ಪ್ರೇಮರಾಗ ಹಾಡು ಗೆಳತಿ - ಮಲ್ಲೆ ಹೂವ ಮಾಲೆ ಮುಡಿಸಿ

ಚಿತ್ರ: ಪ್ರೇಮರಾಗ ಹಾಡು ಗೆಳತಿ
ಸಾಹಿತ್ಯ: ಎಸ್.ಎಂ. ಪಾಟಿಲ್
ಸಂಗೀತ: ಇಳಯರಾಜ
ಗಾಯನ: ಗಂಗಾಧರ್


ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನಾ ನಾ ಕೈ ಹಿಡಿವೆ ..
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನಾ ನಾ ಕರೆದೊಯ್ಯುವೆ ..
ನಿನ್ನ ವಧುವಾಗಿಸುವೆ ನಾನು
ನನ್ನ ಮನೆ ತುಂಬಿಕೊಳ್ಳುವೆನು
ಇನ್ನು ನೋವೆಂದು .. ನೀ ಕಾಣೆ ಈ ಬಾಳಲಿ!

ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನಾ ನಾ ಕೈ ಹಿಡಿವೆ ..
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನಾ ನಾ ಕರೆದೊಯ್ಯುವೆ!

ನಿನ್ನ ಈ ಮೌನ ತಂದ ಆ ನೋವ ನಾನು ಹಂಚಿಕೊಳುವೆ
ನಮ್ಮ ಅನುಬಂಧ ಕಂಡ ಈ ಲೋಕ ಏನೆ ಹೇಳಿ ನಗಲಿ
ನಿನ್ನ ನೋಟದ ಭಾಷೆ ಕಲಿಯುವೆ ಮನ ತುಂಬ ಮಾತನ್ನು ಸುರಿವೆ
ನಾಳೆ ಬಾಳಲಿ ಏನೆ ಆಗಲಿ ..
ನಿನಗೆಂದು ಸಂಗಾತಿ ನಾನೆ
ನಗುತಿರೊ ಕಣ್ಣಲ್ಲಿ ಹನಿ ಜಾರದು
ನಾ ಹಾಗೆ ಕಾಪಾಡುವೆ!

ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನಾ ನಾ ಕೈ ಹಿಡಿವೆ ..

ಬಾಳು ತೂಗಾಡೊ ಒಂದು ಉಯ್ಯಾಲೆ
ಏರು ಜಾರು ಇರಲಿ ..
ಮುಂದೆ ಹೇಗೆಂಬ ಚಿಂತೆ ಇಂದೇಕೆ
ನಾನು ಬಳಿಯೆ ಇರುವೆ ..
ನಿನ್ನ ನಾಳೆಯು ನನ್ನ ನಾಳೆಯ
ಜೊತೆಯಾಗಿ ಎಂದೆಂದು ಬರಲಿ
ಹೀಗೆ ಸಾಗುವ ಹಾಗೆ ಹೋಗುವ
ಈ ಕಾಲ ಕ್ಷಣದಂತೆ ನಾವೆ
ಅಲೆಗಳ ಮಡಿಲಲ್ಲಿ ನಿನ್ನೊಂದಿಗೆ ..
ಆ ತೀರ ನಾ ಸೇರುವೆ!

ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನಾ ನಾ ಕೈ ಹಿಡಿವೆ ..
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನಾ ನಾ ಕರೆದೊಯ್ಯುವೆ!


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ