ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್.ಜಾನಕಿ
ಬಂತು ನವಯೌವ್ವನ
ತುಂಭಿ ಸಂಜೀವನ
ಬಂತು ನವಯೌವ್ವನ..
ನೋಡೆನ್ನ ಜಾಣ ತುಂಭಿ ಸಂಜೀವನ
ನಿನ್ನ ಸರಿಕಾಣೆನ
ಚೆಲ್ವ ಮನ ಮೋಹನ
ಸುಂದರ ನಂದನ ನನ್ನ ಸಂತೋಷನ
ಬಂತು ನವಯೌವ್ವನ..
ನೋಡೆನ್ನ ಜಾಣ ತುಂಭಿ ಸಂಜೀವನ
(ಸಂಗಡಿಗರು) ಮಲ್ಲಿಗೆ ನಗುವನು ತಾರ
ಹುಣ್ಣಿಮೆ ಚಂದಿರ ಬಾರ (ಸಂಗಡಿಗರು) |೨|
ಬಂತು ನವಯೌವ್ವನ..
ನೋಡೆನ್ನ ಜಾಣ ತುಂಭಿ ಸಂಜೀವನ
ಮೌನ ಬಿಡು ರನ್ನ ಸವಿ ಬಾಳ ಮಧು ಚೆನ್ನ
ಜೇನಾಗಿ ಬಾರೆನ್ನ ರಾಜ ರಾಜ ರಾಜ!
ರೂಪು ಯೌವನ.. ಬೋಘ ಜೀವನ |೨|
ಬೇಕೆ ಜಾಣ?
ಬಂತು ನವಯೌವ್ವನ..
ನೋಡೆನ್ನ ಜಾಣ ತುಂಭಿ ಸಂಜೀವನ
ಬಾರದಿನ್ನೆಂದು ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ ಬಾರ ನೀರ ಧೀರ
(ಸಂಗಡಿಗರು) ನಿರುಪಮ ಬಂದನ ಮನಹರ ಚತುರ
ಬಾರ ಸುಂದರ |೨| (ಸಂಗಡಿಗರು)
ಬಾರದಿನ್ನೆಂದು ಈ ಪ್ರಣಯ ಸುಖವೊಂದು
ಒಂದಾಡಿ ಕೂಡೆನ್ನ ಬಾರ ನೀರ ಧೀರ
ಗಾನ ನರ್ತನ.. ರಾಗ ರಂಜನ |೨|
ಬೇಕೆ ಜಾಣ?
ಬಂತು ನವಯೌವ್ವನ..
ನೋಡೆನ್ನ ಜಾಣ ತುಂಭಿ ಸಂಜೀವನ
(ಸಂಗಡಿಗರು)ಮಲ್ಲಿಗೆ ನಗುವನು ತಾರ
ಹುಣ್ಣಿಮೆ ಚಂದಿರ ಬಾರ (ಸಂಗಡಿಗರು) |೨|
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ