ಪಲ್ಲವಿ ಅನುಪಲ್ಲವಿ - ನಗುವ ನಯನ ಮಧುರ ಮೌನ

ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯರಾಜ

ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ


ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೋಸ ಭಾಷೆ ಇದು ... ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೆ?

ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ

ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು

ಜೊತೆಯಾಗಿ ನಡೆವೆ ನಾ ಮಳೆಯಲು
ಬಿಡದಂತೆ ಹಿಡಿವೆ ಈ ಕೈಯನು
ಗೆಳೆಯಾ ಜೊತೆಗೆ ಹಾರಿ ಬರುವೆ
ಬಾನಾ ಎಲ್ಲೆ ದಾಟಿ ನಲಿವೆ

ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ?

ಈ ರಾತ್ರಿ ಹಾಡು ಪಿಸು ಮಾತಲಿ
ನಾ ತಂದೆ ಇನಿದಾದ ಸವಿ ರಾಗವ

ನೀನಲ್ಲಿ ನಾನಿಲ್ಲಿ ಏಕಾಂತವೆ
ನಾ ಕಂಡೆ ನನ್ನದೆ ಹೊಸ ಲೋಕವ

ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ

ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ

ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ

ಹೊಸ ಭಾಷೆ ಇದು...ರಸ ಕಾವ್ಯವಿದು...
ಇದ ಹಾಡಲು ಕವಿ ಬೇಕೇ?

ಲ ಲ ಲ ಲ ಲ ಲ ಲ ಲ ಲ ಲ ಲಾಆಆಆ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ