ಚಿತ್ರ: ಮಿಲನ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಮನೋ ಮೂರ್ತಿ
ಗಾಯನ: ಚೈತ್ರ, ಪ್ರವೀಣ ದತ್, ಸುರೇಶ್ ಪೀಟರ್ಸ್, ಸ್ಟೇಫನ್


ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಸವಿ ಸಮಯ .. ಸರ ಸಮಯ
ಹೊಸ ವಿಷಯ ತಿಳಿಸುವೆಯ
ಎದೆಯೊಳಗೆ ಕುಚ್ ಹೋಗಯ
ಹೋಗೆ ಅಮ್ಮಯ್ಯ ಇದು ಸರಿಯ

ಕದ್ದು ಕದ್ದು ನೋಡೊ ಕಳ್ಳ ಯಾರು
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಎಲ್ಲ ನನ್ನನ್ನು ನೋಡುತ್ತಾರಲ್ಲ
ನಾನೆ ಬೇರೆನೆ ಎಲ್ಲಾರಾಗಲ್ಲ
ನನ್ನ ಮುಟ್ಟೊಕೆ ಬೇಡುತ್ತಾರಲ್ಲ
ನಾನು ಏನಂತ ಗೊತ್ತು ಇಲ್ಲೆಲ್ಲ
ನಿನ ಒಳಗು ಒಲವು ಶುರು
ಭ್ರಮೆ ನಿನದು ದೂರ ಇರು
ಒಲವಿರದೆ ಇರಬಹುದು
ಪ್ರತಿ ಕಡೆಗು ಬರಬಹುದೆ

ಕದ್ದು ಕದ್ದು ನೋಡೊ ಕಳ್ಳ ಯಾರು
ತಂಟೆ ಮಾಡುವಂತ ತುಂಟಿ ಯಾರೊ

ಸಂಜೆ ತಂಗಾಳಿ ಬೀಸಿ ಬಂದಿದೆ
ಮಲ್ಲೆ ಮೊಗ್ಗೆಲ್ಲ ಕಂಪು ತಂದಿದೆ
ಅಂದ ಇಲ್ಲಿದೆ ನೋಡು ಬಾರೆಯ
ಸೋಲೊ ಗಂಡಲ್ಲ ಹೋಗೆ ಅಮ್ಮಯ್ಯ
ಕರೆದಿಹಳು ನಿನ ರಾಧ
ಕರಗಿದರೆ ಅಪರಾದ
ನಿನ ಸತಿಗೆ ಪರ ಪುರುಶ
ನಿಜವೆ ಇದು ದಿನ ಹರುಶ

ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಸವಿ ಸಮಯ .. ಸರ ಸಮಯ
ಹೊಸ ವಿಷಯ ತಿಳಿಸುವೆಯ
ಎದೆಯೊಳಗೆ ಕುಚ್ ಹೋಗಯ
ಹೋಗೆ ಅಮ್ಮಯ್ಯ ಇದು ಸರಿಯ

ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂತ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೊನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ