- ಚಿತ್ರ: ಪರಸಂಗದ ಗೆಂಡೆತಿಮ್ಮ
- ಸಾಹಿತ್ಯ: ದೊಡ್ಡರಂಗೇಗೌಡ
- ಸಂಗೀತ: ರಾಜನ್-ನಾಗೇಂದ್ರ
- ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ...
ಹಕ್ಕಿ ಹಾಡ್ಯಾವೇ...
ಬೀರ್‍ಯಾವೇ, ಚೆಲುವಾ ಬೀರ್‍ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್, ಹಾಡಿ ಕುಣಿಯೋಣ ತಮ್ಮಾ
ಬೇಲಿ ಮ್ಯಾಗೆ ಬಣ್ಣ ಬಣ್ಣದ
ಹೂವು ಅರಳ್ಯಾವೆ
ಆ ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆ
ಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
||ಕುಂತರೆ ಸೆಳೆವ, ಸಂತಸ ತರುವ||
ಹೊಂಗೆ ತೊಂಗೆ ತೂಗಿ ತೂಗಿ
ಗಾಳಿ ಬೀಸ್ಯಾವೇ
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ...
ಹಕ್ಕಿ ಹಾಡ್ಯಾವೇ...
ಮರಗಿಡ ಕೂಗ್ಯಾವೇ...
ಚಿಲಿಪಿಲಿ ಹಕ್ಕಿ ಹಾಡ್ಯಾವೇ...
ಭೂಮಿ ಮೇಲೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ
||ಭಾವಾ ಬಿರಿದು, ಹತ್ತಿರ ಕರೆದು ||
ಮಾವು ಬೇವು ತಾಳೆ ತೆಂಗು
ಲಾಲಿ ಹಾಡ್ಯಾವೆ
||ತೇರಾ ಏರಿ...||
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ