ಚಿತ್ರ: ಗಾಳಿಪಟ
ಸಾಹಿತ್ಯ: ಯೋಗ್ ರಾಜ್ ಭಟ್
ಸಂಗೀತ: ವಿ. ಹರಿಕೃಷ್ಣ
ಗಾಯನ: ಚಿತ್ರ ಕೆ. ಎಸ್.


ನಧೀಂ ಧೀಂ ತನ |೨|
ಮಧುರ ಪ್ರೇಮದ ಮೊದಲ ತಲ್ಲಣ
ಧ್ಯನ ಆಲಿಂಗನ..

ನಧೀಂ ಧೀಂ ತನ |೨|
ಮಧುರ ಪ್ರೇಮದ ಮೊದಲ ತಲ್ಲಣ
ಧ್ಯನ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ..
ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ..
ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ!

ನಧೀಂ ಧೀಂ ತನ |೨|
ಮಧುರ ಪ್ರೇಮದ ಮೊದಲ ತಲ್ಲಣ
ಧ್ಯನ ಆಲಿಂಗನ..
ಮೊದಲ ಹೆಜ್ಜೆಗೆ ಏನೊ ಕಂಪನ
ಏನೀ ರೋಮಾಂಚನ!

ಮಾತೊಂದ ಕೇಳು ನೀ ಹರಿಸಿ
ಹಾಡೊಂದ ಹೇಳು ನೀ ಹರಿಸಿ

ಪ್ರೇಮದ ಸರಿ-ಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಳಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ-ರಾಣಿ, ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ, ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೆ..
ಆ ಚಂದಾಮಾಮ ಕಥೆಗೆ ನಾಯಕಿ ನಾ!

ನಧೀಂ ಧೀಂ ತನ |೨|
ಮಧುರ ಪ್ರೇಮದ ಮೊದಲ ತಲ್ಲಣ
ಧ್ಯನ ಆಲಿಂಗನ..
ಮೊದಲ ಹೆಜ್ಜೆಗೆ ಏನೊ ಕಂಪನ
ಏನೀ ರೋಮಾಂಚನ!

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನಾ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ..
ಕೈಯ್ಯಾ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೊ ವೇಳೆ..
ಮಲ್ಲಿ ಹೂವ ಮುಡಿಸೊ ಒಮ್ಮೆ
ನಾನು ಭೂಮಿ.. ಆವರಿಸು ಸುರಿವ ಮಳೆಯಂತೆ ನನ್ನ!

ನಧೀಂ ಧೀಂ ತನ |೨|
ಮಧುರ ಪ್ರೇಮದ ಮೊದಲ ತಲ್ಲಣ
ಧ್ಯನ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ..
ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ..
ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ!


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ