ಚಿತ್ರ: ರಿಷಿ
ಸಾಹಿತ್ಯ: ವಿ.ಮನೋಹರ್
ಸಂಗೀತ: ಗುರುಕಿರಣ್
ಗಾಯನ: ರಾಜು ಅನಂತಸ್ವಾಮಿ, ಗುರು ಕಿರಣ್, ಆರಾಧನ
ನಾನು ಹೊತ್ತಾರೆ ಎದ್ಬುಟ್ಟು..
ನಿನ್ ಮೋರೆ ನೊಡ್ಬುಟ್ಟು..
ಕೈ ಜೋಡ್ಸಿ ನಿಲ್ತಿನ್ ಕಣೆ!
ಬೇಗ ಬೆಡ್ ಕಾಪಿ ತನ್ಬುಟ್ಟು..
ನಿನ್ ಕಾಲ ಹೊತ್ಬುಟ್ಟು ಬಗ್ ಬಗ್ಸಿ ಕೊಡ್ತಿನ್ ಕಣೆ!
ಕಾಪಿ ಸೀಗಿಲ್ಲ ಅಂತ ನೀ ಒಟ್ಗುಟ್ಟ್ರೆ.. ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ಕ್ರೆಯ ಬೊಂಬೆಗೆ ಸಕ್ಕರೆ ಯಾಕಂತ ಅನ್ಬುಟ್ಟು ಬೀಳ್ಸ್ತಿನ್ ಕಣೆ!
I Love You, Love You Dove.... I really Love You Dove.. I truly Love you Dove.. ಹೇ ಹೇ!..
ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯಲ್ಲಾ ನೀವ್ಳ್‍ಸ್ಬಿಟ್ಟು ನೆಟ್ಗೆ ತಗಿತಿನ್ ಕಣೆ
ಜಳ್ಕ ಮಾಡ್ಸುತ್ತ ಮಾಡ್ಸುತ್ತ ಬೆಳ್ ಬೆಳ್ಳೆ ಬೆನ್ನನ್ನು ಮುದ್ದಾಡ್ತ ತಿಕ್ತಿನ್ ಕಣೆ!
ಕಿರು ಉಪ್ಪಿಟ್ಟು, ಒಬ್ಬಟ್ಟು, ನಿಪ್ಪಾಟ್ಟು, ತಂಬಿಟ್ಟು ಎಲ್ಲ ನಾ ಮಾಡ್ತಿನ್ ಕಣೆ
ನಿನ್ನ ಮಡ್ಲಲ್ಲಿ ಕುಡ್ಸ್ಕೊಂಡು ಸೊಂಟಾನ ತಬ್ಗೊಂಡು ತುತ್ ತುತ್ತು ತಿನ್ಸ್‍ತೀನ್ ಕಣೆ!
I Love You, Love You Dove.... I really Love You Dove.. I truly Love you Dove.. ಹೇ ಹೇ!..
ಅಹ್! ಅಹ್! ಸಂತೇಗೆ ಕರ್ಕೊಂಡು ಸೀರೇಯ ಕೊಣ್ಕೊಂಡು ನಿನ್ಗ್ ಉಡ್ಸಿ ನೊಡ್ತಿನ್ ಕಣೆ
ಅಲ್ಲಿ ತೊಟ್ಲಲ್ಲಿ ಕುಂತ್ಕೊಂಡು ಮಂಡಕ್ಕಿ ತಿನ್ಕೊಂಡು ಎತ್ಕೊಂಡೆ ಬತ್ತಿನ್ ಕಣೆ!
ಅಹ್! ಅಹ್! ಬೆಳ್ದಿಂಗ್ಳಲ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಲ್ಗೊ ಕೋಣೆ
ಇಂತಾ ಮುಂಗೋಪ ಬಿಟ್ಬುಟ್ಟು ಇನ್ನಾದ್ರು ನಂಬುಟ್ಟು ಬಾ ಬಾರೆ ನನ್ನಾ ಜಾಣೆ!
I Love You, Love You Dove.... I really Love You Dove.. I truly Love you Dove.. ಹೂಂ ಹೂಂ!...
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ