ಇಂಗ್ಲಿಷ್` ಕವನದ ಸೊಬಗು
ಸಂಪಾದಿಸಿಉದಾಹರಣೆಗಾಗಿ:
- ಒಂದು ಬಯಕೆ
- ಸಲಿಲ ಕಲರವದಿಂದ ಸನಿಹದಲೊಂದು ತೊರೆಯು ತಾ ಹರಿಯಲಿ
- (ಸನಿಹದಲೊಂದು ತೊರೆಯು ತಾ ಗಿರಣಿಯೊಂದನು ನೆಡಸಲಿ)
- ಬಳಿಯ ಮಲೆಯಲಿ ನೀರಬೀಳದು ನೂರು ಸಾವಿರ ದುಮುಕಲಿ.
-
- ಅಲ್ಲೆ ಬಳಿಯಲಿ ಬಿಟ್ಟು ಬಿಡದೆಯೆ ಕಲ್ಲು ಪೊಟರೆಯ ಗೂಡಲಿ,
- ಪಂಚವರ್ಣದ ಶಕವು ತಾ-ನಿಂಪುದನಿಯಲಿ ಗಳಪಲಿ,
- ದೂರ ಪಯ ಣದ ಹಸಿದ ಯಾತ್ರಿಕ ಇಲ್ಲಿ ಬೀಡನು ಮಾಡಲಿ,
- ಎನಗೆ ಆದರದತಿಥಿ ಜೊತೆಯಲಿ ಸುಖದ ಭೋಜನವಾಗಲಿ.
-
- ಎನ್ನ ಗುಡಿಸಲ ದಾರಿಚಪ್ಪರ ಹೂವು ಮಲ್ಲಿಗೆ ಬಳ್ಳಿಯಾಗಲಿ,
- ಮಂಜು ಹನಿಗಳ ಕುಡಿದ ಹೂಗಳು ಸುತ್ತ ಕಂಪನು ಸೂಸಲಿ,
- ಎನ್ನ ನಲ್ಲೆಯು ಚರಕ-ನೂಲುತ ತುಂಬು ಹೃ ದಯದಿ ಹಾಡಲಿ,
- ಹಸಿರು ನೀಲಿಯ ಬಣ್ಣಬಣ್ಣದ ಕಣ್ಣು ತಣಿಸುವ ಉಡುಪಲಿ.
-
- ಹಸಿರು ಮಾಮರ ಸುತ್ತುವರಿದಿಹ ಎನ್ನ ಊರಿನ ಗುಡಿಯಲಿ,
- ಎಮ್ಮ ಮದುವೆಯ ಮೊಟ್ಟ ಮೊದಲಿನ ವಚನದೀಕ್ಷೆಯು ನಡೆಯಿತೊ
- ಅಲ್ಲಿ ಸತತವು ಮಂದಮಾರುತ ಕಂಪು ಬೀರುತ ಬೀಸಲಿ;
- ಎಮ್ಮ ನಲುಮೆಯ ಸಗ್ಗ ಸುಖವನು ಅಮರ ನಾಡಿಗು ಉಲಿಯಲಿ.
- ಮೂಲ:
- A W I S H
- Mine be a cot beside the hill;
- A bee hive’s hum shall soothe my ear ;
- A willowy brook that turns mill,
- With many a fall shall linger near.
-
- The swallow oft , beneath my thatch
- Shall twitter from her clay-built nest;
- Oft shall a pilgrim lift the latch,
- And share my meal, a welcome guest.
-
- Around my ivied porch shall spring
- Each fragrant flower that drinks the dew:
- And Lucy, at her wheel, shall sing
- In russet-gown and apron blue.
-
- The village-church among the trees,
- Where first our marriage-vows were given,
- With merry peals shall swell the breeze,
- And point with taper spire to Heaven.
-
- S.Rogers
- (18th C. Poet)
- (Golden Treasury: 1874 Edition.Edited
- by Mr. F.T. Palgrave. Poem: A W I S H
- 145 (cxlv)
- Page:140. )
-
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ↑ (Golden Treasury 1874 Edition, poem 140(xc) pg 75) (Edited by FRANCIS TURNER PALGRAVE)Bschandrasgr]