ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ

ಚಿತ್ರ / ಧ್ವನಿಸುರುಳಿ: ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಹಾಡು: ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಪುರಂದರದಾಸರು
ಬಿಡುಗಡೆ ವರ್ಷ: ೨೦೧೯ ಪಿ. ಎಂ. ಆಡಿಯೋಸ್
ರಾಗ: ಭೀಮ್ ಪಲಾಸಿ
ಶ್ರುತಿ: ಸಿ#
ತಾಳ: ೨/೪
ಲಯ: ~ ೮೬ ಬಿಪಿಎಂ


ಪಲ್ಲವಿ:

ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೇದೇವಿ ಮಂಗಳೆದೇವಿ
ಲಲಿತಾಂಗಿ ಶುಭೇದೇವಿ ಮಂಗಳೆದೇವಿ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ


ಚರಣ-೧

ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದಸಿವಕರನ್ನು
ಕಾದುಕೋ ನಿನ್ನಯ ಪಾದಸಿವಕರನ್ನು
ಆದಿ ಶಕ್ತಿ ಸರ್ವಾದಾರ ಗುಣ ಪೂರ್ಣೆ
ಆದಿ ಶಕ್ತಿ ಸರ್ವಾದಾರ ಗುಣ ಪೂರ್ಣೆ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ


ಚರಣ -೨

ನೀನಲ್ಲದೇಅನ್ಯ ರಕ್ಷಿಪರನು ಕಾಣೆ ನಾ ಮುನ್ನ
ನೀನಲ್ಲದೇಅನ್ಯ ರಕ್ಷಿಪರನು ಕಾಣೆ ನಾ ಮುನ್ನ
ದಾನವಾಂತಕ ಸಿರಿ ಪುರಂದರ ವಿಠ್ಠಲನ
ದಾನವಾಂತಕ ಸಿರಿ ಪುರಂದರ ವಿಠ್ಠಲನ
ವಿಠ್ಠಲ ಅಅ. . . . . . ಅಅಅಅ. . . . . ವಿಠ್ಠಲ
ದಾನವಾಂತಕ ಸಿರಿ ಪುರಂದರ ವಿಠ್ಠಲನ
ದ್ಯಾನಿಪ ಭಕುತರ ಮಾನ ನಿನ್ನದು ತಾಯೆ
ದ್ಯಾನಿಪ ಭಕುತರ ಮಾನ ನಿನ್ನದು ತಾಯೆ


ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೇದೇವಿ ಮಂಗಳೆದೇವಿ
ಲಲಿತಾಂಗಿ ಶುಭೇದೇವಿ ಮಂಗಳೆದೇವಿ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ
ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ
ಮಹಾಲಕ್ಷ್ಮೀ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ