ರಚನೆ: ಶ್ರೀ ಕನಕದಾಸರು
ನೀ ಮಾಯೆಯೊಳಗೋ
ನಿನ್ನೊಳು ಮಾಯೆಯೋ
ನೀ ದೇಹದೊಳಗೋ
ನಿನ್ನೊಳು ದೇಹವೋ ಹರಿಯೇ||
ಬಯಲೊಳಗೆ ಆಲಯವೋ
ಆಲಯದಿ ಬಯಲೋ
ಬಯಲು ಆಲಯವೆರಡು
ನಯನದೊಳಗೊ
ನಯನ ಬುದ್ಧಿಯ ಒಳಗೋ
ಬುದ್ಧಿ ನಯನದ ಒಳಗೋ
ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೇ||
ಸವಿಯು ಸಕ್ಕರೆಯೊಳಗೋ
ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಗಳೆರಡು
ಜಿಹ್ವೆಯೊಳಗೋ
ಜಿಹ್ವೆ ಮನಸಿನ ಒಳಗೋ
ಮನಸು ಜಿಹ್ವೆಯ ಒಳಗೋ
ಜಿಹ್ವೆ ಮನಸುಗಳೆರಡು
ನಿನ್ನೊಳಗೊ ಹರಿಯೇ ||
ಕುಸುಮದಲಿ ಗಂಧವೋ
ಗಂಧದಲಿ ಕುಸುಮವೋ
ಕುಸುಮ ಗಂಧಗಳೆರಡು
ಆಘ್ರಾಣದೊಳಗೋ
ಅಸಮಭವ ಕಾಗಿನೆಲೆ ಆದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೋ ಹರಿಯೇ ||
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ