- ಚಿತ್ರ: ನಮ್ಮೂರ ಮಂದಾರ ಹೂವೆ
- ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
- ಸಂಗೀತ: ಇಳಯರಾಜ
ಆ ಆ ಆ ಆ ಆ ಆ...
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಆ ಆ ಆ..
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ
ನಿನ್ನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ..
ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ..
ನಿನ್ನ ತಳುಕೆ ಸ್ಪೂರ್ತಿ
ಆತಾರಾ, ಸಂಸಾರ, ಶೃಂಗಾರ ಬೇಡುತ್ತ ಕಾದಿತ್ತು ಆ ಬಾನಲ್ಲಿ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ಬೀಸೊ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
ನಿನ್ನ ವಯಸೆ ತಂಪಿನಲು ಬಲು ತಂಪು ಬಲು ತಂಪು
ಹರಿಯೊ ನೀರೆಲ್ಲ ನಿನ್ನ ಗೆಜ್ಜೆ ನಾದ ವರವಾಯ್ತು ಅಂತು
ನೀ ಕೊಡುವ ಕಲರವವೆ ಕಿವಿಗಿಂಪು, ಕಿವಿಗಿಂಪು
ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು ನಿನ್ನ ಹೆಸರೆ ಸ್ಪೂರ್ತಿ
ಈ ನಿನ್ನ ವಯ್ಯಾರ ನೋಡುತ್ತ ಹಾಡಿತ್ತು
ಮಂದಾರ ಈ ಊರಲ್ಲಿ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ