ಚಿತ್ರ: ಮಿಲನ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯನ: ಸೋನು ನಿಗಮ್, ಶ್ರೇಯ ಘೋಶಾಲ್
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವದು ಏನು ಉಳಿದು ಹೋಗಿದೆ ..
ಹೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ ..
ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ ..
ಕಣ್ಣು ತೆರೆದು ಕಾಣುವ ಕನಸೆ ಜೀವನ
ಸಣ್ಣ ಹಠವ ಮಾಡಿದೇ ಹೃದಯ ಈ ದಿನ
ಎದೆಯ ದೂರವಾಣಿಯ .. ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ
ಹೃದಯವು ಇಲ್ಲೆ ಕಳೆದು ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ?
ಹೇಳಲಿ ಹೇಗೆ ತಿಳಿಯದಾಗಿದೆ ..
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ