ಚಿತ್ರ: ಗುರಿ

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಡಾ| ರಾಜ್‍ಕುಮಾರ್



ವಸಂತ ಕಾಲ ಬಂದಾಗ

ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೆ ಬೇಕು
ಕಂಕಣ ಕೂಡಿ ಬಂದಾಗ
ಮದುವೆ ಆಗಲೇ ಬೇಕು
ಮಂಗಳ ವಾದ್ಯ ಮೊಳಗಲೇ ಬೇಕು

ಹೊಸಬಾಳ ಹೊಸಿಲಲ್ಲಿ
ನಸುನಾಚಿ ನಿಂತಾಗ
ನಿನ್ನಂದ ನಾ ನೋಡಬೇಕು

||ವಸಂತ ಕಾಲ||

ರೇಷ್ಮೇ ಸೀರೆಯುಟ್ಟು

ಹೊಸ ಹೂವ ಮುಡಿಯಲಿಟ್ಟು
ಮಧುಮಗಳಾಗಿ ಕುಳಿತಿರುವಾಗ ||೨||
ನೋಡುವುದೇ ಭಾಗ್ಯ ನಿನ್ನನು

ಮಂತ್ರ ಹೇಳುವಾಗ
ಮಾಂಗಲ್ಯ ಕಟ್ಟುವಾಗ

ಕಳ್ಳಿಯಹಾಗೆ ಮಳ್ಳಿಯ ಹಾಗೆ ||೨||
ನಲ್ಲನ ನೀ ನೋಡೋ ನೋಟವಾ
ಕಾಣುವಾಸೆ ತಾಳಲಾರೆ ನನ್ನ ಮುದ್ದಿನ ಸೋದರಿ

|| ವಸಂತ ಕಾಲ||

ಜೋಡಿ ಬಂದ ಮೇಲೆ

ನಿನ್ನ ಬಾಳ ರೀತಿ ಬೇರೆ
ಬದುಕಲಿ ಜಾಲಿ, ವರುಷದಿ ಲಾಲಿ ||೨||
ಗೊಂಬೆಯ ಹಾಗೊಂದು ಕೈಯಲಿ
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ
ತಂಗಿಯೇ ನಿನಗೆ ಅಂದದ ಸೊಸೆಯಾ
ಎಲ್ಲಿಂದ ನಾ ತಂದು ಕೊಡಲಿ

ಓ...ಲಕ್ಷ ಲಕ್ಷ ಕೇಳಿದಾಗ
ಎಲ್ಲಿಗೆ ನಾ ಹೋಡಿ ಹೋಗಲಿ

||ವಸಂತ ಕಾಲ||

||ವಸಂತ ಕಾಲ||

ತಾಕ್ಕಡ್ತ ತಾಕಡ್ತ ತಕ್ ತಾ....ಹ ಹ ಹ ಹ...


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ