'ಕವಿಶಿಷ್ಯ'

ಸಂಪಾದಿಸಿ
  • 'ಕವಿಶಿಷ್ಯ' ಕಾವ್ಯನಾಮದಿಂದ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರು ಪ್ರಾತಃಸ್ಮರಣೀಯ ಸಾಹಿತಿಗಳು. ಶಿಶು ಸಾಹಿತ್ಯದಲ್ಲಿ ಅವರ ಸೇವೆ ಅಜರಾಮರ. ಕನ್ನಡದ ಆಚಾರ್ಯಪುರುಷರಲ್ಲಿ ಪಂಜೆಯವರೂ ಅಗ್ರಗಣ್ಯರು. ಸೂಕ್ಷ್ಮ ಸಂವೇದನೆಯ, ರಸಿಕ, ಕವಿ, ವಿಮರ್ಶಕ ಹಾಗೂ ಸಾಹಿತಿ ಪಂಜೆ ಮಂಗೇಶರಾಯರು. ಕತೆ, ಕವನ, ಹರಟೆ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋಧನೆ, ವೈಚಾರಿಕ ಲೇಖನ... ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಮಂಗೇಶರಾಯರು ಶಿಶು ಸಾಹಿತ್ಯದಲ್ಲಿ ತಮ್ಮದೇ ಆದಂತಹ ವಿಶೇಷತೆಗಳಿಂದ ಜನಾನುರಾಗಿಯಾಗಿದ್ದರು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಗಳನ್ನು ಸಂಪಾದಿಸಿದರು. ತಾನೊಬ್ಬ ಕವಿಯ ಶಿಷ್ಯನಷ್ಟೆ ಎಂಬ ವಿನಯ ಅವರದಾಗಿತ್ತು. ಹಾಗಾಗಿ ತಮ್ಮ ಕಾವ್ಯನಾಮವನ್ನು 'ಕವಿಶಿಷ್ಯ' ಎಂದು ಇಟ್ಟುಕೊಂಡಿದ್ದರು. 'ಹರಟೆಮಲ್ಲ', 'ರಾ.ಮ.ಪಂ' ಎಂಬ ಗುಪ್ತನಾಮಗಳಿಂದಲೂ ಸಾಹಿತ್ಯ ಕೃಷಿ ಮಾಡಿದ್ದಾರೆ.
  • "ನಾಗರಹಾವೆ ಹಾವೊಳು ಹೂವೆ" ಪಂಜೆ ಮಂಗೇಶರಾಯರದ ಜನಪ್ರಿಯ ಶಿಶುಗೀತೆ. ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಗೀತೆ ಇದಾಗಿದೆ. ಇಂದಿನ ಮಕ್ಕಳಿಗೆ ಈ ರೀತಿಯ ಸಾಹಿತ್ಯ ಸಿಗುವುದು ಬಹಳ ಕಷ್ಟ. ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು ಕೊಂಕಣಿ, ಊರ ಜನಬಳಕೆಯ ನುಡಿ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ, ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿವೆ.

ಹಾವಿನ ಹಾಡು

ಸಂಪಾದಿಸಿ

ನಾಗರಹಾವೆ! ಹಾವೊಳು ಹೂವೆ !
ಬಾಗಿಲ ಬಿಲದಲಿ ನಿನ್ನಯ ಠಾವೆ ?
ಕೈಗಳ ಮುಗಿವೆ, ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗಾ
ಹೊಳಹಿನ ಹೊಂದಲೆ ತೂಗೋ, ನಾಗಾ !
ಕೊಳಲನ್ನೂ ಮನೆ ಲಾಲಿಸು ರಾಗಾ
ನೀ ನೀ ನೀ ನೀ ನೀ ನೀ ನೀ ನೀ।

ಎಲೆ ನಾಗಣ್ಣ, ಹೇಳೆಲೊ ನಿನ್ನಾ
ತಲೆಯಲಿ ರನ್ನವಿಹ ನಿಜವನ್ನಾ
ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ
ತಾ ತಾ ತಾ ತಾ ತಾ ತಾ ತಾ ತಾ

ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ
ಕವಿ:

  • ಕವಿಶಿಷ್ಯ ( ಪಂಜೆ ಮಂಗೇಶರಾವ್)
  • ಕವಿ: ಪಂಜೆ ಮಂಗೇಶರಾವ್

[][]

ತೆಂಕಣಗಾಳಿ

ಸಂಪಾದಿಸಿ
  • ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ,

ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್,
ಕುಡಿ ನೀರನು ಒಣಗಿದ ನೆಲ ಕೆರೆಮೋಲ್
ಬಂತೈ ಬೀಸುತ! ಬೀಸುತ ಬಂತೈ ! ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ !
ಬಂತೈ ! ಬಂತೈ ! ಬಂತೈ ! ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ ![]

  • ಕವಿ:

ಕವಿಶಿಷ್ಯ (ಪಂಜೆ ಮಂಗೇಶರಾವ್)

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  This user has a page on Wikipedia.
  1. ನಾಗರಹಾವೆ ಹಾವೊಳು ಹೂವೆ ಬಾಗಿಲ ಬಿಲದಲಿ...By Rajendra| Updated: Monday, July 23, 2012,
  2. ಪುಟ:ಕನ್ನಡದ ಬಾವುಟ.djvu/೧೩೯
  3. ಪುಟ:ಕನ್ನಡದ ಬಾವುಟ.djvu/೧೩೯