ಶ್ರೀ ಹರೇ ಶ್ರೀನಿವಾಸ
ಸಂಪಾದಿಸಿರಚನೆ: ಶ್ರೀ ಕನಕದಾಸರು
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ /ಪ/
ಬರಿದೆ ಮಾತೆಗಿನ್ನು ಅರಿತು ಪೆಳುವೆನಯ್ಯಾ /ಅ.ಪ/
ತಾಯಿ ತಂದೆಯ ಬಿಟ್ಟು ತಪವಮಾಡಲು ಬಹುದು/
ದಾಯಾದಿ ಬಂಧುಗಳ ಬಿಡಲು ಬಹುದು/
ರಾಯಾ ತಾ ಮುನಿದರೆ ರಾಜ್ಯವನು ಬಿಡಬಹುದು/
ಕಾಯಜ ಪಿತ ನಿನ್ನ ಅಡಿಘಳಿಗೆ ಬಿಡಲಾಗದು
ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು/
ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು/
ಮಡದಿ ಮಕ್ಕಳನೆಲ್ಲ ಕಡೆಗೆ ತೊಲಗಿಸಿ ಬಿಡಬಹುದು/
ಕಡಲೋಡೆಯ ನಿನ್ನ ಅಡಿಯ ಬಿಡಲಾಗದು /೨/
ಪ್ರಾಣವಾ ಪರರು ಬೇಡಿದರೆ ಎತ್ತಿ ಕೊಡಬಹುದು/
ಮಾನದಲಿ ಮನವ ತಗ್ಗಿಸಲು ಬಹುದು/
ಪ್ರಾಣನಾಯಕನಾದ ಆದೀಕೇಶವರಾಯ/
ಜಾಣ ಶ್ರೀ ಕೃಷ್ಣಾ ನಿನ್ನಡಿಘಳಿಗೆ ಬಿಡಲಾಗದು /೩/
- / ಶ್ರೀ ಕೃಷ್ಣಾರ್ಪಣ /
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ