ಗದುಗಿನ ಭಾರತ ಪದಕೋಶ - ಇ. ಈ.


1. ಇಂಗಲೀಕ, ಪಾದರಸದಿಂದಾದ ಅದಿರು ಹೊಳೆವ ಲೋಹ, ದ್ರೋಣ ಪರ್ವ,5,13
2. ಇಂಗಳ, ಕೆಂಡ, ಆದಿ ಪರ್ವ,7,36
3. ಇಂಗಿತ, ಮನಸ್ಸಿನ ಭಾವ, ವಿರಾಟ ಪರ್ವ,2,17
4. ಇಂಗಿತ, ಮನೋಗತ, ಆದಿ ಪರ್ವ,13,25
5. ಇಂಗಿತ, ಆಶಯ, ಸಭಾ ಪರ್ವ,1,72
6. ಇಂಗಿತಜ್ಞ, ಮನೋಭಾವವನ್ನು ತಿಳಿದವನು., ಸಭಾ ಪರ್ವ,2,115
7. ಇಂದಿರಾಪತಿ, ಶ್ರೀಕೃಷ್ಣನು, ಸಭಾ ಪರ್ವ,3,6
8. ಇಂದು ಶೇಖರ, ಚಂದ್ರನನ್ನು ತಲೆಯಲ್ಲಿ ಧರಿಸಿದವನು, ದ್ರೋಣ ಪರ್ವ,3,68
9. ಇಂದುಕುಲ, ಚಂದ್ರ ವಂಶ, ಆದಿ ಪರ್ವ,4,38
10. ಇಂದುಧರ, ಚಂದ್ರನನ್ನು ಧರಿಸಿದವನು, ದ್ರೋಣ ಪರ್ವ,1,65
11. ಇಂದುಮುಖಿ, ಹೆಂಗಸು, ವಿರಾಟ ಪರ್ವ,5,15
12. ಇಂದುಮುಖಿ, ಚಂದ್ರನಂತೆ ಮುಖವುಳ್ಳವಳು (ಇಲ್ಲಿ ದ್ರೌಪದಿ) ಬೂತುಗೆಡೆ, ಗದಾ ಪರ್ವ,8,14
13. ಇಂದೂ ಪಲ, ಚಂದ್ರಕಾಂತ ಶಿಲೆ, ಅರಣ್ಯ ಪರ್ವ,8,15
14. ಇಂದೂಪಲ, ಚಂದ್ರಕಾಂತ ಶಿಲೆ, ದ್ರೋಣ ಪರ್ವ,9,6
15. ಇಂದೆಮಗೆ, ಈಗ ನಮಗೆ, ಸಭಾ ಪರ್ವ,5,39
16. ಇಂದ್ರ ಕುಮಾರ ನಂದನ, ಅಭಿಮನ್ಯು, ದ್ರೋಣ ಪರ್ವ,6,33
17. ಇಂದ್ರ ದಿಙ್ಮುಖ, ಪೂರ್ವ ದಿಕ್ಕಿನ ಕಡೆಯಿಂದ, ಆದಿ ಪರ್ವ,19,12
18. ಇಂದ್ರದಿಶೆ, ಪೂರ್ವದಿಕ್ಕು, ಗದಾ ಪರ್ವ,3,1
19. ಇಂದ್ರಪ್ರಸ್ಥ, ಪಾಂಡವರ ರಾಜಧಾನಿ, ವಿರಾಟ ಪರ್ವ,1,19
20. ಇಂದ್ರಾರಿ, ಇಂದ್ರನ ಶತ್ರು, ವಿರಾಟ ಪರ್ವ,7,44
21. ಇಂದ್ರಿಯಾವಳಿ, ಇಂದ್ರಿಯಗಳೆಲ್ಲವೂ, ಗದಾ ಪರ್ವ,10,4
22. ಇಂಧನ, ಸೌಧೆ, ಸಭಾ ಪರ್ವ,3,43
23. ಇಂಬಿಲ್ಲ, ಆಶ್ರಯವಿಲ್ಲ, ಭೀಷ್ಮ ಪರ್ವ,9,22
24. ಇಂಬುಗೆಟ್ಟದು ರೀತಿ, ರೀತಿಯ ನೆಲೆ ತಪ್ಪಿತು, ಭೀಷ್ಮ ಪರ್ವ,1,59
25. ಇಂಬುಗೊಂಡುದು, ಆಸರೆ ಪಡೆಯಿತು (ಸ್ಥಿರವಾಯಿತು), ವಿರಾಟ ಪರ್ವ,6,47
26. ಇಕ್ಕಡಿ, ಇಬ್ಬಾಯಿ ಭರ್ಜಿ, ಭೀಷ್ಮ ಪರ್ವ,4,78
27. ಇಕ್ಕಡಿ, ಎರಡು ತುಂಡಾಗು, ಭೀಷ್ಮ ಪರ್ವ,4,38
28. ಇಕ್ಕಡಿ, ಎರಡೂ ಕಡೆಯಿಂದ ಬೀಳುವ ಹೊಡೆತ, ಗದಾ ಪರ್ವ,1,29
29. ಇಕ್ಕಡಿಗಳೆ, ಎರಡು ಭಾಗ ಮಾಡು, ದ್ರೋಣ ಪರ್ವ,13,44
30. ಇಕ್ಕಡಿಗಾರ, ಕೊಲೆ ಮಾಡುವವನು, ದ್ರೋಣ ಪರ್ವ,5,78
31. ಇಕ್ಕಿದನು, ಬಡಿಸಿದನು, ಭೀಷ್ಮ ಪರ್ವ,7,4
32. ಇಕ್ಕಿದರಲಾ, ಸಾಯಿಸಿದರಲ್ಲಾ, ದ್ರೋಣ ಪರ್ವ,5,80
33. ಇಕ್ಕು, ಇಡು., ಉದ್ಯೋಗ ಪರ್ವ,4,96
34. ಇಕ್ಕೆ, ವಾಸಸ್ಥಳ , ಆದಿ ಪರ್ವ,4,12
35. ಇಕ್ಕೆ, ಆಶ್ರಯದ ಸ್ಥಾನ, ಅರಣ್ಯ ಪರ್ವ,12,4
36. ಇಕ್ಕೆಲ, ಎರಡು ಪಕ್ಕಗಳಲ್ಲೂ, ವಿರಾಟ ಪರ್ವ,2,3
37. ಇಕ್ಖಡಿಕಳೆ, ಎರಡು ತುಂಡಾಗಿ ಕತ್ತರಿಸು, ಭೀಷ್ಮ ಪರ್ವ,4,45
38. ಇಕ್ಷು, ಕಬ್ಬು, ಆದಿ ಪರ್ವ,13,26
39. ಇಟ್ಟಣಿಸಿ, ಒತ್ತೊತ್ತಾಗಿ, ವಿರಾಟ ಪರ್ವ,10,49
40. ಇಟ್ಟಣಿಸು, ಹಿಂಸೆಗೊಳಿಸು, ದ್ರೋಣ ಪರ್ವ,2,43
41. ಇಟ್ಟಣಿಸು, ಅಡೆತಡೆ, ಉದ್ಯೋಗ ಪರ್ವ,4,22
42. ಇಟ್ಟಣಿಸು, ಒಂದುಗೂಡು, ಶಲ್ಯ ಪರ್ವ,2,42
43. ಇಟ್ಟನು, ಹೊಡೆದನು, ಗದಾ ಪರ್ವ,2,31
44. ಇಟ್ಟಳಿಸಿ, ಇಟ್ಟಣಿಸಿ, ದ್ರೋಣ ಪರ್ವ,2,49
45. ಇಟ್ಟಳಿಸು, ಮೇಲೇರಿ ಬರು, ಗದಾ ಪರ್ವ,2,36
46. ಇಟ್ಟಳಿಸು, ಇಟ್ಟಣಿಸು, ಗದಾ ಪರ್ವ,7,33, , , A6D3D3B6EDB8EBBA, , , , , , , , , ,
47. ಇಟ್ಟಳಿಸು, ಗುಂಪಾಗು, ಶಲ್ಯ ಪರ್ವ,2,40
48. ಇಟ್ಟಳಿಸು, ದಟ್ಟವಾಗು, ಕರ್ಣ ಪರ್ವ,13,17
49. ಇಟ್ಟಿಡೆಯಾಗೆ, ಇಕ್ಕಟ್ಟಾಗಲು, ದ್ರೋಣ ಪರ್ವ,1,45
50. ಇಡಿದ, ಆವರಿಸಿದ, ವಿರಾಟ ಪರ್ವ,8,26
51. ಇಡಿದುದು, ಕಿಕ್ಕಿರಿಯಿತು, ಭೀಷ್ಮ ಪರ್ವ,5,21
52. ಇಡೆ, ಹೊಡೆಯಲು, ಗದಾ ಪರ್ವ,10,21
53. ಇಣಿಲು, ಹಿಣಿಲು, ಅರಣ್ಯ ಪರ್ವ,17,36
54. ಇತ್ತಂಡ, ಎರಡು ಪಕ್ಷ, ಆದಿ ಪರ್ವ,8,16
55. ಇತ್ತಂಡ, ಎರಡು ಗುಂಪು/ಬಣ, ಉದ್ಯೋಗ ಪರ್ವ,5,6
56. ಇದಿರಾಂತು, ಸ್ಪರ್ಧಿಸುತ್ತಾ, ಭೀಷ್ಮ ಪರ್ವ,4,22
57. ಇಧ್ಮ, ಸಮಿತ್ತು, ಸಭಾ ಪರ್ವ,7,22
58. ಇನತನುಜ, ಕರ್ಣ, ದ್ರೋಣ ಪರ್ವ,2,66
59. ಇನನಂದನ, ಸೂರ್ಯನ ಪುತ್ರ, ದ್ರೋಣ ಪರ್ವ,1,19
60. ಇನಿತಕ್ಕೆ, ಇಷ್ಟಕ್ಕೆ, ಗದಾ ಪರ್ವ,10,7
61. ಇನ್ನೆಬರ, ಇಲ್ಲಿಯವರೆಗೆ, ವಿರಾಟ ಪರ್ವ,10,41
62. ಇನ್ನೆವರ, ಇಲ್ಲಿಯ ತನಕ, ವಿರಾಟ ಪರ್ವ,9,16
63. ಇನ್ನೇನು ಭಯವು, ಇನ್ನು ಭಯವೆಲ್ಲಿದೆ ? ಅಂಘ್ರಿಪಂಕಜವ, ಸಭಾ ಪರ್ವ,2,33
64. ಇಬ್ಬಗಿಯಾದವು, ಬಿರಿದವು, ಭೀಷ್ಮ ಪರ್ವ,10,13
65. ಇಬ್ಬಗೆಯ ಮಾಡು, ಸೀಳು, ಉದ್ಯೋಗ ಪರ್ವ,3,102
66. ಇಭಗಮನೆ, ಆನೆಯಂತೆ ಮಂದ ಹೆಜ್ಜೆಗಳನ್ನಿರಿಸಿ ಬರುವ ಸ್ತ್ರೀ, ವಿರಾಟ ಪರ್ವ,10,78
67. ಇಭಪುರ, ಹಸ್ತಿನಾವತಿ, ಉದ್ಯೋಗ ಪರ್ವ,8,49
68. ಇಭಪುರಿ, ಹಸ್ತಿನಾಪುರ., ಆದಿ ಪರ್ವ,5,27
69. ಇಭಪುರಿ, ಹಸ್ತಿನಾಪುರಿ, ಆದಿ ಪರ್ವ,8,3
70. ಇಭಪುರಿ, ಹಸ್ತಿನಾವತಿ., ಉದ್ಯೋಗ ಪರ್ವ,7,23
71. ಇಭಬಲದ, ಆನೆಯ ಸೇನೆಯನ್ನು, ದ್ರೋಣ ಪರ್ವ,2,80
72. ಇಭಸಂಘಾತ, ಆನೆಗಳ ಸಮೂಹ, ಕರ್ಣ ಪರ್ವ,19,18
73. ಇಮ್ಮಡಿ, ಎರಡುಪಟ್ಟು, ಗದಾ ಪರ್ವ,7,48
74. ಇಮ್ಮಡಿಸಿದೈವತ್ತು, ಎರಡಾದ ಐವತ್ತು , ಗದಾ ಪರ್ವ,8,11
75. ಇಮ್ಮಡಿಸು, ಎರಡುಪಟ್ಟು ಹೆಚ್ಚಿಸು, ಭೀಷ್ಮ ಪರ್ವ,4,97
76. ಇಮ್ಮಡಿಸು, ಎರಡರಷ್ಟಾಗು, ಗದಾ ಪರ್ವ,11,41
77. ಇಮ್ಮೊನೆಗೊಡದಿರು, ಏಕಮುಖವಾಗಿ ಹೋರಾಡು, ಭೀಷ್ಮ ಪರ್ವ,4,30
78. ಇರದಲೇ, ಇಲ್ಲ ಅಲ್ಲವೇ ?, ಸಭಾ ಪರ್ವ,1,62
79. ಇರವನು, ಇರುವಿಕೆಯನ್ನು, ದ್ರೋಣ ಪರ್ವ,1,1
80. ಇರವು, ಬದುಕು, ಉದ್ಯೋಗ ಪರ್ವ,8,19
81. ಇರವು, ಸ್ಥಿತಿ, ಗದಾ ಪರ್ವ,10,3
82. ಇರವು, ಅಸ್ತಿತ್ವ, ಆದಿ ಪರ್ವ,20,42
83. ಇರಾವಂತ, ಪದ್ಯ 10ರಲ್ಲಿನ `ಉರಗರಾಜಕುಮಾರಿ' ಟಿಪ್ಪಣಿ ನೋಡಿ. ಕ್ಷಿತಿ, ಆದಿ ಪರ್ವ,19,12
84. ಇರಿ, ಯುದ್ಧ ಮಾಡು, ಆದಿ ಪರ್ವ,19,9
85. ಇರಿ < ಇ¾Â = ಬಿಚ್ಚು. ಕಿಗ್ಗಟ್ಟು, ಕೆಳಗಟ್ಟು, ವಿರಾಟ ಪರ್ವ,6,49
86. ಇರಿಗಾರ, ತಿವಿಯುವವನು, ವಿರಾಟ ಪರ್ವ,6,11
87. ಇರಿಗೆಲಸ, ಚುಚ್ಚುವ ಕಾರ್ಯ, ವಿರಾಟ ಪರ್ವ,2,12
88. ಇರಿದು, ಯುದ್ಧಮಾಡಿ, ದ್ರೋಣ ಪರ್ವ,2,44
89. ಇರಿದು, ಕೊಂದು, ದ್ರೋಣ ಪರ್ವ,1,3
90. ಇರಿದು, ತಿವಿದಾಡಿ, ಭೀಷ್ಮ ಪರ್ವ,4,43
91. ಇರಿವಡೆ, ಹೋರಾಡಿದರೆ, ದ್ರೋಣ ಪರ್ವ,4,6
92. ಇರಿವುದು, ಕೊಲ್ಲುವುದು, ಭೀಷ್ಮ ಪರ್ವ,3,40
93. ಇರುಕು, ಬಲವಂತವಾಗಿ ಸೇರುವುದು, ಗದಾ ಪರ್ವ,7,3
94. ಇರುಕು, ಒತ್ತಿಹಿಡಿ., ಉದ್ಯೋಗ ಪರ್ವ,8,13
95. ಇರುಬು, ಇಕ್ಕಟ್ಟಾದ ಪ್ರದೇಶ, ಗದಾ ಪರ್ವ,4,30
96. ಇರುಬು, ಇಕ್ಕಟ್ಟಾದ ಜಾಗ, ಅರಣ್ಯ ಪರ್ವ,23,10
97. ಇರುಬು, ಇಕ್ಕಟ್ಟಾದ ಜಾಗ , ಗದಾ ಪರ್ವ,4,50
98. ಇರುಳ ಕಡೆ, ಬೆಳಿಗ್ಗೆ, ಭೀಷ್ಮ ಪರ್ವ,8,8
99. ಇರುಳ ನೂಕುವುದು, ರಾತ್ರಿಯನ್ನು ಕಳೆಯುವುದು, ಗದಾ ಪರ್ವ,8,43
100. ಇವದಿರ, ಇವರನ್ನು, ದ್ರೋಣ ಪರ್ವ,2,44
101. ಇವನಲಿ, ಈ ಜರಾಸಂ, ಸಭಾ ಪರ್ವ,2,24
102. ಇವರಳಿವ, (ಕೀಚಕ, ವಿರಾಟ ಪರ್ವ,3,103
103. ಇವರಾರ ಹವಣಲ್ಲ, ಇವರಾರಿಗೂ ಬರಲಾರದು, ಸಭಾ ಪರ್ವ,5,1
104. ಇಷ್ಟಾಪೂರ್ತ, ಇಷ್ಟವಾದ್ದು, ಉದ್ಯೋಗ ಪರ್ವ,3,77
105. ಇಹದೊಳು, ಈ ಪ್ರಪಂಚದಲ್ಲೂ, ಸಭಾ ಪರ್ವ,1,81
106. ಇಹಪರ, ಭೂಮಿಯ ಮೇಲಿನ ಮತ್ತು ಆನಂತರದ (ಸ್ವರ್ಗದ) ಬದುಕು., ಗದಾ ಪರ್ವ,11,34
107. ಇಹಪರ, ಇಹಲೋಕ ಮತ್ತು ಪರಲೋಕ, ಗದಾ ಪರ್ವ,13,11
108. ಇಹಪರಕೆ, ಇಹಲೋಕ ಪರಲೋಕ, ಗದಾ ಪರ್ವ,11,47
109. ಇಹುದು ನಿರ್ವಾಹ, ಅವಕಾಶವಾದಂತಾಗುತ್ತದೆ., ವಿರಾಟ ಪರ್ವ,2,42
110. ಇಳಿಕೆಗಾಣ್, ಕೀಳಾಗಿ ಕಾಣುÉ, ವಿರಾಟ ಪರ್ವ,7,5
111. ಇಳೆ ಹಿಳಿಯೆ, ಭೂಮಿ ಬಿರಿಯುವಂತೆ, ಭೀಷ್ಮ ಪರ್ವ,3,1
112. ಇಳೆಕೊಯ್ಲ್ಲು, ಫಸಲು, ಭೀಷ್ಮ ಪರ್ವ,4,17
113. ಇಳೆಯ, ಭೂಮಿಯ, ಸಭಾ ಪರ್ವ,1,53
114. ಇಳೆಯವಲ್ಲಭ, ಭೂಪತಿ, ಆದಿ ಪರ್ವ,18,19
115. ಈ ಗಜಬಜವ, ಈ ಕೋಲಾಹಲವನ್ನೂ ಈ ಜನವನ್ನು ಎತ್ತಲೆಂದರಿ, ಸಭಾ ಪರ್ವ,3,36
116. ಈ ಗಳು, ಈಗ, ಸಭಾ ಪರ್ವ,5,16
117. ಈ ತೋರ್ಪಾತ, ಇಲ್ಲಿ ಕಾಣುವವನು, ವಿರಾಟ ಪರ್ವ,10,13
118. ಈ ಬಹೆನು, ಈಗ ಬರುತ್ತೇನೆ, ದ್ರೋಣ ಪರ್ವ,2,17
119. ಈ ಮಹೀಪತಿಸೂನು, ಈ ರಾಜನ ಮಗ ಭಗದತ್ತನೆಂಬವನು, ಸಭಾ ಪರ್ವ,3,19
120. ಈ ಮುಖದಲಿ, ಈ ಯುದ್ಧದಲ್ಲಿ, ಭೀಷ್ಮ ಪರ್ವ,3,30
121. ಈ=ಹೆರು ಈದುದೋ, ಹೆತ್ತಿತೋ, ವಿರಾಟ ಪರ್ವ,8,37
122. ಈಂಟುವರೆ, ಕುಡಿಯಲು, ದ್ರೋಣ ಪರ್ವ,10,26
123. ಈಕೆ ನಿನಗಹಳಲ್ಲ, ಈಕೆ ಸೈರಂಧ್ರಿ, ವಿರಾಟ ಪರ್ವ,2,14
124. ಈಟಿ. , ಖೇಡ, ಕರ್ಣ ಪರ್ವ,8,13, , , A7D3B82E003B00CABED5B6, , , , , , , , , ,
125. ಈಡಾಡು, ಕಿತ್ತೊಗೆ, ಉದ್ಯೋಗ ಪರ್ವ,8,11
126. ಈಡಾಡು, ಚೆದುರಿಸು, ಆದಿ ಪರ್ವ,8,9
127. ಈಡಿರಿ, ಬಲವಾಗಿ ಜಗ್ಗು, ಕರ್ಣ ಪರ್ವ,18,13
128. ಈಡಿರಿ, ಬಲವಾಗಿ ಹೊಡೆ, ಕರ್ಣ ಪರ್ವ,17,50
129. ಈಡಿರಿ, ಕೊಂಬಿನಿಂದ ಉಜ್ಜು, ವಿರಾಟ ಪರ್ವ,7,51
130. ಈಡಿರಿ, ತುಂಬಿಹೋಗು, ಶಲ್ಯ ಪರ್ವ,2,33
131. ಈಡಿರಿ, ಚುಚ್ಚು, ಗದಾ ಪರ್ವ,1,52, , , A7D5B8E5B8, , , , , , , , , ,
132. ಈಡಿರಿದ, ಗುರಿಯಿಟ್ಟು ಹೊಡೆದ, ಅರಣ್ಯ ಪರ್ವ,6,15
133. ಈಡಿರಿದ, ತುಂಬಿದ (ಕಿಕ್ಕಿರಿದು), ಉದ್ಯೋಗ ಪರ್ವ,4,118
134. ಈಡಿರಿದವು, ನಾಟಿದವು, ಭೀಷ್ಮ ಪರ್ವ,8,47
135. ಈತನ ಮಾರಿದೆನು ನಿನಗೆ, ಈತ, ಸಭಾ ಪರ್ವ,5,18
136. ಈತನಧಿಪತಿ, ಇವನೇ ಒಡೆಯ, ಸಭಾ ಪರ್ವ,3,59
137. ಈತನಲಿ, ಅರ್ಜುನನೊಡನೆ, ಸಭಾ ಪರ್ವ,3,19
138. ಈರಡಿ, ಎರಡು ಹೆಜ್ಜೆ, ಉದ್ಯೋಗ ಪರ್ವ,9,31
139. ಈರೇಳು ಲೋಕಗಳು, ಹದಿನಾಲ್ಕು ಲೋಕಗಳು, ಆದಿ ಪರ್ವ,2,12
140. ಈರೈದು, ಹತ್ತು (ಈರ್=ಎರಡು), ವಿರಾಟ ಪರ್ವ,7,22
141. ಈಶಾನ, ಶಿವ , ವಿರಾಟ ಪರ್ವ,10,10
142. ಈಸನು, ಇಷ್ಟೊಂದು, ದ್ರೋಣ ಪರ್ವ,8,51
143. ಈಸು, ಇಷ್ಟೊಂದು, ವಿರಾಟ ಪರ್ವ,9,30
144. ಈಸು, ಈಜು, ಗದಾ ಪರ್ವ,11,33
145. ಈಸು, ರಥದ ಈಚು., ಕರ್ಣ ಪರ್ವ,7,2
[][]

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಸಿರಿಗನ್ನಡ ಅರ್ಥಕೋಶ