ಚಿತ್ರ / ಧ್ವನಿಸುರುಳಿ: ಮಹಾಲಕ್ಷ್ಮಿ ಬಾರಮ್ಮ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಮಹೇಶ್ ಮಹದೇವ್
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ತಿಲಂಗ್
ತಾಳ: ೪/೪
ಶೃತಿ: ಬಿ
ಲಯ: ೮೫ ಬಿಪಿಎಂ
ಪಲ್ಲವಿ:
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಹೊನ್ನಿನ ಮಳೆಯನು ಸುರಿಸುತ ಜಗಕೆ
ಹರುಷವತರಲು ಬಾರಮ್ಮ
ಹೊನ್ನಿನ ಮಳೆಯನು ಸುರಿಸುತ ಜಗಕೆ
ಹರುಷವತರಲು ಬಾರಮ್ಮ
ಭಾಗ್ಯದ ನಿಧಿಯೇ ಭಾಗ್ಯದ ನಿಧಿಯೇ
ಭಾಗ್ಯದ ನಿಧಿಯೇ ಶ್ರೀಹರಿ ವಲ್ಲಭೆ
ಸಿರಿ ಸೌಭಾಗ್ಯವ ತಾರಮ್ಮ
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಚರಣ - ೧:
ಶ್ರಾವಣ ಶುಕ್ರವಾರದ ಪೂಜೆಗೆ
ಮನೆಯಂಗಳವನು ಶುಚಿಗೊಳಿಸಿ
ಅರಿಸಿನ ಕುಂಕುಮ ಪುಷ್ಪ ಸುಗಂಧದಿ
ಕಲಶವನಿಟ್ಟು ಸಿಂಗರಿ |೨|
ಸುಮಂಗಲೆರೆಲ್ಲಾ ಕಾದಿಹರಮ್ಮ
ಸುಮಂಗಲೆರೆಲ್ಲಾ ಕಾದಿಹರಮ್ಮ
ದರುಶನವಿತ್ತು ಅನುಗ್ರಹಿಸು
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಚರಣ - ೨:
ಸಮುದ್ರ ಮಥನದಿ ಜನಿಸಿದ ದೇವಿ........
ಆ....ಆ...
ಸಮುದ್ರ ಮಥನದಿ ಜನಿಸಿದ ದೇವಿ
ನೀ ಪದ್ಮನಾಭ ಪ್ರಿಯಂಕರಿ
ಸಮುದ್ರ ಮಥನದಿ ಜನಿಸಿದ ದೇವಿ
ನೀ ಪದ್ಮನಾಭ ಪ್ರಿಯಂಕರಿ
ಅಷ್ಟೈಶ್ವರ್ಯದ ವರಗಳ ಕರುಣಿಸೋ
ಭಾಗ್ಯದಾಯಿ ಅಭಯಂಕರಿ
ಶ್ರೀಸ್ಕಂದ ಸ್ತುತಿಗೆ ಒಡೋಡುತ ಬಂದು
ಮನೆ ಮನಗಳಲಿ ಸದಾನೆಲೆಸಲು
ಶ್ರೀಸ್ಕಂದ ಸ್ತುತಿಗೆ ಒಡೋಡುತ ಬಂದು
ಮನೆ ಮನಗಳಲಿ ಸದಾನೆಲೆಸಲು
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಮಹಾಲಕ್ಷ್ಮಿ ಬಾರಮ್ಮ ವರ ಮಹಾಲಕ್ಷ್ಮಿ ಬಾರಮ್ಮ
ಮಾಧವ ಮನೋಹರಿ ವೈಕುಠ ನಿವಾಸಿನಿ........ಬಾರಮ್ಮ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ