ, ಹೊರಗೆ, ಶಲ್ಯ ಪರ್ವ,2,9
- 39. ಹಚ್ಚಿಕೊಟ್ಟನು, ತಂದುಕೊಟ್ಟನು, ಭೀಷ್ಮ ಪರ್ವ,6,46
- 40. ಹಜ್ಜೆಯನು ಇತ್ತು ತೆಗೆವg, ಹೆಜ್ಜೆ ಮುಂದಿಟ್ಟು ಹಿಂದಕ್ಕೆ ಸರಿವರೆ, ಭೀಷ್ಮ ಪರ್ವ,9,6
- 41. ಹಡಪ, ತಾಂಬೂಲದ ಚೀಲ , ಅರಣ್ಯ ಪರ್ವ,8,7
- 42. ಹಡಪಗ, ತಾಂಬೂಲ ಹಿಡಿದಿರುವವನು, ಕರ್ಣ ಪರ್ವ,24,32
- 43. ಹಡಪವಳ, ಸಂಚಿ ಜನ, ಸಭಾ ಪರ್ವ,1,58
- 44. ಹಡಪಿಗ, ಅವಶ್ಯ ವಸ್ತುಗಳನ್ನುಳ್ಳ ಚರ್ಮದ ಚೀಲವನ್ನು ಒಯ್ಯುವವನು, ಶಲ್ಯ ಪರ್ವ,1,8
- 45. ಹಡಪಿಗ, ರಾಜರು ಮುಂತಾದ ಹಿರಿಯರಿಗೆ ಅವಶ್ಯವಾದ ವಸ್ತುಗಳನ್ನು ಚರ್ಮದ ಚೀಲದಲ್ಲಿ (ಹಡಪ) ಹಾಕಿಕೊಂಡು ಅವರ ಸಮೀಪದಲ್ಲಿರುತ್ತಿದ್ದವ, ಗದಾ ಪರ್ವ,2,2
- 46. ಹಡಪಿಗ, ತಮ್ಮ ಯಜಮಾನರಿಗೆ ಅವಶ್ಯವುಳ್ಳ ವಸ್ತುಗಳನ್ನು ಹೊಂದಿರುವ ಚರ್ಮದ ಚೀಲ, ಗದಾ ಪರ್ವ,2,40
- 47. ಹಡೆಯಿರಿ, ಗಳಿಸಿರಿ, ಭೀಷ್ಮ ಪರ್ವ,9,30
- 48. ಹಣಗಿ, ಬಾಗಿ, ಭೀಷ್ಮ ಪರ್ವ,4,21
- 49. ಹಣಗಿದರು, ಅಡಗಿಕೊಂಡರು, ಸಭಾ ಪರ್ವ,16,57
- 50. ಹಣವಿಗೆ, ಹಣಕ್ಕಾಗಿ, ಭೀಷ್ಮ ಪರ್ವ,1,38
- 51. ಹಣಿ, ಬಡಿದುಹಾಕು, ಸಭಾ ಪರ್ವ,14,41
- 52. ಹಣಿ, ಧ್ವಂಸಮಾಡು, ಆದಿ ಪರ್ವ,8,40
- 53. ಹಣಿಗು, ಹೊಂಚುಹಾಕು, ಆದಿ ಪರ್ವ,8,40
- 54. ಹಣಿದ, ಗುಂಪು, ಗದಾ ಪರ್ವ,4,47, ,
- 55. ಹಣಿದವಾಡಲಿ, ಕತ್ತರಿಸಿಹಾಕಲಿ, ಗದಾ ಪರ್ವ,8,33
- 56. ಹಣಿದವಾಡು, ಕತ್ತರಿಸು, ಗದಾ ಪರ್ವ,3,19
- 57. ಹಣಿದು, ಹೊಡೆದು, ಆದಿ ಪರ್ವ,7,58
- 58. ಹಣಿಯಲಿ, ನಾಶವಾಗಲಿ, ಗದಾ ಪರ್ವ,11,47
- 59. ಹಣುಗು, ಹಿಂದೆಗೆ, ಕರ್ಣ ಪರ್ವ,25,9
- 60. ಹಣುಗು, ಇಣುಕು, ಗದಾ ಪರ್ವ,4,47
- 61. ಹತಮಹೀಶರು, ಮರಣ ಹೊಂದಿದ ರಾಜರು., ಗದಾ ಪರ್ವ,12,21
- 62. ಹತಿ, ತಾಳ., ಕರ್ಣ ಪರ್ವ,7,23
- 63. ಹತ್ತರಿಕೆ, ಹೊಳಪಾದ ಮೈ., ಶಲ್ಯ ಪರ್ವ,2,62
- 64. ಹತ್ತಲಿ, ಆರಂಭವಾಗಲಿ, ಆದಿ ಪರ್ವ,15,42
- 65. ಹತ್ತಳ, ಚಾವಳಿ, ಉದ್ಯೋಗ ಪರ್ವ,11,18
- 66. ಹತ್ತಾಹತ್ತಿ, ಮಲ್ಲಯುದ್ಧ, ಸಭಾ ಪರ್ವ,2,93
- 67. ಹತ್ತಿಗೆ, ಸೇರಿಕೆಯಾದ ಜಾಗ, ಶಲ್ಯ ಪರ್ವ,2,6
- 68. ಹತ್ತಿಗೆ, ಬಂಧನ, ಗದಾ ಪರ್ವ,11,10
- 69. ಹತ್ತಿಗೆ, ಕಟ್ಟುಗಳು, ಕರ್ಣ ಪರ್ವ,3,31
- 70. ಹತ್ತಿದವು, ಲೆಕ್ಕಕೆ ಸಿಕ್ಕಿದವು, ಶಲ್ಯ ಪರ್ವ,2,7
- 71. ಹತ್ತಿದವು, ಹತ್ತಿಬಿಟ್ಟವು, ಸಭಾ ಪರ್ವ,3,30
- 72. ಹತ್ತಿಸು, ಅಂಟಿಸು, ಅರಣ್ಯ ಪರ್ವ,3,18
- 73. ಹತ್ತು, ಮುಟ್ಟು, ಆದಿ ಪರ್ವ,13,59
- 74. ಹತ್ತುಗೆ, ಸೇರಿಕೆ, ಶಲ್ಯ ಪರ್ವ,2,26
- 75. ಹತ್ತೆ, ಸಮೀಪ , ಗದಾ ಪರ್ವ,12,16
- 76. ಹದನ, ಸಮಾಚಾರ , ಗದಾ ಪರ್ವ,4,2
- 77. ಹದನ, ಸಂಗತಿ, ಗದಾ ಪರ್ವ,11,46
- 78. ಹದನ, ಸ್ಥಿತಿ , ಗದಾ ಪರ್ವ,6,4, , , ಕೆಲಸ.,
- 79. ಹದನ, ವಾರ್ತೆ, ಗದಾ ಪರ್ವ,4,29, ,
- 80. ಹದನ, ರೀತಿ , ವಿರಾಟ ಪರ್ವ,7,26
- 81. ಹದನ, ಕೆಲಸ , ಗದಾ ಪರ್ವ,11,32
- 82. ಹದನಹುದು, ಆ ರೀರಿ ಕಾಣುತ್ತದೆ., ವಿರಾಟ ಪರ್ವ,4,42
- 83. ಹದನಾಯ್ತು, ಹೀಗಾಯಿತು, ದ್ರೋಣ ಪರ್ವ,7,26
- 84. ಹದನು, ಸರಿಯಾದ ರೀತಿ., ಉದ್ಯೋಗ ಪರ್ವ,6,2
- 85. ಹದನು, ಪ್ರಕೃತ ಕಾರ್ಯ, ಭೀಷ್ಮ ಪರ್ವ,1,3
- 86. ಹದನು, ಔಚಿತ್ಯ, ಆದಿ ಪರ್ವ,18,24
- 87. ಹದವಳೆ, ಒಳ್ಳೆಯ ಮಳೆ, ವಿರಾಟ ಪರ್ವ,10,37
- 88. ಹದವಿಲ್ಲು, ಯೋಗ್ಯವಾದ ಬಿಲ್ಲು, ಆದಿ ಪರ್ವ,15,28
- 89. ಹದಿರ, ಹದವಾದ, ದ್ರೋಣ ಪರ್ವ,3,11
- 90. ಹದಿರು, ವ್ಯಂಗ್ಯ, ಸಭಾ ಪರ್ವ,14,29
- 91. ಹದುಳ, ನೆಮ್ಮದಿ, ಉದ್ಯೋಗ ಪರ್ವ,7,3
- 92. ಹದುಳ, ಕ್ಷೇಮ (ಗೆಲುವಾಗು , ವಿರಾಟ ಪರ್ವ,8,57
- 93. ಹದುಳವಿಡÀು, ಕ್ಷೇಮದಿಂದಿರಿಸು , ಗದಾ ಪರ್ವ,11,32
- 94. ಹದುಳಿಸಿ, ಸಮಾಧಾನಪಟ್ಟುಕೊಂಡು, ದ್ರೋಣ ಪರ್ವ,1,7
- 95. ಹದುಳಿಸು, ಸಮಾಧಾನ ಮಾಡಿಕೋ (ಹದುಳ, ಶಲ್ಯ ಪರ್ವ,1,4
- 96. ಹದುಳಿಸು, ಸಮಾಧಾನÀದಿಂದಿರು, ಗದಾ ಪರ್ವ,8,58
- 97. ಹದುಳಿಸು, ಸರಿಹೊಂದಿಸಿಕೋ, ಸಭಾ ಪರ್ವ,1,79
- 98. ಹದುಳಿಸು, ಕಾಯು, ಉದ್ಯೋಗ ಪರ್ವ,3,103
- 99. ಹದುಳಿಸು, ಕ್ಷೇಮದಿಂದಿರು, ಕರ್ಣ ಪರ್ವ,1,9
- 100. ಹನನ, ವಿನಾಶ, ಗದಾ ಪರ್ವ,12,19
- 101. ಹನನ, ವಧೆ, ಆದಿ ಪರ್ವ,8,53
- 102. ಹನುಮಿಸಲು, ಕೆನೆಯುತ್ತ, ಭೀಷ್ಮ ಪರ್ವ,8,2
- 103. ಹಬ್ಬಿದುದು, ಹಿಗ್ಗಿತು, ಭೀಷ್ಮ ಪರ್ವ,8,11
- 104. ಹಬ್ಬುಗೆ, ಹರಡಿದ, ಉದ್ಯೋಗ ಪರ್ವ,11,15
- 105. ಹಮ್ಮ, ಸೊಕ್ಕು/ಅಹಂಕಾರ, ಉದ್ಯೋಗ ಪರ್ವ,9,22
- 106. ಹಮ್ಮಿದ, ಸಂಭವಿಸಿದ, ಭೀಷ್ಮ ಪರ್ವ,1,10
- 107. ಹಮ್ಮೀರ ರಾವುತರ, ಹಮ್ಮೀರ ದೇಶದ ಕುದುರೆ ಸವಾರರ, ಭೀಷ್ಮ ಪರ್ವ,4,65
- 108. ಹಮ್ಮು, ಸೊಕ್ಕು, ಉದ್ಯೋಗ ಪರ್ವ,9,13
- 109. ಹಮ್ಮುಗೆ, ಕಟ್ಟು, ಕರ್ಣ ಪರ್ವ,24,25
- 110. ಹಮ್ಮೈಸಿ, ಮೂರ್ಛೆಹೋಗಿ, ವಿರಾಟ ಪರ್ವ,7,33
- 111. ಹಮ್ಮೈಸು, ಮೂಛೆ ಹೋಗು, ದ್ರೋಣ ಪರ್ವ,1,59
- 112. ಹಮ್ಮೈಸು, ಮೂರ್ಛೆಹೋಗು, ಕರ್ಣ ಪರ್ವ,27,26
- 113. ಹಮ್ಮೈಸು, ಅಪೇಕ್ಷಿಸು, ದ್ರೋಣ ಪರ್ವ,19,29
- 114. ಹಯ ಅಬ್ಬರಣೆ, ಅಶ್ವದ ಹೇಷಾರವ, ಭೀಷ್ಮ ಪರ್ವ,8,5
- 115. ಹಯಾವಳಿ, ಕುದುರೆಗಳು, ಭೀಷ್ಮ ಪರ್ವ,3,4
- 116. ಹರ, ನಾಶಮಾಡುವುದು, ಗದಾ ಪರ್ವ,13,16
- 117. ಹರಗಿರಿ, ಕೈಲಾಸ, ಆದಿ ಪರ್ವ,14,5
- 118. ಹರಚರಣನಿಕ್ಷಿಪ್ತ, ಈಶ್ವರನ ಪಾದದಲ್ಲಿ ಇಟ್ಟಿರುವ, ಅರಣ್ಯ ಪರ್ವ,5,9
- 119. ಹರಡು, ಹಿಂದಿಕ್ಕಿ ಕೊಳ್ಳು, ಭೀಷ್ಮ ಪರ್ವ,6,30
- 120. ಹರಡೆ, ಒಂದು ಜಾತಿಯ ನೀರು ಹಕ್ಕಿ, ಸಭಾ ಪರ್ವ,13,2
- 121. ಹರಡೆ, ಹರಡೆಹಕ್ಕಿ, ಅರಣ್ಯ ಪರ್ವ,4,33
- 122. ಹರಡೆ, ಕೊಕ್ಕರೆ, ಆದಿ ಪರ್ವ,20,53
- 123. ಹರಣ, ಪ್ರಾಣ(ಸಂ.) ಕೇವಣಿಸು, ಗದಾ ಪರ್ವ,10,10
- 124. ಹರಣ ಭರಣ ಕ್ಷಮೆ, ಪ್ರಾಣವನ್ನು ಉಳಿಸುವ ಸಾಮಥ್ರ್ಯ, ವಿರಾಟ ಪರ್ವ,6,32
- 125. ಹರಣದವಾಣಿ, ಪ್ರಾಣದ ಅಂಜಿಕೆಯುಳ್ಳವರು, ಭೀಷ್ಮ ಪರ್ವ,8,15
- 126. ಹರತನಿಜ, ಸುಬ್ರಹ್ಮಣ್ಯ, ಅರಣ್ಯ ಪರ್ವ,6,35
- 127. ಹರದ ಮಾತು, ವ್ಯಾವಹಾರಿಕ ನೆಲೆಯ ಮಾತು, ವಿರಾಟ ಪರ್ವ,4,8
- 128. ಹರದರು, ವರ್ತಕರು, ಅರಣ್ಯ ಪರ್ವ,20,2
- 129. ಹರದೆರಕೆ, ಹರಿದೆರಕೆ ಇರಬಹುದು (ಹರಿದ=ಕತ್ತರಿಸಿ ಹಾಕಿದ) ಎರಕೆ, ವಿರಾಟ ಪರ್ವ,3,37
- 130. ಹರನ ಕಣ್ಗಿಚ್ಚು, ಶಿವನ ಮೂರನೇ ಕಣ್ಣಿನ ಬೆಂಕಿ, ಭೀಷ್ಮ ಪರ್ವ,6,34
- 131. ಹರನ ಹೋಲುವ ಸುಭಟ, ಅಶ್ವತ್ಥಾಮ , ವಿರಾಟ ಪರ್ವ,8,39,
- 132. ಹರವರಿ, ವಿಹಾರ, ಭೀಷ್ಮ ಪರ್ವ,4,16
- 133. ಹರವಸ, ಪರವಶತೆ, ಸಭಾ ಪರ್ವ,16,57
- 134. ಹರವಿ, ನೀರು ತುಂಬುವ ಮಣ್ಣಿನ ಪಾತ್ರೆ, ಆದಿ ಪರ್ವ,10,17
- 135. ಹರವಿ, ಮಣ್ಣಿನ ಪಾತ್ರೆಗಳು, ಆದಿ ಪರ್ವ,10,25
- 136. ಹರಸಿ, ಹರಕೆ ಹೊತ್ತು, ಗದಾ ಪರ್ವ,6,3
- 137. ಹರಹಿ, ಚಾಚಿ, ಭೀಷ್ಮ ಪರ್ವ,3,72
- 138. ಹರಹಿಕೊ, ತನ್ನನ್ನೇ ಅರ್ಪಿಸಿಕೊ, ವಿರಾಟ ಪರ್ವ,10,63
- 139. ಹರಹಿಕೊಳ್ಳು, ರಕ್ಷಿಸು, ಗದಾ ಪರ್ವ,3,30
- 140. ಹರಹಿನ, ಅತಿಶಯವಾದ, ಭೀಷ್ಮ ಪರ್ವ,7,34
- 141. ಹರಹಿನಲಿ, ಹರಡಿಕೊಂಡು, ಭೀಷ್ಮ ಪರ್ವ,9,9
- 142. ಹರಹು, ಹಬ್ಬು, ಆದಿ ಪರ್ವ,12,6
- 143. ಹರಹುಗಳ ಪೂರ, ಪ್ರವಾಹದ ಸಾಗರ, ಭೀಷ್ಮ ಪರ್ವ,6,3
- 144. ಹರಹುಗೆಡು, ಚಲನೆಗೆಡು, ಕರ್ಣ ಪರ್ವ,1,15
- 145. ಹರಳು, ಕಲ್ಲಿನ ಚೂರುಗಳು, ಗದಾ ಪರ್ವ,11,26
- 146. ಹರಳುತೆಕ್ಕೆ, ಕಲ್ಲಿನ ಚೂರು, ಭೀಷ್ಮ ಪರ್ವ,3,69
- 147. ಹರಿ, ಸಾಗು, ವಿರಾಟ ಪರ್ವ,4,35
- 148. ಹರಿ, ನಿವಾರಣೆಯಾಗು, ಆದಿ ಪರ್ವ,16,2
- 149. ಹರಿ, ಸಿಂಹ, ವಿರಾಟ ಪರ್ವ,6,55
- 150. ಹರಿ, ಶ್ರೀಕೃಷ್ಣ, ಭೀಷ್ಮ ಪರ್ವ,8,21
- 151. ಹರಿ, ಆಂಜನೇಯ, ದ್ರೋಣ ಪರ್ವ,3,50
- 152. ಹರಿ, ಕೃಷ್ಣ, ಕರ್ಣ ಪರ್ವ,21,19, ,
- 153. ಹರಿ, ಚಲಿಸು, ದ್ರೋಣ ಪರ್ವ,3,13
- 154. ಹರಿ, ಧಾವಿಸು, ಆದಿ ಪರ್ವ,11,15
- 155. ಹರಿಕುಣಿ, ಕಾಲುವೆ, ಕರ್ಣ ಪರ್ವ,1,9
- 156. ಹರಿಗೆ, ಶ್ರೀಹರಿಗೆ, ಭೀಷ್ಮ ಪರ್ವ,4,7
- 157. ಹರಿಗೆ, ಒಂದು ಬಗೆ ಗುರಾಣಿ, ಭೀಷ್ಮ ಪರ್ವ,3,20
- 158. ಹರಿಗೆ, ಹಲಗೆ, ಶಲ್ಯ ಪರ್ವ,2,38
- 159. ಹರಿಗೆ, ಡೋಲು, ಭೀಷ್ಮ ಪರ್ವ,2,4
- 160. ಹರಿಗೆ, ಗುರಾಣಿ , ವಿರಾಟ ಪರ್ವ,8,5
- 161. ಹರಿಗೆ, ಗುರಾಣಿ., ದ್ರೋಣ ಪರ್ವ,15,18
- 162. ಹರಿಗೆಯ, ಗುರಾಣಿಯ, ಭೀಷ್ಮ ಪರ್ವ,4,38
- 163. ಹರಿಗೋಲು, ದೋಣಿ, ಕರ್ಣ ಪರ್ವ,22,31
- 164. ಹರಿಣಪಕ್ಷ, ಶುಕ್ಲಪಕ್ಷ, ಆದಿ ಪರ್ವ,3,11
- 165. ಹರಿತಂದ, ಹರಿತರು ಬಾ (ಬಂದ) ಧಾವಿಸು, ವಿರಾಟ ಪರ್ವ,5,4
- 166. ಹರಿತಂದು, ಮುಂದೆ ಸಾಗಿ, ಭೀಷ್ಮ ಪರ್ವ,7,2
- 167. ಹರಿತನೂಜ, ಭೀಮ (ಹರಿ, ಗದಾ ಪರ್ವ,13,7
- 168. ಹರಿತರು, ಓಡಿ ಬಾ, ವಿರಾಟ ಪರ್ವ,3,94
- 169. ಹರಿತಹ, ಮೇಲೇರಿ ಬರುವ, ದ್ರೋಣ ಪರ್ವ,1,58
- 170. ಹರಿತಹುದು, ಬೆನ್ನಟ್ಟಿಕೊಂಡು ಬರುವುದು, ಭೀಷ್ಮ ಪರ್ವ,6,39
- 171. ಹರಿದರು, ಸಾಗಿದರು, ಭೀಷ್ಮ ಪರ್ವ,1,17
- 172. ಹರಿದರು, ಓಡಾಡಿದರು, ಗದಾ ಪರ್ವ,12,6
- 173. ಹರಿದವು, ಚಲಿಸಿದವು, ದ್ರೋಣ ಪರ್ವ,1,51
- 174. ಹರಿದಳ, ಕುದುರೆಗಳ ಸೈನ್ಯ, ಗದಾ ಪರ್ವ,1,42
- 175. ಹರಿದಳು, ಓಡಿ ಬಂದಳು, ಆದಿ ಪರ್ವ,11,34
- 176. ಹರಿದಾಡು, ಓಡಾಡು, ಉದ್ಯೋಗ ಪರ್ವ,8,11
- 177. ಹರಿದಿನ, ಏಕಾದಶಿ ದ್ವಾದಶಿ, ವಿರಾಟ ಪರ್ವ,7,13
- 178. ಹರಿದು, ವೇಗವಾಗಿ, ಗದಾ ಪರ್ವ,8,32
- 179. ಹರಿದು ಹಬ್ಬುವ, ಹೊರಬಂದು ಹರಡುತ್ತಿದ್ದ, ಭೀಷ್ಮ ಪರ್ವ,6,33
- 180. ಹರಿದುದು, ಕಾಣೆಯಾಯಿತು, ಗದಾ ಪರ್ವ,7,30
- 181. ಹರಿದುದು, ಚೆದರಿತು, ಆದಿ ಪರ್ವ,15,37
- 182. ಹರಿದೂರ, ಹರದಾರಿ, ಗದಾ ಪರ್ವ,3,35
- 183. ಹರಿದೇರ, ಹರಿದ +ಏರ, ಗದಾ ಪರ್ವ,3,11
- 184. ಹರಿದೊರೆವೆದ್ದ, ಕೃಷ್ಣಜೋಯಿಸರ ಪಾಠ ಹ¾Éದೊ¾ವೆದ್ದ, ವಿರಾಟ ಪರ್ವ,7,38
- 185. ಹರಿನಂದನ, ವಾಯುಪುತ್ರ, ಆದಿ ಪರ್ವ,9,12
- 186. ಹರಿನಂದನ, ಇಂದ್ರ ಪುತ್ರ ಅರ್ಜುನ, ಭೀಷ್ಮ ಪರ್ವ,6,21
- 187. ಹರಿನಿಭ, ಇಂದ್ರಸಮಾನನಾದ, ಆದಿ ಪರ್ವ,19,11
- 188. ಹರಿಬ, ಸೇಡು, ಗದಾ ಪರ್ವ,9,26
- 189. ಹರಿಬ, ಮುಯ್ಯಿ, ಅರಣ್ಯ ಪರ್ವ,1,23
- 190. ಹರಿಬ, ಆಶ್ರಯ , ದ್ರೋಣ ಪರ್ವ,1,8, ,
- 191. ಹರಿಬ, ಹೊಣೆ, ಶಲ್ಯ ಪರ್ವ,3,70
- 192. ಹರಿಬ, ಹೊಣೆಗಾರಿಕೆ, ಕರ್ಣ ಪರ್ವ,8,34
- 193. ಹರಿಬ, ಕಾರ್ಯ, ಕರ್ಣ ಪರ್ವ,19,25
- 194. ಹರಿಬ, ಕರ್ತವ್ಯÀ, ದ್ರೋಣ ಪರ್ವ,10,17
- 195. ಹರಿಬ, ಕೆಲಸ, ಗದಾ ಪರ್ವ,2,33, ,
- 196. ಹರಿಬ, ಕೆಲಸ, ಶಲ್ಯ ಪರ್ವ,3,27, ,
- 197. ಹರಿಯ, ಕೃಷ್ಣನ, ದ್ರೋಣ ಪರ್ವ,5,2
- 198. ಹರಿಯಣ, ಹರಿವಾಣ ಪಾತ್ರೆ, ವಿರಾಟ ಪರ್ವ,3,36
- 199. ಹರಿಯದು, ಸಾಧ್ಯವಾಗದು, ಶಲ್ಯ ಪರ್ವ,1,31
- 200. ಹರಿಯದು, ಮುಗಿಯುವುದಿಲ್ಲ, ಗದಾ ಪರ್ವ,2,9
- 201. ಹರಿಯದು, ಕೈಲಾಗದು , ಗದಾ ಪರ್ವ,10,16
- 202. ಹರಿಯಬಿಡು, ಮುಂದೆ ನುಗ್ಗಲು ಬಿಡು. ಬೇವು ಬಿಕ್ಕೆ, ವಿರಾಟ ಪರ್ವ,9,40
- 203. ಹರಿಯುದಯಿಸಿದನು, ಕೃಷ್ಣನು ಹುಟ್ಟಿದ, ಸಭಾ ಪರ್ವ,5,42
- 204. ಹರಿಯೆಚ್ಚಡೆ, ಕತ್ತರಿಸುವ ಹಾಗೆ ಹೊಡೆಯಲು, ದ್ರೋಣ ಪರ್ವ,6,54
- 205. ಹರಿವ, ನಾ±ವನ್ನುÀ, ಆದಿ ಪರ್ವ,8,41
- 206. ಹರಿವ, ಪರಿಹಾರವನ್ನು, ದ್ರೋಣ ಪರ್ವ,8,25
- 207. ಹರಿವ, ಹರಿಬ, ಕರ್ಣ ಪರ್ವ,26,19
- 208. ಹರಿವ, ಕೊನೆಗಾಣಿಸು, ಗದಾ ಪರ್ವ,2,22
- 209. ಹರಿವ ಹೆಜ್ಜೆಯ, ನಡಿಗೆಯ ಗುರುತನ್ನು (ತಿಳಿಯಲು), ವಿರಾಟ ಪರ್ವ,4,8
- 210. ಹರಿವಾಗು, ಮುಗಿ, ವಿರಾಟ ಪರ್ವ,8,38
- 211. ಹರಿವಾಣ, ಅಗಲದ ತಟ್ಟೆ, ಆದಿ ಪರ್ವ,16,28
- 212. ಹರಿವಾಯ್ತು, ಮುಗಿಯಿತು, ವಿರಾಟ ಪರ್ವ,8,38
- 213. ಹರಿವು, ವಿನಾಶ, ಗದಾ ಪರ್ವ,3,19
- 214. ಹರಿವು, ಕೊನೆಗಾಣಿಸುವ ಉಪಾಯ, ದ್ರೋಣ ಪರ್ವ,11,17
- 215. ಹರಿಸು, ಹೋಗಬಿಡು, ಗದಾ ಪರ್ವ,4,45, ,
- 216. ಹರಿಸೂನು, ಇಂದ್ರನ ಮಗ ಅರ್ಜುನ, ಅರಣ್ಯ ಪರ್ವ,6,9
- 217. ಹರಿಹಂಚಾಗು, ಪಾಲಾಗು, ಉದ್ಯೋಗ ಪರ್ವ,1,29
- 218. ಹರಿಹಯ, ದೇವೇಂದ್ರ, ಉದ್ಯೋಗ ಪರ್ವ,4,60
- 219. ಹರಿಹರಿದು, ಓಡಿ, ವಿರಾಟ ಪರ್ವ,7,51
- 220. ಹರಿಹರಿದು, ಓಡಿ ಓಡಿ, ವಿರಾಟ ಪರ್ವ,5,4
- 221. ಹರುಕ, ಇದು ಒಂದು ಗ್ರಾಮೀಣ ಬೈಗುಳ, ವಿರಾಟ ಪರ್ವ,6,21, ,
- 222. ಹರುಗೋಲು, ನೀರನ್ನು ದಾಟಲು ಬಿದಿರು ಮತ್ತು ಚರ್ಮದಿಂದ ಮಾಡಿದ ದೊಡ್ಡ ಕುಕ್ಕೆಯಂತಹ ಸಾಧನ, ದ್ರೋಣ ಪರ್ವ,4,38
- 223. ಹರುವು, ಅಪಾಯ, ಅರಣ್ಯ ಪರ್ವ,3,17
- 224. ಹರುವು, ಅಂತ್ಯ: ಫ¾Âವು, ವಿರಾಟ ಪರ್ವ,3,94
- 225. ಹರುವು, ಉಪಾಯ/ನೀತಿ, ಉದ್ಯೋಗ ಪರ್ವ,6,29
- 226. ಹರುಷಜಲಧಿ ಉಕ್ಕಿಸಲುಬೇಕು, ಸಂತೋಷಹುಟ್ಟಿಸಬೇಕು, ಭೀಷ್ಮ ಪರ್ವ,1,22
- 227. ಹರುಷಲತೆ, ಹರ್ಷವೆಂಬ ಬಳ್ಳಿ, ಸಭಾ ಪರ್ವ,1,3
- 228. ಹರೆಗಡಿ, ಸಂಪೂರ್ಣವಾಗಿ ನಾಶಮಾಡು, ದ್ರೋಣ ಪರ್ವ,18,27
- 229. ಹರೆಗಡಿ, ಛಿದ್ರಿಸು, ವಿರಾಟ ಪರ್ವ,7,36
- 230. ಹರೆಗಡಿ, ಕಡಿದು ಚೆಲ್ಲು, ಕರ್ಣ ಪರ್ವ,19,33
- 231. ಹರೆಗಡಿ, ಕೊಚ್ಚಿಹಾಕು.... ಭೂತಳ, ವಿರಾಟ ಪರ್ವ,8,52
- 232. ಹರೆಗಡಿ, ಚಲ್ಲಾಪಿಲ್ಲಿಮಾಡು , ಗದಾ ಪರ್ವ,4,31
- 233. ಹರೆಗಡಿ, ಚಲ್ಲಾಪಿಲ್ಲಿಮಾಡಿ ಕತ್ತರಿಸು., ಗದಾ ಪರ್ವ,1,1
- 234. ಹರೆದ ಬಲ, ಚೆದುರಿದ ಸೇನೆ, ದ್ರೋಣ ಪರ್ವ,2,50
- 235. ಹರೆದರು, ಓಡಿದರು, ಭೀಷ್ಮ ಪರ್ವ,8,28
- 236. ಹರೆದರೆ, ತೊಲಗಿದರೆ, ಭೀಷ್ಮ ಪರ್ವ,8,45
- 237. ಹರೆದವು, ಚೆದರಿದವು, ಭೀಷ್ಮ ಪರ್ವ,4,11
- 238. ಹರೆದು, ಡಿಕ್ಕಿ ಹೊಡೆದು, ಭೀಷ್ಮ ಪರ್ವ,4,91
- 239. ಹರೆದುದು, ನಿವಾರಣೆ ಆಯಿತು, ಭೀಷ್ಮ ಪರ್ವ,7,34
- 240. ಹರೆದುದು, ಪ್ರಕಟವಾಯಿತು, ಗದಾ ಪರ್ವ,4,10
- 241. ಹರೆದುದು, ಮುಗಿಯಿತು, ದ್ರೋಣ ಪರ್ವ,4,12
- 242. ಹರೆದುದು, ಹರಿದುಹೋಯಿತು, ಗದಾ ಪರ್ವ,10,4
- 243. ಹಲ, ನೇಗಿಲು, ಆದಿ ಪರ್ವ,7,29
- 244. ಹಲಗೆ, ಪಗಡೆಯಾಟದ ಮಣೆ (ಪಗಡೆ ಹಾಸು), ಗದಾ ಪರ್ವ,2,34
- 245. ಹಲಗೆ, ಫಲಕ, ಭೀಷ್ಮ ಪರ್ವ,3,15
- 246. ಹಲಧರ, ನೇಗಿಲನ್ನು ಹಿಡಿದಿರುವವನು , ಗದಾ ಪರ್ವ,6,1, ,
- 247. ಹಲಧರ, ಬಲರಾಮ (ನೇಗಿಲನ್ನು ಕೈಯಲ್ಲಿ ಹಿಡಿದಿರುವವನು) ಕಳಚಿ, ಆದಿ ಪರ್ವ,14,27
- 248. ಹಲಧರ, ಬಲರಾಮ (ಇವನ ಆಯುಧ `ಹಲ' ವಾದ್ದರಿಂದ), ಆದಿ ಪರ್ವ,19,41
- 249. ಹಲಧರನುಳಯೆ, ಬಲರಮನನ್ನು ಬಿಟ್ಟು, ಸಭಾ ಪರ್ವ,2,87
- 250. ಹಲಬರು, ಅನೇಕ ಜನರು, ಉದ್ಯೋಗ ಪರ್ವ,9,64
- 251. ಹಲಾಯುಧ, ಬಲರಾಮ (ನೇಗಿಲನ್ನು ಆಯುಧವಾಗಿ ಉಳ್ಳವನು), ಆದಿ ಪರ್ವ,15,22
- 252. ಹಲುಬಿದನು, ದುಃಖಿಸಿದನು., ಭೀಷ್ಮ ಪರ್ವ,6,34
- 253. ಹಲುಮೊರೆ, ಹಲ್ಲನ್ನು ಕಡಿ, ದ್ರೋಣ ಪರ್ವ,1,64
- 254. ಹಲ್ಲಣ, ಜೀನು, ಕರ್ಣ ಪರ್ವ,24,14
- 255. ಹಲ್ಲಣಿಸಿ, ಯುದ್ಧ ಸಾಮಗ್ರಿ ಸಿದ್ಧಪಡಿಸಿ, ಭೀಷ್ಮ ಪರ್ವ,7,2
- 256. ಹಲ್ಲಣಿಸಿದವು, ಕುದುರೆಗಳು ಸಜ್ಜುಗೊಳಿಸಲ್ಪಟ್ಟವು., ಸಭಾ ಪರ್ವ,8,39
- 257. ಹಲ್ಲಣಿಸು, ಲಗಾಮನು ಹಾಕಿ ಕುದುರೆಯನ್ನು ಸಿದ್ಧಗೊಳಿಸುವುದು, ದ್ರೋಣ ಪರ್ವ,4,22
- 258. ಹಲ್ಲಣಿಸು, ಸಿದ್ಧವಾಗು, ಆದಿ ಪರ್ವ,15,44
- 259. ಹಲ್ಲಣಿಸು, ಹಲ್ಲಣ ಹಾಕಿ ಸಿದ್ಧ ಪಡಿಸು, ವಿರಾಟ ಪರ್ವ,4,41
- 260. ಹಲ್ಲಣಿಸು, ಹಲ್ಲಣ ಕಟ್ಟಿಕೊ, ವಿರಾಟ ಪರ್ವ,4,27
- 261. ಹಲ್ಲಣಿಸು, ಹಲ್ಲಣವನ್ನು ತೊಡಿಸು, ಗದಾ ಪರ್ವ,9,38
- 262. ಹಲ್ಲಣೆ, ಜೀನು, ಕರ್ಣ ಪರ್ವ,22,17
- 263. ಹಲ್ಲಳ, ಇವು ಆನೆ, ಸಭಾ ಪರ್ವ,5,46
- 264. ಹಲ್ಲಳ, ಜೀನು, ಕರ್ಣ ಪರ್ವ,5,3
- 265. ಹವಣ, ನೆಲೆ, ಉದ್ಯೋಗ ಪರ್ವ,4,2
- 266. ಹವಣನು, ರೀತಿಯನ್ನು, ದ್ರೋಣ ಪರ್ವ,6,15
- 267. ಹವಣಲ್ಲ, ಕೈವಶವಲ್ಲ, ಭೀಷ್ಮ ಪರ್ವ,7,12
- 268. ಹವಣಿನ, ಸಾಹಸಕ್ಕೆ ತಕ್ಕ, ಭೀಷ್ಮ ಪರ್ವ,1,37
- 269. ಹವಣಿಲ್ಲ, ನಿಯಂತ್ರಣಕ್ಕೆ ಮೀರಿದ್ದು, ದ್ರೋಣ ಪರ್ವ,3,17
- 270. ಹವಣಿಸು, ಪ್ರಯತ್ನಿಸು, ಭೀಷ್ಮ ಪರ್ವ,5,16
- 271. ಹವಣು, ಹಿಡಿತ, ದ್ರೋಣ ಪರ್ವ,4,25
- 272. ಹವಣು, ಅಳತೆ, ದ್ರೋಣ ಪರ್ವ,10,44
- 273. ಹವಳದ ಹಲಗೆಗಳ ಮಾಳಿಗೆಯ, ಹವಳದ ಹಲಗೆಗಳನ್ನು ಜೋಡಿಸಿದ ಮೇಲ್ಛಾವಣಿಯ, ಸಭಾ ಪರ್ವ,5,29
- 274. ಹವಿಸ್ಸು, ಯಜ್ಞಾಹುತಿ., ಉದ್ಯೋಗ ಪರ್ವ,4,89
- 275. ಹವ್ಯಕವ್ಯ, ದೇವತೆಗಳಿಗೆ ಹಾಗೂ ಪಿತೃಗಳಿಗೆ ಅರ್ಪಿಸುವ ಪದಾರ್ಥಗಳು, ಆದಿ ಪರ್ವ,20,42
- 276. ಹವ್ಯವಾಹನ, ಅಗ್ನಿ (ಹವಿಸ್ಸನ್ನು ಒಯ್ಯುವವನು) ಭಾರ, ಆದಿ ಪರ್ವ,20,16
- 277. ಹಸನ, ಒಳ್ಳಿತು, ಆದಿ ಪರ್ವ,8,48
- 278. ಹಸರ, ಪ್ರಸರ, ಶಲ್ಯ ಪರ್ವ,2,49
- 279. ಹಸರ, ಹರಡಿರುವಿಕೆ, ಉದ್ಯೋಗ ಪರ್ವ,3,47
- 280. ಹಸಾದ, ಪ್ರಸಾದ, ಆದಿ ಪರ್ವ,8,78
- 281. ಹಸಾದ, ಮಹಾಪ್ರಸಾದ, ಗದಾ ಪರ್ವ,11,35
- 282. ಹಸಾದ, ಅನುಗ್ರಹ (ಒಪ್ಪಿಗೆ), ಭೀಷ್ಮ ಪರ್ವ,7,13
- 283. ಹಸಾದವ ಹಾಯ್ಕಿ, ಪ್ರಸಾದವೆಂದು ಸ್ವೀಕರಿಸಿ, ಸಭಾ ಪರ್ವ,5,24
- 284. ಹಸುಗೆ, ವಿಭಾಗ , ಗದಾ ಪರ್ವ,6,7
- 285. ಹಸುಗೆ, ಪಸುಗೆ ಹಂಚಿಕೆ, ದ್ರೋಣ ಪರ್ವ,1,26
- 286. ಹಸುಬ, ಶಕುನದ ಹಕ್ಕಿ, ಅರಣ್ಯ ಪರ್ವ,17,33
- 287. ಹಸುಬ, ಒಂದು ಬಗೆಯ ಶಕುನದ ಹಕ್ಕಿ, ಅರಣ್ಯ ಪರ್ವ,13,21
- 288. ಹಸುಬ, ಒಂದು ಜಾತಿಯ ಹಕ್ಕಿ, ಸಭಾ ಪರ್ವ,13,2
- 289. ಹಸುಬ, ಹಾರೀತ, ಅರಣ್ಯ ಪರ್ವ,4,33
- 290. ಹಳಕು, ಹಳುಕು , ವಿರಾಟ ಪರ್ವ,2,54
- 291. ಹಳಚಲು, ಹೋರಾಡಲು, ಭೀಷ್ಮ ಪರ್ವ,3,1
- 292. ಹಳಚಿ, ಅಪ್ಪಳಿಸಿ, ದ್ರೋಣ ಪರ್ವ,3,78
- 293. ಹಳಚಿ, ಹೋರಾಡಿ, ದ್ರೋಣ ಪರ್ವ,5,42
- 294. ಹಳಚಿ, ತಾಗಿ, ಭೀಷ್ಮ ಪರ್ವ,4,7
- 295. ಹಳಚಿದನು, ಹೊಡೆದನÀು, ದ್ರೋಣ ಪರ್ವ,3,34
- 296. ಹಳಚಿದರು, ಹೋರಾಡಿದರು, ಭೀಷ್ಮ ಪರ್ವ,5,0
- 297. ಹಳಚಿದುದು, ಹೋರಾಡಿದವು., ಭೀಷ್ಮ ಪರ್ವ,4,0
- 298. ಹಳಚಿದೊಡೆ, ಬಡಿದಾಡಿದಾಗ, ಭೀಷ್ಮ ಪರ್ವ,4,4
- 299. ಹಳಚು, ಪಳಂಚು, ವಿರಾಟ ಪರ್ವ,4,46
- 300. ಹಳಚು, ಮೇಲೆಬೀಳು, ಕರ್ಣ ಪರ್ವ,11,15
- 301. ಹಳಚು, ಆಕ್ರಮಣಮಾಡು, ಕರ್ಣ ಪರ್ವ,13,0
- 302. ಹಳಚು, ಹಣಚು , ಗದಾ ಪರ್ವ,7,0, , ,
- 303. ಹಳಚು, ಹಣಚು , ಗದಾ ಪರ್ವ,2,12, , , ಹೊಡೆ,
- 304. ಹಳಚು, ಕಾದಾಡು, ಭೀಷ್ಮ ಪರ್ವ,4,36
- 305. ಹಳದಿಯ ಪಾರಿ, ಹಳದಿ ವಸ್ತ್ರ. ಜೋನೆಗಪಳಿ, ಭೀಷ್ಮ ಪರ್ವ,4,52
- 306. ಹಳವಿಗೆ, ಹೊಯ್ದಾಟ, ದ್ರೋಣ ಪರ್ವ,3,52
- 307. ಹಳಹಳಿಕೆ, ಪ್ರಖರ, ಕರ್ಣ ಪರ್ವ,23,5
- 308. ಹಳಹಳಿಕೆ, ಆವೇಶÀ, ಶಲ್ಯ ಪರ್ವ,2,1
- 309. ಹಳಹಳಿಕೆ, ತಳಮಳ, ಅರಣ್ಯ ಪರ್ವ,8,50
- 310. ಹಳಹಳಿಕೆ, ತೀವ್ರತೆ, ಕರ್ಣ ಪರ್ವ,24,53
- 311. ಹಳಿವು, ನಿಂದೆ , ವಿರಾಟ ಪರ್ವ,3,2
- 312. ಹಳಿವು, ನಿಂದೆ., ಉದ್ಯೋಗ ಪರ್ವ,6,4
- 313. ಹಳಿವು, ಅಪಮಾನ, ಗದಾ ಪರ್ವ,5,23, , , ವಿನಾಶ,
- 314. ಹಳಿವು, ಅಪಕೀರ್ತಿ, ವಿರಾಟ ಪರ್ವ,2,25
- 315. ಹಳುಕು, ಚೂರು, ಕರ್ಣ ಪರ್ವ,21,4
- 316. ಹಳುವ, ಅರಣ್ಯ, ಗದಾ ಪರ್ವ,4,25
- 317. ಹಳುವ, ಅಡವಿ, ಆದಿ ಪರ್ವ,8,93
- 318. ಹಳುಹಳುವಾಯಿ, ಸುಲಭವಾದ ದಾರಿ, ಕರ್ಣ ಪರ್ವ,20,36
- 319. ಹಳೂಹಳು, ಮೆಚ್ಚುಗೆ ಸೂಚಿಸುವ ಒಂದು ಪದ, ದ್ರೋಣ ಪರ್ವ,17,11
- 320. ಹಾಣಾಹಾಣಿ, ಹಣಾಹಣಿ , ಭೀಷ್ಮ ಪರ್ವ,4,27
- 321. ಹಾಯಿ, ನುಗ್ಗು, ವಿರಾಟ ಪರ್ವ,5,38
- 322. ಹಾಯಿದರು, ಮುನ್ನುಗ್ಗಿದ್ದರು, ಗದಾ ಪರ್ವ,9,3
- 323. ಹಾಯಿದರು, ಓಡಿಹೋದರು, ಕರ್ಣ ಪರ್ವ,4,24
- 324. ಹಾಯಿದು, ಮೇಲುಬೀಳು, ಆದಿ ಪರ್ವ,2,32
- 325. ಹಾಯ್ಕಿದೆ, ಬಿಸಾಡಿದೆ, ಭೀಷ್ಮ ಪರ್ವ,3,35
- 326. ಹಾಯ್ದನು, ವೇಗವಾಗಿ ನಡೆದ, ಗದಾ ಪರ್ವ,3,1
- 327. ಹಾಯ್ದನು, ಹಾರಿದನು, ಗದಾ ಪರ್ವ,8,50
- 328. ಹಾಯ್ವೆವು, ಹೋಗುತ್ತೇವೆ, ಗದಾ ಪರ್ವ,8,58
- 329. ಹಾರ, ಆರಾಮ, ಆದಿ ಪರ್ವ,7,1
- 330. ಹಾರಚಯ, ಹಾರಗಳ ಗುಂಪು, ಗದಾ ಪರ್ವ,11,19
- 331. ಹಾರಲೇಕೆ, ನಿರೀಕ್ಷಿಸುವುದೇಕೆ, ಉದ್ಯೋಗ ಪರ್ವ,2,10
- 332. ಹಾರಿದವು, ದೂರ ಸರಿದವು, ಭೀಷ್ಮ ಪರ್ವ,7,8
- 333. ಹಾರುವತಿ, ಬ್ರಾಹ್ಮಣಸ್ತ್ರೀ, ಆದಿ ಪರ್ವ,15,36
- 334. ಹಾ¾ು, ಸೂಸು, ಕರ್ಣ ಪರ್ವ,11,15
- 335. ಹಾಲಾಹಲ, ಘೋರ ವಿಷ, ಉದ್ಯೋಗ ಪರ್ವ,6,11
- 336. ಹಾವಸೆ, ಪಾಚಿಸಸ್ಯ, ಅರಣ್ಯ ಪರ್ವ,5,14
- 337. ಹಾವಿನ ಹಳವಿಗೆ, ಸರ್ಪಧ್ವಜ, ಭೀಷ್ಮ ಪರ್ವ,3,15
- 338. ಹಾವುಮೆಕ್ಕೆ, ಕಹಿಯಾದ ಹಣ್ಣು ಬಿಡುವ ಒಂದು ಗಿಡ., ಅರಣ್ಯ ಪರ್ವ,17,15
- 339. ಹಾಸ, ಪಾಶ, ಕರ್ಣ ಪರ್ವ,22,31
- 340. ಹಾಸಂಗಿ, ಪಗಡೆಯ ಹಾಸು, ವಿರಾಟ ಪರ್ವ,9,12
- 341. ಹಾಸಂಗಿ, ಪಗಡೆಯದಾಳ, ಆದಿ ಪರ್ವ,13,42
- 342. ಹಾಸರೆ, ಹಾಸು ಬಂಡೆ, ವಿರಾಟ ಪರ್ವ,3,58
- 343. ಹಾಸರೆ, ಹಾಸುಗಲ್ಲು, ಸಭಾ ಪರ್ವ,13,30
- 344. ಹಾಸರೆ, ಕಲ್ಲಿನ ಚಪ್ಪಡಿ, ಅರಣ್ಯ ಪರ್ವ,22,42
- 345. ಹಾಸುಗಳು, ನೆಲಕ್ಕೆ ಹಾಸುವ ಬಟ್ಟೆಗಳು ಅಥವ ಹಾಸಿಗೆಯ ಮೇಲೆ ಹಾಸುವ ಬಟ್ಟೆಗಳು, ಗದಾ ಪರ್ವ,4,14
- 346. ಹಾಹಾವಿರಾವ, ಹಾಹಾಕಾರ, ಗದಾ ಪರ್ವ,10,14
- 347. ಹಾಹೆ, ಬೊಂಬೆ, ಕರ್ಣ ಪರ್ವ,19,45
- 348. ಹಾಹೆ, ನೆರಳು, ವಿರಾಟ ಪರ್ವ,10,66
- 349. ಹಾಳಿ, ಪಾಳಿ, ದ್ರೋಣ ಪರ್ವ,1,26
- 350. ಹಾಳು ಹೊರು, ಸರ್ವನಾಶವಾಗು, ಅರಣ್ಯ ಪರ್ವ,16,24
- 351. ಹಿಂಗಿದನು, ಹಿಂದಿರುಗಿದನು, ದ್ರೋಣ ಪರ್ವ,6,22
- 352. ಹಿಂಗಿದನು, ಅಡಗಿದನು, ಭೀಷ್ಮ ಪರ್ವ,6,22
- 353. ಹಿಂಗಿದವು, ಕಾಣದಾದವು, ಗದಾ ಪರ್ವ,6,28
- 354. ಹಿಂಗು, ಹಿಂದೆ ಸರಿ, ಆದಿ ಪರ್ವ,14,22
- 355. ಹಿಂಗುವ, ತಪ್ಪಿಸಿಕೊಳ್ಳುವ, ಗದಾ ಪರ್ವ,7,51
- 356. ಹಿಂಚಿತು, ಹಿಮ್ಮೆಟ್ಟಿಸಿತು, ಆದಿ ಪರ್ವ,7,39
- 357. ಹಿಂಚು, ಹಿಂದೆ ಬೀಳು, ಸಭಾ ಪರ್ವ,1,3
- 358. ಹಿಂಡಾಕಳು, ಗೋ ಸಮೂಹ, ವಿರಾಟ ಪರ್ವ,7,35
- 359. ಹಿಂಡೆಯ, ಪಿಂಡದ, ಆದಿ ಪರ್ವ,8,73
- 360. ಹಿಂದಣ ಕೊರತೆಯ, ಹಿಂದಿನ ದಿನಗಳ ನಷ್ಟದ, ಭೀಷ್ಮ ಪರ್ವ,9,21
- 361. ಹಿಂದಿಕ್ಕಿ ಕೊಂಬರೆ, ನಮ್ಮನ್ನು ರಕ್ಷಣೆಯಲ್ಲಿ ಇರಿಸಿಕೊಂಡರೆ, ಭೀಷ್ಮ ಪರ್ವ,1,22
- 362. ಹಿಂದುಗಳೆ, ಹಿಂದೆಗೆ, ಕರ್ಣ ಪರ್ವ,8,29
- 363. ಹಿಂದುಗಳೆಯದೆ, ನಿರ್ಲಕ್ಷಿಸದೆ, ಉದ್ಯೋಗ ಪರ್ವ,5,11
- 364. ಹಿಂದೆ ಹತ್ತದೆ, ಜೊತೆಯಲ್ಲೇ ಅಂಟಿಕೊಳ್ಳದೆ, ವಿರಾಟ ಪರ್ವ,3,31
- 365. ಹಿಂಬೆಳೆ, ಹಿಂದೆಸರಿ , ಗದಾ ಪರ್ವ,5,33
- 366. ಹಿಂಸಾಗಮ, ಹಿಂಸೆಯೆಂಬ ಶಾಸ್ತ್ರ, ಕರ್ಣ ಪರ್ವ,15,12
- 367. ಹಿಕ್ಕಳಿಸು, ಹೆಮ್ಮೆ ಪಡು, ಆದಿ ಪರ್ವ,11,28
- 368. ಹಿಕ್ಕು, ಸಿಕ್ಕು ಬಿಡಿಸು, ವಿರಾಟ ಪರ್ವ,1,33
- 369. ಹಿಕ್ಕು, ಛೇದಿಸು, ವಿರಾಟ ಪರ್ವ,7,41
- 370. ಹಿಟ್ಟುಗುಟ್ಟು, ಧ್ವಂಸಮಾಡು, ಉದ್ಯೋಗ ಪರ್ವ,3,104
- 371. ಹಿಡಿಂಬಕನೆಂಬ ಅಸುರಪತಿ, ಹಿಡಿಂಬನೆಂಬ ರಾಕ್ಷಸ ರಾಜ, ಸಭಾ ಪರ್ವ,5,34
- 372. ಹಿಡಿಕಿ, ಹಿಸುಕಿ, ಆದಿ ಪರ್ವ,9,7
- 373. ಹಿಡಿಯಾಳು, ಸೆರೆಯಾಳು, ಆದಿ ಪರ್ವ,19,18
- 374. ಹಿಡಿಹಿಂಗೆ, ನಿಯಂತ್ರಣಕ್ಕೆ, ದ್ರೋಣ ಪರ್ವ,3,37
- 375. ಹಿಡಿಹು, ಹತೋಟಿ, ಆದಿ ಪರ್ವ,19,37
- 376. ಹಿಡುಹು, ಮುಷ್ಠಿ, ಆದಿ ಪರ್ವ,11,28
- 377. ಹಿಣಿಲ, ಜಡೆಯ, ದ್ರೋಣ ಪರ್ವ,6,62
- 378. ಹಿಣಿಲಬಾವುಲಿಗಾರರು, ಶೌರ್ಯದ ಬಿರುದುಗಾರರು., ಭೀಷ್ಮ ಪರ್ವ,4,40
- 379. ಹಿಣಿಲಿರಿದು, ಸಿಕ್ಕು ಬಿಡಿಸಿ, ವಿರಾಟ ಪರ್ವ,6,49
- 380. ಹಿಣಿಲು, ನವಿಲುಗರಿ, ಉದ್ಯೋಗ ಪರ್ವ,11,16
- 381. ಹಿಣಿಲು, ಜಡೆ, ವಿರಾಟ ಪರ್ವ,3,80
- 382. ಹಿಣಿಲು, ಜಡೆಯ ಗಂಟು, ಕರ್ಣ ಪರ್ವ,22,25
- 383. ಹಿಣಿಲು, ಜೊಂಡೆ, ಭೀಷ್ಮ ಪರ್ವ,4,82
- 384. ಹಿಣಿಲು, ಹೆರಳು, ಗದಾ ಪರ್ವ,11,16
- 385. ಹಿಣಿಲುಕರುಳು, ಗೊಂಚಲು ಕರುಳು, ಭೀಷ್ಮ ಪರ್ವ,4,47
- 386. ಹಿನ್ನೆಲೆ, ಹಿಂಭಾಗ, ಆದಿ ಪರ್ವ,15,50
- 387. ಹಿಪ್ಪೆಗರ, ಸತ್ವ ಹೀನರ, ದ್ರೋಣ ಪರ್ವ,2,53
- 388. ಹಿಮ, ಶೀತ, ಆದಿ ಪರ್ವ,9,24
- 389. ಹಿಮಕರ, ಚಂದ್ರ (ಹಿಮವನ್ನುಂಟುಮಾಡುವವ) ಮಹಾನ್ವಯ, ಗದಾ ಪರ್ವ,4,33
- 390. ಹಿಮಕರಕುಲಲಲಾಮ, ಚಂದ್ರ ವಂಶದ ರಾಜಶ್ರೇಷ್ಠರು, ಭೀಷ್ಮ ಪರ್ವ,3,
- 391. ಹಿಮಾಲಯವಾಗಪರಜಲಧಿ, ಹಿಮಾಲಯದಿಂದ ಸಮುದ್ರದವರೆಗೂ ಹಬ್ಬಿರುವ, ಅರಣ್ಯ ಪರ್ವ,7,42
- 392. ಹಿಮ್ಮಡಿಗೊಗುವ ಕುಂತಳ, ಹಿಮ್ಮಡಿಯನ್ನು ಮುಟ್ಟುತ್ತಿರುವ ಕೂದಲು, ಅರಣ್ಯ ಪರ್ವ,16,22
- 393. ಹಿಮ್ಮೆಟ್ಟು, ಹಿಂದಕ್ಕೆ ಸರಿ, ಆದಿ ಪರ್ವ,15,50
- 394. ಹಿಯ್ಯಾಳಿ, ನಿಂದನೆ, ದ್ರೋಣ ಪರ್ವ,6,18
- 395. ಹಿರಿದು, ಪಿರಿದು , ಆದಿ ಪರ್ವ,2,19
- 396. ಹಿರಿಯುಬ್ಬಣ, ಉಬ್ಬಿದ ಮಾಂಸಖಂಡಗಳು(?), ಗದಾ ಪರ್ವ,2,13
- 397. ಹಿಸುಣ, ಚಾಡಿ, ಉದ್ಯೋಗ ಪರ್ವ,9,18
- 398. ಹಿಸುಣಿಕೆ, ಚಾಡಿ, ಭೀಷ್ಮ ಪರ್ವ,1,19
- 399. ಹಿಳಿ, ಹಿಪ್ಪೆಮಾಡು, ಉದ್ಯೋಗ ಪರ್ವ,3,120
- 400. ಹಿಳಿ, ನಾಶವಾಗು, ದ್ರೋಣ ಪರ್ವ,10,3
- 401. ಹಿಳಿ, ಬಿರಿ, ಭೀಷ್ಮ ಪರ್ವ,4,38
- 402. ಹಿಳಿ, ಸೀಳು, ಕರ್ಣ ಪರ್ವ,24,38
- 403. ಹಿಳಿ, ಕುಸಿ ಹೇರಾಳಿಸು, ಕರ್ಣ ಪರ್ವ,8,24
- 404. ಹಿಳಿದ, ನಾಶವಾದ, ಅರಣ್ಯ ಪರ್ವ,2,2
- 405. ಹಿಳಿದು, ಹಿಸುಕಿ, ಭೀಷ್ಮ ಪರ್ವ,5,31
- 406. ಹಿಳಿದು ಹಿಂಡು, ಹಿಂಡಿರಸವನ್ನು ತೆಗೆ, ವಿರಾಟ ಪರ್ವ,3,22
- 407. ಹಿಳಿದೆವು, ನಾಶಮಾಡಿದೆವು, ಉದ್ಯೋಗ ಪರ್ವ,1,37
- 408. ಹಿಳಿಯಲಿ, ಕುಂಭ ಸ್ಥಳ, ದ್ರೋಣ ಪರ್ವ,2,27
- 409. ಹಿಳಿಯೆ, ಸಿಡಿಯಲು, ದ್ರೋಣ ಪರ್ವ,9,27
- 410. ಹಿಳುಕು, ಬಾಣಗಳ ಹಿಂತುದಿಯ ಗರಿ, ವಿರಾಟ ಪರ್ವ,8,37
- 411. ಹಿಳುಕು, ಬಾಣದ ಹಿಂಭಾಗದ ಗರಿಭಾಗ, ಭೀಷ್ಮ ಪರ್ವ,8,42
- 412. ಹಿಳುಕು, ಬಾಣದ ಹಿಂದಿನ ಭಾಗ, ಶಲ್ಯ ಪರ್ವ,2,33
- 413. ಹಿಳುಕು, ಬಾಣದ ಗರಿ, ಉದ್ಯೋಗ ಪರ್ವ,11,13
- 414. ಹಿಳುಕು, ಬಾಣದ ಗರಿ, ಸಭಾ ಪರ್ವ,10,68, , , ಗುರಿತಾಗಿಸು , ಹಿಳುಕಿಡು, ಬೆಸು ಹರಿಕು, ಭೇದಿಸು ಇತ್ಯಾದಿ ಪದಗಳು ಬಾಣಸಂಧಾನ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಶಬ್ದಗಳು.,
- 415. ಹಿಳುಕುಗಳು, ಬಾಣದ ಹಿಂಬದಿಯ ಗರಿಗಳು, ಭೀಷ್ಮ ಪರ್ವ,4,20
- 416. ಹೀನ ಇಂದು, ಶುಕ್ಲ ಬಿದಿಗೆ ಚಂದ್ರ ( ಕ್ಷೀಣವಾಗಿರುವ ಚಂದ್ರ), ಭೀಷ್ಮ ಪರ್ವ,4,76
- 417. ಹೀನಗತಿ, ದುರ್ಗತಿ, ಗದಾ ಪರ್ವ,8,30
- 418. ಹೀರಾವಳಿ, ವಜ್ರಸಮೂಹ, ದ್ರೋಣ ಪರ್ವ,1,14
- 419. ಹೀರಾವಳಿ, ವಜ್ರರಾಶಿ, ದ್ರೋಣ ಪರ್ವ,13,3
- 420. ಹೀರಾವಳಿ, ವಜ್ರದ ಸರ, ಕರ್ಣ ಪರ್ವ,15,30
- 421. ಹೀಲಿ, ನವಿಲುಗರಿ, ದ್ರೋಣ ಪರ್ವ,3,6
- 422. ಹೀಲಿ, ನವಿಲುಗರಿಗಳಿಂದ ತಯಾರಿಸಿದ ಉಡುಪು, ಅರಣ್ಯ ಪರ್ವ,5,28
- 423. ಹೀಹಾಳಿ, ನಿಂದೆ, ಕರ್ಣ ಪರ್ವ,11,39
- 424. ಹೀಹಾಳಿ, ಪಂಥ , ವಿರಾಟ ಪರ್ವ,3,34,
- 425. ಹೀಹಾಳಿ, ಹುರುಡು, ದ್ರೋಣ ಪರ್ವ,15,70
- 426. ಹೀಹಾಳಿ, ಹಠ, ಕರ್ಣ ಪರ್ವ,15,7
- 427. ಹೀಹಾಳಿಕಾರರು, ಸ್ಪರ್ಧೆಯೊಡ್ಡುವವರು., ದ್ರೋಣ ಪರ್ವ,5,82
- 428. ಹುಗಿಲು, ಸೀಳು, ದ್ರೋಣ ಪರ್ವ,5,55
- 429. ಹುಗ್ಗಿಗರು, ಸೊಕ್ಕಿನವರು, ದ್ರೋಣ ಪರ್ವ,10,31
- 430. ಹುಗ್ಗಿಗರು, ಉತ್ಸಾಹಿಗಳು (ಜಂಭಗಾರರು), ಭೀಷ್ಮ ಪರ್ವ,1,58
- 431. ಹುಟ್ಟಿ, ಜೇನು ಹುಟ್ಟಿ, ದ್ರೋಣ ಪರ್ವ,6,40
- 432. ಹುಡಿ, ಪುಡಿ, ದ್ರೋಣ ಪರ್ವ,1,60
- 433. ಹುಡಿ, ದೂಳು, ವಿರಾಟ ಪರ್ವ,3,15
- 434. ಹುದಿದ, ಅಡಗಿದ, ಗದಾ ಪರ್ವ,11,1
- 435. ಹುದು, ನಂಟು , ಗದಾ ಪರ್ವ,8,20, , , ಹೊಂದಿಕೆ,
- 436. ಹುದು, ಹಂಚಿಕೊಂಡು ಬಾಳುವುದು, ಸಭಾ ಪರ್ವ,16,18
- 437. ಹುದು=ಪುದುವು, ಸಾಮೂಹಿಕ ಸ್ವಾಮಿತ್ವ, ಆದಿ ಪರ್ವ,8,48
- 438. ಹುದುಗು, ಮುಚ್ಚಿಕೊಳ್ಳು, ಆದಿ ಪರ್ವ,16,62
- 439. ಹುದುಗು, ಮುಚ್ಚು, ಆದಿ ಪರ್ವ,15,48
- 440. ಹುದುಗು, ಅಡಗಿಕೊಳ್ಳು, ಗದಾ ಪರ್ವ,1,13
- 441. ಹುದುಗು, ಇಂಗಿಹೋಗು, ಅರಣ್ಯ ಪರ್ವ,13,38
- 442. ಹುದುನೆಲ, ಪ್ರೀತಿಯ ನೆಲ , ಶಲ್ಯ ಪರ್ವ,2,54
- 443. ಹುದುವಿನ ಗಂಡತನ, ಐವರು ಒಬ್ಬಳನ್ನು ಹಂಚಿಕೊಂಡಿದ್ದು. ಇಂಥ ಹಂಚಿಕೆಯ ಗಂಡತನ, ವಿರಾಟ ಪರ್ವ,3,43
- 444. ಹುಯ್ಯಲು, ದೂರು, ಅರಣ್ಯ ಪರ್ವ,5,25
- 445. ಹುಯ್ಯಲುಗಾರ, ಬೊಬ್ಬೆಯಿಡುತ್ತಿದ್ದವ, ವಿರಾಟ ಪರ್ವ,5,6
- 446. ಹುರಿ, ಧಾನ್ಯಗಳನ್ನು ಬಾಣಲೆಯಲ್ಲಿ ಹುರಿಯಯುವುದು, ಗದಾ ಪರ್ವ,11,26
- 447. ಹುರಿ ಹುರಿ, ಭೇಷ್ ಭೇಷ್ ಎಂಬ ಕೊಂಡಾಟದ ಮಾತು, ಅರಣ್ಯ ಪರ್ವ,1,31
- 448. ಹುರಿಗೂಡಿ, ಒಂದಾಗಿ, ಭೀಷ್ಮ ಪರ್ವ,1,58
- 449. ಹುರಿಗೊಂಡುದು, ಪ್ರಖರವಾಗಿ ಕಾಣಿಸಿತು, ಗದಾ ಪರ್ವ,8,22
- 450. ಹುರಿಗೊಳ್, ಹುರುಪುಗೊಳ್ಳು ಉತ್ಸಾಹಗೊಳ್ಳು, ಗದಾ ಪರ್ವ,4,6
- 451. ಹುರಿಬಿಡದೆ, ಒಗ್ಗಟ್ಟನ್ನು ಬಿಡದೆ, ದ್ರೋಣ ಪರ್ವ,6,18
- 452. ಹುರಿಯೇರು, ಅಧಿಕವಾಗು, ಗದಾ ಪರ್ವ,7,13
- 453. ಹುರಿಯೇರು, ಹೆಚ್ಚಾಗು/ಬಲವಾಗ, ಕರ್ಣ ಪರ್ವ,25,3
- 454. ಹುರಿಯೊಡೆದು, ಶಕ್ತಿಗುಂದಿ, ದ್ರೋಣ ಪರ್ವ,5,12
- 455. ಹುರಿಯೊಡೆದು, ಒಗ್ಗಟ್ಟು ತಪ್ಪಿ (ಹಿಮ್ಮೆಟ್ಟಿ), ಭೀಷ್ಮ ಪರ್ವ,6,12
- 456. ಹುರುಡಿಗ, ಹೊಟ್ಟೆಕಿಚ್ಚುಪಡುವವನು, ಸಭಾ ಪರ್ವ,1,33
- 457. ಹುರುಡಿಸು, ಆಸೆ ಪಡು, ಅರಣ್ಯ ಪರ್ವ,21,54
- 458. ಹುರುಡೇ, ಸ್ಪರ್ಧೆಯೆ, ದ್ರೋಣ ಪರ್ವ,4,28
- 459. ಹುರುಳುಗೆಟ್ಟುದು, ಸತ್ವಹೀನವಾಯಿತು, ದ್ರೋಣ ಪರ್ವ,5,35
- 460. ಹುರುಳುಗೆಡಿಸು, ಸತ್ವಗುಂದಿಸು, ವಿರಾಟ ಪರ್ವ,8,91
- 461. ಹುರುಳೆನಿಪ, ನೆಲೆಯಾದ, ಭೀಷ್ಮ ಪರ್ವ,3,62
- 462. ಹುಲಿಸಾಯ್ತು, ಹುಲುಸಾಗಿದೆ, ಭೀಷ್ಮ ಪರ್ವ,4,13
- 463. ಹುಲು, ಸಾಮಾನ್ಯ, ವಿರಾಟ ಪರ್ವ,4,34
- 464. ಹುಲು, ಸಣ್ಣ, ಆದಿ ಪರ್ವ,11,23
- 465. ಹುಲು, ಅಲ್ಪ, ವಿರಾಟ ಪರ್ವ,6,28
- 466. ಹುಲು, ಕ್ಷುಲ್ಲಕ, ಆದಿ ಪರ್ವ,15,39
- 467. ಹುಲು, ಕ್ಷುದ್ರ, ವಿರಾಟ ಪರ್ವ,6,47
- 468. ಹುಲುದಳದೊಳಗೆ, ಕ್ಷುಲ್ಲಕ ಸೇನೆಯೊಂದಿಗೆ, ಭೀಷ್ಮ ಪರ್ವ,9,30
- 469. ಹುಲುಮೃಗ, ಕ್ಷುಲ್ಲಕ ಜಿಂಕೆ, ವಿರಾಟ ಪರ್ವ,8,1
- 470. ಹುಲುವಟ್ಟೆ, ಕ್ಷುದ್ರಮಾರ್ಗ, ಉದ್ಯೋಗ ಪರ್ವ,9,13
- 471. ಹುಲುಸಾಯ್ತೆ, ಹುಲುಸಾದ ಬೆಳೆಬಂತೆ, ಗದಾ ಪರ್ವ,7,53
- 472. ಹುಲ್ಲುಕೈ, ಹುಲ್ಲುಹಿಡಿದ, ಆದಿ ಪರ್ವ,19,2
- 473. ಹುಸಿ, ಸುಳ್ಳಾಡುವುದು, ಆದಿ ಪರ್ವ,18,17
- 474. ಹುಸಿಕ, ಸುಳ್ಳುಗಾರ, ಸಭಾ ಪರ್ವ,1,32
- 475. ಹುಳುಕ, <ಪು¿ುಕ, ವಿರಾಟ ಪರ್ವ,2,30, , ,
- 476. ಹುಳುವುದು, ಹುಳುವುದು (ಹುಳ ಸುರಿದೀತು), ವಿರಾಟ ಪರ್ವ,3,13
- 477. ಹೂಟÉ, ತಯಾರಿ, ಭೀಷ್ಮ ಪರ್ವ,8,59
- 478. ಹೂಡಿತು, ನೆಲಸಿದವು, ಭೀಷ್ಮ ಪರ್ವ,9,41
- 479. ಹೂಡಿದೈ, ಉಂಟುಮಾಡಿದೆ., ಭೀಷ್ಮ ಪರ್ವ,6,39
- 480. ಹೂಡು, ಪ್ರಯೋಗಿಸು, ಆದಿ ಪರ್ವ,7,6
- 481. ಹೂಡು, ಪ್ರಾರಂಭಿಸು, ಗದಾ ಪರ್ವ,10,23
- 482. ಹೂಡು, ಸಿದ್ಧಗೊಳಿಸು, ಆದಿ ಪರ್ವ,20,21
- 483. ಹೂಡು, ಕಟ್ಟು, ಉದ್ಯೋಗ ಪರ್ವ,7,6
- 484. ಹೂಡುವನು, ಸೃಷ್ಟಿಸುವನು, ಭೀಷ್ಮ ಪರ್ವ,7,32
- 485. ಹೂಣಿಗ, ಸಾಹಸಿ, ದ್ರೋಣ ಪರ್ವ,5,64
- 486. ಹೂಣಿಗ, ಶಪಥವೀರ, ಭೀಷ್ಮ ಪರ್ವ,7,7
- 487. ಹೂಣಿಗ, ವೀರ , ವಿರಾಟ ಪರ್ವ,7,36
- 488. ಹೂಣಿಗ, ಪ್ರತಿಜ್ಞೆ ಮಾಡಿದವನು, ಗದಾ ಪರ್ವ,2,5
- 489. ಹೂಣಿಗ, ಪ್ರತಿಜ್ಞೆಮಾಡುವವನು, ಶಲ್ಯ ಪರ್ವ,1,26
- 490. ಹೂಣಿಗತನ, ಶಪಥ ಮಾಡುವ ರೀತಿ, ದ್ರೋಣ ಪರ್ವ,16,14
- 491. ಹೂಣು, ಬಾಣ ಹೂಡು, ಆದಿ ಪರ್ವ,7,6
- 492. ಹೂಣು, ಪ್ರತಿಜ್ಞೆಮಾಡು, ಆದಿ ಪರ್ವ,20,40
- 493. ಹೂಣೆ, ನುಗ್ಗು, ದ್ರೋಣ ಪರ್ವ,5,4
- 494. ಹೂಣೆ, ಪ್ರತಿಜ್ಞೆ, ದ್ರೋಣ ಪರ್ವ,4,31
- 495. ಹೂಣೆ, ಛಲ, ವಿರಾಟ ಪರ್ವ,2,39
- 496. ಹೂಣೆಹೊಗು, ಸುತ್ತುಗಟ್ಟಿ ದಾಳಿಮಾಡು, ಕರ್ಣ ಪರ್ವ,13,41
- 497. ಹೂಣೆಹೊಗು, ಶಪಥ ಮಾಡಿ ಮುನ್ನುಗ್ಗು, ಸಭಾ ಪರ್ವ,3,40
- 498. ಹೂತ, ಹೂ ಬಿಟ್ಟ, ಸಭಾ ಪರ್ವ,10,47
- 499. ಹೂತುದು, ಹೂ ಬಿಟ್ಟಿತು, ಭೀಷ್ಮ ಪರ್ವ,10,14
- 500. ಹೂತುದು, ಹೂಬಿಟ್ಟಿತು, ಸಭಾ ಪರ್ವ,1,3
- 501. ಹೂರಿಗೆ, ಪೂರಿಗೆ, ಆದಿ ಪರ್ವ,15,7
- 502. ಹೂಲಿ, ಎಚ್ಚರಿಕೆ, ಅರಣ್ಯ ಪರ್ವ,2,2
- 503. ಹೂವಲಿ, ರಂಗವಲ್ಲಿ (ಯಂತೆ ಮಾಡಿದ ಅಲಂಕಾರ), ವಿರಾಟ ಪರ್ವ,10,47
- 504. ಹೂವಳೆ, (ಹೂ+ಮಳೆ) ಹೂವಿನ ಮಳೆ, ಗದಾ ಪರ್ವ,13,15
- 505. ಹೂಸಕ, ಸುಳ್ಳು, ದ್ರೋಣ ಪರ್ವ,6,20
- 506. ಹೂಸಕ, ತೋರಿಕೆ, ಕರ್ಣ ಪರ್ವ,1,30
- 507. ಹೂಸಿ, ಪೂಸಿಕೊಂಡು, ಗದಾ ಪರ್ವ,1,26
- 508. ಹೂಸಿಕ, ಆಡಂಬರ, ದ್ರೋಣ ಪರ್ವ,16,25
- 509. ಹೂಸು, ಹಚ್ಚು, ಆದಿ ಪರ್ವ,20,60
- 510. ಹೂಸುಕ, ಹೂಸಕ , ಕರ್ಣ ಪರ್ವ,23,44
- 511. ಹೂಹೆ, ಬೊಂಬೆ, ದ್ರೋಣ ಪರ್ವ,5,78
- 512. ಹೂಹೆ, ಮರಿ, ಆದಿ ಪರ್ವ,20,32
- 513. ಹೂಹೆ, ಆಕಾರ, ವಿರಾಟ ಪರ್ವ,9,25
- 514. ಹೂಹೆ, ಗೊಂಬೆ, ವಿರಾಟ ಪರ್ವ,10,66
- 515. ಹೂಳಿದ, ಮರೆಯಾದ, ಅರಣ್ಯ ಪರ್ವ,2,2
- 516. ಹೂಳಿದ, ಹೂತುಹೋದ, ಗದಾ ಪರ್ವ,11,1
- 517. ಹೂಳಿದ, ತುಂಬಿದ, ಉದ್ಯೋಗ ಪರ್ವ,2,14
- 518. ಹೂಳಿದವು, ಆವರಿಸಿದವು, ಭೀಷ್ಮ ಪರ್ವ,8,56
- 519. ಹೂಳು, ತುಂಬು , ಶಲ್ಯ ಪರ್ವ,3,5, ,
- 520. ಹೂಳೆ ಬೀಸಿದ ಗುಳ, ಬಲವಾಗಿ ಅಕ್ಕ ಪಕ್ಕಕ್ಕೆ ಬಿಗಿದ ಹಕ್ಕರಿಕೆ, ಭೀಷ್ಮ ಪರ್ವ,8,44
- 521. ಹೃತ್ಕಮಲ, ಹೃದಯ ಕಮಲ, ಗದಾ ಪರ್ವ,3,43
- 522. ಹೃತ್ಸಂವಾದ, ಮನಸ್ಸಿನ ಸ್ವಗತ, ಭೀಷ್ಮ ಪರ್ವ,1,27
- 523. ಹೃದಯಸಂಚಿತ, ಹೃದಯದಲ್ಲಿ ಶೇಖರಗೊಂಡಿದ್ದ, ಗದಾ ಪರ್ವ,12,25
- 524. ಹೆಕ್ಕಳ, ಪೀಡೆ, ಸಭಾ ಪರ್ವ,11,15
- 525. ಹೆಕ್ಕಳ, ಬಾಧೆ, ಆದಿ ಪರ್ವ,9,3
- 526. ಹೆಕ್ಕಳ, ಸೊಕ್ಕು, ಭೀಷ್ಮ ಪರ್ವ,6,14
- 527. ಹೆಕ್ಕಳವಿಕ್ಕಿದ, ಮೆರೆದಾಡಿದ., ಸಭಾ ಪರ್ವ,13,57
- 528. ಹೆಕ್ಕಳಿಸು, ಹೆಚ್ಚಾಗು , ಗದಾ ಪರ್ವ,1,51, ,
- 529. ಹೆಗ್ಗಹಳೆಗಳು, ದೊಡ್ಡ ಕಹಳೆಗಳು, ಭೀಷ್ಮ ಪರ್ವ,2,4
- 530. ಹೆÉಗ್ಗಾಳೆ, ಒಂದು ವಾದ್ಯ, ದ್ರೋಣ ಪರ್ವ,9,16
- 531. ಹೆಗ್ಗೊಂಬೆ, ಮರದ ದೊಡ್ಡ ಕೊಂಬೆ, ಅರಣ್ಯ ಪರ್ವ,6,22
- 532. ಹೆಚ್ಚಾಳು, ಹಿರಿಮೆಯುಳ್ಳವನು, ಆದಿ ಪರ್ವ,11,21
- 533. ಹೆಚ್ಚಾಳುತನ, ದೊಡ್ಡ ವೀರನೆಂಬ ಭಾವ, ಗದಾ ಪರ್ವ,5,49
- 534. ಹೆಚ್ಚಿ, ಗರ್ವಿಸಿ, ಗದಾ ಪರ್ವ,5,9
- 535. ಹೆಚ್ಚು, ಉಬ್ಬು, ವಿರಾಟ ಪರ್ವ,3,73
- 536. ಹೆಡಗೆ, ಬುಟ್ಟಿ, ಆದಿ ಪರ್ವ,10,25
- 537. ಹೆಡಗೈ, ಹಿಂಗೈ, ವಿರಾಟ ಪರ್ವ,7,35
- 538. ಹೆಡತಲೆ, ಶಿಖರ, ದ್ರೋಣ ಪರ್ವ,1,44
- 539. ಹೆಡತಲೆ, ತಲೆಯ ಹಿಂಭಾಗ., ದ್ರೋಣ ಪರ್ವ,14,21
- 540. ಹೆಡೆತಲೆ, ಕತ್ತಿನ ಹಿಂಭಾಗ, ಉದ್ಯೋಗ ಪರ್ವ,1,20
- 541. ಹೆಣಗು, ಹಿಡಿತದಿಂದ ತಪ್ಪಿಸಿ ಕೊಳ್ಳಲು ಪ್ರಯಾಸಪಡು, ಆದಿ ಪರ್ವ,5,13
- 542. ಹೆಣದಿನಿಹಿ, ಹೆಣಗಳನ್ನು ತಿನ್ನುವವುಗಳು , ಗದಾ ಪರ್ವ,12,4, , , ಭೂತ , ಭೇತಾಳ , ಶಾಕಿನಿ ಇತ್ಯಾದಿಗಳು,
- 543. ಹೆದರೆದೆಯ, ಪುಕ್ಕಲ, ದ್ರೋಣ ಪರ್ವ,10,9
- 544. ಹೆಬ್ಬಟ್ಟೆ, ಹೆದ್ದಾರಿ, ಭೀಷ್ಮ ಪರ್ವ,9,38
- 545. ಹೆಬ್ಬಲ, ದೊಡ್ಡ ಸೇನೆ, ದ್ರೋಣ ಪರ್ವ,5,40
- 546. ಹೆಬ್ಬಿದಿರು, ದೊಡ್ಡ ಬೊಂಬು, ಆದಿ ಪರ್ವ,20,57
- 547. ಹೆಬ್ಬೆಳಸು, ಸಮೃದ್ಧ ಬೆಳೆ, ಭೀಷ್ಮ ಪರ್ವ,9,13
- 548. ಹೆಮ್ಮಕ್ಕಳು, ಹೆಣ್ಣುಮಕ್ಕಳು, ಭೀಷ್ಮ ಪರ್ವ,8,31
- 549. ಹೆಮ್ಮಳೆ, ಭಾರಿಯ ಮಳೆ, ಅರಣ್ಯ ಪರ್ವ,12,44
- 550. ಹೆರತೆಗೆ, ಹೊರಬರುವುದು, ಗದಾ ಪರ್ವ,6,23
- 551. ಹೆರದೆಗೆ, ಹಿಂದೆಗೆ , ಗದಾ ಪರ್ವ,7,3
- 552. ಹೆರಸಾರು, ಪಕ್ಕಕ್ಕೆ ಸರಿ, ಗದಾ ಪರ್ವ,7,7
- 553. ಹೆರೆ, ಎಣ್ಣೆ ಹಾಕು, ಕರ್ಣ ಪರ್ವ,8,12
- 554. ಹೇಮಗಿರಿ, ಮೇರುಗಿರಿ, ಆದಿ ಪರ್ವ,18,10
- 555. ಹೇರಂಬ, ಗಣಪತಿ, ಅರಣ್ಯ ಪರ್ವ,6,12
- 556. ಹೇರಡವಿ, ದಟ್ಟಡವಿ, ಭೀಷ್ಮ ಪರ್ವ,5,8
- 557. ಹೇರಾನೆ, ಹಿರಿದಾದ ಆನೆ , ಗದಾ ಪರ್ವ,3,9
- 558. ಹೇರಾಸಿ, ದೊಡ್ಡರಾಸಿ, ದ್ರೋಣ ಪರ್ವ,2,69
- 559. ಹೇರಾಳ, ಅಧಿಕ, ಕರ್ಣ ಪರ್ವ,24,32
- 560. ಹೇರಾಳ, ಧಾರಾಳ, ಆದಿ ಪರ್ವ,10,21
- 561. ಹೇರಿತು, ತುಂಬಿತು, ಗದಾ ಪರ್ವ,7,28, ,
- 562. ಹೇರುಗಳು, ಗಾಯದಿಂದಾದ ತೂತುಗಳು, ಗದಾ ಪರ್ವ,5,40
- 563. ಹೇರುರ, ವಿಶಾಲವಕ್ಷ ಸ್ಥಳ, ಆದಿ ಪರ್ವ,13,37
- 564. ಹೇವ, ದಾಕ್ಷಿಣ್ಯ, ದ್ರೋಣ ಪರ್ವ,6,25
- 565. ಹೇವಗೆಡಿಸಿದವರು, ಅವಮಾನಗೊಳಿಸಿದವರು, ಸಭಾ ಪರ್ವ,16,10
- 566. ಹೇವಮಾರಿ, ಮಾನಗೇಡಿ, ಕರ್ಣ ಪರ್ವ,4,27
- 567. ಹೇವರಿಸು, ಅಸಹ್ಯ ಪಡು, ಕರ್ಣ ಪರ್ವ,19,54
- 568. ಹೇಷಾನಿನದ, ಕೆನೆತ, ಭೀಷ್ಮ ಪರ್ವ,4,98
- 569. ಹೇಷಾರವ, ಕುದುರೆಗಳ ಧ್ವನಿ, ವಿರಾಟ ಪರ್ವ,10,54
- 570. ಹೇಷಿತರವ, ಕುದುರೆಗಳು ಕೆನೆಯುವ ಸದ್ದು, ಭೀಷ್ಮ ಪರ್ವ,2,3
- 571. ಹೇಳಿಕೆ ಆಯ್ತು, ಸುದ್ದಿ ಹಬ್ಬಿತು, ಭೀಷ್ಮ ಪರ್ವ,6,4
- 572. ಹೇಳಿಕೆ ಆಯ್ತು, ಅಪ್ಪಣೆ ಆಯಿತು, ಭೀಷ್ಮ ಪರ್ವ,9,50
- 573. ಹೇಳಿಗೆ, (ಹಾವುಗಳನ್ನಿಡುವ) ಬಿದಿರಿನ ಬುಟ್ಟಿ, ಕರ್ಣ ಪರ್ವ,1,1
- 574. ಹೇಳಿಗೆ, ಬುಟ್ಟಿ, ಸಭಾ ಪರ್ವ,16,24
- 575. ಹೈಡಿಂಬ, ಘಟೋತ್ಕಚ, ದ್ರೋಣ ಪರ್ವ,3,21
- 576. ಹೊಂಗರಿ, ಚಿನ್ನದಗರಿ (ಬಾಣದ ಹಿಂದಿನ ಗರಿ) ಬಾಯಿಧಾರೆ, ಶಲ್ಯ ಪರ್ವ,3,65
- 577. ಹೊಂಗಿದ, ಉಬ್ಬಿದ, ದ್ರೋಣ ಪರ್ವ,1,22
- 578. ಹೊಂಗು, ಹಿಗ್ಗು., ಉದ್ಯೋಗ ಪರ್ವ,8,8
- 579. ಹೊಂಗು, ಉಬ್ಬು, ವಿರಾಟ ಪರ್ವ,1,28
- 580. ಹೊಂಗು, ಉಕ್ಕಿಚಿಮ್ಮು, ಆದಿ ಪರ್ವ,16,62
- 581. ಹೊಂಗು, ಹೊಮ್ಮು ಉಬ್ಬು, ಭೀಷ್ಮ ಪರ್ವ,3,72
- 582. ಹೊಂಗು, ದೊಡ್ಡದಾಗು, ಆದಿ ಪರ್ವ,13,25
- 583. ಹೊಂಗೊಡ, ಬಂಗಾರದ ಕೊಡ, ದ್ರೋಣ ಪರ್ವ,1,37
- 584. ಹೊಂತಕಾರಿ, ವೀರರು, ಕರ್ಣ ಪರ್ವ,10,9
- 585. ಹೊಂತಕಾರಿ, ಚತುರರು, ದ್ರೋಣ ಪರ್ವ,12,7
- 586. ಹೊಂದಂಡಿಗೆ, ಬಂಗಾರದ ಪಲ್ಲಕ್ಕಿ, ದ್ರೋಣ ಪರ್ವ,8,55
- 587. ಹೊಂದಾಳ, ಚಿನ್ನದ ಬಣ್ಣದ ತಾಳ, ವಿರಾಟ ಪರ್ವ,6,58
- 588. ಹೊಂದಿಕೆ ಬಿರುಬು, ಕಾಠಿಣ್ಯ , ಶಲ್ಯ ಪರ್ವ,2,26
- 589. ಹೊಂಪುಳಿ, ಪುಲಕಿತ, ಆದಿ ಪರ್ವ,13,61
- 590. ಹೊಂಪುಳಿಯೋದನು, ರೋಮಾಂಚಗೊಂಡನು., ಭೀಷ್ಮ ಪರ್ವ,7,17
- 591. ಹೊಂಪುಳಿವೋಗಿ, ರೋಮಾಂಚನ , ಅರಣ್ಯ ಪರ್ವ,11,5
- 592. ಹೊಂಬರಹ, ಚಿನ್ನದ ರೇಖೆಗಳಲ್ಲಿನ ಬರಹ, ಗದಾ ಪರ್ವ,5,41
- 593. ಹೊಂಬಳಿ, ಚಿನ್ನವನ್ನು ಲೇಪಿಸಿದ ವಸ್ತ್ರ (ಪಳಿ, ಗದಾ ಪರ್ವ,4,14
- 594. ಹೊಂಬಾಳೆ, ಅಡಕೆ ಅಥವಾ ತೆಂಗಿನ ಹೂವಿನ ಗೊಂಚಲು, ಆದಿ ಪರ್ವ,12,11
- 595. ಹೊಂಬೆಳೆ, ಹೊನ್ನಿನ ಬೆಳೆ, ಆದಿ ಪರ್ವ,16,64
- 596. ಹೊಕ್ಕರು, ಪ್ರವೇಶಿಸಿದರು, ಆದಿ ಪರ್ವ,11,0
- 597. ಹೊಕ್ಕವರು, ಮುನ್ನುಗ್ಗಿದವರು, ಭೀಷ್ಮ ಪರ್ವ,4,43
- 598. ಹೊಕ್ಕು, ರಣರಂಗ ಪ್ರವೇಶಿಸಿ, ಭೀಷ್ಮ ಪರ್ವ,1,22
- 599. ಹೊಕ್ಕುದು, ಮುನ್ನುಗ್ಗಿತು, ಭೀಷ್ಮ ಪರ್ವ,4,34
- 600. ಹೊಗರಿಡುತ್ತ, ಉರಿಬೀರುತ್ತಾ, ಭೀಷ್ಮ ಪರ್ವ,9,39
- 601. ಹೊಗರಿನ, ಕಾಂತಿಯ, ದ್ರೋಣ ಪರ್ವ,3,56
- 602. ಹೊಗರುತೀಡು, ಫಳಫಳಗೊಳಿಸು, ಭೀಷ್ಮ ಪರ್ವ,4,94
- 603. ಹೊಗರೇರಿತು, ಕಳೆಯೇರಿತು, ಭೀಷ್ಮ ಪರ್ವ,10,14
- 604. ಹೊಗರೇಳು, ಉತ್ಸಾಹಿತನಾಗು, ಕರ್ಣ ಪರ್ವ,13,22
- 605. ಹೊಗರೊಗು, ಕಾಂತಿ ಸೂಸು, ವಿರಾಟ ಪರ್ವ,7,32
- 606. ಹೊಗಲಿ, ಪ್ರವೇಶಿಸಲಿ, ಭೀಷ್ಮ ಪರ್ವ,8,21
- 607. ಹೊಗಳು, ವರ್ಣಿಸು, ವಿರಾಟ ಪರ್ವ,5,9
- 608. ಹೊಗಳು<ಪುಗಳ್ ಹಳೆಗನ್ನಡದಲ್ಲಿ ಪುಗಳ್, ಹೊಗಳು ಎಂದರೆ ವಿವರ ಹೇಳು ಎಂದರ್ಥ ಅಷ್ಟೇ. ಈಗಲೂ ಸಬ್ ರಿಜಿಸ್ಟ್ರಾರರ ಕಛೇರಿಯಲ್ಲಿ ಜಮೀನಿನ ಚೆಕ್ಕು ಬಂದಿ ಇತ್ಯಾದಿಗಳನ್ನು ಹೊU, ವಿರಾಟ ಪರ್ವ,5,9
- 609. ಹೊಗಿಸು, ಹೋಗುವಂತೆ ಮಾಡು , ಗದಾ ಪರ್ವ,5,25,
- 610. ಹೊಗು, ಪ್ರವೇಶಿಸು., ಗದಾ ಪರ್ವ,3,39
- 611. ಹೊಗುವತ್ತ, ಹೋದ ಕಡೆಗೆ, ದ್ರೋಣ ಪರ್ವ,1,2
- 612. ಹೊಗೆದನು, ಹೊಗೆಯಾಡಿದನು, ಭೀಷ್ಮ ಪರ್ವ,9,7
- 613. ಹೊಗೆದುದಂಬರ, ಆಕಾಶದಲ್ಲಿ ಹೊಗೆ ಕಾಣಿಸಿತು, ವಿರಾಟ ಪರ್ವ,4,29
- 614. ಹೊಗೆದುದು, ಹೊಗೆ ತುಂಬಿತು, ಸಭಾ ಪರ್ವ,1,1
- 615. ಹೊಗೆದುದು, ಕಾಂತಿಹೀನವಾಯ್ತು, ಆದಿ ಪರ್ವ,8,91
- 616. ಹೊಗೆದೆಗೆದ, ಹೊಗೆಯಿಂದಾದ ಕಪ್ಪನ್ನು ತೆಗೆದು ಶುದ್ಧೀಕರಿಸಿದ, ಶಲ್ಯ ಪರ್ವ,2,6
- 617. ಹೊಗೆವಂದು, ಹೊಗೆ ಕಾರುವ ಹಾಗೆ (ಸುಡುವ) ಖತಿ, ಭೀಷ್ಮ ಪರ್ವ,9,22
- 618. ಹೊಗೆವೆರಸಿ, (ಹೊಗೆ+ಬೆರಸಿ), ಗದಾ ಪರ್ವ,11,67
- 619. ಹೊಟ್ಟನೂಕಿ, ಜಳ್ಳಿನಂತಿರುವ ರಾಜರನ್ನು ಮುಂದೆ ನೂಕಿ ಇಟ್ಟಳಿಸು ಆಕ್ರಮಿಸು, ಕರ್ಣ ಪರ್ವ,11,34
- 620. ಹೊಟ್ಟುಗ, ಬಲಹೀನ, ದ್ರೋಣ ಪರ್ವ,5,43
- 621. ಹೊಟ್ಟುಗರ, ಸತ್ವವಿಲ್ಲದವರ, ದ್ರೋಣ ಪರ್ವ,2,71
- 622. ಹೊಟ್ಟುಗುಟ್ಟು, ವ್ಯರ್ಥಾಲಾಪ ಮಾಡು. ಬತ್ತವನ್ನು ಕುಟ್ಟಿದರೆ ಅಕ್ಕಿ ಬರುತ್ತದೆ. ಬರಿಯ ತವುಡನ್ನೇ ಕುಟ್ಟಿದರೆ....? ಇದೊಂದು ನಾಣ್ಣುಡಿ., ವಿರಾಟ ಪರ್ವ,6,17
- 623. ಹೊಟ್ಟೆ ಹೊರೆಕ, ವೃಥಾ ಹೊಟ್ಟೆ ಹೊರೆಯುವವರು, ದ್ರೋಣ ಪರ್ವ,10,58
- 624. ಹೊಡಕರಿಸಿ, ಸ್ಫೂರ್ತಿಗೊಂಡು, ಭೀಷ್ಮ ಪರ್ವ,9,18
- 625. ಹೊಡಕರಿಸು, ಮುಖತೋರಿಸು , ಗದಾ ಪರ್ವ,5,43
- 626. ಹೊಡಮರಳಿ, ಹೊರಳು , ವಿರಾಟ ಪರ್ವ,3,17
- 627. ಹೊಡವಂಟು, ಪೊಡಮಟ್ಟು, ಶಲ್ಯ ಪರ್ವ,3,31
- 628. ಹೊಡವಂಡಿಸು, ನಮಸ್ಕಾರ ಮಾಡಿಸು, ಆದಿ ಪರ್ವ,16,7
- 629. ಹೊಡೆ, ಪೈರಿನಲ್ಲಿ ತೆನೆ ಬರುವುದಕ್ಕಿಂತ ಮೊದಲಿನ ಸ್ಥಿತಿ, ಆದಿ ಪರ್ವ,16,64
- 630. ಹೊಡೆ ಮರಳಿದ, ಅಡಿ ಮೇಲಾದ, ಭೀಷ್ಮ ಪರ್ವ,8,18
- 631. ಹೊಡೆ ಮರಳೆ, ಬುಡ ಮೇಲಾಗು, ದ್ರೋಣ ಪರ್ವ,15,36
- 632. ಹೊಡೆಗೆಡೆ, ಉದ್ದಕ್ಕೆ ಬೀಳು, ದ್ರೋಣ ಪರ್ವ,10,10
- 633. ಹೊಡೆಗೆಡೆದವು, ಕೆಳಕ್ಕೆ ಬೀಳಿಸಿದವು, ಭೀಷ್ಮ ಪರ್ವ,4,14
- 634. ಹೊಡೆಗೊಳಿಸಲು, ಅಪ್ಪಳಿಸಲು, ಭೀಷ್ಮ ಪರ್ವ,4,28
- 635. ಹೊಡೆಮಗುಳ್, ಚೇತರಿಸು, ಕರ್ಣ ಪರ್ವ,24,57
- 636. ಹೊಡೆಮರಳು, ತಿರುಗು, ವಿರಾಟ ಪರ್ವ,6,64
- 637. ಹೊಡೆಸೆಂಡು, ಚಂಡಿನಲ್ಲಿ ಹೊಡೆದಾಡುವ ಆಟ, ಶಲ್ಯ ಪರ್ವ,3,11
- 638. ಹೊಣಕಿಗರು, ಹೋರಾಟಗಾರರು, ಭೀಷ್ಮ ಪರ್ವ,4,21
- 639. ಹೊಣಕೆ, ಏರಾಟ, ದ್ರೋಣ ಪರ್ವ,15,60
- 640. ಹೊಣಕೆ, ಕಾಳಗ, ಗದಾ ಪರ್ವ,4,38
- 641. ಹೊಣಕೆಯಿಂದ, ಶಪಥಪೂರ್ಣನಾಗಿ, ಭೀಷ್ಮ ಪರ್ವ,8,26
- 642. ಹೊಣೆ, ಜವಾಬ್ದಾರಿ (ಇಲ್ಲಿ 'ಸೇಡು' ಎಂಬರ್ಥ) ಸೂಠಿ, ಗದಾ ಪರ್ವ,10,16
- 643. ಹೊಣೆಗಾರ, ಜವಾಬ್ದಾರ, ಆದಿ ಪರ್ವ,9,11
- 644. ಹೊತ್ತ ಅಸು, ಹೊತ್ತ ಜೀವ, ವಿರಾಟ ಪರ್ವ,4,38
- 645. ಹೊತ್ತು, ಪ್ರಾಪ್ತ, ಆದಿ ಪರ್ವ,11,3
- 646. ಹೊತ್ತುಗಳೆ, ಕಾಲ ಕಳೆ, ಆದಿ ಪರ್ವ,15,20
- 647. ಹೊದಕುಳಿ, ಬೇಗುದಿ, ಆದಿ ಪರ್ವ,8,3
- 648. ಹೊದರ, ಗುಂಪಿನ, ದ್ರೋಣ ಪರ್ವ,2,70
- 649. ಹೊದರಡಿಸಿ, ಗುಂಪಾಗಿ ಸೇರಿ, ಭೀಷ್ಮ ಪರ್ವ,9,37
- 650. ಹೊದರಹೊಯಿಲಿನಲ್ಲಿ, ಸಮೂಹವನ್ನು ಹರಡಿ, ಭೀಷ್ಮ ಪರ್ವ,3,66
- 651. ಹೊದರಿನ ಹೊರಳಿ, (ಆಭರಣಗಳ) ಗುಂಪಿನ ಕಾಂತಿ., ವಿರಾಟ ಪರ್ವ,10,10
- 652. ಹೊದರಿನ ಹೊರಳಿ, ಹಿಂಡು ಹಿಂಡಾಗುವ, ವಿರಾಟ ಪರ್ವ,4,34
- 653. ಹೊದರು, ಪೊದರು, ಗದಾ ಪರ್ವ,2,12
- 654. ಹೊದರು, ದಟ್ಟ, ಆದಿ ಪರ್ವ,20,27
- 655. ಹೊದರುದೆಗೆ, ಪ್ರಕಾಶಿಸು, ಶಲ್ಯ ಪರ್ವ,2,26
- 656. ಹೊದರೆದ್ದು ಮುಗಿದ, ಗುಂಪು ಗುಂಪಾಗಿ ಮುಗ್ಗರಿಸಿದ, ಭೀಷ್ಮ ಪರ್ವ,6,3
- 657. ಹೊದರೇಳು, ಹೊದ¾ು +ಏಳು = ಗುಂಪಾಗು, ವಿರಾಟ ಪರ್ವ,6,63
- 658. ಹೊದಸು, ಮುಚ್ಚು, ಕರ್ಣ ಪರ್ವ,17,1
- 659. ಹೊದೆ, ಬತ್ತಳಿಕೆ, ಶಲ್ಯ ಪರ್ವ,3,67
- 660. ಹೊದೆ, ಕಟ್ಟು, ಕರ್ಣ ಪರ್ವ,18,20
- 661. ಹೊದೆ, ಕಟ್ಟುಗಳು, ಶಲ್ಯ ಪರ್ವ,2,34
- 662. ಹೊದೆ, ಕೈಗವಸು, ಭೀಷ್ಮ ಪರ್ವ,4,12
- 663. ಹೊದೆಗಳ ಕೆದರಿ, ಕಟ್ಟನ್ನು ಬಿಚ್ಚಿ, ಭೀಷ್ಮ ಪರ್ವ,8,34
- 664. ಹೊದೆಗೆದರಿ, ಬತ್ತಳಿಕೆಯಿಂದ ಹೊರಬಿದ್ದು, ದ್ರೋಣ ಪರ್ವ,1,58
- 665. ಹೊದೆಗೆದರು, ಎಲ್ಲೆಡೆ ಹರಡು, ಕರ್ಣ ಪರ್ವ,13,22
- 666. ಹೊದೆಸಿದವು, ಆವರಿಸಿದವು, ಭೀಷ್ಮ ಪರ್ವ,9,37
- 667. ಹೊದ್ದದೆ, ಹೋಗದೆ, ಆದಿ ಪರ್ವ,8,93
- 668. ಹೊದ್ದಿ, ಸಮೀಪಿಸಿ, ದ್ರೋಣ ಪರ್ವ,1,21
- 669. ಹೊದ್ದಿಗ, ಹತ್ತಿರದವನು, ಭೀಷ್ಮ ಪರ್ವ,8,21
- 670. ಹೊದ್ದಿತಕೆ, ಹಿಡಿದುದಕ್ಕೆ , ಗದಾ ಪರ್ವ,7,53
- 671. ಹೊದ್ದಿದನು, ಸೇರಿದನು, ಭೀಷ್ಮ ಪರ್ವ,7,4
- 672. ಹೊದ್ದಿದರು, ಬಳಿ ಸಾರಿದರು, ಭೀಷ್ಮ ಪರ್ವ,4,74
- 673. ಹೊದ್ದಿಸು, ಅನ್ವಯಿಸು, ವಿರಾಟ ಪರ್ವ,6,25
- 674. ಹೊದ್ದು, (ಪೊರ್ದು) ಉಂಟಾಗು , ವಿರಾಟ ಪರ್ವ,2,25
- 675. ಹೊದ್ದು, ಹತ್ತಿರಬಾ, ವಿರಾಟ ಪರ್ವ,10,68
- 676. ಹೊನಲುಗಿಡಿ, ಕಿಡಿಗಳ ಪ್ರವಾಹ, ಆದಿ ಪರ್ವ,11,33
- 677. ಹೊನ್ನ ಸಾರಿ, ಚಿನ್ನದ ಪಗಡೆಕಾಯಿ, ವಿರಾಟ ಪರ್ವ,1,17
- 678. ಹೊನ್ನಾಯುಗ, ಚಿನ್ನದ ಹಿಡಿಕೆ, ವಿರಾಟ ಪರ್ವ,6,35
- 679. ಹೊಮ್ಮಿಣಿ, ಚಿನ್ನದ ಬಣ್ಣದ ಹಗ್ಗ, ಸಭಾ ಪರ್ವ,12,97
- 680. ಹೊಯ್, ವರ್ಷಿಸು, ಕರ್ಣ ಪರ್ವ,13,4
- 681. ಹೊಯಿ, ಹೊಡಿ, ಭೀಷ್ಮ ಪರ್ವ,4,31
- 682. ಹೊಯಿದಾಡಿದರು, ಹೋರಾಡಿದರು, ಭೀಷ್ಮ ಪರ್ವ,4,71
- 683. ಹೊಯಿಲಿನ, ಶಬ್ದದ, ಭೀಷ್ಮ ಪರ್ವ,4,10
- 684. ಹೊಯಿಲು, ಪೆಟ್ಟಿನ ದನಿ, ಭೀಷ್ಮ ಪರ್ವ,4,78
- 685. ಹೊಯ್ಕಂಬಿ, ಹೊಡೆಯುವ ಕೋಲು, ಆದಿ ಪರ್ವ,7,16
- 686. ಹೊಯ್‍ಕೆಯ್, ಸರಿಸಮಾನ, ದ್ರೋಣ ಪರ್ವ,3,34
- 687. ಹೊಯ್ಕೈಯ್, ಸರಿಸಮಾನ, ಸಭಾ ಪರ್ವ,13,27
- 688. ಹೊಯ್ಗಳು, ಹೊಡೆತಗಳು, ಗದಾ ಪರ್ವ,6,20
- 689. ಹೊಯ್ದಾಡಿ, ಯುದ್ಧಮಾಡಿ, ಭೀಷ್ಮ ಪರ್ವ,9,36
- 690. ಹೊಯ್ದಾಡಿ, ಹೊಡೆದಾಡಿ, ಕರ್ಣ ಪರ್ವ,3,0
- 691. ಹೊಯ್ದು, ಸದೆಬಡಿದು, ಭೀಷ್ಮ ಪರ್ವ,1,22
- 692. ಹೊಯ್ದು, ಪೆಟ್ಟು ನೀಡು, ಉದ್ಯೋಗ ಪರ್ವ,4,87
- 693. ಹೊಯ್ಯು, ಬಲಿಹಾಕು., ಶಲ್ಯ ಪರ್ವ,3,42
- 694. ಹೊಯ್ಲ, ಹೊಯ್ಯುವಿಕೆಯನ್ನು, ಸಭಾ ಪರ್ವ,1,74
- 695. ಹೊಯ್ಲ, ಹೊಡೆತದ, ಗದಾ ಪರ್ವ,6,30
- 696. ಹೊಯ್ಲ ಹೊದರೆದ್ದವು, ಹೊಡೆತಗಳು ಅಧಿಕವಾದುವು, ಸಭಾ ಪರ್ವ,2,108
- 697. ಹೊಯ್ಲ ಹೋರಟೆ, ಹೊಡೆತದ ಆರ್ಭಟ, ವಿರಾಟ ಪರ್ವ,3,89
- 698. ಹೊಯ್ಲಲಿ, ಏಟಿನಿಂದ, ದ್ರೋಣ ಪರ್ವ,5,2
- 699. ಹೊಯ್ಲಿನ, ಪ್ರಹಾರದ, ಭೀಷ್ಮ ಪರ್ವ,4,37
- 700. ಹೊರಗುಂದಿದರು, ಹೊರಗುಳಿದರು (?), ಆದಿ ಪರ್ವ,14,25
- 701. ಹೊರಗುಗಣೆ, ಬಾಣಗಳ ಹೊರಭಾಗ, ಶಲ್ಯ ಪರ್ವ,3,5
- 702. ಹೊರಬಾಹೆ, ಆಚಿನ , ಗದಾ ಪರ್ವ,6,28
- 703. ಹೊರಬಾಹೆ, ಹೊರಭಾಗ, ಆದಿ ಪರ್ವ,7,65
- 704. ಹೊರಬಿಗ, ಹೊರಗಡೆಯವನು, ಗದಾ ಪರ್ವ,6,19
- 705. ಹೊರಬಿನೊಳು, ಉತ್ಸಾಹದಲ್ಲಿ, ದ್ರೋಣ ಪರ್ವ,6,59
- 706. ಹೊರಬೀಸಿ, ತನ್ನ ದೇಹದ ಹೊರಕ್ಕೆ ಬೀಸುವಂತೆ ಮಾಡಿ, ಗದಾ ಪರ್ವ,6,31
- 707. ಹೊರಬೀಳು, ಪಾರಾಗು, ಆದಿ ಪರ್ವ,8,21
- 708. ಹೊರವಂಟ, ಹೊರಟ, ಗದಾ ಪರ್ವ,11,15
- 709. ಹೊರವಂಡಿಸು, ಹೊರಡಿಸು, ಆದಿ ಪರ್ವ,10,29
- 710. ಹೊರವಡಿಸು, ಹೊರಗೆ ಓಡಿಸು, ವಿರಾಟ ಪರ್ವ,5,17
- 711. ಹೊರಳಿ, ಸಮೂಹ , ವಿರಾಟ ಪರ್ವ,2,50, ,
- 712. ಹೊರಳಿ ಹೊದರು, ಸಮೂಹ ಒಗ್ಗೂಡು, ಭೀಷ್ಮ ಪರ್ವ,2,12
- 713. ಹೊರಳಿಗಟ್ಟು, ಒಟ್ಟುಸೇರು, ಕರ್ಣ ಪರ್ವ,4,28
- 714. ಹೊರಳಿಚು, ಮಗ್ಗುಲು ಸರಿಸು, ವಿರಾಟ ಪರ್ವ,8,91
- 715. ಹೊರಳಿತು, ಹಿಂದಕ್ಕೆ ಸರಿಯಿತು, ಭೀಷ್ಮ ಪರ್ವ,9,12
- 716. ಹೊರಳಿಯ ನರವ, ನರಸಮೂಹವ, ಭೀಷ್ಮ ಪರ್ವ,5,33
- 717. ಹೊರಳಿಸು, ನೆಲದ ಮೇಲೆ ಹೊರಳಾಡಿಸು, ಶಲ್ಯ ಪರ್ವ,3,76
- 718. ಹೊರಿಗೆ, ಪದರ, ಗದಾ ಪರ್ವ,7,31
- 719. ಹೊರಿಗೆ, ಜವಾಬ್ದಾರಿ., ಉದ್ಯೋಗ ಪರ್ವ,4,117
- 720. ಹೊರಿಗೆ, ಹೊಣೆ, ಸಭಾ ಪರ್ವ,1,41
- 721. ಹೊರಿಗೆ, ಕೆಲಸ , ಗದಾ ಪರ್ವ,9,11
- 722. ಹೊರಿಗೆವಾಳ, ರಕ್ಷಕ, ಅರಣ್ಯ ಪರ್ವ,16,18
- 723. ಹೊರಿಸು, ಹೊರೆಯನ್ನು ಹಾಕು, ಗದಾ ಪರ್ವ,11,59
- 724. ಹೊರುವೆನು, ಸೈರಿಸುವೆನು, ಭೀಷ್ಮ ಪರ್ವ,10,5
- 725. ಹೊರೆ, ಸಲಹು, ಉದ್ಯೋಗ ಪರ್ವ,10,32
- 726. ಹೊರೆ, ಪೋಷಿಸು, ಆದಿ ಪರ್ವ,10,15
- 727. ಹೊರೆ, ಪೊರೆ, ವಿರಾಟ ಪರ್ವ,10,38
- 728. ಹೊರೆ, ಕಟ್ಟು, ಗದಾ ಪರ್ವ,4,14
- 729. ಹೊರೆಗೆ, ಸಮೀಪಕ್ಕೆ., ಗದಾ ಪರ್ವ,4,28
- 730. ಹೊರೆದ, ಲೇಪಿಸಿದ, ಆದಿ ಪರ್ವ,15,35
- 731. ಹೊರೆದವನ, ಪೋಷಿಸಿದವರ, ಭೀಷ್ಮ ಪರ್ವ,8,66
- 732. ಹೊರೆದು, ಕಾಪಾಡಿ., ವಿರಾಟ ಪರ್ವ,10,20
- 733. ಹೊರೆದೆಗೆದು, ಹಗುರ ಮಾಡಿ, ಗದಾ ಪರ್ವ,11,10
- 734. ಹೊರೆಯಲು, ಕಾಪಾಡಲು, ಉದ್ಯೋಗ ಪರ್ವ,4,60
- 735. ಹೊರೆಯೇರಿ, ಉಬ್ಬಿ, ಭೀಷ್ಮ ಪರ್ವ,7,34
- 736. ಹೊರೆಯೇರು, ಪುಳಕಗೊಳ್ಳು, ಅರಣ್ಯ ಪರ್ವ,5,1
- 737. ಹೊರೆಯೇರು, ಆನಂದವನ್ನು ಹೊಂದು, ದ್ರೋಣ ಪರ್ವ,1,22
- 738. ಹೊರೆಯೊಳಗೆ, ಸಮೀಪದಲ್ಲಿ, ಭೀಷ್ಮ ಪರ್ವ,3,62
- 739. ಹೊರೆವ, ರಕ್ಷಿಸುವ, ಭೀಷ್ಮ ಪರ್ವ,7,16
- 740. ಹೊರೆವವರು, ಕಾಪಾಡುವವರು., ಗದಾ ಪರ್ವ,11,54
- 741. ಹೊರೆಹೊಗದೆ, ಮೋಸಹೋಗದೆ, ಆದಿ ಪರ್ವ,18,2
- 742. ಹೊರೆಹೊಗದೆ, ದಾಕ್ಷಿಣ್ಯವಿಲ್ಲದೆ, ದ್ರೋಣ ಪರ್ವ,1,39
- 743. ಹೊಲಗೆ, ಹೊಲಿಗೆ, ದ್ರೋಣ ಪರ್ವ,12,8
- 744. ಹೊಲಬು, ನೆಲೆ, ಉದ್ಯೋಗ ಪರ್ವ,4,13
- 745. ಹೊಲಬುಗೆಡಿಸು, ದಿಕ್ಕುತಪ್ಪಿಸು, ಶಲ್ಯ ಪರ್ವ,3,57
- 746. ಹೊಲಬುಹೊದ್ದದ, ತನ್ನ ನೆಲೆ ಕಾಣಿಸದ, ಭೀಷ್ಮ ಪರ್ವ,3,65
- 747. ಹೊಲೆ, ಮಲಿನತೆ, ಭೀಷ್ಮ ಪರ್ವ,3,48
- 748. ಹೊಲೆಯ, ಅಸ್ಪøಶ್ಯ, ಭೀಷ್ಮ ಪರ್ವ,3,48
- 749. ಹೊಲ್ಲೆಹ, ನೀಚತನ., ಗದಾ ಪರ್ವ,9,7
- 750. ಹೊಲ್ಲೆಹ, ರೀತಿ/ಬಗೆ, ಉದ್ಯೋಗ ಪರ್ವ,3,124
- 751. ಹೊಲ್ಲೆಹ, ಕೆಟ್ಟದ್ದು, ಆದಿ ಪರ್ವ,19,33
- 752. ಹೊಲ್ಲೆಹವು, ಅಧರ್ಮವಾದುದು, ಭೀಷ್ಮ ಪರ್ವ,7,30
- 753. ಹೊಲ್ಲೆಹವೆ, ತಪ್ಪೆ ?, ವಿರಾಟ ಪರ್ವ,9,18
- 754. ಹೊಳಕು, ಪ್ರಕಾಶಿಸು, ವಿರಾಟ ಪರ್ವ,4,32
- 755. ಹೊಳಕು, ಕಾಣಿಸು, ಆದಿ ಪರ್ವ,7,32
- 756. ಹೊಳಕೆಗಳೊ, ಕಾಂತಿಯೋ, ಭೀಷ್ಮ ಪರ್ವ,1,47
- 757. ಹೊಳಲ ಪರಿವಾರ, ಕಾವಲು ಸೇನೆ, ಭೀಷ್ಮ ಪರ್ವ,1,8
- 758. ಹೊಳಲು, ಪಟ್ಟಣ., ವಿರಾಟ ಪರ್ವ,1,22
- 759. ಹೊಳಹು, ಹೊಳಪು, ಆದಿ ಪರ್ವ,16,3
- 760. ಹೊಳಹು ದೂವಾಳಿ, ಕುದುರೆಯ ಗತಭೇದಗಳು, ಕರ್ಣ ಪರ್ವ,14,35
- 761. ಹೊಳಹುಮಿಗೆ, ಕಾಂತಿ ಉಕ್ಕಲು, ವಿರಾಟ ಪರ್ವ,10,51
- 762. ಹೊಳೆ, ಪ್ರಕಾಶಿಸು, ಆದಿ ಪರ್ವ,13,63
- 763. ಹೊಳ್ಳಾಗದು, ಸುಳ್ಳಾಗದು, ದ್ರೋಣ ಪರ್ವ,8,51
- 764. ಹೊಳ್ಳಿಸಬಹುದೆ, ಪಡೆದುಕೊಳ್ಳಬಹುದೆ, ದ್ರೋಣ ಪರ್ವ,3,49
- 765. ಹೊಳ್ಳಿಸಿ, ಹೋಳುಮಾಡಿ, ದ್ರೋಣ ಪರ್ವ,2,33
- 766. ಹೊಳ್ಳಿಸು, ಖಾಲಿಮಾಡು, ವಿರಾಟ ಪರ್ವ,7,14
- 767. ಹೊಳ್ಳಿಸುತ್ತಿದೆ, ಬಲಗುಂದಿಸುತ್ತಿದೆ, ಭೀಷ್ಮ ಪರ್ವ,10,4
- 768. ಹೊಳ್ಳಿಸೆ, ಹೊರಳಿಸುತ್ತ, ಭೀಷ್ಮ ಪರ್ವ,4,33
- 769. ಹೊಳ್ಳು, ನಿಸ್ಸತ್ವ, ದ್ರೋಣ ಪರ್ವ,2,47
- 770. ಹೊಳ್ಳು, ನಿಷ್ಪ್ರಯೋಜಕ, ಆದಿ ಪರ್ವ,14,34
- 771. ಹೊಳ್ಳು, ಪೊಟರೆ, ಆದಿ ಪರ್ವ,19,23
- 772. ಹೊಳ್ಳುಗ, ಟೊಳ್ಳಾಗಿರುವವರು, ಕರ್ಣ ಪರ್ವ,24,40
- 773. ಹೊಳ್ಳುಗರನು, ಸತ್ವ ಹೀನರನ್ನು, ದ್ರೋಣ ಪರ್ವ,2,30
- 774. ಹೊಳ್ಳುಗಳೆ, ವ್ಯರ್ಥವೆಂದು ತಿರಸ್ಕರಿಸು, ಕರ್ಣ ಪರ್ವ,5,2
- 775. ಹೊಳ್ಳುಗಳೆ, ಕಡೆಗಣಿಸು, ಆದಿ ಪರ್ವ,14,13
- 776. ಹೊಳ್ಳುವಾರು, ಅಪ್ರಯೋಜಕ, ಕರ್ಣ ಪರ್ವ,25,16
- 777. ಹೋತು+ತರಿಹಿಗಳು, ಹೋತಗಳನ್ನು ಬಲಿಕೊಡುವವರು, ಕರ್ಣ ಪರ್ವ,22,25
- 778. ಹೋದರು, ನಾಶಹೊಂದಿದರು, ಗದಾ ಪರ್ವ,11,43
- 779. ಹೋರಟಿ, ಹೋರಾಟ/ಕಾದಾಟ, ಉದ್ಯೋಗ ಪರ್ವ,3,75
- 780. ಹೋರಬೇಕೇ, ಯುದ್ಧ ಮಾಡಬೇಕೇ ? ಆರಯಿದು, ಭೀಷ್ಮ ಪರ್ವ,8,35
- 781. ಹೋರಿ, ಪ್ರಯತ್ನಿಸಿ, ಆದಿ ಪರ್ವ,14,0
- 782. ಹೋರಿಕೆ, ಹೋರಾಟ, ಗದಾ ಪರ್ವ,1,64
- 783. ಹೋರಿದು, ಹೋರಾಡಿ, ದ್ರೋಣ ಪರ್ವ,3,37
- 784. ಹೋರಿಸು, ಹೆಣಗಿಸು, ಆದಿ ಪರ್ವ,8,62
- 785. ಹೋರು, ವಿರೋಧ, ಕರ್ಣ ಪರ್ವ,26,37
- 786. ಹೋರುಗಳೆ, ಸೀಳುವುದು, ಶಲ್ಯ ಪರ್ವ,3,38
- 787. ಹೋರೆಗ, ಜ್ಯೋತಿಷಿ , ಆದಿ ಪರ್ವ,13,5
- 788. ಹೋಲ, ಹೊಲಿಕೆ, ಕರ್ಣ ಪರ್ವ,4,31
- 789. ಹೋಲುವಿಕೆಯಿಂಬಿಡಿಯಲಾರದೆ, ಹೋಲುವಿಕೆಯ + ಇಂಬು ಇಡಿಯಲಾರದೆ , ವಿರಾಟ ಪರ್ವ,4,1
- 790. ಹೋಳುಗಳೆವೆ, ಹೋಳು ಮಾಡು, ದ್ರೋಣ ಪರ್ವ,10,31
- 791. ಅಸಮಸೆಗೆ-, ಅಡ್ಡಾದಿಡ್ಡಿಗೆ, ಸಭಾ ಪರ್ವ,2,105
- 792. ದಿಷ್ಟಿವಾಳ, ಸೂಕ್ಷ್ಮ ನೋಟವುಳ್ಳ ಗುರಿಕಾರರು, ಸಭಾ ಪರ್ವ,2,105
- 793. ಹಾರುವಿಕೆ, ಬ್ರಾಹ್ಮಣಿಕೆ, ಆದಿ ಪರ್ವ,15,36
ನೋಡಿ
ಸಂಪಾದಿಸಿಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ